Tag: house

  • ರಾತ್ರೋ ರಾತ್ರಿ ಬಾಡಿಗೆ ಮನೆ ಖಾಲಿ ಮಾಡಿದ ನಟಿ ರಮ್ಯಾ!

    ರಾತ್ರೋ ರಾತ್ರಿ ಬಾಡಿಗೆ ಮನೆ ಖಾಲಿ ಮಾಡಿದ ನಟಿ ರಮ್ಯಾ!

    – 2 ಲಾರಿಗಳಲ್ಲಿ ಮನೆಯಲ್ಲಿರುವ ವಸ್ತುಗಳು ಸಾಗಾಟ
    – ಮಂಡ್ಯದಲ್ಲಿ ರಾಜಕೀಯ ಭವಿಷ್ಯವಿಲ್ಲ ಎಂದು ಊರು ಬಿಟ್ಟರೆ?

    ಮಂಡ್ಯ: ಅಂಬಿ ಅಂತಿಮ ದರ್ಶನಕ್ಕೆ ಬಾರದೇ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದ್ದ ಮಾಜಿ ಸಂಸದೆ ರಮ್ಯಾ, ರಾತ್ರೋ ರಾತ್ರಿ ಮಂಡ್ಯದಿಂದ ಮನೆ ಖಾಲಿ ಮಾಡೋ ಮೂಲಕ, ರಾಜಕೀಯವಾಗಿಯೂ ಮಂಡ್ಯದಿಂದ ದೂರ ಸರಿದರೇ ಎನ್ನುವ ಪ್ರಶ್ನೆ ಎದ್ದಿದೆ.

    ಈ ಪ್ರಶ್ನೆಗೆ ಉತ್ತರ ಎನ್ನುವಂತೆ ತಡರಾತ್ರಿ ಮಂಡ್ಯದ ವಿದ್ಯಾನಗರದಲ್ಲಿರುವ ರಮ್ಯಾ ಅವರ ಮನೆಗೆ ಬಂದ ಎರಡು ಲಾರಿಗಳಿಗೆ  ಮನೆಯ ವಸ್ತುಗಳನ್ನು ತುಂಬುತ್ತಿರುವ ದೃಶ್ಯ ಪಬ್ಲಿಕ್ ಟಿವಿಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ರಮ್ಯಾ ಮೊದಲ ಬಾರಿಗೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಸಂದರ್ಭದಲ್ಲಿ ಮಂಡ್ಯ ನಗರದಲ್ಲಿ ಮನೆ ಮಾಡಿ, ಇಲ್ಲೇ ಇದ್ದು ಜನರ ಕಷ್ಟಕ್ಕೆ ಸ್ಪಂದಿಸುವ ಭರವಸೆ ನೀಡಿದ್ದರು. ಅದಾದ ನಂತರ ಲೋಕಸಭಾ ಚುನಾವಣೆಯಲ್ಲಿ ಸೋಲನುಭವಿಸಿದ ರಮ್ಯಾ, ಸದ್ದಿಲ್ಲದೆ ಮಂಡ್ಯದಿಂದ ಮನೆ ಖಾಲಿ ಮಾಡಿ ವರ್ಷಗಟ್ಟಲೇ ಈ ಕಡೆ ತಲೆ ಹಾಕಲೇ ಇಲ್ಲ. ಇದನ್ನೂ ಓದಿ: ಅಂಬಿ ಅಂತಿಮ ದರ್ಶನಕ್ಕೆ ಬಾರದ ರಮ್ಯಾ ಅಸಲಿ ಕಾರಣ ಇಲ್ಲಿದೆ

    ಬಳಿಕ ಇದ್ದಕ್ಕಿದ್ದಂತೆ ಮಂಡ್ಯಕ್ಕೆ ಆಗಮಿಸಿದ ರಮ್ಯಾ ನಾನು ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗಿದ್ದೆ. ಈಗ ವಿದ್ಯಾಭ್ಯಾಸ ಮುಗಿಸಿ ವಾಪಸ್ ಬಂದಿದ್ದೇನೆ. ಇನ್ನು ಮುಂದೆ ನಾನು ನಿಮ್ಮ ಜೊತೆಯೇ ಇರುತ್ತೇನೆ ಎಂದು ಹೇಳಿ ಮಂಡ್ಯದಲ್ಲಿ ಎರಡನೇ ಬಾರಿಗೆ ಬಾಡಿಗೆ ಮನೆ ಮಾಡಿದ್ದರು. ಮತ್ತೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಕನಸು ಕಂಡಿದ್ದ ರಮ್ಯಾ ಅವರಿಗೆ, ಕಾಂಗ್ರೆಸ್ ಜೆಡಿಎಸ್ ಮೈತ್ರಿ ಬಿಸಿತುಪ್ಪವಾಗಿ ಪರಿಣಮಿಸಿತ್ತು.

    ಇತ್ತೀಚೆಗೆ ನಡೆದ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಯಾಗಿ, ಕಾಂಗ್ರೆಸ್ ಪಕ್ಷ ಜೆಡಿಎಸ್‍ಗೆ ಮಂಡ್ಯ ಲೋಕಸಭಾ ಕ್ಷೇತ್ರ ಬಿಟ್ಟುಕೊಟ್ಟಿತ್ತು. ಅದರಂತೆ ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಮಂಡ್ಯ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷ ಜೆಡಿಎಸ್‍ಗೆ ಬಿಟ್ಟುಕೊಡುವುದು ಬಹುತೇಕ ಖಚಿತವಾಗಿದೆ. ಇದನ್ನೂ ಓದಿ:ರಮ್ಯಾಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಮಂಡ್ಯ ಜನತೆ

    ಮಂಡ್ಯದಲ್ಲಿ ನನಗೆ ರಾಜಕೀಯ ನೆಲೆಯಿಲ್ಲ ಎಂದು ಯೋಚಿಸಿದ ರಮ್ಯಾ ಈ ಹಿಂದೆಯೇ ಮಂಡ್ಯ ತೊರೆಯುವ ಯೋಚನೆ ಮಾಡಿದ್ದರು. ಇದೇ ವೇಳೆ ಅಂಬರೀಶ್ ಅವರು ಮೃತಪಟ್ಟಾಗಲೂ ಅವರ ಅಂತಿಮ ದರ್ಶನ ಪಡೆಯಲು ರಮ್ಯಾ ಮಂಡ್ಯಕ್ಕೆ ಬರಲಿಲ್ಲ. ಇದರಿಂದ ಆಕ್ರೋಶಗೊಂಡ ಅಂಬಿ ಅಭಿಮಾನಿಗಳು ರಮ್ಯಾ ನಮ್ಮ ಪಾಲಿಗೆ ಸತ್ತಂತೆ ಎಂದು ಸಿಟ್ಟು ಹೊರಹಾಕಿದ್ರು. ಈ ಎಲ್ಲ ಬೆಳವಣಿಗೆ ನಡುವೆಯೇ ರಾತ್ರೋರಾತ್ರಿ ರಮ್ಯಾ ಅವರ ಮನೆಯಲ್ಲಿದ್ದ ವಸ್ತುಗಳನ್ನು ಎರಡು ಲಾರಿಗಳ ಮೂಲಕ ಹೊರಗೆ ಸಾಗಿಸಲಾಗುತ್ತಿದೆ. ಇದೆಲ್ಲವನ್ನು ನೋಡಿದರೆ ಮಂಡ್ಯದಲ್ಲಿ ನನಗಿನ್ನು ರಾಜಕೀಯವಾಗಿ ಭವಿಷ್ಯವಿಲ್ಲ ಎಂದು ಶಾಶ್ವತವಾಗಿ ರಮ್ಯಾ ಮಂಡ್ಯ ತೊರೆಯುತ್ತಿದ್ದಾರೆ ಎಂಬ ಚರ್ಚೆ ಜಿಲ್ಲೆಯಲ್ಲಿ ಶುರುವಾಗಿದೆ. ಇದನ್ನೂ ಓದಿ: ಮಾಜಿ ಸಂಸದೆ ರಮ್ಯಾ ಸೋಲಿನ ಗುಟ್ಟು ಬಿಚ್ಚಿಟ್ಟ ಮಾಜಿ ಶಾಸಕ ಶಿವರಾಮೇಗೌಡ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಕ್ರಮ ಕಟ್ಟಡ ನಿರ್ಮಾಣದಿಂದ ಕುಸಿದ ಮನೆಯ ಕಾಂಪೌಂಡ್ – 10 ಲಕ್ಷ ರೂ. ನಷ್ಟ

    ಅಕ್ರಮ ಕಟ್ಟಡ ನಿರ್ಮಾಣದಿಂದ ಕುಸಿದ ಮನೆಯ ಕಾಂಪೌಂಡ್ – 10 ಲಕ್ಷ ರೂ. ನಷ್ಟ

    ಶಿವಮೊಗ್ಗ: ಕಾರ್ಪೊರೇಟ್ ಆಸ್ಪತ್ರೆ ನಿರ್ಮಾಣಕ್ಕೆ ತೆಗೆದ ಪಾಯದಿಂದಾಗಿ ಪಕ್ಕದ ಮನೆಯ ಕಾಂಪೌಂಡ್ ಕುಸಿದು ಲಕ್ಷಾಂತರ ರೂ. ನಷ್ಟವಾಗಿರುವ ಘಟನೆ ನಗರದ ಜಯನಗರ ಮುಖ್ಯ ರಸ್ತೆಯಲ್ಲಿ ನಡೆದಿದೆ.

    ಜಯನಗರ ಮುಖ್ಯ ರಸ್ತೆಯಲ್ಲಿನ ಜ್ಯೋತಿ ಪ್ರಕಾಶ್ ಅವರ ಮನೆಯ ಕಾಂಪೌಂಡ್ ಕುಸಿದಿದೆ. ಕಾಂಪೌಂಡ್ ಕುಸಿದಿದ್ದರಿಂದ ಸುಮಾರು 10 ಲಕ್ಷ ರೂ.ಗಳಷ್ಟು ನಷ್ಟವಾಗಿದೆ ಎಂದು ಮನೆ ಮಾಲೀಕರು ದೂರಿದ್ದಾರೆ.

    ಅಕ್ರಮವಾಗಿ ಖಾಸಗಿ ಆಸ್ಪತ್ರೆಯನ್ನು ಜಯನಗರದಲ್ಲಿ ಕಟ್ಟಲಾಗುತ್ತಿದೆ. ಈ ಕಟ್ಟಡ ನಿರ್ಮಾಣಕ್ಕಾಗಿ ತೆಗೆದ ಅಡಿಪಾಯದ ಗುಂಡಿಯಿಂದಾಗಿ ಜ್ಯೋತಿ ಪ್ರಕಾಶ್ ಅವರ ಮನೆಯ ಕಾಂಪೌಂಡ್ ಕುಸಿದಿದೆ. ಹೀಗೆ ಮುಂದೊಂದು ಅಕ್ಕಪಕ್ಕದ ಕಟ್ಟಡಗಳು ಕುಸಿದರೆ ಏನು ಗತಿಯೆಂದು ಸ್ಥಳೀಯರು ಆತಂಕದಿಂದ ಕಾಲ ಕಳೆಯುವಂತಾಗಿದೆ.

    ಕಟ್ಟಡ ನಿರ್ಮಾಣದ ನಿಯಮ ಉಲ್ಲಂಘಿಸಿ ಸೆಟ್-ಬ್ಯಾಕ್ ಬಿಡದೆ ಸುಮಾರು ಐವತ್ತು ಅಡಿ ಆಳದ ಗುಂಡಿಯನ್ನು ಆಸ್ಪತ್ರೆ ನಿರ್ಮಾಣಕ್ಕಾಗಿ ತೆಗೆಯಲಾಗಿದೆ. ಇಲ್ಲಿ ಆಸ್ಪತ್ರೆ ನಿರ್ಮಾಣ ಮಾಡುವುದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಈ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

    ವಸತಿ ಪ್ರದೇಶದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಅವಕಾಶ ಇಲ್ಲ. ಆದರೆ, ಇದು ವಾಣಿಜ್ಯ ಕಟ್ಟಡ ಎಂದು ಅನುಮತಿ ಪಡೆದು ನಿರ್ಮಾಣ ಮಾಡುತ್ತಿದ್ದೇವೆ ಎಂದು ಕಾರ್ಪೊರೇಟ್ ಆಸ್ಪತ್ರೆಯ ಪಾಲುದಾರರಲ್ಲಿ ಒಬ್ಬರಾಗಿರುವ ಡಾ.ಮಧುಸೂದನ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಒಬ್ಬ ಲಾಕ್ ತೆಗ್ದ, ಇಬ್ಬರು ದೂಡಿಕೊಂಡು ಹೋದ್ರು- ಕಳ್ಳರ ಕೈ ಚಳಕದ ವಿಡಿಯೋ ನೋಡಿ

    ಒಬ್ಬ ಲಾಕ್ ತೆಗ್ದ, ಇಬ್ಬರು ದೂಡಿಕೊಂಡು ಹೋದ್ರು- ಕಳ್ಳರ ಕೈ ಚಳಕದ ವಿಡಿಯೋ ನೋಡಿ

    ಬೆಳಗಾವಿ: ಮನೆಯೊಂದರ ಮುಂದೆ ನಿಲ್ಲಿಸಿದ ಪ್ರೀಮಿಯರ್ ಪಧ್ಮಿನಿ ಕಾರನ್ನು ಕಳ್ಳರು ಕದಿಯುತ್ತಿರುವ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿರುವ ಘಟನೆ ನಗರದ ಮರಾಠಾ ಕಾಲೋನಿಯಲ್ಲಿ ಇಂದು ನಡೆದಿದೆ.

    ಮರಾಠಾ ಕಾಲೋನಿಯ ನಿವಾಸಿಯಾದ ಸಾವಂತ್ ಎಂಬುವವರ ಕಾರು ಕಳುವಾಗಿದೆ. ಯಾವಾಗಲು ಸಾವಂತ್ ಕಾರನ್ನು ತಮ್ಮ ಮನೆಯ ಮುಂದೆ ನಿಲ್ಲಿಸುತ್ತಿದ್ದರು. ಆದರೆ ಇಂದು ಬೆಳಗಿನ ಜಾವ ಮನೆ ಹೊರಗೆ ನಿಲ್ಲಿಸಿದ್ದ ಅವರ ಕಾರನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಈ ವೇಳೆ ಮನೆ ಹೊರಗಿದ್ದ ಸಿಸಿಟಿವಿಯಲ್ಲಿ ಕಳ್ಳರು ಕಾರನ್ನು ಕದ್ದಿರುವ ದೃಶ್ಯವು ಸೆರೆಯಾಗಿದೆ.

    ಒಟ್ಟು ಮೂವರು ಕಳ್ಳರು ಸೇರಿ ಕಾರನ್ನು ಕದ್ದಿದ್ದಾರೆ. ಮನೆ ಮುಂದೆ ನಿಂತಿದ್ದ ಕಾರಿನ ಲಾಕ್ ತೆಗೆದು ಒಬ್ಬ ಕಾರು ಚಲಾಯಿಸಿದರೆ, ಇನ್ನು ಉಳಿದ ಇಬ್ಬರು ಸ್ಟೈಲಾಗಿ ಕಾರನ್ನು ದೂಡಿಕೊಂಡು ಹೋಗಿದ್ದಾರೆ. ಈ ದೃಶ್ಯವು ಕಾರಿನ ಮಾಲೀಕ ಮನೆಯ ಸಿಸಿಟಿವಿ ದೃಶ್ಯಾವಳಿಯನ್ನು ನೋಡಿದಾಗ ತಿಳಿದು ಬಂದಿದೆ.

    ಘಟನೆ ಕುರಿತು ತಿಳಕವಾಡಿ ಪೊಲೀಸ್ ಠಾಣೆಯಲ್ಲಿ ಸಾವಂತ್ ಪ್ರಕರಣ ದಾಖಲಿಸಿದ್ದು, ಪೊಲೀಸರು ಸಿಸಿಟಿವಿ ದೃಶ್ಯದ ಆಧಾರದ ಮೇಲೆ ತನಿಖೆಯನ್ನು ನಡೆಸುತ್ತಿದ್ದಾರೆ.

    https://www.youtube.com/watch?v=LeWnzOyfgvQ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂಬಿಯನ್ನು ನೋಡಲು ಹೆಚ್ಚು ಮನೆಗೆ ಹೋಗುತ್ತಿದ್ರು ಸ್ಟಾರ್ ನಟ

    ಅಂಬಿಯನ್ನು ನೋಡಲು ಹೆಚ್ಚು ಮನೆಗೆ ಹೋಗುತ್ತಿದ್ರು ಸ್ಟಾರ್ ನಟ

    ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಅವರನ್ನು ನೋಡಲು ಚಾಲೆಂಜಿಗ್ ಸ್ಟಾರ್ ದರ್ಶನ್ ಹೆಚ್ಚು ಅವರ ಮನೆಗೆ ಹೋಗುತ್ತಿದ್ದರು.

    ಅಂಬರೀಶ್ ಅವರ ಮನೆಗೆ ತಾರೆಯರು ಆಗಾಗ ಹೋಗುತ್ತಿರುತ್ತಾರೆ. ಆದರೆ ಪ್ರಮುಖವಾಗಿ ದರ್ಶನ್ ಅವರು ಅತಿ ಹೆಚ್ಚು ಬಾರಿ ಅಂಬರೀಶ್ ಅವರ ಮನೆಗೆ ಹೋಗಿದ್ದಾರೆ. ಅವರನ್ನು ಹೊರತುಪಡಿಸಿ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಹೋಗುತ್ತಿದ್ದರು. ಅಲ್ಲದೇ ಮೋಹನ್ ಬಾಬು, ರಜನಿಕಾಂತ್, ಚಿರಂಜೀವಿ ಬೆಂಗಳೂರಿಗೆ ಬಂದಾಗ ಅವರ ಮನೆಗೆ ಭೇಟಿ ನೀಡುತ್ತಿದ್ದರು. ಆದರೆ ದರ್ಶನ್ ಅವರು ಬಿಡುವು ಇದ್ದಾಗಲೆಲ್ಲಾ ಅಂಬಿ ಮನೆಗೆ ಹೋಗುತ್ತಿದ್ದರು ಎಂದು ಅಂಬರೀಶ್ ಅವರ ಆಪ್ತರಾದ ಸೀನಣ್ಣ ಜೇಳಿದ್ದಾರೆ.

    ದರ್ಶನ್ ಅಂಬಿ ಮನೆಯಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದರು. ದರ್ಶನ್ ಅಂಬಿಯ ಮತ್ತೊಂದು ಮಗನಂತೆ ಇದ್ದರು. ಅಂಬಿ, ದರ್ಶನ್‍ಗೆ ಲೇ ಹುಷಾರಾಗಿರು. ಕೆಟ್ಟ ಕೆಲಸ ಮಾಡಬೇಡ ಹಾಗೂ ಕೆಟ್ಟವರ ಜೊತೆ ಸೇರಬೇಡ ಎಂದು ಹೇಳುತ್ತಿದ್ದರು. ಅಣ್ಣ ಅವರ ಮಗ ಅಭಿಷೇಕ್‍ಗೂ ಇದೇ ಮಾತು ಹೇಳುತ್ತಿದ್ದರು. ದರ್ಶನ್ ಅವರು ಕೂಡ ಅಣ್ಣನ ಯಾವುದೇ ಮಾತು ಇಲ್ಲ ಎಂದು ಹೇಳುತ್ತಿರಲಿಲ್ಲ. ಅದು ಸಿನಿಮಾಗೆ ಸಂಬಂಧಿಸಬಹುದು ಅಥವಾ ಅವರ ಖಾಸಗಿ ವಿಷಯಕ್ಕೆ ಸಂಬಂಧಿಸಬಹುದು. ದರ್ಶನ್ ಅವರ ಮಾತನ್ನು ಪಾಲಿಸುತ್ತಿದ್ದರು.

    ದರ್ಶನ್ ಶೂಟಿಂಗ್‍ನಲ್ಲಿ ಬ್ಯುಸಿಯಾಗಿ ಮನೆಗೆ ಬರಲು ಆಗದೇ ಇದ್ದಾಗ ಫೋನ್ ಮಾಡುತ್ತಿದ್ದನು. ಕೆಲವೊಮ್ಮೆ ನಾನು ಫೋನ್ ರಿಸೀವ್ ಮಾಡುತ್ತಿದ್ದೆ. ಆಗ ಅವರು ಮೊದಲು ಅಣ್ಣನಿಗೆ ಫೋನ್ ಕೊಡಿ ಎಂದು ಹೇಳಿ ಹೇಗಿದ್ದೀಯಾ ಅಣ್ಣ ಎಂದು ಕೇಳುತ್ತಿದ್ದರು. ಆಗ ಅವರು ‘ನಾನು ಚೆನ್ನಾಗೇ ಇದ್ದೀನಿ. ನನಗೆ ಏನಾಗಿದೆ. ನೀನ್ ಹೇಗೆ ಇದ್ದೀಯಾ. ಎಲ್ಲಿಇದ್ದಿಯಾ ಎಂದು ಕೇಳಿತ್ತಿದ್ದರು. ಹೀಗೆ ಅವರಿಬ್ಬರ ಮಾತು ಶುರುವಾಗುತ್ತಿತ್ತು ಎಂದು ಸೀನಣ್ಣ ತಿಳಿಸಿದ್ದಾರೆ.

    ಸದ್ಯ ಅಂಬಿ ನಿಧನರಾಗಿದ್ದಾಗ ದರ್ಶನ್ ಸ್ವೀಡನ್‍ನಲ್ಲಿ ಯಜಮಾನ ಚಿತ್ರದ ಶೂಟಿಂಗ್‍ನಲ್ಲಿದ್ದರು. ನಂತರ ಅಂಬಿ ಅವರ ನಿಧನ ಸುದ್ದಿ ಕೇಳಿ ದರ್ಶನ್ ವಿದೇಶದಲ್ಲಿ ಶೂಟಿಂಗ್ ತಮ್ಮ ಚಿತ್ರದ ಚಿತ್ರೀಕರಣವನ್ನು ನಿಲ್ಲಿಸಿ ಬಹಳ ಅಡೆ ತಡೆಗಳನ್ನು ದಾಟಿ ಬೆಂಗಳೂರಿಗೆ ಲ್ಯಾಂಡ್ ಆಗಿದರು. ಎಚ್‍ಎಎಲ್ ವಿಮಾನ ನಿಲ್ದಾಣದಿಂದ ಕಂಠೀರವ ಸ್ಟೇಡಿಯಂಗೆ ಅಂಬುಲೆನ್ಸ್ ಮೂಲಕ ಮೃತ ಶರೀರ ಬಂದ ಬಳಿಕ ದರ್ಶನ್ ಅಂಬಿ ಅಂತಿಮ ನಮನ ಸಲ್ಲಿಸಿದರು. ಇದೇ ವೇಳೆ ಅಂಬಿ ಮೃತದೇಹಕ್ಕೆ ದರ್ಶನ್ ಹೆಗಲು ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮನೆ ಬೀಗ ಮುರಿದು 22 ಲಕ್ಷ ಮೌಲ್ಯದ ಚಿನ್ನಾಭರಣ, 1.50 ಲಕ್ಷ ರೂ. ನಗದು ಕಳ್ಳತನ

    ಮನೆ ಬೀಗ ಮುರಿದು 22 ಲಕ್ಷ ಮೌಲ್ಯದ ಚಿನ್ನಾಭರಣ, 1.50 ಲಕ್ಷ ರೂ. ನಗದು ಕಳ್ಳತನ

    ರಾಯಚೂರು: ಜಿಲ್ಲೆಯ ನಿಜಲಿಂಗಪ್ಪ ಕಾಲೋನಿಯಲ್ಲಿ ಮನೆ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಖದೀಮರು ಕಳ್ಳತನ ಮಾಡಿದ್ದಾರೆ.

    ರಮೇಶ್ ನಾಡಗೌಡ ಎಂಬವರ ಮನೆಯಲ್ಲಿ ಕಳ್ಳತನವಾಗಿದೆ. ನವೆಂಬರ್ 16 ಕ್ಕೆ ಮನೆಗೆ ಬೀಗ ಹಾಕಿ ರಮೇಶ್ ಹಾಗೂ ಅವರ ಕುಟುಂಬದವರು ಊರಿಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದನ್ನು ತಿಳಿದ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಮೊದಲು ಮನೆಯ ಬೀಗ ಮುರಿದು ನಂತರ ಮನೆಯಲ್ಲಿದ್ದ ಸುಮಾರು 22 ಲಕ್ಷ ಮೌಲ್ಯದ 750 ಗ್ರಾಂ ಚಿನ್ನಾಭರಣ ಹಾಗೂ 1 ಲಕ್ಷ 50 ಸಾವಿರ ರೂಪಾಯಿ ನಗದು ಕಳ್ಳತನ ಮಾಡಲಾಗಿದೆ.

    ಊರಿಗೆ ಹೋಗಿದ್ದ ರಮೇಶ್ ಹಾಗೂ ಅವರ ಕುಟುಂಬಸ್ಥರು ಇಂದು ಮನೆಗೆ ಮರಳಿದಾಗ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ.

    ಘಟನೆ ಕುರಿತು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂಬಿ ಕುಟೀರ ತಲುಪಿದ ಆಪ್ತಮಿತ್ರನ ಮನೆಯ ಊಟ

    ಅಂಬಿ ಕುಟೀರ ತಲುಪಿದ ಆಪ್ತಮಿತ್ರನ ಮನೆಯ ಊಟ

    ಬೆಂಗಳೂರು: ಸಾಹಸ ಸಿಂಹ ವಿಷ್ಣುವರ್ಧನ್ ಮನೆಯಿಂದ ರೆಬಲ್ ಸ್ಟಾರ್ ಅಂಬರೀಶ್ ಅವರ ಕುಟುಂಬದವರಿಗೆ ಊಟ ಕಳುಹಿಸಲಾಗಿದೆ.

    ಸೋಮವಾರ ಅಂಬರೀಶ್ ಅವರ ಅಂತ್ಯಕ್ರಿಯೆ ಆಗಿದ್ದು, ಇಂದು ಮನೆಯಲ್ಲಿ ಯಾರೂ ಅಡುಗೆ ಮಾಡುವುದಿಲ್ಲ. ಇದನ್ನು ತಿಳಿದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರು ತಮ್ಮ ಪಿಎಯಿಂದ ಅಂಬರೀಶ್ ಮನೆಯವರಿಗೆ ಊಟ ಕಳುಹಿಸಿಕೊಟ್ಟಿದ್ದಾರೆ.

    ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರು ಆತ್ಮೀಯ ಸ್ನೇಹಿತರಾಗಿದ್ದು, ಇಬ್ಬರ ಕುಟುಂಬದವರು ತುಂಬಾ ಆತ್ಮೀಯರಾಗಿದ್ದಾರೆ. ಈ ಸಮಯದಲ್ಲಿ ಸುಮಲತಾ ಹಾಗೂ ಅಭಿಷೇಕ್ ಊಟ ಮಾಡುವುದಿಲ್ಲ ಎಂಬುದನ್ನು ತಿಳಿದ ಭಾರತಿ ವಿಷ್ಣುವರ್ಧನ್ ಅವರು 2 ಕ್ಯಾರಿಯರ್‍ನಲ್ಲಿ ತಮ್ಮ ಮನೆಯಿಂದ ಊಟ ಪಾರ್ಸಲ್ ಕಳುಹಿಸಿದ್ದಾರೆ.

    ಕಳೆದ ಕೆಲವು ದಿನಗಳಿಂದ ಕಿಡ್ನಿ ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅಂಬರೀಶ್ ಶನಿವಾರ ರಾತ್ರಿ ಮೃತಪಟ್ಟಿದ್ದರು. ಮಂಡ್ಯ ಬಸ್ ದುರಂತ ಘಟನೆಯ ಬಳಿಕ ಸುಸ್ತಾಗಿದ್ದ ಅಂಬರೀಶ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆಂದು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂಬರೀಶ್ ಚಿಕಿತ್ಸೆ ಫಲಿಸದೇ ವಿಧಿವಶರಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಾಸ್ತು ದೋಷಕ್ಕೆ ಹೆದರಿ 2 ಲಕ್ಷ ಬಾಡಿಗೆ ವೆಚ್ಚದ ಅದ್ಧೂರಿ ಬಂಗಲೆಗೆ ಧ್ರುವ ಶಿಫ್ಟ್?

    ವಾಸ್ತು ದೋಷಕ್ಕೆ ಹೆದರಿ 2 ಲಕ್ಷ ಬಾಡಿಗೆ ವೆಚ್ಚದ ಅದ್ಧೂರಿ ಬಂಗಲೆಗೆ ಧ್ರುವ ಶಿಫ್ಟ್?

    ಬೆಂಗಳೂರು: ಶೀಘ್ರವೇ ಗೆಳತಿಯ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿರುವ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವಾಸ್ತು ದೋಷಕ್ಕೆ ಹೆದರಿ ಮನೆ ಶಿಫ್ಟ್ ಮಾಡಲು ಮುಂದಾಗಿದ್ದಾರೆ ಎನ್ನುವ ಸುದ್ದಿ ಈಗ ಸ್ಯಾಂಡಲ್‍ವುಡ್‍ನಲ್ಲಿ ಹರಿದಾಡುತ್ತಿದೆ.

    ನಟ ಧ್ರುವ ಸರ್ಜಾ ಬನಶಂಕರಿಯ ಕೆ.ಆರ್ ರಸ್ತೆಯಲ್ಲಿ ವಾಸಿಸುತ್ತಿದ್ದರು. ಈಗ ವಾಸ್ತು ದೋಷದಿಂದ ಬನಶಂಕರಿಯ ಕೆ.ಆರ್ ರಸ್ತೆಯಿಂದ ಸದಾಶಿವನಗರದಲ್ಲಿರುವ 2 ಲಕ್ಷ ಬಾಡಿಗೆ ವೆಚ್ಚದ ಅದ್ಧೂರಿ ಬಂಗಲೆಗೆ ಎಂಟ್ರಿಯಾಗಲಿದ್ದಾರೆ. ಡಿಸೆಂಬರ್ 9ರ ನಿಶ್ಚಿತಾರ್ಥದ ನಂತರ ಧ್ರುವ ತಮ್ಮ ಮನೆ ಶಿಫ್ಟ್ ಮಾಡಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: `ದ್ರಾಕ್ಷಿ’, `ಗೋಡಂಬಿ’ ಒಟ್ಟಿಗೆ ಬೇಕೆಂದ ಪ್ರಥಮ್ – ಆಸೆ ಈಡೇರಿಸಿದ ಧ್ರುವ ಸರ್ಜಾ

    ಧ್ರುವ ಹಾಗೂ ಪ್ರೇರಣಾ ತುಂಬಾ ಸಿಂಪಲ್ ಆಗಿ ಹಿಂದೂ ಸಂಪ್ರದಾಯದಂತೆ ಡಿಸೆಂಬರ್ ಮೊದಲ ವಾರದಲ್ಲಿ ರಿಂಗ್ ಬದಲಾಯಿಸಿಕೊಳ್ಳುವ ಮೂಲಕ ಎಂಗೇಜ್ಮೆಂಟ್ ಮಾಡಿಕೊಳ್ಳಲಿದ್ದಾರೆ. ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಆಂಜನೇಯ ದೇವಸ್ಥಾನದಲ್ಲಿ ಎಂಗೇಜ್ಮೆಂಟ್ ನಡೆಯಲಿದೆ.

    ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಅವರ ನಿಶ್ಚಿತಾರ್ಥದಲ್ಲಿ ಅರುಣ್ ಸಾಗರ್ ಆಂಜನೇಯನ ಮೂರ್ತಿಯ ಸೆಟ್ ಹಾಕಲಿದ್ದಾರೆ. ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಹಾಗೂ ಆಪ್ತರು ಮಾತ್ರ ಭಾಗಿಯಾಗಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಯಸ್ಸಾದ ತಾಯಿ ಗಲೀಜು ಮಾಡ್ತಾಳೆಂದು ರಾತ್ರಿ ಹೊತ್ತು ಚೈನ್ ಕಟ್ಟಿ ಹೊರದಬ್ಬಿದ್ದ ಮಗ-ಸೊಸೆ

    ವಯಸ್ಸಾದ ತಾಯಿ ಗಲೀಜು ಮಾಡ್ತಾಳೆಂದು ರಾತ್ರಿ ಹೊತ್ತು ಚೈನ್ ಕಟ್ಟಿ ಹೊರದಬ್ಬಿದ್ದ ಮಗ-ಸೊಸೆ

    ಹಾಸನ: ವಯಸ್ಸಾದ ತಾಯಿ ಮನೆಯಲ್ಲಿ ಗಲೀಜು ಮಾಡುತ್ತಾಳೆ, ರಾತ್ರಿ ಹೊತ್ತು ಮನೆ ಮಂದಿಯ ನೆಮ್ಮದಿಗೆ ಭಂಗ ತರುತ್ತಾಳೆ ಅನ್ನೋ ಒಂದೇ ಕಾರಣಕ್ಕೆ ಹೆತ್ತ ಮಗ ಹಾಗೂ ಸೊಸೆ ಸೇರಿ ವಯೋವೃದ್ಧೆಯನ್ನು ಮನೆಯಿಂದ ಹೊರಗೆ ಚೈನ್ ನಲ್ಲಿ ಕಟ್ಟಿ ಹಾಕುತ್ತಿದ್ದ ಅಮಾನವೀಯ ಘಟನೆ ಹಾಸನ ಜಿಲ್ಲೆ ಬೇಲೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಶೇಷಮ್ಮ(78) ಜನ್ಮ ಕೊಟ್ಟ ಮಗನಿಂದ ಹೊರಬಿದ್ದಿದ್ದ ನತದೃಷ್ಟ ತಾಯಿ. ಬೇಲೂರಿನ ತಹಸೀಲ್ದಾರ್ ಕಚೇರಿ ಹಿಂಭಾಗದಲ್ಲಿರುವ ಮನೆಯ ಹೊರಗಿನ ಆರ್‍ಸಿಸಿ ಮೆಟ್ಟಿಲಿಗೆ ಸರಪಳಿ ಕಟ್ಟಿ ನಿತ್ಯವೂ ಶೇಷಮ್ಮನನ್ನು ರಾತ್ರಿ ವೇಳೆ ಮನೆಯಿಂದ ಹೊರ ಹಾಕುತ್ತಿದ್ದರು.

    ಮಗ, ಸೊಸೆ ಹಾಗೂ ಮೊಮ್ಮಕ್ಕಳ ನಿರ್ದಯಿ ನಡೆಯಿಂದಾಗಿ ಅಬಲೆ ಶೇಷಮ್ಮ, ಎಷ್ಟೋ ರಾತ್ರಿಗಳನ್ನು ಕೊರೆವ ಚಳಿಯಲ್ಲೇ ನಡುಗುತ್ತಾ ಕಳೆದಿದ್ದಾಳೆ. ಹಸಿವಾಗಲೀ, ನೀರಡಿಕೆಯಾಗಲೀ ಯಾರೂ ಕೇಳೋರು ಇರಲಿಲ್ಲ. ಈ ಕರುಣಾಜನಕ ದೃಶ್ಯವನ್ನು ನೆರೆ ಹೊರೆಯವರು ಕಂಡರೂ, ಮಗ-ಸೊಸೆ ಜಗಳಕ್ಕೆ ಬರುತ್ತಾರೆ ಅನ್ನೋ ಕಾರಣಕ್ಕೆ ಕಂಡೂ ಕಾಣದಂತೆ ಸುಮ್ಮನಿದ್ದರು. ಆದರೂ ಅಸಹಾಯಕ ಶೇಷಮ್ಮಳ ಅಳಲನ್ನು ಸಹಿಸಲಾಗದ ಕೆಲವರು, ಸ್ಥಳೀಯ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು.

    ಕೂಡಲೇ ಸ್ಪಂದಿಸಿದ ಬೇಲೂರು ಪಿಎಸ್‍ಐ ಜಗದೀಶ್ ಹಾಗೂ ಸಿಬ್ಬಂದಿ ಶೇಷಮ್ಮಳ ಮಗ ಕುಮಾರ್ ಹಾಗೂ ಸೊಸೆಯನ್ನು ಕರೆಸಿ ಪ್ರಶ್ನಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಶೇಷಮ್ಮಳನ್ನು ಕಟ್ಟಿಹಾಕಿದ್ದ ಸರಪಳಿ ಅಲ್ಲೇ ಇದ್ದಿದ್ದು ಪತ್ತೆಯಾಗಿದೆ. ಈ ರೀತಿಯ ವರ್ತನೆ ಮರುಕಳಿಸಿದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಪೊಲೀಸರ ಸ್ಪಂದನೆಯಿಂದ ಶೇಷಮ್ಮ ಮರಳಿ ಮನೆ ಸೇರಿದ್ದಾಳೆ. ಆದರೆ ಮುಂದೇನಾಗುವುದೋ ಎಂಬ ಆತಂಕ ಅಬಲ ಅಜ್ಜಿಯನ್ನು ಕಾಡುತ್ತಲೇ ಇದೆ. ಇಳಿ ವಯಸ್ಸಿನಲ್ಲಿ ಮಕ್ಕಳು ನಮ್ಮನ್ನು ಸಾಕುತ್ತಾರೆ ಎಂದು ಎಷ್ಟೋ ತಂದೆ-ತಾಯಿ ಆಸೆ ಇಟ್ಟುಕೊಂಡಿರುತ್ತಾರೆ. ಆದರೆ ಬೇಲೂರಿನ ಶೇಷಮ್ಮಳ ಈ ಸ್ಥಿತಿ ಕಂಡವರು ಇಂಥ ಮಕ್ಕಳು ಬೇಕಾ ಅಂತ ಹಿಡಿಶಾಪ ಹಾಕುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಎವುಡ್ರಾ ನೀವು? ಎಂದುಕಿ ವಾಚ್ಚವು? ಸಿಸಿಬಿ ಅಧಿಕಾರಿಗಳ ಮೇಲೆ ರೆಡ್ಡಿ ಅತ್ತೆ ಕೂಗಾಟ

    ಎವುಡ್ರಾ ನೀವು? ಎಂದುಕಿ ವಾಚ್ಚವು? ಸಿಸಿಬಿ ಅಧಿಕಾರಿಗಳ ಮೇಲೆ ರೆಡ್ಡಿ ಅತ್ತೆ ಕೂಗಾಟ

    ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಬಳ್ಳಾರಿ ನಿವಾಸ ಅಹಂಬಾವಿ ಮೇಲೆ ದಾಳಿ ನಡೆಸಿದ ಸಿಸಿಬಿ ಅಧಿಕಾರಿಳ ಮೇಲೆ ರೆಡ್ಡಿ ಅತ್ತೆ ನಾಗಲಕ್ಷ್ಮಮ್ಮ ಕೂಗಾಟ ನಡೆಸಿದ್ದಾರೆ ಎನ್ನಲಾಗಿದೆ.

    ಇಂದು ಬೆಳಂಬೆಳಗ್ಗೆ ಅಹಂಬಾವಿ ನಿವಾಸ ಮೇಲೆ ಸಿಸಿಬಿ ಪೊಲೀಸರ 8 ಜನರ ತಂಡ ದಾಳಿ ನಡೆಸಿ ಪರಿಶೀಲನೆ ಆರಂಭಿಸಿತ್ತು. ಆದರೆ ಈ ವೇಳೆ ಮನೆಯಲ್ಲಿ ನಾಗಕ್ಷ್ಮಮ್ಮ ಅವರು ಅಧಿಕಾರಿಗಳ ಕಂಡು ಕೂಗಾಟ ನಡೆಸಿದ್ದಾರೆ ಎನ್ನಲಾಗಿದೆ. ಮನೆಯಲ್ಲಿ ತನ್ನ ಮಗಳು ಹಾಗೂ ಅಳಿಯ ಇಲ್ಲದ ವೇಳೆ ಏಕೆ ಆಗಮಿಸಿದ್ದೀರಿ. ನಿಮಗೆ ಏನು ಬೇಕು? ನನ್ನ ಮಗಳು, ಅಳಿಯ ಬಂದ ಮೇಲೆ ಬನ್ನಿ ಎಂದು ಹೇಳಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ನಾಗಲಕ್ಷ್ಮಮ್ಮ ಅವರ ಈ ಮಾತಿಗೆ ಉತ್ತರ ನೀಡಿದ ಅಧಿಕಾರಿಗಳು ಮಾಹಿತಿ ನೀಡಿ ಮಹಿಳಾ ಪೊಲೀಸರನ್ನು ಕರೆಸಿಕೊಂಡಿದ್ದಾರೆ. ಸದ್ಯ ಪರಿಶೀಲನೆ ನಡೆಯುವವರೆಗೂ ನಾಗಕ್ಷ್ಮಮ್ಮ ಅವರು ಮಹಿಳಾ ಅಧಿಕಾರಿಯ ವಶದಲ್ಲಿ ಇರಲಿದ್ದಾರೆ. ಕಳೆದ ಬಾರಿ ಮಗಳ ಮದುವೆ ವೇಳೆಯೂ ಇದೆ ರೀತಿ ದಾಳಿ ನಡೆಸಿ ಮನೆಯಲ್ಲಿದ್ದ ಸಂಭ್ರಮವನ್ನು ಹಾಳು ಮಾಡಿದ್ದರು. ಇಂದು ದೀಪಾಳಿಯ ಹಬ್ಬದ ಸಂಭ್ರಮದ ವೇಳೆಯೂ ಇದೇ ರೀತಿ ಮಾಡಿದ್ದಾರೆ ಎಂಬ ಅಂಶದ ಮೇಲೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

    ಪೊಲೀಸರ ದಾಳಿ ವೇಳೆ ಜನಾರ್ದನ ರೆಡ್ಡಿ ಮನೆಯಲ್ಲಿ ಯಾರು ಇರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು. ಮನೆಯಲ್ಲಿ ಕೆಲಸ ಮಾಡುವ ಮಂದಿ ಇದ್ದರು ಅಷ್ಟೇ. ಆದರೆ ಶಾಸಕ ಶ್ರೀರಾಮುಲು ಅವರು ಸ್ಥಳಕ್ಕೆ ಆಗಮಿಸಿ ಪೊಲೀಸರ ಪರಿಶೀಲನೆಗೆ ಬೇಕಾದ ವ್ಯವಸ್ಥೆ ಮಾಡಿದ್ದಾರೆ. ಈ ವೇಳೆಯೇ ರೆಡ್ಡಿ ಅವರ ಅತ್ತೆಯೂ ಸ್ಥಳಕ್ಕೆ ಆಗಮಿಸಿದ್ದಾರೆ.

    ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿಗೆ ತಲುಪಿದೆ ಎನ್ನಲಾದ 57 ಕೆಜಿ ಚಿನ್ನಕ್ಕಾಗಿ ಪೊಲೀಸರು ಬೆಳಗ್ಗೆಯಿಂದಲೂ ಶೋಧಕಾರ್ಯ ನಡೆಸಿದ್ದು, ಮನೆಯ ಎಲ್ಲ ಭಾಗಗಳಲ್ಲಿ ಪರಿಶೀಲನೆಯ ಕಾರ್ಯ ನಡೆಸಿದ್ದಾರೆ. ಇನ್ನು ಪೊಲೀಸರ ಶೋಧ ಕಾರ್ಯ ಮುಂದುವರಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ತನ್ನ ಮನೆ ಪರಿಚಯಿಸಿದ ಬಿಗ್-ಬಿ

    ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ತನ್ನ ಮನೆ ಪರಿಚಯಿಸಿದ ಬಿಗ್-ಬಿ

    ಮುಂಬೈ: ಬಾಲಿವುಡ್ ಬಿಗ್-ಬಿ ಅಮಿತಾಬ್ ಬಚ್ಚನ್ ಗುರುವಾರ ತಮ್ಮ 76ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ವೇಳೆ ಅಮಿತಾಬ್ ಬಚ್ಚನ್ ತಮ್ಮ ಬಂಗಲೆಯ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಹಾಕಿ ಅಭಿಮಾನಿಗಳಿಗೆ ತಮ್ಮ ಮನೆಯನ್ನು ಪರಿಚಯಿಸಿದ್ದಾರೆ.

    ಅಮಿತಾಬ್ ತಮ್ಮ ಬಂಗಲೆಯಲ್ಲಿ ಕುಟುಂಬದ ಸದಸ್ಯರಾದ ಪತ್ನಿ ಜಯಾ ಬಚ್ಚನ್, ಮಗ ಅಭಿಷೇಕ್ ಬಚ್ಚನ್, ಸೊಸೆ, ಐಶ್ವರ್ಯ ರೈ ಬಚ್ಚನ್ ಹಾಗೂ ಮೊಮ್ಮಗಳು ಆರಾಧ್ಯ ತೆಗೆದುಕೊಂಡ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಅಮಿತಾಬ್ ಬಚ್ಚನ್ ಅವರ ಮನೆ ಮುಂಬೈನ ಜುಹುದಲ್ಲಿದೆ. ಈ ಮನೆಯಲ್ಲಿ ಗಾಜಿನ ಶೆಲ್ಫ್, ಅರ್ಥಿ ಸ್ಟೋನ್(ಮಣ್ಣಿನ ಕಲ್ಲು) ಹಾಗೂ ವುಡ್‍ಗಳಿಂದ ನಿರ್ಮಾಣ ಮಾಡಲಾಗಿದೆ. ಮನೆಯೊಳಗೆ ಲ್ಯಾಂಡ್ ಸ್ಕೇಪ್, ಕರಕುಶಲ ಕೆತ್ತನೆಗಳು ಹಾಗೂ ಅಲಂಕಾರಿಕ ವಸ್ತುಗಳು ಈ ಫೋಟೋಗಳಲ್ಲಿ ಕಾಣಿಸುತ್ತದೆ.

    ಸದ್ಯ ಅಮಿತಾಬ್ ಬಚ್ಚನ್ ತಮ್ಮ ಮನೆಯ ಫೋಟೋಗಳನ್ನು ನೋಡಿದ ಅಭಿಮಾನಿಗಳು ನಿಮ್ಮ ಮನೆ ಸುಂದರವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

    View this post on Instagram

     

    My ‘progress report ‘

    A post shared by Amitabh Bachchan (@amitabhbachchan) on

     

    View this post on Instagram

     

    The daughter clicks the parents as they prepare to set off for the French ballet performance !!

    A post shared by Amitabh Bachchan (@amitabhbachchan) on

     

    View this post on Instagram

     

    Nouvelle ma belle ♥️

    A post shared by S (@shwetabachchan) on

     

    View this post on Instagram

     

    #4daysto102notout #poutgamestrong @amitabhbachchan

    A post shared by Abhishek Bachchan (@bachchan) on

     

    View this post on Instagram

     

    Happy birthday Ma. There will never be enough words in the world for me to express how much I love you.

    A post shared by Abhishek Bachchan (@bachchan) on

     

    View this post on Instagram

     

    ????MINE????????????✨

    A post shared by AishwaryaRaiBachchan (@aishwaryaraibachchan_arb) on

     

    View this post on Instagram

     

    Happy Birthday to the Big sis! Have a super year Shwetdi. Love you. #theOG #GangstaSquad

    A post shared by Abhishek Bachchan (@bachchan) on

     

    View this post on Instagram

     

    My efforts at photography .. my daughter .. who watches over as her Father dines ..

    A post shared by Amitabh Bachchan (@amitabhbachchan) on

     

    View this post on Instagram

     

    4 generations, 1 frame xx

    A post shared by S (@shwetabachchan) on

     

    View this post on Instagram

     

    #holihai

    A post shared by S (@shwetabachchan) on

     

    View this post on Instagram

     

    Sun’s out Guns out #parentals #lovelove

    A post shared by S (@shwetabachchan) on

     

    View this post on Instagram

     

    … Trying to catch up. Grand dad & Miss Daddy-long-legs @bachchan

    A post shared by S (@shwetabachchan) on

     

    View this post on Instagram

     

    – lessons in love

    A post shared by S (@shwetabachchan) on

     

    View this post on Instagram

     

    How fast they grow. #nephew #niece #BigB #family #wingman #MyBabies

    A post shared by Abhishek Bachchan (@bachchan) on

     

    View this post on Instagram

     

    A Sunday evening with well wishers .. was away for month still they kept coming .. a practice foe every Sunday for the past 35 years.

    A post shared by Amitabh Bachchan (@amitabhbachchan) on

     

    View this post on Instagram

     

    Happy Diwali from the entire family. … to the family of the world …

    A post shared by Amitabh Bachchan (@amitabhbachchan) on

     

    View this post on Instagram

     

    May the days ahead be filled with laughter and smiles of the near and dear ..

    A post shared by Amitabh Bachchan (@amitabhbachchan) on

     

    View this post on Instagram

     

    …. home where the love is ..

    A post shared by Amitabh Bachchan (@amitabhbachchan) on