ಶಿವಮೊಗ್ಗ: ಟಾಯ್ಲೆಟ್‍ನಲ್ಲಿ ನಾಗರ ಹಾವು ಪ್ರತ್ಯಕ್ಷವಾಗಿ, ಮನೆಯವರು ಭಯಭೀತರಾದ ಘಟನೆ ಶಿವಮೊಗ್ಗ ನಗರದ ಶಿವಪ್ಪನಾಯಕ ಬಡಾವಣೆಯಲ್ಲಿ ನಡೆದಿದೆ.
ಶಿವಪ್ಪನಾಯಕ ಬಡಾವಣೆ ನಿವಾಸಿ ಶಬರಿ ಅವರು ಇಂದು ತಮ್ಮ ಮನೆಯ ಟಾಯ್ಲೆಟ್‍ಗೆ ಹೋದಾಗ, ಟಾಯ್ಲೆಟ್ ಪಿಟ್ ನಲ್ಲಿ ನಾಗರ ಹಾವು ಇರುವುದನ್ನು ಗಮನಿಸಿ ಗಾಬರಿಯಿಂದ ಹೊರಗೆ ಓಡಿ ಬಂದಿದ್ದಾರೆ. ತಕ್ಷಣ ಸ್ನೇಕ್ ಕಿರಣ್‍ಗೆ ಫೋನ್ ಮಾಡಿದ್ದು, ಸ್ಥಳಕ್ಕೆ ಆಗಮಿಸಿದ ಸ್ನೇಕ್ ಕಿರಣ್, ನಾಗರ ಹಾವನ್ನು ಸುರಕ್ಷಿತವಾಗಿ ಪಿಟ್‍ನಿಂದ ತೆಗೆದು ಹೊರಗೆ ತಂದಿದ್ದಾರೆ. ಇದನ್ನೂ ಓದಿ: ದೇವರ ಮುಂದೆ ಹಚ್ಚಿಟ್ಟಿದ್ದ ದೀಪದಿಂದ ಬೆಂಕಿ – ಮನೆಯಲ್ಲಿದ್ದ 3 ಲಕ್ಷ ನಗದು, ಚಿನ್ನಾಭರಣ ಭಸ್ಮ
ಹಾವನ್ನು ಮನೆ ಹೊರಗೆ ತಂದ ಬಳಿಕ ಮನೆಯ ಒಡತಿ ನಾಗರ ಹಾವಿಗೆ ಆರತಿ ಬೆಳಗಿ, ಪೂಜೆ ಮಾಡಿದ್ದಾರೆ. ನಂತರ ಸ್ನೇಕ್ ಕಿರಣ್ ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ನಾಗಪ್ಪ ಮನೆಯಿಂದ ಹೊರ ಹೋದ ಬಳಿಕ ಶಬರಿ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಕೊರೊನಾ ಸ್ಫೋಟ ಒಟ್ಟು 2,479 ಪ್ರಕರಣ – ಬೆಂಗ್ಳೂರಲ್ಲಿ 2,053 ಕೇಸ್
ಹಾವೇರಿ: ದೇವರ ಮುಂದೆ ಹಚ್ಚಿಟ್ಟಿದ್ದ ದೀಪದಿಂದ ಬೆಂಕಿ ಹೊತ್ತಿಕೊಂಡು ಗುಡಿಸಲಿನಲ್ಲಿದ್ದ ವಸ್ತುಗಳು ಸುಟ್ಟು ಕರಕಲಾದ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಬಡಮಲ್ಲಿ ತಾಂಡಾದಲ್ಲಿ ನಡೆದಿದೆ.
ಗ್ರಾಮದ ಅಂಗನವಾಡಿ ಸಹಾಯಕಿಯಾದ ವಿನೋದಾ ಎಂಬುವರು ಗುಡಿಸಲಿನಲ್ಲಿ ವಾಸಿಸುತ್ತಿದ್ದು, ದೇವರ ಮುಂದೆ ದೀಪ ಹಚ್ಚಿಟ್ಟು ಅಂಗನವಾಡಿಗೆ ಕೆಲಸಕ್ಕೆ ಹೋಗಿದ್ದರು. ಕೆಲ ಹೊತ್ತಿನಲ್ಲಿ ದೀಪದ ಬೆಂಕಿ ಗುಡಿಸಲಿಗೆ ಆವರಿಸಿ ಗುಡಿಸಲಿನಲ್ಲಿದ್ದ ಮೂರು ಲಕ್ಷ ನಗದು ಹಣ ಮತ್ತು ಐವತ್ತು ಗ್ರಾಂ ತೂಕದ ಚಿನ್ನಾಭರಣ ಬೆಂಕಿಗೆ ಆಹುತಿಯಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಲಾಕ್‍ಡೌನ್ ಮಾಡೋ ಉದ್ದೇಶ ಸರ್ಕಾರಕ್ಕೆ ಇಲ್ಲ: ಬಿ.ಸಿ ಪಾಟೀಲ್
ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಬೆಂಕಿ ನಂದಿಸಲು ಯಶಸ್ವಿಯಾಗಿದ್ದಾರೆ. ಹೊಸ ಮನೆಯ ನಿರ್ಮಾಣಕ್ಕಾಗಿ ಮನೆಯಲ್ಲಿ ಹಣವನ್ನು ಕೂಡಿ ಇಟ್ಟಿದ್ದರು. ಅದರೆ ಬೆಂಕಿಗೆ ಮನೆಯಲ್ಲಿ ಇದ್ದ ನಗದು ಸುಟ್ಟು ಇಡೀ ಕುಟುಂಬವೇ ಕಣ್ಣೀರು ಹಾಕುತ್ತಿದೆ. ಸ್ಥಳಕ್ಕೆ ಕಾಗಿನೆಲೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕೊರೊನಾ ಸ್ಫೋಟ ಒಟ್ಟು 2,479 ಪ್ರಕರಣ – ಬೆಂಗ್ಳೂರಲ್ಲಿ 2,053 ಕೇಸ್
ಹುಬ್ಬಳ್ಳಿ: ಸದನದಲ್ಲಿ ರಮೇಶ್ ಕುಮಾರ್ ಅಂತಹ ಹಿರಿಯರು ಮಹಿಳೆಯರ ಬಗ್ಗೆ ಅವಹೇಳನ ಮಾಡಬಾರದಾಗಿತ್ತು. ಅವರು ಯಾಕೆ ಆ ರೀತಿ ಹೇಳಿದರು ಅಂತ ಅರ್ಥ ಆಗಲಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಈ ರೀತಿ ಶಬ್ದ ಪ್ರಯೋಗ ಅಥವಾ ಮಹಿಳೆಯರ ಬಗ್ಗೆ ಮಾತನಾಡುವುದು ಸರಿ ಅಲ್ಲ. ನಿನ್ನೆಯೇ ಆ ಬಗ್ಗೆ ಕ್ಷಮೆ ಕೇಳಬೇಕಿತ್ತು. ಇವತ್ತು ಕೇಳಿದ್ದಾರೆ. ಅವರೊಬ್ಬ ಒಳ್ಳೆ ರೀತಿಯ ಸಂಸದೀಯ ಪಟು, ಆದರೆ ನಡುವಳಿಕೆ ಇದಲ್ಲ. ಅವರು ಒಬ್ಬ ಸ್ಪೀಕರ್ ಆಗಿ ಕೆಲಸ ಮಾಡಿದವರು, ಮಾತನಾಡುವಾಗ ಬಹಳಷ್ಟು ಚಿಂತಿಸಿ ಮತನಾಡಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಕ್ರಿಸ್ತನಿಗೆ ಪರಿವರ್ತನೆಯಾದ್ರೆ ಸಿದ್ದರಾಮಯ್ಯಗೆ ಜಾಗ ಎಲ್ಲಿದೆ: ಸಿ.ಟಿ ರವಿ
ಸದನದಲ್ಲಿ ಸರಿಯಾದ ಚರ್ಚೆ ನಡೆಯದೇ ಇರುವ ವಿಚಾರವಾಗಿ ಮಾತನಾಡಿದ ಅವರು, ಸದನದಲ್ಲಿ ನಾವು ಸರ್ಕಾರ ನಡೆಸುವುದಕ್ಕೆ ಉತ್ತರ ಕೊಡುವುದಕ್ಕೆ ಸಿದ್ಧರಾಗಿರುತ್ತೇವೆ. ಸ್ಪಷ್ಟವಾಗಿ ಅವರು ಯಾವುದನ್ನು ಮಂಡಿಸಬೇಕು ಎನ್ನುವುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಸದನದಲ್ಲಿ ಧರಣಿ ಮಾಡುವುದು, ಬಾಯ್ಕಾಟ್ ಮಾಡುವುದು, ಬೀದಿಲಿ ಪ್ರತಿಭಟನೆ ಮಾಡುವುದೆಲ್ಲಾ ರಾಜಕೀಯ ಗಿಮಿಕ್, ಈ ಭಾಗದ ಅಭಿವೃದ್ಧಿ ಬಗ್ಗೆ ಕಾಳಜಿ ಇದ್ದರೆ ಸರ್ಕಾರಕ್ಕೆ ಸಲಹೆ ನೀಡಿ, ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಆದರೆ ಅದಕ್ಕೆ ಯಾವುದೇ ಆಧಾರ ಇಲ್ಲ, ಸರಿಯಾಗಿ ಸದನ ನಡೆಯದೇ ಇಡುವುದಕ್ಕೆ ಕಾಂಗ್ರೆಸ್ಸಿಗರ ಅಸಹಕಾರ ಕಾರಣ ಆರೋಪಿಸಿದರು.
ಮತಾಂತರ ಕಾಯ್ದೆ ವಿಚಾರವಾಗಿ ಮಾತನಾಡಿದ ಅವರು, ಸ್ವಯಂಪ್ರೇರಿತ ಮತಾಂತರಕ್ಕೆ ಯಾವುದೇ ನಿರ್ಬಂಧ ಇಲ್ಲ, ಆದರೆ ಬಲವಂತವಾಗಿ ಇವತ್ತು ಮತಾಂತರ ನಡೆಯುತ್ತಿದೆ, ಆಸೆ, ಆಮಿಷ ಒಡ್ಡಿ ಮತಾಂತರ ಮಾಡುವುದಕ್ಕೆ ನಮ್ಮ ತಡೆ ಇದೆ. ಯಾವುದೇ ಸಮುದಾಯ ಇರಲಿ ಮತಾಂತರ ನಿಷೇಧ ಕಾಯ್ದೆ ಕಾಂಗ್ರೆಸ್‍ಗೆ ಯಾಕೆ ಅನ್ವಯವಾಗುತ್ತದೆ. ಬಿಲ್ ನಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ಮಾತ್ರ ಅಂತ ಇರುವುದಿಲ್ಲ, ನೀವು ತಪ್ಪು ಮಾಡದಿದ್ದರೆ ಹೆದರುವ ಪ್ರಶ್ನೆ ಇಲ್ಲ ಎಂದರು. ಇದನ್ನೂ ಓದಿ: ಸಾಕಾನೆಗಳಿಂದ ಉಪಟಳ – ಬಂಡೀಪುರಕ್ಕೆ 8 ಆನೆಗಳ ಸ್ಥಳಾಂತರ
ಮಹಾದಾಯಿ ವಿಚಾರದಲ್ಲಿ ಕೆಲ ಕಾನೂನು ತೊಡಕಿದೆ, ಕೋರ್ಟ್‍ನಲ್ಲಿ ಕೇಸ್ ಪೆಂಡಿಂಗ್ ಇದೆ, ಸರ್ಕಾರದ ಹಂತದಲ್ಲಿ ಬಗೆಹರಿಸಬೇಕಾಗುತ್ತದೆ. ನ್ಯಾಯಾಲಯದಲ್ಲಿ ನಮಗೆ ಮಹದಾಯಿ ನೀರಿನ ಬಗ್ಗೆ ಹಕ್ಕಿದೆ ಎನ್ನುವ ತೀರ್ಪು ಬಂದಿದೆ. ನಮಗೆ ಬರಬೇಕಾದ ನೀರು ನಮಗೆ ಬರುವುದು ನಿಶ್ಚಿತ ಎಂದು ಹೇಳಿದರು.
ಹುಬ್ಬಳ್ಳಿ: ವರುಣನ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕಳೆದ ನಾಲ್ಕು ದಿನದಿಂದ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಗಣೇಶಪೇಟೆಯ ಬಿಂದರಗಿ ಓಣಿಯಲ್ಲಿ ಮನೆಗೋಡೆ ಕುಸಿದು ಬಿದ್ದಿದ್ದು, ಮನೆಗೊಳಗಿದ್ದ ನಾಲ್ವರನ್ನು ರಕ್ಷಣೆ ಮಾಡಲಾಗಿದೆ.
ಗೋಡೆ ಕುಸಿಯುತ್ತಿರುವುದನ್ನು ಕಂಡ ಮನೆಯ ಮಾಲೀಕ ಬಸವಂತ ಶಿಂಧೆ, ಪತ್ನಿ ಮೂರು ಮಕ್ಕಳು ಹೊರಗೆ ಓಡಿ ಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಕ್ಕದ ಮನೆಯ ಮೇಲೆ ಈ ಮಣ್ಣಿನ ಗೋಡೆ ಬಿದ್ದಿದ್ದು ಅವರ ಮನೆಯಲ್ಲಿ ನಾಲ್ಕು ಜನ ಸಿಲುಕಿಕೊಂಡಿದ್ದರು. ಸರಿಯಾದ ಸಮಯಕ್ಕೆ ಆಗಮಿಸಿ ಅಗ್ನಿಶಾಮಕದಳ ಸಿಬ್ಬಂದಿ ನಾಲ್ಕು ಜನರನ್ನು ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಕೆಜಿಎಫ್ 2, ಲಾಲ್ ಸಿಂಗ್ ಚಡ್ಡಾ ಒಂದೇ ದಿನ ರಿಲೀಸ್
ಒಂದೇ ಕುಟುಂಬದ ಆರಿಫ್ ಖಾನ್, ಶೈನಾಜಬಾನು, ಸಾಧಿಕ್ ಹಾಗೂ ನಾಜಿಯಾ ಇವರನ್ನು ರಕ್ಷಣೆ ಮಾಡಲಾಗಿದೆ. ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿ ಚಂದ್ರಶೇಖರ ಭಂಡಾರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ನಾಲ್ವರ ಜೀವ ರಕ್ಷಣೆ ಮಾಡಲಾಗಿದೆ. ಇದನ್ನೂ ಓದಿ: ಕೊಹ್ಲಿ ಅಲ್ಲ ಗುಪ್ಟಿಲ್ ಈಗ ಟಿ20 ಕ್ರಿಕೆಟ್‍ನ ಕಿಂಗ್
ನೆಲಮಂಗಲ: ತಾಲೂಕಿನಾದ್ಯಂತ ಕಳೆದ ರಾತ್ರಿ ಧಾರಾಕಾರ ಮಳೆ ಸುರಿದಿದೆ. ಸಿಡಿಲು ಸಹಿತ ಸುರಿದ ಮಳೆಗೆ ತಾಲೂಕಿನ ಲಕ್ಕೇನಹಳ್ಳಿ ಗ್ರಾಮದಲ್ಲಿ 15ಕ್ಕೂ ಹೆಚ್ಚಿನ ಮನೆಗಳಿಗೆ ಮಳೆ ನೀರು ನುಗ್ಗಿದ್ದು ಗ್ರಾಮದ ಜನರ ನಿದ್ದಗೆಡಿಸಿದೆ.
ಮನೆಗೆ ನೀರು ನುಗ್ಗಿದ್ದರಿಂದ ದಿನಸಿ ಪದಾರ್ಥಗಳು ಸೇರಿದಂತೆ ಅನೇಕ ವಸ್ತುಗಳು ನೀರಿನಿಂದ ಹಾನಿಯಾಗಿದ್ದು, ಜನರು ಕಂಗಾಲಾಗಿದ್ದಾರೆ. ಜಕ್ಕನಹಳ್ಳಿ ಗ್ರಾಮದಲ್ಲಿ ಬೈಲಮ್ಮ ಅವರ ಮನೆಯ ಗೋಡೆ ಕುಸಿದಿದ್ದು, ಮಳೆಯ ಆರಂಭದಲ್ಲೆ ಮನೆಯಿಂದ ಎಲ್ಲರೂ ಹೊರಗೆ ಬಂದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅದೇ ಗ್ರಾಮದ ಮಧು ಅವರ ಕುರಿ ಶೆಡ್‍ಗೂ ಕೂಡ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ. ಇದನ್ನೂ ಓದಿ:ದಲಿತರೊಂದಿಗೆ ಚಹಾ ಸೇವಿಸಿ, ಬಿಜೆಪಿಗೆ ಮತ ಹಾಕುವಂತೆ ಮನವೊಲಿಸಿ: ಸ್ವತಂತ್ರ ದೇವ್
ನೆಲಮಂಗಲ ಸಮೀಪದ ಕುಪ್ಪೆಮಳ ಕೆರೆ ಕೋಡಿ ಬಿದ್ದಿದ್ದು, ರೈತರಲ್ಲಿ ಹರ್ಷ ಮನೆ ಮಾಡಿದೆ. ಸುಮಾರು 30 ಎಕರೆ ವಿಸ್ತಾರವುಳ್ಳ ಕೆರೆ 12 ವರ್ಷದ ಬಳಿಕ ಕೋಡಿ ಬಿದ್ದಿದ್ದು ಕಳೆದ ರಾತ್ರಿಯ ಮಹಾಮಳಗೆ ಕುಪ್ಪೆ ಮಳ ಕೆರೆ ತುಂಬಿರುವಿದೆ ಸಾಕ್ಷಿ, ಕೆರೆ ಕೋಡಿ ಬಿದ್ದಿರುವುದರಿಂದ ಕೆರೆಯಿಂದ ನೀರು ಜಲಪಾತದಂತೆ ಹರಿಯುತ್ತಿದು, ನೋಡಲು ಮನೋಹರವಾಗಿ ಕಾಣುತ್ತಿದೆ. ಇದನ್ನೂ ಓದಿ:ಆದಿವಾಸಿಗಳ ದುಸ್ಥಿತಿಗೆ ಕಾಂಗ್ರೆಸ್ ಕಾರಣ: ಮೋದಿ
ಚೆನ್ನೈ: ತಮಿಳುನಾಡಿನ ಹಲವಾರು ಭಾಗಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ.
ಆಗ್ನೇಯ ಬಂಗಾಳ ಕೊಲ್ಲಿ ಮತ್ತು ದಕ್ಷಿಣ ಅಂಡಮಾನ್‍ನಲ್ಲಿ ವಾಯುಭಾರದ ಕುಸಿತದಿಂದ ಸಮುದ್ರ ಮಟ್ಟದಿಂದ 5.8 ಕಿಲೋಮೀಟರ್‍ಗಳವರೆಗೆ ವಿಸ್ತರಿಸಿದೆ. ನೀಲಗಿರಿ, ಕೊಯಮತ್ತೂರು, ದಿಂಡಿಗಲ್, ಥೇಣಿ, ತೆಂಕಶಿ ಮತ್ತು ತಿರುನಲ್ವೇಲಿ ಸೇರಿದಂತೆ ಸುಮಾರು 14 ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಕಳೆದೆರಡು ದಿನಗಳಿಂದ ಚೆನ್ನೈನ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಮಳೆಯಿಂದಾಗಿ ರಾಜ್ಯದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ನಿನ್ನಂತೆ ಸಮಾಜ ಸೇವೆ ಮಾಡೋ ಶಕ್ತಿ ನನಗೆ ನೀಡು ಮಗನೇ: ರಾಘಣ್ಣ
ಸೋಮವಾರ (ನವೆಂಬರ್ 8)ರಂದು ರಾಜ್ಯದ ಹಲವಾರು ರಸ್ತೆಗಳು ಜಲಾವೃತಗೊಂಡಿದ್ದು, ಹೆಚ್ಚುವರಿ ಮಳೆಯ ನೀರನ್ನು ಬಿಡುಗಡೆ ಮಾಡಲು ಮೂರು ಜಲಾಶಯಗಳ ಗೇಟ್‍ಗಳನ್ನು ತೆರೆಯಲಾಯಿತು. ರಾಜ್ಯದ ಕೆಲವು ತಗ್ಗು ಪ್ರದೇಶಗಳಲ್ಲಿರುವ ಸುಮಾರು 60ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿದ್ದು, 4 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಈ ಘಟನೆ ಚೆನ್ನೈ, ಥೇಣಿ ಮತ್ತು ಮಧುರೈ ಜಿಲ್ಲೆಗಳಲ್ಲಿ ಮಳೆಯಿಂದಾಗಿ ಸಾವು ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಟವೆಲ್ ಕೊಡಲು ತಡವಾಗಿದ್ದಕ್ಕೆ ಹೆಂಡತಿಯ ಬರ್ಬರ ಹತ್ಯೆ
Rameswaram receives rainfall due to Northeast Monsoon over Tamil Nadu
ಚೆನ್ನೈ ಅನೇಕ ರಸ್ತೆ ಗುಂಡಿಗಳು ನೀರಿನಿಂದ ಸಂಪೂರ್ಣ ಮುಚ್ಚಲ್ಪಟ್ಟಿದ್ದರೆ, ತಗ್ಗು ಪ್ರದೇಶಗಳಲ್ಲಿ ಎರಡು ಅಡಿಗಳಷ್ಟು ನೀರು ತುಂಬಿಕೊಂಡಿದೆ. ಜನರ ಸುರಕ್ಷತೆಯನ್ನು ಪರಿಗಣಿಸಿ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜನ್ನು ಸಹ ಕಡಿತಗೊಳಿಸಲಾಗಿದೆ. ಮಳೆಯಿಂದಾಗಿ ಜಲಾವೃತಗೊಂಡಿದ್ದ ನಗರ ಪೊಲೀಸ್ ಠಾಣೆ ಆದಂಬಕ್ಕಂ ಅನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಬೇಕಾಯಿತು. ಮಳೆಗೆ ಕನಿಷ್ಠ 75 ಮರಗಳು ನೆಲಕ್ಕುರುಳಿದ್ದು,ಅವುಗಳನ್ನು ಪೌರ ಸಿಬ್ಬಂದಿ ತೆರವುಗೊಳಿಸಿದ್ದಾರೆ. ಇದನ್ನೂ ಓದಿ: ಭಾರೀ ಮಳೆಗೆ ತತ್ತರಿಸಿದ ತಮಿಳುನಾಡು – ಇನ್ನೂ ಎರಡು ದಿನ ರೆಡ್ ಅಲರ್ಟ್
Tamil Nadu | Streets in Chennai’s Agraharam, Korattur area waterlogged following heavy rainfall in the city
ಕೊಯಮತ್ತೂರು ಜಿಲ್ಲಾಡಳಿತವು ನಿರಂತರ ಮಳೆಯಾಗುತ್ತಿರುವ ನೊಯ್ಯಲ್ ನದಿಯ ದಡದಲ್ಲಿ ವಾಸಿಸುವ ಜನರಿಗೆ ಸುರಕ್ಷತಾ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವಂತೆ ಎಚ್ಚರಿಕೆ ನೀಡಿದ್ದಾರೆ. ಪುದುಚೇರಿಯಲ್ಲಿಯೂ ಮಳೆ ಮುಂದುವರೆದಿದ್ದು, ಹಲವಾರು ಮನೆಗಳು ನಾಶವಾಗಿವೆ.
ಬೆಂಗಳೂರು: ನಟ ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ ಜೊತೆ ಮನೆಯಿಂದ ಕುಟುಂಬ ವೈದ್ಯ ಡಾ. ರಮಣರಾವ್ ಅವರ ರಮಣಶ್ರೀ ಕ್ಲಿನಿಕ್‍ಗೆ ಹೋಗಲು ಸಿದ್ಧರಾಗುತ್ತಿದ್ದ ದೃಶ್ಯ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ.
ದೃಶ್ಯದಲ್ಲಿ, ಪುನೀತ್ ಅವರ ಅಶ್ವಿನಿ ಬಾಗಿಲ ಬಳಿಯಲ್ಲಿ ನಿಂತು ತಮ್ಮ ಮನೆಯ ಕೆಲಸದವರಿಗೆ ಏನೋ ಸೂಚನೆ ನೀಡುತ್ತಾರೆ. ಆತ ತಕ್ಷಣ ಮನೆಯೊಳಗೆ ಓಡಿ ಹೋಗುತ್ತಾನೆ. ನಂತರ ಪುನೀತ್ ರಾಜ್‍ಕುಮಾರ್ ಹೊರಗಡೆ ಬಂದು ಕಾದು ನಿಂತಿರುತ್ತಾರೆ. ಒಳ ಹೋದ ವ್ಯಕ್ತಿಯು ಪುನೀತ್ ಅವರಿಗೆ ಅಗತ್ಯ ವಸ್ತುವನ್ನು ತಂದುಕೊಡುತ್ತಾರೆ. ನಂತರ ಪುನೀತ್ ಹಾಗೂ ಪತ್ನಿ ಇಬ್ಬರೂ ಕಾರಿನಲ್ಲಿ ಕುಳಿತು ಕ್ಲಿನಿಕ್ ಕಡೆಗೆ ಪ್ರಯಾಣ ಬೆಳೆಸುತ್ತಾರೆ. ಇದನ್ನೂ ಓದಿ: ಪುನೀತ್ ಬಗ್ಗೆ ಅಶ್ಲೀಲವಾಗಿ ಪೋಸ್ಟ್ – ವ್ಯಕ್ತಿ ಅರೆಸ್ಟ್
ಪುನೀತ್ ಅವರು ತಾವು ನಿಧನರಾಗುವ ದಿನ ಬೆಳಿಗ್ಗೆ ಜಿಮ್ ಮುಗಿಸಿದಾಗ, ಯಾಕೋ ಸ್ವಲ್ಪ ವೀಕ್ ಎನಿಸುತ್ತಿದೆ ಎಂದು ತಕ್ಷಣ ಕುಟುಂಬ ವೈದ್ಯರ ಬಳಿಗೆ ತೆರಳುತ್ತಾರೆ. ಪುನೀತ್ ಸಾಕಷ್ಟು ಬೆವರಿರುವುದನ್ನು ಗುರುತಿಸುವ ವೈದ್ಯರು, ಇಸಿಜಿ ಮಾಡಿಸುತ್ತಾರೆ. ನಂತರ ವಿಕ್ರಂ ಆಸ್ಪತ್ರೆಗೆ ತೆರಳುವಂತೆ ಸಲಹೆ ನೀಡುತ್ತಾರೆ. ಪುನೀತ್ ರಾಜ್‍ಕುಮಾರ್ ಅವರಿಗೆ ಆಸ್ಪತ್ರೆಗೆ ತೆರಳುವಷ್ಟರಲ್ಲಿ ಮಾರ್ಗ ಮಧ್ಯೆ ಹೃದಯ ಸ್ತಂಭನವಾಗುತ್ತದೆ. ಆಸ್ಪತ್ರೆಯಲ್ಲಿ ವೈದ್ಯರು ಪ್ರಯತ್ನಿಸಿದರೂ ಅವರನ್ನು ಉಳಿಸಿಕೊಳ್ಳಲು ಆಗುವುದಿಲ್ಲ.
ಚಾಮರಾಜನಗರ: ಶಿಕ್ಷಕರೊಬ್ಬರಿಗೆ ಸ್ಪ್ರೇ ಮಾಡಿ ತುರಿಕೆ ಬರುತ್ತಿದ್ದಂತೆ ಗಮನ ಬೇರೆಡೆ ಸೆಳೆದು ಹಾಡಹಗಲೇ 2 ಲಕ್ಷ ರೂಪಾಯಿ ಹಣವನ್ನು ಲಪಟಾಯಿಸಿರುವ ಘಟನೆ ಚಾಮರಾಜನಗರದ ಭುವನೇಶ್ವರಿ ವೃತ್ತದ ಸಮೀಪ ನಡೆದಿದೆ.
ಚಾಮರಾಜನಗರ ತಾಲೂಕಿನ ಕಾಳನಹುಂಡಿಯಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ನಗರದ ಹೌಸಿಂಗ್ ಬೋರ್ಡ್ ನಿವಾಸಿ ಶಿವಕುಮಾರ್ ಹಣ ಕಳೆದುಕೊಂಡವರು. ಇವರು ಮನೆ ಕಟ್ಟಿಸುವ ಸಲುವಾಗಿ ಇಟ್ಟಿದ್ದ ಒಂದು ಲಕ್ಷ ರೂ. ಹಣ ಸೇರಿದಂತೆ ಕೆನರಾ ಬ್ಯಾಂಕಿನಲ್ಲಿ ಒಂದು ಲಕ್ಷ ರೂ. ಹೌಸಿಂಗ್ ಲೋನ್ ಹಣ ಡ್ರಾ ಮಾಡಿಕೊಂಡು ಒಟ್ಟು 2 ಲಕ್ಷ ರೂಪಾಯಿ ಹಣವನ್ನು ಬ್ಯಾಗ್‍ಗೆ ಹಾಕಿಕೊಂಡು ಬಸ್‍ಗಾಗಿ ಕಾಯುತ್ತಿದ್ದನ್ನು ಗಮನಿಸಿದ ವ್ಯಕ್ತಿವೋರ್ವ ಸ್ಪ್ರೇ ಮಾಡಿದ್ದಾನೆ. ಇದನ್ನೂ ಓದಿ: ಬಿರಿಯಾನಿ ತಿನ್ನಲು ಹೋಗಿ 2 ಲಕ್ಷ ರೂ. ಕಳೆದುಕೊಂಡ ಆಟೋ ಚಾಲಕ
ಕೂಡಲೇ ಶಿವಕುಮಾರ್ ಅವರಿಗೆ ತುರಿಕೆ, ಉರಿ ಕಾಣಿಸಿಕೊಂಡಿದ್ದು ಬ್ಯಾಗ್ ಪಕ್ಕಕ್ಕಿಟ್ಟು ತಮ್ಮ ವಾಟರ್ ಬಾಟೆಲ್ ನಿಂದ ಕುತ್ತಿಗೆಗೆ ನೀರು ಹಾಕಿಕೊಳ್ಳುತ್ತಿರುವಾಗ ಮಧ್ಯ ವಯಸ್ಕ ವ್ಯಕ್ತಿವೋರ್ವ ಬ್ಯಾಗ್ ಲಪಟಾಯಿಸಿ ಪರಾರಿಯಾಗಿದ್ದಾನೆ. ಈ ಸಂಬಂಧ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದ್ದು ಭುವನೇಶ್ವರಿ ವೃತ್ತದ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ.
ಕಲಬುರಗಿ: ಕಲಬುರಗಿ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಮತ್ತೆ ಲಘು ಭೂಮಿ ಕಂಪನ ಅನುಭವ ಆಗಿದೆ.
ಇಂದು ಮುಂಜಾನ 6 ಗಂಟೆ ಸುಮಾರಿಗೆ ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ಹಲಚೇರಾ, ಗಡಿಕೇಶ್ವರ್, ರಾಜಾಪುರ ಸೇರಿದಂತೆ ಕೆಲವಡೆ ಲಘು ಭೂ ಕಂಪನ ಸಂಭವಿಸಿದೆ. ಕಳೆದ ಎರಡು ದಿನಗಳಿಂದ ಈ ಗ್ರಾಮಗಳಲ್ಲಿ ಮೇಲಿಂದ ಮೇಲೆ ಲಘು ಭೂ ಕಂಪನ ಉಂಟಾಗುತ್ತಿದ್ದು, ಇದೀಗ ಜನರು ಭಯದಲ್ಲಿಯೇ ಕಾಲ ಕಲಿಯುತ್ತಿದ್ದಾರೆ.
ಶನಿವಾರ ಕೂಡ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಹಾಗೂ ಯರಕೊಂಡ ಗ್ರಾಮಗಳಲ್ಲಿ ನಸುಕಿನ ಜಾವ 5.40ರ ಸಮಯದಲ್ಲಿ ಎರಡು ಬಾರಿ ಲಘು ಭೂಕಂಪನ ಅನುಭವ ಆಗಿದ್ದು, ಕಂಪನಕ್ಕೆ ಮನೆಯಲ್ಲಿದ್ದ ಪಾತ್ರೆಗಳು ಕೆಳಗೆ ಬಿದ್ದಿತ್ತು. ಅಲ್ಲದೇ ಜನರು ಆತಂಕದಿಂದ ಮನೆಯಿಂದ ಹೊರಬಂದಿದ್ದರು. ಇದನ್ನೂ ಓದಿ: ಸ್ಯಾಂಡಲ್‍ವುಡ್ ಹಿರಿಯ ನಟ ಸತ್ಯಜಿತ್ ಇನ್ನಿಲ್ಲ
ಶುಕ್ರವಾರ ಕೂಡಾ ಗ್ರಾಮದಲ್ಲಿ ಲಘು ಭೂ ಕಂಪನವಾಗಿತ್ತು. ಕಳೆದ ಕೆಲ ವರ್ಷಗಳಲ್ಲಿ ಹಲವಾರು ಬಾರಿ ಗಡಿಕೇಶ್ವರ ಗ್ರಾಮದಲ್ಲಿ ಭೂಮಿಯಿಂದ ಭಾರಿ ಸದ್ದು ಕೇಳಿ ಬರ್ತಿತ್ತು. ಇದೀಗ ಜನರಿಗೆ ಮೇಲಿಂದ ಮೇಲೆ ಲಘು ಭೂಕಂಪನ ಅನುಭವ ಆಗುತ್ತಿದೆ. ಅಲ್ಲದೇ ಈ ವಿಚಾರವಾಗಿ ಕೂಡಲೇ ಸರ್ಕಾರ ನಿಖರ ಮಾಹಿತಿ ತಿಳಿಸಬೇಕು. ಒಂದು ವೇಳೆ ಭೂಕಂಪ ಕೇಂದ್ರ ಸ್ಥಾನ ಆಗಿದ್ದರೆ ಎರಡು ಗ್ರಾಮ ಸ್ಥಳಾಂತರಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದರು. ಇದನ್ನೂ ಓದಿ: ಕಲಬುರಗಿಯ ಎರಡು ಗ್ರಾಮಗಳಲ್ಲಿ ಮತ್ತೆ ಭೂಕಂಪನ
ನವದೆಹಲಿ: ಕರ್ನಾಟಕ ರಾಜ್ಯದ ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಮಳೆಗೆ ಹಳೆ ಮನೆಯ ಗೋಡೆ ಕುಸಿದು ಒಂದೇ ಕುಟುಂಬದ ಆರು ಮಂದಿ ಮತ್ತು ಪಕ್ಕದ ಮನೆಯ ಬಾಲಕಿ ಸೇರಿ ಏಳು ಮಂದಿ ಮೃತಪಟ್ಟ ಘಟನೆ ನಿನ್ನೆ ನಡೆದಿತ್ತು. ಘಟನೆ ಸಂಬಂಧಿಸಿದಂತೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು 2ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಬೆಳಗಾವಿಯಲ್ಲಿ ಸತತ ಮೂರು ದಿನಗಳಿಂದ ಸುರಿಯುತ್ತಿದ್ದ ಮಳೆಗೆ ಹಳೆ ಗೋಡೆ ಒದ್ದೆ ಆಗಿತ್ತು. ಆ ಗೋಡೆ ಬೀಳುವುದನ್ನು ನೋಡಲು ಹೋಗಿದ್ದಾಗ ಈ ದುರಂತ ಸಂಭವಿಸಿತ್ತು. ಸುರೇಶ್ ಖಾನಗಾವಿ ಕುಟುಂಬದ ಲಕ್ಷ್ಮಿ ಅರ್ಜುನ್ ಖಾನಗಾವಿ(15), ಶಾಂತವ್ವ ಭೀಮಪ್ಪ ಖಾನಗಾವಿ(50), ಅರ್ಜುನ್ ಹನಮಂತ ಖಾನಗಾವಿ, ಸತ್ಯವ್ವ ಅರ್ಜುನ್ ಖಾನಗಾವಿ(45), ಪೂಜಾ ಅರ್ಜುನ್ ಖಾನಗಾವಿ(8), ಸವಿತಾ ಭೀಮಪ್ಪ ಖಾನಗಾವಿ(28) ಮತ್ತು ಪಕ್ಕದ ಮನೆಯ ಬಾಲಕಿ ಕಾಶವ್ವ ವಿಠ್ಠಲ ಕೊಳೆಪ್ಪನವರ(8) ಸಾವನ್ನಪ್ಪಿದ್ದರು. ಈ ಘಟನೆ ಬಗ್ಗೆ ಟ್ವಿಟ್ಟರ್ ನಲ್ಲಿ ಸಂತಾಪ ಸೂಚಿಸಿ 2 ಲಕ್ಷ ರೂ. ಪರಿಹಾರವನ್ನು ಮೋದಿ ಘೋಷಿಸಿದ್ದಾರೆ. ಇದನ್ನೂ ಓದಿ: ಗೋಡೆ ಕುಸಿಯೋದನ್ನು ನೋಡಲು ಹೋಗಿ 7 ಮಂದಿ ಸಾವು
The loss of lives due to a house collapse in Belagavi, Karnataka is saddening. My thoughts are with the bereaved kin in this hour of sadness. An ex-gratia of Rs. 2 lakh each from PMNRF would be paid to the next of kin of the deceased: PM @narendramodi
ಸುರೇಶ್ ಖಾನಗಾವಿ ಕುಟುಂಬ ತಮ್ಮ ಹಳೆಯ ಮನೆಯನ್ನು ಬೀಳಿಸಿ ಹೊಸ ಮನೆ ಕಟ್ಟುವ ಸಿದ್ಧತೆಯಲ್ಲಿದ್ದರು. ಅದಕ್ಕಾಗಿಯೇ ಪಕ್ಕದಲ್ಲಿ ಶೆಡ್ ನಿರ್ಮಿಸಿಕೊಂಡು ಅಲ್ಲೇ ವಾಸವಾಗಿದ್ದರು. ಗೋಡೆ ಕುಸಿಯುತ್ತಿದ್ದಂತೆ ಪ್ರಾಣ ರಕ್ಷಣೆಗೆ ಓಡಿದರೂ ಪ್ರಾಣ ಉಳಿಯಲಿಲ್ಲ. ಅಂಗಡಿಗೆ ಹೋಗಿದ್ದ ಮನೆಯ ಯಜಮಾನ ಸುರೇಶ್ ಖಾನಗಾವಿ ಮತ್ತು ಇನ್ನೊಬ್ಬ ಪುತ್ರ ಮಾತ್ರ ಬದುಕುಳಿದಿದ್ದಾರೆ. ಘಟನೆ ಬಳಿಕ ಸುರೇಶ್ ಖಾನಗಾವಿಗೆ ದೂರವಾಣಿ ಕರೆ ಮಾಡಿದ್ದ ಸಿಎಂ ಬಸವರಾಜ್ ಬೊಮ್ಮಾಯಿ, ದುರಂತದ ಬಗ್ಗೆ ಮಾಹಿತಿ ಪಡೆದು ಸಂತಾಪ ತಿಳಿಸಿ ಧೈರ್ಯ ತುಂಬಿದರು. ಅಲ್ಲದೆ ಮೃತರ ಕುಟುಂಬಕ್ಕೆ ಬೊಮ್ಮಾಯಿ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದರು. ಇದನ್ನೂ ಓದಿ: ಲಖಿಂಪುರ್ ಖೇರಿ ಘಟನೆ ತನಿಖೆಗೆ ಏಕ ಸದಸ್ಯ ಆಯೋಗ ರಚನೆ