Tag: house

  • ಬಿಡಿಎ ಫ್ಲಾಟ್ / ವಿಲ್ಲಾ ಖರೀದಿಸಿ ನೋಂದಣಿಗಾಗಿ ಕಾಯುತ್ತಿರುವ ಹಂಚಿಕೆದಾರರಿಗೆ ಸುವರ್ಣಾವಕಾಶ

    ಬಿಡಿಎ ಫ್ಲಾಟ್ / ವಿಲ್ಲಾ ಖರೀದಿಸಿ ನೋಂದಣಿಗಾಗಿ ಕಾಯುತ್ತಿರುವ ಹಂಚಿಕೆದಾರರಿಗೆ ಸುವರ್ಣಾವಕಾಶ

    ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಿಸಿರುವ 1 ಬಿಹೆಚ್‌ಕೆ, 2 ಬಿಹೆಚ್‌ಕೆ, 3 ಬಿ.ಹೆಚ್.ಕೆ. ಫ್ಲಾಟ್ ಮತ್ತು ವಿಲ್ಲಾ ಕ್ರಯಪತ್ರದ ಮೇಳವನ್ನು 2025 ಅಕ್ಟೋಬರ್ 03 ರಿಂದ 16ರವರೆಗೆ ಆಯೋಜಿಸಲಾಗಿದೆ.

    ಫ್ಲಾಟ್ / ವಿಲ್ಲಾಗಳಿಗೆ ಸಂಬಂಧಿಸಿದಂತೆ ಸುಮಾರು 400 ಫ್ಲಾಟ್ ಗಳಿಗೆ ಕ್ರಯಪತ್ರ ನೋಂದಾಯಿಸಲು ಬಾಕಿ ಇರುತ್ತದೆ. ಪ್ರಾಧಿಕಾರವು ಆಯೋಜಿಸಿದ್ದ ಮೇಳ, ಆನ್ ಲೈನ್ ಮತ್ತು ಆಫ್ ಲೈನ್ ಮೂಲಕ ಫ್ಲಾಟ್ ಗಳನ್ನು ಖರೀದಿಸಿ, ಹಂಚಿಕೆ ಪತ್ರವನ್ನು ಪಡೆದಿರುವ ಎಲ್ಲಾ ಫ್ಲಾಟ್ / ವಿಲ್ಲಾ ಖರೀದಿದಾರರು ಸೆ.30 ರ ಒಳಗಡೆ ಒಳಗಾಗಿ ತಮ್ಮ ತಮ್ಮ ಫ್ಲಾಟ್/ ವಿಲ್ಲಾಗಳಿಗೆ ಸಂಬಂಧಿಸಿದಂತೆ ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌, ಸ್ವಯಂ ದೃಢೀಕರಣ, ಬ್ಯಾಂಕ್‌ ಎನ್‌ಒಸಿ, ಫೋಟೋ, ಫೋಟೋಗಳೊಂದಿಗೆ ಫ್ಲಾಟ್ / ವಿಲ್ಲಾದ ಪೂರ್ತಿ ಹಣ ಪಾವತಿಸಿ, ಎಲ್ಲಾ ದಾಖಲೆಗಳನ್ನು ಪ್ರಾಧಿಕಾರಕ್ಕೆ ಸಲ್ಲಿಸಿದ್ದಲ್ಲಿ, ಪೂರ್ಣ ದಾಖಲೆ ಮತ್ತು ಹಣ ಪಾವತಿಸಿದವರಿಗೆ “ಮೊದಲು ಬಂದವರಿಗೆ ಪ್ರಥಮ ಆದ್ಯತೆ”ಯ (“First Come First Service) ಆಧಾರದ ಮೇಲೆ ಅ.3 ರಿಂದ ಅ.16 ರ ಅವಧಿಯಲ್ಲಿ ಕ್ರಯ ಪತ್ರ ನೋಂದಣಿ” ಮೇಳವನ್ನು ಪ್ರಾಧಿಕಾರದ ಕೇಂದ್ರ ಕಛೇರಿ, ಟಿ. ಚೌಡಯ್ಯ ರಸ್ತೆ, ಕುಮಾರ ಪಾರ್ಕ್ ಪಶ್ಚಿಮ, ಬೆಂಗಳೂರು-20 ರಲ್ಲಿ ನಡೆಸಿ ಕ್ರಯಪತ್ರ ನೋಂದಾಯಿಸಿ ಕೊಡಲಾಗುವುದು. . ಇದನ್ನೂ ಓದಿ: ಲೈಬ್ರರಿಯ ಕ್ಲರ್ಕ್‌ ಆದ ಪ್ರಜ್ವಲ್‌ ರೇವಣ್ಣ ದಿನಕ್ಕೆ 522 ರೂ. ಸಂಬಳ

    ಸಾರ್ವಜನಿಕರಿಗೆ ಯಾವುದೇ ರೀತಿಯು ತೊಂದರೆ, ಕಿರುಕುಳವಾಗದಂತೆ ಕ್ರಮವಹಿಸಿ, ಕ್ರಯಪತ್ರ ನೋಂದಾಯಿಸಲು ಪ್ರಾಧಿಕಾರವು ಎಲ್ಲಾ ಕ್ರಮಗಳನ್ನು ವಹಿಸುತ್ತಿರುವುದರಿಂದ ಇದರ ಸದುಪಯೋಗವನ್ನು ಪಡೆಯುವಂತೆ ಬಿಡಿಎ ಕೇಳಿಕೊಂಡಿದೆ. ಇದನ್ನೂ ಓದಿಗಂಡನನ್ನು ಹೊಡೆದು ಕೊಲ್ಲುವಾಗ ಎದುರಲ್ಲೇ ಇದ್ದ ಸೋನಮ್  ಹನಿಮೂನ್‌ ಕೊಲೆ ಕೇಸ್‌ ಚಾರ್ಜ್‌ಶೀಟ್‌ನಲ್ಲೇನಿದೆ?

     

  • ಕಿಚ್ಚನ ಅಭಿಮಾನಿಯಿಂದ ಬಡ ಮಹಿಳೆಗೆ ಸೂರು ಉಡುಗೊರೆ!

    ಕಿಚ್ಚನ ಅಭಿಮಾನಿಯಿಂದ ಬಡ ಮಹಿಳೆಗೆ ಸೂರು ಉಡುಗೊರೆ!

    ಬೆಳಗಾವಿ: ಕರ್ನಾಟಕದ ರನ್ನ ಕಿಚ್ಚ ಸುದೀಪ್ (Sudeep) ಅವರಿಗೆ ಇಂದು ಜನ್ಮದಿನದ ಸಂಭ್ರಮ. ಕಿಚ್ಚನ ಹುಟ್ಟು ಹಬ್ಬಕ್ಕೆ (Birth Day) ಅವರ ಅಭಿಮಾನಿಯೊಬ್ಬರು ಅನಾಥ ಕುಟುಂಬಕ್ಕೆ ಭರ್ಜರಿ ಗಿಫ್ಟ್ ನೀಡಿದ್ದಾರೆ.

     

    ಬೆಳಗಾವಿ ತಾಲೂಕಿನ ಮಾರ್ಕಂಡೇಯ ನಗರದಲ್ಲಿ ಒಂದು ಗುಂಟೆ ಜಾಗದಲ್ಲಿ ಬಡ ಮಹಿಳೆ ರತ್ನವ್ವ ಅವರಿಗೆ ಕಿಚ್ಚನ ಅಭಿಮಾನಿ ಆದಿಶೇಷ ಮನೆ (House) ನಿರ್ಮಾಣ ಮಾಡಿಕೊಟ್ಟಿದ್ದಾರೆ. ಬಡ ಮಹಿಳೆಗೆ ಸೂರು ಒದಗಿಸುವುದರ ಮೂಲಕ ಕಿಚ್ಚನ ಬರ್ತಡೇಯನ್ನು ವಿಭಿನ್ನವಾಗಿ ಆಚರಿಸಲಾಗಿದೆ.  ಇದನ್ನೂ ಓದಿ: ಬಿಗ್‌ ಬಾಸ್‌ ಪ್ರೋಮೋ ರಿಲೀಸ್‌ ಸ್ಪರ್ಧಿಗಳ ಬಗ್ಗೆ ಮಾಹಿತಿಯೂ ಔಟ್‌

    ಸುದೀಪ್ ಹುಟ್ಟುಹಬ್ಬವನ್ನು ಮನೆಯ ಮುಂದೆ ಕೇಕ್ ಕಟ್ ಮಾಡಿ ರಿಬ್ಬನ್ ಟೇಪ್ ಕತ್ತರಿಸಿ ಗೃಹ ಪ್ರವೇಶ ಕಾರ್ಯಕ್ರಮ ಮಾಡಲಾಯಿತು. ತಂದೆ ತಾಯಿ ಇಲ್ಲದ ಒಂಭತ್ತು ಜನ ಮೊಮ್ಮಕ್ಕಳೊಂದಿಗೆ ರತ್ನವ್ವ ಬದುಕು ಸಾಗಿಸುತ್ತಿದ್ದಾರೆ.

    ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಸದ್ಯ ರತ್ನವ್ವ ಒಬ್ಬರೇ ಆಸರೆಯಾಗಿದ್ದು ಮನೆಯ ಸಂಕಷ್ಟವನ್ನು ಗಮನಿಸಿ ಆದಿಶೇಷ ನಾಯಕ ಮನೆ ನಿರ್ಮಿಸಿಕೊಟ್ಟಿದ್ದಾರೆ.

  • Tumakuru | ಟೈಯರ್ ಬ್ಲಾಸ್ಟ್ ಆಗಿ ಮನೆಗೆ ನುಗ್ಗಿದ KSRTC ಬಸ್

    Tumakuru | ಟೈಯರ್ ಬ್ಲಾಸ್ಟ್ ಆಗಿ ಮನೆಗೆ ನುಗ್ಗಿದ KSRTC ಬಸ್

    – ಬಸ್ಸಿನಲ್ಲಿದ್ದ 10ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯ

    ತುಮಕೂರು: ಚಲಿಸುತ್ತಿದ್ದ ಬಸ್ಸಿನ ಟೈರ್ ಬ್ಲಾಸ್ಟ್ (Tyre Blast) ಆದ ಪರಿಣಾಮ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ (KSRTC) ಬಸ್ ಮನೆಗೆ ನುಗ್ಗಿದ ಘಟನೆ ತುಮಕೂರು (Tumakuru) ಜಿಲ್ಲೆ ತಿಪಟೂರು ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.

    ಚಾಲಕನ ನಿಯಂತ್ರಣ ತಪ್ಪಿ ಬಸ್ ಮನೆಗೆ ನುಗ್ಗಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಸಿದ್ದಪುರ ಗ್ರಾಮದ ಬಳಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 206ರ ಸಮೀಪವೇ ಇರುವ ಪುಟ್ಟಣ್ಣ ಎಂಬುವರ ಮನೆಗೆ ಬಸ್ ನುಗ್ಗಿದೆ. ಬಸ್ ನುಗ್ಗಿದ ರಭಸಕ್ಕೆ ಗೋಡೆ ಪುಲ್ ಡ್ಯಾಮೇಜ್ ಆಗಿದೆ. ಇದನ್ನೂ ಓದಿ: ಗಾಳಿಯಲ್ಲಿ ಗುಂಡು ಹಾರಿಸಿ ಹುಟ್ಟುಹಬ್ಬ ಆಚರಣೆ – ಪಂಚಾಯತ್‌ ಸದಸ್ಯ ಅರೆಸ್ಟ್‌

    ಆಗುಂಬೆಯಿಂದ ಕೋಲಾರಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನ ಟೈರ್ ಬ್ಲಾಸ್ಟ್ ಆಗಿ ಏಕಾಏಕಿ ರಸ್ತೆ ಬದಿಯಿದ್ದ ಮನೆಗೆ ಡಿಕ್ಕಿ ಹೊಡೆದಿದೆ. ಬಸ್‌ನಲ್ಲಿದ್ದ 10ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನ ತಿಪಟೂರು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ತಿಪಟೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ – ಗೋಕಾಕ್ ಜಲಪಾತಕ್ಕೆ ಜೀವಕಳೆ

  • ನನ್ನ ಮನೆಯಲ್ಲಿ ಒಂದು ತುಂಡು ಸೀಜ್‌ ಆಗಿಲ್ಲ: ನಾರಾ ಭರತ್‌ ರೆಡ್ಡಿ

    ನನ್ನ ಮನೆಯಲ್ಲಿ ಒಂದು ತುಂಡು ಸೀಜ್‌ ಆಗಿಲ್ಲ: ನಾರಾ ಭರತ್‌ ರೆಡ್ಡಿ

    ಬಳ್ಳಾರಿ: ನನ್ನ ಮನೆಯಲ್ಲಿ ಒಂದು ತುಂಡನ್ನೂ ಸೀಜ್‌ ಮಾಡಿಲ್ಲ ಎಂದು ಕಾಂಗ್ರೆಸ್‌ (Congress)  ಶಾಸಕ ನಾರಾ ಭರತ್‌ ರೆಡ್ಡಿ (Nara Bharat Reddy) ಹೇಳಿದ್ದಾರೆ.

    ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಸತತ 14 ಗಂಟೆಗಳ ಕಾಲ ವಿಚಾರಣೆ ನಡೆಸಿದ ಇಡಿ (ED) ಅಧಿಕಾರಿಗಳು ಮಹತ್ವದ ದಾಖಲೆಗಳನ್ನ ಎರಡು ಬ್ಯಾಗ್‌ನಲ್ಲಿ ಸಂಗ್ರಹಿಸಿ ತೆಗೆದುಕೊಂಡು ಹೋಗಿದ್ದಾರೆ.

    ಇಡಿ ವಿಚಾರಣೆ ಅಂತ್ಯದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ನಾರಾ ಭರತ್‌ ರೆಡ್ಡಿ, ಇಡಿ ಅಧಿಕಾರಿಗಳು ಹಲವಾರು ಪ್ರಶ್ನೆಗಳನ್ನು ಕೇಳಿದ್ದರು. ನಮ್ಮ ವ್ಯವಹಾರ, ವಾಲ್ಮೀಕಿ ನಿಗಮದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್ ಕಾರಣದಿಂದಾಗಿ ಯಾವುದೇ ಸಾವುಗಳಾಗಿಲ್ಲ: ದಿನೇಶ್ ಗುಂಡೂರಾವ್

     

    ವಿಚಾರಣೆ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸಹಕಾರ ಕೊಟ್ಟಿದ್ದೇನೆ. ಪಂಚನಾಮೆ ಮಾಡಿದ್ದು ಅದರಲ್ಲಿ ಸ್ಪಷ್ಟವಾಗಿ ಏನನ್ನೂ ವಶಪಡಿಸಿಕೊಂಡಿಲ್ಲ ಎಂದು ತಿಳಿಸಿದ್ದಾರೆ. 40 ಕೋಟಿ ರೂ., 50 ಕೋಟಿ ರೂ. ಜಪ್ತಿಯಾಗಿದೆ ಎಂದು ಹರಿದಾಡುತ್ತಿದೆ. ಇದೆಲ್ಲ ಸುಳ್ಳು ಮಾಹಿತಿ ಎಂದು ಹೇಳಿದರು. ಇದನ್ನೂ ಓದಿ: ಬಳ್ಳಾರಿ ಚುನಾವಣೆಗೆ ವಾಲ್ಮೀಕಿ ಹಣ ಬಳಕೆ; ಮತದಾರರಿಗೆ ತಲಾ 200 ರೂ. ಹಂಚಿಕೆ – ಯಾವ ಕ್ಷೇತ್ರಕ್ಕೆ ಎಷ್ಟು?

    ರಾಜಕೀಯ ಅಂದರೆ ವಿರೋಧ ಪಕ್ಷಗಳು ಷಡ್ಯಂತ್ರ ಮಾಡುತ್ತಿವೆ. ಆದರೆ ಯಾರು ಏನೇ ಮಾಡಿದರೂ ನಮ್ಮನ್ನು ಏನು ಮಾಡಲು ಸಾಧ್ಯವಿಲ್ಲ. ಜನರ ಪ್ರೀತಿಯಿಂದ ಗೆದ್ದಿದ್ದೇನೆ. ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ ಎಂದು ತಿಳಿಸಿದರು.

    ಮುಂದೆ ಅಧಿಕಾರಿಗಳು ಏನೇ ದಾಖಲಾತಿ ಕೊಟ್ಟರೆ ಅವರಿಗೆ ಕೊಡುವೆ. ಹೆಚ್ಚಿನ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿಲ್ಲ ಎಂದು ಈ ವೇಳೆ ಹೇಳಿದರು.

  • ರಾಮನಗರ | ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಮನೆ – ಗೃಹೋಪಯೋಗಿ ವಸ್ತುಗಳು ಭಸ್ಮ

    ರಾಮನಗರ | ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಮನೆ – ಗೃಹೋಪಯೋಗಿ ವಸ್ತುಗಳು ಭಸ್ಮ

    ರಾಮನಗರ: ಶಾರ್ಟ್ ಸರ್ಕ್ಯೂಟ್‌ನಿಂದಾಗಿ (Short Circuit) ಮನೆ ಹೊತ್ತಿ ಉರಿದಿರುವ ಘಟನೆ ರಾಮನಗರ (Ramanagara) ತಾಲೂಕಿನ ವಡೇರಹಳ್ಳಿ (Vaderahalli) ಗ್ರಾಮದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.

    ವಡೇರಹಳ್ಳಿ ಗ್ರಾಮದ ಗುರು ಎಂಬವರಿಗೆ ಸೇರಿದ ಮನೆಯಲ್ಲಿ ಎಸಿಯಿಂದ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ನೋಡನೋಡುತ್ತಿದ್ದಂತೆ ಇಡೀ ಮನೆಗೆ ಬೆಂಕಿ ಆವರಿಸಿ ಗೃಹೋಪಯೋಗಿ ವಸ್ತುಗಳು ಸಂಪೂರ್ಣ ಸುಟ್ಟುಕರಕಲಾಗಿವೆ. ಇದನ್ನೂ ಓದಿ: ಜಮೀರ್ ಸುಮ್ಮನಿದ್ರೆ ಅದೇ ದೊಡ್ಡ ಸೇವೆ: ಜೋಶಿ

    ಮನೆಯಲ್ಲಿ ಎಲ್ಲರೂ ಮಲಗಿದ್ದ ವೇಳೆ ಘಟನೆ ನಡೆದಿದ್ದು, ಬೆಂಕಿ ಶಾಖ ತಟ್ಟುತ್ತಿದ್ದಂತೆಯೇ ಮನೆ ಮಂದಿ ಹೊರಗೆ ಓಡಿಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಶಿವಾನಂದ ಪಾಟೀಲ್ ಅವರೇ ನನಗೆ ಹೇಳೋಕೆ ನೀವ್ಯಾರು? – ಎಂ.ಬಿ ಪಾಟೀಲ್ ಗರಂ

  • ಬಾಗಲಕೋಟೆ| ರಸ್ತೆಗಳಲ್ಲಿ ಶೌಚಗುಂಡಿ, ಒಳಚರಂಡಿ ತುಂಬಿ ಮನೆಗೆ ನುಗ್ಗುತ್ತಿವೆ ಕೊಳಚೆ ನೀರು

    ಬಾಗಲಕೋಟೆ| ರಸ್ತೆಗಳಲ್ಲಿ ಶೌಚಗುಂಡಿ, ಒಳಚರಂಡಿ ತುಂಬಿ ಮನೆಗೆ ನುಗ್ಗುತ್ತಿವೆ ಕೊಳಚೆ ನೀರು

    ಬಾಗಲಕೋಟೆ: ವಿದ್ಯಾಗಿರಿಯಲ್ಲಿ ಒಳಚರಂಡಿ ನಿರ್ವಹಣೆಯನ್ನು ಬಾಗಲಕೋಟೆ (Bagalkote) ಪಟ್ಟಣ ಅಭಿವೃದ್ಧಿ ಪ್ರಾಧಿಕಾರ (BTDA) ಬಿಟಿಡಿಎ ಕೈ ಬಿಟ್ಟಿದೆ. ಪರಿಣಾಮ ರಸ್ತೆಗಳಲ್ಲಿ ಶೌಚಗುಂಡಿಗಳು, ಒಳಚರಂಡಿ ತುಂಬಿ ಹರಿಯುತ್ತಿದ್ದು ಕೊಳಚೆ ನೀರು ಮನೆಗಳಿಗೆ ನುಗ್ಗುತ್ತಿದೆ.

    ದಿಢೀರ್‌ ನಿರ್ಮಾಣವಾಗಿರುವ ಈ ಸ್ಥಿತಿಯಿಂದ ನಗರಸಭೆ ಸಿಬ್ಬಂದಿಯೂ ಅಸಹಾಯಕರಾಗಿದ್ದಾರೆ. ವಿದ್ಯಾಗಿರಿ ನಗರಸಭೆ ನಿರ್ವಹಣೆಗೆ ಒಳಪಟ್ಟರೂ ಈವರೆಗೆ ಇಲ್ಲಿನ ಒಳಚರಂಡಿಯನ್ನು (Drainage) ಬಿಟಿಡಿಎಯಿಂದ ನಿರ್ವಹಿಸಲಾಗುತ್ತಿತ್ತು. ಆದರೆ ಲೆಕ್ಕಪರಿಶೋಧಕರಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಇನ್ನು ಮುಂದೆ ನಿರ್ವಹಣೆ ಸಾಧ್ಯವಿಲ್ಲ ಎಂದು ಬಿಟಿಡಿಎ ಕೈ ತೊಳೆದುಕೊಂಡಿದೆ.

    ವಿದ್ಯಾಗಿರಿಯ ತೆಗ್ಗಿಲೇಔಟ್, ರೂಪ್‌ಲ್ಯಾಂಡ್, ಕುದರಿಕನ್ನೂರ ಲೇಔಟ್, ರೋಣ ಲೇಔಟ್, ಫುಡ್‌ಸ್ಟೇಶನ್ ಮುಂಭಾಗ ರಸ್ತೆಗಳಲ್ಲೇ ನೀರು ಉಕ್ಕಿ ಹರಿಯುತ್ತಿದೆ. ತೆಗ್ಗಿ ಲೇಔಟ್‌ನಲ್ಲಿ ನೀರು ಮನೆಗೆ ನುಗ್ಗಿದ್ದು, ನಮ್ಮ ಕಷ್ಟ ಕೇಳುವವರು ಯಾರು ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂದು ಜನ ಗೋಳಾಡುತ್ತಿದ್ದಾರೆ. ಇದನ್ನೂ ಓದಿ: ಲಾರೆನ್ಸ್ ಬಿಷ್ಣೋಯ್‌ನನ್ನು ಎನ್‌ಕೌಂಟರ್‌ ಮಾಡಿದ್ರೆ 1,11,11,111 ರೂ. ಬಹುಮಾನ – ಕರ್ಣಿ ಸೇನೆಯಿಂದ ಘೋಷಣೆ

    ಈ ಕುರಿತು ಮಾತನಾಡಿದ ನಗರಸಭೆ ಸದಸ್ಯ ವೀರಪ್ಪ ಶಿರಗಣ್ಣವರ ಪ್ರತಿಕ್ರಿಯಿಸಿ, ನಗರಸಭೆ ಬಳಿ ಇರುವ ಒಂದು ವಾಹನದಿಂದಲೇ ಎಲ್ಲವನ್ನು ಸ್ವಚ್ಛಗೊಳಿಸುವ ಪ್ರಯತ್ನ ನಡೆದಿದೆ. ಸಿಬ್ಬಂದಿ ಸಹಕಾರಿಯಾಗಿದ್ದಾರೆ ಎಂಬ ಕಾರಣಕ್ಕೆ ಎಷ್ಟೇ ಕೆಲಸ ಬಂದರೂ ಅವರು ಗೊಣಗದೇ ಕೆಲಸ ಮಾಡುತ್ತಿದ್ದಾರೆ. ಬಾಗಲಕೋಟೆಯ ಶಾಸಕರು ಬಿಟಿಡಿಎಗೆ ಸಭಾಪತಿಯಾಗಿದ್ದು, ಇಂಥ ಸಂದರ್ಭದಲ್ಲಿ ಜನಕ್ಕೆ ನೆರವಾಗುವ ಕೆಲಸ ಮಾಡಬೇಕಿದೆ ಎಂದರು.

    ಬಿಟಿಡಿಎ-ನಗರಸಭೆ ಸಿಬ್ಬಂದಿಯನ್ನು ಕರೆದು ಬಗೆಹರಿಸುವ ಕೆಲಸವನ್ನಾದರೂ ಮಾಡಬೇಕು. ನಾವು ಸಾಧ್ಯವಾದಷ್ಟು ಜನರ ತೊಂದರೆಯನ್ನು ನಿವಾರಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

    ವಿದ್ಯಾಗಿರಿಯಲ್ಲಿನ ಒಳಚರಂಡಿ ನಿರ್ವಹಣೆ ಸಂಬಂಧ ನಗರಸಭೆಯಿಂದ ಟೆಂಡರ್ ಕರೆಯಬೇಕಿದ್ದು, ಅಲ್ಲಿಯವರೆಗೂ ಜನರ ಕಷ್ಟ ತಪ್ಪಿದಲ್ಲ ಎಂಬ ಮಾತು ಕೇಳಿ ಬಂದಿದೆ. ಇದನ್ನೂ ಓದಿ: ತುಂಗಾ ಮೇಲ್ದಂಡೆ ಕಾಲುವೆ ಒಡೆದು ಅಪಾರ ಪ್ರಮಾಣದ ಬೆಳೆಹಾನಿ

    ಈ ನಡುವೆ ವಿದ್ಯಾಗಿರಿಯ 20ನೇ ಕ್ರಾಸ್ ನಲ್ಲಿ ಹೊಸದಾಗಿ ರಸ್ತೆ ಡಾಂಬರೀಕರಣ ಮಾಡಲಾಗಿದ್ದು, ರಸ್ತೆ ಕೆಳಭಾಗದ ಪೈಪ್‌ಗಳು ಒಡೆದು ನಿರಂತರವಾಗಿ ನೀರು ಪೋಲಾಗುತ್ತಿದೆ. ಈ ಬಗ್ಗೆಯೂ ಸಾರ್ವಜನಿಕರು ದೂರು ನೀಡಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ.

  • ಹುಬ್ಬಳ್ಳಿಯಲ್ಲಿ ಮನೆಗೆ ಕನ್ನ ಹಾಕಲು ಯತ್ನಿಸಿದ ಖದೀಮನ ಕಾಲಿಗೆ ಪೊಲೀಸರಿಂದ ಗುಂಡೇಟು

    ಹುಬ್ಬಳ್ಳಿಯಲ್ಲಿ ಮನೆಗೆ ಕನ್ನ ಹಾಕಲು ಯತ್ನಿಸಿದ ಖದೀಮನ ಕಾಲಿಗೆ ಪೊಲೀಸರಿಂದ ಗುಂಡೇಟು

    ಹುಬ್ಬಳ್ಳಿ: ಮನೆಗೆ ಕನ್ನ ಹಾಕಲು ಯತ್ನಿಸಿದ ಖದೀಮನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಹುಬ್ಬಳ್ಳಿಯಲ್ಲಿ (Hubballi) ನಡೆದಿದೆ.

    ಗೋಕುಲ್ ಗ್ರಾಮದ ಮನೆಯೊಂದರ ಕಳ್ಳತನಕ್ಕೆ 5-6 ಜನರ ತಂಡ ಸಂಚು ಮಾಡಿತ್ತು. ಇದರಲ್ಲಿ ಆರೋಪಿ ಸೀತಾರಾಮ್ ಕಾಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಇನ್ನುಳಿದ ಆರೋಪಿಗಳನ್ನು ತೋರಿಸುತ್ತೆನೆಂದು ರೇವಡಿಹಾಳ ಮಾರ್ಗಕ್ಕೆ ಸೀತಾರಾಮ್ ಪೊಲೀಸರನ್ನು ಕರೆದುಕೊಂಡು ಹೋಗಿದ್ದ. ಈ ವೇಳೆ ಏಕಾಏಕಿ ಪೊಲೀಸರ ಮೇಲೆ ದಾಳಿ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಇದನ್ನೂ ಓದಿ: ಮಾಲ್ಡೀವ್ಸ್ ಭಾರತದ ನೆರೆಹೊರೆಯ ಆಪ್ತ ಸ್ನೇಹಿತ, ಮೊದಲ ಆದ್ಯತೆಯಲ್ಲಿ ಸಹಾಯ: ಮೋದಿ ಭರವಸೆ

    ಹೀಗಾಗಿ ಸೀತಾರಾಮ್ ಕಾಲಿಗೆ ಪಿಎಸ್‌ಐ ಸಚಿನ್ ಗುಂಡು ಹೊಡೆದಿದ್ದು, ಘಟನೆಯಲ್ಲಿ ಕಾನ್ಸ್ಟೇಬಲ್ ವಸಂತ ಗುಡಿಗೇರಿಗೂ ಗಾಯ ಆಗಿದೆ. ಗಾಯಾಳು ಪೊಲೀಸ್ ಸಿಬ್ಬಂದಿ ಮತ್ತು ಆರೋಪಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದನ್ನೂ ಓದಿ: ಕಂಠ ಪೂರ್ತಿ ಕುಡಿದು `ನಮ್ಮ ಮೆಟ್ರೋ’ ನಿಲ್ದಾಣದಲ್ಲಿ ಗಲಾಟೆ – ಓರ್ವ ಪೊಲೀಸರ ವಶಕ್ಕೆ

    ಘಟನಾ ಸ್ಥಳ ಮತ್ತು ಕಿಮ್ಸ್ ಆಸ್ಪತ್ರೆಗೆ ಕಮಿಷನರ್ ಎನ್ ಶಶಿಕುಮಾರ್ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಸಿಎಂ ಸ್ವಾಭಿಮಾನಿ ಸಮಾವೇಶ ಬಳಿಕ ಖರ್ಗೆ ಭೇಟಿ ಮಾಡಿದ ಬೋಸರಾಜು

  • ಮಾಜಿ ಸಂಸದ ಅನಂತ್ ಕುಮಾರ್‌ ಹೆಗ್ಡೆ ಮನೆಯಲ್ಲಿ ಅಗ್ನಿ ಅವಘಡ

    ಮಾಜಿ ಸಂಸದ ಅನಂತ್ ಕುಮಾರ್‌ ಹೆಗ್ಡೆ ಮನೆಯಲ್ಲಿ ಅಗ್ನಿ ಅವಘಡ

    ಕಾರವಾರ: ಮಾಜಿ ಸಂಸದ ಅನಂತ್ ಕುಮಾರ್ ಹೆಗ್ಡೆ(Anantkumar Hegde) ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ.

    ಶಿರಸಿಯ KHB ಕಾಲೋನಿಯಲ್ಲಿ ಇರುವ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಮನೆಯಿದ್ದು, ಮನೆಯ ಮೇಲ್ಭಾಗದ ಜಿಮ್ ಮಾಡುವ ಕೊಠಡಿಯಲ್ಲಿ ಶಾರ್ಟ ಸರ್ಕ್ಯೂಟ್ ನಿಂದ ಬೆಂಕಿಯಾದ ಪರಿಣಾಮ ಚಿಮ್ ಮಾಡುವ ಯಂತ್ರಗಳಿಗೆ ಅಲ್ಪ ಹಾನಿಯಾಗಿದೆ. ಇದನ್ನು ಹೊರತುಪಡಿಸಿದರೇ ಹೊಗೆಯಿಂದ ಗೋಡೆಗಳಿಗೆ ಹಾನಿಯಾಗಿದ್ದು ಅಂದಾಜು 50 ಸಾವಿರದಷ್ಟು ಹಾನಿಯಾಗಿರಬಹುದು ಎಂದು ಅಂದಾಜಿಸಲಾಗಿದೆ.

    ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದು ಯಾವುದೇ ದೊಡ್ಡ ಹಾನಿಯಾಗಿಲ್ಲ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸುನೀಲ್ ರವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಉಮಾಪತಿ, ಪ್ರಥಮ್‍ಗೆ ಬೆದರಿಕೆ ಹಾಕಿದ್ದ ದರ್ಶನ್ ಅಭಿಮಾನಿ ಅರೆಸ್ಟ್, ಕ್ಷಮೆ

  • ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಅಕ್ಕ, ತಮ್ಮ ಸಾವು

    ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಅಕ್ಕ, ತಮ್ಮ ಸಾವು

    – ಮೊದಲ ದಿನ ಶಾಲೆಗೆ ಹೋಗದೇ ಚಕ್ಕರ್‌ ಹಾಕಿದ್ದ ಮಕ್ಕಳು
    – ಅಪಾಯದಿಂದ ಪಾರಾದ ಅಜ್ಜಿ

    ಬಾಗಲಕೋಟೆ: ಮಣ್ಣಿನ ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಅಕ್ಕ (Sister), ತಮ್ಮ (Brother) ಸಾವನ್ನಪ್ಪಿದ ಘಟನೆ ಇಳಕಲ್ (Ilkal) ತಾಲೂಕಿನ ಕಂದಗಲ್‌ನಲ್ಲಿ ನಡೆದಿದೆ.

    ಗೀತಾ ಈಶ್ವರಯ್ಯ ಆದಾಪುರಮಠ(14) ಹಾಗೂ ಆಕೆಯ ಸಹೋದರ ರುದ್ರಯ್ಯ(10) ಮೃತಪಟ್ಟರೆ ಮನೆಯಲ್ಲಿದ್ದ ಅಜ್ಜಿ ಸ್ವಲ್ಪದರಲ್ಲೇ ಪಾರಾಗಿದ್ದಾರೆ.  ಇದನ್ನೂ ಓದಿ: ನಿರೀಕ್ಷೆಗೂ ಮೀರಿ ಜಿಡಿಪಿ ಅಭಿವೃದ್ಧಿ – 4ನೇ ತ್ರೈಮಾಸಿಕದಲ್ಲಿ 7.8% , 2023-24 ಹಣಕಾಸು ವರ್ಷದಲ್ಲಿ 8.2% ಪ್ರಗತಿ

    ಬೆಳಗ್ಗೆ ತಂದೆ, ತಾಯಿ ಕೆಲಸಕ್ಕೆ ಹೋದಾಗ ಮನೆಯಲ್ಲಿ ಗೀತಾ, ರುದ್ರಯ್ಯ ಮತ್ತು ಅಜ್ಜಿ ಇದ್ದರು. ಮೇಲ್ಛಾವಣಿ ಬೀಳುವ ಕೆಲವೇ ಕ್ಷಣದ ಮೊದಲು ಅಜ್ಜಿ ಮನೆಯಿಂದ ಹೊರಗಡೆ ಬಂದಿದ್ದರು.

    ಮನೆಯಲ್ಲಿ ಮೊಬೈಲ್ ನೋಡುತ್ತಾ ಕುಳಿತಿದ್ದ ಗೀತಾ ಮತ್ತು ರುದ್ರಯ್ಯ ಅವರ ಮೇಲೆ ಅಪಾರ ಮಣ್ಣು, ಕಟ್ಟಿಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರ್ಯಾಚರಣೆ ನಡೆಸಿ ಮಣ್ಣಲ್ಲಿ ಸಿಲುಕಿದ್ದ ಇಬ್ಬರ ಶವವನ್ನು ಸ್ಥಳೀಯರು ಹೊರ ತೆಗೆದಿದ್ದಾರೆ. ಇಳಕಲ್ ತಾಲೂಕು ಆಸ್ಪತ್ರೆಗೆ ಮಕ್ಕಳ ಶವವನ್ನು ರವಾನೆ ಮಾಡಲಾಗಿದೆ. ಇದನ್ನೂ ಓದಿ: ಆರ್‌ಬಿಐನಿಂದ ಸಾಧನೆ – ಯುಕೆಯಿಂದ ಮರಳಿ ಭಾರತಕ್ಕೆ ಬಂತು 100 ಟನ್‌ ಚಿನ್ನ!

    ತಂದೆ ಬೆಳಗ್ಗೆ ಕೆಲಸಕ್ಕೆ ಹೋಗಿದ್ದರೆ, ತಾಯಿ ಹೊಲಕ್ಕೆ ಹೋಗಿದ್ದರು. ಈ ವೇಳೆ ಇಂದು ಶಾಲೆಗೆ (School) ಹೋಗಿ ಎಂದು ಪೋಷಕರು ಮಕ್ಕಳಿಗೆ ಸೂಚಿಸಿದ್ದರು. ಪೋಷಕರ ಮಾತನ್ನು ನಿರ್ಲಕ್ಷಿಸಿದ ಮಕ್ಕಳು ಇಂದು ಮೊದಲ ದಿನ ಅಂತ ಶಾಲೆಗೆ ಹೋಗದೇ ಮನೆಯಲ್ಲೇ ಇದ್ದರು. ಆಸ್ಪತ್ರೆ ಆವರಣದಲ್ಲಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

     

  • Madhya Pradesh : ಮಹಿಳೆ ಮೇಲೆ 1 ತಿಂಗಳ ಕಾಲ ರೇಪ್‌ – ಜೆಸಿಬಿಯಿಂದ ಆರೋಪಿಯ ಮನೆ ಧ್ವಂಸ

    Madhya Pradesh : ಮಹಿಳೆ ಮೇಲೆ 1 ತಿಂಗಳ ಕಾಲ ರೇಪ್‌ – ಜೆಸಿಬಿಯಿಂದ ಆರೋಪಿಯ ಮನೆ ಧ್ವಂಸ

    ಭೋಪಾಲ್‌: ಮಧ್ಯಪ್ರದೇಶದ ( Madhya Pradesh) ಗುನಾದಲ್ಲಿ ಮಹಿಳೆಯೊಬ್ಬರ ಮೇಲೆ ಒಂದು ತಿಂಗಳ ಕಾಲ ಅತ್ಯಾಚಾರ (Rape) ಮತ್ತು ಚಿತ್ರಹಿಂಸೆ ನೀಡಿದ ಆರೋಪಿಯ ಮನೆಯನ್ನು ಜೆಸಿಬಿಯಿಂದ (JCB) ಧ್ವಂಸ ಮಾಡಲಾಗಿದೆ.

    ಭಾನುವಾರ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಅಕ್ರಮವಾಗಿ ನಿರ್ಮಾಣ ಮಾಡಲಾಗಿದ್ದ ಮನೆಯನ್ನು ನೆಲಸಮಗೊಳಿಸಿದ್ದಾರೆ. ಆರೋಪಿಯ ಮನೆಯನ್ನು ಜೆಸಿಬಿಯಿಂದ ಕೆಡವುತ್ತಿರುವ ವಿಡಿಯೋ ವೈರಲ್‌ (Video Viral) ಆಗಿದೆ.

    ಅಯಾನ್ ಪಠಾಣ್ ತನ್ನ ನೆರೆ ಮನೆಯಲ್ಲಿ ವಾಸಿಸುತ್ತಿದ್ದ 23 ವರ್ಷದ ಮಹಿಳೆಯನ್ನು ಒತ್ತೆಯಾಳಾಗಿ ಇಟ್ಟುಕೊಂಡು ಒಂದು ತಿಂಗಳ ಕಾಲ ಚಿತ್ರಹಿಂಸೆ ನೀಡಿದ್ದ. ಇದನ್ನೂ ಓದಿ: ರಾಜ್ಯದ ಮಗಳು ಮೃತಪಟ್ಟಿದ್ದಾರೆ.. ಯಾಕೆ ನೀವು ಧ್ವನಿ ಎತ್ತುತ್ತಿಲ್ಲ: ಪ್ರಕಾಶ್ ರಾಜ್, ಚೇತನ್ ವಿರುದ್ಧ ಪ್ರಥಮ್ ಕಿಡಿ

    ಕೂಲಿ ಕೆಲಸ ಮಾಡುತ್ತಿದ್ದ ಅಯಾನ್ ಮಹಿಳೆಯ ತಾಯಿಯ ಹೆಸರಿನಲ್ಲಿರುವ ಆಸ್ತಿಯ ಮೇಲೆ ಕಣ್ಣಿಟ್ಟಿದ್ದ. ಆಕೆಯ ಆಸ್ತಿಯನ್ನು ತನಗೆ ನೀಡದ್ದಕ್ಕೆ ಮಹಿಳೆಯನ್ನು ಹೊಡೆದು ಆಕೆಯ ಕಣ್ಣು ಮತ್ತು ಬಾಯಿಗೆ ಮೆಣಸಿನ ಪುಡಿಯನ್ನು ತುಂಬಿದ್ದ. ಅಷ್ಟೇ ಅಲ್ಲದೇ ಹೊರಗಡೆ ಆಕೆಯ ಧ್ವನಿ ಕೇಳದೇ ಇರಲು ಬಾಯಿಗೆ ಅಂಟುಗಳನ್ನು ಹಾಕಿದ್ದ. ಇದನ್ನೂ ಓದಿ: ಮತದಾನ ವೇಳೆ ಗುಂಡಿನ ದಾಳಿ, ಇವಿಎಂ ಧ್ವಂಸ – ಮಣಿಪುರದ 11 ಮತಗಟ್ಟೆಗಳಲ್ಲಿ ಮರು ಮತದಾನ

    ಅಷ್ಟೇ ಅಲ್ಲದೇ ತನ್ನ ಸಂಬಂಧಿಕರ ನೆರವಿನಿಂದ ಮಹಿಳೆಗೆ ಹಲವು ಬಾರಿ ದೈಹಿಕ ಹಿಂಸೆ ನೀಡಿದ್ದ. ತೀವ್ರವಾಗಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ದೂರು ದಾಖಲಿಸಿದ ನಂತರ ಅಯಾನ್‌ನನ್ನು ಈಗ ಬಂಧಿಸಲಾಗಿದೆ.

     

    ಮಧ್ಯಪ್ರದೇಶದಲ್ಲಿ ರೇಪ್‌ ಆರೋಪಿಗಳ ಮನೆ, ಕಟ್ಟಡಗಳನ್ನು ಧ್ವಂಸ ಮಾಡುವುದು ಹೊಸದೆನಲ್ಲ. ಈ ಹಿಂದೆಯೂ ಹಲವು ಬಾರಿ ಬಿಜೆಪಿ ಸರ್ಕಾರ ರೇಪ್‌ ಆರೋಪಿಗಳ ಕಟ್ಟಡಗಳನ್ನು ಧ್ವಂಸ ಮಾಡಿತ್ತು.