Tag: Houthi rebels

  • ಹೌತಿ ಬಂಡುಕೋರ ಮೇಲೆ ಸರಣಿ ದಾಳಿ ನಡೆಸಿ ಪೆಟ್ಟು ಕೊಡ್ತೇವೆ: ಬೆಂಜಮಿನ್ ನೆತನ್ಯಾಹು

    ಹೌತಿ ಬಂಡುಕೋರ ಮೇಲೆ ಸರಣಿ ದಾಳಿ ನಡೆಸಿ ಪೆಟ್ಟು ಕೊಡ್ತೇವೆ: ಬೆಂಜಮಿನ್ ನೆತನ್ಯಾಹು

    ಟೆಲ್ ಅವಿವ್: ಯೆಮೆನ್‌ನ (Yemen) ಹೌತಿ ಬಂಡುಕೋರರು (Houthi Rebels) ಇಸ್ರೇಲ್‌ನ (Israel) ಬೆನ್ ಗುರಿಯನ್‌ ವಿಮಾನ ನಿಲ್ದಾಣವನ್ನು ಗುರಿಯಾಗಿಸಿ ನಡೆಸಿದ ಕ್ಷಿಪಣಿ ದಾಳಿಗೆ ಪ್ರತಿಯಾಗಿ ಸರಣಿ ದಾಳಿ ನಡೆಸುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಎಚ್ಚರಿಕೆ ನೀಡಿದ್ದಾರೆ.

    ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡ ಹೌತಿ ಬಂಡುಕೋರರು, ಗಾಜಾದಲ್ಲಿ ಪ್ಯಾಲೆಸ್ಟೀನಿಯನ್ನರೊಂದಿಗೆ ಸೇರಿಕೊಂಡಿದ್ದಾರೆ. ಅವರನ್ನು ಹತ್ತಿಕ್ಕಲು ಸರಣಿ ದಾಳಿ ನಡೆಸುವುದಾಗಿ ಅವರು ಪ್ರತಿಜ್ಞೆ ಮಾಡಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ವೀಡಿಯೊ ಪೋಸ್ಟ್ ಮಾಡಿದ್ದಾರೆ. ಹೌತಿ ದಾಳಿಗೆ ಇಸ್ರೇಲ್‌ನ ಪ್ರತೀಕಾರವು ಒಂದು ಬಾರಿ ಮಾತ್ರ ಇರುವುದಿಲ್ಲ. ದಾಳಿಯ ಪೆಟ್ಟುಗಳು ಬೀಳುತ್ತಲೇ ಇರುತ್ತವೆ ಎಂದು ಅವರು ಹೇಳಿಕೊಂಡಿದ್ದಾರೆ.

    ನಾವು ಹಿಂದೆಯೂ ಬಂಡುಕೋರರ ವಿರುದ್ಧ ಕ್ರಮ ಕೈಗೊಂಡಿದ್ದೇವೆ, ಭವಿಷ್ಯದಲ್ಲಿಯೂ ಕ್ರಮಕೈಗೊಳ್ಳುತ್ತೇವೆ. ನಾನು ಎಲ್ಲವನ್ನೂ ವಿವರಿಸಲು ಸಾಧ್ಯವಿಲ್ಲ. ಅಮೆರಿಕ ನಮ್ಮೊಂದಿಗೆ ಕೈಜೋಡಿಸಿದೆ. ನಮ್ಮ ದಾಳಿ ನಿರಂತರವಾಗಿ ಮುಂದುವರೆಯಲಿದೆ ಎಂದು ಕಠಿಣ ಸಂದೇಶ ರವಾನಿಸಿದ್ದಾರೆ.

    ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ಪ್ರತಿಕ್ರಿಯಿಸಿ, ನಮಗೆ ಯಾರು ಹಾನಿ ಮಾಡಿದರೂ, ನಾವು ಅವರಿಗೆ ಏಳು ಪಟ್ಟು ಹಾನಿ ಮಾಡುತ್ತೇವೆ ಎಂದಿದ್ದಾರೆ.

    ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ ಹೌತಿ ಬಂಡುಕೋರರು ಕ್ಷಿಪಣಿ ದಾಳಿ (Missile Attack) ನಡೆಸಿತ್ತು. ಇದರ ಬೆನ್ನಲ್ಲೇ ಏರ್ ಇಂಡಿಯಾ (Air India) ಸಂಸ್ಥೆಯು ಮುಂದಿನ 2 ದಿನಗಳ ಕಾಲ ಇಸ್ರೇಲ್ (Israel) ರಾಜಧಾನಿ ಟೆಲ್ ಅವಿವ್‌ಗೆ (Tel Aviv) ವಿಮಾನಯಾನವನ್ನ ಸ್ಥಗಿತಗೊಳಿಸಿದೆ.

  • ಹೌತಿ ಉಗ್ರರ ದಾಳಿಗೆ ನಡೆದಿದ್ದ ಮಹಾ ಪ್ಲ್ಯಾನ್‌ ಲೀಕ್‌ ಆಗಿದ್ದು ಹೇಗೆ? – ಟ್ರಂಪ್‌ ಟೀಂ ಬಳಸಿದ್ದ ʻಸಿಗ್ನಲ್‌ʼ ಎಷ್ಟು ಸೇಫ್‌?

    ಹೌತಿ ಉಗ್ರರ ದಾಳಿಗೆ ನಡೆದಿದ್ದ ಮಹಾ ಪ್ಲ್ಯಾನ್‌ ಲೀಕ್‌ ಆಗಿದ್ದು ಹೇಗೆ? – ಟ್ರಂಪ್‌ ಟೀಂ ಬಳಸಿದ್ದ ʻಸಿಗ್ನಲ್‌ʼ ಎಷ್ಟು ಸೇಫ್‌?

    ಅಮೆರಿಕದಂಥ ಮುಂದುವರಿದ ರಾಷ್ಟ್ರಗಳು ಸೀಕ್ರೆಟ್‌ ಆಪರೇಷನ್ ಮಾಡೋವಾಗ ಹೇಗೆ ಸಂದೇಶ ಹಂಚಿಕೊಳ್ತಾರೆ? ಈ ಸಿನಿಮಾಗಳಲ್ಲಿ ನೋಡಿರೋ ಹಾಗೇ ಸ್ಯಾಟಲೈಟ್‌ ಫೋನ್‌ ಬಳಸ್ತಾರಾ? ಅಥವಾ ಪ್ರತ್ಯೇಕ ಅಪ್ಲಿಕೇಷನ್‌ ಬಳಸಿಕೊಳ್ತಾರಾ? ಒಂದು ವೇಳೆ ನಾವು ಬಳಸುವ ತಂತ್ರಾಂಶವನ್ನ ಯಾರಿಂದಲೂ ಹ್ಯಾಕ್‌ ಮಾಡೋಕೆ ಆಗಲ್ವ? ಬಹುಶಃ ಇದೆಲ್ಲವೂ ಹಾಲಿವುಡ್‌ನ ಥ್ರಿಲ್ಲರ್‌ ಸಿನಿಮಾಗಳಲ್ಲಿ ನಡೆಯುತ್ತೆ. ವಾಸ್ತವದಲ್ಲಿ ಅಮೆರಿಕದ (America) ಭದ್ರತಾ ಅಧಿಕಾರಿಗಳು ವಿದೇಶಿ ನೆಲದಲ್ಲಿ ನಡೆಸೋಕೆ ಹೊರಟಿದ್ದ ಕಾರ್ಯಾಚರಣೆಗಳ ಬಗ್ಗೆ ʻಸಿಗ್ನಲ್‌ʼ (Signal App) ಅನ್ನೋ ಮೆಸೇಜಿಂಗ್‌ ಆ್ಯಪ್‌ನಲ್ಲಿ ಚರ್ಚೆ ಮಾಡ್ಕೊಂಡಿದ್ದಾರೆ. ಅಂಥದ್ದೇ ಒಂದು ಚರ್ಚೆ ಲೀಕ್‌ ಆಗಿರೋದು ಅಮೆರಿಕದ ಭದ್ರತಾ ಅಧಿಕಾರಿಗಳು, ಮುಖ್ಯಸ್ಥರನ್ನು ತಲೆ ತಗ್ಗಿಸುವಂತೆ ಮಾಡಿದೆ.

    ಈಗ ಜಗತ್ತಿನಾದ್ಯಂತ ಚರ್ಚೆಯ ಕೇಂದ್ರ ವಸ್ತು ಆಗಿರೋದು ‘ಸಿಗ್ನಲ್‌’ ಮೆಸೆಜಿಂಗ್‌ ಆ್ಯಪ್‌. ವಾಟ್ಸಪ್‌, ಟೆಲಿಗ್ರಾಂ ರೀತಿನೇ ಇದೇ ಕೂಡ ಒಂದು ಮೆಸೆಜಿಂಗ್‌ ಅಪ್ಲಿಕೇಷನ್‌. ಆದ್ರೆ, ಇದರಲ್ಲಿ ಖಾಸಗಿತನಕ್ಕೆ ಧಕ್ಕೆಯಿಲ್ಲ ಎನ್ನುತ್ತಾರೆ. ಬಹುಶಃ ಇದೇ ಕಾರಣಕ್ಕೆ ಅಮೆರಿಕದ ಭದ್ರತಾ ಅಧಿಕಾರಿಗಳನ್ನು ಅಷ್ಟೊಂದು ನಂಬಿದ್ದು ಅನಿಸುತ್ತೆ. ಆದಾಗ್ಯೂ ದೊಡ್ಡ ದಾಳಿಯ ಮಾಹಿತಿ ಲೀಕ್‌ ಆಗಿದ್ದು ಹೇಗೆ ಅನ್ನೋದ್ರ ಬಗ್ಗೆ ಸ್ವಲ್ಪ ಗಮನಿಸಬೇಕು.

    USA launches multiple strikes against Houthi Yemen Red Sea

    ಹೌತಿ ಉಗ್ರರ ನೆಲೆ ಉಡೀಸ್‌ ಮಾಡಿದ್ದ ಅಮೆರಿಕ:
    ಮಾರ್ಚ್‌ 13ರಂದು ಅಮೆರಿಕದ ನೌಕಾಪಡೆ ಮತ್ತು ಏರ್‌ಫೋರ್ಸ್‌ ಜೊತೆಯಾಗಿ ಯೆಮೆನ್‌ನಲ್ಲಿ ದೊಡ್ಡ ಕಾರ್ಯಾಚರಣೆ ನಡೆಸಿತ್ತು. ಹೌತಿ ಉಗ್ರ ಸಂಘಟನೆಯ ಜಾಗಗಳನ್ನು ಟಾರ್ಗೆಟ್‌ ಮಾಡಿ ಬಾಂಬ್‌ಗಳ ದಾಳಿ ನಡೆಸಿದವು. ಈ ದಾಳಿ ನಡೆದು ಒಂದೂವರೆ ದಿನ ಆದ್ಮೇಲೆನೆ ಜಗತ್ತಿಗೆ ಅಂಥದ್ದೊಂದು ಕಾರ್ಯಾಚರಣೆ ನಡೆದಿರೊ ವಿಚಾರ ಬಹಿರಂಗ ಆಗಿದ್ದು. ಆದ್ರೆ, ಅಮೆರಿಕದ ಫೈಟರ್‌ ಜೆಟ್‌ಗಳು ಹೌತಿ (Houthi Rebels) ನೆಲೆಗಳ ಮೇಲೆ ಏರ್‌ಸ್ಟ್ರೈಕ್‌ ಮಾಡಿತ್ತು. ಆದ್ರೆ ಈ ದಾಳಿ ಮಾಡುವ 2 ಗಂಟೆಗೂ ಮುಂಚೆಯೇ ಅಮೆರಿಕದ ಪತ್ರಕರ್ತರೊಬ್ಬರಿಗೆ ಅದರ ಎಲ್ಲ ಮಾಹಿತಿಯು ಲಭ್ಯವಾಗಿತ್ತು.

    Chilling video Moment Yemens Houthis used chopper to hijack India bound ship in Red Sea 1

    ಯಾವೆಲ್ಲ ಶಸ್ತ್ರಾಸ್ತ್ರಗಳು ಬಳಕೆ ಮಾಡಲಾಗ್ತಿದೆ, ಟಾರ್ಗೆಟ್‌ ಎಲ್ಲಿ, ದಾಳಿ ಮಾಡೋ ಟೈಮ್‌ ಯಾವುದು, ಈ ಎಲ್ಲದರ ಸಂಪೂರ್ಣ ಪ್ಲ್ಯಾನ್‌ ಅಮೆರಿಕದ ‘ದಿ ಅಟ್ಲಾಂಟಿಕ್’ ಮ್ಯಾಗ್‌ಜೀನ್‌ ಎಡಿಟರ್‌ ಜೆಫ್ರಿ ಗೋಲ್ಡ್‌ಬರ್ಗ್‌ ಅವರಿಗೆ ಗೊತ್ತಾಗಿತ್ತು. ಇಲ್ಲಿ ಮತ್ತೊಂದು ಟ್ವಿಸ್ಟ್‌ ಅಂದ್ರೆ, ಆ ಎಡಿಟರ್‌ಗೆ ಇಷ್ಟೆಲ್ಲ ಮಾಹಿತಿ ಸಿಗೋಕೆ ಕಾರಣ ರಕ್ಷಣಾ ಇಲಾಖೆ ಕಾರ್ಯದರ್ಶಿ ಪೀಟ್‌ ಹೆಗ್ಸೆಥ್‌. ಅವರೇ ಆ ಎಲ್ಲ ಮಾಹಿತಿಯನ್ನು ಗ್ರೂಪ್‌ ಚಾಟ್‌ನಲ್ಲಿ ಹಂಚಿಕೊಂಡಿದ್ರು. ಅದಾದ ಮೇಲೆ ಹೌತಿಗಳ ವಿಚಾರ ಚರ್ಚಿಸೋ ಒಂದು ಗ್ರೂಪ್‌ ಕ್ರಿಯೇಟ್‌ ಆಗಿತ್ತು. ಅದರಲ್ಲಿ ಎಡಿಟರ್‌ ಅನ್ನೂ ಕೂಡ ಸೇರಿಸಲಾಗಿತ್ತು. ಅಲ್ಲಿ ಇಡೀ ಅಮೆರಿಕದ ಭದ್ರತೆಗೆ ಸಂಬಂಧಿಸಿದ ಉನ್ನತ ಅಧಿಕಾರಿಗಳಿಂದ ಹಿಡಿದು ಅಮೆರಿಕ ಉಪಾಧ್ಯಕ್ಷರ ವರೆಗೂ ಎಲ್ಲರೂ ಇದ್ರು. ರಕ್ಷಣಾ ಇಲಾಖೆ, ಗುಪ್ತಚರ ಇಲಾಖೆ, ರಾಷ್ಟ್ರೀಯ ಭದ್ರತೆ ಹಾಗೂ ಅಮೆರಿಕದ ಆಡಳಿತ ಎಲ್ಲರ ನಡುವೆ ಸಂವಹನ ಮಾಡಿಕೊಂಡು ಯೆಮೆನ್‌ನಲ್ಲಿ ಹೌತಿಗಳ ಮೇಲೆ ದಾಳಿಯ ಪ್ಲ್ಯಾನ್‌ ಅದೇ ಗ್ರೂಪ್‌ನಲ್ಲಿ ಆಗಿತ್ತು. ಅದರ ಪಿನ್‌ ಟು ಪಿನ್‌ ಮಾಹಿತಿ ಎಡಿಟರ್‌ ಜೆಫ್ರಿ ಗೋಲ್ಡ್‌ಬರ್ಗ್‌ಗೂ ಗೊತ್ತಾಗ್ತಿತ್ತು. ಆದ್ರೆ, ಅದೆಲ್ಲವೂ ನಿಜ ಅನ್ನೋದು ಗೊತ್ತಾಗಿದ್ದು, ಅಮೆರಿಕ ಹೌತಿಗಳ ಮೇಲೆ ಬಾಂಬ್‌ ಹಾಕಿದ್ಮೇಲೆನೆ. ಇದೆಲ್ಲವೂ ಈಗ ಗುಟ್ಟಾಗಿ ಉಳಿದಿಲ್ಲ. ಆ ಎಡಿಟರ್‌, ನನಗೆ ಆಕಸ್ಮಿಕವಾಗಿ ಇದೆಲ್ಲ ಗೊತ್ತಾಯ್ತು ಅಂತ ವಿವರವಾದ ಆರ್ಟಿಕಲ್‌ ಬರೆದಿದ್ದಾರೆ. ಇನ್ನು ಭದ್ರತಾ ಅಧಿಕಾರಿಗಳಿಗೆ ಈ ಬೆಳವಣಿಗೆ ಬೆಂಕಿಯಲ್ಲಿ ತಾವೇ ಕೈಯಿಟ್ಟು ಸುಟ್ಟುಕೊಂಡ ಹಾಗೇ ಆಗಿದೆ.

    Who are the Houthis and why are they attacking Red Sea ships U.S. launches multiple strikes against Houthi

    ಸಿಗ್ನಲ್‌ ಮೆಸೆಜಿಂಗ್‌ ಆಪ್‌ನಲ್ಲಿ ‘ಹೌತಿ ಪಿಸಿ ಸ್ಮಾಲ್‌ ಗ್ರೂಪ್‌’ ಹೆಸರಿನ ಗ್ರೂಪ್‌ನಲ್ಲಿ ದಾಳಿಯ ಬಗ್ಗೆ ಚರ್ಚೆ ಮಾಡಲಾಗಿತ್ತು. ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಸೇರಿದಂತೆ 18 ಮಂದಿ ಆ ಗ್ರೂಪ್‌ನಲ್ಲಿದ್ರು. ಅಮೆರಿಕ ನಡೆಸೋ ದಾಳಿಯ ವಿಚಾರ ಅತ್ಯಂತ ಗೋಪ್ಯವಾದುದು, ಇಲ್ಲಿ ರಾಷ್ಟ್ರೀಯ ಭದ್ರತೆಯ ಲೋಪ ಆಗಿದೆ ಅನ್ನೋ ಆರೋಪಗಳು ಟ್ರಂಪ್‌ ಆಡಳಿತಕ್ಕೆ ತಲೆ ನೋವಾಗಿದೆ. ತುಳಸಿ ಗಬಾರ್ಡ್‌, ಮೈಕೆಲ್‌ ವಾಲ್ಟ್ಜ್ ಸೇರಿದಂತೆ ಉನ್ನತ ಅಧಿಕಾರಿಗಳನ್ನು ಸ್ಥಾನದಿಂದ ಕಿತ್ತು ಹಾಕಿ ಅನ್ನೋ ಒತ್ತಾಯ ಕೇಳಿಬಂದಿದೆ. ಆದ್ರೆ, ಟ್ರಂಪ್‌ ಅಧಿಕಾರಿಗಳನ್ನು ಕಿತ್ತು ಹಾಕೋ ಕೂಗನ್ನು ನಿರಾಕರಿಸಿದ್ದಾರೆ.

    ಇನ್ನು ಅಮೆರಿಕ ಈ ದಾಳಿಯನ್ನು ಪ್ಲ್ಯಾನ್‌ ಮಾಡೋಕೆ ಕಾರಣ, ಕೆಂಪು ಸಮುದ್ರ ಮತ್ತು ಗಲ್ಫ್‌ ಆಫ್‌ ಅಡೆನ್‌ನಲ್ಲಿ ಹೌತಿ ಉಗ್ರರು ಸರಕು ಸಾಗಣೆ ಹಡಗುಗಳ ಮೇಲೆ ನಡೆಸ್ತಿದ್ದ ಅಟ್ಯಾಕ್‌. ಅಷ್ಟೇ ಅಲ್ಲದೇ ಹೌತಿಗಳು ಹಮಾಸ್‌ ಅನ್ನು ಬೆಂಬಲಿಸಿ ಇಸ್ರೇಲ್‌ ಮೇಲೂ ದಾಳಿ ಶುರು ಮಾಡಿದ್ದರು. ಅಮೆರಿಕದ ಯುದ್ಧ ನೌಕೆಗಳ ಮೇಲೆ ಹಲವು ಬಾರಿ ಹೌತಿಗಳು ದಾಳಿ ಮಾಡಿದ್ದರು. ಕೆಂಪು ಸಮುದ್ರ ಮಾರ್ಗದಲ್ಲಿ ಸರಕು ಸಾಗಣೆ ಹಡಗು ಸಂಚಾರಕ್ಕೆ ಅವರು ಅಡ್ಡಿ ಪಡಿಸ್ತಿದ್ರು. ಇದೆಲ್ಲವನ್ನೂ ಸರಿಪಡಿಸೋಕೆ ಅಮೆರಿಕ ಹೌತಿ ನೆಲೆಗಳ ಮೇಲೆ ಕಾರ್ಯಾಚರಣೆ ನಡೆಸಿದೆ. ಆ ಕಾರ್ಯಾಚರಣೆಯ ಮೊದಲ ಪ್ಲ್ಯಾನ್‌ ಲೀಕ್‌ ಆಗಿತ್ತು.

    UK Strike

    ಹೌತಿ ಉಗ್ರರು ಯಾರು?
    1990ರಲ್ಲಿ ಯೆಮೆನ್‌ ಅಧ್ಯಕ್ಷ ಅಲಿ ಅಬ್ದುಲ್ಲಾ ಸಲೇಹ್ ವಿರುದ್ಧ ಭ್ರಷ್ಟಾಚಾರದ ಆರೋಪ ಬರುತ್ತದೆ. ಈ ವೇಳೆ ಧಾರ್ಮಿಕ ನಾಯಕ ಹುಸೇನ್‌ ಅಲಿ ಹೌತಿ ನೇತೃತ್ವದಲ್ಲಿ ಒಂದು ಚಳುವಳಿ ಆರಂಭವಾಗುತ್ತದೆ. ಈ ಚಳುವಳಿ ಈಗ ಹೌತಿ ಉಗ್ರ ಸಂಘಟನೆಯಾಗಿ ಮಾರ್ಪಾಡಾಗಿದೆ. ರಷ್ಯಾದ (Russia) ವಿರುದ್ಧ ಹೋರಾಡಲು ಅಮೆರಿಕ ತಾಲಿಬಾನ್‌ ಹೇಗೆ ಬೆಳೆಸಿತೋ ಅದೇ ರೀತಿ ಇರಾನ್‌ ತನ್ನ ವಿರುದ್ಧ ಇರುವ ದೇಶಗಳ ವಿರುದ್ಧ ಹೋರಾಡಲು ಹೌತಿ ಬಂಡುಕೋರರಿಗೆ ಸಹಾಯ ನೀಡುತ್ತದೆ. ಈಗ ಯೆಮೆನ್‌ನ ಒಂದು ಕಡೆ ಸೌದಿ ಅರೇಬಿಯಾ ಮತ್ತು ಅಮೆರಿಕದ ಬೆಂಬಲ ಇರುವ ಒಂದು ಸರ್ಕಾರ ಇದ್ದರೆ ಇನ್ನೊಂದು ಕಡೆ ಇರಾನ್‌ ಬೆಂಬಲಿತ ಹೌತಿ ಉಗ್ರರು ಇದ್ದಾರೆ. ಅಮೆರಿಕ, ಇಸ್ರೇಲ್‌, ಸೌದಿ ಅರೇಬಿಯಾ ಮತ್ತು ಪಾಶ್ಚಿಮಾತ್ಯ ದೇಶಗಳೇ ಹೌತಿ ಉಗ್ರರ ಶತ್ರುಗಳು.

    ಸಾಂದರ್ಭಿಕ ಚಿತ್ರ

    ಅಮೆರಿಕ ದಾಳಿ ನಡೆಸಿದ್ದು ಯಾಕೆ?
    2023 ರ ಅಂತ್ಯದಿಂದ ಹೌತಿಗಳು ಕೆಂಪು ಸಮುದ್ರ, ಅಡೆನ್ ಕೊಲ್ಲಿ ಮತ್ತು ಇತರ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ವಾಣಿಜ್ಯ ಮತ್ತು ಮಿಲಿಟರಿ ಹಡಗುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಈಗ ಗಾಜಾದಲ್ಲಿ ಕದನ ವಿರಾಮದ ಹೊರತಾಗಿಯೂ ಹೌತಿಗಳು ಇತ್ತೀಚೆಗೆ ಇಸ್ರೇಲ್‌ಗೆ ಸಂಬಂಧಿಸಿದ ಹಡಗುಗಳ ಮೇಲೆ ದಾಳಿಗಳನ್ನು ಪುನರಾರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಕ್ಕೆ ಅಮೆರಿಕ ಈಗ ಯುದ್ಧ ವಿಮಾನಗಳನ್ನು ಬಳಸಿ ಬಾಂಬ್‌ ದಾಳಿ ನಡೆಸಿದೆ. ಪ್ರಸಿದ್ಧ ಮಿಲಿಟರಿ ತಾಣವಾದ ಸನಾ ವಿಮಾನ ನಿಲ್ದಾಣ ಸಂಕೀರ್ಣ, ಸೌದಿ ಗಡಿಯ ಬಳಿ ಹೌತಿಗಳ ಉತ್ತರದ ಭದ್ರಕೋಟೆಯಾದ ಸಾದಾ, ನೈಋತ್ಯ ಪ್ರದೇಶದಲ್ಲಿರುವ ಧಮರ್ ಮತ್ತು ಅಬ್ಸ್, ಹೌತಿ ಮಿಲಿಟರಿ ಸೌಲಭ್ಯಗಳ ನೆಲೆಯಾಗಿರುವ ಗೆರಾಫ್ ಮೇಲೆ ಅಮೆರಿಕ ಏರ್‌ಸ್ಟ್ರೈಕ್‌ ಮಾಡಿದೆ.

    ʻಸಿಗ್ನಲ್‌ʼ ವಿಶೇಷತೆ ಏನು?
    ಸಿಗ್ನಲ್‌ ಆಪ್‌ ಇದೊಂದು ಓಪನ್‌ ಸೋರ್ಸ್ ಮೆಸೆಜಿಂಗ್‌ ಅಪ್ಲಿಕೇಷನ್‌. 2012ರಲ್ಲಿ ಬಿಡುಗಡೆಯಾಗಿರುವ ಆಪ್‌, ಆಂಡ್ರಾಯ್ಡ್‌ ಮತ್ತು ಆಪಲ್‌ ಎರಡೂ ಪ್ಲಾಟ್‌ಫಾರ್ಮ್‌ನಲ್ಲಿ ವರ್ಕ್ ಆಗುತ್ತೆ. ಜಗತ್ತಿನಾದ್ಯಂತ 7 ಕೋಟಿಗೂ ಅಧಿಕ ಜನ ಇದನ್ನು ಬಳಸುತ್ತಿದ್ದಾರೆ. ಇದು ಲಾಭಕ್ಕಾಗಿ ಕ್ರಿಯೇಟ್‌ ಆಗಿರುವ ಪ್ಲಾಟ್‌ಫಾರ್ಮ್‌ ಅಲ್ಲ ಎನ್ನಲಾಗಿದೆ. ಸುರಕ್ಷಿತ ಸಂದೇಶ ರವಾನೆಯು ಇದರ ಮುಖ್ಯ ಉದ್ದೇಶ ಸಿಗ್ನಲ್‌ ಬಣ್ಣಿಸಿಕೊಂಡಿದೆ.

    Chilling video Moment Yemens Houthis used chopper to hijack India bound ship in Red Sea 2

    ಇದರಲ್ಲಿ ಮಾಡೋ ಸಂದೇಶಗಳು ಎಂಡ್‌ ಟು ಎಂಡ್‌ ಎನ್ಕ್ರಿಪ್ಟ್‌ ಆಗಿರೋದ್ರಿಂದ ಮಧ್ಯದಲ್ಲಿ ಹ್ಯಾಕ್‌ ಮಾಡಿ, ಅದನ್ನು ಓದೋಕೆ ಸಾಧ್ಯವಾಗೋದಿಲ್ಲ. ಹಾಗೇ ಬೇರೆ ಮೆಸೆಜಿಂಗ್‌ ಆಪ್‌ಗಳ ರೀತಿ ಬಳಕೆದಾರರ ಖಾಸಗಿ ಮಾಹಿತಿಗಳನ್ನು ಸಂಗ್ರಹಿಸಿಕೊಂಡು, ಸರ್ವರ್‌ನಲ್ಲಿ ಅದನ್ನು ಉಳಿಸುವ ವ್ಯವಸ್ಥೆ ಸಿಗ್ನಲ್‌ನಲ್ಲಿ ಇಲ್ಲ. ಯಾವುದೇ ಖಾಸಗಿ ಮಾಹಿತಿಯನ್ನೂ ಸಿಗ್ನಲ್‌ ಕೇಳುವುದು-ಸಂಗ್ರಹಿಸುವುದನ್ನು ಮಾಡೋದಿಲ್ಲ. ಇದೇ ಕಾರಣಕ್ಕೆ ಬಹಳಷ್ಟು ಮಂದಿ ಸುರಕ್ಷಿತ ಸಂವಹನಕ್ಕೆ ಇದೇ ಆಪ್‌ ಬಳಸ್ತಿದ್ದಾರೆ.

    ʻಸಿಗ್ನಲ್‌ʼ ಹ್ಯಾಕ್‌ ಮಾಡಬಹುದೇ?
    ಸಿಗ್ನಲ್‌ ಆಪ್‌ ಹ್ಯಾಕ್‌ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ರೂ, ಈ ಹಿಂದೆ ರಷ್ಯಾ – ಉಕ್ರೇನ್‌ ಯುದ್ಧದ ಸಂದರ್ಭದಲ್ಲಿ ಹ್ಯಾಕಿಂಗ್‌ಗೆ ಯತ್ನ ನಡೆದಿತ್ತು ಎಂಬ ವರದಿಗಳು ಕಂಡುಬಂದಿವೆ. ರಷ್ಯಾ ವಿರುದ್ಧ ರೂಪಿಸುವ ಯುದ್ಧ ತಂತ್ರಗಳನ್ನು ತಿಳಿಯಲು ಉಕ್ರೇನ್‌ ಮಿಲಿಟರಿ ಅಧಿಕಾರಿಗಳ ಸಿಗ್ನಲ್‌ ಖಾತೆಗಳನ್ನು ಹ್ಯಾಕ್‌ ಮಾಡಲು ಪ್ರಯತ್ನ ನಡೆದಿತ್ತು. ಇದರ ಹೊರತಾಗಿ ಡೆಸ್ಕ್‌ ಟಾಪ್‌ ಅಪ್ಲಿಕೇಷನ್‌ಗೆ ಲಿಂಕ್‌ ಮಾಡುವ ಮೂಲಕ ಇದರಲ್ಲಿನ ಮಾಹಿತಿಯನ್ನು ಸೋರಿಕೆ ಮಾಡಬಹುದು. ಉಳಿದಂತೆ ಹ್ಯಾಕಿಂಗ್‌ ಮೂಲಕ ಮಾಹಿತಿ ಕದ್ದಿರುವುದಕ್ಕೆ ಸ್ಪಷ್ಟ ನಿದರ್ಶನಗಳಿಲ್ಲ ಎನ್ನುತ್ತವೆ ವರದಿಗಳು.

    ಒಟ್ಟಿನಲ್ಲಿ ಅತಿ ಸುರಕ್ಷಿತ ಎಂದು ಭಾವಿಸಿದ್ದ ಆಪ್‌ನಲ್ಲಿ ಅಮೆರಿಕದಂತ ದೇಶದ ಭದ್ರತಾ ವಿಚಾರಗಳು ಹಂಚಿಹೋಗಿರೋದು ವಿಪರ್ಯಾಸವೇ ಸರಿ. ಟ್ರಂಪ್‌ ಆಡಳಿತ ಇದರ ಬಗ್ಗೆ ಎಂಥ ಕ್ರಮಕೈಗೊಳ್ಳುತ್ತೆ ಕಾದು ನೋಡಬೇಕಿದೆ.

  • Explainer | ಯಾರಿದು ಹೌತಿ ಉಗ್ರರು? ಅಮೆರಿಕ ದಾಳಿ ನಡೆಸಿದ್ದು ಯಾಕೆ? ವಿಶ್ವಕ್ಕೆ ಸಮಸ್ಯೆ ಏನು?

    Explainer | ಯಾರಿದು ಹೌತಿ ಉಗ್ರರು? ಅಮೆರಿಕ ದಾಳಿ ನಡೆಸಿದ್ದು ಯಾಕೆ? ವಿಶ್ವಕ್ಕೆ ಸಮಸ್ಯೆ ಏನು?

    ಷ್ಯಾ-ಉಕ್ರೇನ್‌, ಹಮಾಸ್‌-ಇಸ್ರೇಲ್‌ ಮಧ್ಯೆ ಕದನ ವಿರಾಮದ ಬಗ್ಗೆ ಮಾತುಕತೆ ನಡೆಯುತ್ತಿದ್ದರೆ ಇನ್ನೊಂದು ಕಡೆ ಹೌತಿ ಉಗ್ರರ ಕಿರಿಕ್‌ ಮತ್ತೆ ಆರಂಭವಾಗುವ ಸಾಧ್ಯತೆಯಿದೆ. ಈ ಉಗ್ರರು ಈಗ ಮತ್ತೆ ನಾವು ವಾಣಿಜ್ಯ ಹಡುಗುಗಳ ಮೇಲೆ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಎಚ್ಚರಿಕೆ ಬೆನ್ನಲ್ಲೇ ಅಮೆರಿಕ (USA) ಈಗ ಹೌತಿ ನೆಲೆಗಳ ಮೇಲೆ ಏರ್‌ಸ್ಟ್ರೈಕ್‌ (Air Strike) ಮಾಡಿದೆ. ಹೀಗಾಗಿ ಇಲ್ಲಿ ಹೌತಿ ಉಗ್ರರು ಯಾರು? ಕೆಂಪು ಸಮುದ್ರ ಮಾರ್ಗ ಯಾಕೆ ಫೇಮಸ್‌? ಹೌತಿ ಉಗ್ರರು ದಾಳಿ ಮಾಡಿದರೆ ಭಾರತ (India) ಮತ್ತು ವಿಶ್ವದ ಮೇಲೆ ಆಗುವ ಪರಿಣಾಮ ಏನು ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.

    ಹೌತಿ ಉಗ್ರರು ಯಾರು?
    1990ರಲ್ಲಿ ಯೆಮೆನ್‌ ಅಧ್ಯಕ್ಷ ಅಲಿ ಅಬ್ದುಲ್ಲಾ ಸಲೇಹ್ ವಿರುದ್ಧ ಭ್ರಷ್ಟಾಚಾರದ ಆರೋಪ ಬರುತ್ತದೆ. ಈ ವೇಳೆ ಧಾರ್ಮಿಕ ನಾಯಕ ಹುಸೇನ್‌ ಅಲಿ ಹೌತಿ ನೇತೃತ್ವದಲ್ಲಿ ಒಂದು ಚಳುವಳಿ ಆರಂಭವಾಗುತ್ತದೆ. ಈ ಚಳುವಳಿ ಈಗ ಹೌತಿ ಉಗ್ರ ಸಂಘಟನೆಯಾಗಿ ಮಾರ್ಪಾಡಾಗಿದೆ.

    ರಷ್ಯಾದ (Russia) ವಿರುದ್ಧ ಹೋರಾಡಲು ಅಮೆರಿಕ ತಾಲಿಬಾನ್‌ ಹೇಗೆ ಬೆಳೆಸಿತೋ ಅದೇ ರೀತಿ ಇರಾನ್‌ ತನ್ನ ವಿರುದ್ಧ ಇರುವ ದೇಶಗಳ ವಿರುದ್ಧ ಹೋರಾಡಲು ಹೌತಿ ಬಂಡುಕೋರರಿಗೆ ಸಹಾಯ ನೀಡುತ್ತದೆ. ಈಗ ಯೆಮೆನ್‌ನ ಒಂದು ಕಡೆ ಸೌದಿ ಅರೇಬಿಯಾ ಮತ್ತು ಅಮೆರಿಕದ ಬೆಂಬಲ ಇರುವ ಒಂದು ಸರ್ಕಾರ ಇದ್ದರೆ ಇನ್ನೊಂದು ಕಡೆ ಇರಾನ್‌ ಬೆಂಬಲಿತ ಹೌತಿ ಉಗ್ರರು ಇದ್ದಾರೆ. ಅಮೆರಿಕ, ಇಸ್ರೇಲ್‌, ಸೌದಿ ಅರೇಬಿಯಾ ಮತ್ತು ಪಾಶ್ಚಿಮಾತ್ಯ ದೇಶಗಳೇ ಹೌತಿ ಉಗ್ರರ ಶತ್ರುಗಳು.

    ಕೆಂಪು ಸಮುದ್ರ ಮಾರ್ಗ ಎಲ್ಲಿದೆ?
    ಯುರೋಪ್‌ ಮತ್ತು ಏಷ್ಯಾದ ವ್ಯಾಪಾರದ ಕೊಂಡಿಯೇ ಕೆಂಪು ಸಮುದ್ರ ಮಾರ್ಗ. ಯುರೋಪ್‌ನಿಂದ ಮೆಡಿಟರೆನಿಯನ್‌ ಸಮುದ್ರದ ಮೂಲಕ ಬರುವ ಹಡಗುಗಳು ಸೂಯೆಜ್‌ ಕಾಲುವೆ ಮೂಲಕ ಕೆಂಪು ಸಮುದ್ರಕ್ಕೆ (Red Sea) ಆಗಮಿಸಿ ಯೆಮನ್‌ ಬಳಿ ಬಾಬ್‌ ಎಲ್‌ ಮಂಡೇಬ್‌ ಚೋಕ್‌ ಪಾಯಿಂಟ್‌ ಮೂಲಕ ಅರಬ್ಬಿ ಸಮುದ್ರಕ್ಕೆ ಬಂದು ಏಷ್ಯಾದ ದೇಶಗಳಿಗೆ ಹೋಗುತ್ತದೆ. ಪ್ರತಿ ದಿವಸ ಈ ಮಾರ್ಗದಲ್ಲಿ ಅಂದಾಜು 385 ಕಾರ್ಗೋ ಹಡಗುಗಳು ಸಂಚರಿಸುತ್ತವೆ.

     

    ಹೌತಿ ಉಗ್ರರು ದಾಳಿ ನಡೆಸುತ್ತಿರುವುದು ಯಾಕೆ?
    ಮೊದಲೇ ಹೇಳಿದಂತೆ ಹೌತಿ ಬಂಡುಕೋರರಿಗೆ ಮೊದಲಿನಿಂದಲೂ ಇಸ್ರೇಲ್‌ ವಿರೋಧಿ. ಅಷ್ಟೇ ಅಲ್ಲದೇ ಹಮಾಸ್‌ ಉಗ್ರರ ಜೊತೆ ಉತ್ತಮ ಸಂಬಂಧವನ್ನು ಹೌತಿ ಇಟ್ಟುಕೊಂಡಿದೆ. ಯಾವಾಗ ಇಸ್ರೇಲ್‌ ಹಮಾಸ್‌ ಉಗ್ರರ ಮೇಲೆ ದಾಳಿ ಮಾಡಿತೋ ಅದಕ್ಕೆ ಪ್ರತಿಯಾಗಿ ಹೌತಿ ಕೆಂಪು ಸಮುದ್ರದಲ್ಲಿ ಸಂಚರಿಸುವ ಇಸ್ರೇಲ್‌ ಹಡಗುಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಆರಂಭಿಸಿತು.

    ಇಸ್ರೇಲ್‌ ನಡೆಸಿದ ದಾಳಿ ಅಮೆರಿಕ ಮತ್ತು ಯುರೋಪ್‌ ರಾಷ್ಟ್ರಗಳು ಬೆಂಬಲ ನೀಡಿದ್ದವು. ಇಸ್ರೇಲ್‌ಗೆ ನೀಡಿದ ಬೆಂಬಲಕ್ಕೆ ಪ್ರತಿಯಾಗಿ ಹೌತಿ ಉಗ್ರರು ಕೆಂಪು ಸಮುದ್ರದಲ್ಲಿ ಸಂಚರಿಸುವ ಅಮೆರಿಕ ಮತ್ತು ಯುರೋಪ್‌ ಕಾರ್ಗೋ ಹಡಗುಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ದಾಳಿ ನಡೆಸಿದರೆ ಇಸ್ರೇಲ್‌ ಮೇಲೆ ಈ ದೇಶಗಳು ಒತ್ತಡ ಹಾಕಿ ಯುದ್ಧ ನಿಲ್ಲಸಬಹುದು ಎಂಬ ಲೆಕ್ಕಾಚಾರ ಹೌತಿ ಉಗ್ರರದ್ದು.

     

     

    ಈಗ ಅಮೆರಿಕ ದಾಳಿ ನಡೆಸಿದ್ದು ಯಾಕೆ?
    2023 ರ ಅಂತ್ಯದಿಂದ ಹೌತಿಗಳು ಕೆಂಪು ಸಮುದ್ರ, ಅಡೆನ್ ಕೊಲ್ಲಿ ಮತ್ತು ಇತರ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ವಾಣಿಜ್ಯ ಮತ್ತು ಮಿಲಿಟರಿ ಹಡಗುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಈಗ ಗಾಜಾದಲ್ಲಿ ಕದನ ವಿರಾಮದ ಹೊರತಾಗಿಯೂ ಹೌತಿಗಳು ಇತ್ತೀಚೆಗೆ ಇಸ್ರೇಲ್‌ಗೆ ಸಂಬಂಧಿಸಿದ ಹಡಗುಗಳ ಮೇಲೆ ದಾಳಿಗಳನ್ನು ಪುನರಾರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಕ್ಕೆ ಅಮೆರಿಕ ಈಗ ಯುದ್ಧ ವಿಮಾನಗಳನ್ನು ಬಳಸಿ ಬಾಂಬ್‌ ದಾಳಿ ನಡೆಸಿದೆ.

    ಪ್ರಸಿದ್ಧ ಮಿಲಿಟರಿ ತಾಣವಾದ ಸನಾ ವಿಮಾನ ನಿಲ್ದಾಣ ಸಂಕೀರ್ಣ, ಸೌದಿ ಗಡಿಯ ಬಳಿ ಹೌತಿಗಳ ಉತ್ತರದ ಭದ್ರಕೋಟೆಯಾದ ಸಾದಾ, ನೈಋತ್ಯ ಪ್ರದೇಶದಲ್ಲಿರುವ ಧಮರ್ ಮತ್ತು ಅಬ್ಸ್, ಹೌತಿ ಮಿಲಿಟರಿ ಸೌಲಭ್ಯಗಳ ನೆಲೆಯಾಗಿರುವ ಗೆರಾಫ್ ಮೇಲೆ ಅಮೆರಿಕ ಏರ್‌ಸ್ಟ್ರೈಕ್‌ ಮಾಡಿದೆ.

    ವಿಶ್ವಕ್ಕೆ ಸಮಸ್ಯೆ ಯಾಕೆ?
    ಯೆಮೆನ್‌ ಪಶ್ಚಿಮ ಭಾಗವನ್ನು ಹೌತಿ ಉಗ್ರರು ವಶಪಡಿಸಿಕೊಂಡಿದ್ದಾರೆ. ಪಶ್ಚಿಮ ಭಾಗವನ್ನು ವಶಪಡಿಸಿಕೊಂಡಿದ್ದರೂ ಯಾವುದೇ ಸಮಸ್ಯೆ ಇಲ್ಲ. ಆದರೆ ಅವರು ಈಗ ಕಿರಿಕ್‌ ಮಾಡುತ್ತಿರುವುದು ಬಾಬ್‌ ಎಲ್‌ ಮಂಡೇಬ್‌ ಎಂಬ ಚೋಕ್‌ ಪಾಯಿಂಟ್‌ನಲ್ಲಿ. ಈ ಚೋಕ್‌ ಪಾಯಿಂಟ್‌ 50 ಕಿ.ಮೀ ಉದ್ದ ಇದ್ದರೆ 26 ಕಿ.ಮೀ ಅಗಲ ಹೊಂದಿದೆ. ಈ ಚೋಕ್‌ಪಾಯಿಂಟ್‌ ಬ್ಲಾಕ್‌ ಮಾಡಿ ಕಿರಿಕ್‌ ಮಾಡುವುದು ಹೌತಿ ಉಗ್ರರ ಉದ್ದೇಶ.

    ಈ ಸಮುದ್ರ ಮಾರ್ಗ ಎಷ್ಟು ಮುಖ್ಯ ಅಂದರೆ ವಿಶ್ವದ ಕಂಟೈನರ್‌ ಟ್ರಾಫಿಕ್‌ ಪೈಕಿ ಶೇ.30 ರಷ್ಟು ಹಡಗುಗಳು ಈ ಮಾರ್ಗದಲ್ಲಿ ಸಂಚರಿಸುತ್ತದೆ. ಶೇ.7 ರಿಂದ ಶೇ.10 ರಷ್ಟು ಕಚ್ಚಾ ತೈಲ ಹಡಗುಗಳು ಈ ರೂಟ್‌ನಲ್ಲಿ ಸಾಗುತ್ತದೆ. ಕೆಂಪು ಸಮುದ್ರದ ಮೂಲಕ ವರ್ಷಕ್ಕೆ 1 ಟ್ರಿಲಿಯನ್‌ ಡಾಲರ್‌ ವ್ಯವಹಾರ ನಡೆಯುತ್ತದೆ. ಇದನ್ನೂ ಓದಿ: ಭಾರತದ ಧ್ವಜವುಳ್ಳ ಕಚ್ಚಾತೈಲ ಟ್ಯಾಂಕರ್‌ ಮೇಲೆ ಹೌತಿ ಉಗ್ರರಿಂದ ಡ್ರೋನ್‌ ದಾಳಿ

    ಸಾಂದರ್ಭಿಕ ಚಿತ್ರ
    ಸಾಂದರ್ಭಿಕ ಚಿತ್ರ

    ಹಿಂದೆ ಸೂಯೆಜ್‌ ಕಾಲುವೆಯಲ್ಲಿ ಕಂಟೈನರ್‌ ಹಡಗು ಅರ್ಧಕ್ಕೆ ನಿಂತಿತ್ತು. 6 ದಿನ ಕಾಲುವೆಯಲ್ಲೇ ನಿಂತ ಕಾರಣ ವಿಶ್ವಕ್ಕೆ ಅಂದಾಜು 54 ಶತಕೋಟಿ ಡಾಲರ್‌ ವ್ಯಾಪಾರ ನಷ್ಟವಾಗಿತ್ತು. ಒಂದು ವಾರಕ್ಕೆ ಇಷ್ಟು ನಷ್ಟವಾದರೆ ತಿಂಗಳು ಕಾಲ ಈ ಜಲ ಮಾರ್ಗದಲ್ಲಿ ಸಮಸ್ಯೆಯಾದರೆ ವಿಶ್ವಕ್ಕೆ ಸಾಕಷ್ಟು ನಷ್ಟವಾಗಲಿದೆ.

    ಹಾಗೆ ನೋಡಿದರೆ ಹಿಂದೆ ಸೌದಿ ಅರೇಬಿಯಾದ ಮೇಲೂ ಹೌತಿ ಉಗ್ರರು ದಾಳಿ ನಡೆಸಿದ್ದರು. ಯಾಕೆಂದರೆ ಸೌದಿಯಲ್ಲಿ ಸುನ್ನಿ ಮುಸ್ಲಿಮರಿಂದ ಹೌತಿಯಲ್ಲಿ ಶಿಯಾ ಮುಸ್ಲಿಮರಿದ್ದಾರೆ. ವಿಶ್ವದ ಅತಿ ದೊಡ್ಡ ತೈಲ ಉತ್ಪಾದನಾ ಕಂಪನಿ ಸೌದಿ ಅರಾಮ್ಕೋದ ತೈಲ ಸಂಸ್ಕರಣ ಘಟಕದ ಮೇಲೆ ಡ್ರೋನ್‌ ದಾಳಿ ನಡೆಸಿದ್ದರು. ಈ ಪರಿಣಾಮ ದಿಢೀರ್‌ ವಿಶ್ವದಲ್ಲಿ ತೈಲ ಬೆಲೆ ಏರಿಕೆಯಾಗಿತ್ತು.

    ಭಾರತದ ಮೇಲೆ ಆಗುವ ಪರಿಣಾಮ ಏನು?
    ಹೇಗೆ ವಾಹನಗಳಿಗೆ ವಿಮೆ ಮಾಡಲಾಗುತ್ತದೋ ಅದೇ ರೀತಿ ಹಡಗಗುಗಳಿಗೆ ವಿಮೆ ಇರುತ್ತೆ. ಮೊದಲು ಈ ಮಾರ್ಗದ ಮೂಲಕ ಸಾಗುವ ಕಾರ್ಗೋ ಶಿಪ್‌ಗಳಿಗೆ 2 ಲಕ್ಷ ಡಾಲರ್‌ ವಿಮೆ ಇದ್ದರೆ ಈಗ 5 ಲಕ್ಷ ಡಾಲರ್‌ಗೆ ಏರಿಕೆಯಾಗಿದೆ.

    ಎರಡನೇಯದಾಗಿ ಕೆಂಪು ಸಮುದ್ರದಲ್ಲಿ ಸಮಸ್ಯೆಯಾದರೆ ಹಡಗುಗಳು ಈಗ ಮಾರ್ಗವನ್ನು ಬದಲಾಯಿಸಿ ಆಫ್ರಿಕಾ ಖಂಡಕ್ಕೆ ಸುತ್ತು ಹಾಕಿ ಏಷ್ಯಾ, ಯುರೋಪ್‌ ದೇಶಗಳನ್ನು ತಲುಪಬೇಕಾಗುತ್ತದೆ. ಕೆಂಪು ಸಮುದ್ರದ 2 ಸಾವಿರ ಕಿ.ಮೀ ಮಾಡಬೇಕಾದ ಹಡಗು ಹತ್ತಿರ ಹತ್ತಿರ 9 ಸಾವಿರ ಕಿ.ಮೀ ಕ್ರಮಿಸಿ ದೇಶಗಳನ್ನು ತಲುಪಬೇಕಾಗುತ್ತದೆ. ಯುರೋಪ್‌ನಿಂದ 5 ವಾರದಲ್ಲಿ ಭಾರತಕ್ಕೆ ಬರುತ್ತಿದ್ದ ಹಡಗುಗಳು ಈ ಮಾರ್ಗ ಬಳಸಿದರೆ 7-8 ವಾರ ಬೇಕಾಗುತ್ತದೆ.

    ಕೆಂಪು ಸಮುದ್ರದಲ್ಲಿ ಯುದ್ಧ ನಿಲ್ಲುತ್ತಾ?
    ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಯಾರ ಮೇಲೆ ಬೇಕಾದರೂ ಭೂಮಿ, ವಾಯು, ಸಮುದ್ರದಿಂದ ದಾಳಿ ಮಾಡಬಹುದು. ಈಗಾಗಲೇ ಅಮೆರಿಕ ಮತ್ತು ಯುಕೆ ಯೆಮೆನ್‌ನಲ್ಲಿರುವ ಹೌತಿ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ ಎಚ್ಚರಿಕೆ ನೀಡಿದೆ. ಅಷ್ಟೇ ಅಲ್ಲದೇ ಅಮೆರಿಕ ಮತ್ತು ಯುಕೆಯ ಯುದ್ಧ ನೌಕೆ ಹಡಗುಗಳು ಕೆಂಪು ಸಮುದ್ರದದಲ್ಲಿ ಬಿಡು ಬಿಟ್ಟಿವೆ. ಇರಾನ್‌ ಹೌತಿ ಉಗ್ರರಿಗೆ ಶಸ್ತ್ರಾಸ್ತ್ರ ಸರಬರಾಜು ಮಾಡುವ ಮೂಲಕ ಪ್ರೋತ್ಸಾಹ ನೀಡುತ್ತಿದೆ. ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳು ಮಿಲಿಟರಿಯಲ್ಲಿ ಸೂಪರ್‌ ಪವರ್‌ ದೇಶಗಳಾಗಿವೆ. ಹೀಗಾಗಿ ಹೌತಿ ಉಗ್ರರನ್ನು ಸದೆ ಬಡೆಯುವುದು ಕಷ್ಟದ ಕೆಲಸ ಏನಲ್ಲ. ಈ ಕಿತ್ತಾಟದ ಮಧ್ಯೆ ಇರಾನ್‌ ಮಧ್ಯ ಪ್ರವೇಶ ಮಾಡಿದರೆ ಪರಿಸ್ಥಿತಿ ಉಲ್ಭಣವಾಗುವ ಸಾಧ್ಯತೆಯಿದೆ.

  • ಹೌತಿ ಉಗ್ರರ ಮೇಲೆ ಅಮೆರಿಕ ಏರ್‌ಸ್ಟ್ರೈಕ್‌, 31 ಬಲಿ – ನರಕ ತೋರಿಸ್ತೀವಿ ಎಂದು ಗುಡುಗಿದ ಟ್ರಂಪ್‌

    ಹೌತಿ ಉಗ್ರರ ಮೇಲೆ ಅಮೆರಿಕ ಏರ್‌ಸ್ಟ್ರೈಕ್‌, 31 ಬಲಿ – ನರಕ ತೋರಿಸ್ತೀವಿ ಎಂದು ಗುಡುಗಿದ ಟ್ರಂಪ್‌

    – ಟ್ರಂಪ್‌ ಎರಡನೇ ಅವಧಿಯ ಮೊದಲ ದಾಳಿ
    – ನಿಮ್ಮ ಸಮಯ ಮುಗಿದಿದೆ: ಟ್ರಂಪ್‌ ಎಚ್ಚರಿಕೆ

    ವಾಷಿಂಗ್ಟನ್‌: ಅಮೆರಿಕದ (USA) ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಉಗ್ರರ ಮೇಲೆ ಏರ್‌ಸ್ಟ್ರೈಕ್‌ (Air Strike) ಮಾಡಿಸಿದ್ದಾರೆ. ಯೆಮೆನ್‌ನಲ್ಲಿ ಹೌತಿ ಉಗ್ರರ ನೆಲೆಗಳ (Yemen Houthi Rebels) ಅಮೆರಿಕ ಏರ್‌ಸ್ಟ್ರೈಕ್‌ (Air Strike) ನಡೆಸಿ ಧ್ವಂಸಗೊಳಿಸಿದೆ.

    ಯೆಮೆನ್‌ನ ಇರಾನ್ ಬೆಂಬಲಿತ ಹೌತಿಗಳ ವಿರುದ್ಧ ದೊಡ್ಡ ಪ್ರಮಾಣದ ಮಿಲಿಟರಿ ದಾಳಿಯಿಂದ ಕನಿಷ್ಠ 31 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.  ಅಮೆರಿಕ ಯುದ್ಧ ನೌಕೆಗಳಿಂದ ಹಾರಿದ ಯುದ್ಧ ವಿಮಾನಗಳು ಹೌತಿ ಉಗ್ರರ ಪ್ರಮುಖ ಸ್ಥಳಗಳ ಮೇಲೆ ಬಾಂಬ್‌ ದಾಳಿ ನಡೆಸಿದೆ.

    ಕೆಂಪು ಸಮುದ್ರದಲ್ಲಿ ಸರಕು ಸಾಗಾಣಿಕೆ ಹಡಗು ಮೇಲೆ ಹೌತಿ ಉಗ್ರರು ನಡೆಸಿದ ದಾಳಿಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ನಿಮ್ಮ ಸಮಯ ಮುಗಿದಿದೆ ಮತ್ತೆ ದಾಳಿ ಮಾಡಿದರೆ ನಿಮಗೆ ನರಕ ತೋರಿಸಲಾಗುವುದು ಎಂದು ಟ್ರಂಪ್‌ ಗುಡುಗಿದ್ದಾರೆ.

    ಜಾಗತಿಕ ವ್ಯಾಪಾರ ಮತ್ತು ಅಮೆರಿಕ ಸ್ವತ್ತುಗಳನ್ನು ರಕ್ಷಿಸಲು ಈ ದಾಳಿ ಮಾಡಿದ್ದೇವೆ ಎಂದು ಟ್ರಂಪ್‌ ಸಮರ್ಥಿಸಿಕೊಂಡಿದ್ದಾರೆ. ಯಾವುದೇ ಭಯೋತ್ಪಾದಕ ಪಡೆ ಅಮೆರಿಕದ ವಾಣಿಜ್ಯ ಮತ್ತು ನೌಕಾ ಹಡಗುಗಳು ವಿಶ್ವದ ಜಲಮಾರ್ಗಗಳಲ್ಲಿ ಮುಕ್ತವಾಗಿ ನೌಕಾಯಾನ ಮಾಡುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    ಹೌತಿಗಳಿಗೆ ಇರಾನ್‌ ಬೆಂಬಲ ನೀಡುವುದನ್ನು ನಿಲ್ಲಿಸಬೇಕು. ಇಲ್ಲದೇ ಇದ್ದರೆ ಇರಾನ್‌ ದೇಶವನ್ನು ಸಂಪೂರ್ಣವಾಗಿ ಹೊಣೆ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೇ ಹೌತಿಗಳ ಬೆದರಿಕೆಗೆ ಮಾಜಿ ಅಧ್ಯಕ್ಷ ಜೋ ಬೈಡನ್‌ ಪ್ರಬಲವಾಗಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ಟೀಕಿಸಿದ್ದಾರೆ.

    ಜೋ ಬೈಡೆನ್ ಸರ್ಕಾರದ ಪ್ರತಿಕ್ರಿಯೆ ಶೋಚನೀಯವಾಗಿ ದುರ್ಬಲವಾಗಿತ್ತು. ಇದರಿಂದಾಗಿ ಹೌತಿಗಳು ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ನಾಲ್ಕು ತಿಂಗಳ ಹಿಂದೆ ಕೆಂಪು ಸಮುದ್ರದ ಮೂಲಕ ಹಾದುಹೋದ ಕೊನೆಯ ಅಮೆರಿಕನ್ ಯುದ್ಧನೌಕೆಯ ಮೇಲೆ ಹೌತಿಗಳು ಒಂದು ಡಜನ್‌ಗಿಂತಲೂ ಹೆಚ್ಚು ಬಾರಿ ದಾಳಿ ಮಾಡಿದ್ದಾರೆ. ಇರಾನ್‌ನಿಂದ ಹಣಕಾಸು ಪಡೆದ ಹೌತಿ ಗೂಂಡಾಗಳು ಯುಎಸ್ ವಿಮಾನಗಳ ಮೇಲೆ ಕ್ಷಿಪಣಿಗಳನ್ನು ಹಾರಿಸಿದ್ದಾರೆ. ಈ ಕಾರಣಕ್ಕೆ ದಾಳಿ ನಡೆಸಲಾಗಿದೆ ಎಂದು ಟ್ರಂಪ್‌ ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಬಸ್‌ ಉರುಳಿಸಿ 9 ಮಂದಿ ತೀರ್ಥಯಾತ್ರಿಗಳನ್ನು ಹತೈಗೈದ ಉಗ್ರ ಪಾಕ್‌ನಲ್ಲಿ ಮಟಾಷ್‌

     

    ಈಗ ಅಮೆರಿಕ ದಾಳಿ ನಡೆಸಿದ್ದು ಯಾಕೆ?
    2023 ರ ಅಂತ್ಯದಿಂದ ಹೌತಿಗಳು ಕೆಂಪು ಸಮುದ್ರ, ಅಡೆನ್ ಕೊಲ್ಲಿ ಮತ್ತು ಇತರ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ವಾಣಿಜ್ಯ ಮತ್ತು ಮಿಲಿಟರಿ ಹಡಗುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಈಗ ಗಾಜಾದಲ್ಲಿ ಕದನ ವಿರಾಮದ ಹೊರತಾಗಿಯೂ ಹೌತಿಗಳು ಇತ್ತೀಚೆಗೆ ಇಸ್ರೇಲ್‌ಗೆ ಸಂಬಂಧಿಸಿದ ಹಡಗುಗಳ ಮೇಲೆ ದಾಳಿಗಳನ್ನು ಪುನರಾರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಕ್ಕೆ ಅಮೆರಿಕ ಈಗ ದಾಳಿ ನಡೆಸಿದೆ.

    ಎಲ್ಲಿಲ್ಲಿ ದಾಳಿ?
    ಪ್ರಸಿದ್ಧ ಮಿಲಿಟರಿ ತಾಣವಾದ ಸನಾ ವಿಮಾನ ನಿಲ್ದಾಣ ಸಂಕೀರ್ಣ, ಸೌದಿ ಗಡಿಯ ಬಳಿ ಹೌತಿಗಳ ಉತ್ತರದ ಭದ್ರಕೋಟೆಯಾದ ಸಾದಾ, ನೈಋತ್ಯ ಪ್ರದೇಶದಲ್ಲಿರುವ ಧಮರ್ ಮತ್ತು ಅಬ್ಸ್, ಹೌತಿ ಮಿಲಿಟರಿ ಸೌಲಭ್ಯಗಳ ನೆಲೆಯಾಗಿರುವ ಗೆರಾಫ್ ಮೇಲೆ ದಾಳಿ ನಡೆದಿದೆ.

     

  • ಕೆಂಪು ಸಮುದ್ರದ ಅಡಿಯಲ್ಲಿದ್ದ 3 ಡೇಟಾ ಕೇಬಲ್‌ಗಳಿಗೆ ಕತ್ತರಿ – ವಿಶ್ವಾದ್ಯಂತ ಇಂಟರ್‌ನೆಟ್‌ ಸೇವೆಯಲ್ಲಿ ವ್ಯತ್ಯಯ

    ಕೆಂಪು ಸಮುದ್ರದ ಅಡಿಯಲ್ಲಿದ್ದ 3 ಡೇಟಾ ಕೇಬಲ್‌ಗಳಿಗೆ ಕತ್ತರಿ – ವಿಶ್ವಾದ್ಯಂತ ಇಂಟರ್‌ನೆಟ್‌ ಸೇವೆಯಲ್ಲಿ ವ್ಯತ್ಯಯ

    ಹಾಂಕಾಂಗ್‌: ಜಾಗತಿಕ ಇಂಟರ್‌ನೆಟ್‌ (Internet) ಮತ್ತು ಟೆಲಿಕಮ್ಯೂನಿಕೇಶನ್‌ ಸಂಪರ್ಕಕ್ಕೆ ಕೆಂಪು ಸಮುದ್ರದ (Red Sea) ಕೆಳಗಡೆ ಹಾಕಲಾಗಿದ್ದ 3 ಡೇಟಾ ಕೇಬಲ್‌ಗಳನ್ನು (Data Cable) ಕತ್ತರಿಸಲಾಗಿದ್ದು ವಿಶ್ವಾದ್ಯಂತ ಇಂಟರ್‌ನೆಟ್‌ ಸೇವೆಯಲ್ಲಿ ವ್ಯತ್ಯಯವಾಗುವಾಗಲಿದೆ.

    ಹಾಂಕಾಂಗ್‌ ಮೂಲದ HGC ಗ್ಲೋಬಲ್ ಕಮ್ಯುನಿಕೇಷನ್ಸ್ ಹೇಳಿಕೆ ಬಿಡುಗಡೆ ಮಾಡಿ ಈ ವಿಚಾರವನ್ನು ತಿಳಿಸಿದ್ದು, ವಿಶ್ವದ ಸುಮಾರು 25 ಪ್ರತಿಶತದಷ್ಟು ಇಂಟರ್‌ನೆಟ್‌ ಟ್ರಾಫಿಕ್‌ (Internet Traffic) ಮೇಲೆ ಪರಿಣಾಮ ಬೀರಲಿದೆ.

    ಜಗತ್ತಿನಾದ್ಯಂತ ಟ್ರಾಫಿಕ್ ಅನ್ನು ಮರುಮಾರ್ಗಗೊಳಿಸುವುದರ ಜೊತೆಗೆ ಕೆಂಪು ಸಮುದ್ರದಲ್ಲಿ ಇನ್ನೂ ಕಾರ್ಯನಿರ್ವಹಿಸಬಹುದಾದ 11 ಕೇಬಲ್‌ಗಳ ಮೂಲಕ ಟ್ರಾಫಿಕ್‌ ಸಮಸ್ಯೆಯನ್ನು ತಗ್ಗಿಸಲು ಕಂಪನಿಗಳು ಈಗ ಕ್ರಮ ಕೈಗೊಳ್ಳುತ್ತಿದೆ. ಇದನ್ನೂ ಓದಿ: ಬೆಂಗ್ಳೂರು ಜೈಲಿನಲ್ಲಿದ್ದುಕೊಂಡೇ ಸಹ ಕೈದಿಗಳನ್ನು ಸೆಳೆದು ಉಗ್ರ ಚಟುವಟಿಕೆಗೆ ಬಳಕೆ – ದೇಶದ 17 ಕಡೆ ಎನ್‌ಐಎ ದಾಳಿ

    ಏಷ್ಯಾ – ಆಫ್ರಿಕಾ-ಯುರೋಪ್‌, ಯುರೋಪ್‌ ಇಂಡಿಯಾ ಗೇಟ್‌ವೇ, ಸೀಕಾಮ್ ಮತ್ತು ಟಿಜಿಎನ್‌ ಗಲ್ಫ್‌ ಕೇಬಲ್‌ಗಳನ್ನು ಕತ್ತರಿಸಲಾಗಿದೆ. ಸಿಯಾಕಾಮ್‌ ಮತ್ತು ಟಿಜಿಎನ್‌ ಗಲ್ಫ್‌ ಕೇಬಲ್‌ನಲ್ಲಿ ಟಾಟಾ ಕಮ್ಯೂನಿಕೇಷನ್‌ (Tata Communication) ಒಂದು ಭಾಗವಾಗಿದೆ. ಇದನ್ನೂ ಓದಿ: ಆಪಲ್‌ ಐಫೋನ್‌ಗೆ ಭರ್ಜರಿ 16,584 ಕೋಟಿ ರೂ. ದಂಡ

    ಈ ವಿಚಾರ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಟಾಟಾ ಕಮ್ಯೂನಿಕೇಷನ್‌, ತಕ್ಷಣ ಮತ್ತು ಸೂಕ್ತ ಪರಿಹಾರ ಕ್ರಮಗಳನ್ನು ಪ್ರಾರಂಭಿಸಲಾಗಿದೆ. ನಾವು ವಿವಿಧ ಕೇಬಲ್‌ ಕಂಪನಿಗಳನ್ನು ಹೂಡಿಕೆ ಮಾಡಿದ್ದೇವೆ. ಈ ರೀತಿಯ ಸಮಸ್ಯೆಯಾದಾಗ ನಮ್ಮ ಸೇವೆಗಳನ್ನು ಸ್ವಯಂಚಲಿತವಾಗಿ ಮರುಹೊಂದಿಸಲು ಸಾಧ್ಯವಾಗುತ್ತದೆ ಎಂದು ಹೇಳಿದೆ.

    ಡೇಟಾ ಕೇಬಲ್‌ ತುಂಡಾಗಿದ್ದು ಹೇಗೆ ಎಂಬುದಕ್ಕೆ ಯಾವುದೇ ಅಧಿಕೃತ ವಿವರ ಸಿಕ್ಕಿಲ್ಲ. ಮಾಧ್ಯಮಗಳು ಪ್ಯಾಲೆಸ್ತೀನ್‌ (Palestine) ಮೇಲೆ ಇಸ್ರೇಲ್‌ (Israel) ದಾಳಿ ಮಾಡುತ್ತಿರುವುದಕ್ಕೆ ಪ್ರತಿಯಾಗಿ ಯೆಮೆನ್‌ ಮೂಲದ ಹೌತಿ ಬಂಡುಕೋರರು (Houthi Rebels) ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಿ ವರದಿ ಮಾಡಿವೆ.

     

    ಯೆಮೆನ್ ಸರ್ಕಾರವು ಬ್ರಿಟಿಷ್ ಮತ್ತು ಯುಎಸ್ ಮಿಲಿಟರಿ ಕಾರ್ಯಾಚರಣೆಯಿಂದ ಈ ಕೇಬಲ್‌ ತುಂಡಾಗಿದೆ ಎಂದು ದೂಷಿಸಿದೆ. ಜಲಾಂತರ್ಗಾಮಿ ಕೇಬಲ್‌ಗಳನ್ನು ದುರಸ್ತಿ ಮಾಡಲು ಮತ್ತು ನಿರ್ವಹಿಸಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ನಾವು ಉತ್ಸುಕವಾಗಿದ್ದೇವೆ ಎಂದು ಯೆಮೆನ್‌ ಹೇಳಿದೆ.

    ಯುದ್ಧ ನಿಲ್ಲಿಸಲು ಇಸ್ರೇಲ್‌ ಮೇಲೆ ಒತ್ತಡ ಹೇರುವ ಸಂಬಂಧ ಹೌತಿ ಬಂಡುಕೋರರು ಆರಂಭದಲ್ಲಿ ಕೆಂಪು ಸಮುದ್ರದಲ್ಲಿ ಸಂಚರಿಸುವ ಇಸ್ರೇಲ್‌ ಸರಕು ಸಾಗಾಣೆ ಹಡುಗಗಳ ಮೇಲೆ ದಾಳಿ ನಡೆಸುತ್ತಿದ್ದರು.  ಈಗ ಆ ಭಾಗದಲ್ಲಿ ಸಂಚರಿಸುತ್ತಿದ್ದ ಹಡಗುಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಆರಂಭಿಸಿದ್ದಾರೆ. ಪರಿಣಾಮ ಕೆಂಪು ಸಮುದ್ರದ ಮೂಲಕ ಏಷ್ಯಾ-ಯುರೋಪ್‌ ಮೂಲಕ ಸಾಗುವ ಹಡಗುಗಳು ಈಗ ಆಫ್ರಿಕಾ ಖಂಡವನ್ನು ಸುತ್ತು ಹಾಕಿ ಯುರೋಪ್‌ಗೆ ತೆರಳುತ್ತಿವೆ.

     

  • ಭಾರತದ ಧ್ವಜವುಳ್ಳ ಕಚ್ಚಾತೈಲ ಟ್ಯಾಂಕರ್‌ ಮೇಲೆ ಹೌತಿ ಉಗ್ರರಿಂದ ಡ್ರೋನ್‌ ದಾಳಿ

    ಭಾರತದ ಧ್ವಜವುಳ್ಳ ಕಚ್ಚಾತೈಲ ಟ್ಯಾಂಕರ್‌ ಮೇಲೆ ಹೌತಿ ಉಗ್ರರಿಂದ ಡ್ರೋನ್‌ ದಾಳಿ

    ವಾಷಿಂಗ್ಟನ್‌: ಕೆಂಪು ಸಮುದ್ರದಲ್ಲಿ (Red Sea) ಯೆಮೆನ್‌ನ ಹೌತಿ ಬಂಡುಕೋರರು (Yemen’s Houthi rebels) ಭಾರತದ ಧ್ವಜವುಳ್ಳ ಕಚ್ಚಾ ತೈಲ ಟ್ಯಾಂಕರ್‌ (Indian-Flagged Oil Tanker) ಮೇಲೆ ಡ್ರೋನ್‌ ದಾಳಿ (Drone Attack) ನಡೆಸಿದ್ದಾರೆ ಎಂದು ಅಮೆರಿಕ (USA) ತಿಳಿಸಿದೆ.

    ಎಂ/ವಿ ಸಾಯಿಬಾಬಾ ಹೆಸರಿನ ಗ್ಯಾಬನ್‌ ಒಡೆತನದ ಹಡಗಿನ (Ship) ಮೇಲೆ ದಾಳಿ ನಡೆಸಿದ್ದು ಯಾವುದೇ ಗಾಯಗಳಾಗಿಲ್ಲ ಎಂದು ಹೇಳಿದೆ. ಭಾರತೀಯ ಕಾಲಮಾನ ರಾತ್ರಿ 10:30ರ ವೇಳೆಗೆ ಈ ದಾಳಿ ಸಂಭವಿಸಿದೆ. ಭಾರತೀಯ ಹಡಗಿನ ಮೇಲೆ ದಾಳಿ ನಡೆದ ಬಳಿಕ ಮತ್ತೊಂದು ಹಡಗಿನ ಮೇಲೆ ಈ ದಾಳಿ ನಡೆದಿದೆ.

    ಶನಿವಾರ ಎರಡು ಹಡಗಿನ ಮೇಲೆ ಡ್ರೋನ್‌ ದಾಳಿ ನಡೆದಿದೆ. ನಾರ್ವೇ ಧ್ವಜದ ಹೊಂದಿದ್ದ ಹಡಗಿನ ಮೇಲೆ ಡ್ರೋನ್‌ ದಾಳಿ ನಡೆದಿತ್ತು. ಆದರೆ ಈ ಹಡಗು ಸ್ವಲ್ಪದರಲ್ಲೇ ಪಾರಾಗಿದೆ ಎಂದು ಅಮೆರಿಕ ತಿಳಿಸಿದೆ. ಇದನ್ನೂ ಓದಿ: ಹಿಂದೂ ಮಹಾಸಾಗರದಲ್ಲಿ ವ್ಯಾಪಾರಿ ಹಡಗಿನ ಮೇಲೆ ಡ್ರೋನ್‌  ದಾಳಿ

    ಹೌತಿ ಬಂಡುಕೋರರಿಗೆ ಇರಾನ್ ಬೆಂಬಲ ನೀಡುತ್ತಿದೆ. ಹಮಾಸ್‌ ವಿರುದ್ಧ ಇಸ್ರೇಲ್‌ ಯುದ್ಧ ಸಾರಿದ್ದನ್ನು ಖಂಡಿಸಿ ಹೌತಿ ಬಂಡುಕೋರರು ಈಗ ಕೆಂಪು ಸಮುದ್ರದ ಮೂಲಕ ಹೋಗುವ ವ್ಯಾಪಾರಿ ಹಡಗುಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಆರಂಭಿಸಿದ್ದಾರೆ.

    ಕೆಂಪು ಸಮುದ್ರದಲ್ಲಿ ಪದೇ ಪದೇ ದಾಳಿಯಾಗುತ್ತಿರುವ ಕಾರಣ ಪ್ರಮುಖ ಹಡಗು ಕಂಪನಿಗಳು ಮಾರ್ಗವನ್ನು ಬದಲಾಯಿಸಿದ್ದು ದಕ್ಷಿಣ ಆಫ್ರಿಕಾ ಮೂಲಕವಾಗಿ ಈಗ ಹಡಗುಗಳು ಸಂಚರಿಸುತ್ತಿವೆ.