Tag: house owner

  • ಯುವತಿಯ ಶೋಕಿ ಜೀವನ: ಚಿನ್ನದ ಸರಕ್ಕಾಗಿ ಮನೆ ಮಾಲೀಕರನ್ನೇ ಹತ್ಯೆಗೈದ ರೀಲ್ಸ್ ರಾಣಿ!

    ಯುವತಿಯ ಶೋಕಿ ಜೀವನ: ಚಿನ್ನದ ಸರಕ್ಕಾಗಿ ಮನೆ ಮಾಲೀಕರನ್ನೇ ಹತ್ಯೆಗೈದ ರೀಲ್ಸ್ ರಾಣಿ!

    – ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ಕು ಜೀವ ಬಲಿ

    ಬೆಂಗಳೂರು: ನೇಹಾ ಹೀರೇಮಠ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ (Hubballi) ಮತ್ತೊಂದು ಕಗ್ಗೊಲೆ ನಡೆದಿದೆ. ಅಲ್ಲದೇ ಬುಧವಾರ (ಇಂದು) ಒಂದೇ ದಿನ ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಸೇರಿದಂತೆ ರಾಜ್ಯದ ವಿವಿಧೆಡೆ ಹತ್ಯೆ ಹಾಗೂ ಆತ್ಮಹತ್ಯೆ ಪ್ರಕರಣಗಳು ನಡೆದಿವೆ.

    ಬೆಂಗಳೂರಿನ ಕೆಂಗೇರಿಯಲ್ಲಿ (Bengaluru Kengeri) ಚಿನ್ನದಾಸೆ, ಸಾಲ ತೀರಸಲು ಹಾಗೂ ತನ್ನ ಪ್ರಿಯಕರನಿಗೆ ಹಣ ಕೊಡಬೇಕೆಂಬ ಕಾರಣಕ್ಕೆ ಯುವತಿಯೊಬ್ಬಳು ಮನೆ ಮಾಲಕಿಯನ್ನೇ ಹತ್ಯೆ ಮಾಡಿದ್ದಾಳೆ. 24 ವರ್ಷ ಮೋನಿಕಾ ಹೆರಸಿನ ಯುವತಿ ಸಾಲ ತೀರಿಸಲು ಹಾಗೂ ಶೋಕಿ ಜೀವನ ನಡೆಸಲು ಬಾಡಿಗೆ ಪಡೆದುಕೊಂಡಿದ್ದ ಮನೆಯ ಮಾಲಕಿಯನ್ನೇ ಹತ್ಯೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕಳೆದ ಮೂರು ತಿಂಗಳ ಹಿಂದಯಷ್ಟೇ ಗುರುಮೂರ್ತಿ ಎಂಬುವವರ ಮನೆಯಲ್ಲಿ ಬಾಡಿಗೆಗೆ ಬಂದಿದ್ದಳು. ತನ್ನ ಪ್ರಿಯಕರನನ್ನ ಗಂಡ ಎಂದು ಹೇಳಿ ಬಾಡಿಗೆ ಮನೆ ಮಾಡಿಕೊಂಡಿದ್ದಳು. ಸದ್ಯ ಮಾಲಕಿಯನ್ನು ಹತ್ಯೆಗೈದ ಮೋನಿಕಾ ಕೆಂಗೇರಿ ಪೊಲೀಸರ ಅತಿಥಿಯಾಗಿದ್ದಾಳೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಕೇಸ್‌: ಜಾರ್ಖಂಡ್‌ನ ಕಾಂಗ್ರೆಸ್‌ ಸಚಿವ ಅಲಂಗೀರ್ ಆಲಂ ಬಂಧನ!

    ಮತ್ತೊಂದು ಪ್ರಕರಣದಲ್ಲಿ ಎಲೆಕ್ಟಾçನಿಕ್ ಸಿಟಿಯ ಖಾಸಗಿ ಕಾಲೇಜಿನ (Private College) 5ನೇ ಮಹಡಿಯಿಂದ ಬಿದ್ದು ಆಂಧ್ರ ಮೂಲದ ವಿದ್ಯಾರ್ಥಿ ಕರಸಾಲ ರಾಹುಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಗಳವಾರ ಕಂಪ್ಯೂಟರ್ ಸೈನ್ಸ್ 5ನೇ ಸೆಮಿಸ್ಟರ್ ಪರೀಕ್ಷೆ ಬರೆಯಲು ತಡವಾಗಿ ಬಂದಿದ್ದಕ್ಕೆ ತನ್ನನ್ನು ನಿಂದಿಸಿದ್ದಾರೆ ಅಂತ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ.

    ಅತ್ತ, ವಿಜಯಪುರದಲ್ಲಿ 4 ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ನವಜೋಡಿಯೊಂದು ಆತ್ಮಹತ್ಯೆಗೆ ಶರಣಾಗಿದೆ. ಮನೋಜ್‌ಕುಮಾರ ಪೋಳ – ರಾಖಿ ನೇಣಿಗೆ ಶರಣಾದ ದಂಪತಿ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಮನೆಗೆ ನುಗ್ಗಿ ಸಹೋದರಿಯರ ಮುಂದೆಯೇ ಯುವತಿಯ ಭೀಕರ ಹತ್ಯೆ – ಸಹಪಾಠಿಯಿಂದಲೇ ಕೃತ್ಯ

  • ಮಹಿಳೆ ಸ್ನಾನ ಮಾಡುವಾಗ ವೀಡಿಯೋ ಮಾಡಿದ ಮನೆ ಮಾಲೀಕ

    ಮಹಿಳೆ ಸ್ನಾನ ಮಾಡುವಾಗ ವೀಡಿಯೋ ಮಾಡಿದ ಮನೆ ಮಾಲೀಕ

    ರಾಮನಗರ: ಮನೆ ಮಾಲೀಕನೊಬ್ಬ ಮಹಿಳೆ ಸ್ನಾನ ಮಾಡುವಾಗ ವೀಡಿಯೋ ಮಾಡಿದ ಪ್ರಸಂಗವೊಂದು ರಾಮನಗರದಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ರಾಮನಗರ (Ramanagar) ಜಿಲ್ಲೆಯ ಕನಕಪುರ ನಗರದಲ್ಲಿ ಸಂತ್ರಸ್ತ ಮಹಿಳೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಇದೀಗ ಮಹಿಳೆ ಸ್ನಾನ ಮಾಡತ್ತಿರುವಾಗ ಕಾಮುಕ ಮಾಲೀಕ ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾನೆ. ಅಲ್ಲದೆ ವೀಡಿಯೋವನ್ನು ವಾಟ್ಸಪ್ ಗ್ರೂಪ್‍ಗಳಲ್ಲಿ ಶೇರ್ ಮಾಡಿದ್ದಾನೆ. ಇದನ್ನೂ ಓದಿ: ಯಾದಗಿರಿ ನಗರಸಭೆಯಿಂದ ಆಪರೇಷನ್ ಪುಣ್ಯಕೋಟಿ- ನಿಟ್ಟುಸಿರು ಬಿಟ್ಟ ಸವಾರರು

    ಇತ್ತ ಸಾಮಜಿಕ ಜಾಲತಾಣದಲ್ಲಿ ಶೇರ್ ಆದ ವಿಡಿಯೋ ನೋಡಿ ಮಹಿಳೆ ಬೆಚ್ಚಿಬಿದ್ದಿದ್ದಾರೆ. ಅಲ್ಲದೆ ಕಾಮುಕ ಧನರಾಜ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಕನಕಪುರ ಪೊಲೀಸರು, ಈ ಸಂಬಂಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗಳೂರಿನಲ್ಲೊಂದು ವಿಚಿತ್ರ ಘಟನೆ- ಬಾಡಿಗೆದಾರನನ್ನ ಗಮನಿಸದೇ ಮನೆ ಸೀಜ್

    ಬೆಂಗಳೂರಿನಲ್ಲೊಂದು ವಿಚಿತ್ರ ಘಟನೆ- ಬಾಡಿಗೆದಾರನನ್ನ ಗಮನಿಸದೇ ಮನೆ ಸೀಜ್

    – ಕೋರ್ಟ್ ಕಮಿಷನರ್‍ನಿಂದ ದೈಹಿಕ ಹಲ್ಲೆ ಆರೋಪ

    ಬೆಂಗಳೂರು: ಮನೆ ಮಾಲೀಕ ಲೋನ್ ಮಾಡಿ ಬಾಡಿಗೆದಾರ ಲಾಕ್ ಆದ ಪ್ರಸಂಗವೊಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ಕೋ ಆಪರೇಟಿವ್ ಬ್ಯಾಂಕ್ (Co-Operative Bank) ಸಿಬ್ಬಂದಿಯ ಎಡವಟ್ಟಿನಿಂದ ಈ ಘಟನೆ ನಡೆದಿದೆ. ಬಾಡಿಗೆದಾರ ಮನೆಯೊಳಗೆ ಇರುವುದನ್ನು ಗಮನಿಸದೇ ಬ್ಯಾಂಕ್ ಸಿಬ್ಬಂದಿ ಮನೆ ಸೀಜ್ ಮಾಡಿದ್ದಾರೆ. ಬಳಿಕ ಠಾಣೆಗೆ ದೂರು ನೀಡಿ, ಮಗನನ್ನ ಮನೆಯಿಂದ ಪೋಷಕರು ಹೊರ ಕರೆತಂದಿದ್ದಾರೆ.

    ಏನಿಸು ಘಟನೆ..?: ಮನೆ ಮಾಲೀಕನು ತುಮಕೂರಿನ ವೀರಶೈವ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ 2 ಕೋಟಿ ಸಾಲ ಪಡೆದಿದ್ದನು. ಹೀಗಾಗಿ ಸಿಬ್ಬಂದಿ ಕೋರ್ಟ್ ನಿಂದ ಅನುಮತಿ ಪಡೆದು ಬ್ಯಾಂಕ್ ಲೋನ್ ರಿಕವರಿಗೆ ಸಂಜೆ ಕೆಂಗೇರಿ ಉಪನಗರದಲ್ಲಿರುವ ಮೂರಂತಸ್ಥಿನ ಮನೆಗೆ ಬಂದಿದ್ದು, ಮನೆಯನ್ನು ಸೀಜ್ ಮಾಡಿದ್ದಾರೆ. ಆದರೆ ಮನೆ ಸೀಜ್ ಮಾಡುವಾಗ ಬಾಡಿಗೆದಾರ ಮನೆಯಲ್ಲಿಯೇ ಮಲಗಿದ್ದರು. ಇದನ್ನ ಗಮನಿಸದೇ ಸಿಬ್ಬಂದಿ ಮನೆ ಸೀಜ್ ಮಾಡಿದ್ದಾರೆ. ಕೇಸ್ ನ್ನು ವಜಾ ಮಾಡಿದ್ದಾರೆ. ಹಾಗಿದ್ರೂ ಸೀಜ್ ಮಾಡಿದ್ದಾರೆ. ಅಲ್ಲದೆ ಮನೆ ಮಾಲೀಕರ ಮೇಲೆ ಹಲ್ಲೆ ನಡೆಸಿ, ನಿಂದಿಸಿದ್ದಾರೆಂದು ಬಾಡಿಗೆದಾರ ಪರ ವಕೀಲರು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಮಣಿಪುರ ಹಿಂಸಾಚಾರ ತನಿಖೆಗೆ 53 ಸಿಬಿಐ ಅಧಿಕಾರಿಗಳ ನಿಯೋಜನೆ

    ಈ ಸಂಬಂಧ ಬಾಡಿಗೆದಾರರ (Rent) ಸಂಬಂಧಿ ಪ್ರಸನ್ನ ಪ್ರತಿಕ್ರಿಯಿಸಿ, ಮೂರು ತಿಂಗಳ ಹಿಂದೆ ನಮ್ಮ ತಂಗಿ ಲೀಸ್ ಹಾಕಿಕೊಂಡಿದ್ರು. 10 ಲಕ್ಷಕ್ಕೆ ಲೀಸ್ ಹಾಕಿಕೊಂಡಿದ್ರು. ಯಾವುದೇ ಮಾಹಿತಿ ನೀಡದೇ ಮನೆ ಸೀಜ್ ಮಾಡಲಾಗಿದೆ. ವೀರಶೈವ ಕೋ ಆಪರೇಟಿವ್ ಬ್ಯಾಂಕ್ ನಿಂದ ಸೀಜ್ ಮಾಡಲಾಗಿದೆ. ಮನೆಯಲ್ಲಿ ಮಗ ಇದ್ದ, ಇದನ್ನ ಗಮನಿಸದೇ ಮನೆ ಸೀಜ್ ಆಗಿದೆ. ಮಗ ಒಳಗಡೆ ಇದ್ದಾನೆ ಅಂತ ಠಾಣೆಗೆ ಮಾಹಿತಿ ನೀಡಿ ಹೊರ ಕಕೊರ್ಂಡು ಬಂದಿದ್ದಾರೆ ಎಂದರು.

    ಬಾಡಿಗೆದಾರ ಪರ ವಕೀಲ ಹೇಮಂತ್ ಮಾತನಾಡಿ, ತುಮಕೂರು ವೀರಶೈವ ಕೋ ಆಪರೇಟಿವ್ ಬ್ಯಾಂಕ್ ನಿಂದ ಸೀಜ್ ಮಾಡಲಾಗಿದೆ. ಮನೆಯಲ್ಲಿರೋ ವಸ್ತುಗಳನ್ನ ಹೊರ ಹಾಕಿದ್ರು. ಕೋರ್ಟ್ ಕಮಿಷನರ್ ದೈಹಿಕ ಹಲ್ಲೆ ನಡೆಸಿದ್ದಾರೆ. ನಮ್ಮ ಸಹೋದ್ಯೋಗಿನ ನಿಂದಿಸಿದ್ದಾರೆ, ನನಗೂ ಹೊಡೆದಿದ್ದಾರೆ. 2021 ಕೋರ್ಟ್ ಆರ್ಡರ್ ಇದೆ. ಡಿಸ್ ಮಿಸ್ ಆಗಿರೋ ಕೋರ್ಟ್ ಆರ್ಡರ್ ತಗೊಂಡು ಬಂದಿದ್ದಾರೆ. ಸಂಜೆ 7 ಗಂಟೆಗೆ ಡೋರ್ ಲಾಕ್ ಮಾಡಿದ್ದಾರೆ. ಒಳಗಡೆ ಯಾರಿದ್ದಾರೆ ಅಂತ ನೋಡದೇ ಸೀಜ್ ಮಾಡಿದ್ದಾರೆ ಎಂದು ಆರೋಪಿಸಿದರು.

    ಮನೆ ಮಾಲೀಕನಿಗೆ ಎದೆ ನೋವು: ಮನೆ ಸೀಜ್ ಮಾಡಿ, ಮನೆಯಲ್ಲಿದ್ದ ವಸ್ತುಗಳನ್ನ ಬೀದಿ ಹಾಕಿದ್ದಕ್ಕೆ ಮಾಲೀಕ ಮನನೊಂದಿದ್ದು, ಎದೆನೋವು ಕಾಣಿಸಿಕೊಂಡಿದೆ. ಹೀಗಾಗಿ ಅವರು ರಸ್ತೆಯಲ್ಲಿ ಒದ್ದಾಡಿದ್ದಾರೆ. ಅಂಬುಲೆನ್ಸ್ ಸಕಾಲಕ್ಕೆ ಬಾರದಿದ್ದರಿಂದ ಕಾರಿನಲ್ಲಿಯೇ ಅವರನ್ನು ಆಸ್ಪತ್ರೆಗೆ ರವಾನಿಸಲಾಯಿತು.

    ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮನೆಯನ್ನು ಒಂದಿಂಚು ಜಾಸ್ತಿ ಒಡೆದ್ರೂ ಕಲ್ಲೇಟು- ಅಧಿಕಾರಿಗಳಿಗೆ ಮನೆ ಮಾಲೀಕ ಅವಾಜ್

    ಮನೆಯನ್ನು ಒಂದಿಂಚು ಜಾಸ್ತಿ ಒಡೆದ್ರೂ ಕಲ್ಲೇಟು- ಅಧಿಕಾರಿಗಳಿಗೆ ಮನೆ ಮಾಲೀಕ ಅವಾಜ್

    ಮಂಡ್ಯ: ಬೆಂಗಳೂರು-ಮೈಸೂರು (Bengaluru- Mysuru) ದಶಪಥ ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಮನೆ ತೆರವುಗೊಳಿಸಲು ಮುಂದಾದ ಅಧಿಕಾರಿಗೆ ಕಲ್ಲು ತೋರಿಸಿ ಎಚ್ಚರಿಕೆ ನೀಡಿರುವ ಪ್ರಸಂಗವೊಂದು ಮಂಡ್ಯದ ಇಂಡುವಾಳು ಗ್ರಾಮದಲ್ಲಿ ನಡೆದಿದೆ.

    ನನ್ನ ಮನೆ ಒಂದಿಂಚು ಜಾಸ್ತಿ ಹೊಡೆದರೂ ಕಲ್ಲಲ್ಲಿ ಹೊಡಿತೀನಿ ಎಂದು ಮಾಲೀಕ ಅವಾಜ್ ಹಾಕಿದ್ದಾರೆ. ನಿಗದಿಯಾದ ಕಟ್ಟಡವನ್ನಷ್ಟೇ ಹೊಡೆಯಬೇಕು. ಒಂದಿಂಚು ಜಾಸ್ತಿ ಕೆಡವಿದರೂ ನಾನು ನಿನಗೆ ಹೊಡೆಯುತ್ತೇನೆ ಎಂದು ಮನೆ ಮಾಲೀಕ ರಾಜೇಗೌಡ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಬ್ರೋ, ನಾನು ನಿಮ್ಮ ಲ್ಯಾಪ್‍ಟಾಪ್ ಕದ್ದಿದ್ದೇನೆ- ಇಮೇಲ್ ಮಾಡಿ ಕ್ಷಮೆ ಕೋರಿದ ಕಳ್ಳ

    ಹೆದ್ದಾರಿ ಪ್ರಾಧಿಕಾರವು ದಶಪಥ ರಸ್ತೆ ನಿರ್ಮಾಣಕ್ಕಾಗಿ ಹಲವು ಮನೆಗಳನ್ನು ಸ್ವಾಧೀನ ಪಡಿಸಿಕೊಂಡಿದೆ. ಪರಿಹಾರ ತಾರತಮ್ಯ ಆರೋಪ, ಮನೆ ಕೆಡವಲು ಕೆಲ ಮಾಲೀಕರ ವಿರೋಧ ವ್ಯಕ್ತಪಡಿಸಿದ್ದಾರೆ. ಬೆಲೆ ಬಾಳುವ ಜಾಗಕ್ಕೆ ಕಡಿಮೆ ಪರಿಹಾರ ನೀಡಿದ್ದಾರೆಂದು ಕೆಲ ಮಾಲೀಕರು ಆರೋಪಿಸಿದ್ದಾರೆ. ಕೆಲದಿನಗಳ ಹಿಂದೆ ಶಾಸಕ ರವೀಂದ್ರ ಶ್ರೀಕಂಠಯ್ಯ ನೇತೃತ್ವದಲ್ಲಿ ಪ್ರತಿಭಟನೆ ಕೂಡ ನಡೆದಿತ್ತು.

    ಇಂದು ಬೆಳ್ಳಂಬೆಳ್ಳಗ್ಗೆ ಮನೆ ತೆರವು ಕಾರ್ಯಾಚರಣೆ ನಡೆಯುತ್ತಿತ್ತು. ಅಧಿಕಾರಿಗಳು ಪೊಲೀಸ್ ರಕ್ಷಣೆಯಲ್ಲಿ ಆಗಮಿಸಿ ಮನೆ ತೆರವುಗೊಳಿಸಿದ್ದಾರೆ. ಈ ವೇಳೆ ಗ್ರಾಮಸ್ಥರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಮನೆ ಕೆಡವಲು ಬಿಡಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಪೊಲೀಸರು ಗ್ರಾಮಸ್ಥರನ್ನು ಬಂಧಿಸಿ ತೆರವು ಕಾರ್ಯಕ್ಕೆ ಅನುವು ಮಾಡಿಕೊಟ್ಟರು.

    Live Tv
    [brid partner=56869869 player=32851 video=960834 autoplay=true]

  • ಮಾರಣಾಂತಿಕ ಹಲ್ಲೆಗೈದು 150 ಗ್ರಾಂ ಚಿನ್ನ, 40 ಸಾವಿರ ದೋಚಿದ ಕಳ್ಳರು

    ಮಾರಣಾಂತಿಕ ಹಲ್ಲೆಗೈದು 150 ಗ್ರಾಂ ಚಿನ್ನ, 40 ಸಾವಿರ ದೋಚಿದ ಕಳ್ಳರು

    ಧಾರವಾಡ: ಕಳ್ಳರ ಗುಂಪೊಂದು ಮನೆಗೆ ನುಗಿ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆಗೈದು 150 ಗ್ರಾಂ ಚಿನ್ನ, 40 ಸಾವಿರ ರೂ. ನಗದು ದೋಚಿದ ಘಟನೆ ನಗರದಲ್ಲಿ ನಡೆದಿದೆ.

    ತೇಜಸ್ವಿನಗರದ 5 ಕ್ರಾಸ್‍ನಲ್ಲಿರುವ ಅನಿಲ್ ಕುಸುಗಲ್ ಎಂಬವರ ಮನೆಗೆ ನುಗ್ಗಿದ 4 ಜನರ ಕಳ್ಳರ ಗುಂಪು ಕೃತ್ಯ ಎಸಗಿ ಪರಾರಿಯಾಗಿದೆ. ಕಳ್ಳರಿಂದ ಹಲ್ಲೆಗೆ ಒಳಗಾದ ಅನಿಲ್ ಅವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಆರೋಪಿಗಳು ಮುಂಜಾನೆ 2 ಗಂಟೆಗೆ ಅನಿಲ್ ಅವರ ಮನೆ ಬಾಗಿಲು ಮುರಿದು ಒಳಗೆ ನುಗ್ಗಿದ್ದಾರೆ. ಬಳಿಕ ಕುಟುಂಬಸ್ಥರ ಮೈಮೇಲಿದ್ದ ಚಿನ್ನದ ಮಾಂಗಲ್ಯ ಸರ ಹಾಗೂ ಅಲ್ಮೇರಾದಲ್ಲಿದ್ದ 40 ಸಾವಿರ ರೂ. ನಗದನ್ನು ದೋಚಿ ಪರಾರಿಯಾಗಿದ್ದಾರೆ. ಆರೋಪಿಗಳು ಹಿಂದಿಯಲ್ಲಿ ಮಾತನಾಡುತ್ತಿದ್ದರು ಎಂದು ಅನಿಲ್ ಕುಸುಗಲ್ ಹೇಳಿದ್ದಾರೆ.

    ಕಳ್ಳರು ರಾಡ್‍ನಿಂದ ತಲೆಗೆ ಹೊಡೆದ ಪರಿಣಾಮ ಅನಿಲ್ ಕುಮಾರ್ ಅವರ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಸಂಬಂಧ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

  • ಹಳ್ಳಿಯಲ್ಲಿ ಮಹಿಳೆಯರ ಒಳಉಡುಪು ಕದಿಯುತ್ತಿರುವ ಸೈಕೋ

    ಹಳ್ಳಿಯಲ್ಲಿ ಮಹಿಳೆಯರ ಒಳಉಡುಪು ಕದಿಯುತ್ತಿರುವ ಸೈಕೋ

    ಶಿವಮೊಗ್ಗ: ಸೈಕೋ ವ್ಯಕ್ತಿಯೊಬ್ಬ ಹಳ್ಳಿಯಲ್ಲಿ ಮಹಿಳೆಯರ ಒಳಉಡುಪು ಕದಿಯುತ್ತಿರುವ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಮಾರಶೆಟ್ಟಿಹಳ್ಳಿಯಲ್ಲಿ ನಡೆದಿದೆ.

    ಗ್ರಾಮದ ಸತೀಶ್ ಎಂಬ ಶಿಕ್ಷಕರ ಮನೆಯಲ್ಲಿ ಬಟ್ಟೆಯನ್ನು ತೊಳೆದು ಒಣಗಿಸುವುದಕ್ಕೆ ಹಾಕಿದ್ದರು. ಆದರೆ ಅಲ್ಲಿಗೆ ಬಂದಂತಹ ಸೈಕೋ ಮಹಿಳೆಯರ ಒಳಉಡುಪನ್ನು ಮಾತ್ರ ಕದಿಯುತ್ತಿದ್ದನು. ಈ ರೀತಿ ಪ್ರತಿದಿನ ಆ ವ್ಯಕ್ತಿ ಮಹಿಳೆಯರ ಒಳುಉಡುಪನ್ನು ಕದಿಯುತ್ತಿದ್ದನು. ಹೀಗಾಗಿ ಮನೆ ಮಾಲೀಕ ಸತೀಶ್ ತಮ್ಮ ಮನೆಗೆ ಸಿಸಿಟಿವಿ ಕ್ಯಾಮೆರಾ ಹಾಕಿಸಿದ್ದರು.

    ಸೈಕೋ ವ್ಯಕ್ತಿ ಉಡುಪು ಕದಿಯುತ್ತಿದ್ದ ದೃಶ್ಯ ಇದೀಗ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದ್ದು, ಒಳಉಡುಪು ಕದಿಯುತ್ತಿದ್ದ ಸೈಕೋ ಅದೇ ಗ್ರಾಮದ ಮನುಕುಮಾರ್ ಎಂದು ಪತ್ತೆ ಹಚ್ಚಲಾಗಿದೆ.

    ಈ ಬಗ್ಗೆ ಗ್ರಾಮಸ್ಥರು ಮನುಕುಮಾರ್ ನನ್ನು ವಿಚಾರಿಸಿದರೆ ನಾನು ಯಾವುದೇ ಒಳ ಉಡುಪು ಕದ್ದಿಲ್ಲ ಎಂದು ವಾದಿಸಿದ್ದಾನೆ. ನಂತರ ಆತನಿಗೆ ಸಿಸಿಟಿವಿ ದೃಶ್ಯಗಳನ್ನು ತೋರಿಸಿದಾಗ ಬೇರೆ ದಾರಿ ಕಾಣದೇ ಅದು ನಾನೇ ಎಂದು ಒಪ್ಪಿಕೊಂಡಿದ್ದಾನೆ.

    ಈ ಘಟನೆ ಬಳಿಕ ಸೈಕೋ ಮನುಕುಮಾರ್ ಕುಟುಂಬಸ್ಥರು ಮನೆ ಮಾಲೀಕ ಸತೀಶ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ ತೀವ್ರ ಗಾಯಗೊಂಡಿರುವ ಸತೀಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮನೆಮಾಲೀಕನಿಂದ ಅಪ್ರಾಪ್ತೆಯ ಮೇಲೆ ಹಲ್ಲೆ- ಮನಕಲಕುವ ವಿಡಿಯೋ ನೋಡಿ

    ಮನೆಮಾಲೀಕನಿಂದ ಅಪ್ರಾಪ್ತೆಯ ಮೇಲೆ ಹಲ್ಲೆ- ಮನಕಲಕುವ ವಿಡಿಯೋ ನೋಡಿ

    ಬೆಂಗಳೂರು: ಮನೆ ಮಾಲೀಕನೋರ್ವ ಅಪ್ರಾಪ್ತೆ ಬಾಲಕಿಯನ್ನು ಮನೆಕೆಲಸಕ್ಕೆ ಇಟ್ಟುಕೊಂಡಿದ್ದು ಮಾತ್ರವಲ್ಲದೇ ಆಕೆಗೆ ಮನಬಂದಂತೆ ಥಳಿಸಿದ ಘಟನೆ ಇಂದು ಬೆಳಕಿಗೆ ಬಂದಿದೆ. ನಗರದ ಜೀವನ್ ಭೀಮಾನಗರದ 5 ನೇ ಕ್ರಾಸ್‍ನಲ್ಲಿರೋ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಮಾತ್ರವಲ್ಲದೇ ಮಾಲೀಕ ದಂಪತಿ ತಮಿಳುನಾಡು ಮೂಲದವರೆಂದು ಹೇಳಲಾಗುತ್ತಿದೆ.

    ಕಾರಣವೇನು?: ಮನೆಯ ಫ್ರಿಡ್ಜ್‍ನಲ್ಲಿಟ್ಟಿದ್ದ ತಿಂಡಿ-ತಿನಿಸುಗಳನ್ನು ಕದ್ದು ತಿನ್ನುತ್ತಾಳೆಂದು ಆರೋಪಿಸಿ ಪೈಪ್ ತುಂಡಿನಲ್ಲಿ ಮಾಲೀಕ ಆಕೆಗೆ ಚೆನ್ನಾಗಿ ಥಳಿಸಿದ್ದಾನೆ. ಈ ವೇಳೆ ಬಾಲಕಿ ಥಳಿಸದಂತೆ ಪರಿಪರಿಯಾಗಿ ಬೇಡಿಕೊಂಡ್ರೂ ಮಾಲೀಕ ಆಕೆಯ ಮೇಲೆ ಕಿಂಚಿತ್ತೂ ಕರುಣೆ ತೋರದೆ ತನ್ನ ಕಾಲಿನಲ್ಲಿ ಒದ್ದು, ಥಳಿಸಿ ತನ್ನ ವಿಕೃತ ಮನಸ್ಥಿತಿಯನ್ನು ತೋರಿದ್ದಾನೆ. ಈ ದೃಶ್ಯ ಪಬ್ಲಿಕ್ ಟಿವಿಗೆ ಲಭಿಸಿದೆ.

    ಘಟನೆ ಬಗ್ಗೆ ಜೆಬಿ ಪೊಲೀಸರನ್ನ ಮಾತನಾಡಿಸಿದಾಗ ಅವರು ಈ ಬಗ್ಗೆ ಮಾಹಿತಿ ಇಲ್ಲ. ಮಾತ್ರವಲ್ಲದೇ ಯಾರು ದೂರು ನೀಡಿಲ್ಲ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ವಿಡಿಯೋ ನೋಡಿದ ಬಳಿಕವಾದ್ರೂ ಪೊಲೀಸರು ಎಚ್ಚೆತ್ತುಕೊಂಡು ಮನೆ ಮಾಲಿಕನನ್ನು ಹುಡುಕಿ ಕ್ರಮ ಕೈಗೊಳ್ಳಬೇಕಾಗಿದೆ.

    https://www.youtube.com/watch?v=Md_OaHRHhtE&feature=youtu.be

  • ನೀರಿಗಾಗಿ ಜಗಳ- ಮನೆ ಮಾಲೀಕನಿಂದ ಈಶಾನ್ಯ ಮೂಲದ ವಿದ್ಯಾರ್ಥಿ ಮೇಲೆ ಹಲ್ಲೆ

    ನೀರಿಗಾಗಿ ಜಗಳ- ಮನೆ ಮಾಲೀಕನಿಂದ ಈಶಾನ್ಯ ಮೂಲದ ವಿದ್ಯಾರ್ಥಿ ಮೇಲೆ ಹಲ್ಲೆ

    ಬೆಂಗಳೂರು: ನೀರಿನ ವಿಚಾರಕ್ಕೆ ಜಗಳ ನಡೆದು ಮನೆ ಮಾಲೀಕರೊಬ್ಬರು ಈಶಾನ್ಯ ಮೂಲದ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿರೋ ಘಟನೆ ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಈ ಘಟನೆ ಮಾರ್ಚ್ 9ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಹಿಗಿಯೋ ಘಂಟಿ ಅಂತಾ ಗುರುತಿಸಲಾಗಿದ್ದು, ಸದ್ಯ ಆಸ್ಪತ್ರೆ ಸೇರಿದ್ದಾರೆ.

    ಹೇಮಂತ್ ಕುಮಾರ್ ಎಂಬವರ ಮಾಲೀಕತ್ವದ ಮನೆಯಲ್ಲಿ ಹಿಗಿಯೋ ಘಂಟಿ ವಾಸವಾಗಿದ್ದರು. ಅನವಶ್ಯಕವಾಗಿ ಮನೆ ನೀರನ್ನು ಪೋಲು ಮಾಡುತ್ತಿರುವ ಕುರಿತು ಮನೆ ಮಾಲೀಕ ಹಾಗೂ ಹಿಗಿಯೋ ಘಂಟಿ ಮಧ್ಯೆ ಜಗಳ ಪ್ರಾರಂಭವಾಗಿತ್ತು. ಬಳಿಕ ಮಾತಿಗೆ ಮಾತು ಬೆಳೆದು ಮಾಲೀಕ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ್ದಾರೆ. ಮಾತ್ರವಲ್ಲದೇ ಹಿಗಿಯೋ ಘಂಟಿಯಿಂದ ತನ್ನ ಬೂಟನ್ನು ನಾಲಿಗೆಯಿಂದ ನೆಕ್ಕಿಸಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

    ಘಟನೆ ಸಂಬಂಧ ಹಿಗಿಯೋ ಘಂಟಿ ತಂದೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಇದನ್ನೂ ಓದಿ: ಬೆಂಗಳೂರಲ್ಲಿ ನೀರಿಗಾಗಿ ನಡೀತು ಕೊಲೆ