Tag: House Rent

  • ಮೈಸೂರಿನಲ್ಲಿ ಬೇಕಾಬಿಟ್ಟಿ ಮನೆ ಬಾಡಿಗೆ ಕೊಡುವಂತಿಲ್ಲ – ಪೊಲೀಸ್ ಕ್ಲಿಯರೆನ್ಸ್ ಕಡ್ಡಾಯ

    ಮೈಸೂರಿನಲ್ಲಿ ಬೇಕಾಬಿಟ್ಟಿ ಮನೆ ಬಾಡಿಗೆ ಕೊಡುವಂತಿಲ್ಲ – ಪೊಲೀಸ್ ಕ್ಲಿಯರೆನ್ಸ್ ಕಡ್ಡಾಯ

    ಮೈಸೂರು: ನಗರದಲ್ಲಿ ಇನ್ಮುಂದೆ ಬೇಕಾಬಿಟ್ಟಿಯಾಗಿ ಮನೆ, ರೂಂ ಗಳನ್ನು ಬಾಡಿಗೆ (House For Rent) ನೀಡುವಂತಿಲ್ಲ. ರೂಂ, ಮನೆ ಬಾಡಿಗೆ ಕೊಡುವ ಮುನ್ನಾ ಸ್ಥಳೀಯ ಪೊಲೀಸರಿಂದ ಕ್ಲಿಯರೆನ್ಸ್ (Police Clearance) ಸರ್ಟಿಫಿಕೇಟ್ ಪಡೆಯುವುದು ಕಡ್ಡಾಯವಾಗಿದೆ.

    ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ (Mangaluru Bomb Blast) ಮಾಡಿದ ಶಾರೀಕ್ (Shariq) ಮೈಸೂರಿನಲ್ಲಿ (Mysuru) ಮನೆ ಬಾಡಿಗೆ ಪಡೆದು ವಾಸವಿದ್ದ. ಈ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವ ಪೊಲೀಸರು ಮನೆ ಬಾಡಿಗೆ ಪಡೆಯಲು ಕ್ಲಿಯರೆನ್ಸ್ ಸರ್ಟಿಫಿಕೇಟ್ ಕಡ್ಡಾಯಗೊಳಿಸಲಾಗಿದೆ. ಈ ಬಗ್ಗೆ ಮನೆ ಮಾಲೀಕರಿಗೂ ಅರಿವು ಮೂಡಿಸುವ ಕೆಲಸವನ್ನು ಪೊಲೀಸರು ಆರಂಭಿಸಿದ್ದಾರೆ. ಇದನ್ನೂ ಓದಿ: ಬಾಣಂತಿ ಡಿಸ್ಚಾರ್ಜ್ ಮಾಡಲು ಲಂಚಕ್ಕೆ ಬೇಡಿಕೆ – ಇಬ್ಬರು ವೈದ್ಯ ಸಿಬ್ಬಂದಿ ಅಮಾನತು

    ಶಾರೀಕ್ ಆರೋಗ್ಯದಲ್ಲಿ ಚೇತರಿಕೆ:
    ಶಂಕಿತ ಉಗ್ರ ಶಾರೀಕ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾನೆ. ಈ ನಡುವೆ ಉಗ್ರನ ಲಿಂಕ್ ರಹಸ್ಯ ಮತ್ತಷ್ಟು ಭೇದಿಸಿರುವ ಪೊಲೀಸರಿಗೆ ಆತಂಕಕಾರಿ ಮಾಹಿತಿಗಳು ಲಭ್ಯವಾಗಿವೆ. 26/11 ಮುಂಬೈನ ದಾಳಿಯಂತೆಯೇ ಅದೇ ದಿನವಾದ ಇಂದು ಕೂಡಾ ಮಂಗಳೂರಿನಲ್ಲಿ ಸರಣಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ ಅನ್ನೋ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. ಇದನ್ನೂ ಓದಿ: ಭದ್ರತಾ ಪಡೆಗಳಿಂದ ಎನ್‌ಕೌಂಟರ್‌ – ನಾಲ್ವರು ಮಾವೋವಾದಿಗಳ ಹತ್ಯೆ

    ಆಸ್ಪತ್ರೆ ಸುತ್ತಲೂ ಬಿಗಿ ಭದ್ರತೆ:
    ವೆಂಟಿಲೇಟರ್‌ನಲ್ಲಿದ್ದ ಶಾರೀಕ್ ಇಂದು ಸ್ವಲ್ಪಮಟ್ಟಿಗೆ ಚೇತರಿಕೆ ಕಂಡಿದ್ದಾನೆ. ಈ ನಡುವೆ ಪೊಲೀಸರು ಭದ್ರತೆ ಹೆಚ್ಚಿಸಿದ್ದು, ಆತ ಇರುವ 5ನೇ ಮಹಡಿ ಹಾಗೂ ಐಸಿಯುನಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದು, ಮೂರು ಪಾಳಿಯಲ್ಲಿ ಪೊಲೀಸರು ಆತನ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದಾರೆ. ಸ್ಫೋಟಕ ಹ್ಯಾಂಡ್ಲರ್‌ಗಳು, ಸ್ಲೀಪರ್ ಸೆಲ್‌ಗಳನ್ನು ಆಕ್ವೀವ್ ಮಾಡಿ ಆತನನ್ನು ಮುಗಿಸುವ ಯತ್ನ ನಡೆಸಿರುವ ಶಂಕೆ ಇದ್ದು ಈ ಹಿನ್ನಲೆಯಲ್ಲೂ ಪೊಲೀಸರು ಆಕ್ಟೀವ್ ಆಗಿದ್ದಾರೆ. ಸ್ವತಃ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಭದ್ರತೆ ನಿಯೋಜಿಸಿದ್ದು, ಹಿರಿಯ ಅಧಿಕಾರಿಗಳು ಆಸ್ಪತ್ತೆಯಲ್ಲೇ ಬೀಡು ಬಿಟ್ಟಿದ್ದಾರೆ.

    ಮುಂಬೈ ಸ್ಫೋಟದಂತೆ ಪ್ಲ್ಯಾನ್‌
    ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮಾತನಾಡಿದ್ದು, ಉಗ್ರ ಶಾರೀಕ್ ತನಿಖಾಧಿಕಾರಿಗಳ ಜೊತೆ ಮಾತನಾಡದೇ ಇದ್ರೂ ಸಾಕಷ್ಟು ಸ್ಫೋಟಕ ಸಂಗತಿಗಳು ಬೆಳಕಿಗೆ ಬಂದಿದೆ. ಶಾರೀಕ್ 26/11ರ ಮುಂಬೈ ಸ್ಫೋಟದಂತೆಯೇ (Mumbai BombBlast) ಮಂಗಳೂರಿನಲ್ಲೂ ಅದೇ ದಿನ ಅಂದರೆ ಇಂದು ನವೆಂಬರ್ 26 ಆಗಿರೋದ್ರಿಂದ ಇಂದೇ ಮತ್ತೊಮ್ಮೆ ಸರಣಿ ಸ್ಫೋಟ ನಡೆಸಲು ತಯಾರಿ ನಡೆಸಿದ್ದನಂತೆ. ಮುಂಬೈ ಸ್ಫೋಟದ ಉಗ್ರ ಕಸಬ್‌ನಂತೆಯೇ ಹಿಂದೂ ಸೋಗಿನಲ್ಲೇ ಮಂಗಳೂರಿಗೆ ಬಂದಿದ್ದ ಶಾರೀಕ್ ಕಳೆದ ನ.19ರ ಶನಿವಾರ ಕುಕ್ಕರ್ ಬಾಂಬ್ ಸ್ಫೋಟ ಮಾಡಲು ಬಂದು ವಿಫಲನಾಗಿ ಸಿಕ್ಕಿಬಿದ್ದಿದ್ದಾನೆ. ಒಂದು ವೇಳೆ ಆತನ ಪ್ಲ್ಯಾನ್‌ ನಂತೆಯೇ ಸ್ಫೋಟಗೊಂಡಿದ್ದರೆ ಮತ್ತೆ ಮೈಸೂರಿಗೆ ತೆರಳಿ ಬಾಂಬ್ ತಯಾರಿಸಿ ಶನಿವಾರ (ನವೆಂಬರ್ 26) ಮಂಗಳೂರಿನಲ್ಲಿ ಸರಣಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಎಂದು ಹೇಳಿದ್ದಾರೆ.

    ಎಡಿಜಿಪಿ ಅಲೋಕ್ ಕುಮಾರ್ (ADGP Alok Kumar) ಮಾತನಾಡಿ, ಉಗ್ರ ಶಾರೀಕ್‌ಗೆ ಐಸಿಸ್ ಸೇರಿ ಹಲವು ಉಗ್ರರ ಸಂಪರ್ಕವಿತ್ತು ಅನ್ನೋದು ಬೆಳಕಿಗೆ ಬಂದಿದೆ. ಈತ ಮುಸ್ಲಿಂ ಭಾಷಣಕಾರ ಝಾಕೀರ್ ನಾಯ್ಕ್ನಿಂದ ಪ್ರೇರೇಪಿತನಾಗಿದ್ದ ಅನ್ನೋದು ಮತ್ತೆ ಸಾಬೀತಾಗಿದೆ. ಸ್ಫೋಟಗೊಂಡ ಒಂದೂವರೆ ಗಂಟೆಯಲ್ಲೇ ಮಲೇಶಿಯಾದಲ್ಲಿರೋ ಝಾಕೀರ್ ನಾಯ್ಕ್ ಆತನ ಟ್ವೀಟರ್‌ನಲ್ಲಿ ಇಸ್ಲಾಂನಲ್ಲಿ ಆತ್ಮಾಹುತಿ ಬಾಂಬ್‌ಗೆ ಅವಕಾಶ ಇದ್ಯಾ ಎಂದು ಟ್ವೀಟ್ ಮಾಡಿದ್ದ. ಆತ್ಮಾಹುತಿ ಬಾಂಬ್‌ನ ಬಗೆಗಿನ ತನ್ನ ವಿಡಿಯೋವನ್ನೂ ಪೋಸ್ಟ್ ಮಾಡಿದ್ದ. ಇದೆಲ್ಲವನ್ನೂ ನೋಡುವಾಗ ಉಗ್ರ ಶಾರೀಕ್‌ನ ಲಿಂಕ್ ದೊಡ್ಡ ಮಟ್ಟದಲ್ಲೇ ಇತ್ತು ಅನ್ನೋದು ಸಾಬೀತಾಗಿದೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವೈಯಕ್ತಿಕ ಬಳಕೆಗಾಗಿ ಬಾಡಿಗೆ ನೀಡಿದ್ದರೆ ಜಿಎಸ್‌ಟಿ ಇಲ್ಲ- ಕೇಂದ್ರ

    ವೈಯಕ್ತಿಕ ಬಳಕೆಗಾಗಿ ಬಾಡಿಗೆ ನೀಡಿದ್ದರೆ ಜಿಎಸ್‌ಟಿ ಇಲ್ಲ- ಕೇಂದ್ರ

    ನವದೆಹಲಿ: ವಾಸದ ಮನೆಗಳನ್ನು ಖಾಸಗಿಗಳಿಗೆ ವೈಯಕ್ತಿಕ ಬಳಕೆಗಾಗಿ ಬಾಡಿಗೆಗೆ ನೀಡಿದ್ದರೆ ಅದಕ್ಕೆ ಜಿಎಸ್‌ಟಿ ಅನ್ವಯಸುವುದಿಲ್ಲ. ಬದಲಿಗೆ ವಾಣಿಜ್ಯ ಉದ್ದೇಶಕ್ಕೆ ನೀಡಿದ್ದರೆ ಮಾತ್ರ ಜಿಎಸ್‌ಟಿ ಅನ್ವಯವಾಗುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

    ಇತ್ತೀಚೆಗೆ ಜುಲೈ 18ರಂದು ಜಾರಿಗೆ ಬಂದ ಜಿಎಸ್‌ಟಿ ಹೊಸ ನಿಯಮಗಳ ಅನ್ವಯ ಜಿಎಸ್‌ಟಿ ಅಡಿಯಲ್ಲಿ ನೋಂದಾಯಿಸಲ್ಪಟ್ಟ ಬಾಡಿಗೆದಾರರು ವಸುನೆಯ ಮಾಲಿಕರಿಗೆ ಪಾವತಿಸುವ ಹಣಕ್ಕೆ ಶೇ.18ರಷ್ಟು ಜಿಎಸ್‌ಟಿ ಪಾವತಿಸಬೇಕು ಎಂದು ವರದಿಯಾಗಿತ್ತು. ಇದರಿಂದಾಗಿ ಸಾಕಷ್ಟು ಗೊಂದಲ ಉಂಟಾಗಿತ್ತು. ಈ ಹಿನ್ನೆಲೆಯಯಲ್ಲಿ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಮನೆ ಬಾಡಿಗೆಗೆ ಜಿಎಸ್‌ಟಿ ಇಲ್ಲ ಎಂದು ಸರ್ಕಾರ ಖಚಿತ ಪಡಿಸಿದೆ. ಇದರಿಂದಾಗಿ ಬಾಡಿಗೆದಾರರು ನಿಟ್ಟುಸಿರು ಬಿಡುವಂತಾಗಿದೆ.

    GST

    ವೈಯಕ್ತಿಕ ಬಳಕೆಗಾಗಿ ಖಾಸಗಿ ವ್ಯಕ್ತಿಗಳಿಗೆ ಮನೆಯನ್ನು ಬಾಡಿಗೆಗೆ ನೀಡಿದ್ದರೆ ಅದಕ್ಕೆ ಜಿಎಸ್‌ಟಿ ದರ ಅನ್ವಯಿಸುವುದಿಲ್ಲ. ಮನೆಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಯಾವುದಾದರೂ ಸಂಸ್ಥೆಗೆ ಬಾಡಿಗೆಗೆ ನೀಡಿದ್ದರೇ ಮಾತ್ರ ಅದಕ್ಕೆ ಜಿಎಸ್‌ಟಿ ಅನ್ವಯಿಸುತ್ತದೆ ಎಂದು ಮಾಹಿತಿ ನೀಡಿದೆ.

    ಉದ್ದಿಮೆಯ ಮಾಲೀಕ ಅಥವಾ ಪಾಲುದಾದರು ಖಾಸಗಿ ಬಳಕೆಗಾಗಿ ಬಾಡಿಗೆ ಮನೆಯನ್ನು ಪಡೆದಿದ್ದರೆ, ಅದಕ್ಕೂ ಜಿಎಸ್‌ಟಿ ಇಲ್ಲ ಎಂದು ತಿಳಿಸಿದೆ. ಇದರಿಂದಾಗಿ ಜಿಎಸ್‌ಟಿ ನೋಂದಣಿ ಮಾಡಿಕೊಂಡ ಉದ್ಯಮರು ಅಥವಾ ಪಾಲುದಾರರು ಖಾಸಗಿ ಬಳಕೆಗೆ ಮನೆಯನ್ನು ಬಾಡಿಗೆ ಪಡೆದಿದ್ದರೆ, ಅದಕ್ಕೆ ಜಿಎಸ್‌ಟಿ ಪಾವತಿಸಬೇಕು ಎಂದು ಕೆಲ ತೆರಿಗೆ ಸಲಹೆಗಾರರು ನೀಡುತ್ತಿದ್ದ ಸಲಹೆಯಿಂದಾಗಿ ಉದ್ಭವಿಸಿದ ಗೊಂದಲವೂ ಪರಿಹಾರವಾಗಿದೆ. ಇದನ್ನೂ ಓದಿ: ತ್ರಿವರ್ಣ ಧ್ವಜದ ಡಿಪಿ ಹಾಕಿದ ಆರ್‌ಎಸ್‌ಎಸ್‌

    Live Tv
    [brid partner=56869869 player=32851 video=960834 autoplay=true]

  • ಮನೆ ಬಾಡಿಗೆದಾರರಿಗೆ ಶಾಕ್ – ಹೊಸ ನಿಯಮಗಳ ಪ್ರಕಾರ ಶೇ.18 ರಷ್ಟು ತೆರಿಗೆ ಬರೆ

    ಮನೆ ಬಾಡಿಗೆದಾರರಿಗೆ ಶಾಕ್ – ಹೊಸ ನಿಯಮಗಳ ಪ್ರಕಾರ ಶೇ.18 ರಷ್ಟು ತೆರಿಗೆ ಬರೆ

    ನವದೆಹಲಿ: ಇನ್ಮುಂದೆ ಜುಲೈ 18ರಂದು ಜಾರಿಗೆ ಬಂದ ಜಿಎಸ್‌ಟಿ ಹೊಸ ನಿಯಮಗಳ ಅನ್ವಯ ಜಿಎಸ್‌ಟಿ ಅಡಿಯಲ್ಲಿ ನೋಂದಾಯಿಸಲ್ಪಟ್ಟ ಹಿಡುವಳಿದಾರನು ಆಸ್ತಿಯನ್ನು ಬಾಡಿಗೆ ಪಡೆಯಲು ಶೇ.18 ರಷ್ಟು ತೆರಿಗೆ ಪಾವತಿಸಬೇಕು. ನೀವು ಪಾವತಿಸುವ ಬಾಡಿಗೆಗೆ ಶೇ.18 ರಷ್ಟು ಜಿಎಸ್‌ಟಿ ಅನ್ವಯಿಸುತ್ತದೆ ಎಂದು ಹೇಳಲಾಗಿದೆ.

    ಈ ಹಿಂದೆ ಬಾಡಿಗೆ ಅಥವಾ ಲೀಸ್‌ನಲ್ಲಿ (ಭೋಗ್ಯಕ್ಕೆ) ನೀಡಲಾದ ಕಚೇರಿಗಳು ಅಥವಾ ವಾಣಿಜ್ಯ ಆಸ್ತಿಗಳಿಗೆ ಮಾತ್ರ ಜಿಎಸ್‌ಟಿ ವಿಧಿಸಲಾಗಿತ್ತು. ಆದರೆ ಕಾರ್ಪೊರೇಟ್ ಹೌಸ್‌ಗಳು, ವ್ಯಕ್ತಿಗಳಿಂದ ಪಡೆಯುವ ಬಾಡಿಗೆ ಅಥವಾ ಗುತ್ತಿಗೆಯ ಆಸ್ತಿಗಳ ಮೇಲೆ ಯಾವುದೇ ಜಿಎಸ್‌ಟಿ ವಿಧಿಸಲಾಗಿರಲಿಲ್ಲ. ಆದರೆ ಹೊಸ ನೀತಿಯ ಅನ್ವಯ ನೋಂದಾಯಿತ ಹಿಡುವಳಿದಾರನು ರಿವರ್ಸ್ ಚಾರ್ಜ್ ಮಕ್ಯಾನಿಸಂ (ಆರ್‌ಸಿಎಂ) ಅಡಿಯಲ್ಲಿ ತೆರಿಗೆ ಪಾವತಿಸಲು ಹೊಣೆಗಾರನಾಗಿರುತ್ತಾನೆ. ಇದನ್ನೂ ಓದಿ: ವೈಯಕ್ತಿಕ ಬಳಕೆಗಾಗಿ ಬಾಡಿಗೆ ನೀಡಿದ್ದರೆ ಜಿಎಸ್‌ಟಿ ಇಲ್ಲ- ಕೇಂದ್ರ

    ಯಾರಿಗೆ ಅನ್ವಯ?:
    ಹೊಸ ನಿಯಮಗಳ ಅನ್ವಯ ಜಿಎಸ್‌ಟಿ ಅಡಿಯಲ್ಲಿ ಆಸ್ತಿಯನ್ನು ನೋಂದಾಯಿಸಿಕೊಂಡ ಹಾಗೂ ಜಿಎಸ್‌ಟಿ ರಿಟರ್ನ್‌ಗಳನ್ನು ಸಲ್ಲಿಸಲು ಹೊಣೆಯಾಗಿದ್ದಾಗ ಮಾತ್ರ ಅವರಿಗೆ ತೆರಿಗೆ ಪಾವತಿ ಅನ್ವಯಿಸುತ್ತದೆ. ಆದರೆ ಆಸ್ತಿ ಮಾಲೀಕರು ಯಾವುದೇ ಕಾರಣಕ್ಕೂ ಜಿಎಸ್‌ಟಿ ಪಾವತಿಸಲು ಜವಾಬ್ದಾರಿಯಾಗಿರುವುದಿಲ್ಲ ಎಂದು ಹೊಸ ನಿಯಮ ಹೇಳುತ್ತದೆ. ಇದನ್ನೂ ಓದಿ: ಕುಂದಾನಗರಿಯಲ್ಲಿ ಮೂರು ಚಿರತೆ ಪ್ರತ್ಯಕ್ಷ – ಚಿರತೆ ಸೆರೆಗೆ ಅರಣ್ಯ ಸಿಬ್ಬಂದಿ ಹರಸಾಹಸ, ಡ್ರೋನ್ ಕ್ಯಾಮೆರಾ ಬಳಕೆ

    ಅಲ್ಲದೇ ಸಾಮಾನ್ಯ ವೇತನದಾರರು ವಸತಿ, ಮನೆ, ಫ್ಲಾಟ್ ಅನ್ನು ಬಾಡಿಗೆ ಅಥವಾ ಗುತ್ತಿಗೆ ಪಡೆದುಕೊಂಡರೆ ಅವರು ಜಿಎಸ್‌ಟಿ ಪಾವತಿಸಬೇಕಾಗಿಲ್ಲ. ವ್ಯಾಪಾರ ಅಥವಾ ಬ್ಯುಸಿನೆಸ್ ಮಾಡುವವರು ಮಾತ್ರ ನಿಯಮಿತಕ್ಕಿಂತ ಹೆಚ್ಚಿನ ವಹಿವಾಟು ನಿರ್ವಹಿಸುವಾಗ ಕಡ್ಡಾಯವಾಗಿ ತಮ್ಮ ಮಾಲೀಕರಿಗೆ ಜಿಎಸ್‌ಟಿ ಪಾವತಿಸಲೇಬೇಕಾಗುತ್ತದೆ ಎಂದು ಕ್ಲಿಯರ್‌ಟ್ಯಾಕ್ಸ್ನ ಸಂಸ್ಥಾಪಕ ಹಾಗೂ ಸಿಇಒ ಅರ್ಚಿತ್ ಗುಪ್ತಾ ವಿವರಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

    ಜಿಎಸ್‌ಟಿ ಮಂಡಳಿಯು 47ನೇ ಸಭೆಯ ಬಳಿಕ ಈ ಬಗ್ಗೆ ನಿರ್ಧಾರ ತೆಗೆದುಕೊಂಡಿದೆ.

    Live Tv
    [brid partner=56869869 player=32851 video=960834 autoplay=true]