Tag: Housefull 5

  • ಜಾಲಿ ಎಲ್‌ಎಲ್‌ಬಿ-3: ಸೀಕ್ರೆಟ್ ಬಿಚ್ಚಿಟ್ಟ ಅಕ್ಷಯ್

    ಜಾಲಿ ಎಲ್‌ಎಲ್‌ಬಿ-3: ಸೀಕ್ರೆಟ್ ಬಿಚ್ಚಿಟ್ಟ ಅಕ್ಷಯ್

    ಕ್ಷಯ್‌ಕುಮಾರ್ ಮುಖ್ಯಪಾತ್ರದಲ್ಲಿ ನಟಿಸಿರುವ ಜಾಲಿ ಎಲ್‌ಎಲ್‌ಬಿ-3 (Jolly LLB-3) ಸಿನಿಮಾ ಇದೇ ಸೆಪ್ಟಂಬರ್‌ನಲ್ಲಿ ತೆರೆ ಕಾಣಲು ತಯಾರಿಯನ್ನ ನಡೆಸಿದೆ. ಸದ್ಯ ಅಕ್ಷಯ್‌ಕುಮಾರ್ ಕಣ್ಣಪ್ಪ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಹೌಸ್‌ಫುಲ್-5 (Housefull 5) ಸಿನಿಮಾದ ಸಕ್ಸಸ್‌ನ ಹ್ಯಾಂಗೋವರ್‌ನಲ್ಲಿ ತೇಲಾಡುತ್ತಿರುವ ಅಕ್ಷಯ್‌ ಕುಮಾರ್ (Akshay Kumar) ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಮುಂದಿನ ಸಿನಿಮಾ ಜಾಲಿ ಎಲ್‌ಎಲ್‌ಬಿ-3 ಬಗ್ಗೆ ಮಾತ್ನಾಡಿದ್ಧಾರೆ.

    ಅಕ್ಷಯ್‌ಕುಮಾರ್ ಅಭಿನಯದ ಸ್ಕೈ ಫೋರ್ಸ್‌, ಕೇಸರಿ-2 ಹಾಗೂ ಹೌಸ್‌ಫುಲ್-5 ಸಿನಿಮಾಗಳು ಈ ವರ್ಷ ತೆರೆಕಂಡು ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿವೆ. ಕಣ್ಣಪ್ಪ ಸಿನಿಮಾದಲ್ಲಿ ಅಕ್ಷಯ್‌ ಕುಮಾರ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಸಂದರ್ಶನದ ವೇಳೆ ಜಾಲಿ ಎಲ್‌ಎಲ್‌ಬಿ ಪಾರ್ಟ್-3 ಬಗೆಗಿನ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ಜಾಲಿ ಎಲ್‌ಎಲ್‌ಬಿ ಪಾರ್ಟ್-1, ಪಾರ್ಟ್-2 ಸಿನಿಮಾಗಳಂತೆ ಪಾರ್ಟ್-3 ಕೂಡಾ ನೈಜ ಘಟನೆಯಾಧಾರಿತ ಸಿನಿಮಾ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಚಿತಾ ರಾಮ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ : ನಿರ್ದೇಶಕ ನಾಗಶೇಖರ್ ಒತ್ತಾಯ

    ಜೊತೆಗೆ ಜಾಲಿ ಎಲ್‌ಎಲ್‌ಬಿ-1, ಪಾರ್ಟ್-2 ಸಿನಿಮಾದಲ್ಲಿ ಅರ್ಷದ್ ವಾರ್ಸಿ ಜೊತೆಗೆ ಕೆಲಸ ಮಾಡಿರುವ ಬಗ್ಗೆ ಮಾತಾಡಿದ್ದಾರೆ. ಇದೀಗ ಪಾರ್ಟ್-3 ಸಿನಿಮಾದಲ್ಲೂ ಅರ್ಷದ್ ಜೊತೆ ಕೆಲಸ ಮಾಡಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅಂದಹಾಗೆ ಈ ಪಾರ್ಟ್-3 ಸಿನಿಮಾದಲ್ಲಿ ಅಕ್ಷಯ್‌ಕುಮಾರ್ ಜೊತೆ ಅರ್ಷದ್ ವಾರ್ಸಿ, ಅಮೃತಾ ರಾವ್, ಹುಮಾ ಖುರೇಶಿ, ಸೌರಭ್ ಶುಕ್ಲಾ, ಅನ್ನು ಕಪೂರ್ ಸೇರಿದಂತೆ ಅತೀ ದೊಡ ತಾರಾಗಣ ಈ ಚಿತ್ರದಲ್ಲಿರಲಿದೆ. ಇದನ್ನೂ ಓದಿ: ಇಷ್ಟ ಇಲ್ಲದಿದ್ರೆ ಸಿನಿಮಾ ನೋಡಬೇಡಿ: ಕರ್ನಾಟಕದಲ್ಲಿ ‘ಥಗ್‌ ಲೈಫ್‌’ ಸಿನಿಮಾ ರಿಲೀಸ್‌ಗೆ ಸುಪ್ರೀಂ ಸೂಚನೆ

    ಹೌಸ್‌ಫುಲ್-5 200 ಕೋಟಿ ರೂ. ಕ್ಲಬ್ ಸೇರಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದರ ಬೆನ್ನಲ್ಲೇ ಕಣ್ಣಪ್ಪ ಸಿನಿಮಾ ತೆರೆಗೆ ಸಿದ್ದವಾಗುತ್ತಿದೆ. ಇನ್ನೆರಡು ತಿಂಗಳು ಕಳೆದರೆ ಜಾಲಿ ಎಲ್‌ಎಲ್‌ಬಿ-3 ಸಿನಿಮಾ ಕೂಡಾ ತೆರೆಗೆ ಬರಲಿದೆ. ಈ ವರ್ಷದಲ್ಲಿ ಅಕ್ಷಯ್‌ಕುಮಾರ್ ನಟನೆಯ ಚಿತ್ರಗಳು ಬ್ಯಾಕ್ ಟು ಬ್ಯಾಕ್ ಥಿಯೇಟರ್‌ಗೆ ಎಂಟ್ರಿಕೊಡುತ್ತಿವೆ.

  • ಕುಂಟುತ್ತಲೇ 100 ಕೋಟಿ ಕ್ಲಬ್‌ ಸೇರಿದ ಹೌಸ್‌ಫುಲ್-5; 8ನೇ ದಿನ ಕೇವಲ 6 ಕೋಟಿ ಕಲೆಕ್ಷನ್‌

    ಕುಂಟುತ್ತಲೇ 100 ಕೋಟಿ ಕ್ಲಬ್‌ ಸೇರಿದ ಹೌಸ್‌ಫುಲ್-5; 8ನೇ ದಿನ ಕೇವಲ 6 ಕೋಟಿ ಕಲೆಕ್ಷನ್‌

    ಅಕ್ಷಯ್ ಕುಮಾರ್ (Akshay Kumar), ಅಭಿಷೇಕ್ ಬಚ್ಚನ್, ರಿತೇಶ್ ದೇಶಮುಖ್, ಜಾಕ್ವೆಲಿನ್ ಫರ್ನಾಂಡಿಸ್ ಸೇರಿದಂತೆ ಬಾಲಿವುಡ್‌ ಹಲವು ತಾರೆಯರನ್ನೊಳಗೊಂಡ ʻಹೌಸ್‌ಫುಲ್‌-5ʼ (Housefull 5) ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೇ ಜೂನ್‌ 6ರಂದು ತೆರೆ ಕಂಡ ಈ ಚಿತ್ರ 8 ದಿನಗಳಲ್ಲೇ ನೂರು ಕೋಟಿಯ ಕ್ಲಬ್‌ ಸೇರಿದೆ.

    ಅಕ್ಷಯ್ ಕುಮಾರ್, ಅಭಿಷೇಕ್ ಬಚ್ಚನ್, ರಿತೇಶ್ ದೇಶಮುಖ್ (Riteish Deshmukh) ಮುಖ್ಯಪಾತ್ರದಲ್ಲಿ ನಟಿಸಿರುವ ಈ ಚಿತ್ರ ಜೂನ್‌ 6ರಂದು ತೆರೆ ಕಂಡಿತ್ತು. ಮೊದಲ ದಿನವೇ 24 ಕೋಟಿ ಗಳಿಕೆಯೊಂದಿಗೆ ಕುಂಟುತ್ತಾ ಸಾಗಿರುವ ʻಹೌಸ್‌ಫುಲ್‌ 5ʼ ಚಿತ್ರ ಕೊನೆಗೂ ನೂರು ಕೋಟಿ ಕ್ಲಬ್‌ ಸೇರಿದೆ. 8ನೇ ದಿನ 6 ಕೋಟಿ ಗಳಿಕೆಯೊಂದಿಗೆ ವಿಶ್ವಾದ್ಯಂತ ಒಟ್ಟು 200 ಕೋಟಿ ರೂ. ಗಳಿಸಿದೆ.

    8ನೇ ದಿನದ ಗಳಿಕೆಯಲ್ಲಿ ಭಾರೀ ಕುಸಿತ
    ಈ ಹಿಂದೆ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡುತ್ತಾ ಆಕಾಶಕ್ಕೆ ಏಣಿ ಹಾಕಿ ಕುಂತಿದ್ದರು ಅಕ್ಷಯ್ ಕುಮಾರ್. ಆದ್ರೆ.. ಹಣೆಬರಹಕ್ಕೆ ಹೊಣೆ ಯಾರು? ಅನ್ನುವಂತೆ ಕೆಲ ವರ್ಷಗಳಿಂದ ಅದೃಷ್ಟ ಕೈ ಕೊಟ್ಟಿದೆ. ಹೆಚ್ಚಾಗಿ ಕಾಮಿಡಿ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿದ್ದು ಒಂದಾದ ಮೇಲೊಂದು ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಸೋಲನ್ನು ಕಂಡಿವೆ. ಎಷ್ಟೇ ಕಷ್ಟಪಟ್ಟು ಚಿತ್ರ ಮಾಡಿದ್ರೂ ಪ್ರೇಕ್ಷಕರು ಕ್ಯಾರೇ ಎನ್ನುತ್ತಿಲ್ಲ.

    ಹೀಗಾಗಿಯೇ ಹಿಂದೆಯೆಲ್ಲ ಇವರನ್ನು ಲಕ್ಕಿ ಕುಮಾರ್ ಎಂದು ಕರೆಯುತ್ತಿದ್ದ ಬಾಲಿವುಡ್‌ ಈಗ ಇವರನ್ನು ಅನ್‌ಲಕ್ಕಿ ಕುಮಾರ್ ಎಂದು ಕರೆಯುತ್ತಿದೆ. ಆದ್ರೆ ಭಾರೀ ನಿರೀಕ್ಷೆ ಮೂಡಿಸಿದ್ದ ಹೌಸ್‌ಫುಲ್ ಚಿತ್ರದ ಕಲೆಕ್ಷನ್‌ ಕೂಡ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಮೊದಲ ವಾರದಲ್ಲಿ 127.25 ಕೋಟಿ ಗಳಿಸಿದ್ದ ʻಹೌಸ್‌ಫುಲ್‌ 5ʼ 2ನೇ ವಾರದ ಮೊದಲ ಕೇವಲ 6.07 ಕೋಟಿ ರೂ. ಗಳಿಸಿ ಭಾರೀ ನಿರಾಸೆ ಮೂಡಿಸಿದೆ. ಇದರೊಂದಿಗೆ ಚಿತ್ರದ ಒಟ್ಟು ಗಳಿಗೆ 133.32 ಕೋಟಿಗೆ ತಲುಪಿದೆ.

    ʻಹೌಸ್‌ಫುಲ್‌ 5ʼ ಯಾವ ದಿನ ಎಷ್ಟು ಕಲೆಕ್ಷನ್‌?
    – ಮೊದಲ ದಿನ – 24 ಕೋಟಿ ರೂ.
    – ಎರಡನೇ ದಿನ – 31 ಕೋಟಿ ರೂ.
    – ಮೂರನೇ ದಿನ – 32.5 ಕೋಟಿ ರೂ.
    – ನಾಲ್ಕನೇ ದಿನ – 13 ಕೋಟಿ ರೂ.
    – ಐದನೇ ದಿನ – 11.25 ಕೋಟಿ ರೂ.
    – ಆರನೇ ದಿನ – 8.5 ಕೋಟಿ ರೂ.
    – ಏಳನೇ ದಿನ – 7 ಕೋಟಿ ರೂ.
    – ಎಂಟನೇ ದಿನ – 6 ಕೋಟಿ ರೂ.
    ಒಟ್ಟು – 133.25 ಕೋಟಿ

    ಈ ಹಿಂದಿನ ಹೌಸ್‌ಫುಲ್ 4 ಸಿರೀಸ್‌ಗಳನ್ನು ನೋಡಿ ಪ್ರೇಕ್ಷಕರು ಭೇಷ್ ಎಂದಿದ್ದರು. ಆದರೀಗ ಕುಂಟುತ್ತಾ ಸಾಗಿರುವ 5ನೇ ಸರಣಿ 2ನೇ ವಾರದಲ್ಲಾದರೂ ಹಿಟ್‌ ಆಗುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.

  • ‘ಹೌಸ್‌ಫುಲ್-5’ ಸಿನಿಮಾಗೆ ಐದು ಜನ ನಾಯಕಿಯರು

    ‘ಹೌಸ್‌ಫುಲ್-5’ ಸಿನಿಮಾಗೆ ಐದು ಜನ ನಾಯಕಿಯರು

    ಬಾಲಿವುಡ್‌ನಲ್ಲಿ ಹೌಸ್‌ಫುಲ್ ಸಿರೀಸ್ ಕಾಮಿಡಿ ಹಾಗೂ ಫ್ಯಾಮಿಲಿ ಎಂಟರ್‌ಟೈನ್ ಮೂಲಕವೇ ಧೂಳೆಬ್ಬಿಸಿವೆ. ಈಗಾಗಲೇ ನಾಲ್ಕು ಪಾರ್ಟ್ನಲ್ಲಿ ಮಾಡಿದ ಮೋಡಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಬಾಲಿವುಡ್ ಆ್ಯಕ್ಷನ್‌ಕಿಂಗ್ ಅಕ್ಷಯ್‌ಕುಮಾರ್ ಹಾಗೂ ನಿರ್ಮಾಪಕ ಸಾಜಿದ್ ನಡಿಯಾವಾಲಾ ಲೆಗೆಸ್ಸಿ ಮತ್ತೆ ಕಂಟಿನ್ಯೂ ಆಗಿದೆ. ಇದೇ ಸೆಪ್ಟಂಬರ್ 15ರಿಂದ ಸಿನಿಮಾ ಶೂಟಿಂಗ್‌ಗೂ ಪ್ಲಾನ್ ಮಾಡಲಾಗಿದೆಯಂತೆ. ಹೌಸ್‌ಫುಲ್-5 (Housefull 5) ಚಿತ್ರದ ಮೊದಲ ಹಂತದ ಶೂಟಿಂಗ್‌ನ್ನ ಲಂಡನ್‌ನಲ್ಲಿ ಮಾಡುವ ಯೋಜನೆಯನ್ನ ಹಮ್ಮಿಕೊಂಡಿದೆಯಂತೆ ಚಿತ್ರತಂಡ.

    ಹೌಸ್‌ಫುಲ್ ಪಾರ್ಟ್-5 ಸಿನಿಮಾ ಹೆಸರಿಗೆ ತಕ್ಕಂತೆ ಕಲಾವಿದರಿಂದ ತುಂಬಿ ತುಳುಕುತ್ತಿದೆ. ಅಕ್ಷಯ್‌ಕುಮಾರ್ ಜೊತೆ ರಿತೇಶ್ ದೇಶ್‌ಮುಖ್, ಸಂಜಯ್ ದತ್, ಜಾಕಿ ಶ್ರಾಫ್, ಫರ್ದೀನ್ ಖಾನ್, ನಾನಾ ಪಾಟೇಕರ್ ಸೇರಿದಂತೆ ಅನೇಕರು ಪಾತ್ರವರ್ಗದಲ್ಲಿದ್ದಾರೆ. ಇದ್ರ ಜೊತೆಗೆ ಫೀಮೇಲ್ ಲೀಡ್‌ನಲ್ಲಿ ಐದು ಜನ ನಾಯಕಿಯರು ಈ ಸಿನಿಮಾದ ಸೆಂಟ್ರಾಫ್ ಅಟ್ರಾö್ಯಕ್ಷನ್. ಜಾಕ್ವೇಲಿನ್ ಫರ್ನಾಂಡಿಸ್, ನರ್ಗಿಸ್ ಫಕ್ರಿ, ಸೋನಮ್ ಬಾಜ್ವಾ, ಚಿತ್ರಾಂಗದಾ ಸಿಂಗ್ ಹಾಗೂ ಸೌಂದರ್ಯ ಶರ್ಮಾ ಫೀಮೇಲ್ ಲೀಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಅಂದಹಾಗೆ ಕಲಾವಿದರಿಂದ ತುಂಬಿ ತುಳುಕುತ್ತಿರುವ ಹೌಸ್‌ಫುಲ್-5 ಸಿನಿಮಾಗೆ ತರುಣ್ ಮಾನ್ಸುಖನಿ ನಿರ್ದೇಶನ ಮಾಡ್ತಿದ್ದಾರೆ. ಈಗಾಗಲೇ ನಾಲ್ಕು ಸಿರೀಸ್ ಮೂಲಕ ನಗಿಸಿ ನಗಿಸಿ ಹೊಟ್ಟೆ ಹುಣ್ಣು ಮಾಡಿಯಾಗಿದೆ. ಇನ್ನು ಹೌಸ್‌ಫುಲ್-5 ರಸದೌತಣ ಹೇಗಿರುತ್ತೆ ಅನ್ನೋ ಕುತೂಹಲ ಇನ್ನು ಜಾಸ್ತಿ ಆಗ್ತಿದೆ. ಸದ್ಯ ಸಿನಿಮಾ ಹಾಗೂ ಪಾತ್ರಗಳ ಬಗ್ಗೆ ಮಾಹಿತಿ ಹಂಚಿಕೊಂಡಿದೆ ಚಿತ್ರತಂಡ.

    ಸುಮಾರು 45 ದಿನಗಳ ಶೆಡ್ಯೂಲ್ ಹಾಕಿಕೊಂಡಿರುವ ಚಿತ್ರತಂಡ, ಮೊದಲು ಲಂಡನ್‌ನ ಸುಂದರ ತಾಣಗಳಲ್ಲಿ ಸಿನಿಮಾದ ಶೂಟಿಂಗ್ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ. ಕಾಮಿಡಿ ಜೊತೆಗೆ ಬ್ಯೂಟಿಫುಲ್ ಹಾಡುಗಳು ಸಿನಿಮಾದಲ್ಲಿ ಇರಲಿದ್ದು, ಫ್ಯಾಮಿಲಿ ಆಡಿಯೆನ್ಸ್ ಅಟ್ರ್ಯಾಕ್ಟ್ ಮಾಡುವ ನಿಟ್ಟಿನಲ್ಲಿ ಕಥೆಯನ್ನ ಈ ಬಾರಿ ವಿಭಿನ್ನವಾಗಿ ನರೇಟ್ ಮಾಡಿಕೊಂಡಿದ್ದಾರೆ ನಿರ್ದೇಶಕರು.

    ಒಟ್ಟಿನಲ್ಲಿ ಹೌಸ್‌ಫುಲ್ ನಾಲ್ಕೂ ಸಿರೀಸ್ ಮನಸೂರೆ ಮಾಡಿದಂತೆ, ಹೌಸ್‌ಫುಲ್-5 ಸಿನಿಮಾ ಕೂಡಾ ಪ್ರೇಕ್ಷಕರಿಗೆ ಎಂಟರ್‌ಟೈನ್ ನೀಡಲು ಭರ್ಜರಿ ತಯಾರಿ ಮಾಡಿಕೊಂಡಿದೆಯಂತೆ. ಇನ್ನು ಈ ತಂಡಕ್ಕೆ ಯಾರೆಲ್ಲ ಸೇರಿಕೊಳ್ಳಲಿದ್ದಾರೆ. ಸಿನಿಮಾದ ಕಂಟೆಂಟ್ ಹೇಗಿರಲಿದೆ ಅನ್ನೋದನ್ನ ತಿಳ್ಕೋಬೇಕಂದ್ರೆ ಕೆಲ ದಿನಗಳವರೆಗೆ ಕಾಯಲೇಬೇಕು.