Tag: Hotel

  • ನಾಳೆಯಿಂದ ಹೋಟೆಲ್ ಊಟ, ತಿಂಡಿ ದರ ಏರಿಕೆ

    ನಾಳೆಯಿಂದ ಹೋಟೆಲ್ ಊಟ, ತಿಂಡಿ ದರ ಏರಿಕೆ

    ಬೆಂಗಳೂರು: ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ದರಗಳು ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದ ಹೋಟೆಲ್‍ಗಳಲ್ಲಿ ಕಾಫಿ, ತಿಂಡಿ, ಊಟಗಳ ದರ ಹೆಚ್ಚಿಸಲು ರಾಜ್ಯ ಹೋಟೆಲ್‍ ಅಸೋಸಿಯೇಷನ್ ಮುಂದಾಗಿದೆ.

    ಪ್ರತಿಯೊಂದು ಆಹಾರ ಉತ್ಪನ್ನದ ಮೇಲೆ ಕನಿಷ್ಠ 10% ಹೆಚ್ಚಳ ಮಾಡುವ ಬಗ್ಗೆ ನಿರ್ಧರಿಸಲಾಗಿದೆ. ಈ ಸಂಬಂಧ ಕೆಳದಿನಗಳ ಹಿಂದೆ ಹೋಟೆಲ್ ಮಾಲೀಕರ ಸಂಘದ ಸಭೆ ನಡೆದಿತ್ತು. ಇದೀಗ ನಾಳೆಯಿಂದ ಹೊಟೇಲ್ ಗಳಲ್ಲಿ ಹಂತ ಹಂತವಾಗಿ ದರ ಏರಿಕೆ ಮಾಡಲು ಹೋಟೆಲ್ ಅಸೋಸಿಯೇಷನ್ ತೀರ್ಮಾನಿಸಿದೆ. ಇದನ್ನೂ ಓದಿ: ತೈಲ ಬೆಲೆ ಇಳಿಕೆ ಬೆನ್ನಲ್ಲೇ ದುಬಾರಿಯಾಗಲಿದೆ ಹೋಟೆಲ್ ಫುಡ್

    ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ತೆರಿಗೆ ಕಡಿತಗೊಳಿಸಿರುವ ಬೆನ್ನಲ್ಲೇ ರಾಜ್ಯ ಸರ್ಕಾರವು ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು 35% ರಿಂದ 25.9%ಕ್ಕೆ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು 24% ರಿಂದ 14.34%ಕ್ಕೆ ಇಳಿಸಿ ಗ್ರಾಹಕರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಆದರೆ ಗ್ಯಾಸ್ ದರ ಮತ್ತು ಅಡುಗೆ ಎಣ್ಣೆ ದರಗಳನ್ನು ಕಡಿಮೆ ಮಾಡದ ಹಿನ್ನೆಲೆ ಹೋಟೆಲ್‍ಗಳಿಗೆ ದೊಡ್ಡ ಹೊಡೆತ ಬಿದ್ದಿದೆ ಹಾಗಾಗಿ ಹೋಟೆಲ್ ಆಹಾರಗಳ ದರ ಹೆಚ್ಚಾಗಿದೆ. ಇದನ್ನೂ ಓದಿ: ಆರ್ಯನ್ ಖಾನ್ ಕಿಡ್ನಾಪ್ ಮಾಡಲಾಗಿತ್ತು: ನವಾಬ್ ಮಲಿಕ್

    ಎಷ್ಟೆಷ್ಟು ರೇಟ್ ಆಗಬಹುದು..!?
    ದೋಸೆ- 5 ರೂ ಏರಿಕೆ
    ರೈಸ್ ಬಾತ್ – 5 ರೂ ಏರಿಕೆ
    ಊಟ- 6-8 ರೂ ಏರಿಕೆ
    ನಾರ್ಥ್ ಇಂಡಿಯನ್ ಊಟ- 10 ರೂ.ಏರಿಕೆ
    ಕಾಫಿ, ಟೀ- 5 ರೂ ಏರಿಕೆ
    ರೈಸ್ ಬಾತ್-4-5 ರೂ ಏರಿಕೆ
    ಪ್ರತಿ ತಿಂಡಿಯ ಮೇಲೆ 5-10 ರೂ ದರ ಏರಿಕೆ ಸಾಧ್ಯತೆ

  • ತೈಲ ಬೆಲೆ ಇಳಿಕೆ ಬೆನ್ನಲ್ಲೇ ದುಬಾರಿಯಾಗಲಿದೆ ಹೋಟೆಲ್ ಫುಡ್

    ತೈಲ ಬೆಲೆ ಇಳಿಕೆ ಬೆನ್ನಲ್ಲೇ ದುಬಾರಿಯಾಗಲಿದೆ ಹೋಟೆಲ್ ಫುಡ್

    ಬೆಂಗಳೂರು: ಒಂದು ಕಡೆ ಪೆಟ್ರೋಲ್, ಡೀಸೆಲ್ ಬೆಲೆಗಳು ದೀಪಾವಳಿ ಗಿಫ್ಟ್ ರೂಪದಲ್ಲಿ ಇಳಿಕೆಯಾಗಿದ್ದು, ಜನ ನಿಟ್ಟುಸಿರು ಬಿಡುವಷ್ಟರಲ್ಲಿ ಹೋಟೆಲ್‍ಗಳು ಶಾಕ್ ನೀಡಲು ಮುಂದಾಗಿವೆ.

    ನಿರಂತರವಾಗಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ದರಗಳು ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ವಾರದೊಳಗೆ ಹೊಟೆಲ್ ಕಾಫಿ, ತಿಂಡಿ, ಊಟಗಳ ದರ ಹೆಚ್ಚಿಸಲು ಹೋಟೆಲ್ ಮಾಲೀಕರ ಸಂಘ ಮುಂದಾಗಿದೆ. ಪ್ರತಿಯೊಂದು ಆಹಾರ ಉತ್ಪನ್ನದ ಮೇಲೆ ಕನಿಷ್ಠ 5 ರೂ. ಹೆಚ್ಚಳವಾಗುವ ಸಂಭವ ಇದೆ. ಈ ಸಂಬಂಧ ಮೊನ್ನೆ ಸಭೆ ನಡೆಸಿದೆ. ದರ ಹೆಚ್ಚಿಸಿದ್ರೆ ಗ್ರಾಹಕರನ್ನು ಕಳೆದುಕೊಳ್ಳುವ ಭಯ ಕೂಡ ಇದೆ. ಹೀಗಾಗಿ ದರ ಏರಿಕೆ ನಿರ್ಧಾರವನ್ನು ಆಯಾ ಹೋಟೆಲ್‍ಗಳಿಗೆ ಬಿಡುವ ಬಗ್ಗೆಯೂ ಚಿಂತನೆ ನಡೆದಿದೆ. ಇದನ್ನೂ ಓದಿ: ಇಂಧನ ಮಾರಾಟ ತೆರಿಗೆ ಇಳಿಸಿದ ದೇಶದ ಮೊದಲ ರಾಜ್ಯ ಕರ್ನಾಟಕ

    ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ತೆರಿಗೆ ಕಡಿತಗೊಳಿಸಿರುವ ಬೆನ್ನಲ್ಲೇ ರಾಜ್ಯ ಸರ್ಕಾರವು ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು 35% ರಿಂದ 25.9%ಕ್ಕೆ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು 24% ರಿಂದ 14.34%ಕ್ಕೆ ಇಳಿಸಿ ಗ್ರಾಹಕರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಆದರೆ ಗ್ಯಾಸ್ ದರ ಮತ್ತು ಅಡುಗೆ ಎಣ್ಣೆ ದರಗಳನ್ನು ಕಡಿಮೆ ಮಾಡದ ಹಿನ್ನೆಲೆ ಹೋಟೆಲ್‍ಗಳಿಗೆ ದೊಡ್ಡ ಹೊಡೆತ ಬಿದ್ದಿದೆ ಹಾಗಾಗಿ ಹೋಟೆಲ್ ಆಹಾರಗಳ ದರ ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ. ಇದನ್ನೂ ಓದಿ: ನ.8 ರಿಂದ ಅಂಗನವಾಡಿ ಕೇಂದ್ರಗಳು ರೀ ಓಪನ್

  • ಬಿರಿಯಾನಿ ತಿನ್ನಲು ಹೋಗಿ 2 ಲಕ್ಷ ರೂ. ಕಳೆದುಕೊಂಡ ಆಟೋ ಚಾಲಕ

    ಬಿರಿಯಾನಿ ತಿನ್ನಲು ಹೋಗಿ 2 ಲಕ್ಷ ರೂ. ಕಳೆದುಕೊಂಡ ಆಟೋ ಚಾಲಕ

    ಬೆಂಗಳೂರು: ಆಟೋ ಚಾಲಕರೊಬ್ಬರು ಚಿನ್ನ ಅಡವಿಟ್ಟು 2 ಲಕ್ಷ ರೂಪಾಯಿ ಸಾಲ ಪಡೆದು ಅದನ್ನು ಬೈಕ್‍ನಲ್ಲಿ ಇಟ್ಟು ದಾರಿ ಮಧ್ಯೆ ಬಿರಿಯಾನಿ ತಿನ್ನಲು ಹೋಗಿ ವಾಪಸ್ ಬರುವಾಗ ಬೈಕ್‍ನಲ್ಲಿ ಇಟ್ಟಿದ್ದ ಹಣ ಕಳವಾಗಿರುವ ಘಟನೆ ಬ್ಯಾಡರಹಳ್ಳಿಯಲ್ಲಿ ನಡೆದಿದೆ.

    ಆಟೋ ಚಾಲಕರಾಗಿರುವ ಹನುಮಂತರಾಯ ಬ್ಯಾಂಕ್‍ನಲ್ಲಿ ಸಾಲ ಮಾಡಿದ್ದರು. ಬಳಿಕ ಕಟ್ಟಬೇಕಾದ ಅನಿವಾರ್ಯತೆಯಿಂದ ತಮ್ಮಲ್ಲಿದ್ದ ಚಿನ್ನ ಅಡವಿಟ್ಟು 2 ಲಕ್ಷ ಹಣ ಹೊಂದಿಸಿ ಅದನ್ನು ಬೈಕ್‍ನ ಸೈಡ್ ಲಾಕರ್‌ನಲ್ಲಿ ಇಟ್ಟುಕೊಂಡು ಅವರ ಬಾಮೈದನೊಂದಿಗೆ ಮನೆಗೆ ತೆರಳುತ್ತಿದ್ದರು. ಈ ನಡುವೆ ದಾರಿ ಮಧ್ಯೆ ಬಿರಿಯಾನಿ ತಿನ್ನಲೆಂದು ಬೈಕ್‍ನಿಂದ ಇಬ್ಬರು ಇಳಿದು ಹೋಗಿದ್ದಾರೆ. ಈ ವೇಳೆ ಬೈಕ್ ಲಾಕರ್‌ನಲ್ಲಿದ್ದ ಹಣವನ್ನು ಕೂಡ ಅಲ್ಲೇ ಬಿಟ್ಟು ಹೋಗಿದ್ದಾರೆ. ನಂತರ ಬಿರಿಯಾನಿ ತಿಂದು ಬರುವಷ್ಟರಲ್ಲಿ 2 ಲಕ್ಷ ರೂಪಾಯಿಯನ್ನು ಕಳ್ಳರು ಎಗರಿಸಿದ್ದಾರೆ. ಇದನ್ನೂ ಓದಿ: ಫ್ರೀಯಾಗಿ ಕೋಳಿ ಕೊಡಲಿಲ್ಲ- ಹಿಗ್ಗಾಮುಗ್ಗ ಥಳಿಸಿದ್ರು

    ಬಿರಿಯಾನಿ ತಿಂದು ಹನುಮಂತರಾಯ ಬೈಕ್ ಬಳಿ ಬಂದು ಹಣವನ್ನು ಪರಿಶೀಲಿಸಿದಾಗ ಕಳ್ಳತನ ಬೆಳಕಿಗೆ ಬಂದಿದೆ. ಕೂಡಲೇ ಪಕ್ಕದಲ್ಲಿದ್ದ ಅಂಗಡಿಯೊಂದರ ಸಿಸಿಟಿವಿ ಪರಿಶೀಲಿಸಿದಾಗ ಸಾಮಾನ್ಯರಂತೆ ಓಡಾಡಿ, ಹಣ ಕಳ್ಳತನ ಮಾಡಿದ ದೃಶ್ಯ ಸೆರೆಯಾಗಿದೆ. ಈ ಘಟನೆ ಕೆಳದಿನಗಳ ಹಿಂದೆ ನಡೆದಿದ್ದು, ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಪರ್ವತದ ನೀರು ಕುಡಿದು, ದೇವಾಲಯದ ಪ್ರಸಾದ ಸೇವಿಸಿ ಬದುಕುಳಿದೆವು: ಉತ್ತರಾಖಂಡ್ ಪ್ರವಾಹ ಭೀಕರತೆ ಬಿಚ್ಚಿಟ್ಟ ಕನ್ನಡಿಗರು

  • ರಸ್ತೆ ಬದಿಯ ಹೋಟೆಲ್‍ನಲ್ಲಿ ಟೀ ಸವಿದ ಸಿಎಂ-ವೀಡಿಯೋ ವೈರಲ್

    ರಸ್ತೆ ಬದಿಯ ಹೋಟೆಲ್‍ನಲ್ಲಿ ಟೀ ಸವಿದ ಸಿಎಂ-ವೀಡಿಯೋ ವೈರಲ್

    ತುಮಕೂರು: ಮಾರ್ಗ ಮಧ್ಯೆದ ಹೋಟೆಲ್‍ನಲ್ಲಿ ಟೀ ಕುಡಿದ ಸಿಎಂ ಬಸವರಾಜ್ ಬೊಮ್ಮಾಯಿ ಜಿಲ್ಲೆಯಲ್ಲಿ ಪೊಲೀಸ್ ಹಾಗೂ ಆಡಳಿತ ವ್ಯವಸ್ಥೆಯನ್ನು ವಿಚಾರಿಸಿದ್ದಾರೆ.

    ದಾವಣಗೆರೆಗೆ ಹೋಗುವ ಮಧ್ಯೆ ತುಮಕೂರು ಜಿಲ್ಲೆಯ ಶಿರಾ ಬಳಿಯ ಖಾಸಗಿ ಹೋಟೆಲ್‍ನಲ್ಲಿ ಸಾರ್ವಜನಿಕರಂತೆ ಕುಳಿತು ಮುಖ್ಯಮಂತ್ರಿಗಳು ಟೀ ಕುಡಿದಿದ್ದಾರೆ. ದಾವಣಗೆರೆಯಲ್ಲಿ ನಿನ್ನೆ ಮತ್ತು ಇಂದು ಬಿಜೆಪಿ ಕಾರ್ಯಕಾರಿಣಿ ಸಭೆ ಇರುವ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ದಾವಣಗೆರೆಗೆ ತೆರಳುತ್ತಿದ್ದರು. ಈ ವೇಳೆ ಸಿಎಂ, ಶಿರಾ ಬಳಿಯ ಖಾಸಗಿ ಹೋಟೆಲ್‍ನಲ್ಲಿ ಟೀ ಸವಿದು ಮಾತು ಕತೆ ನಡೆಸಿದ್ದಾರೆ. ಇದನ್ನೂ ಓದಿ: ಲಸಿಕೆ ವಿತರಣೆ ದಾಖಲೆ ಬಗ್ಗೆ ಕೇಂದ್ರ ಸರ್ಕಾರವನ್ನು ಟೀಕಿಸಿದ ರಾಹುಲ್ ಗಾಂಧಿ

    ಈ ವೇಳೆ ಶಿರಾ ಶಾಸಕ ಡಾ.ರಾಜೇಶ್ ಗೌಡರೊಂದಿಗೆ ಕೆಲಕಾಲ ಚರ್ಚೆ ನಡೆಸಿ ಮಾರ್ಗದರ್ಶನ ನೀಡಿದ್ದಾರೆ. ಜೊತೆಗೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್, ಎಸ್‍ಪಿ ರಾಹುಲ್ ಕುಮಾರ್ ಶಹಾಪುರ್ ಬಳಿ ಜಿಲ್ಲೆಯ ಬಗ್ಗೆ ಮಾಹಿತಿ ಪಡೆದು ಮಾತುಕತೆ ನಡೆಸಿದ್ದಾರೆ. ನಿನ್ನೆ ಸಂಜೆ 5.30 ವೇಳೆಗೆ ಆಗಮಿಸಿದ್ದ ಸಿಎಂ, ಸುಮಾರು ಅರ್ಧಗಂಟೆಗಳ ಕಾಲ ಚರ್ಚಿಸಿ ದಾವಣಗೆರೆಗೆ ತೆರಳಿದ್ದಾರೆ. ಈ ವೀಡಿಯೋ ಈಗ ವೈರಲ್ ಆಗಿದೆ. ಇದನ್ನೂ ಓದಿ:  ಹೆತ್ತವರ ವಿರುದ್ಧ ದೂರು ದಾಖಲಿಸಿದ ನಟ

  • ಬೆಂಗಳೂರು ಹೋಟೆಲಿನಲ್ಲಿ ಅಗ್ನಿ ಅವಘಡಕ್ಕೆ ಬೊಲೇರೋ ವಾಹನ ಕಾರಣ?

    ಬೆಂಗಳೂರು ಹೋಟೆಲಿನಲ್ಲಿ ಅಗ್ನಿ ಅವಘಡಕ್ಕೆ ಬೊಲೇರೋ ವಾಹನ ಕಾರಣ?

    ಬೆಂಗಳೂರು: ಎಂಜಿ ರಸ್ತೆಯಯಲ್ಲಿರುವ ಅಜಂತಾ ಟ್ರಿನಿಟಿ ಹೋಟೆಲ್ ನಲ್ಲಿ ನಿನ್ನೆ ರಾತ್ರಿ ಬೆಂಕಿ ಅವಘಡವೊಂದು ನಡೆದಿದ್ದು, ಇದಕ್ಕೆ ಬೊಲೇರೋ ವಾಹನ ಕಾರಣವಾಗಿರಬಹುದು ಎಂಬ ಅನುಮಾನ ಎದ್ದಿದೆ.

    ಬೆಂಕಿ ಆಕಸ್ಮಿಕವಾಗಿ ಹೇಗೆ ಕಾಣಿಸಿತು ಎನ್ನುವುದರ ಬಗ್ಗೆ ಅಗ್ನಿಶಾಮಕ ಸಿಬ್ಬಂದಿ ತನಿಖೆಯನ್ನು ಮಾಡುತ್ತಿದ್ದಾರೆ. ಈ ವೇಳೆ ಬೊಲೇರೋ ವಾಹನದಿಂದ ಬೆಂಕಿ ಸೃಷ್ಟಿಯಾಗಿರಬಹುದು ಎಂಬ ಅನುಮಾನ ಬಂದಿದೆ. ಇದನ್ನೂ ಓದಿ:  ನಿವಾಸದಲ್ಲಿದ್ದ ಮರಗಳಿಗೆ ಕೊಡಲಿ – ಮಂಡ್ಯ ಎಸ್‍ಪಿಯಿಂದ ಸರ್ವಾಧಿಕಾರಿ ಧೋರಣೆ

    ಕೊರೊನಾ ಕಾರಣದಿಂದ ಹೋಟೆಲ್‍ನಲ್ಲಿದ್ದ 96 ರೂಮ್ ಗಳನ್ನು ಸಹ ಬಂದ್ ಮಾಡಲಾಗಿದೆ. ಮಾಲೀಕರು ಮತ್ತು ಅವರ ಸ್ನೇಹಿತರು ನಿನ್ನೆ ರಾತ್ರಿ ಹೋಟೆಲ್ ಗೆ ಬಂದಿದ್ದು, ಅವರಿಗೂ ಹೋಟೆಲ್‍ನ ಮೂರನೇ ಮಹಡಿಯ ರೂಮ್ ಅನ್ನು ಸಿಬ್ಬಂದಿ ನೀಡಿದ್ದಾರೆ.

    ಹೋಟೆಲ್ ಮಾಲೀಕರ ಸ್ನೇಹಿತರಾದ ರಾಚಪ್ಪಜಿ ಮೈಸೂರಿನಿಂದ ರಾತ್ರಿ 10:15 ಕ್ಕೆ ಹೋಟಲಿಗೆ ಬೊಲೇರೋ ವಾಹನದಲ್ಲಿ ಆಗಮಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ರೈಲಿನಲ್ಲಿ 15 ಕೆಜಿ ಹಸಿ ಗಾಂಜಾ ಪತ್ತೆ! 

    ಹೋಟೆಲ್ ಸಿಬ್ಬಂದಿ ಪ್ರಕಾರ, ಪಾರ್ಕಿಂಗ್ ನಲ್ಲಿದ್ದ ಬೊಲೇರೋ ಕಾರಿನ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಪಕ್ಕದಲ್ಲೇ ಇದ್ದ ಆಟೋಗೆ ಬೆಂಕಿ ತಗುಲಿದೆ. ಅದು ಮುಂದುವರೆದು ಇಡೀ ಹೋಟೆಲ್‍ನ ನೆಲಮಹಡಿಗೆ ಬೆಂಕಿ ಆವರಿಸಿದೆ. ಬೆಂಕಿಯ ತೀವ್ರತೆ ಮೂರು ಅಂತಸ್ತಿಗೂ ಹಬ್ಬಿದ್ದು, ಇಡೀ ಹೋಟೆಲ್ ಪೀಠೋಪಕರಣಗಳು ಸುಟ್ಟು ಕರಕಲಾಗಿರಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೆಲಸಕ್ಕೆ ಹಾಜರಾಗಿ – ಪೊಲೀಸರಿಗೆ ತಾಲಿಬಾನ್ ಕಮಾಂಡರ್​ಗಳಿಂದ ಕರೆ

    ಅಗ್ನಿ ಅವಘಡಕ್ಕೆ ಬೊಲೇರೋ ಕಾರ್ ನ ಇಂಜಿನ್ ನಲ್ಲಿ ಕಾಣಿಸಿಕೊಂಡ ಬೆಂಕಿಯೇ ಕಾರಣವಿರಬಹುದು ಅನ್ನುವ ಮಾತುಗಳು ಕೇಳಿಬಂದಿದೆ. ಜೊತೆಗೆ ಶಾಟ್ ಸಕ್ರ್ಯೂಟ್ ಆಗಿದೆ ಎನ್ನುವ ಅನುಮಾನವನ್ನು ಅಗ್ನಿಶಾಮಕ ಸಿಬ್ಬಂದಿ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಸಮಯಕ್ಕೆ ಸರಿಯಾಗಿ ಬಂದ ಅಗ್ನಿಶಾಮಕ ಸಿಬ್ಬಂದಿಯಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ಕೂದಳೆಲೆ ಅಂತರದಲ್ಲಿ ತಪ್ಪಿದೆ.

  • ಬೆಂಗಳೂರಿನ ಹೋಟೆಲ್‍ನಲ್ಲಿ ಅಗ್ನಿ ಅವಘಡ – 7 ಜನ ಪಾರು, ತಪ್ಪಿತು ಭಾರೀ ಅನಾಹುತ

    ಬೆಂಗಳೂರಿನ ಹೋಟೆಲ್‍ನಲ್ಲಿ ಅಗ್ನಿ ಅವಘಡ – 7 ಜನ ಪಾರು, ತಪ್ಪಿತು ಭಾರೀ ಅನಾಹುತ

    ಬೆಂಗಳೂರು: ನಗರದ ಎಂಜಿ ರಸ್ತೆಯ ಅಜಂತಾ ಟ್ರಿನಿಟಿ ಹೊಟೆಲ್ ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ 7 ಜನ ಪಾರಾಗಿದ್ದಾರೆ.

    ಸೋಮವಾರ ರಾತ್ರಿ 10.30ರ ಸುಮಾರಿಗೆ ಘಟನೆ ನಡೆದಿದ್ದು, ಕೂದಲೆಳೆಯ ಅಂತರದಲ್ಲಿ ಭಾರೀ ಅಗ್ನಿ ಅವಘಡ ತಪ್ಪಿದಂತಾಗಿದೆ. ಘಟನೆ ವೇಳೆ 7 ಜನ ಜಸ್ಟ್ ಸೇಫ್ ಆಗಿದ್ದಾರೆ.

    ನಾಗೇಶ್, ಮಹೇಂದ್ರ, ಸತ್ಯಪ್ರಕಾಶ್, ದಿನೇಶ್, ಅಭಿಷೇಕ್, ರಾಚಪ್ಪಜಿ ಮತ್ತು ಶೇಖರ್ ಅವರನ್ನು ರಕ್ಷಣೆ ಮಾಡಲಾಗಿದೆ. 7 ಜನರಲ್ಲಿ ಇಬ್ಬರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ ಪಾರ್ಕಿಂಗ್ ಲಾಟ್ ನಲ್ಲಿದ್ದ ಒಂದು ಆಟೋ, ಒಂದು ಜೀಪ್ ಸುಟ್ಟು ಕರಕಲಾಗಿದೆ.

    ದಟ್ಟ ಹೊಗೆ ಆವರಿಸಿದ್ದು, ಉಸಿರಾಡಲಾಗದೇ ಹೊಟೆಲ್ ನಲ್ಲಿದ್ದ ಓರ್ವ ವ್ಯಕ್ತಿ ಎರಡನೇ ಮಹಡಿಯಿಂದ ಕಿಟಕಿ ಮೂಲಕ ಜಿಗಿದಿದ್ದಾರೆ. ಘಟನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಪೀಠೋಪಕರಣ ಭಸ್ಮವಾಗಿದ್ದು, ಹೋಟೆಲ್ ನ ರಿಸಪ್ಷನ್ ಜಾಗ ಸಂಪೂರ್ಣ ಸುಟ್ಟು ಕರಕಲಾಗಿದೆ. ಘಟನೆ ಸಂಬಂಧ ಹಲಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇಡೀ ಅಜಂತಾ ಹೋಟೆಲ್ ನಲ್ಲಿ ದಟ್ಟ ಹೊಗೆ ಆವರಿಸಿದೆ. ನಾಲ್ಕು ಬ್ಲಾಕ್ ನ ತಲಾ 24 ರೂಮ್ ಸೇರಿ 96 ರೂಮ್‍ಗಳನ್ನು ಹೊಟೆಲ್ ಹೊಂದಿದೆ. ಹೋಟೆಲ್ ಪಕ್ಕದಲ್ಲೇ ಪೆಟ್ರೋಲ್ ಬಂಕ್ ಕೂಡ ಇದ್ದು, ಭಾರೀ ಅನಾಹುತ ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಮೂರು ಮಳಿಗೆಗೆ ಹೊಗೆ ಹಬ್ಬಿದ್ದು, ವ್ಯಕ್ತಿ 2ನೇ ಮಹಡಿಯಿಂದ ಕಿಟಕಿ ಮೂಲಕ ಜಿಗಿದಿದ್ದಾರೆ.

    ಈ ಕುರಿತು ಡಿಸಿಪಿ ಶರಣಪ್ಪ ಮಾಹಿತಿ ನೀಡಿದ್ದು, ಹೋಟೆಲಿನ ಕೆಳಗಿನ ಮಹಡಿಯಲ್ಲಿಬೆಂಕಿ ಕಾಣಿಸಿಕೊಂಡಿದೆ. ಸುಮಾರು 10:30ಕ್ಕೆ ಹೋಟಲ್ ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಹೋಟೆಲ್‍ನಲ್ಲಿ 5 ಜನ ಇದ್ದರು. 5 ಜನರನ್ನೂ ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಐವರಲ್ಲಿ ಇಬ್ಬರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವ ಕಾರಣಕ್ಕೆ ಬೆಂಕಿ ತಗುಲಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಅಗ್ನಿಶಾಮಕ ಸಿಬ್ಬಂದಿ ಕಾರಣ ಪತ್ತೆಮಾಡಲಿದ್ದಾರೆ ಎಂದು ತಿಳಿಸಿದರು.

    ಹೋಟಲ್ ಕಿಟಿಕಿಯಿಂದ ಜಿಗಿದು ಪ್ರಾಣ ಉಳಿಸಿಕೊಂಡ ರಾಚಪ್ಪಜಿ ಮತ್ತು ಶೇಖರ್ ಹೇಳಿಕೆ ನೀಡಿದ್ದು, ರಾತ್ರಿ ಸುಮಾರು 10:15ಕ್ಕೆ ಹೋಟಲ್ ಗೆ ಬಂದೆವು. ಊಟ ಮಾಡಿ, ಟಿವಿ ನೋಡುತ್ತಿರಬೇಕಾದರೆ ನಮ್ಮ ಡ್ರೈವರ್ ಬಂದು ಬೆಂಕಿ ಬಿದ್ದಿದೆ ಎಂದು ಹೇಳಿದರು. ಹೊರ ಬರಲು ಕಾರಿಡಾರ್ ಗೆ ಬಂದ್ವಿ, ಅಷ್ಟೋತ್ತಿಗೆ ಎರಡನೇ ಮಹಡಿಯಲ್ಲಿ ದಟ್ಟ ಹೊಗೆ ತುಂಬಿಕೊಂಡಿತ್ತು. ಬೆಂಕಿ ಹೆಚ್ಚಾಗ್ತಿತ್ತು, ಕೊಡಲೇ ರೂಮ್ ಕಿಟಿಕಿ ಒಡೆದು ಅಲ್ಲಿಂದ ಜಿಗಿದು ಪ್ರಾಣ ಉಳಿಸಿಕೊಂಡೆವು ಎಂದು ಹೇಳಿದ್ದಾರೆ.

    ಒಟ್ಟು 96 ರೂಮ್ ಇರುವ ಹೋಟೆಲ್ ನಲ್ಲಿ ಬುಕ್ ಆಗಿದ್ದು ಕೇವಲ 1 ರೂಮ್ ಮಾತ್ರ. ಹೋಟೆಲ್ ಮಾಲೀಕರ ಕಡೆಯಿಂದ ರಾತ್ರಿ ಇಬ್ಬರು ಬಂದು ಉಳಿದಿದ್ದರು ಎನ್ನಲಾಗುತ್ತಿದೆ. ಉಳಿದಂತೆ 95 ರೂಮ್ ಗಳು ಖಾಲಿ ಇದ್ದವು. ಕೇವಲ ಕೆಲಸಗಾರರು ಮಾತ್ರ ಐವರಿದ್ದರು. ಹೀಗಾಗಿ 7 ಜನರ ರಕ್ಷಣೆ ಬೇಗನೇ ಆಗಿದೆ. ರೂಮ್ ಗಳು ಫುಲ್ ಆಗಿದ್ದರೆ ಮಾರಣಹೋಮವೇ ನಡೆಯುತ್ತಿತ್ತು.

    ಕಟ್ಟಡದಿಂದ ಜಿಗಿದು ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಕೂಡ ಇತ್ತು. ಅಲ್ಲದೇ ಹೋಟೆಲ್ ಪಕ್ಕದಲ್ಲೆ ಪೆಟ್ರೋಲ್ ಬಂಕ್ ಇದ್ದು, ಅಲ್ಲಿವರೆಗೆ ಬೆಂಕಿ ವ್ಯಾಪಿಸಿದ್ದರೂ ದೊಡ್ಡ ಅನಾಹುತ ನಡೆದುಹೋಗ್ತಿತ್ತು. ಸದ್ಯ ಘಟನೆ ನಡೆದ ಐದೇ ನಿಮಿಷಕ್ಕೆ ಅಗ್ನಿಶಾಮಕ ವಾಹನ ಆಗಮಿಸಿದೆ. ಹೀಗಾಗಿಯೇ ದೊಡ್ಡ ಅನಾಹುತ ತಪ್ಪಿದಂತಾಗಿದೆ.

    ವಿಗ್ರಹಕ್ಕೆ ಏನೂ ಆಗಿಲ್ಲ
    ಇಡೀ ಹೋಟೆಲ್ ಸುಟ್ಟು ಕರಕಲಾದರೂ ಆ ವಿಗ್ರಹಕ್ಕೆ ಮಾತ್ರ ಏನು ಆಗಿಲ್ಲ, ಅಜಂತಾ ಟ್ರಿನಿಟಿ ಹೋಟೆಲ್ ರಿಸೆಪ್ಷನ್ ಬಳಿ ಇದ್ದ ಗಣೇಶ ಕಲ್ಲಿನ ವಿಗ್ರಹಕ್ಕೆ ಯಾವುದೇ ಹಾನಿಯಾಗಿಲ್ಲ. ಹೋಟೆಲ್ ಸುಟ್ಟು, ಗೋಡೆ ಕುಸಿದು ಬೀಳುತ್ತಿದ್ದರೂ ವಿಗ್ರಹವಿದ್ದ ಜಾಗ ಮಾತ್ರ ಏನೂ ಆಗಿಲ್ಲ. ಗಣೇಶನ ಮೂರ್ತಿಗೂ ಯಾವುದೇ ಹಾನಿ ಆಗಿಲ್ಲ.

  • ಹೈಪ್ರೊಫೈಲ್ ಸೆಕ್ಸ್ ದಂಧೆ ಬಯಲು – ವಾಟ್ಸಪ್ ನಲ್ಲಿಯೇ ರೇಟ್ ಫೈನಲ್

    ಹೈಪ್ರೊಫೈಲ್ ಸೆಕ್ಸ್ ದಂಧೆ ಬಯಲು – ವಾಟ್ಸಪ್ ನಲ್ಲಿಯೇ ರೇಟ್ ಫೈನಲ್

    – 8 ಮಹಿಳೆಯರು ಸೇರಿದಂತೆ 16 ಜನ ಪೊಲೀಸರ ವಶಕ್ಕೆ
    – ಬಂದ ಹಣದಲ್ಲಿ ಹುಡುಗಿಯರಿಗೆ ಶೇ.30ರಷ್ಟು ಹಣ
    – ಹೋಟೆಲ್ ಹೆಸರಿನಲ್ಲಿ ವೇಶ್ಯಾವಾಟಿಕೆ

    ಪಾಟ್ನಾ: ಹೋಟೆಲ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ 16 ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಿಹಾರದ ರಾಜಧಾನಿ ಪಾಟ್ನಾದಲ್ಲಿಯ ಗರ್ದನಾಬಾಗಿ ಇಲಾಖೆಯ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಇದೊಂದು ಹೈ ಪ್ರೊಫೈಲ್ ದಂಧೆಯಾಗಿದ್ದು, ಈ ವ್ಯವಹಾರದಲ್ಲಿ ಭಾಗಿಯಾದವರ ಹೆಸರು ಬೆಳಕಿಗೆ ಬರಬೇಕಿದೆ.

    ಹೋಟೆಲ್ ನಲ್ಲಿ ಸಿಕ್ಕಿರುವ ಮಹಿಳೆಯರು ಕೋಲ್ಕತ್ತಾ ಮತ್ತು ಬನಾರಸ ಮೂಲದವರು ಎಂದು ತಿಳಿದು ಬಂದಿದೆ. ಎಸ್.ಪಿ. ಅಂಬರೀಶ್ ರಾಹುಲ್ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ. ಆದ್ರೆ ಸ್ಥಳೀಯ ಪೊಲೀಸರಿಗೆ ದಾಳಿಯ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ದಾಳಿ ವೇಳೆ ಪೊಲೀಸರು ಹಲವು ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ವಾಟ್ಸಪ್ ನಲ್ಲಿಯೇ ಡೀಲ್:
    ಲಾಕ್‍ಡೌನ್ ವೇಳೆಯಲ್ಲಿಯೂ ಇಲ್ಲಿ ಸೆಕ್ಸ್ ದಂಧೆ ನಡೆಯುತ್ತಿತ್ತು. ಇನ್ನು ಇಲ್ಲಿ ಬರುತ್ತಿದ್ದ ಮಹಿಳೆಯರು ವಿವಾಹಿತರಾಗಿದ್ದು, ಈ ವಿಷಯ ಅವರ ಕುಟುಂಬಸ್ಥರಿಗೂ ತಿಳಿದಿದೆ. ಎಲ್ಲ ವ್ಯವಹಾರಗಳು ವಾಟ್ಸಪ್ ಮೂಲಕವೇ ನಡೆಯುತ್ತಿತ್ತು. ಗ್ರಾಹಕರಿಗೆ ವಾಟ್ಸಪ್ ನಲ್ಲಿಯೇ ಫೋಟೋ ತೋರಿಸಿ ಬೆಲೆ ನಿಗದಿ ಮಾಡಿ ಹೋಟೆಲ್ ಗೆ ಕರೆ ತರಲಾಗುತ್ತಿತ್ತು. ಆರು ಸಾವಿರದಿಂದ 18 ಸಾವಿರ ರೂ.ವರೆಗೆ ಬೆಲೆ ಫಿಕ್ಸ್ ಮಾಡಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ನಮ್ಮ ಸೈನಿಕರ ಮೇಲೆ ದಾಳಿಯಾದ ಮರು ಕ್ಷಣವೇ ಪ್ರತಿದಾಳಿ – ಅಮೆರಿಕ ಅಧ್ಯಕ್ಷ ಬೈಡನ್ ಎಚ್ಚರಿಕೆ

    ಹೋಟೆಲ್ ಮಾಲೀಕ ಪಂಕಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹೋಟೆಲ್ ನಡೆಸುವದಾಗಿ ಹೇಳಿ ಪಂಕಜ್ ಕಟ್ಟಡವನ್ನು ಲೀಸ್ ಪಡೆದುಕೊಂಡು ಸೆಕ್ಸ್ ದಂಧೆ ನಡೆಸುತ್ತಿದ್ದನು. ಈ ದಂಧೆಗೆ ಬರುತ್ತಿದ್ದ ಮಹಿಳೆಯರಿಗೆ ಓರ್ವ ಗ್ರಾಹಕನಿಂದ ಬಂದ ಹಣದಿಂದ ಶೇ.30ರಷ್ಟು ನೀಡಲಾಗುತ್ತಿತ್ತು. ಬರೋ ಗ್ರಾಹಕರಿಗೆ ಹೋಟೆಲ್ ನಲ್ಲಿ ಮದ್ಯ, ಕಾಂಡೋಮ್, ಮಾತ್ರೆಗಳ ಸರಬರಾಜು ಮಾಡಲಾಗುತ್ತಿತ್ತು. ಇದನ್ನೂ ಓದಿ: ತಾವು ನಟಿಸಿದ ಸಿನಿಮಾವನ್ನೇ ನೋಡಿ ಗಳಗಳನೇ ಅತ್ತ ಕಿಯಾರಾ

  • ಬೆಂಗಳೂರಲ್ಲಿ ಆಸ್ಪತ್ರೆಗಳಾಗಿ ಬದಲಾಗ್ತಿವೆ ಹೋಟೆಲ್‍ಗಳು..!

    ಬೆಂಗಳೂರಲ್ಲಿ ಆಸ್ಪತ್ರೆಗಳಾಗಿ ಬದಲಾಗ್ತಿವೆ ಹೋಟೆಲ್‍ಗಳು..!

    ಬೆಂಗಳೂರು: ಕೊರೊನಾ ಹೊಡೆತಕ್ಕೆ ಹೋಟೆಲ್ ಉದ್ಯಮಗಳು ನಷ್ಟದಲ್ಲಿದ್ದು, ಈ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಹೋಟೆಲ್‍ಗಳು ಆಸ್ಪತ್ರೆಗಳಾಗಿ ಬದಲಾಗುತ್ತಿವೆ.

    ಬೆಂಗಳೂರಲ್ಲೇ ಸಾವಿರಕ್ಕೂ ಹೆಚ್ಚು ಹೋಟೆಲ್‍ಗಳು ಮಾರಾಟಕ್ಕೆ ಸಜ್ಜಾಗಿವೆ. 50ಕ್ಕೂ ಹೆಚ್ಚು ಹೋಟೆಲ್‍ಗಳು ಆಸ್ಪತ್ರೆಗಳಾಗಿ ಬದಲಾವಣೆಯಾಗಿವೆ. ಐಟಿ ಕಚೇರಿಗಳ ಬಳಿಯಿದ್ದ ಬಹುತೇಕ ಹೋಟೆಲ್‍ಗಳು ಸ್ಥಗಿತಗೊಂಡಿವೆ.

    ಬೆಂಗಳೂರಲ್ಲಿ ಕೊರೊನಾ ಹೊಡೆತಕ್ಕೆ ಸಿಲುಕಿ ಈಗಾಗಲೇ ಮೂರು ಹೋಟೆಲ್‍ಗಳು ಆಸ್ಪತ್ರೆಗಳಾಗಿ ಬದಲಾಗಿವೆ. ಶೇಷಾದ್ರಿಪುರಂ ಸರ್ಕಲ್‍ನಲ್ಲಿದ್ದ ಹೋಟೆಲ್ ಈಗ ಟ್ರಿನಿಟಿ ಆಸ್ಪತ್ರೆಯಾಗಿ ಬದಲಾಗಿದೆ. ಇನ್‍ಫ್ಯಾಂಟ್ರಿ ರಸ್ತೆಯಲ್ಲಿದ್ದ `ಮಿಂಟ್ ಮಸಾಲಾ’ ಹೋಟೆಲ್‍ಗೆ ಆಸ್ಪತ್ರೆಯ ರೂಪ ಕೊಡಲಾಗಿದೆ. ಇದನ್ನೂ ಓದಿ: ದೊಡ್ಮನೆ ಪ್ರಣಯ ಪಕ್ಷಿಗಳ ನಡುವೆ ಮುನಿಸು – ಡಿಯು ಜೊತೆ ಮಾತು ಬಿಟ್ಟ ಅರವಿಂದ್

    ಮಂತ್ರಿ ಮಾಲ್ ಬಳಿ ಇದ್ದ ಎಂಟಿಆರ್ ಹೋಟೆಲ್ ಪಕ್ಕದ ವಸತಿಗೃಹ ಆಸ್ಪತ್ರೆಯಾಗಿ ಬದಲಾಗಿವೆ. ಐಟಿ ಕಚೇರಿಗಳ ಬಳಿಯಿದ್ದ ಬಹುತೇಕ ಹೋಟೆಲ್‍ಗಳು ಸ್ಥಗಿತಗೊಂಡಿವೆ. ಐಟಿ ಕಂಪನಿಗಳಲ್ಲಿ ವರ್ಕ್ ಫ್ರಂ ಹೋಂ ಇರುವುದರಿಂದ ಗ್ರಾಹಕರ ಕೊರತೆ ಇದೆ. ವೈಟ್‍ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ, ಸರ್ಜಾಪುರ ಬಳಿಯ ಸಣ್ಣ ಹೋಟೆಲ್‍ಗಳು ಬಂದ್ ಆಗಿವೆ.

    ಇನ್‍ಫೋಸಿಸ್ ಪಕ್ಕದಲ್ಲೇ ಇದ್ದ 15-20 ಹೋಟೆಲ್‍ಗಳು ಕ್ಲೋಸ್ ಆಗಿದ್ದು, ವಿಪ್ರೋ ಕಂಪನಿ ಬಳಿಯಿದ್ದ ಸುಮಾರು 15 ಹೋಟೆಲ್‍ಗಳು ಬಂದ್ ಆಗಿವೆ. ಬಾಡಿಗೆ, ತೆರಿಗೆ, ಕಾರ್ಮಿಕರಿಗೆ ವೇತನ ಕಟ್ಟಲಾಗದೆ ನಷ್ಟದಲ್ಲಿರುವ 1 ಸಾವಿರ ಹೋಟೆಲ್‍ಗಳು ಮಾರಾಟಕ್ಕೆ ಸಜ್ಜಾಗಿವೆ.

  • ದರ್ಶನ್ ವಿಚಲಿತರಾಗಿದ್ದಾರೆ, ಮೊದಲು ನನ್ನ ಪ್ರಶ್ನೆಗಳಿಗೆ ಉತ್ತರ ಕೊಡಲಿ: ಇಂದ್ರಜಿತ್

    ದರ್ಶನ್ ವಿಚಲಿತರಾಗಿದ್ದಾರೆ, ಮೊದಲು ನನ್ನ ಪ್ರಶ್ನೆಗಳಿಗೆ ಉತ್ತರ ಕೊಡಲಿ: ಇಂದ್ರಜಿತ್

    – ಧರ್ಮಸ್ಥಳಕ್ಕೆ ಹೋಗಿ ಆಣೆ ಮಾಡಿ

    ಬೆಂಗಳೂರು: ನಟ ದರ್ಶನ್ ಮಾತನಾಡಿದ್ದನ್ನು ನೋಡಿದ್ದೇನೆ. ಅವರು ತುಂಬಾ ವಿಚಲಿತರಾಗಿದ್ದಾರೆ. ಮೊದಲು ನನ್ನ ಪ್ರಶ್ನೆಗಳಿಗೆ ಅವರು ಉತ್ತರ ಕೊಡಲಿ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋಟೆಲಿನಲ್ಲಿ ನೀವು ಬಡವ ಸಪ್ಲೇಯರ್ ಗೆ ಹೊಡೆದ್ರೋ ಇಲ್ಲವೋ..?, ಅಂದು ನೀವು ಯಾರ ಜೊತೆಗಿದ್ರಿ..?, 25 ಕೋಟಿ ಡೀಲ್ ವಿಚಾರ ಸಂಬಂಧ ನೀವು ಅರುಣಾ ದೇವಿಯನ್ನು ಯಾಕೆ ತೋಟಕ್ಕೆ ಕರೆದ್ರಿ..?. ಮೊದಲು ನನ್ನ ಈ ಪ್ರಶ್ನೆಗಳಿಗೆ ಉತ್ತರ ನೀಡಿ. ಅಲ್ಲದೆ ಬಡವನಿಗೆ ಹೊಡೆದಿಲ್ಲ ಅಂದ್ರೆ ಧರ್ಮಸ್ಥಳಕ್ಕೆ ಹೋಗಿ ಆಣೆ ಮಾಡಿ ಎಂದು ಚಾಲೆಂಜ್ ಹಾಕಿದ್ರು.

    ದರ್ಶನ್ ವಿಚಲಿತರಾಗಿದ್ದಾರೆ. ಅವರು ಈ ಸಂದರ್ಭದಲ್ಲಿ ವಿಚಲಿತರಾಗಬೇಕಾಗಿಲ್ಲ. ನನ್ನ ಪ್ರಶ್ನೆಗಳಿಗೆ ಉತ್ತರ ಕೊಟ್ಟರೆ ಸಾಕು. ಅವರು ಇಂದು ಬಳಸಿರುವ ಭಾಷೆ ಅವರ ಹಿನ್ನೆಲೆ ತೋರಿಸುತ್ತದೆ. ನಾನು ಅವರನ್ನು ಅನ್ ಎಜುಕೇಟೆಡ್ ಅಂತ ಹೇಳಿಲ್ಲ. ರಾಜ್ ಕುಮಾರ್ ನಡೆದು ಬಂದ ದಾರಿ, ಭಾಷೆ, ಸಿನಿಮಾ, ನಟನೆಯ ಬಗ್ಗೆ ಇರುವ ಕಾಳಜಿ ಇಡೀ ದೇಶಕ್ಕೆ ಗೊತ್ತಿದೆ ಎಂದರು. ಇದನ್ನೂ ಓದಿ: ನನ್ನ ಬಳಿಯಲ್ಲಿದ್ದ ಆಸ್ತಿ ದರ್ಶನ್ ಕೇಳಿದ್ದು ನಿಜ, ಕೊಡಲ್ಲ ಅಂದಿದ್ದೆ: ನಿರ್ಮಾಪಕ ಉಮಾಪತಿ

    ಡಿಸ್ಟರ್ಬ್ ಆಗಿದ್ರೆ ಟ್ರೀಟ್ಮೆಂಟ್ ತಗೋಳಿ ದರ್ಶನ್ ಅವರೇ. ಆಡಿಯೋ, ವೀಡಿಯೋ ಸಾಕ್ಷ್ಯಗಳನ್ನು ಪೊಲೀಸರ ಮುಂದೆ ತೋರಿಸುತ್ತೇವೆ. ಇವರ ಮುಂದಿಡುವ ಅವಶ್ಯಕತೆ ಇಲ್ಲ. ಮಹಿಳೆಗೆ ಬೆದರಿಕೆ ಹಾಗೂ ಸಪ್ಲೇಯರ್ ಗೆ ಹೊಡೆದಿದ್ದಾರೆ. ಇದರ ಬಗ್ಗೆ ತನಿಖೆ ಆಗಬೇಕು ಎಂದಾಗ ಇಷ್ಟೊಂದು ವಿಚಾರಗಳು ಹೊರ ಬಂದಿದೆ. ಇನ್ನೂ ಕೂಡ ಎಷ್ಟೊಂದು ವಿಚಾರಗಳು ಹೊರ ಬರುತ್ತವೆ ಎಂದು ದರ್ಶನ್ ಈಗಾಗಲೇ ವಿಚಲಿತರಾಗಿ ಮಾತನಾಡಿದ್ದಾರೆ ಎಂದು ತಿಳಿಸಿದರು.

    ಗಂಡಸಾಗಿರುವುದನ್ನು ಪ್ರೂವ್ ಮಾಡೋಕೆ ಹೇಳಿದ್ದಾರೆ. ಅವರ ಈ ಮಾತಿನಿಂದ ನನಗೆ ನಗು ಬರುತ್ತೆ. ಬಡವ ಸಪ್ಲೆಯರ್‍ಗೆ ಹೊಡೆದಿದ್ದೀರಾ ಎಂಬುದಕ್ಕೆ ಉತ್ತರ ಕೊಡಿ. ಅವರಿಗೆ ಹೊಡೆಯುವುದು ಎಷ್ಟು ಸರಿ..? ಅರುಣಾ ದೇವಿಯರನ್ನು ಮನೆಗೆ ಕರೆಸಿಕೊಂಡ್ರೋ..? ಇಲ್ಲವೋ..? ಹೇಳಿ. 25 ಕೋಟಿ ಡೀಲ್ ಹಿನ್ನೆಲೆ ಬಗ್ಗೆ ಹೇಳಿ ಎಂದು ಇಂದ್ರಜಿತ್ ಒತ್ತಾಯಿಸಿದರು. ಇದನ್ನೂ ಓದಿ: ಇಂದೇ ಸ್ಟಿಂಗ್ ಆಪರೇಷನ್ ಮಾಡಿದರೂ ನಾನು ಹೆದರಲ್ಲ: ದರ್ಶನ್

    ಧರ್ಮಪತ್ನಿ ವಿಚಾರದಲ್ಲಿ ಯಾಕೆ ಲಾಯರ್ ಕರೆಸಿಕೊಂಡ್ರಿ ಅನ್ನೋದು ಇಡೀ ಕರ್ನಾಟಕಕ್ಕೆ ಗೊತ್ತು. ಇದೆಲ್ಲ ಹೀರೋಯಿಸಂ, ಇದನ್ನು ಸಿನಿಮಾದಲ್ಲಿ ಇಟ್ಟುಕೊಳ್ಳಿ. ನನಗೆ ಸಂಸ್ಕಾರ, ಸಂಸ್ಕೃತಿ ಇದೆ. ಗಾಂಡುಗಿರಿ ಅಲ್ಲ ಗೂಂಡಾಗಿರಿ ಅಂದಿದ್ದು, ಮೊದಲು ಕನ್ನಡ ಸರಿಯಾಗಿ ಓದಲು ಹೇಳಿ. ಅನ್ ಎಜುಕೇಟೆಡ್ ಅಂತ ಎಲ್ಲಿ ಹೇಳಿದ್ದೀನಿ..? ಸೆಲೆಬ್ರಿಟಿ ಮೊದಲು ಮಾದರಿಯಾಗಲಿ. ಈ ರೀತಿ ಮಾಡುವುದಲ್ಲ. ಅಲ್ಲದೆ ತಲೆ ಸೀಳ್ತೀನಿ ಅನ್ನೋದು ಸರಿಯಲ್ಲ ಅನ್ನೋ ಅರ್ಥ ಬರುವಂತೆ ಹೇಳಿದ್ದೇನೆ ಎಂದರು.

    ತನಿಖಾ ತಂಡದ ಮುಂದೆ ಎಲ್ಲಾ ಸಾಕ್ಷ್ಯಗಳನ್ನು ಒದಗಿಸುತ್ತೇನೆ. ಡ್ರಗ್ಸ್ ಕೇಸ್ ವಿಚಾರದಲ್ಲಿ ನಿಮಗೆ ಏನಾದರೂ ತೊಂದರೆ ಆಗಿದೆಯಾ..? ಯಾಕೆ ಈ ವಿಚಾರ ಇಂದು ಮಾತನಾಡಿದ್ದೀರಿ. ಡ್ರಗ್ಸ್ ಕೇಸ್ ನಲ್ಲಿ ದೊಡ್ಡ ದೊಡ್ಡ ಕುಳಗಳು ಹೊರಬಂದವು. ಹೋಟೇಲಿನ ಸಿಬ್ಬಂದಿ, ಸೆಕ್ಯೂರಿಟಿ ಗಾರ್ಡ್ ಹೀಗೆ ಎಲ್ಲರೂ ಮಾತನಾಡಿದ್ದಾರೆ. ಯಾಕೆ ಪೊಲೀಸರು ಇನ್ನೂ ಸುಮೊಟೋ ಕೇಸ್ ದಾಖಲಿಸಿಲ್ಲ. ಯಾಕೆ ಬಡವರಿಗೆ ಅನ್ಯಾಯ ಆಗುತ್ತಿದೆ ಎಂದು ಇಂದ್ರಜಿತ್ ಪ್ರಶ್ನಿಸಿದರು. ಇದನ್ನೂ ಓದಿ: ಇಂದ್ರಜಿತ್ ಅಪ್ಪನಿಗೆ ಹುಟ್ಟಿದವರಾಗಿದ್ರೆ ದಾಖಲೆ ರಿಲೀಸ್ ಮಾಡಲಿ: ದರ್ಶನ್ ನೇರ ಸವಾಲ್

    ಸಿನಿಮಾ ಹಿನ್ನೆಲೆ ಏನೂ ಇಲ್ಲ ಎಂದು ದರ್ಶನ್ ಹೇಳಿರುವುದನ್ನು ಮಾಧ್ಯಮದವರು ಪ್ರಸ್ತಾಪಿಸಿದಾಗ, ಯುವ ಪ್ರತಿಭೆಗಳಿಗೆ ಸಿನಿಮಾ ಮಾಡಿದ್ದೇನೆ, ಯುವಕ, ಯುವಕರಿಗೆ ಅವಕಾಶ ಮಾಡಿಕೊಟ್ಟಿದ್ದೇನೆ. ಅನೇಕ ರಾಷ್ಟ್ರ, ರಾಜ್ಯ ಪ್ರಶಸ್ತಿಗಳು ನನಗೆ ಬಂದಿವೆ. ಸಂಗೊಳ್ಳಿ ರಾಯಣ್ಣ ಸಿನಿಮಾದ ನಿರ್ಮಾಪಕರು ಸಾಮಾನ್ಯ ಜನರ ಹಣ ತೆಗೆದುಕೊಂಡು ಹೋಗಿದ್ದಕ್ಕೆ ಇಂದು ಜೈಲಿಗೆ ಹೋಗಿದ್ದಾರೆ. ಇದರ ಬಗ್ಗೆ ಈವಾಗ ಮಾತನಾಡುವುದು ಬೇಡ. ಇಲ್ಲಿ ಸಿನಿಮಾದ ವಿಚಾರವಲ್ಲ ಎಂದರು.

    ನಾನೊಬ್ಬ ಪತ್ರಕರ್ತ, ನನಗೆ ಜವಾಬ್ದಾರಿ ಇದೆ. ಹೀಗಾಗಿ ಇಲ್ಲಿ ನಾನು ಜಾಸ್ತಿ ಮಾತಾಡಲ್ಲ. ಎಲ್ಲವನ್ನೂ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಲು ನಾನು ರೆಡಿಯಾಗಿದ್ದೇನೆ ಎಂದು ಇಂದ್ರಜಿತ್ ಹೇಳಿದರು.  ಇದನ್ನೂ ಓದಿ: ಯಾವುದೇ ಕಾರಣಕ್ಕೂ ನಮಗೂ, ದೊಡ್ಮನೆಗೂ ಹೋಲಿಕೆ ಮಾಡ್ಬೇಡಿ: ಚಾಲೆಂಜಿಂಗ್ ಸ್ಟಾರ್ ಎಚ್ಚರಿಕೆ

  • ಕರ್ನಾಟಕದಲ್ಲಿ ಪಾಳೇಗಾರಿಕೆ ನಡೆಯಲ್ಲ: ದರ್ಶನ್ ವಿರುದ್ಧ ಇಂದ್ರಜಿತ್ ಗರಂ

    ಕರ್ನಾಟಕದಲ್ಲಿ ಪಾಳೇಗಾರಿಕೆ ನಡೆಯಲ್ಲ: ದರ್ಶನ್ ವಿರುದ್ಧ ಇಂದ್ರಜಿತ್ ಗರಂ

    – ಬಹಳಷ್ಟು ಜನರ ಮೇಲೆ ದರ್ಶನ್ ಹಲ್ಲೆ ಮಾಡಿದ್ದಾರೆ
    – ಸೆಲೆಬ್ರಿಟಿಯಾಗಿ ಎಷ್ಟುಂತ ತಪ್ಪು ಮಾಡ್ತೀರಿ..?
    – ಸಿಸಿಟಿವಿ ದೃಶ್ಯ ಡಿಲೀಟ್ ಮಾಡಿದ್ದು ಯಾಕೆ..?

    ಬೆಂಗಳೂರು: ಕರ್ನಾಟಕದಲ್ಲಿ ಪಾಳೇಗಾರಿಕೆ ನಡೆಯಲ್ಲ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಕಿಡಿಕಾರಿದ್ದಾರೆ.

    ದರ್ಶನ್ ವೇಟರ್ ಮೇಲೆ ಹಲ್ಲೆ ಮಾಡಿರುವ ಆರೋಪ ಸಂಬಂಧ ಮತ್ತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ವೈಯಕ್ತಿಕವಾಗಿ ಯಾರ ಮೇಲೂ ದ್ವೇಷ ಇಲ್ಲ. ಆದ್ರೆ ತಪ್ಪನ್ನು ತಪ್ಪು ಅಂತ ಒಪ್ಪಿಕೊಳ್ಳಬೇಕು. ಎಷ್ಟು ಅಂತ ಮತ್ತೆ ಮತ್ತೆ ತಪ್ಪುಗಳನ್ನು ಮಾಡುತ್ತೀರಾ..? ಓರ್ವ ಸೆಲೆಬ್ರಿಟಿಯಾಗಿದ್ದುಕೊಂಡು ನಿರ್ದೇಶಕ, ನಿರ್ಮಾಪಕ, ವಾಚ್ ಮ್ಯಾನ್ ಗೆ ಅಥವಾ ಸಾಮಾನ್ಯ ನಾಗರಿಕನಿಗೆ ಹೊಡೆಯುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

    ಜುಲೈ 3ರಂದು ಗೋಪಾಲ್ ರಾಜ್ ಅರಸು(ಪಪ್ಪು) ಅವರಿಗೆ ಸೋಶಿಯಲ್ ನಲ್ಲಿ ಹೊಡೆದಿದ್ದಾರೆ. ನಿಮ್ಮ ತೋಟದಲ್ಲಿದ್ದ ವಾಚ್ ಮ್ಯಾನ್ ಗೂ ಒದೆ ಬಿದ್ದಿದೆ. ಅವನು ಕೆಲಸನೇ ಬಿಟ್ಟು ಹೋಗಿದ್ದಾನೆ. ಏನಿದು ಇಷ್ಟೊಂದು ಹೊಡೆಯುವುದು, ಇದೇನು ಪಾಳೇಗಾರಿಕೆನಾ..? ಕರ್ನಾಟಕದಲ್ಲಿ ಪಾಳೇಗಾರಿಕೆ ನಡೆಯಲ್ಲ ಎಂದು ದರ್ಶನ್ ವಿರುದ್ಧ ಇಂದ್ರಜಿತ್ ಕಿಡಿಕಾರಿದರು.

    ಅರುಣಾ ಕುಮಾರಿ ವಿಚಾರ, ಸಂದೇಶ್ ನಾಗರಾಜ್ ಹೋಟೆಲ್ ನಲ್ಲಿ ಜಗಳದ ಬಗ್ಗೆ ಮಾತಾಡಿದ್ದೆ. ಆ ಬಳಿಕ ದರ್ಶನ್ ಅವರು, ಹೌದು ಹೊಡೆದೆ. ಕೋಪ ಬಂತು ಹೊಡೆದಿದ್ದು ನಿಜ ಅಂದ್ರು. ಈ ಘಟನೆಗೆ ನಾನು ಬದ್ಧ, ಅದಕ್ಕೆ ಬೇಕಾದ ಎಲ್ಲಾ ದಾಖಲೆಗಳು ಕೊಡ್ತೀನಿ. ಸದ್ಯ ಆ ಹುಡುಗ ಕೆಲಸ ಕಳೆದುಕೊಂಡಿದ್ದಾನೆ. ಬರೇ ಇದೊಂದೆ ಅಲ್ಲ, ಇಂತಹ ಪ್ರಕರಣಗಳು ತುಂಬಾ ಇದ್ದಾವೆ ಎಂದು ಹೇಳಿದರು. ಇದನ್ನೂ ಓದಿ: ‘ಏನಯ್ಯಾ ದರ್ಶನ್‍ಗೆ ತಲೆ ಇಲ್ವೇನಯ್ಯಾ, ಹೋಗಿ ಹೋಗಿ ನಾಯಿಗೆ ಕಚ್ಚಿದ್ದಾನೆ’

    ನಾನು ಒಂಟಿ ಸಲಗ, ನಾನು ಮಾತಾಡ್ತೀನಿ. ನಂಗೆ ಕೆಲ ಮಾಹಿತಿಗಳು ಬರುತ್ತವೆ. ಇನ್ನೂ ಕೆಲವು ವಿಚಾರ ತಿಳಿದ್ರೆ ನೀವು ಶಾಕ್ ಆಗ್ತೀರಿ. ಘಟನೆ ನಡೆದ ಸಮಯ, ಸ್ಥಳ ಎಲ್ಲವನ್ನೂ ಹೇಳಿದ್ದೀನಿ. ಪೊಲೀಸರು ಏನ್ ಮಾಡ್ತಾರೋ ನೋಡೋಣ. ನಾನೊಬ್ಬ ಪತ್ರಕರ್ತ, ನಾನು ಇನ್ವೆಷ್ಟಿಗೇಷನ್ ಮಾಡ್ತೀನಿ. ಹರ್ಷ, ಪಾಪಣ್ಣ ಮೆಲಂಟಾ, ದರ್ಶನ್, ಇಬ್ಬರು ಹುಡುಗಿಯರು, ರಾಕೇಶ್, ಪವಿತ್ರ ಗೌಡ ಕೂಡ ಇದ್ದರು ಎಂದು ಇಂದ್ರಜಿತ್ ಮತ್ತೆ ಹೇಳಿದರು. ಇದನ್ನೂ ಓದಿ: ಸಣ್ಣ ಗಲಾಟೆ ನಡೆದಿದ್ದು ನಿಜ, ಆದ್ರೆ ದರ್ಶನ್ ಹೊಡೆದಿಲ್ಲ: ಸಂದೇಶ್ ನಾಗರಾಜ್ ಪುತ್ರ

    ಜೂನ್ 24 ಮತ್ತು 25 ರಂದು ಲಾಕ್ ಡೌನ್ ಇತ್ತು. ಈ ಸಮಯದಲ್ಲಿ ಘಟನೆ ನಡೆದಿದೆ. ಬಡವರಿಗೆ ಒಂದು ನ್ಯಾಯ, ಸೆಲೆಬ್ರಿಟಿಗೆ ಒಂದು ನ್ಯಾಯನಾ..? ಇನ್ನೂ ತುಂಬಾ ವಿಚಾರಗಳಿವೆ ಅದರ ಜೊತೆಗೆ ಮತ್ತೆ ಬರುತ್ತೇನೆ. ಫೋಟೋ, ವೀಡಿಯೋಗಳು ಕೂಡ ನನ್ನ ಬಳಿ ಇವೆ. ಪೊಲೀಸರು ಕೇಳಿದ್ರೆ ಕೊಡ್ತೀನಿ. ಆಗಾಗ ಈ ರೀತಿಯ ಘಟನೆಗಳು ನಡೆದು ಅಲ್ಲಲ್ಲೆ ಸೆಟ್ಲ್ ಮೆಂಟ್ ಗಳು ಆಗುತ್ತಿವೆ ಎಂದು ಮತ್ತೆ ಇಂದ್ರಜಿತ್ ಆರೋಪಿಸಿದರು.

    ಡ್ರಗ್ಸ್ ವಿಚಾರದಲ್ಲಿ ಕೆಲ ಸೆಲೆಬ್ರಿಟಿಗಳು ತಪ್ಪಿಸಿಕೊಂಡರು. ಹೋಟೆಲ್ ನಲ್ಲಿ ಏಟು ತಿಂದ ಗಂಗಾಧರ್‍ನ ಕೆಲಸದಿಂದ ಬಿಡಿಸಿದ್ರು. ಈಗ ದರ್ಶನ್ ಸಣ್ಣ ಗಲಾಟೆ ಅಂತ ಒಪ್ಪಿಕೊಂಡಿದ್ದಾರೆ. ಹಿಂದುಳಿದವರಿಗೆ ಅನ್ಯಾಯ ಆಗ್ತಿದೆ. ಇಂದಿನ ಕಾಲದಲ್ಲೂ ಅದೇ ಅನ್ಯಾಯ ಆಗ್ತಿದೆ. ಅದಕ್ಕೆ ದಲಿತ ಅಂತಾ ಹೇಳಿದೆ. ಬಡವರಿಗೆ, ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ನೀವೆಲ್ಲಾ ಸೇರಿದ್ದೀರಿ, ನಿಮ್ಮ ಜಾತಿಯನ್ನು ನಾವು ಕೇಳ್ತೀವಾ – ಇಂದ್ರಜಿತ್‍ಗೆ ದರ್ಶನ್ ತಿರುಗೇಟು

    ಸಿಡಿ ಲೇಡಿ, ಅರುಣಾ ಕುಮಾರಿ ಇಬ್ಬರ ವಿಚಾರನೂ ನೋಡಿ, ಇಬ್ಬರಿಗೂ ಅನ್ಯಾಯ ಆಗ್ತಿದೆ. ನನ್ನ ಪ್ರಕಾರ ದರ್ಶನ್ ಹಲ್ಲೆ ಮಾಡಿ ಮೂರು ಗಂಟೆ ರಾತ್ರಿ ಸಂಧಾನ ಮಾಡಿದ್ರು. ಸಂದೇಶ್ ನಾಗರಾಜು, ಮಧ್ಯ ಪ್ರವೇಶ ಮಾಡಿ ದರ್ಶನ್ ರನ್ನು ಹೊರ ದಬ್ಬಿದ್ರು. ಇಲ್ಲಿವರೆಗೂ ಅವರಿಬ್ಬರು ಮಾತಾಡ್ತಿಲ್ಲ. ಹೊಟೆಲ್ ನ ಇಡೀ ಸಿಬ್ಬಂದಿ, ದರ್ಶನ್ ವಿರುದ್ಧ ಗಲಾಟೆ ಮಾಡಿದರು ಎಂದರು.

    ಇದು ಮೊದಲನೇಯದಲ್ಲ, ಚಿತ್ರ ರಂಗದ ಸಾಕಷ್ಟು ಜನರಿಗೆ ಈ ಅನುಭವ ಆಗಿದೆ. ಬಹಳಷ್ಟು ಜನರ ಮೇಲೆ ದರ್ಶನ್ ಹಲ್ಲೆ ಮಾಡಿದ್ದಾರೆ. ಹೋಟೆಲ್ ನ ಹಾರ್ಡ್ ಡಿಸ್ಕ್ ತೆಗೆದ್ರೆ ಎಲ್ಲವು ಹೊರಬರುತ್ತೆ. ಹಲ್ಲೆಗೊಳಾದ ಯುವಕ ಗಂಗಾಧರ್ ಕನ್ನಡಿಗರು. ಸಮಯ ನೋಡ್ಕೊಂಡು, ಖಂಡಿತ ನಾನು ಎಲ್ಲವನ್ನೂ ಬಹಿರಂಗ ಪಡಿಸ್ತೀನಿ. ನಮ್ಮದೇ ಆದ ತನಿಖಾ ತಂಡ ಇದೆ, ಆ ಮೂಲಕ ನಮಗೆ ಬರುತ್ತೆ ಎಂದು ಹೇಳಿದರು.

    ಯಾಕೆ ಹೋಟೆಲ್ ನ ಸಿಸಿಟಿವಿ ಡಿಲೀಟ್ ಮಾಡ್ತಿರಿ. 2 ತಿಂಗಳು, ಕಾಲ ಡಿಲೀಟ್ ಮಾಡಬಾರದು ಅಂತಾ ನಿಯಮ ಇದೆ. ಪತ್ರಕರ್ತನಾಗಿ ನಾನು ಜನರಿಗೆ ಮಾಹಿತಿ ನೀಡಿದ್ದೇನೆ. ಮುಂದಿನದ್ದು ಪೊಲೀಸರ ಕೆಲಸ. ನಾವು ಹೋಗಿ ತನಿಖೆ ಮಾಡೋಕೆ ಆಗಲ್ಲ. ಪೊಲೀಸರು ತನಿಖೆ ಆಗಲಿ. ಮುಂದೆ ಯಾವಾಗ ಏನು ಕೊಡಬೇಕು ಅದು ತರ್ತಿನಿ. ಮೈಸೂರು ಪೊಲೀಸರು ಏನ್ ಮಾಡ್ತಾರೆ ನೋಡೋಣ ಎಂದು ತಿಳಿಸಿದ್ದಾರೆ.