Tag: house burnt

  • ಅಮೆರಿಕದ ಕೊಲೊರಾಡೋನಲ್ಲಿ ಕಾಳ್ಗಿಚ್ಚು – 500ಕ್ಕೂ ಹೆಚ್ಚು ಮನೆಗಳು ಬೆಂಕಿಗಾಹುತಿ

    ಅಮೆರಿಕದ ಕೊಲೊರಾಡೋನಲ್ಲಿ ಕಾಳ್ಗಿಚ್ಚು – 500ಕ್ಕೂ ಹೆಚ್ಚು ಮನೆಗಳು ಬೆಂಕಿಗಾಹುತಿ

    ವಾಷಿಂಗ್ಟನ್‌: ಅಮೆರಿಕದ ಕೊಲೊರಾಡೋನಲ್ಲಿ ಕಾಳ್ಗಿಚ್ಚು ಉಂಟಾಗಿದ್ದು, ಸುಮಾರು 500ಕ್ಕೂ ಹೆಚ್ಚು ಮನೆಗಳು ಬೆಂಕಿಗಾಹುತಿಯಾಗಿರುವ ಘಟನೆ ನಡೆದಿದೆ.

    ಕಾಳ್ಗಿಚ್ಚಿನಿಂದಾಗಿ 580 ಮನೆಗಳು ಸುಟ್ಟು ಬೂದಿಯಾಗಿವೆ. ಸ್ಥಳೀಯ ಸಾವಿರಾರು ನಿವಾಸಿಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲಾಗುತ್ತಿದೆ. ಕೊಲೊರಾಡೋ ಸುತ್ತಮುತ್ತ ಬೆಂಕಿ ಕೆನ್ನಾಲಿಗೆ ಚಾಚಿದೆ. ಘಟನೆಯಿಂದ ಕೆಲವರು ಗಾಯಗೊಂಡಿದ್ದಾರೆ. ಆದರೆ ಈವರೆಗೂ ಯಾವುದೇ ಸಾವು ಪ್ರಕರಣ ವರದಿಯಾಗಿಲ್ಲ. 2.5 ಚದರ ಮೈಲುಗಷ್ಟು ಕಾಳ್ಗಿಚ್ಚು ಆವರಿಸಿದ್ದು, ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ಹೋಗಲು ಪರದಾಡುತ್ತಿದ್ದಾರೆ. ಇದನ್ನೂ ಓದಿ: ಎಕ್ಸಾಂನಲ್ಲಿ ಫೇಲ್ – ಆತ್ಮಹತ್ಯೆಗೆ ಶರಣಾದ ಮೆಡಿಕಲ್ ವಿದ್ಯಾರ್ಥಿನಿ

    ಲೂಯಿಸ್‌ವೆಲ್‌ ಪ್ರದೇಶದಲ್ಲಿ ಸುಮಾರು 21,000 ಜನಸಂಖ್ಯೆ ಇದೆ. ಎಲ್ಲರೂ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆಯೂ ನಡೆಯುತ್ತಿದೆ.

    ಕಾಳ್ಗಿಚ್ಚಿಗೆ ಸಿಲುಕಿ ಗಾಯಗೊಂಡಿದ್ದ 6 ಮಂದಿಯನ್ನು ಯುಸಿ ಹೆಲ್ತ್‌ ಬ್ರೂಮ್‌ಫೀಲ್ಡ್‌ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಅಲ್ಲದೇ ಯುಎಸ್‌ ಹೆದ್ದಾರಿ-36 ಬಂದ್‌ ಮಾಡಲಾಗಿದೆ. ಈ ರಸ್ತೆ ಮಾರ್ಗವಾಗಿ ಯಾವುದೇ ವಾಹನಗಳು ಸಂಚರಿಸದಂತೆ ಕ್ರಮವಹಿಸಲಾಗಿದೆ. ಇದನ್ನೂ ಓದಿ: ಓಮಿಕ್ರಾನ್ ಸೋಂಕಿತ ಹೃದಯಾಘಾತದಿಂದ ಸಾವು

  • ಅಡುಗೆ ಮಾಡುವಾಗ್ಲೇ ಸಿಲಿಂಡರ್ ಸ್ಫೋಟ- ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿ

    ಅಡುಗೆ ಮಾಡುವಾಗ್ಲೇ ಸಿಲಿಂಡರ್ ಸ್ಫೋಟ- ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿ

    ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಹೊಸಕನ್ನಂಬಾಡಿ ಗ್ರಾಮದ ಮನೆಯೊಂದರಲ್ಲಿ ಅಡುಗೆ ಮಾಡುವ ಸಂದರ್ಭದಲ್ಲೇ ಸಿಲಿಂಡರ್ ಸ್ಫೋಟಗೊಂಡಿರುವ ಘಟನೆ ನಡೆದಿದೆ.

    ಹೊಸಕನ್ನಂಬಾಡಿ ಗ್ರಾಮದ ಸೋಮಚಾರಿ ಎಂಬವರ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಮನೆಯಲ್ಲಿ ಅಡುಗೆ ಮಾಡುವ ವೇಳೆ ಆಕಸ್ಮಿಕವಾಗಿ ಸಿಲಿಂಡರ್ ಸ್ಪೋಟಗೊಂಡಿದೆ ಎಂದು ಶಂಕಿಸಲಾಗಿದೆ. ಅಲ್ಲದೆ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಮನೆಯಲ್ಲಿದ್ದ ವಸ್ತುಗಳೆಲ್ಲಾ ಬೆಂಕಿಗಾಹುತಿಯಾಗಿ, ಮನೆ ಸಂಪೂರ್ಣ ಸುಟ್ಟುಹೋಗಿದೆ.

    ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸಿದ್ದಾರೆ. ಸ್ಫೋಟದಿಂದ ಲಕ್ಷಾಂತರ ರೂ. ಬೆಳೆಬಾಳುವ ವಸ್ತುಗಳು ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews