Tag: Hotel

  • ಬೆಂಗಳೂರಿನಲ್ಲಿ ಮತ್ತೆ ಹೋಟೆಲ್ ದರ ಹೆಚ್ಚಳ ಸಾಧ್ಯತೆ

    ಬೆಂಗಳೂರಿನಲ್ಲಿ ಮತ್ತೆ ಹೋಟೆಲ್ ದರ ಹೆಚ್ಚಳ ಸಾಧ್ಯತೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಹೋಟೆಲ್ ದರ ಹೆಚ್ಚಳವಾಗುವ ಸಾಧ್ಯತೆಯಿದೆ.

    ಅಡುಗೆ ಎಣ್ಣೆ ಹಾಗೂ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದಾಗಿ ಕಂಗೆಟ್ಟ ಹೋಟೆಲ್ ಮಾಲೀಕರು ದರ ಏರಿಕೆಗೆ ನಿರ್ಧಾರ ಕೈಗೊಂಡಿದ್ದಾರೆ. ಇದನ್ನೂ ಓದಿ: ಹೆಬ್ಬಾಳದಲ್ಲಿ ಸರಣಿ ಅಪಘಾತ – ಬಿಬಿಎಂಪಿ ಕಸದ ಲಾರಿಗೆ ಬಾಲಕಿ ಬಲಿ

    ಹೋಟೆಲ್ ಮಾಲೀಕರು ಎರಡೂವರೆ ತಿಂಗಳ ಹಿಂದೆ ದರ ಏರಿಕೆ ಮಾಡಿದ್ದರು. ಈಗ ಕಮರ್ಷಿಯಲ್ ಗ್ಯಾಸ್ ಬೆಲೆ, ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆ ಈಗ ಮತ್ತೊಮ್ಮೆ ದರ ಏರಿಕೆಗೆ ಚಿಂತನೆ ನಡೆಸಿದ್ದಾರೆ.

    ಸೋಮವಾರ 100ಕ್ಕೂ ಹೆಚ್ಚು ಹೊಟೇಲ್ ಮಾಲೀಕರು ಸಭೆ ಸೇರಲಿದ್ದಾರೆ. ಈ ವೇಳೆ ಬೆಂಗಳೂರು ಮತ್ತು ರಾಜ್ಯಾದ್ಯಂತ ದರ ಏರಿಕೆ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಯಿದೆ. ಸೋಮವಾರವೇ ಹೊಸ ದರ ಪಟ್ಟಿ ಬಿಡುಗಡೆಗೊಳಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ಪರೀಕ್ಷೆಯ ಒತ್ತಡ ನಿಭಾಯಿಸುವುದು ಹೇಗೆ- ವಿದ್ಯಾರ್ಥಿಗಳಿಗೆ ಮೋದಿ ಟಿಪ್ಸ್‌

    ಬೆಲೆ ಏರಿಕೆಗೆ ಕಾರಣಗಳೇನು?
    * ಕಮರ್ಷಿಯಲ್ ಗ್ಯಾಸ್ ಬೆಲೆ ನಿರಂತರ ಏರಿಕೆ.
    * ಇಂದು ಕಮರ್ಷಿಯಲ್ ಗ್ಯಾಸ್ ಬೆಲೆ 260 ರೂ ಏರಿಕೆಯಾಗಿದೆ
    * ಅಡುಗೆ ಎಣ್ಣೆ ಬೆಲೆ ಏರಿಕೆಯಾಗಿರುವುದು.
    * ಅಗತ್ಯ ವಸ್ತುಗಳ ಬೆಲೆ ಏರಿಕೆ.
    * ವಿದ್ಯುತ್ ದರ ಏರಿಕೆ.
    * ಮುಂದಿನ ದಿನಗಳಲ್ಲಿ ಸರ್ಕಾರ ಹಾಲಿನ ದರ ಏರಿ ಮಾಡುವ ಸಾಧ್ಯತೆ

  • 5 ರೂಪಾಯಿಗೆ ನಡೆದ ಜಗಳಕ್ಕೆ 55 ಸಾವಿರ ಕಳೆದುಕೊಂಡ  ಹೋಟೆಲ್ ಮಾಲೀಕ

    5 ರೂಪಾಯಿಗೆ ನಡೆದ ಜಗಳಕ್ಕೆ 55 ಸಾವಿರ ಕಳೆದುಕೊಂಡ ಹೋಟೆಲ್ ಮಾಲೀಕ

    ಹೈದರಾಬಾದ್: ಹೋಟೆಲ್ ಮಾಲೀಕನೊಬ್ಬ 5 ರೂಪಾಯಿಗೆ ಗ್ರಾಹಕನ ಜೊತೆಗೆ ಗಲಾಟೆ ಮಾಡಿ 55 ಸಾವಿರ ರೂಪಾಯಿ ಕಳೆದುಕೊಂಡಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಗ್ರಾಹಕ ನ್ಯಾಯಾಲಯ, ಹೈದರಾಬಾದ್‍ನ ತಿಲಕ್ ನಗರದ ಹೋಟೆಲ್‍ಗೆ ದಂಡ ವಿಧಿಸಿದೆ.

    ಒಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿರುವ ವಂಶಿ ತನ್ನ ಸ್ನೇಹಿತರ ಜೊತೆಗೆ ಬಿರಿಯಾನಿ ಹೌಸ್‍ವೊಂದಕ್ಕೆ ಹೋಗಿದ್ದರು. ಊಟ ಮಾಡಿದ ಬಳಿಕ ಜಿಎಸ್‍ಟಿ ಎಲ್ಲಾ ಸೇರಿ 1,127 ರೂಪಾಯಿ ಬಿಲ್ ಆಗಿದೆ. ನೀರಿನ ಬಾಟಲ್‍ಗೆ ಹೆಚ್ಚುವರಿಯಾಗಿ 5 ರೂಪಾಯಿ ಬಿಲ್ ಮಾಡಿದ ವಿಚಾರ ತಿಳಿದ ವಂಶಿ ಹೋಟೆಲ್ ಮಾಲೀಕರಿಗೆ ಪ್ರಶ್ನೆ ಮಾಡಿದ್ದಾಳೆ. ಆಗ ದೊಡ್ಡ ಜಗಳವೇ ಆಗಿದೆ.

    MONEY

    ನಂತರ ವಂಶಿ, ಹೋಟೆಲ್ ಮ್ಯಾನೇಜ್‍ಮೆಂಟ್ ವಿರುದ್ಧ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ನೀರಿನ ಬಾಟಲ್‍ಗೆ ಹೆಚ್ಚುವರಿಯಾಗಿ 5.50 ರೂಪಾಯಿ ವಿಧಿಸಿದ್ದಲ್ಲದೆ, ಎಲ್ಲರೆದುರು ಅವಮಾನಿಸಿದ್ದಾರೆ ಎಂದು ದೂರು ನೀಡಿದ್ದಾರೆ. ಇದನ್ನೂ ಓದಿ: ಆಂಬ್ಯುಲೆನ್ಸ್​ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ!

    ಇದಾದ ಬಳಿಕ ಜಿಲ್ಲಾ ಗ್ರಾಹಕ ಆಯೋಗದ 2ನೇ ಪೀಠದ ಮುಖ್ಯಸ್ಥ ವಕ್ಕಂತಿ ನರಸಿಂಹ ಅವರು ಈ ಪ್ರಕರಣದ ವಿಚಾರಣೆ ನಡೆಸಿದರು. ಹೋಟೆಲ್ ಸಿಬ್ಬಂದಿ ಅಶ್ಲೀಲ ಪದ ಬಳಸಿ ನಿಂದಿಸಿ, ಗ್ರಾಹಕರಿಗೆ ಸೇವೆ ನೀಡುವಲ್ಲಿ ವಿಫಲವಾಗಿರುವುದು ಮತ್ತು ಹೆಚ್ಚುವರಿ 5.50 ರೂಪಾಯಿ ಬಿಲ್ ಮಾಡಿರುವುದು ಸಾಬೀತಾಗಿದೆ. ಇದನ್ನೂ ಓದಿ: ಬಿಎಸ್ ಯಡಿಯೂರಪ್ಪಗೆ ಗುರುಬಸವಶ್ರೀ ಪ್ರಶಸ್ತಿ ಪ್ರದಾನ

    ಹೆಚ್ಚುವರಿ 5.50 ರೂಪಾಯಿಗೆ ಶೇ.10 ರಷ್ಟು ಬಡ್ಡಿ ಸೇರಿಸಿ 5000 ರೂಪಾಯಿಯನ್ನು ಗ್ರಾಹಕ ವಂಶಿಗೆ ನೀಡಬೇಕು. ಜಿಲ್ಲಾ ಗ್ರಾಹಕ ರಕ್ಷಣಾ ಮಂಡಳಿಯ ಕಲ್ಯಾಣಕ್ಕಾಗಿ ಜಿಲ್ಲಾಧಿಕಾರಿ ಕಚೇರಿಗೆ 50 ಸಾವಿರ ರೂಪಾಯಿ ದಂಡವನ್ನು 45 ದಿನದ ಒಳಗೆ ಕಟ್ಟಬೇಕು. ಮತ್ತೊಮ್ಮೆ ಈ ತಪ್ಪು ಮಾಡದಂತೆ ನ್ಯಾಯಾಲಯ ಆದೇಶಿದೆ.

  • ಮಂಡ್ಯದಲ್ಲಿ ಸ್ಟಾರ್ ಗ್ರೂಪ್ಸ್ ಮಾಲೀಕರಿಗೆ ಬೆಳ್ಳಂಬೆಳಗ್ಗೆ ಐಟಿ ಶಾಕ್

    ಮಂಡ್ಯದಲ್ಲಿ ಸ್ಟಾರ್ ಗ್ರೂಪ್ಸ್ ಮಾಲೀಕರಿಗೆ ಬೆಳ್ಳಂಬೆಳಗ್ಗೆ ಐಟಿ ಶಾಕ್

    ಮಂಡ್ಯ: ಸಕ್ಕರೆ ನಾಡಿನಲ್ಲಿ ಬೆಳಗಿನ ಜಾವ 4 ಗಂಟೆಗೆ ಸ್ಟಾರ್ ಗ್ರೂಪ್ಸ್ ಮಾಲೀಕ ಮತ್ತು ಅವರ ಸಹೋದರರ ಮನೆ ಹಾಗೂ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಉದ್ಯಮಿ ಅಮಿರುಲ್ ಮುರ್ತುಜಾ ಸೇರಿದಂತೆ ಅಮ್ಜಾ, ಶಹಬಾಜ್, ಶಿರೋಜ್ ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಮಿರುಲ್ ಅವರ ಸಹೋದರರು ನಾಗಮಂಗಲದ ಪ್ರಖ್ಯಾತ ಉದ್ಯಮಿಗಳಾಗಿದ್ದಾರೆ. ಸ್ಟಾರ್ ಗ್ರೂಪ್ಸ್ ಹೆಸರಿನಲ್ಲಿ ಪೌಲ್ಟ್ರಿ ಫಾರ್‍ಂ, ಹೋಟೆಲ್, ಪೆಟ್ರೋಲ್ ಉದ್ಯಮ ಸೇರಿದಂತೆ ಹಲವಾರು ಉದ್ಯಮ ನಡೆಸುತ್ತಿದ್ದಾರೆ. ಇದನ್ನೂ ಓದಿ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿದ ತೃತೀಯಲಿಂಗಿ

    ನಸುಕಿನ 4 ಗಂಟೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ 10ಕ್ಕೂ ಹೆಚ್ಚು ಕಾರುಗಳಲ್ಲಿ ಬಂದ ಅಧಿಕಾರಿಗಳಿಂದ ದಾಳಿ ನಡೆಸಲಾಗಿದೆ. ಅಧಿಕಾರಿಗಳು 10ಕ್ಕೂ ಹೆಚ್ಚು ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ, ಆಸ್ತಿ-ಪಾಸ್ತಿ, ಕಡತ, ಹಣ, ಚಿನ್ನಾಭರಣಗಳನ್ನು ಪರಿಶೀಲನೆ ಮಾಡಿದ್ದಾರೆ. ಇದನ್ನೂ ಓದಿ: ಮೆಲಾನಿಯಾ ಟ್ರಂಪ್, ಕೇಜ್ರಿವಾಲ್ ಶಾಲೆಯನ್ನು ಮಾತ್ರ ನೋಡಬೇಕೆಂದಿದ್ದರು: ದೆಹಲಿ ಸಿಎಂ

  • ಹಿಜಬ್ ಹೋರಾಟಗಾರ್ತಿ ಅಣ್ಣನ ಮೇಲೆ ಹಲ್ಲೆ

    ಹಿಜಬ್ ಹೋರಾಟಗಾರ್ತಿ ಅಣ್ಣನ ಮೇಲೆ ಹಲ್ಲೆ

    ಉಡುಪಿ: ಹಿಜಬ್ ಹಕ್ಕಿಗಾಗಿ ಹೈಕೋರ್ಟ್ ಮೆಟ್ಟಿಲೇರಿರುವ ವಿದ್ಯಾರ್ಥಿನಿಯೊಬ್ಬಳ ತಂದೆಯ ಹೋಟೆಲಿಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ, ಸಹೋದರನಿಗೆ ಹಲ್ಲೆಗೈದಿರುವ ಘಟನೆ ಉಡುಪಿಯ ಮಲ್ಪೆಯಲ್ಲಿ ನಡೆದಿದೆ.

    ಸೈಪ್ ಹಲ್ಲೆಗೊಳಗಾದ ಯುವಕ. ಮಲ್ಪೆಯಲ್ಲಿರುವ ಹೈದರ್ ಅಲಿ ಎಂಬವರ ಬಿಸ್ಮಿಲ್ಲಾ ಹೋಟೆಲ್‍ಗೆ ಆಗಮಿಸಿದ 70 -100 ಮಂದಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಬಳಿಕ ದುಷ್ಕರ್ಮಿಗಳು ಹೊಟೇಲ್‍ನಲ್ಲಿದ್ದ ಅವರ ಮಗ ಸೈಪ್(20) ಮೇಲೂ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಹೋಟೆಲಿನ ಗಾಜುಗಳು ಪುಡಿಯಾಗಿದೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಹಿಜಬ್‍ಧಾರಿಗೆ ಬ್ಯಾಂಕ್ ವಹಿವಾಟ ನಡೆಸದಂತೆ ನಿರ್ಬಂಧ

    ಹಲ್ಲೆಗೆ ಒಳಗಾಗಿರುವ ಸೈಫ್‍ನನ್ನು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದೆ. ಸ್ಥಳಕ್ಕೆ ಮಲ್ಪೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಕೇಸು ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಹಿಜಬ್ ದೂರುದಾರೆ ಹಜ್ರಾ ಶಿಫಾ ಟ್ವೀಟ್ ಮಾಡಿ, ಹಿಜಬ್‍ನ್ನು ಮುಂದುವರಿಸಿದ್ದಕ್ಕಾಗಿ ನನ್ನ ಅಣ್ಣನ ಮೇಲೆ ಹಾಗೂ ಹೊಟೇಲ್ ಮೇಲೆ ದಾಳಿಯಾಗಿದೆ. ನಮ್ಮ ಹಕ್ಕುಗಳಿಗಾಗಿ ಹೋರಾಡುವುದು ತಪ್ಪೇ ಎಂದು ಪ್ರಶ್ನಿಸಿದ ಅವರು, ಸಂಘಪರಿವಾರದ ಯುವಕರಿಂದ ಹಲ್ಲೆ ಎಂಬ ಆರೋಪಿಸಿದ್ದಾರೆ. ಇದನ್ನೂ ಓದಿ: ಕೊಲೆಯಾದ ಹರ್ಷನನ್ನು ಭಯೋತ್ಪಾದಕ ಎಂದ ವಿದೇಶಿ ಪತ್ರಕರ್ತ- ಡಿಜಿಪಿ ಸ್ಪಷ್ಟನೆ

  • ಹೋಟೆಲ್‍ನಲ್ಲಿ ತಿಂಡಿಗೆ ಆರ್ಡರ್ ಮಾಡಿ ತಿಂಡಿ ಬರುವಷ್ಟರಲ್ಲಿ ವಿದ್ಯಾರ್ಥಿ ಸಾವು!

    ಹೋಟೆಲ್‍ನಲ್ಲಿ ತಿಂಡಿಗೆ ಆರ್ಡರ್ ಮಾಡಿ ತಿಂಡಿ ಬರುವಷ್ಟರಲ್ಲಿ ವಿದ್ಯಾರ್ಥಿ ಸಾವು!

    ಮೈಸೂರು: ಹೋಟೆಲ್‍ಗೆ ತಿಂಡಿ ತಿನ್ನಲು ಬಂದ ವಿದ್ಯಾರ್ಥಿ ಹೃದಯಾಘಾತದಿಂದ ಕೂತಲ್ಲೇ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಹುಣಸೂರು ತಾಲೂಕಿನ ನಂಜಾಪುರ ಗ್ರಾಮದ ನಟರಾಜ್ ಎಂಬುವರ ಪುತ್ರ ನಿತಿನ್(25) ಸಾವನ್ನಪ್ಪಿದ ವಿದ್ಯಾರ್ಥಿ. ಈತ ಮೈಸೂರಿನ ವಿದ್ಯಾವರ್ಧಕ ಕಾಲೇಜಿನ ನಾಲ್ಕನೇ ವರ್ಷದ ಎಲ್.ಎಲ್.ಬಿ ವಿದ್ಯಾರ್ಥಿಯಾಗಿದ್ದ. ನಿತಿನ್ ತಿಂಡಿ ತಿನ್ನಲು ಸ್ನೇಹಿತನೊಂದಿಗೆ ಹುಣಸೂರು ಪಟ್ಟಣ ಹೋಟೆಲ್‍ಗೆ ತೆರಳಿ ತಿಂಡಿಗೆ ಆರ್ಡರ್ ಮಾಡಿದ್ದಾರೆ. ತಿಂಡಿ ಬರುವಷ್ಟರಲ್ಲೇ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾನೆ.

    ಸ್ನೇಹಿತ ಹಾಗೂ ಹೋಟೆಲ್‍ನವರು ಉಪಚರಿಸಿ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ ನಿತಿನ್ ಸಾವನ್ನಪ್ಪಿದ್ದು, ಯುವಕ ಹೋಟೆಲ್‍ನಲ್ಲಿದ್ದ ಕೊನೆ ಕ್ಷಣದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಯಾರ ಮೇಲೂ ಆರೋಪ ಮಾಡಲ್ಲ, ಕಾನೂನು ಹೋರಾಟಕ್ಕೆ ಸಿದ್ಧ: ತೇಲ್ಕೂರ್

  • ಡಿವೋರ್ಸ್ ಬಳಿಕ ಧನುಷ್-ಐಶ್ವರ್ಯಾ ಒಂದೇ ಹೊಟೇಲಿನಲ್ಲಿ ವಾಸ!

    ಡಿವೋರ್ಸ್ ಬಳಿಕ ಧನುಷ್-ಐಶ್ವರ್ಯಾ ಒಂದೇ ಹೊಟೇಲಿನಲ್ಲಿ ವಾಸ!

    ಹೈದರಾಬಾದ್: ಕಾಲಿವುಡ್ ನಟ ಧನುಷ್ ಹಾಗೂ ರಜಿನಿಕಾಂತ್ ಪುತ್ರಿ ಐಶ್ವರ್ಯಾ ಪರಸ್ಪರ ದೂರಾಗುತ್ತಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ 18 ವರ್ಷಗಳ ವೈವಾಹಿಕ ಜೀವನ ಅಂತ್ಯಗೊಂಡಂತಾಗಿದೆ. ಆದರೆ ಈ ಜೋಡಿ ಹೈದರಾಬಾದ್‍ನ ಐಷಾರಾಮಿ ಹೋಟೆಲ್‍ವೊಂದರಲ್ಲಿ ಇಬ್ಬರು ತಂಗಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.

    ರಾಮೋಜಿ ಫಿಲ್ಮ್ ಸಿಟಿಯಲ್ಲಿರುವ ಐಷಾರಾಮಿ ಹೋಟೆಲ್‍ವೊಂದರಲ್ಲಿ ಧನುಷ್ ಮತ್ತು ಐಶ್ವರ್ಯಾ ಇದ್ದಾರೆ. ಹಾಗಂದ ಮಾತ್ರಕ್ಕೆ ಇಬ್ಬರು ಒಟ್ಟಿಗೆ ಇದ್ದಾರೆ ಎಂದೇನಲ್ಲ. ವೃತ್ತಿ ಕಾರಣದಿಂದಾಗಿ ಹೈದಾರಾಬಾದ್‍ನಲ್ಲಿ ಬೀಡುಬಿಟ್ಟಿರುವ ಈ ಮಾಜಿ ದಂಪತಿ ಒಂದೇ ಹೋಟೆಲ್‍ನಲ್ಲಿ ಇದ್ದಾರೆ ಅಷ್ಟೇ. ಸದ್ಯ ಇಂಥದ್ದೊಂದು ಮಾಹಿತಿ ಸಿಕ್ಕಿದೆ. ಅಧಿಕೃತವಾಗಿ ವಿಚ್ಛೇದನ ಘೋಷಣೆ ಮಾಡಿರುವ ಇಬ್ಬರು, ಅದನ್ನೇ ಯೋಚಿಸುತ್ತ ಕುಳಿತಿಲ್ಲ. ಬದಲಾಗಿ, ವೃತ್ತಿ ಬದುಕಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

    ಸಾಮಾನ್ಯವಾಗಿ ವಿಚ್ಛೇದನ ಪಡೆದ ನಂತರದಲ್ಲಿ ಒಬ್ಬರ ಮುಖವನ್ನು ಒಬ್ಬರು ನೋಡಿಕೊಳ್ಳೋಕೆ ಇಷ್ಟಪಡುವುದಿಲ್ಲ. ಆದರೆ ಸೆಲೆಬ್ರಿಟಿ ವಲಯದಲ್ಲಿ ಹಾಗಾಗುವುದಿಲ್ಲ. ಒಂದೇ ಇಂಡಸ್ಟ್ರಿಯಲ್ಲಿ ಇದ್ದರೆ ಪರಸ್ಪರ ಭೇಟಿ ಆಗುವ ಸಂದರ್ಭ ಒದಗಿ ಬರುತ್ತದೆ. ಈಗ ಧನುಷ್ ಹಾಗೂ ಐಶ್ವರ್ಯಾಗೆ ಹೀಗೆಯೇ ಆಗಿದೆ ಎನ್ನಲಾಗುತ್ತಿದೆ. ಸದ್ಯ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ.

    ನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ಅವರು ತಮ್ಮ 18 ವರ್ಷಗಳ ಸುದೀರ್ಘ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ್ದಾರೆ. ಜನವರಿ 17ರಂದು ಅಧಿಕೃತವಾಗಿ ಈ ವಿಚಾರವನ್ನು ಇಬ್ಬರು ಕೂಡ ಘೋಷಣೆ ಮಾಡಿದ್ದರು. ಇದು ಧನುಷ್, ರಜನಿಕಾಂತ್ ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿತ್ತು.ಇದನ್ನೂ ಓದಿ: ನಟ ಧನುಷ್, ಐಶ್ವರ್ಯಾ ಡಿವೋರ್ಸ್- 18 ವರ್ಷದ ವೈವಾಹಿಕ ಸಂಬಂಧಕ್ಕೆ ಗುಡ್‍ಬೈ

    ನಾವಿಬ್ಬರು 18 ವರ್ಷಗಳಿಂದ ಸ್ನೇಹಿತರಾಗಿ, ಪ್ರೇಮಿಗಳಾಗಿ, ದಂಪತಿಯಾಗಿ , ಪೋಷಕರಾಗಿ, ಪರಸ್ಪರ ಒಳ್ಳೆಯದನ್ನು ಬಯಸುತ್ತಾ, ಅರ್ಥಮಾಡಿಕೊಳ್ಳುತ್ತಾ, ಸಹಕರಿಸುತ್ತಾ ಜೀವನ ನಡೆಸಿದ್ದೇವೆ. ಒಬ್ಬರಿಗೆ ಒಬ್ಬರು ಆಸರೆಯಾಗಿದ್ದೇವೆ. ಇಂದು ನಮ್ಮಿಬ್ಬರ ದಾರಿ ಬೇರೆ ಬೇರೆಯಾಗಿದೆ. ನಾನು ಹಾಗೂ ಐಶ್ವರ್ಯಾ ಸಮಯ ತೆಗೆದುಕೊಂಡು ಕೊನೆಗೆ ತೀರ್ಮಾನಿಸಿ ಪರಸ್ಪರ ಒಪ್ಪಿ ದಾಂಪತ್ಯ ಜೀವನದಿಂದ ದೂರಾಗುತ್ತಿದ್ದೇವೆ. ನಮ್ಮ ನಿರ್ಧಾರಕ್ಕೆ ನಿಮ್ಮ ಬೆಂಬಲ ಹಾಗೂ ಸಹಕಾರ ಇರಲಿ ಎಂದು ಆಶಿಸುತ್ತೇನೆ . ದಯಮಾಡಿ ನಮ್ಮ ಖಾಸಗಿ ನಿರ್ಧಾರವನ್ನು ಗೌರವಿಸಿ ಎಂದು ಧನುಷ್ ಟ್ವೀಟ್ ಮಾಡಿದ್ದಾರೆ. ಅದೇ ಪೋಸ್ಟ್ ಅನ್ನು ಹೆಸರು ಬದಲಾಯಿಸಿ, ಐಶ್ವರ್ಯಾ ಕೂಡ ಶೇರ್ ಮಾಡಿಕೊಂಡಿದ್ದರು.

  • ದೊಡ್ಡವರನ್ನೂ ಮೀರಿಸುತ್ತಾನೆ ಕಳ್ಳತನದಲ್ಲಿ ಈ ಬಾಲಕ

    ದೊಡ್ಡವರನ್ನೂ ಮೀರಿಸುತ್ತಾನೆ ಕಳ್ಳತನದಲ್ಲಿ ಈ ಬಾಲಕ

    ಬೆಳಗಾವಿ: ಬಾಲಕನೊಬ್ಬ ಯಾರಿಗೂ ಗೊತ್ತಾಗದಂತೆ ನುಸುಳಾಡಿ ಹಣ ಪೀಕಿ ಪರಾರಿಯಾದ ಘಟನೆ ನಗರದ ಗೋಕಾಕ್ ತಾಲೂಕಿನ ನಾಕಾ ನಂ. 1ರ ದುರ್ಗಾ ಹೋಟೆಲ್‍ನಲ್ಲಿ ನಡೆದಿದೆ.

    ಬಾಲಕನು ಹಾಡಹಗಲೇ ಮಾಲೀಕರ ಕಣ್ಣಿಗೆ ಮಣ್ಣೆರಚಿ ಹಣ ದೋಚಿದ್ದಾನೆ. ಬಾಲಕನು ನೋಡ ನೋಡುತ್ತಿದ್ದಂತೆಯೇ ಹೋಟೆಲಿನ ಗಲ್ಲಾದಲ್ಲಿದ್ದ 9 ಸಾವಿರ ರೂ. ಹಣ ಕದ್ದು ಪರಾರಿಯಾಗಿದ್ದಾನೆ. ಇದನ್ನೂ ಓದಿ: ಶಿಕ್ಷಕರ ಬೇಜವಾಬ್ದಾರಿಯಿಂದ ವಿದ್ಯಾರ್ಥಿಯ ಕಣ್ಣು ಹೋಯ್ತು!

    ಈ ಕೃತ್ಯವು ಹೋಟೆಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹೋಟೇಲಿನ ಮಾಲೀಕರು ಬಾಲಕನ ಈ ಖತರ್ನಾಕ್ ಕೃತ್ಯವನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಗೋಕಾಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಇದನ್ನೂ ಓದಿ: ನಾಯಿ ಹುಟ್ಟುಹಬ್ಬ ಆಚರಿಸಲು 11 ಲಕ್ಷ ರೂ. ಖರ್ಚು ಮಾಡಿದ ಮಹಿಳೆ

     

  • ಗಂಡ ಹೊಟೇಲ್‍ಗೆ ಕರೆದುಕೊಂಡು ಹೋಗಿಲ್ಲವೆಂದು ಮಕ್ಕಳೊಂದಿಗೆ ಮಹಿಳೆ ಆತ್ಮಹತ್ಯೆ

    ಗಂಡ ಹೊಟೇಲ್‍ಗೆ ಕರೆದುಕೊಂಡು ಹೋಗಿಲ್ಲವೆಂದು ಮಕ್ಕಳೊಂದಿಗೆ ಮಹಿಳೆ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಗಂಡ ಹೋಟೆಲ್‍ಗೆ ಊಟಕ್ಕೆ ಕರೆದುಕೊಂಡು ಹೋಗಲ್ಲ ಎಂದು ಇಬ್ಬರು ಮಕ್ಕಳೊಂದಿಗೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಎಸ್.ಎಂ ಗೊಲ್ಲಹಳ್ಳಿಯಲ್ಲಿ ನಡೆದಿದೆ.

    ಸಂಧ್ಯಾ (24), ಕುಸುಮ (4) ಹಾಗೂ 1 ವರ್ಷ 7 ತಿಂಗಳಿನ ಮಗು ರೋಹಿತ್ ಮೃತರು. ಅಂದಹಾಗೆ ಮನೆಯಲ್ಲಿ ಅತ್ತೆ ಮಾವ ಗಂಡ ಯಾರೂ ಇಲ್ಲದ ವೇಳೆ ಸಂಧ್ಯಾ ತನ್ನಿಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದರು. ಇದನ್ನು ಕಂಡ ಗ್ರಾಮಸ್ಥರು ಬಾಗಿಲು ಒಡೆದು ಮೂವರನ್ನು ರಕ್ಷಿಸಿಲು ಯತ್ನಿಸಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಮೂವರು ಸಹ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮಾಧುಸ್ವಾಮಿ ವಿರುದ್ಧ ಮಾತಾಡಿಲ್ಲ, ಅಧಿಕಾರಿಗಳಿಗೆ ಛೀಮಾರಿ ಹಾಕಿ ಅಂದೆ ಅಷ್ಟೇ: ಬಸವರಾಜ್

    ಯಲಹಂಕ ಮೂಲದ ಸಂಧ್ಯಾ, ಎಸ್.ಎಂ ಗೊಲ್ಲಹಳ್ಳಿಯ ಶ್ರೀಕಾಂತ್‍ರೊಂದಿಗೆ ಕಳೆದ 5 ವರ್ಷಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ಮೊದಲಿನಿಂದಲೂ ವಾರಕ್ಕೊಮ್ಮೆ ಆದ್ರೂ ಹೋಟೆಲ್ ಊಟ ಮಾಡುವ ಅಭ್ಯಾಸ ಇದ್ದ ಸಂಧ್ಯಾಗೆ ಗಂಡ ಆಗಾಗ್ಗೆ ಹೋಟೆಲ್‍ಗೆ ಕೆರೆದುಕೊಂಡು ಹೋಗಿ ಊಟ ಮಾಡಿಸಿಕೊಂಡು ಬರುತ್ತಿದ್ದರು. ಆದ್ರೆ ಇತ್ತೀಚೆಗೆ ಕೆಲಸದ ಒತ್ತಡದ ನಡುವೆ ಆಗಿರಲಿಲ್ಲ ಇದೇ ಕಾರಣಕ್ಕೆ ಜಗಳ ಮಾಡಿದ್ದ ಸಂಧ್ಯಾ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅಂಗನವಾಡಿಗೆ ಹೋಗಿದ್ದ ತನ್ನ ಮಗುವನ್ನು ಮನೆಗೆ ಕರೆದುಕೊಂಡು ಬಂದು ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಮೃತಳ ತಂದೆ ನಾಗರಾಜು ದೂರು ನೀಡಿದ್ದಾರೆ. ಇದನ್ನೂ ಓದಿ: ನಮ್ಮ ಜಿಲ್ಲೆಯನ್ನೇ ಹಾಳ್ ಮಾಡಿಬಿಟ್ಟಿದ್ದಾನೆ – ಮಾಧುಸ್ವಾಮಿ ವಿರುದ್ಧ ಬಸವರಾಜ್, ಬೈರತಿ ಗುಸು ಗುಸು

  • ನೈಟ್ ಕರ್ಫ್ಯೂ ಮಾಡುವ ಬದಲು ಬೆಳಗ್ಗೆಯಿಂದಲೇ ಕರ್ಫ್ಯೂ ಜಾರಿ ಮಾಡಿ: ರೆಸಾರ್ಟ್ ಮಾಲೀಕರ ಅಕ್ರೋಶ

    ನೈಟ್ ಕರ್ಫ್ಯೂ ಮಾಡುವ ಬದಲು ಬೆಳಗ್ಗೆಯಿಂದಲೇ ಕರ್ಫ್ಯೂ ಜಾರಿ ಮಾಡಿ: ರೆಸಾರ್ಟ್ ಮಾಲೀಕರ ಅಕ್ರೋಶ

    ಮಡಿಕೇರಿ: ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ಹೊಸವರ್ಷಾಚರಣೆಗೆ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಿದೆ. ಅದರಲ್ಲೂ ಸರ್ಕಾರ ನೈಟ್ ಕರ್ಫ್ಯೂ ವಿಧಿಸಿರುವ ನಿರ್ಧಾರಕ್ಕೆ ನೈಟ್ ಕರ್ಫ್ಯೂ ಮಾಡುವ ಬದಲು ಬೆಳಗ್ಗೆಯಿಂದಲೇ ಕರ್ಫ್ಯೂ ಜಾರಿ ಮಾಡಿ ಎಂದು ಕೊಡಗಿನ ಹೋಟೆಲ್, ರೆಸ್ಟೋರೆಂಟ್ ಹೋಂಸ್ಟೇ, ರೆಸಾರ್ಟ್ ಮಾಲೀಕರು ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತ ಪಡಿಸಿದ್ದಾರೆ.

    ಕಳೆದ ಎರಡು ವರ್ಷದಿಂದ ಲಾಕ್‍ಡೌನ್ ಹೆಸರಲ್ಲಿ ಸರಿಯಾದ ವ್ಯಾಪಾರ ಆಗದೆ ಸಂಕಷ್ಟ ಅನುಭವಿಸಿದ್ದೇವೆ. ನಮ್ಮ ವ್ಯಾಪಾರವೆಲ್ಲ ಹಾಳಾಗಿದ್ದು ಆರ್ಥಿಕವಾಗಿ ಚೇತರಿಕೆ ಕಷ್ಟವಾಗಿದೆ. ಈಗಾಗಲೇ ಜಿಲ್ಲೆಯ ಹೊಸ ವರ್ಷದ ಸಂಭ್ರಮ ಅಚರಣೆಗೆ ಶೇಕಡಾ 100% ಹೋಂಸ್ಟೇಗಳು ಭರ್ತಿಯಾಗಿದ್ದು. ಸರ್ಕಾರ ದಿಢೀರ್ ಅಗಿ ನೈಟ್ ಕರ್ಫ್ಯೂ ಬೇರೆ ಜಾರಿ ಮಾಡಿರುವುದರಿಂದ ಹೋಂಸ್ಟೇಗೆ ಬರುವ ಪ್ರವಾಸಿಗರು ತಮ್ಮ ಹಣವನ್ನು ವಾಪಸ್ಸು ಮಾಡಿ ನಾವು ತಮಿಳುನಾಡು, ಗೋವಾ ಕಡೆಗಳಿಗೆ ತೆರಳುತ್ತೇವೆ ಎಂದು ಹೇಳಿ ಹಣವನ್ನು ಹಿಂಪಡೆಯುತ್ತಿದ್ದಾರೆ. ಇದರಿಂದ ಮತ್ತಷ್ಟು ಸಂಕಷ್ಟ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ರಸ್ತೆ, ರಸ್ತೆಯಲ್ಲಿ ಕುಣಿಯುವುದಕ್ಕೆ ಬ್ರೇಕ್ ಹಾಕಿ ಬಾರ್, ರೆಸ್ಟೋರೆಂಟ್ ನಿಯಮ ಸಡಿಲಿಸಿ: ಗೋವಿಂದರಾಜ್ ಹೆಗ್ಡೆ

    ಕೊಡಗು ಜಿಲ್ಲೆಯ ದಸರಾ ಹಾಗೂ ಡಿಸೆಂಬರ್, ಜನವರಿ ತಿಂಗಳಲ್ಲಿ ಮಾತ್ರ ಪ್ರವಾಸೋದ್ಯಮ ಚಟುವಟಿಕೆ ಹೆಚ್ಚು ಕಂಡು ಬರುತ್ತದೆ. ಬಾಕಿ ಸಮಯದಲ್ಲಿ ಪ್ರವಾಸಿಗರೇ ಹೆಚ್ಚು ಜಿಲ್ಲೆಯಲ್ಲಿ ಕಂಡು ಬರುವುದಿಲ್ಲ. ಹೀಗೆ ಇರುವಾಗ ನೈಟ್ ಕರ್ಫ್ಯೂ ಮಾಡಿರುವುದು ಸರಿಯಲ್ಲ. ಈಗಾಗಲೇ ರಾಜಕೀಯ ಪಕ್ಷಗಳ ಸಭೆ ಸಮಾರಂಭಗಳಿಗೆ ಚರ್ಚ್, ಮಸೀದಿಗಳಿಗೆ ಯಾವುದೇ ನಿರ್ಬಂಧಗಳು ಇಲ್ಲ. ರಾತ್ರಿ ಹೊತ್ತು ಮಾತ್ರ ಕೋವಿಡ್ ಬರುತ್ತದೆ ಎಂದರೆ ಅದು ತಪ್ಪು. ಹಾಗೇ ಬೇಕಾದ್ರೆ ಬೆಳಗ್ಗೆಯಿಂದಲ್ಲೇ ಕರ್ಫ್ಯೂ ಜಾರಿ ಮಾಡಿ. ಈ ರೀತಿ ಅವೈಜ್ಞಾನಿಕವಾಗಿ ನೈಟ್ ಕರ್ಫ್ಯೂ ಮಾಡುವುದರಲ್ಲಿ ಯಾವುದೇ ಅರ್ಥ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಡಿ.28 ರಿಂದ ರಾಜ್ಯದಲ್ಲಿ 10 ದಿನ ನೈಟ್ ಕರ್ಫ್ಯೂ ಜಾರಿ – ನ್ಯೂ ಇಯರ್ ಪಾರ್ಟಿಗಳಿಗೆ ಬ್ರೇಕ್

    ಕೊಡಗು ಜಿಲ್ಲೆಯ ಪ್ರವಾಸೋದ್ಯಮವನ್ನೇ ಅವಲಂಬಿಸಿಕೊಂಡು ಬದುಕು ನಡೆಸುತ್ತಿರುವ ಹೋಟೆಲ್, ರೆಸ್ಟೋರೆಂಟ್, ಹೋಂಸ್ಟೇ, ರೆಸಾರ್ಟ್ ಮಾಲೀಕರು ಹೊಸವರ್ಷದ ಆಚರಣೆಗೆ ಸರ್ಕಾರ ವಿಧಿಸಿರುವ ಕಟ್ಟುನಿಟ್ಟಿನ ನಿಯಮದ ಬಗ್ಗೆ ಆಕ್ರೋಶ ಹೊರಹಾಕುತ್ತಿದ್ದಾರೆ. ಅವರ ಆಕ್ರೋಶಕ್ಕೆ ಮಣಿದು ಸರ್ಕಾರ ನಿಯಮಗಳನ್ನು ಸಡಿಲಿಕೆ ಮಾಡುತ್ತ ಎಂಬುದನ್ನು ಕಾದುನೋಡಬೇಕಾಗಿದೆ. ಇದನ್ನೂ ಓದಿ: ಜನತೆಯ ಹಿತದೃಷ್ಟಿಯಿಂದ ಕಠಿಣ ಕ್ರಮ: ಸುಧಾಕರ್ ಸಮರ್ಥನೆ

  • ರಸ್ತೆ, ರಸ್ತೆಯಲ್ಲಿ ಕುಣಿಯುವುದಕ್ಕೆ ಬ್ರೇಕ್ ಹಾಕಿ ಬಾರ್, ರೆಸ್ಟೋರೆಂಟ್ ನಿಯಮ ಸಡಿಲಿಸಿ: ಗೋವಿಂದರಾಜ್ ಹೆಗ್ಡೆ

    ರಸ್ತೆ, ರಸ್ತೆಯಲ್ಲಿ ಕುಣಿಯುವುದಕ್ಕೆ ಬ್ರೇಕ್ ಹಾಕಿ ಬಾರ್, ರೆಸ್ಟೋರೆಂಟ್ ನಿಯಮ ಸಡಿಲಿಸಿ: ಗೋವಿಂದರಾಜ್ ಹೆಗ್ಡೆ

    ಉಡುಪಿ: ಹೊಸವರ್ಷದ ಎರಡು ದಿನವಾದರೂ ನಮಗೆ ವ್ಯಾಪಾರ ವಹಿವಾಟು ಮಾಡಲು ಅವಕಾಶ ಮಾಡಿಕೊಡಿ. ರಸ್ತೆ, ರಸ್ತೆಯಲ್ಲಿ ಕುಣಿತಕ್ಕೆ ಬ್ರೇಕ್ ಹಾಕಿ. ಕುಡಿತಕ್ಕೆ ಯಾಕೆ ತಡೆಯೊಡ್ಡುತ್ತೀರಿ ಎಂದು ಬಾರ್, ರೆಸ್ಟೋರೆಂಟ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

    ಉಡುಪಿಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ ಅವರು, ನಮ್ಮ ಆರ್ಥಿಕ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ. ನಾವು ಆರ್ಥಿಕವಾಗಿ ಸಂಪೂರ್ಣವಾಗಿ ಸೋತು ಹೋಗಿದ್ದೇವೆ. ರೆಸ್ಟೋರೆಂಟ್ ಇರುವವರು ಬಹಳ ಸಂಕಷ್ಟದಲ್ಲಿದ್ದಾರೆ. ಹೊಸವರ್ಷದ ಎರಡು ದಿನವಾದರೂ ನಮಗೆ ವ್ಯಾಪಾರ ವಹಿವಾಟು ಮಾಡಲು ಅವಕಾಶ ಮಾಡಿಕೊಡಿ. ಎರಡು ದಿನ ದೊಡ್ಡಮಟ್ಟದ ವ್ಯಾಪಾರ ಆಗುತ್ತದೆ. ಈ ಹಿಂದೆ ಆದ ನಷ್ಟದಿಂದ ನಾವು ಸ್ವಲ್ಪವಾದರೂ ಚೇತರಿಸಿಕೊಳ್ಳುತ್ತೇವೆ ಎಂದು ಹತಾಶೆ ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಇಂಡಿಗೋ ವಿಮಾನದಲ್ಲಿ ತುಳುವಿನಲ್ಲಿ ಪ್ರಕಟಣೆ – ಕರಾವಳಿಗರ ಮನಗೆದ್ದ ಪೈಲಟ್

    ರಾಜ್ಯದಲ್ಲಿ ಸುಮಾರು 5,500ಕ್ಕಿಂತಲೂ ಹೆಚ್ಚು ಮದ್ಯ ಮಾರಾಟಗಾರರ ಇದ್ದಾರೆ. ನಮ್ಮ ನಷ್ಟಕ್ಕೆ ಬ್ಯಾಂಕಿನವರು ಬರುವುದಿಲ್ಲ. ಗ್ರಾಹಕರು ಬರುವುದಿಲ್ಲ ಸರ್ಕಾರವು ಬೆಂಬಲಿಸಲ್ಲ. ಜಿಎಸ್‍ಟಿ ಸಂಸ್ಥೆಯವರು ನಮ್ಮ ಕಷ್ಟವನ್ನು ಕೇಳುವುದಿಲ್ಲ. ತೆರಿಗೆ ಪಾವತಿಸಲು ಎರಡು ಕಂತುಗಳನ್ನು ಅವಕಾಶ ಕೊಟ್ಟದ್ದು ಬಿಟ್ಟರೆ ಬೇರೆ ಏನು ಸಹಾಯ ವಾಗಿಲ್ಲ. ಕಟ್ಟಡ ತೆರಿಗೆ ಪಂಚಾಯತ್ ಲೈಸೆನ್ಸ್ ಇಲ್ಲೆಲ್ಲೂ ವಿನಾಯತಿಗಳನ್ನು ಸರ್ಕಾರ ಕೊಟ್ಟಿಲ್ಲ ಎಂದರು.

    ಆರ್ಥಿಕವಾಗಿ ಸಂಕಷ್ಟವಾದರೆ ವ್ಯವಹಾರಸ್ಥ ಮಾನಸಿಕವಾಗಿ ಕುಗ್ಗಿ ಹೋಗುತ್ತಾನೆ. ವ್ಯಾಪಾರಿಯ ಆರೋಗ್ಯ ಸರ್ಕಾರಕ್ಕೆ ಮುಖ್ಯ ಅಲ್ಲವೇ ಎಂದು ಗೋವಿಂದರಾಜ ಹೆಗ್ಡೆ ಪ್ರಶ್ನೆ ಮಾಡಿದ್ದಾರೆ. ಆಹಾರವಿರುತ್ತದೆ ಮದ್ಯ ಸೇವಿಸಲು ಲೈಸನ್ಸ್‌ ಟೈಮಿಂಗ್‍ನಲ್ಲಿ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಿ. ಡಿಸೆಂಬರ್ 31 ಮತ್ತು ಜನವರಿ 1ಕ್ಕೆ ಸರ್ಕಾರ ರೂಪಿಸಿರುವ ನಿಯಮದಲ್ಲಿ ವಿನಾಯತಿ ಕೊಡಬೇಕು. ರಸ್ತೆಗಳಲ್ಲಿ ಕುಣಿದಾಡುವುವವರಿಗೆ ಸರ್ಕಾರ ಬೇರೆಯ ನಿಯಮ ರೂಪಿಸಲಿ. ರಸ್ತೆಯಲ್ಲಿ ಕುಣಿಯೋರ ಪರವಾಗಿ ನಾನು ಮಾತನಾಡುವುದಿಲ್ಲ. ಅದಕ್ಕೆ ಕಠಿಣ ನಿರ್ಬಂಧವನ್ನು ಸರ್ಕಾರ ಹೇರಲಿ. ರೆಸ್ಟೋರೆಂಟ್‍ನಲ್ಲಿ ಶೇಕಡ ನೂರರಷ್ಟು ಕುಳಿತುಕೊಂಡು ಆಹಾರ ಸೇವಿಸುವ ಅವಕಾಶ ಕೊಡಬೇಕು. ಪ್ರವಾಸಿಗರಿಗೆ ಸಾರ್ವಜನಿಕರಿಗೆ ಎಲ್ಲೆಲ್ಲಿ ಎಷ್ಟೆಷ್ಟು ಅವಕಾಶ ಸರ್ಕಾರ ಕೊಟ್ಟಿದೆ ಎಂಬುದು ನಮಗೆ ಗೊತ್ತು ನಾನು ಅದನ್ನು ಪ್ರಶ್ನೆ ಮಾಡುವುದಿಲ್ಲ. ಯಾವ ವಲಯವನ್ನು ನಾನು ಗುರುತಿಸಲು ಹೋಗುವುದಿಲ್ಲ. ಇದನ್ನೂ ಓದಿ: ಡಿ.28 ರಿಂದ ರಾಜ್ಯದಲ್ಲಿ 10 ದಿನ ನೈಟ್ ಕರ್ಫ್ಯೂ ಜಾರಿ – ನ್ಯೂ ಇಯರ್ ಪಾರ್ಟಿಗಳಿಗೆ ಬ್ರೇಕ್

    ಕುಣಿದಾಟ ಮಾಡಲು ಆರ್ಕೆಸ್ಟ್ರಾಗಳನ್ನು ನಿಯೋಜಿಸಲು ದೊಡ್ಡ ದೊಡ್ಡ ಕಾರ್ಯಕ್ರಮಗಳ ಆಯೋಜನೆ ಮಾಡುವ ಬಗ್ಗೆ ನಾವು ನಮ್ಮ ಬೇಡಿಕೆಯನ್ನು ಸಲ್ಲಿಸುತ್ತಿಲ್ಲ. ನಮ್ಮ ವ್ಯಾಪಾರದ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ನಾವು ನಮ್ಮ ವ್ಯಾಪಾರಕ್ಕೆ ಬಂಡವಾಳ ಹಾಕಿದ್ದೇವೆ ಸರ್ಕಾರಕ್ಕೆ ತೆರಿಗೆ ಕಟ್ಟುತ್ತೇವೆ. ಹೊಸವರ್ಷವನ್ನು 10 ಗಂಟೆಗೆ ಆಚರಿಸಲು ಸಾಧ್ಯವಿಲ್ಲ. ಹೊಸವರ್ಷ ಬರುವುದೇ 12 ಗಂಟೆಗೆ. ಒಂದು ರೆಸ್ಟೋರೆಂಟ್‌ಗೆ ಬಂದು ಕೇಕ್ ಕಟ್ ಮಾಡುವ ಅವಕಾಶವನ್ನು ಸರ್ಕಾರ ಕೊಡುತ್ತಿಲ್ಲ ಇದು ಅನ್ಯಾಯ. ಇದನ್ನೂ ಓದಿ: ನಿಷೇಧವಿದ್ದರೂ ಎಣ್ಣೆ ಪಾರ್ಟಿ ಮಾಡಿದ ವೈದ್ಯ ಅರೆಸ್ಟ್‌!

    ರಾಜ್ಯದಲ್ಲಿ ಸಾವಿರಾರು ವೆಜಿಟೇರಿಯನ್ ರೆಸ್ಟೋರೆಂಟ್ಸ್ ನಾನ್ ವೆಜಿಟೇರಿಯನ್ ರೆಸ್ಟೋರೆಂಟ್ಸ್‌ಗಳು ಇವೆ. ಇವರುಗಳ ಪಾಡು ಏನು? ಲಾಭ ಮಾಡುವ ಉದ್ದೇಶ ಅಲ್ಲದಿದ್ದರೂ ಸರ್ಕಾರ ನಷ್ಟವಾಗಲು ಬಿಡಬಾರದು. ಹಿಂದೆ ಇದ್ದ ವ್ಯಾಪಾರಕ್ಕೆ ಹೋಲಿಸಿದ್ದಾರೆ ಶೇಕಡ 36, 37% ರಷ್ಟು ಮಾತ್ರ ವ್ಯಾಪಾರವಾಗುತ್ತಿದೆ. ಸರ್ಕಾರ ಈ ನಿಯಮದಿಂದ cl2 ಮತ್ತು ವೈನ್ ಶಾಪ್‍ನಲ್ಲಿ ಮಾತ್ರ ವ್ಯಾಪಾರ ಹೆಚ್ಚಾಗಲಿದೆ ಎಲ್ಲರೂ ಮನೆಗೆ ಪಾರ್ಸೆಲ್ ತೆಗೆದುಕೊಂಡು ಹೋಗಿ ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹತಾಶೆ ವ್ಯಕ್ತಪಡಿಸಿದ್ದಾರೆ.