ಹಾಸನ: ಮಾಜಿ ಸಚಿವ ಹೆಚ್.ಡಿ ರೇವಣ್ಣ ಬಂಧನದ ಹಿಂದೆ ರಾಜಕೀಯ ಹಾಗೂ ಪೆನ್‍ಡ್ರೈವ್ ಪ್ರಕರಣ ಹಿಂದೆ ಪ್ರಭಾವಿಗಳ ಕೈವಾಡ ಇದೆ ಎಂದು ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ (HP Swaroop Prakash) ಆರೋಪಿಸಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಪೆನ್‍ಡ್ರೈವ್ ಹಂಚಿಕೆ ಹಿಂದೆ ಪ್ರಭಾವಿಗಳ ಕೈವಾಡವಿದೆ. ಇದರ ಬಗ್ಗೆ ಎಸ್‍ಐಟಿ (SIT) ಸಮಗ್ರ ತನಿಖೆ ಮಾಡಬೇಕು. ಈಗ ಬಂಧಿತವಾಗಿರುವ ಯಾರೆಂದು ನನಗೂ ಗೊತ್ತಿಲ್ಲ. ಆದರೆ ಮಹಿಳೆಯರ ಮುಖವನ್ನು ಬ್ಲರ್ ಮಾಡದೆ ವೀಡಿಯೋ ವೈರಲ್ ಮಾಡಿದ್ದಾರೆ ಎಂದರು.
ಎಚ್.ಡಿ.ರೇವಣ್ಣ ಬಂಧನ ಇದೆ ರಾಜಕೀಯ ಷಡ್ಯಂತ್ರವಿದೆ. ದೇವೇಗೌಡರ (HD Devegowda) ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದಾರೆ. ರೇವಣ್ಣ ಬಂಧನ ಮಾಡಿರುವುದರ ಹಿಂದೆ ರಾಜಕೀಯವಿದೆ. ಎಸ್‍ಐಟಿ ಸರ್ಕಾರದ ಅಣತಿಯಂತೆ ನಡೆಯುತ್ತಿದೆ. ಎಸ್‍ಐಟಿಯಿಂದ ಸರಿಯಾದ ತನಿಖೆ ಆಗಲ್ಲ. ಇಂತಹ ದೊಡ್ಡ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಯಾರೇ ತಪ್ಪು ಮಾಡಿದ್ದರು ಶಿಕ್ಷೆಯಾಗಲಿ. ಎ.ಮಂಜು ಶಾಸಕರು, ಶಾಸಕರ ಮೇಲೆ ಆರೋಪಗಳು ಸಹಜ. ಮೊದಲು ನವೀನ್ ಗೌಡ ಬಂಧಿಸುವಂತೆ ಸ್ವರೂಪ ಒತ್ತಾಯ ಮಾಡಿದರು.
ಹಾಸನ: ನಮ್ಮ ನಾಯಕರಾದ ದೇವೇಗೌಡರು, ರೇವಣ್ಣ, ಕುಮಾರಣ್ಣ ಹಾಗೂ ಇಬ್ರಾಹಿಂ ಸಾಹೇಬರು ಸೇರಿ 2ನೇ ಪಟ್ಟಿ ಘೋಷಣೆ ಮಾಡುತ್ತಾರೆ. ಅಂತಿಮವಾಗಿ ಯಾರಿಗೆ ಟಿಕೆಟ್ ನೀಡಿದರೂ ನಾವೆಲ್ಲಾ ಒಗ್ಗಟ್ಟಾಗಿ ಕೆಲಸ ಮಾಡ್ತೇವೆ ಎಂದು ಟಿಕೆಟ್ ಆಕಾಂಕ್ಷಿ ಹೆಚ್‌ಪಿ ಸ್ವರೂಪ್ ಪ್ರಕಾಶ್ (HP Swaroop) ಹೇಳಿದ್ದಾರೆ.
ಸೋಮವಾರ ಅಭಿಮಾನಿಗಳೊಂದಿಗೆ ತಮ್ಮ 40ನೇ ಹುಟ್ಟು ಹಬ್ಬ ಆಚರಿಸಿಕೊಂಡು ಮಾತನಾಡಿದ ಅವರು, ಹಾಸನದಲ್ಲಿ (Hassana) ನೂರಕ್ಕೆ ನೂರರಷ್ಟು ಜೆಡಿಎಸ್ (JDS) ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ. ಹಾಸನದಲ್ಲಿ ಈ ಬಾರಿ ಜೆಡಿಎಸ್ ಗೆಲುವು ಶತಸಿದ್ಧ. ಹಿರಿಯರೆಲ್ಲಾ ಸೇರಿ ಅಂತಿಮವಾಗಿ ಯಾರು ಅಭ್ಯರ್ಥಿ ಎಂದು ಘೋಷಣೆ ಮಾಡುತ್ತಾರೋ ಅವರಿಗೆ ನಾವೆಲ್ಲಾ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಕುಮಾರಸ್ವಾಮಿ (HD Kumaraswamy) ಅವರ ಹೇಳಿಕೆಯನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಸಾಮಾನ್ಯ ಕಾರ್ಯಕರ್ತ ಎಂದು ಹೇಳಿದ್ದು, ಯಾರಿಗೆ ಅಂತಿಮವಾಗಿ ಟಿಕೆಟ್ ಕೊಡುತ್ತಾರೆ ನೋಡೋಣ. ಇನ್ನೆರಡು ದಿನಗಳಲ್ಲಿ ಬಹುತೇಕ 2ನೇ ಪಟ್ಟಿ ಬಿಡುಗಡೆ ಆಗುತ್ತದೆ. ಯಾರು ಅಭ್ಯರ್ಥಿ ಎಂದು ಅದರಲ್ಲಿ ಗೊತ್ತಾಗಲಿದೆ ಎಂದು ಹೇಳಿದರು.
ಖಂಡಿತವಾಗಿಯೂ ನಾನು ಆಕಾಂಕ್ಷಿಯಾಗಿದ್ದು ಟಿಕೆಟ್ ಸಿಗುವ ವಿಶ್ವಾಸವಿದೆ. ಪಕ್ಷದ ಕಾರ್ಯಕರ್ತರು, ಸ್ನೇಹಿತರು ಒಗ್ಗಟ್ಟಿನಿಂದ ಕೆಲಸ ಮಾಡಲು ಕಾತರದಿಂದ ಕಾಯುತ್ತಾ ಇದ್ದೇವೆ. ಚುನಾವಣೆ ಎಂದ ಮೇಲೆ ಎಲ್ಲರನ್ನೂ ಒಗ್ಗೂಡಿಸಿ, ಒಗ್ಗಟ್ಟಿನಿಂದ ಹೋದರೆ ಮಾತ್ರ ಗೆಲುವು ಸಾಧಿಸಲು ಸಾಧ್ಯ. ಇಂದು ಕೂಡಾ ಹಾಸನಕ್ಕೆ ನಮ್ಮ ಪಕ್ಷದಿಂದ ಯಾರಿಗೆ ಟಿಕೆಟ್ ಕೊಟ್ಟರೂ ಗೆಲ್ಲಿಸುವ ಕೆಲಸ ಮಾಡಲು ಎಲ್ಲಾ ಕಾರ್ಯಕರ್ತರು ಕಾಯುತ್ತಾ ಇದ್ದಾರೆ ಎಂದು ನುಡಿದರು. ಇದನ್ನೂ ಓದಿ: ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧೆ ಮಾಡಬೇಕು ಎಂಬುದು ಕಾರ್ಯಕರ್ತರ ಅಪೇಕ್ಷೆ : ಬಿ.ವೈ ರಾಘವೇಂದ್ರ
ಟಿಕೆಟ್ ವಿಚಾರವಾಗಿ ಯಾರೂ ನನ್ನ ಜೊತೆ ಚರ್ಚೆ ಮಾಡಿಲ್ಲ. ನಾವು ಪ್ರಚಾರ ಮಾಡುತ್ತಾ ಇದ್ದೇವೆ. ಮಾಧ್ಯಮದವರು ಪ್ರಚಾರ ಮಾಡುತ್ತಿದ್ದಾರೆ. ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ಕ್ಷೇತ್ರದಲ್ಲಿ ಓಡಾಡಿದ ನಂತರ ನಗರದಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದೇವೆ. ಇಲ್ಲಿ ವಿರುದ್ಧ ಪ್ರಶ್ನೆ ಉದ್ಭವವಾಗಲ್ಲ. ರೇವಣ್ಣ ಸಾಹೇಬರು ಯಾರಿಗೆ ಟಿಕೆಟ್ ಘೋಷಣೆ ಮಾಡಿದರೂ ನಾವೆಲ್ಲಾ ಗೆಲ್ಲಿಸುವ ಕೆಲಸ ಮಾಡುತ್ತೇವೆ ಎಂದರು.
ಇದಕ್ಕೂ ಮುನ್ನ ಸ್ವರೂಪ್ ತಮ್ಮ ನೂರಾರು ಅಭಿಮಾನಿಗಳಿಂದ ಕೇಕ್ ಕತ್ತರಿಸಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಹೇಮಾವತಿ ನಗರದಲ್ಲಿರುವ ಸ್ವರೂಪ್ ಅವರ ನಿವಾಸದ ಬಳಿ ಜಮಾಯಿಸಿದ ಅಭಿಮಾನಿಗಳು ಅವರಿಗೆ ಶುಭಾಶಯ ಕೋರಿದರು. ಅಭಿಮಾನಿಗಳು ತಂದಿದ್ದ ಹತ್ತಾರು ಕೇಕ್‌ಗಳನ್ನು ಕತ್ತರಿಸಿ ಎಲ್ಲರಿಗೂ ಸ್ವರೂಪ್ ಸಿಹಿ ತಿನ್ನಿಸಿದರು. ನಂತರ ನೀರುವಾಗಿಲು ಆಂಜನೇಯ ಸ್ವಾಮಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಇದನ್ನೂ ಓದಿ: ಸಚಿವೆ ಶಶಿಕಲಾ ಜೊಲ್ಲೆಗೆ ಗ್ರಾಮಸ್ಥರಿಂದ ಕ್ಲಾಸ್
ಹಾಸನ: ವಿಧಾನಸಭಾ ಕ್ಷೇತ್ರದ ಟಿಕೆಟ್‍ಗಾಗಿ ಭವಾನಿ ರೇವಣ್ಣ (Bhavani Revanna) ಹಾಗೂ ಎಚ್.ಪಿ ಸ್ವರೂಪ್ (H.P Swaroop) ನಡುವೆ ಟಿಕೆಟ್‍ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ಟಿಕೆಟ್ ಪ್ರಹಸನಕ್ಕೆ ಇನ್ನೂ ಕೂಡ ತೆರೆ ಬಿದ್ದಿಲ್ಲ. ಇದೀಗ ಇಬ್ಬರ ಜಗಳ ಮೂರನೇಯವನಿಗೆ ಲಾಭ ಎನ್ನುವಂತೆ ಮೂರನೇ ವ್ಯಕ್ತಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಾಗಿದೆ.
ಎರಡು ಬಾರಿ ಕಾಂಗ್ರೆಸ್ (Congress) ನಿಂದ ಸ್ಪರ್ಧಿಸಿ ಎಚ್.ಎಸ್ ಪ್ರಕಾಶ್ (H S Prakash) ವಿರುದ್ಧ ಸೋತು ನಂತರ ಜೆಡಿಎಸ್‍ಗೆ ಸೇರಿದ್ದ ಮಾಜಿ ಹುಡಾ ಅಧ್ಯಕ್ಷ ಕೆ.ಎಂ ರಾಜೇಗೌಡರಿಗೆ ಮಣೆ ಹಾಕಲು ದಳಪತಿಗಳು ಮುಂದಾಗಿದ್ದಾರೆ. ಈಗಾಗಲೇ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ (HD Devegowda) ರು ಹಾಗೂ ಎಚ್.ಡಿ ಕುಮಾರಸ್ವಾಮಿ (H D Kumaraswamy) ಕೆ.ಎಂ.ರಾಜೇಗೌಡರ ಮಾತುಕತೆ ನಡೆಸಿದ್ದಾರೆ. ಇದರಿಂದಾಗಿ ಎಚ್.ಪಿ.ಸ್ವರೂಪ್‍ಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಹೆಚ್ಚಾಗಿದೆ.
ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಕಿತ್ತಾಟ ತಾರಕಕ್ಕೇರಿದ್ದು, ಟಿಕೆಟ್ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕಾರ್ಯಕರ್ತ ಸ್ವರೂಪ್ ಮತ್ತು ರೇವಣ್ಣ ಪತ್ನಿ ಭವಾನಿ ಹೆಸರಿನ ಜೊತೆಗೆ ಮತ್ತೊಂದು ಹೆಸರು ಕೇಳಿ ಬಂದಿದೆ. ಸ್ವರೂಪ್ ಪ್ರಕಾಶ್ ಹೆಸರು ಮನದಲ್ಲಿಟ್ಟುಕೊಂಡು ಕಾರ್ಯಕರ್ತನಿಗೆ ಟಿಕೆಟ್ ಅಂತಿರುವ ಎಚ್.ಡಿ ಕುಮಾರಸ್ವಾಮಿಗೆ ಬ್ರದರ್ ಎಚ್.ಡಿ.ರೇವಣ್ಣ ಫ್ಯಾಮಿಲಿ ಟಕ್ಕರ್ ಕೊಡಲು ಮುಂದಾಗಿದೆ. ಸ್ವರೂಪ್ ಹೆಸರಿನ ಜೊತೆಗೆ ಜೆಡಿಎಸ್ ಹಿರಿಯ ನಾಯಕ, ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಎಂ.ರಾಜೇಗೌಡ ಹೆಸರನ್ನು ಪ್ರಸ್ತಾಪಿಸಿದೆ. ಈ ಮೂಲಕ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಎನ್ನುವುದಾದರೆ ರಾಜೇಗೌಡರಿಗೆ ಕೊಡಿ ಎಂಬ ಹೊಸ ದಾಳ ಉರುಳಿಸಿದ್ದಾರೆ.
ಹಿರಿಯ ನಾಯಕ, ಕಾರ್ಯಕರ್ತನ ಹೆಸರು ಪ್ರಸ್ತಾಪಿಸಿ ಹೆಚ್‍ಡಿಕೆಯನ್ನು ಮಾಜಿ ಸಚಿವ ಎಚ್.ಡಿ.ರೇವಣ್ಣ ಫ್ಯಾಮಿಲಿ ಇಕ್ಕಟ್ಟಿಗೆ ಸಿಲುಕಿಸಿದೆ. ಭವಾನಿಗೆ ಟಿಕೆಟ್ ಇಲ್ಲ ಎಂದು ಎಚ್‍ಡಿಕೆ ಖಡಕ್ ಆಗಿ ಹೇಳಿದ್ದು, ಭವಾನಿಗೆ ಟಿಕೆಟ್ ಸಿಗದಿದ್ದರೆ ಸ್ವರೂಪ್‍ಗೂ ಬೇಡ ಎಂದು ರೇವಣ್ಣ ಕುಟುಂಬ ಪಟ್ಟು ಹಿಡಿದಿದೆ. ಹಾಗಾಗಿಯೇ ತಮ್ಮ ಆಪ್ತ, ಹಿರಿಯ ನಾಯಕ ಹಾಗೂ ದೇವೇಗೌಡರ ಜೊತೆಗೂ ಹೆಚ್ಚು ಒಡನಾಟ ಹೊಂದಿರುವ ರಾಜೇಗೌಡರಿಗೆ ಟಿಕೆಟ್ ಕೊಡಿಸಲು ಮೆಗಾಪ್ಲಾನ್ ಮಾಡಿದ್ದಾರೆ. ಭವಾನಿಗೆ ಟಿಕೆಟ್ ತಪ್ಪಿಸಿ ಸ್ವರೂಪ್‍ಗೆ ಟಿಕೆಟ್ ಕೊಟ್ಟರೆ ಜಿಲ್ಲೆಯಲ್ಲಿ ರೇವಣ್ಣರ ಪ್ರಾಬಲ್ಯ ಕುಗ್ಗುವ ಆತಂಕ ಎದುರಾಗಿದ್ದು, ತಮ್ಮನ್ನು ಲೆಕ್ಕಿಸದೆ ಟಿಕೆಟ್‍ಗಾಗಿ ಪೈಪೋಟಿ ನಡೆಸುತ್ತಿರುವ ಸ್ವರೂಪ್‍ಗೆ ರೇವಣ್ಣ ಅಡ್ಡಗಾಲಾಗಿದ್ದಾರೆ. ಏನೇ ಆದ್ರೂ ಸ್ವರೂಪ್, ರಾಜೇಗೌಡ ಗೊಂದಲದ ನಡುವೆ ಕೊನೆ ಗಳಿಗೆಯಲ್ಲಿ ಭವಾನಿ ರೇವಣ್ಣಗೆ ಟಿಕೆಟ್ ಕೊಡಿಸುವ ತಂತ್ರಕ್ಕೆ ಮುಂದಾಗಿದೆ. ಹಾಗಾಗಿ ಇದೇ ಮಾನದಂಡ ಮುಂದಿಟ್ಟುಕೊಂಡು ಸ್ವರೂಪ್‍ಗೆ ಟಿಕೆಟ್ ಬೇಡ ಬೇರೆಯವರಿಗೆ ಕೊಡಿ ಎಂದು ರೇವಣ್ಣ ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ.
ಈ ಬಗ್ಗೆ ಕೆ.ಎಂ ರಾಜೇಗೌಡ ಪ್ರತಿಕ್ರಿಯಿಸಿದ್ದು, ದೇವೇಗೌಡರು ಹಾಗೂ ಕುಮಾರಸ್ವಾಮಿ ನನ್ನೊಂದಿಗೆ ಮಾತಾಡಿದ್ದಾರೆ. ಎಲ್ಲರೂ ಒಟ್ಟಿಗೆ ನನ್ನ ಪರ ನಿಲ್ಲುವುದಾದರೆ ನಾನು ಸ್ಪರ್ಧಿಸಲು ಸಿದ್ಧನಿದ್ದೇನೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪಕ್ಷ ಬಿಟ್ಟು ಜೆಡಿಎಸ್ ಸೇರಿದ್ದೆ. 2 ಬಾರಿ ಟಿಕೆಟ್ ಕೈ ತಪ್ಪಿತು ಈಗ ಅವಕಾಶ ಬಂದಿದೆ. ಭವಾನಿ ಸ್ಪರ್ಧಿಸುತ್ತಾರೆ ಎಂಬ ಕಾರಣಕ್ಕೆ ನಾನು ಟಿಕೆಟ್ ಕೇಳಿರಲಿಲ್ಲ. ಸ್ವರೂಪ್‍ಗೂ ದುಡುಕಬೇಡ, ರೇವಣ್ಣ ಕುಟುಂಬದ ವಿರುದ್ಧ ಹೋಗಬೇಡ ಎಂದಿದ್ದೆ ಎಂದಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಅಲೆ ಇಲ್ಲ, ಯಾವುದೇ ಸಿನಿಮಾ ಸ್ಟೈಲ್‌ನಲ್ಲೂ ರಾಜಕಾರಣ ನಡೆಯಲ್ಲ: ಮುನಿರತ್ನ
ಒಟ್ಟಾರೆ ಸಾಮಾನ್ಯ ಕಾರ್ಯಕರ್ತನ ಹೆಸರಿನಲ್ಲಿ ಸ್ವರೂಪ್‍ಗೆ ಟಿಕೆಟ್ ಕೊಟ್ಟರೆ ಭವಾನಿ ಬೆಂಬಲಿಗರು ಸಿಡಿದೇಳುವ ಭೀತಿಯಿಂದ ರೇವಣ್ಣ ಫ್ಯಾಮಿಲಿ ಹೊಸ ಅಸ್ತ್ರ ಪ್ರಯೋಗಿಸಿ ಹೆಚ್‍ಡಿಕೆಯನ್ನು ಪೇಚಿಗೆ ಸಿಲುಕಿಸಿದೆ. ಇತ್ತ ದೇವೇಗೌಡರ ಅಂಗಳದಲ್ಲಿ ಟಿಕೆಟ್ ಚೆಂಡು ಬಿದ್ದಿದ್ದು ಹಾಸನದಲ್ಲಿ ಪಂಚರತ್ನ ಯಾತ್ರೆ ಮುಗಿಯುವ ವೇಳೆಗೆ ಅಂತಿಮವಾಗುತ್ತಾ ಕಾದು ನೋಡಬೇಕಿದೆ.