Tag: house

  • ‘ಬಿಗ್ ಬಾಸ್’ ಮನೆಗೆ ಹೊಸ ರೂಪ: ಒಟಿಟಿ ಸೀಸನ್ 2ಗೆ ಸಿದ್ಧತೆ

    ‘ಬಿಗ್ ಬಾಸ್’ ಮನೆಗೆ ಹೊಸ ರೂಪ: ಒಟಿಟಿ ಸೀಸನ್ 2ಗೆ ಸಿದ್ಧತೆ

    ಳೆದ ವಾರವಷ್ಟೇ ಬಿಗ್ ಬಾಸ್ ಕನ್ನಡ ಸೀಸನ್ 10 (Bigg Boss Kannada) ಫಿನಾಲೆ ಮುಗಿಸಿಕೊಂಡಿದೆ. ಬಿಗ್ ಬಾಸ್ ಗೆದ್ದವರು ಮತ್ತು ಎಲಿಮಿನೇಟ್ ಆದವರು ಇನ್ನೂ ವಾಹಿನಿಗಳಿಗೆ ಸಂದರ್ಶನ ಕೊಡುತ್ತಲೇ ಇದ್ದಾರೆ. ಅಷ್ಟರಲ್ಲಿ ಬಿಗ್ ಬಾಸ್ ಮನೆ (House) ತನ್ನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ರೆಡಿಯಾಗಿದೆ. ಅಂದರೆ, ಬಿಗ್ ಬಾಸ್ ಮನೆಗೆ ಹೊಸ ರೂಪ ಕೊಡುವಂತಹ ಕೆಲಸ ನಡೆಯುತ್ತಿದೆ.

    ಬಿಗ್ ಬಾಸ್ ಮನೆಗೆ ಹೊಸ ರೂಪ ಯಾಕೆ ಎನ್ನುವ ಪ್ರಶ್ನೆ ಮೂಡುವುದು ಸಹಜ. ಅದಕ್ಕೂ ಉತ್ತರವಿದೆ. ಬಿಗ್ ಬಾಸ್ ಒಟಿಟಿ (OTT) ಸೀಸನ್ 2 ನಡೆಸಲು ವಾಹಿನಿಯು  ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ. ಕಳೆದ ಬಾರಿ ಒಟಿಟಿ ಸೀಸನ್ ಮೊದಲು ಮಾಡಿ, ನಂತರ ಟಿವಿಗಾಗಿ ಬಿಗ್ ಬಾಸ್ ನಡೆಸಲಾಗಿತ್ತು. ಈ ಬಾರಿ ಉಲ್ಟಾ ಆಗಿದೆ.

    ಒಟಿಟಿ ಸೀಸನ್ ಬರುತ್ತಿದೆ ಎಂದು ಗೊತ್ತಾಗುತ್ತಿದ್ದಂತೆಯೇ ಕಂಟೆಸ್ಟೆಂಟ್ ಯಾರೆಲ್ಲ ಇರಬೇಕು ಎನ್ನುವ ಲೆಕ್ಕಾಚಾರ ಕೂಡ ಹಾಕಲಾಗುತ್ತಿದೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಒಂದಷ್ಟು ಹೆಸರುಗಳು ಹರಿದಾಡುತ್ತಿವೆ. ಕೆಲವರು ಕೆಲವರ ಹೆಸರನ್ನೂ ಸಜೆಸ್ಟ್ ಮಾಡುತ್ತಿದ್ದಾರೆ.

    ಸದ್ಯಕ್ಕೆ ಬಣ್ಣ ಬಳೆಯುವಂತಹ ಕೆಲಸವನ್ನು ಮಾಡಲಾಗುತ್ತಿದೆ. ಅಧಿಕೃತವಾಗಿ ವಾಹಿನಿಯಿಂದ ಯಾವುದೇ ಮಾಹಿತಿ ಬಾರದೇ ಇದ್ದರೂ, ಜನರಂತೂ ಸಖತ್ ತಲೆ ಕೆಡಿಸಿಕೊಂಡು ಕೂತಿದ್ದಾರೆ.

  • ನಾಗರ ಹಾವು ಓಡಿಸಲು ಹೊಗೆ ಹಾಕಿದ ಕುಟುಂಬ- ಇಡೀ ಮನೆ ಭಸ್ಮ

    ನಾಗರ ಹಾವು ಓಡಿಸಲು ಹೊಗೆ ಹಾಕಿದ ಕುಟುಂಬ- ಇಡೀ ಮನೆ ಭಸ್ಮ

    ಲಕ್ನೋ: ಮನೆಯೊಳಗೆ ಸೇರಿಕೊಂಡಿದ್ದ ನಾಗರಹಾವನ್ನು (Cobra) ಓಡಿಸುವ ಸಲುವಾಗಿ ಮನೆ ಮಂದಿ ಹೊಗೆ ಹಾಕಿದ್ದಾರೆ. ಆದರೆ ಈ ಹೊಗೆ ಇಡೀ ಮನೆಯನ್ನೇ ಭಸ್ಮವಾಗಿಸಿದ ಪ್ರಕರಣವೊಂದು ಉತ್ತರಪ್ರದೇಶದಲ್ಲಿ ನಡೆದಿದೆ.

    ಈ ಘಟನೆ ಉತ್ತರಪ್ರದೇಶದ (Uttarpradesh) ಬಂದ ಎಂಬಲ್ಲಿ ಭಾನುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ನಡೆದಿದೆ. ಬೆಳಗ್ಗೆ ಕುಟುಂಬದ ಸದಸ್ಯರೊಬ್ಬರು ಮನೆಯೊಳಗೆ ಹಾವು ಸೇರಿಕೊಂಡಿದ್ದನ್ನು ಗಮನಿಸಿದ್ದಾರೆ. ಕೂಡಲೇ ಮನೆ ಮಂದಿಗೆ ಅವರು ತಿಳಿಸಿದ್ದು, ಎಲ್ಲರೂ ಸೇರಿ ಹಾವನ್ನು ಓಡಿಸುವ ಪ್ರಯತ್ನ ಮಾಡಿದ್ದಾರೆ.

    ಏನೇ ಮಾಡಿದರೂ ಹಾವು ಮನೆಯಿಂದ ಹೊರ ಹೋಗಲೇ ಇಲ್ಲ. ಹೀಗಾಗಿ ಹಸುವಿನ ಸೆಗಣಿ (ಭರಣಿ) ಮೂಲಕ ಹೊಗೆ ಹಾಕಿದ್ದಾರೆ. ಈ ಹೊಗೆಯಿಂದ ಬೆಂಕಿ ಮನೆಪೂರ್ತಿ ಹರಡಿಕೊಂಡಿದೆ. ಇಡೀ ಮನೆಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮನೆಯಲ್ಲಿದ್ದ ನಗದು, ಚಿನ್ನಾಭರಣ ಹಾಗೂ ಹಲವಾರು ಕ್ವಿಂಟಾಲ್ ಇದ್ದ ಧಾನ್ಯಗಳು ಭಸ್ಮವಾದವು.

    ದೆಹಲಿಯಲ್ಲಿ ಕೂಲಿ ಕೆಲಸ ಮಾಡುತ್ತಿರುವ ರಾಜ್‍ಕುಮಾರ್, ಪತ್ನಿ ಮತ್ತು ಐವರು ಮಕ್ಕಳೊಂದಿಗೆ ಮನೆಯಲ್ಲಿ ವಾಸವಾಗಿದ್ದರು. ಕುಟುಂಬದ ಜೀವಮಾನದ ಉಳಿತಾಯ, ಆಸ್ತಿ ಸೇರಿದಂತೆ ಲಕ್ಷಗಟ್ಟಲೆ ಹಣ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಕೇರಳದಲ್ಲಿ ಸ್ಫೋಟ ಪ್ರಕರಣ- ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ

    ಘಟನೆಯ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ತಂಡದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಕಂದಾಯ ಇಲಾಖೆಗೂ ಮಾಹಿತಿ ನೀಡಲಾಗಿದ್ದು, ಸದ್ಯ ಹಾನಿಯ ಪ್ರಮಾಣವನ್ನು ಅಂದಾಜಿಸಲಾಗುತ್ತಿದೆ.

    ಹಾವನ್ನು ಓಡಿಸುವ ಸಲುವಾಗಿ ಮನೆಯೊಳಗೆ ಹೊಗೆ ಹಾಕಿರುವುದಾಗಿ ಕುಟುಂಬದವರು ತಿಳಿಸಿದ್ದು, ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಬಸ್

    ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಬಸ್

    ಹಾಸನ: ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್ (KSRTC Bus) ಮನೆಗೆ ನುಗ್ಗಿದ ಘಟನೆ ಹಾಸನ (Hassan) ಜಿಲ್ಲೆ, ಅರಸೀಕೆರೆ (Araseekere) ತಾಲೂಕಿನ, ಅಗ್ಗುಂದ ಗ್ರಾಮದಲ್ಲಿ ನಡೆದಿದೆ.

    ಅರಸೀಕೆರೆಯಿಂದ ಹುಳಿಯಾರಿಗೆ ತೆರಳುತ್ತಿದ್ದ ಸಾರಿಗೆ ಬಸ್ ಇದಾಗಿದ್ದು, ಚಾಲಕನ ನಿಯಂತ್ರಣ ಸಿಗದೆ ಮನೆಯೊಂದಕ್ಕೆ ನುಗ್ಗಿದೆ. ಅಪಘಾತದಿಂದಾಗಿ ಮನೆ ಜಖಂ ಆಗಿದೆ. 4-5 ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ದೊಡ್ಡ ಅನಾಹುತ ತಪ್ಪಿದೆ. ಇದನ್ನೂ ಓದಿ: ಒಂದೇ ನಗರಸಭೆಗೆ ಇಬ್ಬರು ಆಯುಕ್ತರು – ಕುರ್ಚಿಗಾಗಿ ಅಧಿಕಾರಿಗಳ ಕಿತ್ತಾಟ

    ಬಸ್ ಗುದ್ದಿದ ರಭಸಕ್ಕೆ ಮನೆಯ ಗೋಡೆ ಹಾಗೂ ಕಾಂಪೌಂಡ್ ನೆಲಕ್ಕುರುಳಿವೆ. ಬಸ್ ಹಾಗೂ ವಾಸದ ನಿವಾಸಕ್ಕೆ ಹಾನಿಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಅರಸೀಕೆರೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಹಿಳೆಗೆ ಚಪಲಿ ಹಾರ ಹಾಕಿ ಮೆರವಣಿಗೆ ಪ್ರಕರಣ- 13 ಜನರ ಬಂಧನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೈಕ್‌ ಖರೀದಿಗೆ ಪೋಷಕರು ನಿರಾಕರಿಸಿದ್ದಕ್ಕೆ ಮನೆಯನ್ನೇ ಮಾರಿದ 18 ರ ಹುಡುಗ

    ಬೈಕ್‌ ಖರೀದಿಗೆ ಪೋಷಕರು ನಿರಾಕರಿಸಿದ್ದಕ್ಕೆ ಮನೆಯನ್ನೇ ಮಾರಿದ 18 ರ ಹುಡುಗ

    ಬೀಜಿಂಗ್‌: ಪೋಷಕರು ಬೈಕ್‌ ಖರೀದಿಗೆ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ 18 ವಯಸ್ಸಿನ ಹುಡುಗ ಮನೆಯನ್ನೇ ಮಾರಾಟ ಮಾಡಿರುವ ಘಟನೆ ಚೀನಾದಲ್ಲಿ (China) ನಡೆದಿದೆ.

    ಸುಮಾರು 1.15 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಅರ್ಧ ಬೆಲೆಗೆ ಮಾರಾಟ ಮಾಡಿದ್ದಾನೆ. ಈತನಿಗೆ ಇನ್ನೂ 18 ವರ್ಷ ವಯಸ್ಸಾಗಿರುವುದರಿಂದ ಕುಟುಂಬದ ಕಾನೂನು ಕ್ರಮವು ಮಾರಾಟವನ್ನು ರದ್ದುಗೊಳಿಸಿದೆ. ಮಧ್ಯ ಚೀನಾದ ಹೆನಾನ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದ್ದು, ನ್ಯಾಯಾಲಯದ ಮುಂದೆ ವಿಷಯ ಮಂಡಿಸಿದ ನಂತರ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಹವಾಯಿಯಲ್ಲಿ ಕಾಡ್ಗಿಚ್ಚು – 93 ಕ್ಕೇರಿದ ಸಾವಿನ ಸಂಖ್ಯೆ

    ಪೋಷಕರು ಬೈಕ್ ಖರೀದಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅಜ್ಜನಿಂದ ಪಿತ್ರಾರ್ಜಿತವಾಗಿ ಬಂದ ಆಸ್ತಿಯನ್ನು ಮಾರಾಟ ಮಾಡಲು ಹುಡುಗ ನಿರ್ಧರಿಸಿದ್ದ. ಪೋಷಕರಿಗೆ ತಿಳಿಸದೆ ಆಸ್ತಿ ಏಜೆಂಟರನ್ನು ಸಂಪರ್ಕಿಸಿದ್ದ. ಹುಡುಗ ಮತ್ತು ಇಬ್ಬರು ಆಸ್ತಿ ವಿತರಕರ ನಡುವಿನ ಒಪ್ಪಂದದ ಪೇಪರ್‌ಗಳನ್ನು ನ್ಯಾಯಾಲಯವು ಪರಿಶೀಲಿಸಿತು. ಇದು ಒಪ್ಪತಕ್ಕದ್ದಲ್ಲ ಎಂದು ಕೋರ್ಟ್‌ ಹೇಳಿತು.

    ಹುಡುಗ 59 ಲಕ್ಷಕ್ಕೆ ಮನೆಯನ್ನು ಮಾರಿದ್ದ. ಅದನ್ನು ಖರೀದಿದ್ದ ಏಜೆಂಟ್‌ ಲಾಭಕ್ಕಾಗಿ ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡಿದ್ದ. ಈ ವಿಚಾರ ತಿಳಿದ ಹುಡುಗನ ತಾಯಿ, ಆಸ್ತಿ ಏಜೆಂಟ್‌ನ್ನು ಸಂಪರ್ಕಿಸಿ ಒಪ್ಪಂದವನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದರು. ಅದಕ್ಕೆ ಏಜೆಂಟ್ ನಿರಾಕರಿಸಿದಾಗ, ಪೋಷಕರು ಕಾನೂನು ಮಾರ್ಗ‌ ಹಿಡಿದರು. ಇದನ್ನೂ ಓದಿ: ಸ್ವಾತಂತ್ರ್ಯ ದಿನದ ಮುನ್ನಾ ದಿನವೇ ಪಾಕ್‍ನಲ್ಲಿ ಚೀನಾ ಇಂಜಿನಿಯರ್‌ಗಳ ಮೇಲೆ ಉಗ್ರರ ದಾಳಿ – ಸೈನಿಕರು ಸೇರಿ 13 ಸಾವು

    ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್‌ ಹುಡುಗನ ನಡೆಗೆ ಅಚ್ಚರಿ ವ್ಯಕ್ತಪಡಿಸಿತ್ತು. ಈ ಒಪ್ಪಂದವನ್ನು ನ್ಯಾಯಾಲಯ ರದ್ದುಗೊಳಿಸಿತು. ಅಲ್ಲದೇ ಆಸ್ತಿಯ ಮಾಲೀಕತ್ವವನ್ನು ಹುಡುಗನಿಗೇ ನೀಡಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಸತಿ ಯೋಜನೆಗೆ ಫಲಾನುಭವಿಗಳು ನಿರಾಸಕ್ತಿ ತೋರಿದರೆ ಬೇರೆ ಅರ್ಹರಿಗೆ ಹಂಚಿಕೆ ಮಾಡಿ: ಜಮೀರ್‌

    ವಸತಿ ಯೋಜನೆಗೆ ಫಲಾನುಭವಿಗಳು ನಿರಾಸಕ್ತಿ ತೋರಿದರೆ ಬೇರೆ ಅರ್ಹರಿಗೆ ಹಂಚಿಕೆ ಮಾಡಿ: ಜಮೀರ್‌

    ಬೆಂಗಳೂರು: ವಸತಿ ಯೋಜನೆಗಳನ್ನು (Housing Scheme) ಕಾಲಮಿತಿ ಹಾಕಿಕೊಂಡು ಪೂರ್ಣಗೊಳಿಸಲು ತೀರ್ಮಾನಿಸಿರುವ ವಸತಿ ಸಚಿವ ಜಮೀರ್ ಅಹಮದ್ ಖಾನ್(Zameer Ahmed Khan) ವಿಧಾನಸಭಾ ಕ್ಷೇತ್ರಾವಾರು ಶಾಸಕರ ಸಭೆ ಆರಂಭಿಸಿದ್ದಾರೆ.

    ಮಂಗಳವಾರ ವಿಕಾಸಸೌಧದಲ್ಲಿ ಇಬ್ಬರು ಸಚಿವರು ಹಾಗೂ ಹದಿನೈದು ಶಾಸಕರ ಜತೆ ಸಭೆ ನಡೆಸಿದ ಸಚಿವರು, ವಸತಿ ಇಲಾಖೆ ವ್ಯಾಪ್ತಿಯ ಗೃಹ ಮಂಡಳಿ, ಕೊಳೆಗೇರಿ ಅಭಿವೃದ್ಧಿ ಮಂಡಳಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದಿಂದ ಪ್ರತಿ ಕ್ಷೇತ್ರವಾರು ಅನುಷ್ಠಾನದಲ್ಲಿರುವ ವಸತಿ ಯೋಜನೆಗಳ ಬಗ್ಗೆ ಶಾಸಕರ ಸಮ್ಮುಖದಲ್ಲೇ ಅಧಿಕಾರಿಗಳ ಜತೆ ಸಭೆ ನಡೆಸಿ ಯೋಜನೆಗಳ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದು ಅಡೆ ತಡೆ ನಿವಾರಿಸಿ ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದ್ದಾರೆ.

    ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಜತೆಗೂಡಿ ಅನುಷ್ಠಾನ ಮಾಡುತ್ತಿರುವ ಪ್ರಧಾನ ಮಂತ್ರಿ ಗ್ರಾಮೀಣ ಅವಾಸ್ ಯೋಜನೆಯಡಿಯಲ್ಲಿ ಪ್ರತಿ ಜಿಲ್ಲೆ ಹಾಗೂ ವಿಧಾನಸಭೆ ಕ್ಷೇತ್ರಾವಾರು ಹಂಚಿಕೆ ಆಗಿರುವ ಮನೆ ಹಾಗೂ ಬಾಕಿ ಉಳಿದಿರುವ ಮನೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದು ಆದಷ್ಟು ಬೇಗ ಗ್ರಾಮಸಭೆ ಮೂಲಕ ಫಲಾನುಭವಿಗಳ ಪಟ್ಟಿ ನೀಡುವಂತೆ ತಿಳಿಸಿದ್ದಾರೆ.

    1.41 ಲಕ್ಷ ಮನೆ ಗುರಿ ಪೈಕಿ ಇನ್ನೂ 71 ಸಾವಿರ ಫಲಾನುಭವಿಗಳ ಪಟ್ಟಿ ಸಿದ್ದವಾಗಿಲ್ಲ. ಈ ತಿಂಗಳ ಅಂತ್ಯದೊಳಗೆ ಪಟ್ಟಿ ಕಳುಹಿಸಲು ಸಭೆಯಲ್ಲಿ ತಿಳಿಸಿದರು. ಹಂಚಿಕೆ ಆಗದ, ಫಲಾನುಭವಿಗಳ ನಿರಾಸಕ್ತಿ ಕಾರಣ, ಫಲಾನುಭ ವಿಗಳ ಮೊತ್ತ ಪಾವತಿಸದ, ಬ್ಲಾಕ್ ಮಾಡಲಾದ ಪ್ರಕರಣ ಗಳಲ್ಲಿ ಬೇರೆ ಅರ್ಹ ರ ಪಟ್ಟಿ ಸಿದ್ದ ಪಡಿಸಲು ಸಾಧ್ಯವೇ ಎಂಬ ಬಗ್ಗೆ ಸ್ಥಳೀಯ ಶಾಸಕರ ಜತೆ ರ್ಚಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಂದ ಪ್ರಸ್ತಾವನೆ ಸಿದ್ದ ಪಡಿಸಲು ನಿರ್ದೇಶನ ನೀಡಿದರು.

    ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ಶಾಸಕರು ಮನೆ ಕಟ್ಟಿಕೊಳ್ಳಲು ರಾಜ್ಯ ಸರ್ಕಾರ ದಿಂದ ನೀಡುವ ಸಬ್ಸಿಡಿ ಮೊತ್ತ ಹೆಚ್ಚಿಸುವಂತೆ ಮನವಿ ಮಾಡಿದರು. ಕಡಿಮೆ ಮನೆ ಕೊಟ್ಟರೂ ಮೊತ್ತ ಹೆಚ್ಚಿಸಿದರೆ ಅನುಕೂಲ ಆಗುತ್ತದೆ ಎಂದು ಅಭಿಪ್ರಾಯ ಪಟ್ಟರು. ಈ ಕುರಿತು ಮುಖ್ಯಮಂತ್ರಿ ಅವರ ಜತೆ ಚರ್ಚಿಸುವುದಾಗಿ ಸಚಿವರು ಭರವಸೆ ನೀಡಿದರು.

    ಈ ಮಧ್ಯೆ ಪ್ರಧಾನ ಮಂತ್ರಿ ಗ್ರಾಮೀಣ ಅವಾಸ್ ಯೋಜನೆ ಈ ತಿಂಗಳು ಅಂತ್ಯಕ್ಕೆ ಪೂರ್ಣ ಗೊಳ್ಳಲಿದ್ದು, ಚುನಾವಣೆ ಮತ್ತಿತರರ ಕಾರಣಕ್ಕೆ ಫಲಾನುಭವಿಗಳ ಆಯ್ಕೆ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇನ್ನೂ ಮೂರರಿಂದ ನಾಲ್ಕು ತಿಂಗಳು ಕಾಲಾವಕಾಶ ವಿಸ್ತರಿಸಲು ಕೇಂದ್ರಕ್ಕೆ ಮನವಿ ಸಲ್ಲಿಸಲು ಮಂಗಳವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು . ಈ ಬಗ್ಗೆ ಶೀಘ್ರದಲ್ಲೇ ದೆಹಲಿ ಗೆ ಭೇಟಿ ನೀಡಿ ಕೇಂದ್ರ ಸಚಿವ ಹರ್ದೀಪ್‌ ಸಿಂಗ್ ಪುರಿ ಭೇಟಿ ಮಾಡಲು ನಿರ್ಧರಿಸಲಾಯಿತು. ಇದನ್ನೂ ಓದಿ: 26 ಪಕ್ಷಗಳ ಮಹಾಮೈತ್ರಿಕೂಟಕ್ಕೆ ‘INDIA’ ಹೆಸರು ನಾಮಕರಣ

    ಸಭೆಯಲ್ಲಿ ಪಶು ಸಂಗೋಪನ ಸಚಿವ ಕೆ. ವೆಂಕಟೇಶ್, ಕಾರ್ಮಿಕ ಸಚಿವ ಸಂತೋಷ್ ಲಾಡ್, ಮಾಜಿ ಸಚಿವ ಎಚ್. ಡಿ. ರೇವಣ್ಣ, ಅಪ್ಪಾಜಿ ನಾಡಗೌಡ, ಮುಖ್ಯ ಸಚೇತಕ ಅಶೋಕ್ ಪಟ್ಟಣ್, ಡಾ. ಅಜಯ್ ಸಿಂಗ್, ಸುರೇಶ್ ಬಾಬು, ಹಂಪಾನಗೌಡ ಬಾದರ್ಲಿ, ರಾಘವೇಂದ್ರ ಹಿಟ್ನಾಳ್, ರಮೇಶ್ ಬಂಡಿ ಸಿದ್ದೇಗೌಡ, ಗುಬ್ಬಿ ಶ್ರೀನಿವಾಸ್, ಕೋನರೆಡ್ಡಿ, ಸುಬ್ಬಾರೆಡ್ಡಿ, ಲತಾ ಮಲ್ಲಿಕಾರ್ಜುನ, ಡಾ. ಶ್ರೀನಿವಾಸ್, ಕೃಷ್ಣಾ ನಾಯಕ್, ನೇಮಿರಾಜ್ ನಾಯಕ್ ಸಭೆಯಲ್ಲಿ ಪಾಲ್ಗೊಂಡಿದ್ದರು.

    ಈ ಹಿಂದೆ ರಾಮನಗರ, ಚನ್ನಪಟ್ಟಣ, ಕುಣಿಗಲ್, ಮಾಗಡಿ, ನೆಲಮಂಗಲ, ಶಾಂತಿನಗರ ಆನೇಕಲ್ ಕ್ಷೇತ್ರಗಳ ಶಾಸಕರ ಜತೆ ನಡೆದ ಸಭೆಯಲ್ಲಿ ಕೈಗೊಂಡ ಕ್ರಮ ಯಾವ ಹಂತಕ್ಕೆ ಬಂದಿದೆ ಎಂಬ ಬಗ್ಗೆಯೂ ಸಚಿವರು ಮಾಹಿತಿ ಪಡೆದರು.

     

    ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ವೆಂಕಟೇಶ್, ಪ್ರಧಾನ ಅಭಿಯಂತರ ಬಾಲರಾಜು, ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಸುಶೀಲಮ್ಮ, ಪ್ರಧಾನ ಅಭಿಯಂತರ ಸಣ್ಣ ಚಿತ್ತಯ್ಯ, ಗೃಹ ಮಂಡಳಿ ಪ್ರಧಾನ ಅಭಿಯಂತರ ಶರಣಪ್ಪ ಸುಲಗಂಟಿ ಉಪಸ್ಥಿತರಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೃತ ಸನ್ಯಾಸಿ ಮನೆಯಲ್ಲಿ ಸಿಕ್ತು 30 ಲಕ್ಷಕ್ಕೂ ಅಧಿಕ ಹಣ!

    ಮೃತ ಸನ್ಯಾಸಿ ಮನೆಯಲ್ಲಿ ಸಿಕ್ತು 30 ಲಕ್ಷಕ್ಕೂ ಅಧಿಕ ಹಣ!

    ಚಿತ್ರದುರ್ಗ: ಮೃತ ಸನ್ಯಾಸಿ (Monk) ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದ್ದು, ಇದೀಗ ಭಾರೀ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

    ಹೌದು. ಚಿತ್ರದುರ್ಗ (Chitradurga) ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ನಿವಾಸಿ ಗಂಗಾಧರ ಶಾಸ್ತ್ರಿ (70) ವಾರದ ಹಿಂದೆ ಮೃತಪಟ್ಟಿದ್ದರು. ಇದೀಗ ಇವರ ಮನೆಯಲ್ಲಿ 30 ಲಕ್ಷ ಹಣ ಪತ್ತೆಯಾಗಿದೆ.

    ಇವರು ಶಾಸ್ತ್ರ ಹೇಳುವುದು, ಶುಭ ಕಾರ್ಯದ ಪೂಜೆ ಮಾಡಿಸುತ್ತಿದ್ದರು. 16 ಎಕರೆ ಜಮೀನಿದ್ದು 4 ಎಕರೆ ತೆಂಗಿನ ತೋಟ, ಗದ್ದೆಯನ್ನು ಹೊಂದಿದ್ದರು. ಭಕ್ತರಿಂದ ಬಂದ ಕಾಣಿಕೆ ಹಣವೇ 46 ಸಾವಿರ ರೂ. ಹೆಚ್ಚಿದೆ. ಒಟ್ಟಿನಲ್ಲಿ ಇದೀಗ ಕೃಷಿ ಮತ್ತಿತರೆ ಆದಾಯದಿಂದ ಬಂದ 30 ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿದೆ.

    2 ದಿನಗಳ ಹಿಂದೆ ಶಾಸ್ತ್ರಿ ಮನೆ ಪರಿಶೀಲಿಸಿದಾಗ ಹಣ ಪತ್ತೆಯಾಗಿದ್ದು, ಭಕ್ತರು ಶಾಕ್ ಆಗಿದ್ದಾರೆ. ಒಂಟಿಯಾಗಿ ಬದುಕು ಸವೆಸಿದ್ದ ಶಾಸ್ತ್ರಿಯವರು ಮನೆಯ ವಿವಿಧೆಡೆ ಹಣ ಇರಿಸಿದ್ದರು. ಇದನ್ನೂ ಓದಿ: ಅಕ್ರಮ ಆಸ್ತಿ ಕೇಸ್‌; ಕೆ.ಆರ್‌. ಪುರಂ ತಹಶೀಲ್ದಾರ್‌ ಸಹೋದರ ಸೇರಿ ನಾಲ್ವರಿಗೆ ಲೋಕಾಯುಕ್ತ ನೋಟಿಸ್‌

    ಸದ್ಯ ಜುಲೈ 7ಕ್ಕೆ ಭಕ್ತರ ಸಭೆ ಕರೆದು ಸಮಿತಿ ರಚಿಸಿ ಜಮೀನಿನಲ್ಲಿ ಗಂಗಾಧರ ಶಾಸ್ತ್ರಿ ಗದ್ದುಗೆ ನಿರ್ಮಿಸಲು ಸ್ಥಳೀಯರು ನಿರ್ಧಾರ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಣಿಪುರ ಹಿಂಸಾಚಾರ – ಕೇಂದ್ರ ಸಚಿವರ ಮನೆಗೆ ಬೆಂಕಿಯಿಟ್ಟ ಕಿಡಿಗೇಡಿಗಳು

    ಮಣಿಪುರ ಹಿಂಸಾಚಾರ – ಕೇಂದ್ರ ಸಚಿವರ ಮನೆಗೆ ಬೆಂಕಿಯಿಟ್ಟ ಕಿಡಿಗೇಡಿಗಳು

    ಇಂಫಾಲ: ಈಶಾನ್ಯ ರಾಜ್ಯ ಮಣಿಪುರದಲ್ಲಿ (Manipur) ಹೆಚ್ಚುತ್ತಿರುವ ಹಿಂಸಾಚಾರದ (Violence) ನಡುವೆ ಶುಕ್ರವಾರ ನಸುಕಿನ ವೇಳೆ ಇಂಫಾಲದಲ್ಲಿರುವ (Imphal) ಕೇಂದ್ರ ಸಚಿವ ರಾಜ್‌ಕುಮಾರ್ ರಂಜನ್ ಸಿಂಗ್ (Rajkumar Ranjan Singh) ಅವರ ಮನೆಗೆ ಕೆಲ ದುಷ್ಕರ್ಮಿಗಳು ಬೆಂಕಿ (Fires) ಹಚ್ಚಿದ್ದಾರೆ.

    ಶುಕ್ರವಾರ ನಸುಕಿನ ವೇಳೆ ಈ ಘಟನೆ ನಡೆದಿದೆ. ಕಿಡಿಗೇಡಿಗಳು ಸಿಂಗ್ ಅವರ ಮನೆಗೆ ದಾಳಿ ಮಾಡಿ ಬೆಂಕಿ ಹಚ್ಚಿದ್ದಾರೆ. ಸದ್ಯ ಘಟನೆ ವೇಳೆ ಕೇಂದ್ರ ಸಚಿವರು ಮನೆಯಲ್ಲಿ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ವಾರದ ಆರಂಭದಲ್ಲಿ ರಾಜ್ಯ ಸಚಿವ ಹಾಗೂ ಬಿಜೆಪಿ ನಾಯಕ ನೆಮ್ಚಾ ಕಿಪ್ಗೆನ್ ಅವರ ಮನೆಗೂ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಇದರ ನಡುವೆ ಮಣಿಪುರದ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್, ಈ ಬಗ್ಗೆ ಅನೇಕ ಹಂತಗಳಲ್ಲಿ ಚರ್ಚೆ ನಡೆಸಲಾಗುತ್ತಿದ್ದು, ಹಿಂಸಾಚಾರದಲ್ಲಿ ತೊಡಗಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಬ್ರಿಟನ್‌ನಲ್ಲಿ ತ್ರಿವರ್ಣ ಧ್ವಜ ತೆಗೆದಿದ್ದ ಖಲಿಸ್ತಾನಿ ಉಗ್ರ ಅವತಾರ್ ಸಿಂಗ್ ನಿಗೂಢ ಸಾವು

    ಮಣಿಪುರದಲ್ಲಿ ಪರಿಶಿಷ್ಟ ಪಂಗಡ ಮೀಸಲಾತಿ ವಿಚಾರವಾಗಿ ಮೈತೇಯಿ ಹಾಗೂ ಕುಕಿ ಸಮುದಾಯದ ನಡುವೆ ಕಳೆದ ಒಂದು ತಿಂಗಳಿನಿಂದ ಹಿಂಸಾಚಾರ ನಡೆಯುತ್ತಲೇ ಇದೆ. ಇದುವರೆಗೆ ಘಟನೆಯಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಬುಧವಾರ ನಡೆದ ಹಿಂಸಾಚಾರದಲ್ಲಿ 9 ಜನರು ಸಾವನ್ನಪ್ಪಿದ್ದಾರೆ. 10ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮೇಘಸ್ಫೋಟದ ಆತಂಕ – ಜೂ.18, 19ರಂದು ಬೆಂಗ್ಳೂರಲ್ಲಿ ಭಾರೀ ಮಳೆಯ ಮುನ್ಸೂಚನೆ

  • ಜೋರು ಮಳೆ ಬರುತ್ತೆ, ಮನೆ ಖಾಲಿ ಮಾಡಿ – ಜನರ ಆಕ್ರೋಶಕ್ಕೆ ಕಾರಣವಾಯ್ತು ಜಿಲ್ಲಾಡಳಿತದ ನೋಟಿಸ್

    ಜೋರು ಮಳೆ ಬರುತ್ತೆ, ಮನೆ ಖಾಲಿ ಮಾಡಿ – ಜನರ ಆಕ್ರೋಶಕ್ಕೆ ಕಾರಣವಾಯ್ತು ಜಿಲ್ಲಾಡಳಿತದ ನೋಟಿಸ್

    ಮಡಿಕೇರಿ: ರಾಜ್ಯಕ್ಕೆ ಮುಂಗಾರು ಪೂರ್ವ ಮಳೆ (Rain) ಅಧಿಕೃತವಾಗಿ ಪ್ರವೇಶ ಪಡೆದಿದ್ದು, ಕೊಡಗು (Kodagu) ಜಿಲ್ಲೆಯಲ್ಲಿ ಈಗಾಗಲೇ ಆಗೊಮ್ಮೆ ಈಗೊಮ್ಮೆ ಸಾಧಾರಣ ಮಳೆ ಸುರಿಯುತ್ತಿದೆ. ಆದರೆ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಸಹಜವಾಗಿಯೇ ಅದು ವಿಪರೀತವಾಗಿ ಸುರಿಯುತ್ತದೆ.

    ಒಂದು ವೇಳೆ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ದೇ ಆದಲ್ಲಿ ನದಿ ಪಾತ್ರದ ಜನರಿಗೆ ಮತ್ತೆ ಕಂಟಕ ಮಾತ್ರ ತಪ್ಪಿದ್ದಲ್ಲ. ಹೀಗಾಗಿ ಕೊಡಗು ಜಿಲ್ಲಾಡಳಿತ ಮಳೆಗಾಲವನ್ನು ಎದುರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಅಲ್ಲದೇ ಗ್ರಾಮ ಪಂಚಾಯಿತಿಯಿಂದ ನದಿ ಪಾತ್ರದ ಜನರಿಗೆ ನೋಟಿಸ್ ಒಂದು ನೀಡಿದ್ದು, ಅದು ಜನಾಕ್ರೋಶಕ್ಕೆ ಕಾರಣವಾಗಿದೆ.

    ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕರಡಿಗೋಡು ಗ್ರಾಮದಲ್ಲಿ ನದಿಪಾತ್ರದ ಜನರಿಗೆ ಸಿದ್ದಾಪುರ ಗ್ರಾಮ ಪಂಚಾಯಿತಿಯಿಂದ ಜನರು ಸುರಕ್ಷಿತ ಸ್ಥಳಗಳಿಗೆ, ಸಂಬಂಧಿಕರ ಮನೆಗಳಿಗೆ ತೆರಳುವಂತೆ ನೋಟಿಸ್ ನೀಡಿದೆ. ಆದರೆ ಪರ್ಯಾಯ ವ್ಯವಸ್ಥೆಗಳನ್ನೇ ಮಾಡದೆ ನೋಟಿಸ್ ನೀಡಿರುವುದಕ್ಕೆ ಜನರಿಂದ ಆಕ್ರೋಶ ವ್ಯಕ್ತವಾಗಿದೆ.

    ಕಳೆದ ಹಲವು ವರ್ಷಗಳಿಂದ ಪ್ರವಾಹ ಸಂತ್ರಸ್ತರಿಗೆ ಇನ್ನೂ ಮನೆಗಳು ವಿತರಣೆಯಾಗಿಲ್ಲ. ಹೀಗಿರುವಾಗಲೂ ಪರ್ಯಾಯ ವ್ಯವಸ್ಥೆ ಮಾಡದೆ ಗ್ರಾಮದ ನೂರಾರು ಕುಟುಂಬಗಳ ಮನೆಗಳ ಮುಂದೆ ನೋಟಿಸ್ ಅಂಟಿಸಿರುವ ಕ್ರಮಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿ ವರ್ಷವೂ ಇಲಾಖೆಗಳಿಗೆ ಒಂದು ನೋಟಿಸ್ ನೀಡಿ ಕೈ ತೊಳೆದುಕೊಳ್ಳುತ್ತಾರೆ. ಪ್ರತಿ ಮಳೆಗಾಲ ಬಂದರೆ ಸಾಕು ಕಾಳಜಿ ಕೇಂದ್ರಕ್ಕೆ ಹೋಗುತ್ತೇವೆ. ನಂತರ ಮನೆಗಳಿಗೆ ಬಂದರೆ ಮನೆಯಲ್ಲಿ ಇರುವ ವಸ್ತುಗಳು ಪಾತ್ರೆಗಳು ಕಾವೇರಿ ನದಿಯಲ್ಲೇ ಹೋಗಿರುತ್ತದೆ. ವರ್ಷ ವರ್ಷ ನಮಗೆ ಹೋಸ ವಸ್ತುಗಳು ತೆಗೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಶಾಶ್ವತವಾದ ಒಂದು ಸೂರು ಕೊಡಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಸಿದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಕರಡಿಗೋಡು ಹಾಗೂ ಗುಹ್ಯ ಗ್ರಾಮದಲ್ಲಿ ಕಾವೇರಿ ಪ್ರವಾಹಕ್ಕೆ ನೂರಾರು ಮನೆಗಳು ತುತ್ತಾಗುತ್ತಿದೆ. ಅಲ್ಲದೇ 2019-20 ರಲ್ಲಿ ಈ ಭಾಗದಲ್ಲಿ ಹಲವಾರು ಮನೆಗಳು ಸಂಪೂರ್ಣವಾಗಿ ಕಾವೇರಿ ನದಿಯ ಪ್ರತಾಪಕ್ಕೆ ಒಳಗಾಗಿ ಮನೆಗಳು ನಾಶವಾಗಿದ್ದವು. ಈ ಸಂದರ್ಭದಲ್ಲಿ ಅಂದಿನ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಈ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಈ ಗ್ರಾಮದ ಜನರಿಗೆ ಸುರಕ್ಷಿತ ಸ್ಥಳದಲ್ಲಿ ಒಂದು ಸೂರು ಕೊಡಿ ಎಂದು ಆಗ್ರಹಿಸಿದ್ದರು. ಇದೀಗ ಅವರೇ ಮುಖ್ಯಮಂತ್ರಿ ಆಗಿರುವುದರಿಂದ ಇಲ್ಲಿನ ಗಂಭೀರ ಸಮಸ್ಯೆಯ ಬಗ್ಗೆ ಅವರಿಗೆ ಅರಿವು ಇರುವುದರಿಂದ ಅವರಾದರೂ ಸೂರು ಕೊಡಬಹುದು ಎಂದು ಇಲ್ಲಿನ ಜನರು ನಿರೀಕ್ಷೆಯಲ್ಲಿದ್ದಾರೆ. ಇದನ್ನೂ ಓದಿ: ಜೂನ್‌ 1ಕ್ಕೆ ನಡೆಯಬೇಕಿದ್ದ ಕ್ಯಾಬಿನೆಟ್‌ ಸಭೆ ಶುಕ್ರವಾರಕ್ಕೆ ಹೋಗಿದ್ದು ಯಾಕೆ?

    ಇತ್ತ ಸಿದ್ದಾಪುರ ಗ್ರಾಮ ಪಂಚಾಯತಿ ಪಿಡಿಒ ಅವರನ್ನು ಕೇಳಿದರೆ, ಪ್ರತಿ ವರ್ಷ ಮಳೆಗಾಲದ ಸಮಯದಲ್ಲಿ ನದಿ ಪಾತ್ರದ ಜನರಿಗೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅದರಲ್ಲೂ ಗುಹ್ಯ ಗ್ರಾಮದಲ್ಲಿ ಸುಮಾರು 78 ಜನರು ಹಾಗೂ ಕರಡಿಗೋಡು ಗ್ರಾಮದಲ್ಲಿ 115 ಕುಟುಂಬಗಳು ವಾಸ ಮಾಡುತ್ತಿದೆ. ಮಳೆ ಹೆಚ್ಚಾದರೆ ಮನೆಗಳು ಬೀಳುವ ಪರಿಸ್ಥಿತಿ ಇರುವುದರಿಂದ ಅವರಿಗೆ ಮನೆ ಖಾಲಿ ಮಾಡಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಪಂಚಾಯಿತಿಯಿಂದ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.

    ಒಂದೆಡೆ ಜಿಲ್ಲಾಡಳಿತ ಮಳೆಗಾಲವನ್ನು ಎದುರಿಸಲು ಸಂಪೂರ್ಣ ಸಿದ್ಧತೆ ನಡೆಸಿದೆ ಎನ್ನುತ್ತಿದೆ. ಆದರೆ ಕಳೆದ ಬಾರಿಯ ಕಾವೇರಿ ನದಿ ಪಾತ್ರದ ಸಂತ್ರಸ್ತರಿಗೆ ಯಾವುದೇ ಬದಲಿ ವ್ಯವಸ್ಥೆ ಮಾಡದೆ, ಕೇವಲ ಮನೆ ಖಾಲಿ ಮಾಡುವಂತೆ ನೋಟಿಸ್ ನೀಡಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: 174 ಶಾಲೆಗಳಲ್ಲಿ ಕುಡಿಯಲೂ ನೀರಿಲ್ಲ – ಮಳೆಯಾಗುವ ತನಕ ಅರ್ಧ ದಿನ ಶಾಲೆ ತೆರೆಯಲು ಸರ್ಕಾರಕ್ಕೆ ಮನವಿ

  • ಪಿಎಸ್‌ಐ ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು – ಲಕ್ಷಾಂತರ ಮೌಲ್ಯದ ವಸ್ತುಗಳು ಆಹುತಿ

    ಪಿಎಸ್‌ಐ ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು – ಲಕ್ಷಾಂತರ ಮೌಲ್ಯದ ವಸ್ತುಗಳು ಆಹುತಿ

    ಹಾಸನ: ಸಬ್‌ಇನ್ಸ್‌ಪೆಕ್ಟರ್ ಮನೆಗೆ ದುಷ್ಕರ್ಮಿಗಳು ಬೆಂಕಿ (Fire) ಹಾಕಿರುವ ಘಟನೆ ಹಾಸನ (Hassan) ಜಿಲ್ಲೆ, ಅರಕಲಗೂಡು ತಾಲೂಕಿನ ಕೊಣನೂರಿನಲ್ಲಿ ನಡೆದಿದೆ.

    ಕೊಣನೂರು ಪೊಲೀಸ್ ಠಾಣೆ ಪಿಎಸ್‌ಐ (PSI) ಶೋಭಾ ಭರಮಕ್ಕನವರ್ ರಜೆಯ ಮೇಲೆ ಊರಿಗೆ ತೆರಳಿದ್ದರು. ಈ ವೇಳೆ ಅವರ ಬಾಡಿಗೆ ಮನೆಯ ಕಿಟಕಿ ಒಡೆದು ಸೀಮೆಎಣ್ಣೆ ಸುರಿದು ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಮನೆಯಲ್ಲಿದ್ದ ಲ್ಯಾಪ್‌ಟಾಪ್, ಡ್ರೆಸ್ಸಿಂಗ್ ಟೇಬಲ್, ಬಟ್ಟೆ, ಪೀಠೋಪಕಣಗಳು ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ.

    ಶೋಭಾ ರಜೆ ಮುಗಿಸಿ ಶುಕ್ರವಾರ ಮನೆಗೆ ವಾಪಸಾದಾಗ ಕಿಡಿಗೇಡಿಗಳ ಕೃತ್ಯ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು, ಡಿವೈಎಸ್‌ಪಿ ಮುರುಳೀಧರ್ ಹಾಗೂ ವೃತ್ತ ನಿರೀಕ್ಷಕ ರಘುಪತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಖಾದರ್ ವಿರುದ್ಧ ಅವಹೇಳನಕಾರಿ ಪೋಸ್ಟ್ – ಶ್ರೀರಾಮಸೇನೆ ಮುಖಂಡನ ವಿರುದ್ಧ ದೂರು

    ಶೋಭಾ ಭರಮಕ್ಕನವರ್ ಕಳೆದ ಮೂರುವರೆ ತಿಂಗಳ ಹಿಂದಷ್ಟೇ ಜಾವಗಲ್ ಪೊಲೀಸ್ ಠಾಣೆಯಿಂದ ಕೊಣನೂರು ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು. ಇದೀಗ ಘಟನೆ ಬಗ್ಗೆ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಸಿದ್ದು ಸಂಪುಟದಲ್ಲಿ ಹಲವರಿಗೆ ಸಚಿವ ಸ್ಥಾನ ಮಿಸ್

  • ಬಕೆಟ್‍ಗೆ ಮೂತ್ರ ಮಾಡಿ ಅದೇ ನೀರಿನಲ್ಲಿ ನೆಲ ಒರೆಸಿದ ಕೆಲಸದಾಕೆ!

    ಬಕೆಟ್‍ಗೆ ಮೂತ್ರ ಮಾಡಿ ಅದೇ ನೀರಿನಲ್ಲಿ ನೆಲ ಒರೆಸಿದ ಕೆಲಸದಾಕೆ!

    ಲಕ್ನೋ: ಮನೆಕೆಲಸದಾಕೆಯೊಬ್ಬಳು ತನ್ನ ಮೂತ್ರ (Urine) ದಿಂದ ಮನೆ ಶುಚಿಗೊಳಿಸಿದ ಪ್ರಸಂಗವೊಂದು ಉತ್ತರಪ್ರದೇಶದ ಗ್ರೇಟರ್ ನೊಯ್ಡಾದ ಅಜ್‍ನಾರ ಹೌಸಿಂಗ್ ಸೊಸೈಟಿಯಲ್ಲಿ ನಡೆದಿದೆ.

    ಮಹಿಳೆ ಮೂತ್ರದಿಂದ ನೆಲ ಒಡೆಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣ (Viral Video) ಗಳಲ್ಲಿ ವೈರಲ್ ಆಗಿದೆ. ಪ್ರಕರಣ ಸಂಬಂಧ ಮನೆಯ ಮಾಲೀಕರು ನೀಡಿದ ದೂರಿನ ಮೇರೆಗೆ ಪೊಲೀಸರು ಕೆಲಸದಾಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಸಬೀನಾ, ಮೊದಲು ಮಾಲೀಕರ ಆರೋಪಗಳನ್ನು ನಿರಾಕರಿಸಿದ್ದು ಬಳಿಕ ತಪ್ಪೊಪ್ಪಿಕೊಂಡಿದ್ದಾಳೆ. ಆದರೆ ಯಾಕೆ ಈ ರೀತಿ ಮಾಡಿರುವುದು ಎಂಬುದರ ಬಗ್ಗೆ ಬಾಯ್ಬಿಟ್ಟಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

    ವೀಡಿಯೋದಲ್ಲೇನಿದೆ..?: ಮನೆ ಕೆಲಸದಾಕೆ ಸಬೀನಾ ಕಟುನ್ ನೆಲ ಒರೆಸುವ ವೇಳೆ ಬಕೆಟ್‍ನಲ್ಲಿದ್ದ ನೀರಿಗೆ ಮೂತ್ರ ವಿಸರ್ಜನೆ ಮಾಡುತ್ತಿರುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ಕಂಡ ಕಂಡಲ್ಲಿ ಉಗೀಬೇಡಿ – ಎಂಜಲು ರಸ ಮಾರಿಯೇ ತಿಂಗಳಿಗೆ 40 ಲಕ್ಷ ಸಂಪಾದಿಸ್ತಾಳೆ ಈ ಮಹಿಳೆ