Tag: housewarming

  • ನೂತನ ಮನೆಯ ಗೃಹಪ್ರವೇಶ ಮಾಡಿದ ರಾಕಿಂಗ್ ಸ್ಟಾರ್ ಯಶ್

    ನೂತನ ಮನೆಯ ಗೃಹಪ್ರವೇಶ ಮಾಡಿದ ರಾಕಿಂಗ್ ಸ್ಟಾರ್ ಯಶ್

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರು ಇಂದು ಹೊಸ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

    ಹೌದು. ಇಂದು ಯಶ್ ಅವರು ತಮ್ಮ ನೂತನ ಮನೆಯ ಗೃಹಪ್ರವೇಶವನ್ನು ಅತ್ಯಂತ ಸಿಂಪಲ್ ಆಗಿ ಮಾಡಿದ್ದಾರೆ. ಈ ಮೂಲಕ ಇಂದು ಹೊಸ ಮನೆಗೆ ಅವರ ಕುಟುಂಬ ಕಾಲಿಟ್ಟಿದೆ.

    ಯಶ್ ಅವರ ನೂತನ ನಿವಾಸ ಪ್ರೆಸ್ಟಿಜ್ ಗಾಲ್ಫ್ ಅಪಾರ್ಟ್ ಮೆಂಟ್ ನಲ್ಲಿದ್ದು, ಕಳೆದ ಎರಡು ವರ್ಷಗಳ ಹಿಂದೆ ಯಶ್ ಸಿಲಿಕಾನ್ ಸಿಟಿಯಲ್ಲಿ ಹೊಸ ಮನೆ ಖರೀದಿ ಮಾಡಿದ್ದರು. ಇಷ್ಟು ದಿನ ಮನೆಯ ವಿನ್ಯಾಸ ಕೆಲಸ ನಡೆಯುತ್ತಿತ್ತು.

    ಇದೀಗ ಇಂದು ಸಿಂಪಲ್ ಆಗಿ ರಾಕಿಭಾಯ್ ಕುಟುಂಬ ಮುಹೂರ್ತ ನಿಗದಿ ಮಾಡಿ ಮನೆಯೊಳಗೆ ಕಾಲಿಟ್ಟಿದೆ.

  • ಧ್ವಜಾರೋಹಣ ಮಾಡಿ ಹೊಸ ಮನೆಗೆ ಎಂಟ್ರಿ ಕೊಟ್ಟ ಹುಬ್ಬಳ್ಳಿ ದಂಪತಿ!

    ಧ್ವಜಾರೋಹಣ ಮಾಡಿ ಹೊಸ ಮನೆಗೆ ಎಂಟ್ರಿ ಕೊಟ್ಟ ಹುಬ್ಬಳ್ಳಿ ದಂಪತಿ!

    ಹುಬ್ಬಳ್ಳಿ: ಇಲ್ಲಿನ ದಂಪತಿ ತಾವು ದುಡಿದು ಕಟ್ಟಿದ ಮನೆಯ ಗೃಹಪ್ರವೇಶವನ್ನು ಧ್ವಜಾರೋಹಣ ಮಾಡೋ ಮೂಲಕ ದೇಶಪ್ರೇಮ ಮೆರೆದಿದ್ದಾರೆ.

    ಸಾಯಿನಗರದ ಮಲ್ಲಪ್ಪ ತಡಸದ್ ದಂಪತಿ ಸ್ವಾತಂತ್ರ್ಯ ದಿನಾಚರಣೆಯಂದೇ ಗೃಹ ಪ್ರವೇಶ ಮಾಡಿದ್ರು. ಕುಂಬಳಕಾಯಿ, ಹೋಮ-ಹವನ ಅಂತ ಮೌಢ್ಯಕ್ಕೆ ದಾಸರಾಗದೇ ದೇಶಪ್ರೇಮ ತೋರಿದ್ದಾರೆ. ಸರಳವಾಗಿ, ಸುಂದರವಾಗಿ ಮನೆಕಟ್ಟಿದ್ದಲ್ಲದೇ ಅಷ್ಟೇ ಸರಳತೆಯಿಂದಲೇ ಹೊಸ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

    ಸ್ವಾತಂತ್ರ್ಯಕ್ಕಾಗಿ ತ್ಯಾಗ-ಬಲಿದಾನ ಮಾಡಿದ ಮಹಾಪುರುಷರನ್ನ ನೆನೆಯಬೇಕಿದೆ. ಅಷ್ಟೇ ಅಲ್ಲ, ಇದು ಮುಂದಿನ ಪೀಳಿಗೆ ಮಹಾನ್ ಪುರುಷರ ಜೀವನಗಾಥೆ ಅರಿಯುವಂತಾಗಲಿ ಅನ್ನೋ ಆಶಯವನ್ನು ದಂಪತಿ ಹೊಂದಿದ್ದಾರೆ. ಮಂತ್ರ-ತಂತ್ರ ಹೋಮ ಹವನದ ಬದಲಾಗಿ ಧ್ವಜಾರೋಹಣದ ಬಳಿಕ ರಾಷ್ಟ್ರಗೀತೆ ಹಾಡಿರೋದೇ ಈ ಮನೆಗೆ ಮಂಗಳಕರ ಅಂತ ನಂಬಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv