Tag: house

  • ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ – ದಂಪತಿ ಸಜೀವದಹನ

    ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ – ದಂಪತಿ ಸಜೀವದಹನ

    – ಅಜ್ಜ, ಅಜ್ಜಿಯೊಂದಿಗೆ ಮಲಗಿದ್ದ ಮಕ್ಕಳು ಪ್ರಾಣಾಪಾಯದಿಂದ ಪಾರು

    ಯಾದಗಿರಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ (Short Circuit) ಮನೆಗೆ ಬೆಂಕಿ (Fire) ಹೊತ್ತಿಕೊಂಡು ದಂಪತಿ (Couple) ಸಜೀವದಹನವಾಗಿರುವ ದಾರುಣ ಘಟನೆ ಯಾದಗಿರಿ (Yadgiri) ಜಿಲ್ಲೆಯ ಸೈದಾಪುರ ಪಟ್ಟಣದಲ್ಲಿ ನಡೆದಿದೆ.

    ರಾಗಯ್ಯ ಹಾಗೂ ಶಿಲ್ಪಾ ಬೆಂಕಿಯ ಕೆನ್ನಾಲಿಗೆಗೆ ಸಿಕ್ಕು ಮೃತಪಟ್ಟ ದುರ್ದೈವಿ. ದಂಪತಿ ಮನೆಯಲ್ಲಿಯೇ ಬಟ್ಟೆ ಅಂಗಡಿಯನ್ನೂ ಇಟ್ಟುಕೊಂಡಿದ್ದರು. ಸೋಮವಾರ ನಸುಕಿನ ಜಾವ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಮನೆಗೆ ಬೆಂಕಿ ತಗುಲಿತ್ತು. ಮನೆಯೊಳಗೆ ದಟ್ಟ ಹೊಗೆ ಅವರಿಸಿಕೊಂಡಿದ್ದರಿಂದ ದಂಪತಿ ಮನೆಯಿಂದ ಹೊರಬರಲಾರದೇ ಪರದಾಡಿ ಕೊನೆಗೆ ಬೆಂಕಿಗಾಹುತಿಯಾಗಿದ್ದಾರೆ. ಇದನ್ನೂ ಓದಿ: 10ರ ಬಾಲಕನ ನರಬಲಿ – ಕುಟುಂಬದವರೇ ಕತ್ತು ಸೀಳಿ ಕೊಂದ್ರು

    ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರು ಅಜ್ಜ ಹಾಗೂ ಅಜ್ಜಿಯೊಂದಿಗೆ ಮನೆಯ ಕೆಳಮಹಡಿಯಲ್ಲಿ ಮಲಗಿದ್ದರು. ಇದರಿಂದಾಗಿ ಸದ್ಯ ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಕೊನೆಗೆ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಸೈದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಅಮಿತ್ ಶಾ ಸಂಚಾರದ ವೇಳೆ ಭದ್ರತಾ ವೈಫಲ್ಯ – ವಾಹನಗಳನ್ನು ಬೆನ್ನಟ್ಟಿದ ಬೈಕರ್ಸ್

  • ಬೇಳೂರು ರಾಘವೇಂದ್ರ ಶೆಟ್ಟಿ ಮನೆ ಹರಾಜು – ಸೆಕ್ಯುರಿಟಿ ಗಾರ್ಡ್ ಕಣ್ತಪ್ಪಿಸಿ ಅಕ್ರಮ ಪ್ರವೇಶ

    ಬೇಳೂರು ರಾಘವೇಂದ್ರ ಶೆಟ್ಟಿ ಮನೆ ಹರಾಜು – ಸೆಕ್ಯುರಿಟಿ ಗಾರ್ಡ್ ಕಣ್ತಪ್ಪಿಸಿ ಅಕ್ರಮ ಪ್ರವೇಶ

    ಬೆಂಗಳೂರು: ಕರ್ನಾಟಕ ಕರಕುಶಲ ವಸ್ತುಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿಯವರ (Beluru Raghavendra Shetty) ಮನೆಯನ್ನು ಬ್ಯಾಂಕ್ ಹರಾಜಿಗಿಟ್ಟಿದೆ. ಆದರೆ ಹರಾಜಿಗೂ ಮುನ್ನವೇ ಬ್ಯಾಂಕ್ (Bank) ಕಾವಲಿಗಿಟ್ಟಿದ್ದ ಸೆಕ್ಯುರಿಟಿ ಗಾರ್ಡ್ ಕಣ್ತಪ್ಪಿಸಿ ಅಕ್ರಮ ಪ್ರವೇಶ ಮಾಡಿದ್ದಾರೆ.

    ಬೇಳೂರು ರಾಘವೇಂದ್ರ ಶೆಟ್ಟಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 5 ಕೋಟಿ ರೂ.ಗೂ ಅಧಿಕ ಸಾಲ (Loan) ಪಡೆದಿದ್ದರು. ಸಾಲವನ್ನು ಮರುಪಾವತಿ ಮಾಡದ ಹಿನ್ನೆಲೆ ನ್ಯಾಯಾಲಯ ರಾಘವೇಂದ್ರ ಅವರ ಮನೆಯನ್ನು ಬ್ಯಾಂಕ್ ವಶಕ್ಕೆ ನೀಡಿತ್ತು. ಇದೀಗ ಬ್ಯಾಂಕ್ 3 ದಿನಗಳಲ್ಲಿ ಮನೆಯನ್ನು ಹರಾಜಿಗಿಡಲು ಮುಂದಾಗಿದೆ.

    ಸಂಜಯನಗರದ ಡಾಲರ್ಸ್ ಕಾಲೋನಿಯಲ್ಲಿ ಎಸ್‌ಎಂಸಿ ಬೆವರ್ಲಿ ಅಪಾರ್ಟ್ಮೆಂಟ್‌ನಲ್ಲಿ ರಾಘವೇಂದ್ರ ಅವರ ಈ ಫ್ಲ್ಯಾಟ್ ಇದೆ. ರಾಘವೇಂದ್ರ ಮಾಡಿದ್ದ ಸಾಲ ಮರುಪಾವತಿ ಮಾಡದ ಹಿನ್ನೆಲೆ ನ್ಯಾಯಾಲಯ ಕಳೆದ ಡಿಸೆಂಬರ್‌ನಲ್ಲಿ ಆದೇಶ ನೀಡಿ ಮನೆಯನ್ನು ಬ್ಯಾಂಕ್ ವಶಕ್ಕೆ ನೀಡಿದೆ. ಇದನ್ನೂ ಓದಿ: ಅನ್ಯಕೋಮಿನವರ ವ್ಯಾಪಾರಕ್ಕೆ ನಿರ್ಬಂಧ ಹೇರಿ – ಈಗ ಕಿಗ್ಗಾದಲ್ಲೂ ಧರ್ಮ ದಂಗಲ್

    ಇದೀಗ ಬ್ಯಾಂಕ್ ವಶಕ್ಕೆ ಪಡೆದಿರುವ ಮನೆಯನ್ನು ಹರಾಜು ಹಾಕಲು ಸಿದ್ಧತೆ ನಡೆಸುತ್ತಿದೆ. ಆದರೆ ಈ ನಡುವೆ ಬುಧವಾರ ಮಧ್ಯರಾತ್ರಿ ರಾಘವೆಂದ್ರ ಶೆಟ್ಟಿ ಕಡೆಯವರು ಮನೆಗೆ ಹಾಕಲಾಗಿದ್ದ ಸೀಲ್ ಅನ್ನು ಒಡೆದು ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ.

    ಮನೆಯಲ್ಲಿ ಅಕ್ರಮ ಪ್ರವೇಶ ಮಾಡಿರುವುದನ್ನು ತಿಳಿದ ಪೊಲೀಸರು ಹಾಗೂ ಬ್ಯಾಂಕ್ ಅಧಿಕಾರಿಗಳು ಮನೆಯೊಳಗಿದ್ದವರಿಗೆ ಬಾಗಿಲು ತೆರೆಯುವಂತೆ ಸೂಚಿಸಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ಬಾಗಿಲನ್ನು ತೆರೆದಿದ್ದಾರೆ. ಅವರನ್ನು ಬಲವಂತವಾಗಿ ಮನೆಯಿಂದ ಹೊರಹಾಕಲು ಪ್ರಯತ್ನಿಸಿದರೆ ಆತ್ಮಹತ್ಯೆಯ ಬೆದರಿಕೆ ಒಡ್ಡುತ್ತಿದ್ದಾರೆ.

    ಇದೀಗ ಅತಿಕ್ರಮವಾಗಿ ಮನೆ ಪ್ರವೇಶ ಮಾಡಿರುವುದಕ್ಕೆ ಸಂಬಂಧಪಟ್ಟಂತೆ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ಗೆ ಪ್ರತಿಷ್ಠಿತ ವರ್ಷದ ಗವರ್ನರ್‌ ಪ್ರಶಸ್ತಿ

  • ಉರ್ಫಿ ಜಾವೇದ್‌ಗೆ ಮನೆ ಬೇಕಂತೆ: ಮಾಲೀಕರೆ ಗಮನಿಸಿ

    ಉರ್ಫಿ ಜಾವೇದ್‌ಗೆ ಮನೆ ಬೇಕಂತೆ: ಮಾಲೀಕರೆ ಗಮನಿಸಿ

    ಚಿತ್ರವಿಚಿತ್ರ ಕಾಸ್ಟ್ಯೂಮ್‌ಗಳಿಂದಾಗಿಯೇ ಸಖತ್ ಫೇಮಸ್ ಆಗಿರುವ ಉರ್ಫಿ ಜಾವೇದ್ (Urfi Javed) ಅವರಿಗೆ ಬಾಡಿಗೆಗೆ ಮನೆ ಬೇಕಾಗಿದೆಯಂತೆ. ಬಾಡಿಗೆ (Rent) ಮನೆ (House) ಹುಡುಕುವುದಕ್ಕಾಗಿಯೇ ಅವರು ಹಲವು ದಿನಗಳಿಂದ ಬೀದಿ ಬೀದಿ ಅಲೆಯುತ್ತಿದ್ದಾರಂತೆ. ಮನೆ ಖಾಲಿ ಇದ್ದರೂ, ತಮಗೆ ಮಾತ್ರ ಮನೆ ಕೊಡುವುದಿಲ್ಲ ಎಂದು ಉರ್ಫಿ ನೋವಿನಿಂದ ಮಾತನಾಡಿದ್ದಾರೆ. ಅದಕ್ಕೆ ಅವರು ತಮ್ಮದೇ ಆದ ಕಾರಣವನ್ನೂ ಕೊಟ್ಟಿದ್ದಾರೆ.

    ತಾವು ಅರೆಬರೆ ಬಟ್ಟೆಗಳನ್ನು ಹಾಕುವ ಕಾರಣಕ್ಕಾಗಿ ತಮ್ಮದೇ ಧರ್ಮದವರು ಮನೆ ಬಾಡಿಗೆ ಕೊಡುತ್ತಿಲ್ಲವಂತೆ. ತಾನು ಬೇರೆ ಧರ್ಮದವರು ಆಗಿರುವ ಕಾರಣಕ್ಕಾಗಿ ಇನ್ನುಳಿದ ಧರ್ಮದವರು ಮನೆ ನೀಡುತ್ತಿಲ್ಲವಂತೆ. ಹೀಗಾದರೆ, ನಾನು ವಾಸಿಸುವುದು ಹೇಗೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ನಾನೊಬ್ಬ ಕಲಾವಿದೆ ಎನ್ನುವುದನ್ನು ಮರೆತು, ನಾನು ಹಾಕುವ ಬಟ್ಟೆ ಮತ್ತು ನನ್ನ ಧರ್ಮದ ಆಧಾರದಿಂದ ನನ್ನನ್ನು ಅಳೆಯಲಾಗುತ್ತಿದೆ ಎಂದು ನೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ರಶ್ಮಿಕಾ ಮಂದಣ್ಣ ಪಾರ್ಟಿ

    ಮುಂಬೈ (Mumbai) ನಗರದಲ್ಲಿ ಅವರಿಗೆ ಯಾರೂ ಮನೆ ಕೊಡುತ್ತಿಲ್ಲವಂತೆ. ಮನೆ ಹುಡುಕಾಟದಲ್ಲೇ ಅವರು ಸಾಕಷ್ಟು ಸಮಯವನ್ನು ಕಳೆಯುತ್ತಿದ್ದಾರಂತೆ. ಮನೆ ಹುಡುಕುವುದರಲ್ಲೇ ಸಮಯ ವ್ಯರ್ಥವಾಗುತ್ತಿರುವುದರಿಂದ ಕಾಸ್ಟ್ಯೂಮ್ ಬಗ್ಗೆ ಯೋಚಿಸುವುದಕ್ಕೆ ಅವರಿಗೆ ಸಮಯವೇ ಸಿಗುತ್ತಿಲ್ಲ ಎಂದಿದ್ದಾರೆ ಉರ್ಫಿ. ಬಿಗ್ ಬಾಸ್ ಮಾಜಿ ಸ್ಪರ್ಧಿಯಾಗಿರುವ ಇವರು, ನಟನೆಗಿಂತಲೂ ಹೆಚ್ಚು ಫೇಮಸ್ ಆಗಿದ್ದು ಅರೆಬರೆಯ ಬಟ್ಟೆಗಳನ್ನು ತೊಡುವ ಮೂಲಕ. ಇದೇ ಅವರಿಗೆ ಈಗ ಮುಳುವಾಗಿದೆಯಂತೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮನೆಗೆ ಒಟ್ಟಿಗೆ ಎಂಟ್ರಿ ಕೊಟ್ಟ ಮಾಜಿ ಗೆಳೆಯ, ಪ್ರಿಯತಮ- ಬಾವಿಗೆ ಹಾರಿದ ಯುವತಿ!

    ಮನೆಗೆ ಒಟ್ಟಿಗೆ ಎಂಟ್ರಿ ಕೊಟ್ಟ ಮಾಜಿ ಗೆಳೆಯ, ಪ್ರಿಯತಮ- ಬಾವಿಗೆ ಹಾರಿದ ಯುವತಿ!

    ಭೋಪಾಲ್: ಮಾಜಿ ಗೆಳೆಯ (Ex- Boyfriend) ಹಾಗೂ ಪ್ರಿಯತಮ (Lover) ಒಟ್ಟಿಗೆ ಏಕಾಏಕಿ ಮನೆಗೆ ಬಂದಿದ್ದರಿಂದ ದಾರಿ ಕಾಣದೆ ಯುವತಿ ಬಾವಿಗೆ ಹಾರಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಯುವತಿ ಮನೆಗೆ ಬಂದ ಇಬ್ಬರೂ ಸಂಬಂಧದ ಬಗ್ಗೆ ನಿಜ ಹೇಳುವಂತೆ ಗಲಾಟೆ ಮಾಡಲು ಆರಂಭಿಸಿದ್ದಾರೆ. ಅಲ್ಲದೆ ಮಾತಿಗೆ ಮಾತು ಬೆಳೆಯುತ್ತಿದ್ದಂತೆಯೇ ಇಬ್ಬರೂ ಯುವತಿಗೆ ಥಳಿಸಿದ್ದಾರೆ. ಬಳಿಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಇದರಿಂದ ನೊಂದ ಯುವತಿ ಬಾವಿಗೆ ಹಾರಿದ್ದಾಳೆ.

    ಕೋಲು, ದೊಣ್ಣೆಗಳಿಂದ ಐದು ಮಂದಿ ಯುವತಿ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೆ ಆಕೆಯ ಮೇಲೆ ದೌರ್ಜನ್ಯವೆಸಗಿ, ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಅದರಲ್ಲೂ ಇಬ್ಬರೂ ಆಕೆಯನ್ನು ಹಿಡಿದುಕೊಂಡು ಥಳಿಸಲು ಆರಂಭಿಸಿದ್ದಾರೆ. ಈ ವೇಳೆ ಯುವತಿ ಅವರ ಕೈಯಿಂದ ತಪ್ಪಿಸಿಕೊಂಡು ಹೋಗಿ ಬಾವಿಗೆ ಬಿದ್ದಿದ್ದಾಳೆ.

    ಇತ್ತ ಯುವತಿ ಬಾವಿಗೆ ಹಾರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಸ್ಥಳಕ್ಕೆ ದೌಡಾಯಿಸಿ ಆಕೆಯನ್ನು ಬಾವಿಯಿಂದ ಮೇಲೆತ್ತುವ ಕೆಲಸ ಮಾಡಿದ್ದಾರೆ. ಬಳಿಕ ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಆಕೆಯ ಸ್ಥಿತಿ ಚಿಂತಾಜನಕವಾಗಿದ್ದು, ಐಸಿಯು (ICU) ವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇದನ್ನೂ ಓದಿ: 6 ವರ್ಷದ ಪ್ರೀತಿಗೆ ಬಿತ್ತು ಬ್ರೇಕ್- ನೇಣಿಗೆ ಶರಣಾದ ಯುವಕ

    ಇತ್ತ ಗ್ರಾಮಸ್ಥರು ಕೂಡಲೇ ಮನೆಗೆ ತೆರಳಿ ಇಬ್ಬರು ಯುವಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ನಂತರ ಯುವಕರಿಬ್ಬರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮಾಜಿ ಗೆಯನ ಜೊತೆ ಮಾತು ಬಿಟ್ಟಿರುವುದೇ ಘಟನೆಗೆ ಕಾರಣ ಎಂದು ಓರ್ವ ತಪ್ಪೊಪ್ಪಿಕೊಂಡಿದ್ದಾನೆ.

    Love

    ಪ್ರಸ್ತುತ ಇರುವ ಗೆಳೆಯನನ್ನು ಭೇಟಿಯಾಗಿರುವ ಮಾಜಿ ಗೆಳೆಯ ನಿರ್ಧರಿಸಿಯೇ ಇಬ್ಬರೂ ಒಟ್ಟಿಗೆ ಯುವತಿ ಮನೆಗೆ ಬಂದಿದ್ದಾರೆ. ಘಟನೆಯ ಬಳಿಕ ಯುವತಿ ತಂದೆ ಇಬ್ಬರು ಯುವಕರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೆ ಇಬ್ಬರನ್ನು ಬಂಧಿಸಿದ್ದು, ಮತ್ತೋರ್ವನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ತ್ರಿಪುರಾದ ಮಾಜಿ ಸಿಎಂ ಪೂರ್ವಜರ ಮನೆಗೆ ಬೆಂಕಿಯಿಟ್ಟ ದುಷ್ಕರ್ಮಿಗಳು

    ತ್ರಿಪುರಾದ ಮಾಜಿ ಸಿಎಂ ಪೂರ್ವಜರ ಮನೆಗೆ ಬೆಂಕಿಯಿಟ್ಟ ದುಷ್ಕರ್ಮಿಗಳು

    ಅಗರ್ತಲಾ: ತ್ರಿಪುರಾದ (Tripura) ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ (Biplab Kumar Deb) ಅವರ ಪೂರ್ವಜರ ಮನೆಗೆ ಮಂಗಳವಾರ ರಾತ್ರಿ ಕೆಲ ಕಿಡಿಗೇಡಿಗಳು ದಾಳಿ ನಡೆಸಿ ಬಳಿಕ ಬೆಂಕಿ (Fire) ಹಚ್ಚಿದ್ದಾರೆ.

    ತ್ರಿಪುರಾದ ಗೋಮತಿ ಜಿಲ್ಲೆಯ ಜಮ್ಜುರಿ ಗ್ರಾಮದಲ್ಲಿರುವ ದೇಬ್ ಅವರ ಪೂರ್ವಜರ ಮನೆಗೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ನಿವಾಸದ ಬಳಿಯಿದ್ದ ಕಾರು ಹಾಗೂ ಇತರ ವಾಹನಗಳನ್ನೂ ಧ್ವಂಸಗೊಳಿಸಿದ್ದಾರೆ. ಘಟನೆಗೆ ಸಂಬಂಧಿಸಿದ ವೀಡಿಯೋಗಳು ಹರಿದಾಡುತ್ತಿದ್ದು, ಮನೆ ಸೇರಿದಂತೆ ಪಕ್ಕದಲ್ಲಿದ್ದ ಅಂಗಡಿಗಳಿಗೂ ಬೆಂಕಿ ಹೊತ್ತಿಕೊಂಡಿರುವುದು ಕಂಡುಬಂದಿದೆ.

    ವರದಿಗಳ ಪ್ರಕಾರ, ದೇಬ್ ಅವರ ಸಂಬಂಧಿಕರು ತಮ್ಮ ತಂದೆ ಹಿರುಧನ್ ದೇಬ್ ಅವರ ವಾರ್ಷಿಕ ವಿಧಿ ವಿಧಾನಗಳ ವ್ಯವಸ್ಥೆ ಮಾಡಲು ಪೂರ್ವಜರ ಮನೆಗಾಗಮಿಸಿದ್ದರು. ಎಲ್ಲರೂ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದಾಗ ದುಷ್ಕರ್ಮಿಗಳ ತಂಡ ಮನೆ ಮೇಲೆ ದಾಳಿ ನಡೆಸಿದೆ. ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಹಲವಾರು ದ್ವಿಚಕ್ರ ವಾಹನಗಳು ಹಾಗೂ ಕಾರುಗಳನ್ನು ಕೂಡಾ ಧ್ವಂಸಗೊಳಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಬಿಜೆಪಿಗರಿಗೆ ಎಲೆಕ್ಷನ್ ಟಾಸ್ಕ್ ವರಿ- ಚುನಾವಣೆ ಮುನ್ನ ತ್ರಿಮೂರ್ತಿಗಳ ರಾಜ್ಯ ಪ್ರವಾಸ

    ದಾಳಿ ನಡೆಸಿರುವ ಕಿಡಿಗೇಡಿಗಳಿಗೆ ಪ್ರತಿಪಕ್ಷ ಸಿಪಿಐಎಂ ಬೆಂಬಲಿಸಿದೆ ಎಂದು ಆರೋಪಿಸಲಾಗಿದೆ. ಘಟನೆಗೂ ಮುನ್ನ ಸಿಪಿಐಎಂ ಶಾಸಕ ರತನ್ ಭೌಮಿಕ್ ಅದೇ ಗ್ರಾಮದಲ್ಲಿ ತಮ್ಮ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅವರ ಪಕ್ಷದ ಸಭೆ ಮುಗಿದ ಬಳಿಕ ಈ ಘಟನೆ ನಡೆದಿದೆ ಎನ್ನಲಾಗಿದೆ. ಇದನ್ನೂ ಓದಿ: ರಾಯಚೂರಿನ ರಿಮ್ಸ್‌ನಲ್ಲಿ ಹಂದಿಗಳ ಕಾಟ- ಬಾಣಂತಿಯರು, ಶಿಶುಗಳ ವಾರ್ಡ್‍ನಲ್ಲಿ ಆತಂಕ

    Live Tv
    [brid partner=56869869 player=32851 video=960834 autoplay=true]

  • ಮನೆಯೊಂದು ಎರಡು ರಾಜ್ಯಗಳಿಗೆ ಹಂಚಿಕೆ – ಅರ್ಧ ಮಹಾರಾಷ್ಟ್ರಕ್ಕೆ ಇನ್ನರ್ಧ ತೆಲಂಗಾಣಕ್ಕೆ

    ಮನೆಯೊಂದು ಎರಡು ರಾಜ್ಯಗಳಿಗೆ ಹಂಚಿಕೆ – ಅರ್ಧ ಮಹಾರಾಷ್ಟ್ರಕ್ಕೆ ಇನ್ನರ್ಧ ತೆಲಂಗಾಣಕ್ಕೆ

    ಮುಂಬೈ: ಮನೆಯೊಂದನ್ನು (House) ಗಡಿ ಪ್ರದೇಶದಲ್ಲಿ ಕಟ್ಟಿ ಅರ್ಧ ಒಂದು ರಾಜ್ಯಕ್ಕೆ ಇನ್ನರ್ಧ ಇನ್ನೊಂದು ರಾಜ್ಯಕ್ಕೆ ಹಂಚಿಕೆಗೊಂಡಿರುವ ಅಪರೂಪದ ಪ್ರಸಂಗ ಚಂದ್ರಾಪುರ ಜಿಲ್ಲೆಯ ಮಹಾರಾಜಗುಡ ಗ್ರಾಮದ ಗಡಿ ಪ್ರದೇಶದಲ್ಲಿ ನಡೆದಿದೆ.

    13 ಜನರಿರುವ ಉತ್ತಮ್ ಪವಾರ್ ಎಂಬವರ ಕುಟುಂಬ ಮಹಾರಾಷ್ಟ್ರ (Maharashtra) ಮತ್ತು ತೆಲಂಗಾಣ (Telangana)  ಗಡಿ ಪ್ರದೇಶ ಚಂದ್ರಾಪುರ ಜಿಲ್ಲೆಯ ಮಹಾರಾಜಗುಡ ಗ್ರಾಮದಲ್ಲಿ ನೆಲೆಸಿದೆ. ಅವರ ಮನೆ ಮಹಾರಾಷ್ಟ್ರ ಮತ್ತು ತೆಲಂಗಾಣ ಎರಡೂ ರಾಜ್ಯಕ್ಕೆ ಅರ್ಧರ್ಧ ಹಂಚಿಕೆಯಾಗಿದೆ. ಮನೆಯ 4 ಕೊಠಡಿಗಳು ಮಹಾರಾಷ್ಟ್ರದಲ್ಲಿದ್ದರೆ 4 ತೆಲಂಗಾಣ ರಾಜ್ಯಕ್ಕೆ ಸೇರಿವೆ. ಮನೆ ಗಡಿ ಭಾಗದಲ್ಲಿರುವ ಕಾರಣ ಒಂದು ಮನೆ ಎರಡೂ ರಾಜ್ಯಗಳಿಗೆ ಹಂಚಿಕೆಯಾಗಿದೆ. ಇದನ್ನೂ ಓದಿ: ಟ್ರಬಲ್ ಶೂಟರ್‌ಗೆ ಈಗ ಟ್ರಬಲ್ – `ಕುಕ್ಕರ್ ಬ್ಲಾಸ್ಟ್’ ವಿವಾದದಲ್ಲಿ ಡಿಕೆಶಿ ಏಕಾಂಗಿ?

    ಒಂದೇ ಮನೆಯ 4 ಕೊಠಡಿಗಳು ಮತ್ತು ಅಡುಗೆ ಮನೆ ತೆಲಂಗಾಣಕ್ಕೆ ಸೇರಿದರೆ, ಇನ್ನುಳಿದ 4 ಕೊಠಡಿಗಳ ಪೈಕಿ ಬೆಡ್‍ರೂಂ ಮತ್ತು ಹಾಲ್ ಮಹಾರಾಷ್ಟ್ರಕ್ಕೆ ಸೇರಿದೆ. ಅಲ್ಲದೇ ಮನೆಯ ತೆರಿಗೆ ಕೂಡ ಎರಡು ರಾಜ್ಯಗಳಲ್ಲೂ ಕಟ್ಟುತ್ತಿದ್ದಾರೆ. ಮನೆಯಲ್ಲಿರುವ ವಾಹನಗಳು ಕೂಡ ಎರಡೂ ರಾಜ್ಯಗಳ ನೋಂದಣಿಯನ್ನು ಪಡೆದುಕೊಂಡಿದೆ. ಜೊತೆಗೆ ಎರಡು ರಾಜ್ಯಗಳಿಂದ ಸಿಗುವ ಸೌಲಭ್ಯಗಳನ್ನು ಮನೆಯವರು ಪಡೆಯುತ್ತಿದ್ದಾರೆ. ಇದನ್ನೂ ಓದಿ: ಬಂಡೆಮಠದ ಸ್ವಾಮೀಜಿ ಕೇಸ್‌ಗೆ ಟ್ವಿಸ್ಟ್ – ಪ್ರತೀಕಾರ ತೀರಿಸಿಕೊಂಡ ನೀಲಾಂಬಿಕೆ

    ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಮನೆ ಮಾಲೀಕ ಉತ್ತಮ್ ಪವರ್, ಮನೆ ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯದಲ್ಲಿ ಹಂಚಿಕೊಂಡಿದೆ. ನಮಗೆ ಇದರಿಂದ ಯಾವುದೇ ಸಮಸ್ಯೆ ಇಲ್ಲ. ಎರಡೂ ರಾಜ್ಯಗಳ ಸೌಲಭ್ಯಗಳನ್ನು ಪಡೆಯುತ್ತಿದ್ದೇವೆ. 1969ರಲ್ಲಿ ಗಡಿ ಸಮೀಕ್ಷೆ ನಡೆಸಿದಾಗ ಮನೆಯ ಅರ್ಧ ಭಾಗ ಮಹಾರಾಷ್ಟ್ರ ಮತ್ತು ಅರ್ಧ ಭಾಗ ತೆಲಂಗಾಣಕ್ಕೆ ಸೇರಿದೆ ಎಂಬ ಮಾಹಿತಿ ಸಿಕ್ಕಿತ್ತು. ಇದೀಗ ಎರಡೂ ರಾಜ್ಯಗಳ ಸ್ಥಳೀಯ ಪಂಚಾಯತ್‍ಗಳಲ್ಲೂ ತೆರಿಗೆ ಪಾವತಿಸುತ್ತಿದ್ದೇವೆ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸತತ 1 ವರ್ಷ ಡ್ರಮ್‌ನಲ್ಲಿತ್ತು ಮಹಿಳೆ ದೇಹದ ಪೀಸ್‌ಗಳು – ಮನೆ ಬಾಡಿಗೆಗೆ ಕೊಟ್ಟಿದ್ದ ಮಾಲೀಕ ಶಾಕ್‌!

    ಸತತ 1 ವರ್ಷ ಡ್ರಮ್‌ನಲ್ಲಿತ್ತು ಮಹಿಳೆ ದೇಹದ ಪೀಸ್‌ಗಳು – ಮನೆ ಬಾಡಿಗೆಗೆ ಕೊಟ್ಟಿದ್ದ ಮಾಲೀಕ ಶಾಕ್‌!

    ಹೈದರಾಬಾದ್: ತನ್ನ ಜೊತೆ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಗೆಳತಿ ಶ್ರದ್ಧಾ ವಾಕರ್‌ಳನ್ನು (Shraddha Walker) ಅಫ್ತಾಬ್‌ (Aftab) ಎಂಬಾತ ಹತ್ಯೆ ಮಾಡಿ, ದೇಹವನ್ನು 35 ತುಂಡುಗಳಾಗಿಸಿ ಹಲವೆಡೆ ಬಿಸಾಡಿದ್ದ ದೆಹಲಿ ಭೀಕರ ಹತ್ಯೆ ಪ್ರಕರಣ ವರದಿಯಾಗಿ ಆತಂಕ ಮೂಡಿಸಿತ್ತು. ಇದರ ಬೆನ್ನಲ್ಲೇ ಅದಕ್ಕೆ ಹೋಲಿಕೆ ಎಂಬಂತೆ ಅನೇಕ ಕುಕೃತ್ಯದ ಪ್ರಕರಣಗಳು ವರದಿಯಾಗಿತ್ತಿದೆ.

    ಹೌದು, ಆಂಧ್ರಪ್ರದೇಶದ (Andhra Pradesh) ವಿಶಾಖಪಟ್ಟಣಂನ ಮನೆಯೊಂದರ (Andhra Women) ಡ್ರಮ್‌ನಲ್ಲಿ ಮಹಿಳೆಯ ದೇಹದ ತುಂಡುಗಳು ಇರುವುದು ಪತ್ತೆಯಾಗಿದೆ. ಒಂದು ವರ್ಷದ ಹಿಂದೆ ಮಹಿಳೆ ಕೊಲೆ ಮಾಡಿ ಡ್ರಮ್‌ನಲ್ಲಿ ದೇಹದ ತುಂಡುಗಳನ್ನು ಹಾಕಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಗ್ಯಾಂಗ್ ರೇಪ್ – ಮಹಿಳೆಯ ಖಾಸಗಿ ಭಾಗಕ್ಕೆ ಸಿಗರೇಟ್‌ನಿಂದ ಸುಟ್ಟು ವಿಕೃತಿ

    ಬಾಡಿಗೆ ಮನೆಯೊಂದರಲ್ಲಿ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬಾಡಿಗೆದಾರರು ಸತತ ಒಂದು ವರ್ಷ ಬಾಡಿಗೆ ಪಾವತಿಸಿಲ್ಲ ಎಂದು ಬೇಸತ್ತು ಮನೆಯ ಮಾಲೀಕ, ಮನೆಯ ಬಾಗಿಲು ಒಡೆದು ನೋಡಿದಾಗ ಮಹಿಳೆಯ ದೇಹದ ಭಾಗಗಳು ಪತ್ತೆಯಾಗಿವೆ.

    2021ರ ಜೂನ್‌ನಲ್ಲಿ, ತನ್ನ ಹೆಂಡತಿ ಗರ್ಭಿಣಿ ಎಂದು ಹೇಳಿ ಬಾಡಿಗೆದಾರ ಬಾಡಿಗೆಯನ್ನೂ ಪಾವತಿಯಿಂದ ಮನೆಯಿಂದ ಹೋಗಿದ್ದ. ಆದರೆ ಆಗಾಗ ಯಾರಿಗೂ ತಿಳಿಯದಂತೆ ಹಿಂಬಾಗಿಲಿನಿಂದ ಮನೆಗೆ ಬಂದು ಹೋಗುತ್ತಿದ್ದ. ಸತತ ಒಂದು ವರ್ಷ ಮನೆ ಬಾಡಿಗೆ ನೀಡಿರಲಿಲ್ಲ. ಇದರಿಂದ ಬೇಸತ್ತ ಮಾಲೀಕ ಮನೆ ಪ್ರವೇಶಿಸಿ ಬಾಡಿಗೆದಾರನ ವಸ್ತುಗಳನ್ನು ತೆರವುಗೊಳಿಸಲು ಮುಂದಾದ. ಈ ವೇಳೆ ಡ್ರಮ್‌ನಲ್ಲಿ ಮಹಿಳೆಯ ದೇಹದ ಭಾಗಗಳು ಪತ್ತೆಯಾಗಿವೆ. ಇದನ್ನೂ ಓದಿ: ಪ್ರಾಂಶುಪಾಲರಿಗೆ ಜೈಶ್ರೀರಾಮ್ ಎಂದು ಘೋಷಣೆ ಕೂಗಲು ಒತ್ತಾಯಿಸಿದ ABVP ಕಾರ್ಯಕರ್ತರು

    ಒಂದು ವರ್ಷದ ಹಿಂದೆ ದೇಹವನ್ನು ತುಂಡುಗಳಾಗಿ ಕತ್ತರಿಸಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣ ಈಗ ಬೆಳಕಿಗೆ ಬಂದಿದೆ ಎಂದು ವಿಶಾಖಪಟ್ಟಣಂ ನಗರ ಪೊಲೀಸ್‌ ಆಯುಕ್ತ ಶ್ರೀಕಾಂತ್‌ ತಿಳಿಸಿದ್ದಾರೆ.

    ಆ ಮಹಿಳೆ ಬಾಡಿಗೆದಾರನ ಹೆಂಡತಿಯೇ ಇರಬಹುದು ಎಂದು ಶಂಕಿಸಲಾಗಿದೆ. ಮಾಲೀಕರು ದೂರು ನೀಡಿದ್ದು, ಅದರ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಶ್ರೀಕಾಂತ್ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಕ್ಕಳನ್ನು ನೋಡಲು ಬಿಡದಿದ್ದಕ್ಕೆ ಮನೆಗೆ ಬೆಂಕಿ ಹಚ್ಚಿದ ಪಾಪಿ ಪತಿ!

    ಮಕ್ಕಳನ್ನು ನೋಡಲು ಬಿಡದಿದ್ದಕ್ಕೆ ಮನೆಗೆ ಬೆಂಕಿ ಹಚ್ಚಿದ ಪಾಪಿ ಪತಿ!

    – ಪತ್ನಿ, ಮಕ್ಕಳಿಗೆ ಗಂಭೀರ ಗಾಯ

    ಹಾಸನ: ಪಾಪಿ ಪತಿ ಮಹಾಶಯನೊಬ್ಬ ತನ್ನ ಮಕ್ಕಳನ್ನು ನೋಡಲು ಬಿಡದಿದ್ದಕ್ಕೆ ಮನೆಗೇ ಬೆಂಕಿಯಿಟ್ಟ ಘಟನೆ ಹಾಸನದಲ್ಲಿ ನಡೆದಿದೆ.

    ಹಾಸನ ತಾಲೂಕಿನ, ದೊಡ್ಡಬೀಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಘಟನೆಯಿಂದ ಮನೆಯೊಳಗಿದ್ದ ಪತ್ನಿ, ಇಬ್ಬರು ಗಂಡು ಮಕ್ಕಳು ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳಾದ ಗೀತಾ, ಚಿರಂತನ್ (7), ನಂದನ್ (5)ಗೆ ಹಾಸನದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ರಂಗಸ್ವಾಮಿ ಮನೆಗೆ ಬೆಂಕಿ (Fire) ಹಚ್ಚಿದ ಆರೋಪಿಯಾಗಿದ್ದು, ಜಮೀನು ವಿಚಾರಕ್ಕೆ ರಂಗಸ್ವಾಮಿ ಹಾಗೂ ಗೀತಾ ನಡುವೆ ಜಗಳವಾಗಿತ್ತು. ಈ ಸಂಬಂಧ ಗೊರೂರು ಪೊಲೀಸ್ ಠಾಣೆ (Geruru Police Station) ಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಹೀಗಾಗಿ ನಾಲ್ಕು ತಿಂಗಳಿನಿಂದ ಪತಿ ಹಾಗೂ ಪತ್ನಿ, ಮಕ್ಕಳು ಪ್ರತ್ಯೇಕವಾಗಿದ್ದರು. ಇದನ್ನೂ ಓದಿ: ಪೀಸ್ ಪೀಸ್ ಪ್ರೇಮಿಯ ಮತ್ತಷ್ಟು ಕ್ರೂರತೆ ಬಹಿರಂಗ- ದೆಹಲಿ ಮಾತ್ರವಲ್ಲ ಡೆಹ್ರಾಡೂನ್‍ನಲ್ಲೂ ದೇಹದ ತುಂಡು ಎಸೆತ

    ಇತ್ತ ರಂಗಸ್ವಾಮಿ ಆಗಾಗ ಬಂದು ಮಕ್ಕಳನ್ನು (Children) ನೋಡಿಕೊಂಡು ಹೋಗುತ್ತಿದ್ದ. ಆದರೆ ನಿನ್ನೆ ಮಕ್ಕಳನ್ನು ನೋಡಲು ಬಂದಾಗ ಪತ್ನಿ ಗೀತಾ ಬಿಡಲಿಲ್ಲ. ಇದರಿಂದ ಕೋಪಗೊಂಡ ರಂಗಸ್ವಾಮಿ, ಪೆಟ್ರೋಲ್ ಬಂಕ್‍ನಿಂದ ಪೆಟ್ರೋಲ್ (Petrol) ತಂದು ಮಧ್ಯರಾತ್ರಿ ಮನೆಗೆ ಸುರಿದು ಬೆಂಕಿ ಹಚ್ಚಿದ್ದಾನೆ.

    ಮನೆಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಸ್ಥಳೀಯರ ನೆರವಿನಿಂದ ಗೀತಾ ಹಾಗೂ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿದ್ದ ವಸ್ತುಗಳೆಲ್ಲಾ ಸಂಪೂರ್ಣ ಬೆಂಕಿಗಾಹುತಿಯಾಗಿವೆ. ಆರೋಪಿ ರಂಗಸ್ವಾಮಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಈ ಸಂಬಂಧ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮನೆ ಮೇಲೆ ಬಿದ್ದ ಆಕಾಶ ಬುಟ್ಟಿ – ಹೊತ್ತಿ ಉರಿದ ಇಡೀ ಮನೆ

    ಮನೆ ಮೇಲೆ ಬಿದ್ದ ಆಕಾಶ ಬುಟ್ಟಿ – ಹೊತ್ತಿ ಉರಿದ ಇಡೀ ಮನೆ

    ಹುಬ್ಬಳ್ಳಿ: ಮನೆ ಮೇಲೆ ಆಕಾಶ ಬುಟ್ಟಿ (Sky Lantern Hot Air Balloon) ಬಿದ್ದ ಪರಿಣಾಮ ಮನೆ ಧಗಧಗ ಎಂದು ಹೊತ್ತಿ ಉರಿದ ಘಟನೆ ಹುಬ್ಬಳ್ಳಿಯ (Hubballi) ಘಂಟಿಕೇರಿ ಓಣಿಯ ರಾಘವೇಂದ್ರ ಮಠದ ಬಳಿ ನಡೆದಿದೆ.

    ಎಲ್ಲಿಂದಲೋ ಬಂದ ಆಕಾಶ ಬುಟ್ಟಿ ದಿಢೀರ್ ಶಿವರಾಜ ತಾಳಿಕೋಟಿ ಎಂಬುವರಿಗೆ ಸೇರಿದ ಮನೆ ಮೇಲೆ ಬಿದ್ದಿದೆ. ಈ ವೇಳೆ ದೊಡ್ಡ ಮಟ್ಟದಲ್ಲಿ ಹೊತ್ತಿಕೊಂಡ ಬೆಂಕಿಗೆ ಇಡೀ ಮನೆ ಹೊತ್ತಿ ಉರಿದಿದೆ. ಈ ದೃಶ್ಯವನ್ನು ಕಂಡು ಅಕ್ಕಪಕ್ಕದ ಮನೆಯವರು ಗಾಬರಿಯಾಗಿದ್ದು, ಇದೀಗ ಸ್ಥಳಕ್ಕೆ ಅಗ್ನಿಶಾಮಕ ದಳ (Fire Brigade) ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಸದ್ಯ ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಇದನ್ನೂ ಓದಿ: ಕಸದಲ್ಲಿ ಸಿಕ್ತು 50 ಗ್ರಾಂ ಮಾಂಗಲ್ಯ ಸರ – ಮಾಲೀಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಪೌರಕಾರ್ಮಿಕ

    ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಹೆಚ್ಚಾಗಿ ಆಕಾಶಬುಟ್ಟಿಗಳು ಕಂಡುಬರುತ್ತದೆ. ಗೂಡುದೀಪ, ಬೆಳಕಿನ ಬುಟ್ಟಿ ಎಂದು ಬೇರೆ ಬೇರೆ ಹೆಸರಿನಿಂದ ಕರೆಯಿಸಿಕೊಳ್ಳುವ ಆಕಾಶ ಬುಟ್ಟಿ ನಮ್ಮ ಭಾವನೆ, ನೆನಪು, ಸಂಸ್ಕೃತಿಯ ಜೊತೆ ಬೆಸೆದುಕೊಂಡಿದೆ. ಮೊದಲೆಲ್ಲ ಆಚರಣೆ ಒಂದು ಭಾಗವಾಗಿದ್ದ ಆಕಾಶ ಬುಟ್ಟಿಗಳು ಆಧುನಿಕತೆಯ ಭರಾಟೆಯಲ್ಲಿ ಕೆಲವರಿಗೆ ಪ್ರತಿಷ್ಠೆಯಾದರೆ ಇನ್ನೂ ಕೆಲವರು ತಮ್ಮ ಮನೆ ಅಂದ, ಅಲಂಕಾರಕ್ಕೆ ಇವುಗಳನ್ನು ಹಾಕುತ್ತಿದ್ದಾರೆ. ಇದನ್ನೂ ಓದಿ: ರಿಷಬ್ ಶೆಟ್ಟಿ ವಿಚಾರವಾದಿ ಆಗದಿದ್ದರೆ ಮೂರ್ಖ ಜನ ಸುಮ್ಮನೆ ಬಿಡ್ತಿರ್ಲಿಲ್ಲ: ಸಾಹಿತಿ ಬಿ.ಟಿ.ಲಲಿತಾ ನಾಯಕ್

    Live Tv
    [brid partner=56869869 player=32851 video=960834 autoplay=true]

  • ಮನೆಯಲ್ಲಿದ್ದ ನಾಲ್ವರನ್ನು ಬರ್ಬರವಾಗಿ ಹತ್ಯೆಗೈದು ತಾನೂ ಸತ್ತ

    ಮನೆಯಲ್ಲಿದ್ದ ನಾಲ್ವರನ್ನು ಬರ್ಬರವಾಗಿ ಹತ್ಯೆಗೈದು ತಾನೂ ಸತ್ತ

    ಜೈಪುರ: ನಾಲ್ವರು ಕುಟುಂಬಸ್ಥರನ್ನು ಕೊಂದು 38 ವರ್ಷದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಸ್ಥಾನದ (Rajastan) ಜೋಧಪುರದಲ್ಲಿ (Jodhpur) ನಡೆದಿದೆ.

    ಆರೋಪಿಯನ್ನು ಶಂಕರ್ ಲಾಲ್ ಎಂದು ಗುರುತಿಸಲಾಗಿದ್ದು, ಶುಕ್ರವಾರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ತಂದೆ ಸೋನಾರಾಮ್ (65) ಅನ್ನು ಕೊಡಲಿಯಿಂದ ಕೊಚ್ಚಿ ಹತ್ಯೆಗೈದು, ಬಳಿಕ ತಾಯಿ ಚಂಪಾ (55), ಆರೋಪಿಯ ಮಕ್ಕಳಾದ ಲಕ್ಷ್ಮಣ್ (14), ಮತ್ತು ದಿನೇಶ್ (8) ಅನ್ನು ಹತ್ಯೆಗೈದಿದ್ದಾನೆ. ನಂತರ ಶವಗಳನ್ನು ತನ್ನ ಮನೆಯ ನೀರಿನ ಟ್ಯಾಂಕ್‍ಗೆ ಎಸೆದು, ಸಮೀಪದ ಸಂಬಂಧಿಕರ ಮನೆಗೆ ತೆರಳಿ ಅವರ ಮನೆಯ ಟ್ಯಾಂಕ್‍ಗೆ ಹಾರಿ ಶಂಕರ್ ಲಾಲ್ ಆತ್ಮಹತ್ಯೆಗೆ ಶರಣಾಗಿದ್ದಾನೆ.  ಇದನ್ನೂ ಓದಿ: ಗುಜರಾತ್‌ ಚುನಾವಣೆ – ಮಾಜಿ ಪತ್ರಕರ್ತ, ಟಿವಿ ಆ್ಯಂಕರ್‌ ಇಸುದನ್‌ ಗಧ್ವಿ ಎಎಪಿ ಸಿಎಂ ಅಭ್ಯರ್ಥಿ

    ಪೀಲ್ವಾ ಗ್ರಾಮದಲ್ಲಿ ರೈತನಾಗಿದ್ದ ಶಂಕರ್ ಲಾಲ್ ಅಫೀಮು ವ್ಯಸನಿಯಾಗಿದ್ದ. ಆತನ ಪತ್ನಿ ಮತ್ತು ಕುಟುಂಬಸ್ಥರಿಗೆ ಮಾದಕ ದ್ರವ್ಯ ಬೆರೆಸಿ ನೀಡಿದರಿಂದ ಅವರಿಗೆ ನಡೆಯುತ್ತಿದ್ದ ಘಟನೆ ಬಗ್ಗೆ ತಿಳಿದು ಬಂದಿಲ್ಲ ಎಂದು ಪೊಲೀಸರು ಶಂಕಿಸಿದ್ದಾರೆ. ಶನಿವಾರ ಬೆಳಗ್ಗೆ ನೀರಿನ ಟ್ಯಾಂಕ್‍ನಿಂದ ಮೃತದೇಹಗಳನ್ನು ಹೊರತೆಗೆದು ಘಟನೆ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ನಮ್ಮ ಪಕ್ಷದ ಕಾರ್ಯಕರ್ತರಿಂದ ಹಣ ಸಂಗ್ರಹಿಸಿದ್ರೆ ಬಿಜೆಪಿಯವರಿಗೇನು ನೋವು?: ಡಿ.ಕೆ. ಶಿವಕುಮಾರ್

    Live Tv
    [brid partner=56869869 player=32851 video=960834 autoplay=true]