Tag: House-warming

  • ಕನಸಿನ ಮನೆ ಕಟ್ಟಿದ ಸಂಭ್ರಮದಲ್ಲಿ ನಿಶಾ ರವಿಕೃಷ್ಣನ್

    ಕನಸಿನ ಮನೆ ಕಟ್ಟಿದ ಸಂಭ್ರಮದಲ್ಲಿ ನಿಶಾ ರವಿಕೃಷ್ಣನ್

    ‘ಗಟ್ಟಿಮೇಳ’ ಸೀರಿಯಲ್ ಖ್ಯಾತಿಯ ನಿಶಾ ರವಿಕೃಷ್ಣನ್ (Nisha Ravikrishnan) ಅವರು ಕನಸಿನ ಹೊಸ ಮನೆ ಗೃಹಪ್ರವೇಶ (House Warming) ಮಾಡಿದ ಸಂಭ್ರಮದಲ್ಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಿರುತೆರೆ ಕಲಾವಿದರು ಭಾಗಿಯಾಗಿ ಶುಭಕೋರಿದ್ದಾರೆ. ಇದನ್ನೂ ಓದಿ:ಭಾರತೀಯ ಸೇನೆಗೆ ದೇಣಿಗೆ ಘೋಷಿಸಿದ ವಿಜಯ್ ದೇವರಕೊಂಡ – ಫ್ಯಾನ್ಸ್ ಮೆಚ್ಚುಗೆ

     

    View this post on Instagram

     

    A post shared by Manjunath Magaji (@manjunathmagaji24)

    ಹಲವು ವರ್ಷಗಳಿಂದ ಕಿರುತೆರೆಯಲ್ಲಿ ಆ್ಯಕ್ಟೀವ್ ಆಗಿರುವ ನಿಶಾ ಅವರಿಗೆ ಚೆಂದದ ಮನೆ ಕಟ್ಟಿಸಬೇಕು ಎಂಬ ಕನಸಿತ್ತು. ಅದರಂತೆ ಮೇ 9ರಂದು ಶುಭ ಶುಕ್ರವಾರ ನಿಶಾ ಹೊಸ ಮನೆಗೆ ಕಾಲಿಟ್ಟಿದ್ದಾರೆ. ಗಣಪತಿ ಹೋಮ ಹಾಗೂ ಸತ್ಯನಾರಾಯಣ ಪೂಜೆ ಮಾಡಿಸಿ ಅದ್ಧೂರಿಯಾಗಿ ಗೃಹಪ್ರವೇಶ ಮಾಡಿದ್ದಾರೆ. ಇದನ್ನೂ ಓದಿ: ಭಾರತೀಯ ಸೇನೆಗೆ ದೇಣಿಗೆ ಘೋಷಿಸಿದ ವಿಜಯ್ ದೇವರಕೊಂಡ – ಫ್ಯಾನ್ಸ್ ಮೆಚ್ಚುಗೆ

    ಈ ಕಾರ್ಯಕ್ರಮದಲ್ಲಿ ಅವರು ನಾಯಕಿಯಾಗಿ ನಟಿಸುತ್ತಿರುವ ‘ಅಣ್ಣಯ್ಯ’ ಸೀರಿಯಲ್ ತಂಡ ಕೂಡ ಭಾಗಿಯಾಗಿದ್ದರು. ನಟಿಗೆ ವಿಶ್ ಮಾಡಿದ್ದಾರೆ.

     

    View this post on Instagram

     

    A post shared by Nagashree Begar (@nagashree__begar)

    ‘ಸರ್ವ ಮಂಗಲ ಮಾಂಗಲ್ಯೆ’ ಸೀರಿಯಲ್‌ನಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದ ನಿಶಾ ಆ ನಂತರ ಗಟ್ಟಿಮೇಳ ಸೀರಿಯಲ್‌ನಲ್ಲಿ ನಾಯಕಿಯಾಗಿ ಮಿಂಚಿದ್ದರು. ‘ರೌಡಿ ಬೇಡಿ’ ಎಂದೇ ಫೇಮಸ್ ಆಗಿದ್ದರು. ಈಗ ‘ಅಣ್ಣಯ್ಯ’ ಸೀರಿಯಲ್‌ನಲ್ಲಿ ಪಾರ್ವತಿ ಹೆಸರಿನ ಡಾಕ್ಟರ್ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ. ತೆಲುಗಿನ ಕಿರುತೆರೆಯಲ್ಲೂ ಗುರುತಿಸಿಕೊಂಡಿದ್ದಾರೆ.

  • ಸ್ವಂತ ಮನೆಗೆ ಕಾಲಿಟ್ಟ ‘ಬಿಗ್ ಬಾಸ್’ ಖ್ಯಾತಿಯ ಅನುಪಮಾ ಗೌಡ

    ಸ್ವಂತ ಮನೆಗೆ ಕಾಲಿಟ್ಟ ‘ಬಿಗ್ ಬಾಸ್’ ಖ್ಯಾತಿಯ ಅನುಪಮಾ ಗೌಡ

    ‘ಬಿಗ್ ಬಾಸ್’ (Bigg Boss) ಖ್ಯಾತಿಯ ಅನುಪಮಾ ಗೌಡ (Anupama Gowda) ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ರಾಜಾ ರಾಣಿ, ಗಿಚ್ಚಿ ಗಿಲಿಗಿಲಿ, ಅನುಬಂಧ ಅವಾರ್ಡ್ಸ್, ನನ್ನಮ್ಮ ಸೂಪರ್ ಸ್ಟಾರ್ ಮುಂತಾದ ಕಾರ್ಯಕ್ರಮಗಳ ನಿರೂಪಕಿಯಾಗಿದ್ದ ಅನುಪಮಾ ಗೌಡ ಇದೀಗ ಹೊಸ ಮನೆಗೆ ಕಾಲಿಟ್ಟ ಸಂಭ್ರಮದಲ್ಲಿದ್ದಾರೆ.

    ಅನುಪಮಾ ಗೌಡ ಹೊಸ ಐಷಾರಾಮಿ ಮನೆಯೊಂದನ್ನು ಖರೀದಿಸಿದ್ದಾರೆ. ಅನುಪಮಾ ಗೌಡ ಅವರ ನೂತನ ನಿವಾಸದ ಗೃಹಪ್ರವೇಶ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದೆ. ಹಲವು ವರ್ಷಗಳ ಅವರ ಕನಸು ನನಸಾಗಿದೆ. ಇದನ್ನೂ ಓದಿ:ಮಿಸ್ ಯು ಹೆಂಡ್ತಿ.. ಈ ಮೆಸೇಜ್ ದರ್ಶನ್ ಕಳಿಸಿದ್ದಾ or ಹೇಮಂತ್ ಮಾಡಿದ್ದಾ: ಎಸ್‌ಪಿಪಿ ಪ್ರಶ್ನೆ

     

    View this post on Instagram

     

    A post shared by Neha Ramakrishna (@neharamakrishna)

    ಅನುಪಮಾ ಅವರ ಹೊಸ ಮನೆಯ ಗೃಹಪ್ರವೇಶಕ್ಕೆ ಕಿರುತೆರೆ ನಟ-ನಟಿಯರು ಹಾಜರಿದ್ದರು. ಅಂದ್ಹಾಗೆ, ತಮ್ಮ ಮನೆಗೆ ‘ನಮ್ಮನೆ’ ಅಂತ ಅನುಪಮಾ ಗೌಡ ಹೆಸರಿಟ್ಟಿದ್ದಾರೆ. ‘ನಮ್ಮನೆ’ಯ ಹೌಸ್ ವಾರ್ಮಿಂಗ್ ಸೆರಮನಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.

     

    View this post on Instagram

     

    A post shared by Kishen Bilagali (@kishenbilagali)

    ನಟಿಯ ಮನೆಯ ಕಾರ್ಯಕ್ರಮದಲ್ಲಿ ನಟಿ ಅನುಪ್ರಭಾಕರ್, ನೇಹಾ ಗೌಡ, ನಮ್ರತಾ ಗೌಡ, ಕಿಶನ್ ಬಿಳಗಲಿ, ಕಾರ್ತಿಕ್ ಮಹೇಶ್, ದಿವ್ಯಾ ಉರುಡುಗ ಸೇರಿದಂತೆ ಅನೇಕರು ಭಾಗಿಯಾಗಿ ಶುಭಕೋರಿದ್ದಾರೆ.

    ಅಂದಹಾಗೆ, ಅವರು ಕೆಲ ಸಿನಿಮಾದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಬೆಂಕಿಯಲ್ಲಿ ಅರಳಿದ ಹೂವು, ತ್ರಯಂಬಕಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಅವರಿಗೆ ಕಿರುತೆರೆ ನಟನೆ ಮತ್ತು ನಿರೂಪಣೆ ಕೈಹಿಡಿದಿದೆ.

  • ಗೃಹಪ್ರವೇಶದ ಫೋಟೋ ಹಂಚಿಕೊಂಡ ‘ನಾಗಿಣಿ 2’ ನಟಿ

    ಗೃಹಪ್ರವೇಶದ ಫೋಟೋ ಹಂಚಿಕೊಂಡ ‘ನಾಗಿಣಿ 2’ ನಟಿ

    ಪುಟ್ಟಗೌರಿ ಮದುವೆ, ನಾಗಿಣಿ 2 (Nagini 2) ಸೀರಿಯಲ್‌ಗಳ ಮೂಲಕ ಮೋಡಿ ಮಾಡಿರುವ ನಟಿ ನಮ್ರತಾ ಗೌಡ (Namratha Gowda) ತಮ್ಮ ನೂತನ ಮನೆಗೆ ಕಾಲಿಡುವ ಮೂಲಕ ಸಿಹಿಸುದ್ದಿ ನೀಡಿದ್ದರು. ಈಗ ಗೃಹಪ್ರವೇಶ ಸಮಾರಂಭದ ಸುಂದರ ಫೋಟೋಗಳನ್ನ ನಟಿ ಹಂಚಿಕೊಂಡಿದ್ದಾರೆ.

    ನಮ್ರತಾ ಅವರ ಹೊಸ ಮನೆ ಗೃಹಪ್ರವೇಶ (House Warming) ಸಮಾರಂಭ ಗ್ರ್ಯಾಂಡ್ ಆಗಿ ನಡೆದಿದೆ. ಕಿರುತೆರೆಯ ಹಲವು ಕಲಾವಿದರು ಭಾಗಿಯಾಗಿದ್ದರು. ಬಿಗ್ ಬಾಸ್ ಕಿಶನ್, ನೇಹಾ ಗೌಡ, ಕವಿತಾ ಗೌಡ, ಅನುಪಮಾ, ಸಿಂಗರ್ ಕಾರ್ತಿಕ್ ಶರ್ಮಾ, ಯಶಸ್ವಿನಿ ಸೇರಿದಂತೆ ಹಲವರು ಸಾಕ್ಷಿಯಾಗಿದ್ದರು.

    ಗೃಹಪ್ರವೇಶ ಸಮಾರಂಭದಲ್ಲಿ ನಮ್ರತಾ ಗೌಡ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಪಿಂಕ್ ಬಣ್ಣದ ಸೀರೆಯುಟ್ಟು ನಟಿ ಕಂಗೊಳಿಸಿದ್ದಾರೆ. ಪೋಷಕರ ಜೊತೆ ನಟಿ ಮನೆಯಲ್ಲಿ ಪೂಜೆ ಮಾಡುತ್ತಿರುವ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ:ಬೆಂಗಳೂರು ಏರ್‌ಪೋರ್ಟ್‌ಗೆ ಮಾಧವನ್‌ ಮೆಚ್ಚುಗೆ- ನರೇಂದ್ರ ಮೋದಿ ಪ್ರತಿಕ್ರಿಯೆ

    ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಮ್ರತಾ, ಟಿವಿ ಸೀರಿಯಲ್‌ನಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಮುಂಬರುವ ಬಿಗ್ ಬಾಸ್ ಸೀಸನ್ 10ಕ್ಕೆ ನಮ್ರತಾ ಕಾಲಿಡುತ್ತಾರೆ ಎಂದು ಹೇಳಲಾಗುತ್ತಿದೆ. ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ಹೊಸ ಮನೆಗೆ ನಟಿ ಕಾಲಿಟ್ರಾ? ಎಂಬ ಪ್ರಶ್ನೆ ಮೂಡಿದೆ.

    ಇನ್ನೂ ಕೆಲ ದಿನಗಳಿಂದ ಬಿಕಿನಿ ಫೋಟೋ ಹಂಚಿಕೊಳ್ಳುವ ಮೂಲಕ ಸೆನ್ಸೇಷನ್‌ ಕ್ರಿಯೇಟ್‌ ಮಾಡಿದ್ದರು. ಬಿಕಿನಿಯಲ್ಲಿ ನಟಿ ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನೂತನ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿ ರಕ್ಷಿತಾ- ಪ್ರೇಮ್ ದಂಪತಿ

    ನೂತನ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿ ರಕ್ಷಿತಾ- ಪ್ರೇಮ್ ದಂಪತಿ

    ಟ, ನಿರ್ದೇಶಕ ಪ್ರೇಮ್- ನಟಿ ರಕ್ಷಿತಾ ದಂಪತಿ ಹೊಸ ಮನೆಗೆ ಕಾಲಿಟ್ಟಿದ್ದಾರೆ. ನೂತನ ಮನೆಯ ಗೃಹಪ್ರವೇಶ (House Warming) ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ. ಹೊಸ ಮನೆಯ ಸಂಭ್ರಮದ ಫೋಟೋವನ್ನ ನಟಿ ರಕ್ಷಿತಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

    ಸ್ಯಾಂಡಲ್‌ವುಡ್ ನಟಿ ರಕ್ಷಿತಾ (Actress Rakshitha) ದಂಪತಿ ಹೊಸ ಮನೆ ಗೃಹಪ್ರವೇಶದ ಸಂಭ್ರಮದಲ್ಲಿದ್ದಾರೆ. ರಕ್ಷಿತಾ ತಾಯಿ, ಪುತ್ರ ಸೂರ್ಯ, ಸಹೋದರ ನಟ ರಾಣಾ (Rana) ಸೇರಿದಂತೆ ಕುಟುಂಬ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಮನೆಯ ಗೃಹ ಪ್ರವೇಶದ ಸಂದರ್ಭದ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿರುವ ರಕ್ಷಿತಾ, ಇದು ಫ್ಯಾಮಿಲಿ ಟೈಮ್ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಚೆನ್ನೈ ಟೀಮ್ ಗೆದ್ದ ಖುಷಿಯಲ್ಲಿ ಸಾಕ್ಷಿ ಧೋನಿ ಜೊತೆ ವಿಘ್ನೇಶ್ ಶಿವನ್ ಪೋಸ್

     

    View this post on Instagram

     

    A post shared by Rakshitha ???? (@rakshitha__official)

    ನಟನೆಯಿಂದ ದೂರ ಉಳಿದಿರುವ ರಕ್ಷಿತಾ, ನಿರ್ಮಾಪಕಿಯಾಗಿ ಚಿತ್ರರಂಗದಲ್ಲಿ ಸದ್ಯ ತೊಡಗಿಸಿಕೊಂಡಿದ್ದಾರೆ. ಹಾಗೆಯೇ ಟಿವಿ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಹೊಸ ಮನೆ ಕಾಲಿಟ್ಟಿರುವ ಪ್ರೇಮ್-ರಕ್ಷಿತಾ ದಂಪತಿಗೆ, ಚಿತ್ರರಂಗದ ಗಣ್ಯರು, ಅಭಿಮಾನಿಗಳು, ಸ್ನೇಹಿತರು ಶುಭಾಶಯ ತಿಳಿಸುತ್ತಿದ್ದಾರೆ.

  • ಗೃಹ ಪ್ರವೇಶದ ಮನೆಗೆ ನುಗ್ಗಿ ಮಂಗಳಮುಖಿಯರ ಕಿರಿಕ್ – ಕೇಳಿದಷ್ಟು ಹಣ ನೀಡದ್ದಕ್ಕೆ ದಾಂಧಲೆ

    ಗೃಹ ಪ್ರವೇಶದ ಮನೆಗೆ ನುಗ್ಗಿ ಮಂಗಳಮುಖಿಯರ ಕಿರಿಕ್ – ಕೇಳಿದಷ್ಟು ಹಣ ನೀಡದ್ದಕ್ಕೆ ದಾಂಧಲೆ

    ಬೆಂಗಳೂರು: ಗೃಹ ಪ್ರವೇಶದ ವೇಳೆ ಮನೆಗೆ ನುಗ್ಗಿದ ಮಂಗಳಮುಖಿಯರ ಗುಂಪೊಂದು ಕೇಳಿದಷ್ಟು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಮನೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ, ಅಸಭ್ಯವಾಗಿ ವರ್ತಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಬೆಂಗಳೂರಿನ ರಾಮಮೂರ್ತಿನಗರ ಸಮೀಪದ ಕಲ್ಕೆರೆ ಚನ್ನಸಂದ್ರದ ಪೂಜಾ ಗಾರ್ಡನ್ 2ನೇ ಹಂತದಲ್ಲಿ ಲೋಕೇಶ್ ಅವರಿಗೆ ಸೇರಿದ ಮನೆಯಲ್ಲಿ ಈ ಘಟನೆ ನಡೆದಿದೆ. ಗುರುವಾರ ಬೆಳಗ್ಗೆ 7:30ಕ್ಕೆ ಗೃಹಪ್ರವೇಶದ ಪೂಜೆ ನಡೆಯುತ್ತಿದ್ದ ವೇಳೆ ಏಕಾಏಕಿ ಮನೆಗೆ ನುಗ್ಗಿದ ಮಂಗಳಮುಖಿಯರು 10 ರೂ. ನೋಟಿನಲ್ಲಿ ದೃಷ್ಟಿ ತೆಗೆದು 25 ಸಾವಿರ ರೂ. ನೀಡುವಂತೆ ಬೇಡಿಕೆಯಿಟ್ಟಿದ್ದಾರೆ. ಇದನ್ನೂ ಓದಿ: 5 ಸ್ಟಾರ್‌ ಹೋಟೆಲ್‌ನಲ್ಲಿ ಬಂಡಾಯ ಶಾಸಕರು ಫುಲ್‌ ಬಿಂದಾಸ್ – ದಿನದ ಖರ್ಚು ಎಷ್ಟು ಗೊತ್ತಾ?‌

    ಈ ವೇಳೆ ಮೊದಲು 1 ಸಾವಿರ ರೂಪಾಯಿಯನ್ನು ಲೋಕೇಶ್ ನೀಡಿದ್ದಾರೆ. ಆದರೆ ನಮಗೆ 25 ಸಾವಿರ ರೂ. ನೀಡಲೇಬೇಕೆಂದು ಮಂಗಳಮುಖಿಯರು ಹಠಹಿಡಿದಿದ್ದಾರೆ. ನಮ್ಮ ಬಳಿ ಅಷ್ಟೊಂದು ಹಣವಿಲ್ಲ ಎಂದ ಹಣ ನೀಡಲು ನಿರಾಕರಿಸಿದ್ದಕ್ಕೆ ಮನೆಯವರಿಗೆಲ್ಲಾ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಂಗಳಮುಖಿಯರು ಅಸಭ್ಯವಾಗಿ ವರ್ತಿಸಿದ್ದಾರೆ. ಇದನ್ನೂ ಓದಿ:  ಬಿಜೆಪಿ ಇಡಿ ಅಸ್ತ್ರಕ್ಕೆ ಕಾಂಗ್ರೆಸ್ `ಅಗ್ನಿಪಥ್’ ಬ್ರಹ್ಮಾಸ್ತ್ರ – ಜೂನ್ 27ಕ್ಕೆ ಶಾಂತಿಯುತ ಸತ್ಯಾಗ್ರಹ

    transgender

    ಮುಂಗಳಮುಖಿಯರು ಅಸಭ್ಯವಾಗಿ ವರ್ತಿಸುತ್ತಿರುವುದನ್ನು ಸಹಿಸಲಾಗದೇ ಲೋಕೇಶ್ ಅವರ ಪತ್ನಿ ಆಶಾ ಎಲ್ಲರನ್ನು ಮನೆಯಿಂದ ಹೊರಗೆ ಹೋಗುವಂತೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ಮಂಗಳಮುಖಿಯರು ಲೋಕೇಶ್ ಪತ್ನಿ ಆಶಾ ಅವರ ಕೆನ್ನೆಗೆ ಹೊಡೆದಿದ್ದಾರೆ. ನಂತರ ಗಲಾಟೆ ಮಾಡದಂತೆ ಬುದ್ಧಿ ಹೇಳಲು ಬಂದ ಸಂಬಂಧಿ ಮಹೇಂದ್ರ ಅವರ ಮೇಲೂ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಲೋಕೇಶ್ ಅವರ ಮಾವ ಸೊನ್ನೆಗೌಡರನ್ನು ತಳ್ಳಾಡಿ ರಂಪಾಟ ಮಾಡಿದ್ದಾರೆ. ಗೃಹ ಪ್ರವೇಶದ ದಿನವೇ ಮನೆಯವರಿಗೆ ಹಿಡಿಶಾಪ ಹಾಕಿದ್ದಾರೆ.

    ಅಷ್ಟರಲ್ಲಿ ಲೋಕೇಶ್ ಸಂಬಂಧಿಯೊಬ್ಬರು ಹೊಯ್ಸಳ ಪೊಲೀಸರಿಗೆ ಕರೆ ಮಾಡುತ್ತಿದ್ದಂತೆ ಮನೆಯಿಂದ ಹೊರಬಂದು ಹೊರಗಿದ್ದ ಕುರ್ಚಿ ಒಡೆದು ಹಾಕಿ ಆಟೋದಲ್ಲಿ ಪರಾರಿಯಾಗಿದ್ದಾರೆ. ಪೊಲೀಸರಿಗೆ ದೂರು ಕೊಡುತ್ತೇವೆ ಎಂದಿದ್ದಕ್ಕೆ ನಿಮ್ಮನ್ನು ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಇದೀಗ ಈ ಬಗ್ಗೆ ಇದೀಗ ಲೋಕೇಶ್ ಅವರು ದೂರು ದಾಖಲಿಸಿದ್ದು, ಆರೋಪಿಗಳಿಗಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

    Live Tv

  • ದಕ್ಷಿಣ ಕನ್ನಡದ ಪುಣ್ಯಕ್ಷೇತ್ರಗಳಿಗೆ ನಟ ದರ್ಶನ್ ಭೇಟಿ

    ದಕ್ಷಿಣ ಕನ್ನಡದ ಪುಣ್ಯಕ್ಷೇತ್ರಗಳಿಗೆ ನಟ ದರ್ಶನ್ ಭೇಟಿ

    ಮಂಗಳೂರು: ಸ್ಯಾಂಡಲ್‍ವುಡ್ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

    ದರ್ಶನ್ ಅವರು ಪುತ್ತೂರಿನ ಸ್ನೇಹಿತರೊಬ್ಬರ ಗೃಹಪ್ರವೇಶ ಕಾರ್ಯಕ್ರಮಕ್ಕೆ ಬಂದಿದ್ದರು. ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ದರ್ಶನ್ ಪುತ್ತೂರಿನ ಇತಿಹಾಸ ಪ್ರಸಿದ್ಧ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

    ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಸೌತಡ್ಕ ಮಹಾಗಣಪತಿ ದೇವಸ್ಥಾನ ಹಾಗೂ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಸೌತಡ್ಕ ಹಾಗೂ ಧರ್ಮಸ್ಥಳ ದೇವಸ್ಥಾನಕ್ಕೆ ಭೇಟಿ ಕೊಟ್ಟ ಬಳಿಕ ದರ್ಶನ್ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಭೇಟಿ ನೀಡಿ ಸುಬ್ರಹ್ಮಣ್ಯನ ಅನುಗ್ರಹ ಪಡೆದರು.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆಗೆ ಅವರ ಆಪ್ತ ವರ್ಗವೂ ಭಾಗಿಯಾಗಿತ್ತು. ಇದೇ ವೇಳೆ ಅಭಿಮಾನಿಗಳು ನಟ ದರ್ಶನ್ ಅವರನ್ನು ನೋಡಿ ಸಂತಸಪಟ್ಟಿದ್ದಾರೆ.

  • ಚುನಾವಣೆ ನಂತ್ರ ಪ್ರಥಮ ಬಾರಿಗೆ ಮಂಡ್ಯಕ್ಕೆ ಆಗಮಿಸಲಿದ್ದಾರೆ ಯಶ್

    ಚುನಾವಣೆ ನಂತ್ರ ಪ್ರಥಮ ಬಾರಿಗೆ ಮಂಡ್ಯಕ್ಕೆ ಆಗಮಿಸಲಿದ್ದಾರೆ ಯಶ್

    ಮಂಡ್ಯ: ಲೋಕಸಭಾ ಚುನಾವಣೆ ನಂತರ ರಾಕಿಂಗ್ ಸ್ಟಾರ್ ಯಶ್ ಮೊದಲ ಬಾರಿಗೆ ಮಂಡ್ಯಗೆ ಆಗಮಿಸಲಿದ್ದಾರೆ.

    ಯಶ್ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆರೆಮೇಗಳದೊಡ್ಡಿ ಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ಇಂದು ಮಧ್ಯಾಹ್ನ 2 ಗಂಟೆಗೆ ಅಭಿಮಾನಿಯೊಬ್ಬರ ಮನೆಯ ಗೃಹಪ್ರವೇಶ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಯಶ್ ಆಗಮಿಸಲಿದ್ದಾರೆ ಎಂದು ಉಚ್ಚಾಟಿತ ಕೆಪಿಸಿಸಿ ಸದಸ್ಯ, ಸುಮಲತಾ ಬೆಂಬಲಿಗ ಇಂಡವಾಳು ಸಚ್ಚಿದಾನಂದ ಹೇಳಿದ್ದಾರೆ.

    ಚುನಾವಣೆ ಮುಗಿದ ಬಳಿಕ ಯಶ್ ಹಾಗೂ ದರ್ಶನ್ ಮಂಡ್ಯಕ್ಕೆ ಬರುವುದಿಲ್ಲ ಎಂದು ಜೆಡಿಎಸ್ ನಾಯಕರು ಹೇಳುತ್ತಿದ್ದರು. ಇದೀಗ ಅಭಿಮಾನಿಯ ಮನೆಯ ಗೃಹ ಪ್ರವೇಶಕ್ಕೆ ಯಶ್ ಆಗಮಿಸುತ್ತಿದ್ದಾರೆ. ಅದೇ ರೀತಿ ಮಂಡ್ಯ ಜನರ ಕಷ್ಟ ಹಾಗೂ ಸುಖಗಳಿಗೆ ಯಶ್ ಹಾಗೂ ದರ್ಶನ್ ಸ್ಪಂದಿಸುತ್ತಾರೆ. ತಮ್ಮ ಕೆಲಸದ ನಡುವೆ ಬಿಡುವಾದಾಗ ಯಶ್ ಹಾಗೂ ದರ್ಶನ್ ಮಂಡ್ಯಕ್ಕೆ ಬರುತ್ತಾರೆ. ಇಲ್ಲಿಯ ಜನರ ಜೊತೆ ಇರುತ್ತಾರೆ ಎಂದು ಸಚ್ಚಿದಾನಂದ ತಿಳಿಸಿದ್ದಾರೆ.

    ಸದ್ಯ ಯಶ್ ಆಗಮನದ ಹಿನ್ನೆಲೆಯಲ್ಲಿ ಸಚ್ಚಿದಾನಂದ ಅವರ ನೇತೃತ್ವದಲ್ಲಿ ಅದ್ಧೂರಿ ಸ್ವಾಗತಕ್ಕೆ ಬೆಸಗರಹಳ್ಳಿಯಲ್ಲಿ ಸಿದ್ಧತೆ ನಡೆಯುತ್ತಿದೆ.