Tag: house

  • ವಿಪಕ್ಷಗಳ ಗದ್ದಲದಿಂದ ಮೊದಲ ಭಾಷಣದಲ್ಲೇ ಶೂನ್ಯಕ್ಕೆ ಸಚಿನ್ ಔಟ್!

    ವಿಪಕ್ಷಗಳ ಗದ್ದಲದಿಂದ ಮೊದಲ ಭಾಷಣದಲ್ಲೇ ಶೂನ್ಯಕ್ಕೆ ಸಚಿನ್ ಔಟ್!

    ನವದೆಹಲಿ: ವಿರೋಧ ಪಕ್ಷಗಳ ತೀವ್ರ ಗದ್ದಲ, ಕೋಲಾಹಲಗಳ ನಡುವೆ ರಾಜ್ಯಸಭಾ ಸದಸ್ಯ, ಭಾರತ ರತ್ನ ಸಚಿನ್ ತೆಂಡೂಲ್ಕರ್ ತಮ್ಮ ಮೊದಲ ಭಾಷಣ ಆರಂಭಿಸಲು ಅವಕಾಶ ಸಿಗದ ಘಟನೆಗೆ ರಾಜ್ಯ ಸಭೆ ಸಾಕ್ಷಿಯಾಯಿತು.

    ಕಳೆದ 5 ವರ್ಷಗಳಲ್ಲಿ ಮೊದಲ ಬಾರಿಗೆ ಸಚಿನ್ ತೆಂಡೂಲ್ಕರ್ ಸದನದಲ್ಲಿ ಮಾತನಾಡಲು ಮುಂದಾಗಿದ್ದರು. ಸಚಿನ್ ತಮ್ಮ ಮೊದಲ ಭಾಷಣದಲ್ಲಿ ಭಾರತದಲ್ಲಿ ಕ್ರೀಡೆಗಳು ಹಾಗೂ ಆಟದ ಹಕ್ಕಿನ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದರು. ಅಲ್ಲದೆ ತಮ್ಮ ಅಂತರಾಷ್ಟ್ರೀಯ ಪದಕ ವಿಜೇತಕರಿಗೆ ಕೇಂದ್ರ ಸರ್ಕಾರವು ನೀಡುವ ಆರೋಗ್ಯ ಯೋಜನೆಗಳು, ಶಾಲಾ ಪಠ್ಯಕ್ರಮದಲ್ಲಿ ಕ್ರೀಡೆಯ ಅಳವಡಿಕೆ ಹಾಗೂ ಹಲವು ದೀರ್ಘಾವಧಿ ಸಮಸ್ಯೆಗಳ ಬಗ್ಗೆ ತಮ್ಮ ಪ್ರಸ್ತಾಪಿಸುತ್ತಿದ್ದರು.

    ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ವಿರುದ್ಧ ಗುಜರಾತ್ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ವಿಪಕ್ಷ ನಾಯಕರು ರಾಜ್ಯಸಭೆಯಲ್ಲಿ ಗದ್ದಲ ಎಬ್ಬಿಸಿದರು. ಮೋದಿ ಅವರು ತಮ್ಮ ಹೇಳಿಕೆಗೆ ಕ್ಷಮೆ ಕೇಳಬೇಕೆಂದು ಘೋಷಣೆ ಕೂಗುವ ಮೂಲಕ ಸದನಕ್ಕೆ ಅಡ್ಡಿಪಡಿಸಿದರು.

    ಸಚಿನ್ ತೆಂಡೂಲ್ಕರ್ ಸದನದಲ್ಲಿ ಎದ್ದು ನಿಂತು ಹತ್ತು ನಿಮಿಷಗಳ ಕಾಲ ಎದ್ದು ನಿಂತು ಮಾತನಾಡುವ ಅವಕಾಶಕ್ಕಾಗಿ ಕಾದು ನಿಂತಿದ್ದರು. ಆದರೆ ಸದನದಲ್ಲಿ ಉಂಟಾದ ವಿರೋಧ ಪಕ್ಷಗಳ ತೀವ್ರ ಕೋಲಾಹಲ, ಗದ್ದಲಗಳಿಂದಾಗಿ ಸಭಾಪತಿಗಳಾದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಸದನವನ್ನು ಮುಂದೂಡಿದರು.

    ಈ ವೇಳೆ ಉಪರಾಷ್ಟ್ರಪತಿಗಳು ಸದನದ ಸದಸ್ಯರ ಜೊತೆ ಗದ್ದಲ ನಿಲ್ಲಿಸಿ ಎಂದು ಕೇಳಿಕೊಂಡರು. ದೇಶವೇ ನಮ್ಮನ್ನು ನೋಡುತ್ತಿದೆ, ಪ್ರಮುಖ ಕ್ರೀಡಾ ವಿಷಯಗಳ ಬಗ್ಗೆ ಚರ್ಚೆ ನಡೆಸಬೇಕಿದೆ. ಆದರೆ ಕನಿಷ್ಠ ಪಕ್ಷ ಕ್ರೀಡಾ ಸ್ಫೂರ್ತಿ ಮೆರೆದು ಗೌರವ ನೀಡಲು ವಿನಂತಿಸಿಕೊಂಡರು. ಅದರೂ ವಿಪಕ್ಷಗಳು ತಮ್ಮ ಗದ್ದಲ ಮುಂದುವರೆಸಿದ್ದರು.

    ರಾಜ್ಯಸಭಾ ವಿರೋಧಿ ಪಕ್ಷಗಳ ನಡೆ ಎಲ್ಲರ ಟೀಕೆಗೆ ಗುರಿಯಾಗಿದ್ದು, ಹಲವು ಗಣ್ಯರು ಈ ಕುರಿತು ತಮ್ಮ ಬೇಸರವನ್ನು ವ್ಯಕ್ತಪಡಿಸಿ ಪ್ರಶ್ನಿಸಿದ್ದಾರೆ.

  • ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎಸಿಬಿ ರೇಡ್

    ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎಸಿಬಿ ರೇಡ್

    ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎಸಿಬಿ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಚಿಕ್ಕಬಳ್ಳಾಪುರ, ತುಮಕೂರು, ಮಂಗಳೂರು, ನೆಲಮಂಗಲ, ಬೆಳಗಾವಿ, ಧಾರವಾಡ ಹಾಗೂ ಬಳ್ಳಾರಿ ಮುಂತಾದ ಕಡೆಗಳಲ್ಲಿ ಅಧಿಕಾರಿಗಳ ಮನೆಗಳ ಮೇಲೆ ದಾಳಿ ಮಾಡಿ ಕಡತಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

    ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನಲೆಯಲ್ಲಿ ಬೆಳ್ಳಂಬೆಳಗ್ಗೆ ಚಿಕ್ಕಬಳ್ಳಾಪುರ ಸಣ್ಣ ನೀರಾವರಿ ಇಲಾಖೆಯ ಎಇಇ ಹೇಮಂತ್ ಅವರ ಕಚೇರಿ ಹಾಗೂ ಮನೆ ಸೇರಿದಂತೆ ಸಂಬಂಧಿಕರ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಇಇ ಹೇಮಂತ್ ಹಾಲಿ ವಾಸವಾಗಿರುವ ಬೆಂಗಳೂರಿನ ವಿದ್ಯಾರಣ್ಯಪುರಂ ನ ನಿವಾಸ ಹಾಗೂ ಸ್ವಗ್ರಾಮ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಪಿ ಪೆದ್ದನಹಳ್ಳಿ ಗ್ರಾಮದ ಫಾರಂ ಹೌಸ್ ಹಾಗೂ ನೆಲಮಂಗಲದಲ್ಲಿನ ಹೇಮಂತ್ ಭಾಮೈದ ರಮೇಶ್ ರ ಬಾಡಿಗೆ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇನ್ನು ಚಿಕ್ಕಬಳ್ಳಾಪುರ ನಗರದ ಸಣ್ಣ ನೀರಾವರಿ ಇಲಾಖೆ ಕಚೇರಿ ಮೇಲೂ ಸದ್ಯ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ದಾಖಲಾತಿಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

    ತುಮಕೂರಿನಲ್ಲೂ ಎಸಿಬಿ ಪೊಲೀಸರು ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದ್ದಾರೆ. ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಗದೀಶ್ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ತುಮಕೂರು ನಗರದ ಸರಸ್ವತಿಪುರಂ ನಲ್ಲಿ ಮನೆ ಮೇಲೆ ದಾಳಿ ನಡೆಸಿದ ಎಸಿಬಿ ಡಿವೈಎಸ್ಪಿ ಮೋಹನ್ ನೇತೃತ್ವದ ತಂಡ ದಾಖಲೆ ಪರಿಶೀಲಿಸುತ್ತಿದೆ. ಕೊರಟಗೆರೆ ತಾಲೂಕಿನಲ್ಲಿ ಎಇಇ ಆಗಿ ಕಾರ್ಯನಿರ್ವಹಿಸುತ್ತಿರುವ ಜಗದೀಶ್ ರ ಮೇಲೆ ಹಲವು ಅಕ್ರಮ ಎಸಗಿದ ಆರೋಪ ಇದೆ. ಅಲ್ಲದೆ ಬೇನಾಮಿ ಆಸ್ತಿ ಮಾಡಿದ ಆಪಾದನೆಯೂ ಇದೆ. ಈ ಹಿನ್ನೆಲೆಯಲ್ಲಿ ಎಸಿಬಿ ತಂಡ ದಾಳಿ ನಡೆಸಿದೆ.

    ಮಂಗಳೂರಿನ ಕಿನ್ನಿಗೋಳಿಯ ಪಕ್ಷಿಕೆರೆ ಎಂಬಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಂಟ್ವಾಳ ಕೃಷಿ ಇಲಾಖೆ ಕಚೇರಿಯಲ್ಲಿ ಸಹಾಯಕ ನಿರ್ದೇಶಕರಾಗಿರುವ ಪಿ.ಎಫ್ ಮಿರಾಂಡಾ ಮನೆಗೆ ದಾಳಿ ನಡೆದಿದ್ದು, ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿದೆ. ಮೂರು ತಿಂಗಳಲ್ಲಿ ಹುದ್ದೆಯಿಂದ ನಿವೃತ್ತರಾಗಲಿದ್ದ ಮಿರಾಂಡಾ ಕೊನೆಗೂ ಎಸಿಬಿ ಬಲೆಗೆ ಬಿದ್ದಿದ್ದಾರೆ. ಮನೆ ಮತ್ತು ಕಚೇರಿಯಲ್ಲಿ ದಾಳಿ ಕಾರ್ಯಾಚರಣೆ ನಡೆಸಿರುವ ಅಧಿಕಾರಿಗಳು ಕಡತಗಳ ವಶಕ್ಕೆ ಪಡೆದಿದ್ದಾರೆ. ಬೆಳ್ಳಂಬೆಳಗ್ಗೆ ಎಸಿಬಿ ಡಿವೈಎಸ್ಪಿ ಸುಧೀರ್ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆದಿದ್ದು ಪಕ್ಷಿಕೆರೆಯಲ್ಲಿರುವ ಎರಡು ಅಂತಸ್ತಿನ ಮನೆಯಲ್ಲಿ ಅಧಿಕಾರಿಗಳ ತಂಡ ಬೀಡುಬಿಟ್ಟಿದೆ. ಸಾರ್ವಜನಿಕ ದೂರಿನಂತೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿತ್ತೂರು ಎಇಇ ಸುರೇಶ ಭೀಮಾನಾಯ್ಕ್ ಮನೆ ಮೇಲೆ ಬೆಳಗಾವಿ ಎಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಎಸಿಬಿ ಡಿವೈಎಸ್‍ಪಿ ರುಘು ನೇತೃತ್ವದಲ್ಲಿ 6 ಕಡೆಗಳಲ್ಲಿ ದಾಳಿಯಾಗಿದ್ದು, ಅಕ್ರಮ ಆಸ್ತಿ ಗಳಿಕೆ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ. ಕಿತ್ತೂರು, ಖಾನಪುರ ಸೇರಿ ಬೆಳಗಾವಿಯ ನಾಲ್ಕು ಕಡೆಗಳಲ್ಲಿ ಅಧಿಕಾರಿಗಳು ತಪಾಸಣೆ ಕೈಗೊಂಡಿದ್ದಾರೆ.

    ಅಕ್ರಮ ಆಸ್ತಿ ಗಳಿಕೆ ಹಿನ್ನಲೆಯಲ್ಲಿ ವಿಜಯನಗರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಳ್ಳಾರಿ ಜಿಲ್ಲೆ ತೋರಣಗಲ್ ತಾಲೂಕಿನ ಷಕ್ಷಾವಲಿ ನಿವಾಸದ ಕಚೇರಿ ಮೇಲೆ ದಾಳಿ ನಡೆದಿದೆ. ಎಸಿಬಿ ಎಸ್ ಪ್ರಸನ್ನ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

    ಧಾರವಾಡದಲ್ಲಿ ಕೂಡ ಇಂದು ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ವಿಭಾಗದ ಎಸಿಎಫ್ ಪಾಂಡುರಂಗ ಪೈ ಮನೆ ಮೇಲೆ ದಾಳಿ ನಡೆಸಿದ್ದಾರೆ. ಪೈ ಧಾರವಾಡದಲ್ಲಿ ಮನೆ ಹೊಂದಿದ್ದು, ಧಾರವಾಡ ನಗರದ ಅರ್ಕೆಡ್ ಸಿಲ್ವರ್ ಬಡಾವಣೆಯಲ್ಲಿರೋ ಮನೆಗೆ ಡಿವೈಎಸ್‍ಪಿ ಮಲ್ಲಾಪೂರ ನೇತ್ರತ್ವದಲ್ಲಿ ದಾಳಿ ನಡೆಸಿದ್ದಾರೆ. ಅವರ ಜೊತೆ ಇಬ್ಬರು ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆಯಾಗುತ್ತಿದೆ.

    https://www.youtube.com/watch?v=w3-JhajXvL4

  • 18 ಕೋಟಿ ರೂ. ಮೋಸ ಮಾಡಿದವಳ ಮನೆಗೆ ನುಗ್ಗಿ ಮಹಿಳೆಯರಿಂದ ತರಾಟೆ

    18 ಕೋಟಿ ರೂ. ಮೋಸ ಮಾಡಿದವಳ ಮನೆಗೆ ನುಗ್ಗಿ ಮಹಿಳೆಯರಿಂದ ತರಾಟೆ

    ತುಮಕೂರು: ಚೀಟಿ ವ್ಯವಹಾರದಲ್ಲಿ ಸುಮಾರು 18 ಕೋಟಿ ರೂ. ಮೋಸ ಮಾಡಿದ ಮಹಿಳೆಯ ಮನೆಗೆ ಮೋಸ ಹೋದವರು ನುಗ್ಗಿ ಮನೆಮಂದಿಗೆಲ್ಲಾ ತರಾಟೆ ತೆಗೆದುಕೊಂಡ ಘಟನೆ ತುಮಕೂರು ನಗರದ ವಿಜಯನಗರದಲ್ಲಿ ನಡೆದಿದೆ.

    ನಿವೃತ್ತ ಅರಣ್ಯ ಇಲಾಖೆ ನೌಕರ ಪುಟ್ಟಣ್ಣ ಪತ್ನಿ ನಿರ್ಮಲಾ ಮೋಸ ಮಾಡಿದ ಮಹಿಳೆ. ಚೀಟಿ ಮಾಡುವ ನೆಪದಲ್ಲಿ ಸುಮಾರು 80 ಜನರಿಂದ 18 ಕೋಟಿಯಷ್ಟು ಹಣ ಸಂಗ್ರಹಿಸಿ ವಾಪಸ್ ಕೊಡದೇ ಮೋಸ ಮಾಡಿದ್ದಾಳೆ. ಕೇಳಲು ಹೋದಾಗ ಇಂದಲ್ಲಾ ನಾಳೆ ಬನ್ನಿ ಎಂದು ತಪ್ಪಿಸಿಕೊಳ್ಳುತಿದ್ದಳು.

    ಮಂಗಳವಾರ ರಾತ್ರಿ ಮೋಸ ಹೋದ ಮಹಿಳೆಯರೆಲ್ಲಾ ಸೇರಿ ನಿರ್ಮಲಾ ಮನೆಗೆ ನುಗ್ಗಿ ಮನೆಯನೆಲ್ಲಾ ಶೋಧ ನಡೆಸಿದ್ದಾರೆ. ಎಲ್ಲಿಯೂ ನಿರ್ಮಲಾ ಪತ್ತೆಯಾಗಿಲ್ಲ. ಹೀಗಾಗಿ ನಿರ್ಮಲಾ ಪತಿ ಪುಟ್ಟಣ್ಣ ರನ್ನು ತರಾಟೆ ತೆಗೆದುಕೊಂಡಿದ್ದಾರೆ. ನಿರ್ಮಲಾ ಸಿಗದೇ ಇದ್ದುದರಿಂದ ಬರಿಗೈಯಲ್ಲಿ ವಾಪಸ್ ಆಗಿದ್ದಾರೆ.

  • ಪತ್ನಿ ಶವವನ್ನು 10 ಕಿ.ಮೀ ಹೊತ್ತೊಯ್ದಿದ್ದ ವ್ಯಕ್ತಿ ಈಗ ಹೇಗಿದ್ದಾರೆ ಗೊತ್ತಾ?

    ಪತ್ನಿ ಶವವನ್ನು 10 ಕಿ.ಮೀ ಹೊತ್ತೊಯ್ದಿದ್ದ ವ್ಯಕ್ತಿ ಈಗ ಹೇಗಿದ್ದಾರೆ ಗೊತ್ತಾ?

    ಭುವನೇಶ್ವರ: ಕಳೆದ ವರ್ಷ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ವ್ಯವಸ್ಥೆ ಸಿಗದೇ ಸುಮಾರು 10 ಕಿ.ಮೀ ದೂರದವರೆಗೆ ತನ್ನ ಹೆಗಲ ಮೇಲೆ ಪತ್ನಿಯ ಶವ ಸಾಗಿಸಿ ಸುದ್ದಿಯಾಗಿದ್ದ ಒಡಿಶಾದ ದಾನಾ ಮಾಝಿ ಜೀವನ ಇದೀಗ ಪೂರ್ತಿ ಬದಲಾಗಿದೆ.

    ಹೌದು. ಹೊಸ ಮನೆ ಕಟ್ಟುತ್ತಿರೋ ಮಾಝಿ, ಎರಡನೇ ಮದುವೆಯಾಗಿ ಸದ್ಯ 65 ಸಾವಿರ ರೂ. ಮೌಲ್ಯದ ಹೊಸ ಹೊಂಡಾ ಬೈಕ್ ಕೂಡ ಖರೀದಿ ಮಾಡಿದ್ದಾರೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ಮಾಝಿ ಪತ್ನಿ ಅಮಾಂಗ್ ಡಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆದ್ರೆ ಇವರ ಮೃತ ದೇಹವನ್ನು ಮನೆಗೆ ಸಾಗಿಸಲು ಆಸ್ಪತ್ರೆ ಸಿಬ್ಬಂದಿ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಿರಲಿಲ್ಲ. ಹೀಗಾಗಿ ಮಾಝಿ , ಬಟ್ಟೆಯಿಂದ ಸುತ್ತಲಾಗಿದ್ದ ತನ್ನ ಪತ್ನಿಯ ಮೃತದೇಹವನ್ನ ಹೆಗಲ ಮೇಲೆ ಹೊತ್ತು, ಮಗಳೊಂದಿಗೆ 10 ಕಿ. ಮೀ ದೂರದವರೆಗೆ ನಡೆದಿದ್ದರು. ಈ ರೀತಿ ಸಾಗುತ್ತಿರುವ ಮಾಝಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಇಡೀ ದೇಶವೇ ಮರುಕ ವ್ಯಕ್ತಪಡಿಸಿತ್ತು. ಈ ಫೋಟೋವನ್ನು ನೋಡಿದ ಬಹ್ರೈನ್ ಪ್ರಧಾನಿ ಮಾಝಿಯ ಅಸಾಹಯಕ ಸ್ಥಿತಿಯನ್ನು ಕಂಡು ಅವರೂ ಸಹಾಯಕ್ಕೆ ಮುಂದಾದ್ರು.

    ಅಂತೆಯೇ ಪ್ರಧಾನಿ ರಾಜಕುಮಾರ ಖಲಿಫಾ ಬಿನ್ ಸ್ಮಾನ್ ಅಲ್ ಖಲೀಫಾ, ಮಾಝಿಗೆ 9 ಲಕ್ಷ ರೂ. ನೆರವು ನೀಡಿದ್ದರು. ಹಾಗೆಯೇ ಕೆಲ ವ್ಯಕ್ತಿಗಳು ಹಾಗೂ ಹಲವು ಸಂಘ-ಸಂಸ್ಥೆಗಳು ಕೂಡ ಮಾಝಿಗೆ ನೆರವು ನೀಡಿದ್ದವು. ಹೀಗಾಗಿ ಸದ್ಯ ಮಾಝಿ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಸರ್ಕಾರದ ಪ್ರಧಾನ ಮಂತ್ರಿ ಗ್ರಾಮೀಣ ಅವಾಜ್ ಯೋಜನೆ ವತಿಯಿಂದ ಮನೆ ಕೂಡ ನಿರ್ಮಾಣವಾಗುತ್ತಿದೆ. ಸದ್ಯ ಅವರು ಗ್ರಾಮದ ಅಂಗನವಾಡಿಯೊಂದರಲ್ಲಿ ವಾಸ್ತವ್ಯ ಹೂಡಿದ್ದಾರೆ.

    ಇನ್ನು ಮಾಝಿಯ ಮೂವರು ಹೆಣ್ಣು ಮಕ್ಕಳಿಗೆ ಶಾಲೆಯೊಂದು ಉಚಿತ ಶಿಕ್ಷಣ ನೀಡುತ್ತಿದೆ. ಹೀಗಾಗಿ ಮಕ್ಕಳು ಆ ಶಾಲೆಯ ಹಾಸ್ಟೆಲ್ ನಲ್ಲಿ ವಾಸವಾಗಿದ್ದಾರೆ. ಈ ಮಧ್ಯೆ ಮಾಝಿ ಎರಡನೇ ಮದುವೆಯಾಗಿದ್ದಾರೆ. ಸದ್ಯ ಪತ್ನಿ ಅಲಮಟಿ ಡೀ ಗರ್ಭಿಣಿಯಾಗಿದ್ದಾರೆ.

    ಹೊಸ ಮನೆಯ ಬಳಿಕ ಸುತ್ತಾಡಲು ಹೊಸ ಬೈಕ್ ಬೇಕು ಅಂತ ಹೇಳಿದ್ದರು. ಹೀಗಾಗಿ ಅವರು ಸದ್ಯ ಹೊಸ ಹೊಂಡಾ ಬೈಕ್ ಖರೀದಿ ಮಾಡಿದ್ದಾರೆ ಅಂತ ಹೊಂಡಾ ಬೈಕ್ ಶೋ ರೂಮ್ ಮಾಲಕ ಮನೋಜ್ ಅಗರ್‍ವಾಲ್ ಹೇಳಿದ್ದಾರೆ.

    ಒಟ್ಟಿನಲ್ಲಿ ಮಾಝಿ ಜೀವನ ಸಂಪೂರ್ಣ ಬದಲಾಗಿದ್ದು, ಗ್ರಾಮಸ್ಥರು ಮಾತ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಯಾಕಂದ್ರೆ ಮಾಝಿಗೆ ಸರ್ಕಾರ, ಸಂಘ ಸಂಸ್ಥೆಗಳು ನೆರವು ನೀಡಿದ್ದರಿಂದ ಅವರ ಜೀವನ ಶೈಲಿಯೇ ಬದಲಾಗಿದೆ. ಆದರೆ ಗ್ರಾಮಕ್ಕೆ ಯಾವುದೇ ಸವಲತ್ತು ಸಿಕ್ಕಿಲ್ಲ ಅಂತ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

    ಆದ್ರೆ ಮಾಝಿಗೆ ಬೈಕ್ ಚಾಲನೆ ಬರದ ಕಾರಣ ಸಂಬಂಧಿಯ ಹಿಂದೆ ಬೈಕ್‍ನಲ್ಲಿ ಕೂರಬೇಕಿದೆ. ಹೀಗಾಗಿ ಮಾಝಿಗೆ ಈಗ ಬೈಕ್ ಚಾಲನೆ ಕಲಿಯೋ ಬಗ್ಗೆಯೇ ಚಿಂತೆ.

    https://www.youtube.com/watch?v=Jh2S18AyIiY

    https://www.youtube.com/watch?v=I2xPTfluFqI

     

  • ಮಂಡ್ಯದಲ್ಲಿ ರಮ್ಯಾ ಮನೆ ಖರೀದಿ ವಿಚಾರ- ಮನೆ ಮಾಲೀಕ ಹೇಳಿದ್ದು ಹೀಗೆ

    ಮಂಡ್ಯದಲ್ಲಿ ರಮ್ಯಾ ಮನೆ ಖರೀದಿ ವಿಚಾರ- ಮನೆ ಮಾಲೀಕ ಹೇಳಿದ್ದು ಹೀಗೆ

    ಮಂಡ್ಯ: ಮಾಜಿ ಸಂಸದೆ ರಮ್ಯಾ ಮಂಡ್ಯದಲ್ಲಿ ಮನೆ ಖರೀದಿ ಮಾಡಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮನೆ ಮಾಲೀಕ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದಾರೆ.

    ಮಾಲೀಕ ಸಾದತ್ ಆಲಿಖಾನ್ ಪಬ್ಲಿಕ್ ಟಿವಿಗೆ ಕರೆ ಮಾಡಿ, ಮನೆ ಮಾರಿಲ್ಲವೆಂದು ಹೇಳಿದ್ದಾರೆ. ರಮ್ಯಾ ಅವರು ಕೆಆರ್ ರೋಡ್ ವಿದ್ಯಾನಗರದಲ್ಲಿರುವ ಮನೆಯನ್ನು ಬಾಡಿಗೆಗೆ ಪಡೆದಿದ್ದರು. ಆದ್ರೆ ಬಾಡಿಗೆ ಇದ್ದ ಮನೆಯನ್ನೇ ರಮ್ಯಾ ಖರೀದಿಸಿದ್ದಾರೆ ಎಂಬ ಗಾಸಿಪ್ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ಸಾದತ್ ಸ್ಪಷ್ಟನೆ ನೀಡಿದ್ದಾರೆ.

    ಅದು ನನ್ನ ತಂದೆಯವರು ಇದ್ದ ಮನೆಯಾಗಿದ್ದು, ರಮ್ಯಾ ಅವರಿಗೆ ಬಾಡಿಗೆ ನೀಡಿದ್ದೇನೆ ಅಷ್ಟೇ. ಅದನ್ನು ನಾನು ಮಾರಿಲ್ಲ, ಮಾರುವುದೂ ಇಲ್ಲ. ನನ್ನ ತಂದೆಯವರು ಇದ್ದ ಮನೆಯ ಮೇಲೆ ನನಗೆ ಭಾವನಾತ್ಮಕ ಸಂಬಂಧವಿದೆ ಅಂತ ಅವರು ತಿಳಿಸಿದ್ದಾರೆ.

    ಇದನ್ನೂ ಓದಿ: ಮಂಡ್ಯದಲ್ಲಿ ಮತ್ತೆ ಪದ್ಮಾವತಿ ಪರ್ವ? ಸುದ್ದಿ ಬೆನ್ನಲ್ಲೇ ಅಂಬಿ-ಮಾದೇಗೌಡ ಗೌಪ್ಯ ಚರ್ಚೆ

    https://www.youtube.com/watch?v=oWj_YSV3mjw

  • ಬಾಡಿಗೆ ನೀಡದಕ್ಕೆ ಕರೆಂಟ್, ನೀರು ಕಟ್ ಮಾಡಿದ ಮನೆ ಮಾಲೀಕನ ಮೇಲೆಯೇ ಹಲ್ಲೆ

    ಬಾಡಿಗೆ ನೀಡದಕ್ಕೆ ಕರೆಂಟ್, ನೀರು ಕಟ್ ಮಾಡಿದ ಮನೆ ಮಾಲೀಕನ ಮೇಲೆಯೇ ಹಲ್ಲೆ

    ಕೊಪ್ಪಳ: ಮನೆಯ ಬಾಡಿಗೆ ಕೊಟ್ಟಿಲ್ಲವೆಂದು ನೀರು, ವಿದ್ಯುತ್ ಕಟ್ ಮಾಡಿದ ಮನೆ ಮಾಲೀಕನಿಗೆ ಬಾಡಿಗೆದಾರರು ಚಪ್ಪಲಿಯಿಂದ ಹಲ್ಲೆ ನಡೆಸಿರುವ ಘಟನೆ ಕೊಪ್ಪಳದ ಕಲ್ಯಾಣ ನಗರದಲ್ಲಿ ನಡೆದಿದೆ.

    ಬಾಬಾ ಹಲ್ಲೆಗೊಳಗಾದ ಮನೆಯ ಮಾಲೀಕ. ಬಾಬಾ ಮನೆಯಲ್ಲಿ ಮೊಹಮ್ಮದ್ ಎಂಬವರು 14 ತಿಂಗಳಿನಿಂದ ವಾಸವಾಗಿದ್ದಾರೆ. ಕೇವಲ ಎರಡು ದಿನ ಬಾಡಿಗೆ ನೀಡಲು ತಡ ಮಾಡಿದ್ದಕ್ಕೆ ಮನೆಯ ಓನರ್ ಬುಧವಾರದಿಂದಲೇ ಬಾಡಿಗೆದಾರರ ಮನೆಯ ನೀರು ಮತ್ತು ವಿದ್ಯುತ್ ಕಟ್ ಮಾಡಿದ್ದಾನೆ.

    ಮುಂದಿನ ತಿಂಗಳು 1ನೇ ತಾರೀಖಿನಿಂದ ಮನೆಯನ್ನು ಖಾಲಿ ಮಾಡುತ್ತವೆ. ನಿಮ್ಮ ಬಳಿಯಿರುವ 10 ಸಾವಿರ ಡಿಪಾಸಿಟ್ ಹಣದಲ್ಲಿ ವಜಾ ಮಾಡಿಕೊಳ್ಳಿ ಎಂದು ಹೇಳಿದರೂ ಮನೆಯ ಓನರ್ ದರ್ಪ ತೋರಿದ್ದಾನೆ. ಇಂದು ಬೆಳಗ್ಗೆ ನೀರು ಕೊಡಿ ಎಂದು ಕೇಳಲು ಹೋದಾಗ ಮನೆಯ ಮಾಲೀಕ ಮಹಿಳೆಗೆ ಅವಾಚ್ಯ ಶಬ್ಧಗಳಿಂದ  ನಿಂದಿಸಿದ್ದಾನೆ. ಇದರಿಂದ ಕೋಪಗೊಂಡು ನಾನು ಮತ್ತು ನನ್ನ ಪತ್ನಿ ಇಬ್ಬರೂ ಸೇರಿ ಹೊಡೆದಿದ್ದೇವೆ ಎಂದು ಮೊಹಮದ್ ಜೀಲಾನಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

     

  • ಮಾಜಿ ಸಿಎಂ ಕುಮಾರಸ್ವಾಮಿ ಮನೆಯಲ್ಲಿ ಬೆಂಕಿ ಅವಘಡ

    ಮಾಜಿ ಸಿಎಂ ಕುಮಾರಸ್ವಾಮಿ ಮನೆಯಲ್ಲಿ ಬೆಂಕಿ ಅವಘಡ

    ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ಮನೆಯಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿದೆ.

    ಹುಬ್ಬಳ್ಳಿಯ ಬೈರಿ ದೇವರಕೊಪ್ಪಾದ ಮಾಯಕಾರ್ ಕಾಲೋನಿಯಲ್ಲಿರುವ ಕುಮಾರಸ್ವಾಮಿ ಅವರ ನಿವಾಸದಲ್ಲಿ ರಾತ್ರಿ ಸುಮಾರು 12 ಗಂಟೆಗೆ ಶಾರ್ಟ್ ಸಕ್ರ್ಯೂಟ್ ನಿಂದ ಬೆಂಕಿ ತಗುಲಿದೆ. ಮನೆಯಲ್ಲಿ ಕೆಲಸಗಾರರು ಊಟ ಮಾಡಿ ಮಲಗಿದ್ದಾಗ ಬೆಂಕಿ ಅವಘಡ ಸಂಭವಿಸಿದೆ. ಕೆಲಸಗಾರರು ಮನೆಯ ಮುಂದಿನ ಕಚೇರಿಯಲ್ಲಿ ಮಲಗಿದ್ದರು.

    ಬೆಂಕಿಯಲ್ಲಿ ಎರಡು ಸೋಫಾ ಸೆಟ್ ಸುಟ್ಟು ಕರಕಲಾಗಿದೆ. ಬೆಂಕಿ ಬೆಡ್ ರೂಮಿನಲ್ಲೂ ಆವರಿಸಿತ್ತು ಹಾಗೂ ಬೆಡ್ ರೂಮ್ ನಲ್ಲಿರುವ ಕೆಲ ವಸ್ತುಗಳು ಸಹ ಬೆಂಕಿಗೆ ಆಹುತಿ ಆಗಿದೆ. ಮನೆಯ ಕೆಲಸಗಾರರು ಮತ್ತು ಪೊಲೀಸ್ ಸಿಬ್ಬಂದಿ ಬೆಂಕಿ ನಂದಿಸಿದ್ದಾರು.

    ಕುಮಾರಸ್ವಾಮಿ ಅವರು 11 ತಿಂಗಳ ಹಿಂದೆ ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ದರು.

  • ಮನೆಯಲ್ಲಿ ಶೌಚಾಲಯ ಇಲ್ಲದ್ದಕ್ಕೆ ಮಾವ, ಮೈದುನನ ವಿರುದ್ಧ ದೂರು ನೀಡಿದ ಸೊಸೆ

    ಮನೆಯಲ್ಲಿ ಶೌಚಾಲಯ ಇಲ್ಲದ್ದಕ್ಕೆ ಮಾವ, ಮೈದುನನ ವಿರುದ್ಧ ದೂರು ನೀಡಿದ ಸೊಸೆ

    ಪಾಟ್ನಾ: ಮನೆಯಲ್ಲಿ ಶೌಚಾಲಯ ಇಲ್ಲದ್ದಕ್ಕೆ ಮನೆಯ ಸೊಸೆ ತನ್ನ ಮಾವ ಮತ್ತು ಮೈದುನನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಘಟನೆ ಬಿಹಾರದ ಮುಜಾಫರ್‍ಪುರ ಜಿಲ್ಲೆಯ ಮಿಣಾಪುರ ಬ್ಲಾಕ್‍ನ ಚೆಗ್ಗಾನ್ ನ್ಯೂರಾ ಎಂಬ ಗ್ರಾಮದಲ್ಲಿ ನಡೆದಿದೆ.

    ಮನೆಯಲ್ಲಿ ಶೌಚಾಲಯ ನಿರ್ಮಿಸಲು ಮಹಿಳೆ ಕೇಳಿದ್ದಳು. ಆದ್ರೆ ಆಕೆಯ ಮಾವನ ಮನೆಯವರು ಇದಕ್ಕೆ ಕಿವಿಗೊಟ್ಟಿರಲಿಲ್ಲ. ತಮಿಳುನಾಡಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಪತಿ ಊರಿಗೆ ಬಂದಾಗ ಮಾತ್ರ ಆಕೆ ಮಾವನ ಮನೆಗೆ ಬರುತ್ತಿದ್ದರು. ಮತ್ತೆ ಪತಿ ತಮಿಳುನಾಡಿಗೆ ಹಿಂದಿರುಗಿ ಹೋದಾಗ ಮಹಿಳೆ ತವರು ಮನೆಗೆ ಹೋಗುತ್ತಿದ್ದರು.

    ಇದರಿಂದ ಬೇಸತ್ತು ಮಹಿಳೆ ಪೊಲೀಸ್ ಠಾಣೆಯಲ್ಲಿ ತನ್ನ ಮಾವ ಮತ್ತು ಮೈದುನನ ವಿರುದ್ಧ ಸೆಪ್ಟೆಂಬರ್ 25ರಂದು ಲಿಖಿತ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಮಾವ ಮತ್ತು ಮೈದುನನನ್ನು ಠಾಣೆಗೆ ಕರೆಸಿ ತಿಳಿ ಹೇಳಲಾಗಿದೆ ಎಂದು ಮುಜಾಫರ್‍ಪುರ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿ ಜ್ಯೋತಿ ತಿಳಿಸಿದ್ದಾರೆ.

    ಆದಷ್ಟು ಬೇಗ ಶೌಚಾಲಯ ನಿರ್ಮಿಸುವುದಾಗಿ ಮಾವ ಬಾಂಡ್ ಬರೆದುಕೊಟ್ಟಿದ್ದಾರೆ. ಒಂದು ವಾರದೊಳಗೆ ಶೌಚಾಲಯ ನಿರ್ಮಿಸಬೇಕೆಂದು ನಾವು ಹೇಳಿದೆವು. ಆದರೆ ಹಣ ಹೊಂದಿಸಲು ಸ್ವಲ್ಪ ಸಮಯ ಬೇಕು ಎಂದು ಕೋರಿದರು. ಸಂಧಾನ ಯಶಸ್ವಿಯಾಗಿದ್ದು, ಮಹಿಳೆ ತನ್ನ ದೂರನ್ನು ಹಿಂಪಡೆದಿದ್ದಾರೆ ಎಂದು ಜ್ಯೋತಿ ಹೇಳಿದ್ದಾರೆ.

  • ಕೊನೆಗೂ ಮಾರಾಟವಾಯ್ತು ಗೋವಾದಲ್ಲಿನ ವಿಜಯ್ ಮಲ್ಯ ಮನೆ

    ಕೊನೆಗೂ ಮಾರಾಟವಾಯ್ತು ಗೋವಾದಲ್ಲಿನ ವಿಜಯ್ ಮಲ್ಯ ಮನೆ

    ನವದೆಹಲಿ: ಸತತ ಪ್ರಯತ್ನದ ಬಳಿಕ ಕೊನೆಗೂ ಎಸ್‍ಬಿಐ ನೇತೃತ್ವದ ಸಾಲದಾತರ ಸಮೂಹ ಗೋವಾದಲ್ಲಿನ ವಿಜಯ್ ಮಲ್ಯ ಮನೆ ಕಿಂಗ್‍ಫಿಶರ್ ವಿಲ್ಲಾ ವನ್ನ ಮಾರಾಟ ಮಾಡಿದ್ದಾರೆ.

    ಈ ಹಿಂದೆ ಕಿಂಗ್‍ಫಿಶರ್ ವಿಲ್ಲಾದ ಹರಾಜು ಪ್ರಕ್ರಿಯೆ 3 ಬಾರಿ ವಿಫಲವಾಗಿತ್ತು. ಇದೀಗ ಚಿತ್ರ ನಿರ್ಮಾಣ ಸಂಸ್ಥೆಯಾದ ವೈಕಿಂಗ್ ಮೀಡಿಯಾ ಅಂಡ್ ಎಂಟರ್‍ಟೈನ್‍ಮೆಂಟ್, ಖಾಸಗಿ ಒಪ್ಪಂದದ ಮೇಲೆ 73.01 ಕೋಟಿ ರೂಪಾಯಿಗೆ ಮನೆಯನ್ನ ಖರೀದಿಸಿದೆ. ನಟ ಹಾಗೂ ನಿರ್ಮಾಪಕರಾದ ಸಚಿನ್ ಜೋಶಿ, ವೈಕಿಂಗ್ ಮೀಡಿಯಾದ ಮಾಲೀಕರಾಗಿದ್ದಾರೆ. ಸಚಿನ್ ಗೋವಾದಲ್ಲಿ ಬೀರ್ ಬ್ರ್ಯಾಂಡ್‍ವೊಂದನ್ನು ಸಹ ಹೊಂದಿದ್ದಾರೆ.

    ಕಿಂಗ್‍ಫಿಶರ್ ವಿಲ್ಲಾ ವಿಜಯ್ ಮಲ್ಯ ಮಾಲೀಕತ್ವದಲ್ಲಿದ್ದಾಗ ಐಷಾರಾಮಿ ಪಾರ್ಟಿಗಳನ್ನ ಆಯೋಜಿಸಿದ್ದರಿಂದ ಈ ಮನೆ ತುಂಬಾ ಫೇಮಸ್ ಆಗಿತ್ತು.

    2016ರ ಅಕ್ಟೋಬರ್‍ನಲ್ಲಿ ಮೊದಲ ಬಾರಿಗೆ ಕಿಂಗ್‍ಫಿಶರ್ ವಿಲ್ಲಾವನ್ನ 85.29 ರೂ.ಗಳ ಕನಿಷ್ಠ ಬೆಲೆಗೆ ಹರಾಜಿಗಿಡಲಾಗಿತ್ತು. ಆದ್ರೆ ಮನೆ ಕೊಳ್ಳಲು ಯಾರೂ ಮುಂದೆ ಬರದ ಕಾರಣ ಡಿಸೆಂಬರ್‍ನಲ್ಲಿ ಬೆಲೆ ಕಡಿಮೆ ಮಾಡಿ 81 ಕೋಟಿ ರೂ. ಕನಿಷ್ಠ ಬೆಲೆಗೆ ಮತ್ತೆ ಹರಾಜಿಗಿಡಲಾಗಿತ್ತು. ಇದೂ ವಿಫಲವಾಗಿ ಬಳಿಕ 2017ರ ಮಾರ್ಚ್‍ನಲ್ಲಿ 73 ಕೋಟಿ ರೂ.ಗೆ ಮನೆಯನ್ನು ಹರಾಜಿಗಿಡಲಾಗಿತ್ತು. ಇದೀಗ ಕನಿಷ್ಠ ಬೆಲೆಗಿಂತ 1 ಲಕ್ಷ ರೂ. ಹೆಚ್ಚಿನ ಹಣ ಕೊಟ್ಟು  ಖಾಸಗಿ ಒಪ್ಪಂದದ ಮೇಲೆ ವೈಕಿಂಗ್ ಮೀಡಿಯಾ ಮನೆಯನ್ನ ಖರೀದಿಸಿದೆ.

    17 ಸಾಲದಾತರ ಒಕ್ಕೂಟ ವಿಜಯ್ ಮಲ್ಯರ 9 ಸಾವಿರ ಕೋಟಿ ರೂ. ನಷ್ಟು ಸಾಲವನ್ನು ಹಿಂಪಡೆಯಲು ಪಯತ್ನ ನಡೆಸಿವೆ. ಮಲ್ಯಗೆ ಸೇರಿದ ಮುಂಬೈನಲ್ಲಿರುವ ಮತ್ತೊಂದು ಮನೆ ಕಿಂಗ್‍ಫಿಶರ್ ಹೌಸ್ ಕೂಡ ಹರಾಜಿಗಿಡಲಾಗಿದೆ.