Tag: Housewife

  • ಮನೆಗೆ ಬಂದು ಜಗಳವಾಡಿದಳೆಂದು ಗೃಹಿಣಿಯನ್ನು ಕೊಲೆಗೈದ ಪ್ರಿಯಕರ

    ಮನೆಗೆ ಬಂದು ಜಗಳವಾಡಿದಳೆಂದು ಗೃಹಿಣಿಯನ್ನು ಕೊಲೆಗೈದ ಪ್ರಿಯಕರ

    ಮೈಸೂರು: ಗೃಹಿಣಿಯನ್ನು ತನ್ನ ಪ್ರಿಯಕರನೇ ಕೊಲೆಗೈದ ಘಟನೆ ಮೈಸೂರಿನಲ್ಲಿ ನಡೆದಿದೆ.

    ಮಾರುತಿ ಬಡಾವಣೆ ನಿವಾಸಿ ಜ್ಯೋತಿ(29) ಕೊಲೆಯಾದ ಮಹಿಳೆ. ಹುಣಸೂರು ಪಟ್ಟಣದ ಪ್ರವೀಣ್ ಕೊಲೆ ಮಾಡಿದ ಆರೋಪಿ. ಜ್ಯೋತಿಗೆ ಮದುವೆಯಾಗಿದ್ದು, ಮೂರು ಮಕ್ಕಳಿದ್ದಾರೆ.

    ಒಂದು ವರ್ಷದಿಂದ ಜ್ಯೋತಿ ಮತ್ತು ಪ್ರವೀಣ್ ನಡುವೆ ಅಕ್ರಮ ಸಂಬಂಧವಿತ್ತು. ಶುಕ್ರವಾರ ರಾತ್ರಿ ಜ್ಯೋತಿ, ಪ್ರವೀಣ್ ಮನೆಗೆ ಹೋಗಿ ಜಗಳವಾಡಿದ್ದಳು. ಇದರಿಂದ ಕುಪಿತನಾಗಿದ್ದ ಪ್ರವೀಣ್ ಇಂದು ಬೆಳಗ್ಗೆ ಜ್ಯೋತಿ ಮನೆಗೆ ನುಗ್ಗಿ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆಗೈದಿದ್ದಾನೆ.

    ಆರೋಪಿ ಪ್ರವೀಣ್ ಕೊಲೆ ಮಾಡಿ ಬೈಪಾಸ್ ರಸ್ತೆಯ ಪ್ರಶಾಂತ್ ಲಾಡ್ಜ್ ನ ಮೇಲಿನ ಮಹಡಿಗೆ ಹೋಗಿ ತನ್ನ ತಂದೆಗೆ ಫೋನ್ ಮಾಡಿದ್ದಾನೆ. ಬಳಿಕ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾನೆ. ಇದನ್ನು ಕೇಳಿದ ತಂದೆ ಕೂಡಲೇ ಸ್ಥಳಕ್ಕೆ ಆಗಮಿಸಿ ಪುತ್ರನ ಮನವೊಲಿಸಿದ್ದಾರೆ.

    ಡಿವೈಎಸ್ಪಿ ಭಾಸ್ಕರ್, ಸರ್ಕಲ್ ಇನ್ಸ್ ಪೆಕ್ಟರ್ ಪೂವಯ್ಯ ಹಾಗೂ ಪಿಎಸ್‍ಐ ಷಣ್ಮುಗಂ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಹುಣಸೂರು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.