Tag: Housewife

  • ಅನೈತಿಕ ಸಂಬಂಧಕ್ಕೆ ಒಪ್ಪದ ಗೃಹಿಣಿಗೆ ಮಾರಣಾಂತಿಕ ಹಲ್ಲೆ

    ಅನೈತಿಕ ಸಂಬಂಧಕ್ಕೆ ಒಪ್ಪದ ಗೃಹಿಣಿಗೆ ಮಾರಣಾಂತಿಕ ಹಲ್ಲೆ

    ಚಾಮರಾಜನಗರ: ಕಾಮುಕನೊಬ್ಬನು ಅನೈತಿಕ ಸಂಬಂಧಕ್ಕೆ ಒಪ್ಪದ ಕಾರಣ ಗೃಹಿಣಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ ಗ್ರಾಮದಲ್ಲಿ ನಡೆದಿದೆ.

    ಕಾಮುಕ ನಟರಾಜು ಕೆಲವು ತಿಂಗಳಿಂದ ಮಹಿಳೆಗೆ ಲೈಂಗಿಕ ಕಿರುಕುಳಕ್ಕೆ ಒತ್ತಾಯಿಸುತ್ತಿದ್ದ. ಆರೋಪಿಯು ನನ್ನ ಜೊತೆ ಅನೈತಿಕ ಸಂಬಂಧ ಬೆಳೆಸಿದರೆ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೆನೆಂದು ಗೃಹಿಣಿಗೆ ಆಮಿಷ ಒಡ್ಡುತ್ತಿದ್ದ. ಈ ಹಿನ್ನೆಲೆ ಅದಕ್ಕೆ ಒಪ್ಪದ ಗೃಹಿಣಿ ಮನೆಗೆ ತಡರಾತ್ರಿ ನುಗ್ಗಿ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ತಡೆಯಲು ಬಂದ ಗೃಹಿಣಿಯ ಮಗಳ ಮೇಲೆಯೂ ಹಲ್ಲೆ ಮಾಡಿದ್ದಾನೆ. ಇದನ್ನೂ ಓದಿ: ಕೋವಿಡ್‌ ಟೆಸ್ಟ್‌ ಮಾಡಿಸಿಕೊಳ್ಳಿ ಎಂದ ಆರೋಗ್ಯ ಅಧಿಕಾರಿ ವಿರುದ್ಧ ಡಿಕೆಶಿ ಗರಂ

    POLICE JEEP

    ಹಲ್ಲೆಗೊಳಗಾದ ಅಮ್ಮ ಮಗಳಿಗೆ ಸಕಾ9ರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ಪೋಲಿಸರು ಸಂತ್ರಸ್ತೆ ನೀಡಿದ ದೂರಿನನ್ವಯ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನನ್ನನ್ನು ನೋಡಿದ್ರೆ ಕೊರೊನಾ ಇದೆ ಅಂತ ಅನ್ನಿಸುತ್ತಾ?: ಡಿ.ಕೆ. ಶಿವಕುಮಾರ್

     

  • ಹುಬ್ಬಳ್ಳಿ To ಗೋವಾ- ಮಾತಿನ ಮಲ್ಲ ದರ್ಜಿಯ ಮೋಹದ ಬಲೆಯಲ್ಲಿ ಸಿಲುಕಿದ ಗೃಹಿಣಿ

    ಹುಬ್ಬಳ್ಳಿ To ಗೋವಾ- ಮಾತಿನ ಮಲ್ಲ ದರ್ಜಿಯ ಮೋಹದ ಬಲೆಯಲ್ಲಿ ಸಿಲುಕಿದ ಗೃಹಿಣಿ

    – ಟೇಲರ್ ಲವ್ ಸ್ಟೋರಿಯ ರೋಚಕ ಕಥಾನಕ
    – ಆಕೆಗೆ 35, ಅವನಿಗೆ 42 ಇಬ್ಬರ ನಡುವೆ ಚಿಗುರೊಡೆದ ಪ್ರೇಮ

    ಹುಬ್ಬಳ್ಳಿ/ಧಾರವಾಡ: ಅವಳಿಗೆ ವಯಸ್ಸು 35. ಅವನಿಗೆ 42. ಇಬ್ಬರಿಗೂ ಅವರವರ ಎತ್ತರಕ್ಕೆ ಮಕ್ಕಳು ಬೆಳೆದಿದ್ದಾರೆ. ಗ್ರಾಮದಲ್ಲಿ ಇಬ್ಬರು ಸಜ್ಜನ ಕುಟುಂಬದವರೇ ಆಗಿದ್ದಾರೆ. ಇಬ್ಬರಿಬ್ಬರ ಮಧ್ಯೆ ಚಿಗುರೊಡೆದ ಪ್ರೀತಿ ಪ್ರೇಮಪಯಣ ತನಕ ಬಂದಿದೆ. ಹೌದು ಹುಬ್ಬಳ್ಳಿ ತಾಲೂಕಿನ ಪಾಲಿಕೋಪ್ಪ ಗ್ರಾಮದಲ್ಲಿ ಇಂತಹ ವಿಲಕ್ಷಣವಾದ ಮಧ್ಯ ವಯಸ್ಸಿನ ಪ್ರೇಮ ಕಥಾನಕವೊಂದು ದುರಂತ ಅಂತ್ಯ ಕಂಡಿದೆ.

    ಹುಬ್ಬಳ್ಳಿಯ ಗ್ರಾಮೀಣ ಠಾಣೆಯ ಪೋಲಿಸರು ಪ್ರೇಮಿ ಹಜರೇಸಾಬ್ ಓಲೇಕಾರರನ್ನು ಬಂಧಿಸಿದ್ದಾರೆ. ಅಪಹರಣ ಮತ್ತು ಅತ್ಯಾಚಾರ ಪ್ರಕರಣದಡಿಯಲ್ಲಿ ಪ್ರೇಮಿಯನ್ನು ಬಂಧಿಸಿ ಅಟ್ರಾಸಿಟಿ ಕೇಸ್ ಕೂಡಾ ಜಡಿದು ಜೈಲಿಗಟ್ಟಿದ್ದಾರೆ. ಹಜರೇಸಾಬ್‍ನ ಜತೆಯಲ್ಲಿದ್ದ ಪ್ರಿಯತಮೆಯನ್ನು ಪೋಲಿಸರು ರಕ್ಷಣೆ ಮಾಡಿ ಗೋವಾದಿಂದ ಹುಬ್ಬಳ್ಳಿಗೆ ಕರೆತಂದಿದ್ದಾರೆ.

    ಹುಬ್ಬಳ್ಳಿ ತಾಲೂಕಿನ ಪಾಲಿಕೊಪ್ಪದಲ್ಲಿ ಹಜರೇಸಾಬ್ ಓಲೇಕಾರ್ ಫೇಮಸ್ ಟೇಲರ್. ಮನೆಯಲ್ಲಿ ಯಾವುದೋ ಕಾರಣಕ್ಕೆ ಜಗಳ ಮಾಡಿಕೊಂಡು ಹೆಂಡತಿ ಮಕ್ಕಳಿಂದ ದೂರವಿದ್ದ. ಒಬ್ಬನೇ ಟೇಲರಿಂಗ್ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದ. ಆಗ ಗೃಹಿಣಿಯ ಪರಿಚಯವಾಗಿದೆ ಟೇಲರ್ ಅಲ್ವಾ ಅದು ಇದು ಅಂತಾ ನೆಪ ಹೇಳಿಕೊಂಡು ಮೇಡಂ ಮನೆಗೆ ಆಗಾಗ ಬಂದು ಹೋಗ್ತಿದ್ದ. ಮಾತಿನ ಮಲ್ಲನಾಗಿದ್ದ ಈ ಟೇಲರ್ ಗೆ ಗೃಹಿಣಿ ಮರಳಾಗಿದ್ದಾಳೆ. ಇಬ್ಬರ ಮಧ್ಯೆ ಪ್ರೇಮಾಂಕುರವಾಗಿದೆ. ಕಳೆದ ತಿಂಗಳು ರಾತ್ರಿ ಸಮಯ ನೋಡಿಕೊಂಡು ಪಾಲಿಕೊಪ್ಪದಿಂದ ಇಬ್ಬರು ಪರಾರಿಯಾಗಿದ್ದಾರೆ. ಮರುದಿನವೇ ಗೃಹಿಣಿಯ ಪತಿ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

    ಹುಬ್ಬಳ್ಳಿ ಗ್ರಾಮೀಣ ಪೋಲಿಸರು ಸರ್ಚಿಂಗ್ ಶುರುಮಾಡಿದಾಗ, ಇಬ್ಬರು ಗೋವಾದಲ್ಲಿ ಸೆರೆ ಸಿಕ್ಕಿದ್ದಾರೆ. ನೆಟ್‍ವರ್ಕ ಟ್ರೇಸ್ ಮಾಡಿದ ಪೋಲಿಸರಿಗೆ ಲವರ್ಸ್ ರೆಡ್ ಹ್ಯಾಂಡೆಡ್ ಆಗಿ ಗೋವಾದಲ್ಲಿ ಸಿಕ್ಕಿಬಿದ್ದಿದ್ದಾರೆ. ಪೋಲಿಸರು ಇಬ್ಬರನ್ನು ಹುಬ್ಬಳ್ಳಿಯ ಗ್ರಾಮೀಣ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ, ಸೀನ್ ಏಕ್‍ಧಂ ಉಲ್ಟಾ ಪಲ್ಟಾ ಆಗಿದೆ. ನನಗೆ ಟೇಲರ್ ಯಾಮಾರಿಸಿ ಗೋವಾಗೆ ಕರಕ್ಕೋಂಡು ಹೋಗಿದ್ದಾನೆ. ನನಗೆ ಅಲ್ಲಿಗೆ ಹೋಗಿದ್ದೇ ಅರಿವಿಲ್ಲ. ಏನೋ ಬ್ಲಾಕ್ ಮ್ಯಾಜಿಕ್ ಮಾಡಿದ್ದಾನೆ ಅಂತಾ ಸಂತ್ರಸ್ತೆ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಪೋಲಿಸರು ಹಜರೇಸಾಬ್‍ನ ವಿರುದ್ದ ಕಿಡ್ನ್ಯಾಪ್, ರೇಪ್ ಮತ್ತು ಅಟ್ರಾಸಿಟಿ ಕೇಸ್ ಕೂಡಾ ಜಡಿದು ಜೈಲಿಗಟ್ಟಿದ್ದಾರೆ. ಅಲ್ಲಿಗೆ ಫೇಮಸ್ ಟೇಲರ್ ಲವ್ ಸ್ಟೋರಿ ಟ್ರಾಜಿಡಿ ಏಂಡ್ ಆದತಾಗಿದೆ. ಅಟ್ರಾಸಿಟಿ ಕೇಸ್ ಆದ ಹಿನ್ನೆಲೆಯಲ್ಲಿ ಡಿವೈಎಸ್‍ಪಿ ನೇತೃತ್ವದಲ್ಲಿ ಪ್ರಕರಣ ತನಿಖೆ ಇನ್ನೂ ಮುಂದುವರಿದಿದೆ.

  • ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆಗೆ ಶರಣು

    ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆಗೆ ಶರಣು

    – ಮಹಿಳೆ ಸಾವಿನ ನಂತರ ಪತಿ, ಮಾವ ಪರಾರಿ

    ಹಾಸನ: ಕೌಟುಂಬಿಕ ಕಲಹದಿಂದ ಗೃಹಿಣಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ, ಪುಟ್ಟನ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಆತ್ಮಹತ್ಯೆ ಮಾಡಿಕೊಂಡ ಗೃಹಿಣಿಯನ್ನು ಸಾಕಮ್ಮ(24) ಎಂದು ಗುರುತಿಸಲಾಗಿದೆ. 2 ವರ್ಷಗಳ ಹಿಂದೆ ಮದುವೆಯಾಗಿದ್ದ ಸಾಕಮ್ಮನಿಗೆ ಗಂಡ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಕೌಟುಂಬಿಕ ಕಲಹದಿಂದ ಮನನೊಂದು ಸಾಕಮ್ಮ ನೇಣಿಗೆ ಶರಣಾಗಿದ್ದಾಳೆ.

    ಇತ್ತ ಸಾಕಮ್ಮ ಸಾವಿನ ವಿಚಾರ ತಿಳಿಯುತ್ತಿದ್ದಂತೆಯೇ ಗಂಡ ಪ್ರವೀಣ್ ಮತ್ತು ಮಾವ ರಂಗಸ್ವಾಮಿ ನಾಪತ್ತೆಯಾಗಿದ್ದಾರೆ. ಸಾಕಮ್ಮನ ಮೃತದೇಹವನ್ನು ಪೋಷಕರು ಗಂಡನ ಮನೆಯ ಮುಂದೆ ಇಟ್ಟು ಪ್ರತಿಭಟನೆ ಮಾಡುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಅರಕಲಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಮನೆ ಕೆಲ್ಸದ ಜೊತೆ ಬಿಡುವಿನ ವೇಳೆ ಮಾಸ್ಕ್ ತಯಾರಿಸಿ ಬಡವರಿಗೆ ವಿತರಣೆ

    ಮನೆ ಕೆಲ್ಸದ ಜೊತೆ ಬಿಡುವಿನ ವೇಳೆ ಮಾಸ್ಕ್ ತಯಾರಿಸಿ ಬಡವರಿಗೆ ವಿತರಣೆ

    ಮಡಿಕೇರಿ: ಕೊರೊನಾ ಬಗ್ಗೆ ಸರ್ಕಾರ ಎಷ್ಟೇ ಅರಿವು ಮೂಡಿಸುತ್ತಿದ್ದರೂ ಜನತೆ ಎಚ್ಚೆತ್ತುಕೊಳ್ಳತ್ತಿಲ್ಲ. ಹೊರಗೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಬಳಸುವಂತೆ ಮನವಿ ಮಾಡುತ್ತಿದ್ದರೂ ಅದರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.

    ಇದೇ ಸಂದರ್ಭವನ್ನು ಬಂಡವಾಳ ಮಾಡಿಕೊಂಡ ಹಲವರು ತುರ್ತು ಅಗತ್ಯವಿರುವ ಮಾಸ್ಕ್ ಗಳನ್ನು ದುಬಾರಿ ಬೆಲೆಗೆ ಮಾರಿ ಜನರ ಜೇಬಿಗೆ ಕತ್ತರಿ ಹಾಕಲು ಹೊರಟಿದ್ದಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಮಡಿಕೇರಿ ನಗರದ ಮುಳಿಯ ಲೇಔಟ್‍ನ ನಿವಾಸಿ ಗೌರಿಯವರು ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ತಾವೇ ಮಾಸ್ಕ್ ಹೊಲೆದು ಬಡವರಿಗೆ ಹಂಚುತ್ತಿದ್ದಾರೆ.

    ಜೀವನ ನಡೆಸಲು ನಾಲ್ಕೈದು ಮನೆಗಳಲ್ಲಿ ಕೆಲಸ ಮಾಡಿಕೊಂಡು ಬಿಡುವಿನ ಸಮಯದಲ್ಲಿ ತಾವು ಇರುವ ಬಾಡಿಗೆ ಮನೆಯಲ್ಲೆ ಮಷಿನ್ ಮೂಲಕ ಗೌರಿ ಅವರೇ ಮಾಸ್ಕ್ ಹೊಲೆದು ಬಡವರಿಗೆ ಹಂಚುತ್ತಿದ್ದಾರೆ. ಜೊತೆಗೆ ಮನೆ ಕೆಲಸಕ್ಕೆ ಹೋಗುವ ಬಿಡುವಿನ ವೇಳೆಯಲ್ಲಿ ಮನೆ, ಮನೆಗಳಿಗೆ ತೆರಳಿ ಮಾಸ್ಕ್ ಹಂಚಿ ಬರುತ್ತಾರೆ. ಈ ವೇಳೆ ಜನರಿಗೆ ಕೊರೊನಾದಿಂದ ಪಾರಾಗುವಂತೆ ಮನವರಿಕೆ ಮಾಡಿ ಸಮಾಜ ಸೇವೆ ಕೂಡ ಮಾಡುತ್ತಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಗೌರಿಯವರು, ಔಷಧಿ ಅಂಗಡಿಯಲ್ಲಿ ಮಾಸ್ಕ್ ಹೆಚ್ಚಾಗಿ ಸಿಗುತ್ತಿಲ್ಲ ಬಡವರು ಹೋಗಿ ಕೇಳಿದರೆ ಸುಮಾರು 100, 50, 30 ಹೀಗೆಲ್ಲಾ ಹಣವನ್ನು ತೆಗೆದುಕೊಳ್ಳುತ್ತಾರೆ. ಮೊದಲೇ ಜನ ಸಮಾನ್ಯರು ಹಣವಿಲ್ಲದೆ ತುಂಬ ಕಷ್ಟದಲ್ಲಿ ಇದ್ದಾರೆ. ಹಾಗಾಗಿ ಈ ರೀತಿಯಲ್ಲಿ ಸೇವೆ ಮಾಡುತ್ತಿರುವುದು ಒಂದು ರೀತಿಯಲ್ಲಿ ಖುಷಿ ಹಾಗೂ ತೃಪ್ತಿ ತಂದಿದೆ ಎಂದು ತಾವು ಮಾಡುವ ಕೆಲಸದ ಬಗ್ಗೆ ಗೌರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಹಣ ಕೊಡದಕ್ಕೆ ಟಿಕ್‍ಟಾಕ್ ಸ್ನೇಹಿತೆಯನ್ನು ಕೊಂದ ಯುವಕ

    ಹಣ ಕೊಡದಕ್ಕೆ ಟಿಕ್‍ಟಾಕ್ ಸ್ನೇಹಿತೆಯನ್ನು ಕೊಂದ ಯುವಕ

    – 25 ವರ್ಷದ ಯುವಕನಿಂದ 50 ವರ್ಷದ ಗೃಹಿಣಿ ಕೊಲೆ

    ಲಕ್ನೋ: ಕೇಳಿದಾಗ ಹಣ ಕೊಡಲಿಲ್ಲ ಎಂದು ಯುವಕನೋರ್ವ ತನ್ನ ಟಿಕ್‍ಟಾಕ್‍ನಲ್ಲಿ ಸ್ನೇಹಿತೆಯಾಗಿದ್ದ ಗೃಹಿಣಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

    29 ವರ್ಷದ ರಾಘವ್ ಕುಮಾರ್ ತನ್ನ ಟಿಕ್‍ಟಾಕ್ ಸ್ನೇಹಿತೆ 50 ವರ್ಷದ ನೀರ್ಜಾ ಚೌಹಾನ್ ಅವರನ್ನು ಆಕೆಯ ನಿವಾಸದಲ್ಲೇ ಕೊಲೆ ಮಾಡಿದ್ದಾನೆ. ಗೃಹಿಣಿಯಾಗಿರುವ ನೀರ್ಜಾ ಅವರು ಟಿಕ್‍ಟಾಕ್ ಮತ್ತು ಲೈಕಿ ಎಂಬ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿ ಇದ್ದರು. ಜೊತೆಗೆ ಹಲವಾರು ಜನ ಫಾಲೋವರ್ಸ್ ಗಳನ್ನು ಕೂಡ ಹೊಂದಿದ್ದರು.

    ರಾಘವ್ ಕೂಡ ಟಿಕ್‍ಟಾಕ್‍ನಲ್ಲಿ ನೀರ್ಜಾ ಅವರನ್ನು ಫಾಲೋ ಮಾಡಿ ಪರಿಚಯ ಮಾಡಿಕೊಂಡು, ಗೃಹಿಣಿಯ ಜೊತೆ ಸ್ನೇಹ ಬೆಳಸಿಕೊಂಡಿದ್ದ. ನೀರ್ಜಾ ಅವರ ಪತಿ ಬೇರೆ ರಾಜ್ಯದಲ್ಲಿ ಉದ್ಯೋಗಿ ಆಗಿದ್ದು, ನೀರ್ಜಾ ತನ್ನ ಮಗನ ಜೊತೆ ವಾಸವಿದ್ದರು. ಹೀಗೆ ಸ್ನೇಹಿತನಾಗಿದ್ದ ರಾಘವ್ ಒಂದು ದಿನ ನೀರ್ಜಾ ಅವರ ಮನೆಗೆ ಬಂದು ಹಣ ಕೇಳಿದ್ದಾನೆ. ಆದರೆ ಅವರು ಹಣ ಕೊಟ್ಟಿಲ್ಲ. ಈ ಕಾರಣಕ್ಕೆ ಅವರನ್ನು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ.

    ರಾಘವ್ ಬೆಳಗ್ಗೆ 11.30 ಸುಮಾರಿಗೆ ಆಕೆಯನ್ನು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ನಂತರ ನೀರ್ಜಾ ಅವರ ಮಗ ತಾಯಿ ಊಟ ಮಾಡಿದ್ದರಾ ಎಂದು ವಿಚಾರಿಸಲು ಫೋನ್ ಮಾಡಿದ್ದಾರೆ. ಆದರೆ ತಾಯಿ ಫೋನ್ ಕರೆ ಸ್ವೀಕರಿಸಿಲ್ಲ. ಇದರಿಂದ ಅನುಮಾನಗೊಂಡ ಮಗ ಸಂಜೆ 5 ಗಂಟೆಗೆ ಮನೆಗೆ ಬಂದು ಬಾಗಿಲನ್ನು ಬಡಿದಾಗ ಡೋರ್ ಓಪನ್ ಮಾಡಿಲ್ಲ. ಬಾಗಿಲು ಮುರಿದು ಒಳಗೆ ಹೊಗಿ ನೋಡಿದಾಗ ತಾಯಿ ಸಾವನ್ನಪ್ಪಿರುವ ಗೊತ್ತಾಗಿದೆ.

    ನೀರ್ಜಾ ಅವರ ಪುತ್ರ ತಕ್ಷಣ ಇದನ್ನು ಪೊಲೀಸರಿಗೆ ತಿಳಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು, ಹತ್ತಿರದಲ್ಲಿ ಇದ್ದ ಸಿಸಿಟಿವಿಯನ್ನು ಚೆಕ್ ಮಾಡಿದಾಗ ರಾಘವ್ ಮನೆಗೆ ಬಂದು ಹೋಗಿರುವುದು ತಿಳಿದುಬಂದಿದೆ. ಆಗ ಆತನನ್ನು ಅರೆಸ್ಟ್ ಮಾಡಿ ವಿಚಾರಣೆ ಮಾಡಿದಾಗ, ಆತನೇ ಕೊಲೆ ಮಾಡಿರುವುದು ದೃಢಪಟ್ಟಿದೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಆರೋಪಿ ರಾಘವ್ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

  • ಗೃಹಿಣಿ ಜೊತೆ ಫೋನಿನಲ್ಲಿ ಸರಸದ ಮಾತು- 2 ದಿನಗಳ ನಂತ್ರ ಕೆರೆಯಲ್ಲಿ ಶವ

    ಗೃಹಿಣಿ ಜೊತೆ ಫೋನಿನಲ್ಲಿ ಸರಸದ ಮಾತು- 2 ದಿನಗಳ ನಂತ್ರ ಕೆರೆಯಲ್ಲಿ ಶವ

    ಹಾವೇರಿ: ಮದುವೆಯಾಗಿರುವ ಮಹಿಳೆ ಜೊತೆ ಅಕ್ರಮವಾಗಿ ಫೋನಿನಲ್ಲಿ ಮಾತನಾಡುತ್ತಿದ್ದ ಯುವಕನನ್ನು ಕೊಲೆ ಮಾಡಿರುವ ಆರೋಪ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹುಣಸೀಕಟ್ಟಿ ಗ್ರಾಮದಲ್ಲಿ ಕೇಳಿ ಬಂದಿದೆ.

    ಗ್ರಾಮದ ಚನ್ನವ್ವ ಮತ್ತು ಶಿವಪ್ಪ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಅದರಲ್ಲಿ ಅಣ್ಣಪ್ಪ ಕಲ್ಲಾಪುರ ಹಿರಿಯ ಮಗ. ಹಿರಿಯ ಮಗ ಅಣ್ಣಪ್ಪ ಮನೆಗಳಿಗೆ ಟೈಲ್ಸ್ ಹಾಕುವ ಕೆಲಸ ಮಾಡಿಕೊಂಡಿದ್ದನು. ಮಾವನ ಬಳಿ ಕೆಲಸ ಮಾಡಿಕೊಂಡಿದ್ದ ಪ್ರಶಾಂತ್ ಕೆಲವು ವರ್ಷಗಳ ಕಾಲ ಕುಮಟಾದಲ್ಲಿ ಕೆಲಸ ಮಾಡಿ, ಎರಡು ವರ್ಷಗಳಿಂದ ಊರಲ್ಲಿದ್ದ. ಹೀಗಿದ್ದ ಅಣ್ಣಪ್ಪ ಫೆ. 21ರಂದು ರಾತ್ರಿ ಮನೆಯಿಂದ ಹೋಗಿದ್ದಾನೆ. ಹೋಗುವಾಗ ತಮ್ಮನಿಗೆ ತನ್ನ ಮೊಬೈಲ್ ಕೊಟ್ಟು ಸಿಮ್ ಕಾರ್ಡ್ ಮಾತ್ರ ತೆಗೆದುಕೊಂಡು ಹೋಗಿದ್ದನು.

    ಮನೆಯಿಂದ ಹೊರಹೋಗಿದ್ದ ಅಣ್ಣಪ್ಪ ಎರಡು ದಿನಗಳ ಕಾಲ ಮನೆಗೆ ವಾಪಸ್ ಆಗಿರಲಿಲ್ಲ. ಹೀಗಾಗಿ ಮನೆಯವರು ಗಾಬರಿಗೊಂಡಿದ್ದರು. ಆದರೆ ಎರಡು ದಿನಗಳ ನಂತರ ಗ್ರಾಮದ ಬಳಿ ಇರುವ ಬೆಳವತ್ತಿ ಕೆರೆಯಲ್ಲಿ ಅಣ್ಣಪ್ಪನ ಶವ ಪತ್ತೆಯಾಗಿದೆ. ಜಮೀನಿಗೆ ತೆರಳುವ ಕೆರೆಯ ಅಕ್ಕಪಕ್ಕದ ರೈತರೊಬ್ಬರು ಶವ ನೋಡಿ ಊರಲ್ಲಿ ಹೇಳಿದ್ದಾರೆ. ಆಗ ಅಣ್ಣಪ್ಪನ ಮನೆಯವರು ಕೆರೆಯ ಬಳಿ ಧಾವಿಸಿ ಮೃತದೇಹವನ್ನು ನೋಡಿದ್ದಾರೆ. ಅದು ಅಣ್ಣಪ್ಪನದ್ದೇ ಎನ್ನುವುದು ಗೊತ್ತಾಗಿದೆ. ಆದರೆ ಅಣ್ಣಪ್ಪನ ಕೈಕಾಲು ಕಟ್ಟಿಹಾಕಿ ಯಾರೋ ಹೊಡೆದು ಹತ್ಯೆ ಮಾಡಿ ಕೆರೆಗೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಂತ ಅಣ್ಣಪ್ಪನ ಸಹೋದರ ಹಾನಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

    ಹತ್ಯೆಯಾಗಿರುವ ಅಣ್ಣಪ್ಪ ಅದೇ ಗ್ರಾಮದ ಯುವತಿಯೊಬ್ಬಳ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದನು ಎನ್ನಲಾಗಿದೆ. ಯುವತಿ ಮನೆಯವರು ಒಂದು ಬಾರಿ ಕರೆದು ಅಣ್ಣಪ್ಪನ ಜೊತೆ ಮಾತನಾಡಿ ರಾಜಿ ಪಂಚಾಯ್ತಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಇದೆಲ್ಲವೂ ಆತನ ತಾಯಿಗೆ ಗೊತ್ತಿರಲಿಲ್ಲ ಎಂದು ಹೇಳಲಾಗುತ್ತಿದೆ. ಕೆಲವೇ ಕೆಲವು ದಿನಗಳ ಹಿಂದಷ್ಟೇ ಅಣ್ಣಪ್ಪ ಫೋನಿನಲ್ಲಿ ಮಾತನಾಡ್ತಿದ್ದ ಯುವತಿಗೆ ಬೇರೊಬ್ಬ ಯುವಕನ ಜೊತೆ ಮದುವೆ ಮಾಡಿಕೊಡಲಾಗಿತ್ತು. ಆದ್ರೂ ಅಣ್ಣಪ್ಪ ಮತ್ತು ಯುವತಿ ನಡುವಿನ ಫೋನ್ ಸಂಭಾಷಣೆ ಮಾತ್ರ ನಿಲ್ಲಿಸಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಯುವತಿ ಕಡೆಯವರೆ ಅಣ್ಣಪ್ಪನನ್ನ ಹತ್ಯೆ ಮಾಡಿ ಕೈ-ಕಾಲು ಕಟ್ಟಿ ಹಾಕಿ ಕೆರೆಗೆ ಎಸೆದು ಹೋಗಿದ್ದಾರೆ ಎಂದು ಅಣ್ಣಪ್ಪನ ಮನೆಯವರು ಆರೋಪಿಸುತ್ತಿದ್ದಾರೆ.

    ಅಣ್ಣಪ್ಪನನ್ನು ಯಾರೋ ದುಷ್ಕರ್ಮಿಗಳು ಹತ್ಯೆ ಮಾಡಿ ಕೈ-ಕಾಲು ಕಟ್ಟಿ ಹಾಕಿ ಕೆರೆಗೆ ಎಸೆದು ಹೋಗಿದ್ದಾರೆ ಎಂದು ಅಣ್ಣಪ್ಪನ ಮನೆಯವರು ಹಾನಗಲ್ ಪೊಲೀಸ್ ಠಾಣೆಯಲ್ಲಿ ಮೃತದೇಹ ಪತ್ತೆಯಾದ ದಿನ ಎಂದರೆ ಫೆ. 23ರಂದು ಪ್ರಕರಣ ದಾಖಲಿಸಿದ್ದಾರೆ. ಆದರೆ ಪ್ರಕರಣ ದಾಖಲಾಗಿ ಆರು ದಿನಗಳು ಕಳೆದ್ರೂ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿಲ್ಲ. ಇವರೆಗೂ ಆರೋಪಿಗಳನ್ನು ಪತ್ತೆ ಮಾಡಿಲ್ಲ. ಆದರೆ ಈ ಬಗ್ಗೆ ಪೊಲೀಸ್ ಅಧಿಕಾರಿಗಳನ್ನ ಕೇಳಿದ್ರೆ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎನ್ನಲಾಗಿದೆ.

  • ‘ಮಮ್ಮಿ ಸ್ವಾರಿ’ – ಡೆತ್‍ನೋಟ್ ಬರೆದಿಟ್ಟು ನವವಿವಾಹಿತೆ ಆತ್ಮಹತ್ಯೆ

    ‘ಮಮ್ಮಿ ಸ್ವಾರಿ’ – ಡೆತ್‍ನೋಟ್ ಬರೆದಿಟ್ಟು ನವವಿವಾಹಿತೆ ಆತ್ಮಹತ್ಯೆ

    ಬೆಂಗಳೂರು: ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವ ವಿವಾಹಿತೆಯೊಬ್ಬರು ಅನುಮಾನಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ರಾಜಗೋಪಾಲನಗರದ ಲಗ್ಗೆರೆಯಲ್ಲಿ ನಡೆದಿದೆ.

    ಗೃಹಣಿ ಭಾರತಿ ನೇಣಿಗೆ ಶರಣಾದ ಮಹಿಳೆ. ಕಳೆದ ಮೂರು ತಿಂಗಳ ಹಿಂದೆ ಭಾರತಿಗೆ ಸತೀಶ್ ಜೊತೆ ಮದುವೆ ಆಗಿತ್ತು. ಇಂದು ಮಧ್ಯಾಹ್ನ ಮೂರು ಗಂಟೆ ಸಮಯದಲ್ಲಿ ಮನೆಯಲ್ಲಿದ್ದ ಭಾರತಿ ಡೆತ್‍ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ.

    ಡೆತ್ ನೋಟ್‍ನಲ್ಲಿ ಮಮ್ಮಿ ಕ್ಷಮಿಸಿ ವಿಪರೀತ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಸಾಕಷ್ಟು ಬಾರಿ ಚಿಕಿತ್ಸೆ ಪಡೆದಿದ್ದೇನೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಆ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಯಾರು ಕಾರಣರಲ್ಲ. ಸತೀಶ್ ನನಗೆ ನಿಮ್ಮ ಜೊತೆ ಬಾಳುವ ಯೋಗ ಮತ್ತು ಯೋಗ್ಯತೆ ಇಲ್ಲ. ದಯವಿಟ್ಟು ಕ್ಷಮಿಸು ಎಂದು ಡೆತ್‍ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಆದರೆ ಭಾರತಿ ಪೋಷಕರು ಇದು ಆತ್ಮಹತ್ಯೆ ಅಲ್ಲ ಬದಲಾಗಿ ಗಂಡ ಸತೀಶನೇ ಕೊಲೆ ಮಾಡಿ ತಾನೇ ಡೆತ್ ನೋಟ್ ಬರೆದಿಟ್ಟಿದ್ದಾನೆ ಎಂದು ಆರೋಪಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ರಾಜಗೋಪಾಲ ನಗರ ಪೊಲೀಸರು, ಪತಿ ಸತೀಶ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

  • ಗೃಹಿಣಿ ಅನುಮಾನಾಸ್ಪದ ಸಾವು – ವರದಕ್ಷಿಣೆ ಕಿರುಕುಳ ಆರೋಪ

    ಗೃಹಿಣಿ ಅನುಮಾನಾಸ್ಪದ ಸಾವು – ವರದಕ್ಷಿಣೆ ಕಿರುಕುಳ ಆರೋಪ

    ತುಮಕೂರು: ಜಿಲ್ಲೆಯ ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಜನತಾ ಕಾಲೋನಿಯಲ್ಲಿ ಸುಮಲತಾ ಎಂಬ ಗೃಹಿಣಿ ನೇಣಿಗೆ ಶರಣಾಗಿದ್ದಾರೆ. ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

    ಸುಮಲತಾ ಹಾಗೂ ಶಿವಕುಮಾರ್ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ಮೂಲತಃ ಆಂಧ್ರದ ಪೆನುಗೊಂಡದವರಾದ ಸುಮಲತಾ, ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಜನತಾ ಕಾಲೋನಿಯ ನಿವಾಸಿ ಶಿವಕುಮಾರ್ ಎಂಬಾತನನ್ನು ಮದುವೆಯಾಗಿದ್ದರು. ಮದುವೆಯಾಗಿ ಕೆಲ ತಿಂಗಳ ಕಾಲ ಸುಖವಾಗಿ ಸಂಸಾರ ಮಾಡಿದ್ದ ಜೋಡಿಗಳ ಮಧ್ಯೆ ಇದ್ದಕ್ಕಿದ್ದಂತೆ ಜಗಳ ಶುರುವಾಗಿದೆ. ಪಾಪಿ ಪತಿ ಶಿವಕುಮಾರ್ ಪ್ರತಿನಿತ್ಯ ವರದಕ್ಷಿಣೆ ಕಿರುಕುಳ ನೀಡುತ್ತಿದ್ದು, ಇದಕ್ಕೆ ಅವನ ತಾಯಿ ಸರೋಜಮ್ಮ ಸಾಥ್ ನೀಡಿದ್ದರಂತೆ. ಬೆಂಗಳೂರಿನಲ್ಲಿ ಮನೆ ಲೀಸ್‍ಗೆ ಹಾಕಿಸಿಕೊಡು, ಹಣ ತೆಗೆದುಕೊಂಡು ಬಾ ಅಂತಾ ಪೀಡಿಸುತ್ತಿದ್ದರು ಎನ್ನಲಾಗಿದೆ.

    ಆದರೂ ಸುಮಲತಾ ತಮ್ಮ ಮನೆಯಲ್ಲಿ ತಿಳಿಸದೇ ಬಾಳುತ್ತಿದ್ದರು. ಯಾಕೆಂದರೆ ಸುಮಲತಾ ಮನೆಯಲ್ಲಿ ನಾಲ್ಕು ಜನ ಹೆಣ್ಣು ಮಕ್ಕಳು, ಕಿತ್ತು ತಿನ್ನುವ ಬಡತನ ತಾನು ವಾಪಸ್ ಮನೆಗೆ ಹೋದರೆ ತಂಗಿಯರಿಗೆ ಮದುವೆಯಾಗಲ್ಲ ಎಂಬ ಭಯದಿಂದ ಸುಮ್ಮನಿದ್ದರು. ಜೊತೆಗೆ ಕಳೆದ ಒಂದು ತಿಂಗಳಿನಿಂದ ತವರು ಮನೆಗೆ ಹೋಗುವ ವಿಚಾರವಾಗಿ ಜಗಳವಾಡಿ ಪತಿ ಶಿವಕುಮಾರ್ ಆಕೆಯನ್ನು ಮನೆಯಿಂದ ಆಚೆ ಹಾಕಿದ್ದನಂತೆ. ನಂತರ ಪೊಲೀಸ್ ಠಾಣೆಗೆ ಹೋಗಿ ರಾಜೀ ಸಂಧಾನ ಕೂಡ ಆಗಿ ಬಳಿಕ ಜಗಳ ಮಾಡಲ್ಲ ಎಂದು ಮುಚ್ಚಳಿಕೆ ಪತ್ರ ಬರೆದುಕೊಟ್ಟು ಬಂದಿದ್ದಾರೆ.

    ಆದರೆ ತಡರಾತ್ರಿ ಪತಿ ಶಿವಕುಮಾರ್ ಸುಮಲತಾಳನ್ನ ಉಸಿರುಗಟ್ಟಿಸಿ ಕೊಲೆ ಮಾಡಿ ನೇಣಿಗೆ ಹಾಕಿದ್ದಾನೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನೆ ಬಳಿಕ ಶಿವಕುಮಾರ್ ತಡರಾತ್ರಿಯೇ ಪೊಲೀಸರಿಗೆ ಶರಣಾಗಿದ್ದು, ಕೊರಟಗೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಇದು ಕೊಲೆಯೋ, ಆತ್ಮಹತ್ಯೆಯೋ ಅನ್ನೋ ಸತ್ಯ ಬಹಿರಂಗವಾಗಲಿದೆ.

  • ನೇಣು ಬಿಗಿದ ಸ್ಥಿತಿಯಲ್ಲಿ ಗೃಹಣಿ ಸಾವು – ಮಹಿಳೆಯ ಕುಟುಂಬಸ್ಥರಿಂದ ಕಿರುಕುಳದ ಆರೋಪ

    ನೇಣು ಬಿಗಿದ ಸ್ಥಿತಿಯಲ್ಲಿ ಗೃಹಣಿ ಸಾವು – ಮಹಿಳೆಯ ಕುಟುಂಬಸ್ಥರಿಂದ ಕಿರುಕುಳದ ಆರೋಪ

    ಬೆಂಗಳೂರು: ಪತಿಯ ಮನೆಯವರ ಕಿರುಕುಳಕ್ಕೆ ಬೇಸತ್ತು ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹೂಡಿಯಲ್ಲಿ ನಡೆದಿದೆ.

    ಶಿಲ್ಪಾ(27) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಮಹಿಳೆ. ಮೃತ ಶಿಲ್ಪಾ ಹೊಸಕೋಟೆಯ ಹಿಂಡಿಗನಾಳ ಗ್ರಾಮದ ರಾಮಪ್ಪ ಹಾಗು ದೇವಮ್ಮ ದಂಪತಿ ಮಗಳು. ಕಳೆದ ಒಂದು ವರ್ಷದ ಹಿಂದೆ ನಾಗೇಶ್ ಎಂಬವರ ಜೊತೆ ಶಿಲ್ಪಾಳ ವಿವಾಹವಾಗಿತ್ತು.

    ಗುರುವಾರ ಹೂಡಿಯಲ್ಲಿನ ಪತಿಯ ಮನೆಯಲ್ಲಿ ಯಾರು ಇಲ್ಲದ ವೇಳೆ ರೂಮ್‍ನಲ್ಲಿ ನೇಣು ಬೀಗಿದ ಸ್ಥಿತಿಯಲ್ಲಿ ಮಹಿಳೆಯ ಮೃತ ದೇಹ ಪತ್ತೆಯಾಗಿದೆ. ಮಗಳ ಸಾವಿಗೆ ಪೋಷಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

    ಈ ಪ್ರಕರಣ ಸಂಬಂಧ ಮಹದೇವಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಅಲ್ಲದೆ ಈ ಬಗ್ಗೆ ದೂರನ್ನು ದಾಖಲಿಸಿಕೊಂಡಿದ್ದಾರೆ. ಮದುವೆಯಾದ ಎರಡ್ಮೂರು ಮೂರು ತಿಂಗಳು ಚೆನ್ನಾಗಿ ನೋಡಿಕೊಳ್ಳುತ್ತಿದ್ದ ಪತಿಯ ಮನೆಯವರು ನಂತರದ ದಿನಗಳಲ್ಲಿ ಪದೇ ಪದೇ ಜಗಳ ಮಾಡುತ್ತಿದ್ದರು.

    ಆಗ ಎರಡು ಕುಟುಂಬದ ಹಿರಿಯರನ್ನು ಕರೆಸಿ ಬುದ್ಧಿವಾದ ಹೇಳಿಸಿದರೂ ಸರಿ ಹೋಗದ ಪತಿ ಹಾಗೂ ಆತನ ಮನೆಯವರು ಕಿರುಕುಳ ನೀಡಿ ನೇಣು ಹಾಕಿ ಸಾಯಿಸಿದ್ದಾರೆ ಎಂದು ಶಿಲ್ಪಾಳ ಪೋಷಕರು ಆರೋಪಿಸಿದ್ದಾರೆ. ಅಲ್ಲದೆ ನಮಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಒತ್ತಾಯಿಸಿದ್ದಾರೆ.

  • ರಕ್ತದ ಮಡುವಿನಲ್ಲಿ ಗೃಹಿಣಿ ಶವವಾಗಿ ಪತ್ತೆ

    ರಕ್ತದ ಮಡುವಿನಲ್ಲಿ ಗೃಹಿಣಿ ಶವವಾಗಿ ಪತ್ತೆ

    ಹೈದರಾಬಾದ್: ಗೃಹಿಣಿಯೊಬ್ಬಳು ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾದ ಘಟನೆ ಶುಕ್ರವಾರ ಆಂಧ್ರ ಪ್ರದೇಶದ ಅಜಾದ್‍ನಗರದಲ್ಲಿ ನಡೆದಿದೆ.

    ನೌಶಿದಾ ಬೇಗಂ ಶವವಾಗಿ ಪತ್ತೆಯಾದ ಗೃಹಿಣಿ. ನೌಶಿದಾ 2013ರಲ್ಲಿ ಪೇದೆ ಅಬ್ದುಲ್ ರಶೀದ್‍ನನ್ನು ಮದುವೆ ಆಗಿದ್ದಳು. ಈ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಅಬ್ದುಲ್ ಈಗ ತೆಲಂಗಾಣ ರಾಜ್ಯ ವಿಧಾನಸಭೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ರಶೀದ್ ನನ್ನು 2010ರಲ್ಲಿ ಎಸ್‍ಪಿಎಫ್ ಪೇದೆಯಾಗಿ ನೇಮಕ ಮಾಡಲಾಗಿತ್ತು.

    ಮನೆ ಮಾಲೀಕ ಸಲೀಂ ನೌಶಿದಾ ಬೇಗಂ ಮೃತದೇಹವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ನೌಶಿದಾ ರಕ್ತದ ಮಡುವಿನಲ್ಲಿ ಮೃತಪಟ್ಟಿದ್ದಳು. ನೌಶಿರಾ ಸಾವಿಗೆ ಆಕೆಯ ಪತಿ ಅಬ್ದುಲ್ ರಶೀದ್‍ಯೇ ಕಾರಣ ಎಂದು ಶಂಕಿಸಲಾಗಿದೆ.

    ಪ್ರಾಥಮಿಕ ತನಿಖೆ ಪ್ರಕಾರ, ರಶೀದ್ ತನ್ನ ಪತ್ನಿ ನೌಶಿದಾಳನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಏಕೆಂದರೆ ರಶೀದ್ ತನ್ನ ಪತ್ನಿ ನೌಶಿದಾ ಶೀಲ ಶಂಕಿಸಿ ಪ್ರತಿನಿತ್ಯ ಜಗಳವಾಡುತ್ತಿದ್ದನು ಎಂದು ತಿಳಿದು ಬಂದಿದೆ.

    ಪೊಲೀಸರು ನೌಶಿರಾ ಮೃತದೇಹವನ್ನು ಗಾಂಧಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲದೆ ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.