Tag: House Ceremony

  • ನಟಿ ಕಾರುಣ್ಯ ರಾಮ್ ಗೃಹ ಪ್ರವೇಶದಲ್ಲಿ ಚಂದನವನದ ತಾರೆಯರು

    ನಟಿ ಕಾರುಣ್ಯ ರಾಮ್ ಗೃಹ ಪ್ರವೇಶದಲ್ಲಿ ಚಂದನವನದ ತಾರೆಯರು

    `ಬಿಗ್ ಬಾಸ್’ ಖ್ಯಾತಿಯ ಚೆಲುವೆ ಕಾರುಣ್ಯಾ ರಾಮ್ ಅವರು, ಹೊಸ ಮನೆ ಮಾಡಿದ ಖುಷಿಯಲ್ಲಿದ್ದಾರೆ. ನೂತನ ಗೃಹ ಪ್ರವೇಶದ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾ, ಕಿರುತೆರೆಯ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

    ಸದ್ಯ ವಜ್ರಕಾಯದ ಬೆಡಗಿ ಕಾರುಣ್ಯ `ಮನೆ ಮಾರಾಟಕ್ಕಿದೆ’, `ರೆಮೋ’, `ಪೆಟ್ರೋಮ್ಯಾಕ್ಸ್’ ಚಿತ್ರದಲ್ಲಿಯೂ ಕಾರುಣ್ಯಾ ರಾಮ್ ನಟಿಸುತ್ತಿದ್ದಾರೆ. ಕನ್ನಡದ ಬಿಗ್ ಬಾಸ್ ಸೀಸನ್ -4 ಸೇರಿ ಡ್ಯಾನ್ಸ್ ರಿಯಾಲಿಟಿ ಶೋ ಜೊತೆಗೆ ಕಾರುಣ್ಯಾ ಅವರು `ಕುಕು ವಿಥ್ ಕಿರಿಕ್ಕು’ ಶೋನಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಅಮೆರಿಕಾ ನಟಿಯ ಡ್ರೆಸ್ ಕಾಪಿ ಮಾಡಿ ಟ್ರೋಲ್ ಆದ ಜಾಹ್ನವಿ ಕಪೂರ್

    ಇನ್ನು ಕಾರುಣ್ಯ ರಾಮ್ ಅವರ ನೂತನ ಗೃಹ ಪ್ರವೇಶಕ್ಕೆ `ನೆನಪಿರಲಿ’ ಪ್ರೇಮ್ ಜ್ಯೋತಿ ದಂಪತಿ, ಸ್ವಾತಿ ಶರ್ಮಾ, ಪ್ರಿಯಾಂಕಾ ಉಪೇಂದ್ರ, ನಿರಂಜನ್ ಸುಧೀಂದ್ರ, ಜಗದೀಶ್ ಆರ್ ಚಂದ್ರ, ತೇಜಸ್ವಿನಿ ಪ್ರಕಾಶ್ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

    ನಟನೆ ಜೊತೆಗೆ ಸಾಮಾಜಿಕ ಕೆಲಸದಲ್ಲಿಯೂ ಸಕ್ರಿಯವಾಗಿದ್ದಾರೆ. ಕೆಲದಿನಗಳ ಹಿಂದೆ ಕಾರುಣ್ಯಾ ರಾಮ್ ಅವರು ಕ್ಯಾನ್ಸರ್ ರೋಗಿಗಳಿಗೆ ಅವರ ಕೂದಲು ದಾನ ಮಾಡಿದ್ದರು. ಒಟ್ನಲ್ಲಿ ಸಿನಿಮಾ, ಹೊಸ ಬಗೆಯ ಫೋಟೋಶೂಟ್, ಸಾಮಾಜಿಕ ಕಾರ್ಯದ ಮೂಲಕ ಕಾರುಣ್ಯ ಸುದ್ದಿಯಾಗುತ್ತಲೇ ಇರುತ್ತಾರೆ.

    Live Tv

  • ಹಿಂದೂ ಸಂಪ್ರದಾಯದಂತೆ ಮನೆ ಗೃಹಪ್ರವೇಶ ಮಾಡಿದ ಮುಸ್ಲಿಂ ಕುಟುಂಬ

    ಹಿಂದೂ ಸಂಪ್ರದಾಯದಂತೆ ಮನೆ ಗೃಹಪ್ರವೇಶ ಮಾಡಿದ ಮುಸ್ಲಿಂ ಕುಟುಂಬ

    ವಿಜಯಪುರ: ಕಳೆದ ತಿಂಗಳು ನೂತನ ದರ್ಗಾವನ್ನು ಹಿಂದೂ ಧರ್ಮದ ಪ್ರಕಾರ ಪ್ರವೇಶ ಮಾಡಿ ವಿಜಯಪುರದತ್ತ ರಾಜ್ಯದ ಗಮನವನ್ನು ಮುಸ್ಲಿಂ ಬಾಂಧವರು ಸೆಳೆದಿದ್ದರು. ಇದೀಗ ವಿಜಯಪುರದ ಮುಸ್ಲಿಂ ಕುಟುಂಬವೊಂದು ನೂತನ ಮನೆಯ ಗೃಹ ಪ್ರವೇಶವನ್ನು ಹಿಂದೂ ಸಂಸ್ಕೃತಿ ಪ್ರಕಾರ ಮಾಡಿ ಮತ್ತೆ ರಾಜ್ಯದ ಗಮನವನ್ನು ತನ್ನತ್ತ ಸೆಳೆದಿದೆ.

    ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಗಬೆಟ್ಟ ಗ್ರಾಮದ ಲಾಲಸಾಬ ನದಾಫ್ ಎಂಬುವರುವ ಡಿ.5 ರಂದು ನಾಗರಬೆಟ್ಟ ಗ್ರಾಮದಲ್ಲಿ ತಮ್ಮ ನೂತನ ಮನೆಯ ಗೃಹ ಪ್ರವೇಶವನ್ನು ಹಿಂದೂ ಸಂಸ್ಕೃತಿ ಪ್ರಕಾರ ನೆರವೇರಿಸಿದ್ದಾರೆ. ನವಗ್ರಹ ಹಾಗೂ ಲಕ್ಷ್ಮೀ ಪೂಜೆ ಮಾಡಿ ಗೃಹಪ್ರವೇಶ ಮಾಡಿದ್ದಾರೆ.

    ಲಾಲಸಾಬ ನದಾಫ್ ನಾಗರಬೆಟ್ಟದ ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿದ್ದು, ಹಿಂದು ಧರ್ಮದ ಗೆಳಯರನ್ನ ಹೆಚ್ಚಾಗಿ ಹೊಂದಿದ್ದಾರೆ. ಇನ್ನು ನಾವು ಹಳ್ಳಿ ಜನರಾಗಿದ್ದು ನಾವು ಇಲ್ಲಿ ಎಲ್ಲ ಧರ್ಮದವರು ಒಂದಾಗಿಯೇ ಇರುತ್ತೇವೆ. ನಮ್ಮಲ್ಲಿ ಯಾವುದೆ ಬೇಧ ಭಾವ ಇರಲ್ಲ. ಅಲ್ಲದೆ ಎಲ್ಲ ಧರ್ಮವನ್ನು ಗೌರವಿಸುತ್ತೇವೆ. ಹಲವಾರು ವರ್ಷಗಳಿಂದ ನಮ್ಮ ಕುಟುಂಬ ಮುಸ್ಲಿಂ ಧರ್ಮದೊಂದಿಗೆ ಹಿಂದು ಧರ್ಮವನ್ನು ಪಾಲಿಸುತ್ತ ಬಂದಿದೆ. ಅದೇ ಕಾರಣಕ್ಕೆ ಗೃಹಪ್ರವೇಶದ ವೇಳೆ ಕುರಾನ್ ಪಠಣವನ್ನು ಮಾಡಿ ನವಗೃಹ ಹಾಗೂ ಲಕ್ಷ್ಮೀ ಪೂಜೆ ಮಾಡಿದ್ದೇವೆ ಎಂದು ಹೇಳುತ್ತಾರೆ.

    ಲಾಲಸಾಬ ಕುಟುಂಬದ ಭಾವೈಕ್ಯತೆಯ ಭಾವ ಇತರರಿಗೆ ಮಾದರಿಯಾಗಿದೆ. ಇನ್ನು ಲಾಲಸಾಬ ಅವರ ಈ ಕಾರ್ಯಕ್ಕೆ ಪ್ರಶಂಸೆಗಳ ಮಹಾಪೂರ ಹರಿದು ಬರುತ್ತಿದೆ.