Tag: house

  • ‘ಬಿಗ್ ಬಾಸ್’ ಮನೆಯ ಪರಿಚಯವನ್ನು ಸ್ವತಃ ಸುದೀಪ್ ಅವರಿಂದಲೇ ಕೇಳಿ..

    ‘ಬಿಗ್ ಬಾಸ್’ ಮನೆಯ ಪರಿಚಯವನ್ನು ಸ್ವತಃ ಸುದೀಪ್ ಅವರಿಂದಲೇ ಕೇಳಿ..

    ಇಂದಿನಿಂದ ಓಟಿಟಿಯಲ್ಲಿ ಶುರುವಾಗುತ್ತಿರುವ ಬಿಗ್ ಬಾಸ್ ಶೋಗೆ ಕ್ಷಣಗಣನೆ. ನಿನ್ನೆ ಇಡೀ ರಾತ್ರಿ ಮತ್ತು ಇವತ್ತು ಬೆಳಗ್ಗೆಯಿಂದ ಗ್ರ್ಯಾಂಡ್ ಎಂಟ್ರಿ ಎಪಿಸೋಡ್ ಅನ್ನು ಸುದೀಪ್ ನಡೆಸಿಕೊಟ್ಟಿದ್ದಾರೆ. ಈಗಷ್ಟೇ ಅದರ ಚಿತ್ರೀಕರಣ ಮುಗಿಸಿಕೊಂಡು, ಓಟಿಟಿಯಲ್ಲಿ ತಮ್ಮ ನಿರೂಪಣೆ ಈ ಬಾರಿ ಹೇಗೆ ಬಂದಿದೆ ಎನ್ನುವುದನ್ನು ನೋಡಲು ಸ್ವತಃ ಕಿಚ್ಚ ಕಾಯುತ್ತಿದ್ದಾರೆ. ಈಗಾಗಲೇ ಕೆಲವು ತುಣುಕುಗಳನ್ನು ವೂಟ್ಸ್ ನಲ್ಲಿ ಹಾಕಲಾಗಿದ್ದು, ಈ ಬಾರಿ ಎಂದಿಗಿಂತಲೂ ಮನೆ ವಿಶೇಷವಾಗಿದೆ.

    ಈ ಮನೆಯ ಒಳಗೆ ಈಗಾಗಲೇ ಸುದೀಪ್ ಮತ್ತು ಗಾಯಕ ಕಂ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಕೂಡ ಹೋಗಿದ್ದಾರೆ. ಇಬ್ಬರೂ ಒಟ್ಟಾಗಿ ಬಿಗ್ ಬಾಸ್ ಮನೆಯ ಪರಿಚಯವನ್ನು ಮಾಡಿಕೊಟ್ಟಿದ್ದಾರೆ.  ಕನ್ಫೆಷನ್ ರೂಮ್, ಗಾರ್ಡನ್ ಏರಿಯಾ, ಹಾಲ್, ಕಿಚನ್ ರೂಮ್ ಹೀಗೆ ಎಲ್ಲವನ್ನೂ ಸುತ್ತಾಡಿದ ಸುದೀಪ್, ಅವುಗಳ ಪರಿಚಯವನ್ನು ವಿಶೇಷವಾಗಿ ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ:ಲಂಡನ್ ಸ್ಟುಡಿಯೋದಲ್ಲಿ ಕನ್ನಡ ಚಿತ್ರಕ್ಕೆ ಹಿನ್ನೆಲೆ ಸಂಗೀತ

    ಗಾರ್ಡನ್ ಏರಿಯಾವನ್ನು ಪರಿಚಯ ಮಾಡಿಕೊಡುತ್ತಾ, ‘ವಿಶ್ವದಲ್ಲೇ ಅತೀ ಹೆಚ್ಚು ಗುದ್ದಾಟ ನಡೆಯುವುದು ಇದೇ ಜಾಗದಲ್ಲಿ’ ಎಂದು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ, ಅಡುಗೆ ಮನೆಯನ್ನು ‘ಅಡುಗೆ ಮನೆಯಲ್ಲಿಯೇ ಅತೀ ಹೆಚ್ಚು ಬೆಂಕಿ ಬೀಳುವುದು’ ಎಂದು ಹೇಳುವ ಮೂಲಕ ಈ ಹಿಂದಿನ ಜಗಳವನ್ನು ನೆನಪಿಸಿದರು ಸುದೀಪ್, ಇದಕ್ಕೆ ವಾಸುಕಿ ಧ್ವನಿ ಗೂಡಿಸಿ ‘ಈ ಅಡುಗೆ ಮನೆಯಲ್ಲೇ ಎಲ್ಲರೂ ಕಳ್ಳರಾಗಿ ಬಿಡ್ತಾರೆ’ ಎನ್ನುತ್ತಾ ಏನೆಲ್ಲ ಕದಿಯುತ್ತಾರೆ ಎನ್ನುವುದನ್ನು ವಿವರಿಸುತ್ತಾರೆ.

    ಇಡೀ ಮನೆ ಈ ಬಾರಿ ಕಲರ್ ಫುಲ್ ಆಗಿದೆ. ಕಳೆದ ಸೀಸನ್ ಗಿಂತಲೂ ಈ ಸಲ ಬಣ್ಣಕ್ಕೆ ಹೆಚ್ಚು ಒತ್ತುಕೊಟ್ಟಿದ್ದಾರೆ. ನಾನಾ ರೀತಿಯ ಬಣ್ಣಗಳಿಂದ ದೊಡ್ಮನೆ ಸಿಂಗಾರಗೊಂಡಿದೆ. ಕಂಟೆಸ್ಟೆಂಟ್ ಗಳು ಕೂರುವುದಕ್ಕಾಗಿ ಕೆಂಪು ಬಣ್ಣದ ಅರ್ಧ ವೃತ್ತಾಕಾರದ ಸೋಫಾ ಹಾಕಲಾಗಿದೆ. ಲೀವಿಂಗ್ ಏರಿಯಾದಲ್ಲಿ ಕಪ್ಪು ಬಣ್ಣದ ದೊಡ್ಡ ಮುಖದಾಕೃತಿ ಇಡಲಾಗಿದೆ. ಇದನ್ನು ನೋಡಿದ ಸುದೀಪ್, ಥೇಟ್ ನನ್ನ ತರಹವೇ ಇದೆ ಎಂದು ಛೇಡಿಸುತ್ತಾರೆ.

    Live Tv
    [brid partner=56869869 player=32851 video=960834 autoplay=true]

  • ಮನೆ ಹಾನಿಗೆ ಒಂದು ಬಾರಿ ಮಾತ್ರ ಪರಿಹಾರ – ಷರತ್ತು ಏನು?

    ಮನೆ ಹಾನಿಗೆ ಒಂದು ಬಾರಿ ಮಾತ್ರ ಪರಿಹಾರ – ಷರತ್ತು ಏನು?

    ಬೆಂಗಳೂರು : ಅತಿವೃಷ್ಟಿ, ಪ್ರವಾಹದಿಂದ ಮನೆ ಹಾನಿ ಪರಿಹಾರ ನೀಡುವ ವಿಚಾರವಾಗಿ ಸರ್ಕಾರ ಸ್ಪಷ್ಟನೆ ನೀಡಿದೆ. 2022 ರಲ್ಲಿ ಯಾರು ಪರಿಹಾರ ಪಡೆಯಲು ಅರ್ಹರು ಎಂಬುದಕ್ಕೆ ಕಂದಾಯ ಇಲಾಖೆ ಸ್ಪಷ್ಟೀಕರಣ ನೀಡಿದೆ.

    ಎಲ್ಲಾ ಡಿಸಿಗಳಿಗೂ ಕಂದಾಯ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. 2019, 2020, 2021 ರಲ್ಲಿ ಎ ಮತ್ತು ಬಿ ಕೆಟಗರಿಯಲ್ಲಿ ಪರಿಹಾರ ಪಡೆದಿದ್ದರೆ 2022 ರಲ್ಲಿ ಪುನಃ ಪರಿಹಾರ ಪಡೆಯಲು ಅರ್ಹರಲ್ಲ ಎಂದು ಕಂದಾಯ ಇಲಾಖೆ ಸ್ಪಷ್ಟನೆ ನೀಡಿದೆ.

    ಪರಿಹಾರ ಯಾರು ಪಡೆಯಬಹುದು ಅಂತ ಸರ್ಕಾರ ವಿವರವಾದ ಮಾಹಿತಿಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ್ದಾರೆ.  ಇದನ್ನೂ ಓದಿ: ಕೊಯಿನಾಡು ಬಳಿ ರಸ್ತೆಯಲ್ಲಿ ಬಿರುಕು : ಮಡಿಕೇರಿ – ಮಂಗಳೂರು ಸಂಪರ್ಕ ಕಡಿತ ಸಾಧ್ಯತೆ

    ಪರಿಹಾರ ಪಡೆಯಲು ಯಾರು ಅರ್ಹರು?
    ವಾಸದ ಮನೆ ಅಧಿಕೃತ ಮನೆಯಾದಲ್ಲಿ ನಿಯಮಾನುಸಾರ ಪರಿಹಾರ ಪಾವತಿಸಬಹುದು. ಆದರೆ, ಜಮೀನಿನಲ್ಲಿ ಕಟ್ಟಿರುವ ಮನೆಗಳು (Farm House), ಸರ್ಕಾರಿ ಜಮೀನು, ಗೋಮಾಳಗಳಲ್ಲಿ ಜನ ವಾಸವಾಗಿರುವ ಮನೆಗಳು ಅನಧಿಕೃತವಾದಲ್ಲಿ ನಿಯಮಾನುಸಾರ ಅಫಿಡವಿಟ್‌ ಪಡೆದು ರೂ.1.00 ಲಕ್ಷ Ex-gratria ಪಾವತಿಸುವುದು.

    ವಿವಿಧ ಸರ್ಕಾರಿ ವಸತಿ ಯೋಜನೆಯಡಿ ಮನೆ ನಿರ್ಮಾಣ ಕೆಲಸ ಪೂರ್ಣಗೊಂಡು ನಿಯಮಾನುಸಾರ ಸಾರ್ವಜನಿಕರಿಗೆ ಮನ ಹಂಚಿಕೆಯಾಗಿರಬೇಕು. ಹಾಗೂ ಈ ಮನೆಯಲ್ಲಿ ಜನ ವಾಸವಿರಬೇಕು.ಇಂತಹ ಮನೆ ಅತಿವೃಷ್ಟಿ, ಪ್ರವಾಹದಿಂದ ಹಾನಿಯಾದಲ್ಲಿ ಸರ್ಕಾರಿ ಆದೇಶದನ್ವಯ A.B. ಹಾಗೂ C ಕೆಟಗರಿಯಲ್ಲಿ ಪರಿಹಾರ ಪಾವತಿಸುವುದು.

    2019, 2020 ಮತ್ತು 2021ನೇ ಸಾಲಿನಲ್ಲಿ ಅತಿವೃಷ್ಟಿ,ಪ್ರವಾಹದಿಂದ ಎ ಅಥವಾ ಬಿ ಕೆಟಗರಿಯಲ್ಲಿ ಪರಿಹಾರ ಪಡೆದಿರುವ ಸಂತ್ರಸ್ತರ ಮನೆ ಪುನಃ 2022 ಸಾಲಿನಲ್ಲಿ ಹಾನಿಯಾದಲ್ಲಿ ಪರಿಹಾರ ಪಡೆಯಲು ಅರ್ಹರಿರುವುದಿಲ್ಲ.  ಆದರೆ 2019, 2020 ನೇ ಸಾಲಿನಲ್ಲಿ ಅಲ್ಪಸ್ವಲ್ಪ ಮನೆ ಹಾನಿಯಾದ ‘ಸಿ’ ಕಟಗರಿಯಲ್ಲಿ ಸರ್ಕಾರದಿಂದ ರೂ.50,000 ಪರಿಹಾರ ಪಡೆದಿರುವ ಮನೆಗಳು ಪುನಃ 2022ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಹಾನಿಯಾದಲ್ಲಿ A,B ಮತ್ತು C ಕೆಟಗರಿಯಲ್ಲಿ ಪರಿಹಾರ ಪಾವತಿಸಬಹುದು ಎಂದು ಸ್ಪಷ್ಟನೆ ನೀಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ದುಬಾರಿ ಬೆಲೆಗೆ ತಮ್ಮ ಫ್ಲ್ಯಾಟ್ ಮಾರಿದ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್

    ದುಬಾರಿ ಬೆಲೆಗೆ ತಮ್ಮ ಫ್ಲ್ಯಾಟ್ ಮಾರಿದ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್

    ಬಾಲಿವುಡ್ ಖ್ಯಾತ ನಟಿ ದಿ.ಶ್ರೀದೇವಿ ಪುತ್ರಿ ದುಬಾರಿ ಬೆಲೆಯ ಫ್ಲ್ಯಾಟ್ ಮಾರಿದ್ದಾರೆ. ಅದು ಬರೋಬ್ಬರಿ 44 ಕೋಟಿ ರೂಪಾಯಿಗೆ ಎನ್ನುವುದು ಅಚ್ಚರಿಯ ಸಂಗತಿ. ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ 2020ರಲ್ಲಿ ಮುಂಬೈನ ಜುಹೂನಲ್ಲಿ ಒಟ್ಟು ಮೂರು ಫ್ಲ್ಯಾಟ್ ಖರೀದಿಸಿದ್ದರಂತೆ. ಆಗ ಇವುಗಳ ಒಟ್ಟು ಬೆಲೆ 39 ಕೋಟಿ ಆಗಿತ್ತಂತೆ. ಇದೀಗ 5 ಕೋಟಿ ರೂಪಾಯಿ ಲಾಭ ಇಟ್ಟುಕೊಂಡು ಮೂರು ಫ್ಲ್ಯಾಟ್ ಗಳನ್ನು ಅವರು ಮಾರಿದ್ದಾರಂತೆ.

    ಜಾಹ್ನವಿ ಕಪೂರ್ ಕೂಡ ಹಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಒಂದೊಳ್ಳೆ ಸಂಭಾವನೆಯನ್ನೂ ಪಡೆಯುತ್ತಿದ್ದಾರಂತೆ. ಅಲ್ಲದೇ, ಅಪ್ಪ ಕೂಡ ಸಾಕಷ್ಟು ಶ್ರೀಮಂತ. ಹಾಗಾಗಿ ತಾವು ದುಡಿದ ಹಣದ ಜೊತೆಗೆ ತಂದೆಯೊಂದಿಗೂ ಒಂದಷ್ಟು ಹಣ ತಗೆದುಕೊಂಡಿದ್ದರಂತೆ. ಎಲ್ಲವನ್ನೂ ಒಟ್ಟಾಗಿಸಿ ಜುಹೂನಲ್ಲಿ ಇರುವ ಪ್ರತಿಷ್ಠಿತ ಅಪಾರ್ಟ್ಮೆಂಟ್ ನಲ್ಲಿ 14, 15 ಮತ್ತು 16ನೇ ಮಹಡಿಯಲ್ಲಿ ಮೂರು ಫ್ಲ್ಯಾಟ್ ಗಳನ್ನು ಅವರು ಖರೀದಿಸಿದ್ದರಂತೆ. ಇದನ್ನೂ ಓದಿ:ಕಿಚ್ಚ ಸುದೀಪ್- ರಕ್ಷಿತ್ ಶೆಟ್ಟಿ ನಡುವೆ ಏನಿದು ಕೋಲ್ಡ್ ವಾರ್!

    ಇದೀಗ ಜಾನ್ವಿ ಕಪೂರ್ ಫ್ಲ್ಯಾಟ್ ಅನ್ನು ಬಾಲಿವುಡ್ ನಟ ರಾಜ್ ಕುಮಾರ್ ರಾವ್ ಖರೀದಿಸಿದ್ದು, ಜುಲೈ 21ರಂದು ಮೂರು ಫ್ಲ್ಯಾಟ್ ಗಳನ್ನು ತಮ್ಮ ಹೆಸರಿಗೆ ರಿಜಿಸ್ಟ್ರೇಷನ್ ಮಾಡಿಸಿಕೊಂಡಿದ್ದಾರಂತೆ ನಟ. ಬರೋಬ್ಬರಿ 2.19 ಕೋಟಿ ರೂಪಾಯಿ ಅನ್ನು ಅವರು ಸ್ಟಾಂಪ್ ಡ್ಯೂಟಿ ಪಾವತಿಸಿದ್ದಾರಂತೆ. ಜೂಹೂನಲ್ಲಿ ಮನೆ ಹೊಂದಬೇಕು ಎನ್ನುವುದು ರಾಜ್ ಕುಮಾರ್ ರಾವ್ ಅವರ ಕನಸಾಗಿತ್ತಂತೆ. ಅದನ್ನು ಈಗ ನೆರವೇರಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಉದ್ಯಮಿ ಮನೆಯಲ್ಲಿ 1 ಗಂಟೆವರೆಗೆ ಪಟಾಕಿಗಳ ಸ್ಫೋಟ – 6 ಸಾವು, 8 ಮಂದಿಗೆ ಗಾಯ

    ಉದ್ಯಮಿ ಮನೆಯಲ್ಲಿ 1 ಗಂಟೆವರೆಗೆ ಪಟಾಕಿಗಳ ಸ್ಫೋಟ – 6 ಸಾವು, 8 ಮಂದಿಗೆ ಗಾಯ

    ಪಾಟ್ನಾ: ಪಟಾಕಿ ಸ್ಫೋಟಗೊಂಡ ಹಿನ್ನೆಲೆ 6 ಮಂದಿ ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡಿರುವ ಘಟನೆ ಬಿಹಾರದ ಸರನ್ ಜಿಲ್ಲೆಯ ಖುದಾಯಿ ಬಾಗ್ ಗ್ರಾಮದಲ್ಲಿ ಉದ್ಯಮಿಯೊಬ್ಬರ ಮನೆಯಲ್ಲಿ ನಡೆದಿದೆ.

    ನಗರದ ಉದ್ಯಮಿ ಶಬೀರ್ ಹುಸೇನ್ ಅವರ ಮನೆಯಲ್ಲಿ ಸ್ಫೋಟ ಸಂಭವಿಸಿದೆ. ಮನೆಯ ಒಂದು ಭಾಗ ಸ್ಫೋಟಗೊಂಡಿದ್ದು, ಉಳಿದ ಭಾಗಕ್ಕೆ ಬೆಂಕಿ ಹೊತ್ತಿಕೊಂಡಿದೆ. ಮನೆ ನದಿಯ ತಟದಲ್ಲಿದ್ದು, ಸ್ಫೋಟದಿಂದಾಗಿ ಮನೆಯ ಬಹುತೇಕ ಭಾಗ ಕುಸಿದು ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬಿಗಿ ಭದ್ರತೆಯಲ್ಲಿ ನಡೆದ ಮೊದಲ ಅಗ್ನಿಪಥ್ ಏರ್‌ಫೋರ್ಸ್ ನೇಮಕಾತಿ ಪರೀಕ್ಷೆ

    ಭಾರೀ ಸಂಖ್ಯೆಯ ಪಟಾಕಿಗಳನ್ನು ಮನೆಯೊಳಗೆ ಇಡಲಾಗಿತ್ತು. ಅದು ಸ್ಫೋಟಿಸಲು ಪ್ರಾರಂಭವಾದಾಗಿನಿಂದ ಸುಮಾರು 1 ಗಂಟೆಯವರೆಗೆ ನಿರಂತರವಾಗಿ ಸಿಡಿದಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಮುಂದಿನ ಗುರಿ 90 ಮೀ. ಎಸೆತ – ಪದಕದ ಬಣ್ಣ ಬದಲಾಯಿಸಲು ಪ್ರಯತ್ನಿಸುತ್ತೇನೆ: ನೀರಜ್ ಚೋಪ್ರಾ

    ಪಟಾಕಿ ಸಿಡಿದು ಮನೆ ಕುಸಿತವಾಗಿದ್ದರಿಂದ 6 ಮಂದಿ ಸಾವನ್ನಪ್ಪಿದ್ದಾರೆ. ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸುವ ಪ್ರಯತ್ನ ಮಾಡಲಾಗುತ್ತಿದೆ. ಗಾಯಗೊಂಡಿರುವ 8 ಜನರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸ್ಫೋಟದ ಹಿಂದಿನ ಕಾರಣವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ. ವಿಧಿವಿಜ್ಞಾನ ತಂಡ ಹಾಗೂ ಬಾಂಬ್ ನಿಷ್ಕ್ರಿಯ ದಳವನ್ನೂ ಕರೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಭಾರೀ ಮಳೆಗೆ ಗೃಹಪ್ರವೇಶ ಸಿದ್ಧತೆಯಲ್ಲಿದ್ದ ಮನೆ ನೆಲಸಮ

    ಭಾರೀ ಮಳೆಗೆ ಗೃಹಪ್ರವೇಶ ಸಿದ್ಧತೆಯಲ್ಲಿದ್ದ ಮನೆ ನೆಲಸಮ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹರಿಹರ ಪಲ್ಲತಡ್ಕ ಎಂಬಲ್ಲಿ ಗೃಹಪ್ರವೇಶಕ್ಕೆ ರೆಡಿ ಇದ್ದ ಮನೆ ಮಳೆಯಿಂದ ನೆಲಸಮ ಆಗಿರುವ ಘಟನೆ ನಡೆದಿದೆ.

    3 ದಿನದ ಹಿಂದೆ ಮರ ಬಿದ್ದು ಮನೆ ಗೋಡೆಗಳಲ್ಲಿ ಬಿರುಕು ಬಿಟ್ಟಿತ್ತು. ಬಿರುಕು ಬಿಟ್ಟಿರುವ ಗೋಡೆ ರಿಪೇರಿ ಕೆಲಸ ಮಾಡಲಾಗಿತ್ತು. ಜುಲೈ.18ರಂದು ಗೃಹಪ್ರವೇಶ ನೆರವೇರಿಸಲು ಎಲ್ಲ ತಯಾರಿ ನಡೆದಿತ್ತು. ಆದರೆ ಅಷ್ಟರಲ್ಲೇ ಗುಡ್ಡ ಕುಸಿದು ಮನೆ ಸಂಪೂರ್ಣ ನೆಲಸಮವಾಗಿದೆ. ಇದನ್ನೂ ಓದಿ: ಕೆನಡಾದಲ್ಲಿ ದೋಣಿ ಅಪಘಾತ- ಇಬ್ಬರು ಕೇರಳಿಗರು ಸಾವು

    ತೇಜ್ ಕುಮಾರ್ ಮತ್ತು ತಾರಾಮತಿ ದಂಪತಿಯ ಮನೆ ಇದಾಗಿದ್ದು ಪ್ರಜ್ವಲ್ ಮತ್ತು ಉಜ್ವಲ್ ಎಂಬ ಸಹೋದರರು ಮನೆಯಲ್ಲಿದ್ದರು. ಹಾಲ್‍ನಲ್ಲಿ ಮಲಗಿ 6.30 ಕ್ಕೆ ಮನೆಯಿಂದ ಹೊರಬಂದಿದ್ದರು. ಈ ವೇಳೆ ಗುಡ್ಡ ಕುಸಿದು 3 ಬೆಡ್ ರೂಂ ತುಂಬ ಮಣ್ಣು ಆವರಿಸಿಕೊಂಡಿದೆ.

    ಗುಡ್ಡ ಕುಸಿದ ಹಿನ್ನೆಲೆ ಮನೆ ಬಳಿಯಿದ್ದ 3 ಬೈಕ್‍ಗಳು ಮಣ್ಣಲ್ಲಿ ಸಿಲುಕಿ ಹಾನಿಯಾಗಿವೆ. ಮನೆಯಲ್ಲಿದ್ದವರ ಹೊರ ಬಂದಿರೋದ್ರಿಂದ ದುರಂತವೊಂದು ತಪ್ಪಿದೆ.

    Live Tv
    [brid partner=56869869 player=32851 video=960834 autoplay=true]

  • ಮಳೆ ಅಬ್ಬರಕ್ಕೆ ತುಂಡಾದ ರಸ್ತೆ, ಕುಸಿಯುವ ಹಂತದಲ್ಲಿ ಮನೆ- ಮಲೆನಾಡಿಗರು ಹೈರಾಣು

    ಮಳೆ ಅಬ್ಬರಕ್ಕೆ ತುಂಡಾದ ರಸ್ತೆ, ಕುಸಿಯುವ ಹಂತದಲ್ಲಿ ಮನೆ- ಮಲೆನಾಡಿಗರು ಹೈರಾಣು

    ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆಗೆ ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಶಾಂತಿಕೂಡಿಗೆ ಹಾಗೂ ಶುಂಠಿ ಕೂಡಿಗೆ ಗ್ರಾಮಕ್ಕೆ ಹೋಗುವ ಮಾರ್ಗದ ರಸ್ತೆ ಅರ್ಥಕ್ಕೆ ತುಂಡಾಗಿದ್ದು ಗ್ರಾಮಸ್ಥರು ಕಂಗಾಲಾಗಿದ್ದಾರೆ.

    ಈ ಗ್ರಾಮಗಳಿಗೆ ಹೋಗಲು ಬೇರೆ ಯಾವುದೇ ದಾರಿ ಇಲ್ಲ. ಇರುವುದು ಒಂದೇ ದಾರಿ. ಈಗ ಆ ದಾರಿ ಕೂಡ ತುಂಡಾಗಿದ್ದು ಇಲ್ಲಿನ ಸುಮಾರು 25ಕ್ಕೂ ಹೆಚ್ಚು ಮನೆಯ ಜನರು ಆತಂಕಕ್ಕೀಡಾಗಿದ್ದಾರೆ.

    ಈ ರಸ್ತೆ ಕಳೆದ 2 ವರ್ಷಗಳಿಂದಲೂ ಸ್ವಲ್ಪ ಸ್ವಲ್ಪ ಕುಸಿದು ಬೀಳುತ್ತಿತ್ತು. ಆಗ ಸ್ಥಳೀಯರು ಶಾಸಕ ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಆದರೆ ಯಾರೂ ಕೂಡ ಸೂಕ್ತವಾಗಿ ಸ್ಪಂದಿಸಿರಲಿಲ್ಲ. ಇದೀಗ ರಸ್ತೆಯೇ ಅರ್ಧಕ್ಕೆ ತುಂಡಾಗಿ ಬಿದ್ದಿದ್ದು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಮಗೆ ಓಡಾಡಲು ಬೇರೆ ಯಾವುದೇ ದಾರಿ ಇಲ್ಲ. ಹೀಗಾಗಿ ಸರ್ಕಾರ ಕೂಡಲೇ ರಸ್ತೆಯನ್ನು ದುರಸ್ತಿ ಪಡಿಸುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ವಿಜಯಪುರದಲ್ಲೂ ಕಂಪಿಸಿದ ಭೂಮಿ – ಓಡೋಡಿ ಮನೆಯಿಂದ ಹೊರ ಬಂದ ಜನತೆ

    ಇನ್ನೊಂದೆಡೆ ಭಾರೀ ಮಳೆಯಿಂದ ಕೊಪ್ಪ ತಾಲೂಕಿನ ಮೇಗುಂತ ಸಮೀಪದ ಗುಡ್ಡೆ ತೋಟ ಗ್ರಾಮದಲ್ಲಿ ಮನೆಯ ಪಕ್ಕದ ಭೂಮಿ ಕುಸಿಯುತ್ತಿದ್ದು, ಮನೆಯನ್ನೇ ಕಳೆದುಕೊಳ್ಳುವ ಆತಂಕದಲ್ಲಿ 3 ಕುಟುಂಬಗಳು ಬದುಕುತ್ತಿದೆ. ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿರುವ ನಾರಾಯಣ್ ಹಾಗೂ ಸುಮತಿ ದಂಪತಿ ಮನೆ ಕುಸಿದು ಬಿದ್ದರೆ ಎಲ್ಲಿ ಹೋಗುವುದು ಎಂದು ಭಯಗೊಂಡು ಕೆಲಸಕ್ಕೂ ಹೋಗದೆ ಮನೆಯನ್ನೇ ಕಾಯುತ್ತಾ ಕೂತಿದ್ದಾರೆ.

    ಸರ್ಕಾರ ನಮಗೆ ಬೇರೆ ಜಾಗ ಹಾಗೂ ಮನೆ ಕೊಟ್ಟರೆ ನಾವು ಇಲ್ಲಿಂದ ಹೋಗಲು ಸಿದ್ದ ಎಂದು ಹೇಳಿದ್ದಾರೆ. ಆದರೆ ಪ್ರತಿ ಮಳೆಗಾಲದಲ್ಲೂ ಬಂದು ವಿಚಾರಿಸುವ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಹೀಗಾಗಿ ನಾವು ಇಲ್ಲಿಯೇ ಬದುಕುತ್ತಿದ್ದೇವೆ. ಸರ್ಕಾರ ನಮಗೆ ಬೇರೆ ಜಾಗ ನೀಡಿದರೆ ನಾವು ಹೋಗಲು ಸಿದ್ದ ಎನ್ನುತ್ತಿದ್ದಾರೆ ಇಲ್ಲಿನ ಜನ. ಇದನ್ನೂ ಓದಿ: ಅಮರನಾಥ ಮೇಘಸ್ಫೋಟ: ಸಾವಿನ ಸಂಖ್ಯೆ 15ಕ್ಕೆ ಏರಿಕೆ, 40 ಮಂದಿ ನಾಪತ್ತೆ – ಯಾತ್ರೆಯಲ್ಲಿ ಸಿಲುಕಿದವರಿಗೆ ಕರ್ನಾಟಕ ಸರ್ಕಾರದಿಂದ ಸಹಾಯವಾಣಿ

    ಇರುವುದು ಒಂದು ಸೂರು. ಕಷ್ಟಪಟ್ಟು ಕೂಲಿ-ನಾಲಿ ಮಾಡಿ ಹೊಟ್ಟೆ-ಬಟ್ಟೆ ಕಟ್ಟಿ ಮಾಡಿರುವ ಮನೆ. ಸುಮಾರು 35 ವರ್ಷಗಳಿಂದ ಇಲ್ಲಿಯೇ ಬದುಕುತ್ತಿದ್ದೇವೆ. ನಮಗೆ ಈ ಮನೆ ಬಿಟ್ಟರೆ ಬೇರೆ ಗತಿ ಇಲ್ಲ. ಇಡೀ ದಿನ ಕೆಲಸ ಮಾಡಿ ಬಂದಾಗಲೂ ರಾತ್ರಿ ಮಳೆ ಬಂದರೆ ಮನೆ ಎಲ್ಲಿ ಕುಸಿದು ಬೀಳುತ್ತೋ ಎಂದು ನಿದ್ದೆ ಬರುವುದಿಲ್ಲ ಎಂದು ಮನೆ ಮಾಲೀಕ ನಾರಾಯಣ್ ಕಣ್ಣೀರಿಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸೂಪರ್ ಸ್ಟಾರ್ ರಜನಿಕಾಂತ್ ಮನೆ ಪಕ್ಕದಲ್ಲೇ ನಯನತಾರಾ ಮನೆ ಖರೀದಿ

    ಸೂಪರ್ ಸ್ಟಾರ್ ರಜನಿಕಾಂತ್ ಮನೆ ಪಕ್ಕದಲ್ಲೇ ನಯನತಾರಾ ಮನೆ ಖರೀದಿ

    ಯನತಾರಾ ಮದುವೆ ಆಗುತ್ತಿದ್ದಂತೆಯೇ ಅವರ ಬದುಕಿನಲ್ಲಿ ನಾನಾ ಸಂಭ್ರಮಗಳು ಒಂದುಗೂಡುತ್ತಿವೆ. ಈಗಾಗಲೇ ನಯನತಾರಾ ಮತ್ತು ವಿಘ್ನೇಶ್ ಶಿವನ್ ಹಲವು ಆಸ್ತಿಗಳನ್ನು ಹೊಂದಿದ್ದಾರೆ. ಇದೀಗ ಮತ್ತೊಂದು ಮನೆಯನ್ನು ಖರೀದಿಸುವ ಪ್ಲ್ಯಾನ್ ಮಾಡುತ್ತಿದ್ದಾರೆ. ಆ ಮನೆಯ ಕಾರಣದಿಂದಾಗಿಯೇ ನಯನತಾರಾ ಸುದ್ದಿ ಆಗಿದ್ದಾರೆ. ಅಲ್ಲದೇ, ತಮ್ಮ ನೆಚ್ಚಿನ ನಟನ ಮನೆಯ ಪಕ್ಕದಲ್ಲೇ ಆ ಮನೆ ಇರುವುದರು ಅವರ ಸಂಭ್ರಮಕ್ಕೆ ಮತ್ತಷ್ಟು ಕಾರಣವಾಗಿದೆ.

    ರಜನಿಕಾಂತ್ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದವರು ನಯನತಾರಾ, ಅವರೊಂದಿಗೆ ನಟಿಸಲು ಅವಕಾಶ ಸಿಕ್ಕಾಗ ಜೀವಮಾನ ಸಾಧನೆ ಅಂದುಕೊಂಡಿದ್ದರು. ರಜನಿಕಾಂತ್ ಅವರನ್ನು ದಿನವೂ ನೋಡಬೇಕು ಎಂದು ಇಷ್ಟಪಟ್ಟರು. ಇದೀಗ ಆ ಆಸೆಯನ್ನು ಅವರ ಮನೆಯ ಪಕ್ಕದಲ್ಲೇ ಮನೆಯನ್ನು ಖರೀದಿಸುವ ಮೂಲಕ ಈಡೇರಿಸಿಕೊಳ್ಳುತ್ತಿದ್ದಾರಂತೆ ನಯನತಾರ. ಮದುವೆಯ ನಂತರ ಪತಿಯು ಅವರಿಗೆ ಕೊಡುತ್ತಿರುವ ದುಬಾರಿ ಗಿಫ್ಟ್ ಇದಾಗಿದೆಯಂತೆ. ಇದನ್ನೂ ಓದಿ:ತೆಲುಗಿನ ಮಹೇಶ್ ಬಾಬುಗೆ ತಂದೆಯಾಗಿ ನಟಿಸ್ತಾರಾ ರಿಯಲ್ ಸ್ಟಾರ್ ಉಪೇಂದ್ರ

    ರಜನಿಕಾಂತ್ ಮನೆಯ ಪಕ್ಕದಲ್ಲೇ ನಯನತಾರಾ ಮನೆಯನ್ನು ಖರೀದಿಸುತ್ತಿದ್ದಾರೆ ಎನ್ನುವುದು ತಮಿಳು ಸಿನಿಮಾ ರಂಗದಲ್ಲಿ ಸಖತ್ ಸುದ್ದಿ ಆಗಿದೆ. ಆ ಮನೆ ಯಾವುದು ಎನ್ನುವುದು ಇನ್ನೂ ನಿಕ್ಕಿ ಆಗದೇ ಹೋದರೂ, ಯಾವ ಮನೆಯನ್ನು ಅವರು ಖರೀದಿಸಲಿದ್ದಾರೆ ಎನ್ನುವ ಕುತೂಹಲ ಕೂಡ ಮೂಡಿದೆ. ಹಾಗಂತ ರಜನಿಕಾಂತ್ ಅವರ ಪಕ್ಕದ ಮನೆಯವರು ಮನೆ ಮಾರಾಟಕ್ಕೆ ಇಟ್ಟಿದ್ದಾರಾ ಎನ್ನುವ ಪ್ರಶ್ನೆ ಕೂಡ ಇದೀಗ ಎದುರಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಅಬ್ಬರದ ಮಳೆ – ಮನೆಯ ಮೇಲೆ ಮರ ಬಿದ್ದು 6 ಜನರಿಗೆ ಗಾಯ

    ಅಬ್ಬರದ ಮಳೆ – ಮನೆಯ ಮೇಲೆ ಮರ ಬಿದ್ದು 6 ಜನರಿಗೆ ಗಾಯ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆಯಾಗುತ್ತಿದ್ದು, ಮನೆ ಮೇಲೆ ಮರ ಬಿದ್ದು 6 ಜನರಿಗೆ ಗಾಯವಾಗಿದೆ.

    ಮಳೆಯ ಅಬ್ಬರಕ್ಕೆ ಜಿಲ್ಲೆಯ ಜೋಯಿಡಾ ತಾಲೂಕಿನ ಅನಮೋಡನ ಘಟ್ಟದಲ್ಲಿ ಗುಡ್ಡ ಕುಸಿತವಾಗಿ ರಾಷ್ಟ್ರೀಯ ಹೆದ್ದಾರಿ ಎನ್‍ಹೆಚ್4ಂಯ ಗೋವಾ-ಅನಮೋಡ ರಸ್ತೆ ತಾತ್ಕಾಲಿಕ ಸ್ಥಗಿತವಾಗಿದೆ. ಪ್ರಸ್ತುತ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದ್ದರಿಂದ ಜೊಯಿಡಾದ ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಆಡಳಿತದಿಂದ ಗುಡ್ಡದ ಮಣ್ಣಿನ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಇದನ್ನೂ ಓದಿ: ಕಾಂಗ್ರೆಸ್ಸಿಗೆ ಮತ ಹಾಕಿ ವ್ಯರ್ಥ ಮಾಡಬೇಡಿ, ಬಿಜೆಪಿಯಿಂದ ತೃಪ್ತಿ ಹೊಂದದವರು ನಮಗೆ ಮತ ಹಾಕಿ: ಕೇಜ್ರಿವಾಲ್

    ಹೊನ್ನಾವರದ ಹಳದಿಪುರದ ಬಗ್ರಾಣಿ ಕ್ರಾಸ್ ಬಳಿ ಮನೆಯ ಮೇಲೆ ಮರ ಬಿದ್ದು ಆರು ಜನರಿಗೆ ಗಾಯವಾಗಿದ್ದು, ಹತ್ತುಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ. ಸಂದ್ಯ ಶೇಟ್, ಅನಿತಾ ಯೋಗೇಶ್ ಶೇಟ್, ಅಕಿಲೇಶ್ ಶೇಟ್, ರೂಪ.ಆರ್, ಶೇಟ್, ಯೋಗೇಶ್ ಹರಿಕಾಂತ್, ಆರುಷ್ ಹರಿಕಾಂತ್ ಗಾಯಗೊಂಡವರಾಗಿದ್ದು, ಗಾಯಾಳುಗಳನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬಡವರಿಗೆ ಸೂರು ಕಲ್ಪಿಸಲು 5 ಸಾವಿರ ಎಕರೆ ಸರ್ಕಾರಿ ಜಮೀನು ಮೀಸಲು: ಸಿಎಂ

    ಬಡವರಿಗೆ ಸೂರು ಕಲ್ಪಿಸಲು 5 ಸಾವಿರ ಎಕರೆ ಸರ್ಕಾರಿ ಜಮೀನು ಮೀಸಲು: ಸಿಎಂ

    ಬೆಂಗಳೂರು: ದೇಶದಲ್ಲಿ ಬಡವರ ತಲೆಯ ಮೇಲೆ ಸೂರಿಲ್ಲ ಎನ್ನುವುದು ದೇಶವ್ಯಾಪಿ ಸಮಸ್ಯೆಯಾಗಿದೆ. ಇದನ್ನು ಹೋಲಾಡಿಸುವ ಪ್ರಯತ್ನ ರಾಜ್ಯದಲ್ಲಿ ಆಗುತ್ತಿದ್ದು, ಬಡವರಿಗಾಗಿ 5 ಸಾವಿರ ಎಕರೆ ಸರ್ಕಾರಿ ಜಮೀನು ಮೀಸಲಿಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

    ಅವರಿಂದು ರಾಜರಾಜೇಶ್ವರಿನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ 1,588 ಮನೆಗಳ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಇದೇ ವೇಳೆ ವಿಧಾನಸೌಧ ವ್ಯಾಪ್ತಿಯಲ್ಲಿನ ಕೊಳೆಗೇರಿ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಿ ಬಳಿಕ ಮಾತನಾಡಿದರು. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆಗೆ ಲಾಲೂ ಪ್ರಸಾದ್ ಯಾದವ್ ಸ್ಪರ್ಧೆ

    ನಮ್ಮ ಸರ್ಕಾರ ಈಗ 5 ಲಕ್ಷ ಮನೆ ಪೂರ್ಣಗೊಳಿಸುತ್ತಿದೆ. ಕಟ್ಟಿರುವ ಮನೆಗಳನ್ನು ಪೂರ್ಣಗೊಳಿಸುವ ಸಂಕಲ್ಪವನ್ನು ನಮ್ಮ ಸರ್ಕಾರ ಮಾಡಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೀಡುತ್ತಿದ್ದ 1.75 ಲಕ್ಷ ಮೊತ್ತವನ್ನು 2 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಜಮೀನಿನ ಸಮಸ್ಯೆ ಬಗೆಹರಿಸಲು 5,000 ಎಕರೆ ಸರ್ಕಾರಿ ಜಮೀನು ಗುರುತಿಸಲಾಗಿದ್ದು, ಬಡವರಿಗಾಗಿ ಇದನ್ನು ಮೀಸಲಿಟ್ಟು, ಅಲ್ಲಿ ನಿವೇಶನ ಮತ್ತು ಮನೆ ಕೊಡುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಘೋಷಿಸಿದ್ದಾರೆ.

    ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ಬೃಹತ್ ಪ್ರಮಾಣದಲ್ಲಿ ತೆಗೆದುಕೊಂಡು ಮುಂದಿನ 5 ವರ್ಷಗಳಲ್ಲಿ ಎಲ್ಲರ ತಲೆಯ ಮೇಲೆ ಸೂರು ಇರಬೇಕೆನ್ನುವ ವಿಚಾರವನ್ನಿಟ್ಟುಕೊಂಡು ಕಾರ್ಯಕ್ರಮ ರೂಪಿಸಲಾಗಿದೆ. ಕರ್ನಾಟಕದಲ್ಲಿ ದೇವರಾಜ ಅರಸು ಅವರ ಕಾಲದಿಂದಲೂ ಮನೆಗಳ ನಿರ್ಮಾಣಕ್ಕೆ ವಿಶೇಷ ಪ್ರಯತ್ನಗಳಾಗಿವೆ. ಆದರೆ ಬೆಳೆಯುತ್ತಿರುವ ಜನಸಂಖ್ಯೆಯಿಂದಾಗಿ ಮನೆಗಳ ನಿರ್ಮಾಣ ದೊಡ್ಡ ಸವಾಲಾಗಿದೆ ಎಂದಿದ್ದಾರೆ.

    1 ಲಕ್ಷ ಮನೆ ನಿರ್ಮಿಸುವ ಗುರಿ: ರಾಜ್ಯ ಸರ್ಕಾರ ಈಗಾಗಲೇ 52 ಸಾವಿರ ಮನೆಗಳನ್ನು ಪೂರ್ತಿಗೊಳಿಸಿದೆ. ಇನ್ನೂ 50 ಸಾವಿರ ಮನೆಗಳಿಗೆ ಇದೇ ವರ್ಷಕ್ಕೆ ಕಾರ್ಯಾದೇಶ ನೀಡಿದ್ದೇವೆ. ಅಲ್ಲದೆ ಫಲಾನುಭವಿಗಳಿಂದ ವಂತಿಗೆ ಬರುವುದು ತಡವಾಗುತ್ತಿದ್ದು, ಅವುಗಳನ್ನು ಪೂರ್ಣ ಮಾಡಲು ತಡವಾಗುತ್ತಿದೆ ಎಂಬುದನ್ನು ಸರ್ಕಾರ ಮನಗಂಡಿದ್ದು, ಅದಕ್ಕಾಗಿ ಬಡವರ ಪರವಾಗಿ ಬ್ಯಾಂಕುಗಳಿಗೆ ಸರ್ಕಾರ ಗ್ಯಾರಂಟಿ ನೀಡಿ 500 ಕೋಟಿ ರೂ.ಗಳನ್ನು ಸಾಲ ಪಡೆಯಲು ಮುಂದಾಗುತ್ತಿದೆ. ಇದರಿಂದ ಸಮಸ್ಯೆಗೂ ಪರಿಹಾರ ನೀಡಿದಂತಾಗುತ್ತದೆ. ಮನೆ ಪೂರ್ತಿಯಾದಾಗ ಕಂತಿನಲ್ಲಿ ನೀಡುವ ವ್ಯವಸ್ಥೆ ಮಾಡುತ್ತೇವೆ. ಬಡವರಿಗೆ ಸಹಾಯ ಮಾಡಲು ಎಲ್ಲೆಲ್ಲಿ ಸಾಧ್ಯವಿದೆಯೋ ಅದನ್ನು ಮಾಡುತ್ತಿದ್ದೇವೆ ಎಂದು ಭರವಸೆ ನೀಡಿದ್ದಾರೆ.

  • ಶಾರುಖ್ ಖಾನ್ ಮನೆ ‘ಮನ್ನತ್’ ನೇಮ್ ಪ್ಲೇಟ್ ನಾಪತ್ತೆ: ಇದರ ಹಿಂದಿದೆ ಭಾರೀ ರಹಸ್ಯ

    ಶಾರುಖ್ ಖಾನ್ ಮನೆ ‘ಮನ್ನತ್’ ನೇಮ್ ಪ್ಲೇಟ್ ನಾಪತ್ತೆ: ಇದರ ಹಿಂದಿದೆ ಭಾರೀ ರಹಸ್ಯ

    ಶಾರುಖ್ ಖಾನ್ ಕನಸಿನ ಸೌಧ ‘ಮನ್ನತ್’. ಮುಂಬೈನ ಬಾಂದ್ರಾ ಎನ್ನುವ ದುಬಾರಿ ಪ್ರದೇಶದಲ್ಲಿ ಈ ಮನೆಯಿದ್ದು, ಈ ಮನೆಯಿಂದಲೇ ಸಮುದ್ರವನ್ನು ವೀಕ್ಷಿಸುವಂತೆ ಕಟ್ಟಿದ್ದಾರೆ ಶಾರುಖ್ ಮತ್ತು ಪತ್ನಿ ಗೌರಿ ಖಾನ್. ಬರೋಬ್ಬರಿ 200 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಮನ್ನತ್ ಒಂದು ಅರ್ಥದಲ್ಲಿ ಪ್ರವಾಸಿ ತಾಣವೇ ಆಗಿದೆ. ಮುಂಬೈಗೆ ಬಂದವರು ದೂರದಿಂದಲೇ ಮನ್ನತ್ ಕಣ್ಣುತುಂಬಿಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ. ಇದನ್ನೂ ಓದಿ : ನಯನತಾರಾ ಮದುವೆ ದಿನಾಂಕ ಬದಲು, ರೆಸಾರ್ಟ್ ನಲ್ಲಿ ಸಪ್ತಪದಿ ತುಳಿಯಲಿದೆ ಜೋಡಿ

    ಇನ್ನೂರು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಮನ್ನತ್ ಸೌಧದಲ್ಲಿ ಅಷ್ಟೇ ಬೆಲೆ ಬಾಳುವ ವಸ್ತುಗಳು ಇವೆ ಎನ್ನುವುದು ಗುಟ್ಟಿನ ಸಂಗತಿ. ಈಗ ಆ ಗುಟ್ಟುಗಳೆಲ್ಲ ಒಂದೊಂದೆ ರಟ್ಟಾಗುತ್ತಿವೆ. ಈ ಮೊದಲು ಮನ್ನತ್ ಮನೆಯಲ್ಲಿರುವ ಟಿವಿ ರೇಟ್ ಬಗ್ಗೆ ಮೊನ್ನೆಯಷ್ಟೇ ಟ್ರೆಂಡ್ ಆಗಿತ್ತು. ಭಾರೀ ದುಬಾರಿಯ ಟಿವಿಗಳನ್ನು ಈ ಮನೆಯಲ್ಲಿ ಅಳವಡಿಸಲಾಗಿದೆಯಂತೆ. ಅದು ಕೋಟಿ ಲೆಕ್ಕದಲ್ಲಿ ಎನ್ನುವುದು ಮತ್ತೊಂದು ಅಚ್ಚರಿಯ ಸಂಗತಿ. ಇದನ್ನೂ ಓದಿ : ರಜನಿಕಾಂತ್ ನನ್ನ ವೈರಿಯಲ್ಲ ಎಂದ ಕಮಲ್ ಹಾಸನ್

    ಟಿವಿ ನಂತರ ಮನ್ನತ್ ಮನೆಯ ನೇಮ್ ಪ್ಲೇಟ್ ಬಗ್ಗೆಯೂ ಭಾರೀ ಸುದ್ದಿ ಆಗಿತ್ತು. ಬರೋಬ್ಬರಿ 25 ಲಕ್ಷ ರೂಪಾಯಿ ವೆಚ್ಚದಲ್ಲಿ ನೇಮ್ ಪ್ಲೇಟ್ ತಯಾರಾಗಿದೆಯಂತೆ. ವಜ್ರದ ಹರಳುಗಳನ್ನು ಈ ನೇಮ್ ಪ್ಲೇಟ್ ನಲ್ಲಿ ಅಳವಡಿಸಿದ್ದಾರೆ ಎನ್ನುವ ಸುದ್ದಿಯೂ ಇದೆ. ರಾತ್ರಿ ವೇಳ ಫಳಫಳ ಹೊಳೆಯುವಂತೆ ಇದನ್ನು ವಿನ್ಯಾಸ ಮಾಡಲಾಗಿದೆ. ಈಗ ಆ ನೇಮ್ ಪ್ಲೇಟ್ ನಾಪತ್ತೆ ಆಗಿದೆ ಎನ್ನುವ ಸುದ್ದಿಯಿದೆ. ಇದನ್ನೂ ಓದಿ  : ಸಿನಿಮಾವಾಗಲಿದೆ ‘ಟೈಂಪಾಸ್’ ಬೆಡಗಿ ಪ್ರೋತಿಮಾ ಬೇಡಿ ಬಯೋಪಿಕ್

    ಕಳೆದ ಒಂದು ವಾರದಿಂದ ‘ಮನ್ನತ್’ ಎನ್ನುವ ನೇಮ್ ಪ್ಲೇಟ್ ಮನೆಯ ಮುಂದೆ ಕಾಣಿಸುತ್ತಿಲ್ಲವಂತೆ. ಕಳ್ಳತನವಾಗಿದೆಯಾ? ಅಥವಾ ರಿಪೇರಿಗಾಗಿ ಅದನ್ನು ಬಿಚ್ಚಿಡಲಾಗಿದೆಯಾ? ಎನ್ನುವುದು ಸದ್ಯಕ್ಕೆ ಸಸ್ಪೆನ್ಸ್. ಆದರೆ, ನೇಮ್ ಪ್ಲೇಟ್ ಮಾತ್ರ ಇರಬೇಕಾಗಿದ್ದ ಜಾಗದಲ್ಲಿ ಕಾಣಿಸುತ್ತಿಲ್ಲ ಎನ್ನುವುದು ಲೇಟೆಸ್ಟ್ ಸುದ್ದಿ. ಈ ವಿಚಾರ ಕೂಡ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ.  ಇದನ್ನೂ ಓದಿ : ಹಾಲಿವುಡ್ ಖ್ಯಾತ ನಟ ರೇ ಲಿಯೊಟ್ಟಾ ಮಲಗಿದ್ದಾಗಲೇ ನಿಧನ

    ಶಾರುಖ್ ಖಾನ್ ಆಪ್ತರು ಹೇಳುವ ಪ್ರಕಾರ, ರಿಪೇರಿಗಾಗಿ ಅದನ್ನು ಬಿಚ್ಚಿಡಲಾಗಿದೆಯಂತೆ. ಅದು ಹೊಸ ನೇಮ್ ಪ್ಲೇಟ್ ಆದ ಕಾರಣ ಮತ್ತು ಲೈಟಿಂಗ್ ವ್ಯವಸ್ಥೆಯನ್ನು ಅದರಲ್ಲಿ ಅಳವಡಿಸಿದ್ದರಿಂದ, ರಿಪೇರಿಗೆ ಬಂದಿದೆಯಂತೆ. ಅದನ್ನು ಸರಿ ಮಾಡಿಸಿ, ಮತ್ತೆ ಹಾಕುತ್ತಾರೆ ಎಂದು ಹೇಳಲಾಗುತ್ತಿದೆ.