Tag: Hotel

  • ಚಿಕನ್ ಕಬಾಬ್, ಲೆಗ್ ಪೀಸ್‌ನಲ್ಲಿ ಹುಳ! – ಮಹಿಳೆ ಆಸ್ಪತ್ರೆಗೆ, ಹೋಟೆಲ್‌ಗೆ ಬೀಗ

    ಚಿಕನ್ ಕಬಾಬ್, ಲೆಗ್ ಪೀಸ್‌ನಲ್ಲಿ ಹುಳ! – ಮಹಿಳೆ ಆಸ್ಪತ್ರೆಗೆ, ಹೋಟೆಲ್‌ಗೆ ಬೀಗ

    ಕೋಲಾರ: ಚಿಕನ್ ಎಂದರೆ ಸಾಕಷ್ಟು ಜನರಿಗೆ ಅಚ್ಚು ಮೆಚ್ಚು. ಅದರಲ್ಲೂ ಚಿಕನ್ ಲೆಗ್ ಪೀಸ್ ಎಂದರೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಆದರೆ ಚಿಕನ್ ಪ್ರಿಯರೇ ಇನ್ಮುಂದೆ ರೆಸ್ಟೋರೆಂಟ್ ಅಥವಾ ಹೋಟೆಲ್‌ನಿಂದ ತಮ್ಮ ಅಚ್ಚುಮೆಚ್ಚಿನ ಚಿಕನ್ ಖರೀದಿ ಮಾಡಿದ್ರೆ ತಿನ್ನುವ ಮುನ್ನ ಹುಷಾರ್ ಆಗಿರಿ.

    ಒಂದೆಡೆ ರೆಸ್ಟೋರೆಂಟ್ ಮಾಲೀಕರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದು, ಮತ್ತೊಂದೆಡೆ ಹೋಟೆಲ್‌ಗೆ ಬೀಗ ಮುದ್ರೆ ಹಾಕುತ್ತಿರುವ ಆಹಾರ ನಿರೀಕ್ಷಕ ಅಧಿಕಾರಿಗಳು. ಇನ್ನೂ ಒಂದೆಡೆ ಚಿಕನ್ ಸೇವಿಸಿ ಆಸ್ಪತ್ರೆ ಪಾಲಾಗಿರುವ ಮಹಿಳೆ. ಇದೆಲ್ಲಾ ನಡೆದಿರುವುದು ಕೋಲಾರದ ಕೆಜಿಎಫ್ ನಗರದ ಪಿಚರ್ಡ್ ರಸ್ತೆಯಲ್ಲಿ. ಹೌದು, ಚಿಕನ್ ಲೆಗ್ ಪೀಸ್‌ನಲ್ಲಿ ಹುಳ ಪತ್ತೆಯಾದ ಘಟನೆ ಕೋಲಾರದಲ್ಲಿ ನಡೆದಿದೆ. ಅದೇ ಲೆಗ್ ಪೀಸ್ ಸೇವಿಸಿದ ಮಹಿಳೆ ಅಸ್ವಸ್ಥರಾಗಿ, ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಪಿಚರ್ಡ್ ರಸ್ತೆಯಲ್ಲಿರುವ ಇಖ್ರಾ ಹೋಟೆಲ್‌ನಲ್ಲಿ ಗುರುವಾರ ಕೆಜಿಎಫ್ ನಗರದ ವಿನೋದ್, ಮನೆಗೆ ಚಿಕನ್ ಲೆಗ್ ಪೀಸ್ ಪಾರ್ಸೆಲ್ ತೆಗೆದುಕೊಂಡು ಹೋಗಿದ್ದರು. ಮನೆಯಲ್ಲಿ ಮಕ್ಕಳ ಜೊತೆ ಚಿಕನ್ ತಿನ್ನುತ್ತಿದ್ದಾಗ ಲೆಗ್ ಪೀಸ್‌ನಲ್ಲಿ ಹುಳ ಇರುವುದು ಪತ್ತೆಯಾಗಿದೆ. ಇದನ್ನು ತಿಂದ ವಿನೋದ್ ತಾಯಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾತ್ರಿಯಿಂದ ವಾಂತಿ, ಭೇದಿ ಶುರುವಾಗಿದ್ದು, ಕೂಡಲೆ ಕೆಜಿಎಫ್ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಸರ್ಕಾರಿ ಶಾಲಾ ಮಕ್ಕಳಿಗೆ ಸರ್ಕಾರ ನೀಡುತ್ತಿದ್ದ ಶೂ & ಸಾಕ್ಸ್ ಈ ವರ್ಷ ಸಿಗೋದು ಡೌಟ್ 

    ಹಾಳಾದ ಹಾಗೂ ಸುರಕ್ಷಿತವಲ್ಲದ ಚಿಕನ್ ಲೆಗ್ ಪೀಸ್ ನೀಡಿದ ಹಿನ್ನೆಲೆ ಇಖ್ರಾ ಹೋಟೆಲ್ ಸಿಬ್ಬಂದಿಗೆ ಸ್ಥಳೀಯರು ಗ್ರಹಚಾರ ಬಿಡಿಸಿದ್ದಾರೆ. ಕೂಡಲೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಅಧಿಕಾರಿಗಳು ಹೊಟೆಲ್‌ಗೆ ತೆರಳಿ ಪರಿಶೀಲನೆ ನಡೆಸಿದಾಗ ಹೋಟೆಲ್‌ನಲ್ಲಿದ್ದ ಎಲ್ಲಾ ಚಿಕನ್‌ನಲ್ಲಿಯೂ ಹುಳ ಪತ್ತೆಯಾಗಿದೆ. ಬಳಿಕ ಗ್ರಾಹಕ ವಿನೋದ್ ಹೋಟೆಲ್ ಮಾಲೀಕರನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದು, ಹೋಟೆಲ್‌ನಲ್ಲಿದ್ದ ಮತ್ತಷ್ಟು ಚಿಕನ್ ಪೀಸ್‌ನಲ್ಲೂ ಹುಳ ಪತ್ತೆಯಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಮೊದಲಿಗೆ ಸಂಬಂಧಪಟ್ಟ ಆಹಾರ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದು, ಪ್ರಯೋಜನವಾಗಿರಲಿಲ್ಲ. ಬಳಿಕ ಕೆಲ ಯುವಕರು ನಗರಸಭೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ದೂರು ಸಲ್ಲಿಸಿದ್ದರು. ಆದರೂ ಪ್ರಯೋಜನವಾಗಿರಲಿಲ್ಲ. ಬಳಿಕ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ ಹಿನ್ನೆಲೆ, ಸ್ಥಳಕ್ಕೆ ಆಗಮಿಸಿದ ನಗರಸಭೆ ಆಹಾರ ನಿರೀಕ್ಷಕರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕಳಪೆ ಗುಣಮಟ್ಟದ ಆಹಾರ ಹಾಗೂ ಹುಳ ಇರುವುದು ಕಂಡು ಬಂದ ಹಿನ್ನೆಲೆ ಹೋಟೆಲ್‌ಗೆ ಬೀಗ ಮುದ್ರೆಯನ್ನು ಹಾಕಿದ್ದಾರೆ. ಅಲ್ಲದೇ ನಗರಲ್ಲಿರುವ ಎಲ್ಲಾ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳ ಮೇಲೆ ಹೆಚ್ಚಿನ ನಿಗಾ ಇಡುವುದಾಗಿ ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಸಾವಿರಕ್ಕೂ ಅಧಿಕ ಕೇಸ್ – ಆರು ಸಾವಿರ ಗಡಿದಾಟಿದ ರಾಜ್ಯದ ಸಕ್ರಿಯ ಪ್ರಕರಣ

    ಒಟ್ಟಿನಲ್ಲಿ ತಮಗಿಷ್ಟ ಎಂದು ಚಿಕನ್ ತಿನ್ನಬೇಕಾದರೆ ಇನ್ನುಮುಂದೆ ಗುಣಮಟ್ಟ ಪರಿಶೀಲನೆ ಮಾಡಲೇಬೇಕು. ಯಾಮಾರಿ ಎಲ್ಲೆಂದರಲ್ಲಿ ಆಹಾರ ಸೇವನೆ ಮಾಡಿದರೆ, ಅನಾರೋಗ್ಯದ ಜೊತೆಗೆ ಹುಳಗಳು ಫ್ರೀಯಾಗಿ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.

    Live Tv

  • 24 ಗಂಟೆ ಹೋಟೆಲ್ ತೆರೆಯೋಕೆ ಅನುಮತಿ ಕೊಡೋದು ಕಷ್ಟ: ಆರಗ ಜ್ಞಾನೇಂದ್ರ

    24 ಗಂಟೆ ಹೋಟೆಲ್ ತೆರೆಯೋಕೆ ಅನುಮತಿ ಕೊಡೋದು ಕಷ್ಟ: ಆರಗ ಜ್ಞಾನೇಂದ್ರ

    ಬೆಂಗಳೂರು: ದಿನದ 24 ಗಂಟೆಯೂ ಟೌನ್‍ಶಿಪ್ ಭಾಗಗಳಲ್ಲಿ ಹೋಟೆಲ್ ತೆರೆಯಲು ಅನುಮತಿ ಕೊಡಲು ಕಷ್ಟ ಆಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ಈ ಮೂಲಕ 24 ಗಂಟೆ ಹೊಟೇಲ್ ತೆರೆಯಲು ಅನುಮತಿ ನೀಡೋದಲ್ಲ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.

    ರಾಜ್ಯ ಮತ್ತು ಬೆಂಗಳೂರಿನಲ್ಲಿ ದಿನ 24 ಗಂಟೆ ಹೋಟೆಲ್ ಪ್ರಾರಂಭ ಮಾಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ರೈಲ್ವೆ ಸ್ಟೇಷನ್, ವಿಮಾನ ನಿಲ್ದಾಣ, ಬಸ್ ಸ್ಟಾಂಡ್‍ಗಳಲ್ಲಿ ರಾತ್ರಿ ಪ್ರಯಾಣಿಕರು ಬರುತ್ತಾರೆ. ಇಂತಹ ಜನರಿಗೆ ಉಪಹಾರ ಸಿಗುವ ನಿಟ್ಟಿನಲ್ಲಿ ಆ ಭಾಗದಲ್ಲಿ ಹೋಟೆಲ್ ತೆರೆಯುವುದು ಸರಿಯಾಗಿದೆ. ಆದರೆ ಇಡೀ ಟೌನ್ ನಲ್ಲಿ ಹೋಟೆಲ್ ಓಪನ್ ಮಾಡಬೇಕು ಎನ್ನುವುದು ಕಷ್ಟ ಆಗುತ್ತದೆ ಎಂದು ತಿಳಿಸಿದರು.

    ಈಗಾಗಲೇ ಇಂಡಸ್ಟ್ರಿ ಡಿಪಾರ್ಟ್‍ಮೆಂಟ್ ಮತ್ತು ಕಾರ್ಮಿಕ ಇಲಾಖೆಗಳು ಚರ್ಚೆ ಮಾಡಿರುವ ವಿಷಯ ನನ್ನ ಗಮನಕ್ಕೆ ಬಂದಿದೆ. ನಮ್ಮ ಇಲಾಖೆ ಜೊತೆ ಚರ್ಚೆ ಮಾಡಿದಾಗ ಏನು ಸಮಸ್ಯೆ ಆಗುತ್ತೆ ಎಂದು ಹೇಳಿದ್ದೇವೆ. ಹೆಣ್ಣು ಮಕ್ಕಳು, ಸೇರಿದಂತೆ ಎಲ್ಲರಿಗೂ ರಾತ್ರಿ ಹೊತ್ತು ರಕ್ಷಣೆ ಕೊಡುವುದು ಸವಾಲಿನ ಕೆಲಸವಾಗಿದೆ. ಈ ಹಿನ್ನೆಲೆಯಲ್ಲಿ ನಾವು ಅನುಮತಿ ಕೊಡಬೇಕಾ ಎಂದು ಆಲೋಚನೆ ಮಾಡುತ್ತಿದ್ದೇವೆ ಎಂದರು. ಇದನ್ನೂ ಓದಿ: ಈ ವರ್ಷ 2 ಸಾವಿರ ಅಗ್ನಿಶಾಮಕ ಹುದ್ದೆಗಳ ಭರ್ತಿ: ಆರಗ ಜ್ಞಾನೇಂದ್ರ

    ರೈಲ್ವೆ ಸ್ಟೇಷನ್, ವಿಮಾನ ನಿಲ್ದಾಣ, ಬಸ್ ಸ್ಟ್ಯಾಂಡ್, ಇಂಡಸ್ಟ್ರಿ ಇರುವ ಕಡೆ ಮಾತ್ರ ಹೋಟೆಲ್ ಪ್ರಾರಂಭಕ್ಕೆ ಅನುಮತಿ ಕೊಡಬಹುದು. ಆದರೆ ಇಡೀ ಟೌನ್‍ನಲ್ಲಿ ಹೊಟೇಲ್ ಓಪನ್ ಮಾಡುವ ಬಗ್ಗೆ ಚರ್ಚೆ ಆಗಬೇಕು. ಈ ನಿಟ್ಟಿನಲ್ಲಿ ಚರ್ಚೆ ಮಾಡಿ ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಸರ್ ರಾಜಸ್ಥಾನ ಸರ್ಕಾರಕ್ಕೆ ಸ್ವಲ್ಪ ಬುದ್ಧಿ ಹೇಳುತ್ತೀರಾ?: ಪ್ರತಾಪ್ ಸಿಂಹ

    Live Tv

  • ಅಗ್ಗದ ಹೋಟೆಲ್ ರೂಂ, ಆಸ್ಪತ್ರೆ ಸೇವೆ ಇನ್ನಷ್ಟು ದುಬಾರಿ

    ಅಗ್ಗದ ಹೋಟೆಲ್ ರೂಂ, ಆಸ್ಪತ್ರೆ ಸೇವೆ ಇನ್ನಷ್ಟು ದುಬಾರಿ

    ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಹಣಕಾಸು ಸಮಿತಿ ಮಾಡಿದ್ದ ಶಿಫಾರಸ್ಸನ್ನು ಕೇಂದ್ರೀಯ ಜಿಎಸ್‍ಟಿ ಮಂಡಳಿ ಅನುಮೋದಿಸಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಅಗ್ಗದ ದರದ ಹೋಟೆಲ್ ರೂಂ, ಆಸ್ಪತ್ರೆ ಬಿಲ್, ಅಂಚೆ ಸೇವೆ ಮತ್ತಷ್ಟು ದುಬಾರಿ ಆಗಲಿದೆ.

    ದಿನದ ಬಾಡಿಗೆ ಸಾವಿರ ರೂ.ಗಿಂತ ಕಡಿಮೆ ಇರುವ ಹೋಟೆಲ್ ಕೊಠಡಿಗಳಿಗಿದ್ದ ವಿನಾಯ್ತಿ ರದ್ದು ಮಾಡಿ ಇವುಗಳಿಗೆ ಶೇ.12ರಷ್ಟು ತೆರಿಗೆ ಜಾರಿ ಆಗಲಿದೆ. 5 ಸಾವಿರಕ್ಕಿಂತ ಹೆಚ್ಚಿನ ಶುಲ್ಕ ಇರುವ ಐಸಿಯು ಹೊರತುಪಡಿಸಿದ ಆಸ್ಪತ್ರೆ ಕೊಠಡಿಗಳಿಗೆ ಶೇ.5ರಷ್ಟು ಜಿಎಸ್‍ಟಿ ಜಾರಿ ಆಗಲಿದೆ. ಅಂಚೆ ಇಲಾಖೆ ಬುಕ್ ಪೋಸ್ಟ್, 10ಗ್ರಾಂಗಿಂತ, ಕಡಿಮೆ ಇರುವ ಲಕೋಟೆ, ಚೆಕ್‍ಬುಕ್‍ಗೆ ಶೇ.18ರಷ್ಟು ತೆರಿಗೆ ಹೊರೆ ಬೀಳಲಿದೆ. ಇದನ್ನೂ ಓದಿ: ಟೈಲರ್ ಹತ್ಯೆ ಬೆನ್ನಲ್ಲೆ ನವೀನ್ ಕುಮಾರ್ ಜಿಂದಾಲ್‌ಗೆ ಕೊಲೆ ಬೆದರಿಕೆ

    ಉದ್ಯಮ ಸಮೂಹಗಳು ತನ್ನ ವಸತಿ ಕಟ್ಟಡಗಳನ್ನು ಬಾಡಿಗೆಗೆ ಕೊಟ್ಟಿದ್ದರೆ ಅದಕ್ಕಿದ್ದ ವಿನಾಯ್ತಿ ರದ್ದಾಗಲಿದೆ. ಪ್ಯಾಕ್ ಮಾಡಿದ ಮೀನು, ಮಾಂಸ, ಮೊಸರು, ಪನ್ನೀರ್, ಜೇನು, ಬೆಲ್ಲ, ಗೋಧಿಗೆ ಶೇ.5ರಷ್ಟು ತೆರಿಗೆ ಬೀಳಲಿದೆ.

    Live Tv

  • ವಾವ್ಹ್‌.. ‘ಜೀರಾ ರೈಸ್’ ಮಾಡುವುದು ಇಷ್ಟು ಸುಲಭನಾ.. ನೀವು ಟ್ರೈ ಮಾಡಿ

    ವಾವ್ಹ್‌.. ‘ಜೀರಾ ರೈಸ್’ ಮಾಡುವುದು ಇಷ್ಟು ಸುಲಭನಾ.. ನೀವು ಟ್ರೈ ಮಾಡಿ

    ಹೆಚ್ಚು ಮಸಾಲೆ ಇಷ್ಟ ಪಡದವರಿಗೆ ಜೀರಾ ರೈಸ್ ತುಂಬಾ ಇಷ್ಟ. ಏಕೆಂದರೆ ಇದಕ್ಕೆ ಹೆಚ್ಚು ಮಸಾಲಾ ಮತ್ತು ತರಕಾರಿಗಳನ್ನು ಹಾಕದೆ ಸಿಂಪಲ್ ಮತ್ತು ರುಚಿಕರವಾಗಿ ಮಾಡಬಹುದು. ಇದನ್ನು ನಾವು ಹೆಚ್ಚು ಹೋಟೆಲ್‌ಗೆ ಹೋಗಿ ತಿನ್ನುತ್ತೇವೆ. ಆದರೆ ಇಂದು ನೀವೇ ನಿಮ್ಮ ಮನೆಯಲ್ಲಿ ಸುಲಭವಾಗಿ ಹೇಗೆ ಜೀರಾ ರೈಸ್ ಮಾಡಬಹುದು ಎಂದು ಹೇಳಿಕೊಡುತ್ತಿದ್ದೇವೆ. ಇದನ್ನು ಟೆಸ್ಟ್ ಮಾಡಿದ್ರೆ ನೀವು ಹೋಟೆಲ್‌ನಲ್ಲಿ ತಿನ್ನುವ ಅಗತ್ಯವೇ ಇರುವುದಿಲ್ಲ.

    ಬೇಕಾಗಿರುವ ಪದಾರ್ಥಗಳು:
    * ಬೇಯಿಸಿದ ಬಾಸ್ಮತಿ ರೈಸ್ – 3 ಕಪ್
    * ಎಣ್ಣೆ – 1 ಟೀಸ್ಪೂನ್
    * ತುಪ್ಪ – 1 ಟೀಸ್ಪೂನ್
    * ಜೀರಿಗೆ – 1 ಟೀಸ್ಪೂನ್


    * ಕೊತ್ತಂಬರಿ ಸೊಪ್ಪು – 2 ಟೇಬಲ್ಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು
    * ಹಸಿರು ಮೆಣಸಿನಕಾಯಿ – 1
    * ಏಲಕ್ಕಿ – 1

    ಮಾಡುವ ವಿಧಾನ:
    * ದೊಡ್ಡ ಬಾಣಲೆಗೆ ತುಪ್ಪ ಹಾಕಿ ಅದು ಬಿಸಿಯಾದ ಮೇಲೆ ಜೀರಿಗೆ, ಹಸಿರು ಮೆಣಸಿನಕಾಯಿ, ಏಲಕ್ಕಿ ಹಾಕಿ ಫ್ರೈ ಮಾಡಿ.
    * ಈಗ ಬೇಯಿಸಿದ ಬಾಸ್ಮತಿ ರೈಸ್ ಸೇರಿಸಿ. ನಂತರ ಉಪ್ಪು ಹಾಕಿ ನಿಧಾನವಾಗಿ ಮಿಶ್ರಣ ಮಾಡಿ.
    * ಅಂತಿಮವಾಗಿ ಕಟ್ ಮಾಡಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ದಾಲ್ ನೊಂದಿಗೆ ಜೀರಾ ರೈಸ್ ಆನಂದಿಸಿ.

    Live Tv

  • ಅಸ್ಸಾಂನಲ್ಲಿರುವ ಶಿವಸೇನೆ ರೆಬಲ್ ಶಾಸಕರನ್ನು ಆತಿಥ್ಯಕ್ಕೆ ಕರೆದ ಮಮತಾ ಬ್ಯಾನರ್ಜಿ

    ಅಸ್ಸಾಂನಲ್ಲಿರುವ ಶಿವಸೇನೆ ರೆಬಲ್ ಶಾಸಕರನ್ನು ಆತಿಥ್ಯಕ್ಕೆ ಕರೆದ ಮಮತಾ ಬ್ಯಾನರ್ಜಿ

    ಕೋಲ್ಕತ್ತಾ: ಮಹಾರಾಷ್ಟ್ರದ ರಾಜಕೀಯ ಕ್ಷಣ ಕ್ಷಣಕ್ಕೂ ತಿರುವು ಪಡೆದುಕೊಳ್ಳುತ್ತಿದೆ. ಸರ್ಕಾರದ ಪತನಕ್ಕೆ ಕಾರಣವಾಗಿರುವ, ಶಿವಸೇನೆಯ ಪ್ರಬಲ ನಾಯಕ ಏಕನಾಥ ಶಿಂಧೆ ಬಣಕ್ಕೆ ಹೋಗುತ್ತಿರುವ ಶಾಸಕರ ಸಂಖ್ಯೆ ಏರುತ್ತಲೇ ಇದೆ. ಇಂದು ಮತ್ತೆ ನಾಲ್ವರು ಶಾಸಕರು ಶಿಂಧೆ ಬಣ ಸೇರಿದ್ದಾರೆ.

    ಇಂತಹ ಹೊತ್ತಿನಲ್ಲೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಹಾರಾಷ್ಟçದ ಶಾಸಕರನ್ನು ಬಂಗಾಳಕ್ಕೆ ಕಳುಹಿಸಿ ನಾವು ಅವರಿಗೆ ಆತಿಥ್ಯ ಕೊಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾರು ಅಪಘಾತ – ಅಮೂಲ್ ಎಂಡಿ ಸೋಧಿಗೆ ಪೆಟ್ಟು, ಆಸ್ಪತ್ರೆಗೆ ದಾಖಲು

    ಮಹಾರಾಷ್ಟ್ರದ ಬಂಡಾಯ ಶಾಸಕರು ತಂಗಿರುವ ಗುವಾಹಟಿಯ ರಾಡಿಸನ್ ಬ್ಲೂ ಹೋಟೆಲ್‌ನ ಹೊರಗೆ ತೃಣಮೂಲ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ನಂತರ ಮಮತಾ ಬ್ಯಾನರ್ಜಿ ಹೇಳಿಕೆ ಹೊರಬಿದ್ದಿದೆ. ರಾಜ್ಯವು ಪ್ರವಾಹದಿಂದ ತತ್ತರಿಸುತ್ತಿರುವ ಸಮಯದಲ್ಲಿ ಈ ಶಾಸಕರು ಅಸ್ಸಾಂನಲ್ಲಿ ಏಕಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮದುವೆ ಸಂಭ್ರಮಾಚರಣೆಯಲ್ಲಿ ವರನಿಂದ ಸ್ನೇಹಿತನ ಹತ್ಯೆ

    ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಮಾಡಿಕೊಂಡಿತ್ತು. ಫಲಿತಾಂಶ ಪ್ರಕಟವಾದ ಬಳಿಕ ಶಿವಸೇನೆ ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿತ್ತು. ಬಿಜೆಪಿ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡದ ಹಿನ್ನೆಲೆಯಲ್ಲಿ ಎನ್‌ಸಿಪಿ, ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿತ್ತು. ಈ ಬೆಳವಣಿಗೆ ಶಿವಸೇನೆ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೀಗ ಶಿವಸೇನೆಯ ಪ್ರಬಲ ನಾಯಕ ಏಕನಾಥ ಶಿಂಧೆ ಅವರ ನೇತೃತ್ವದಲ್ಲಿ ಶಾಸಕರು ಮೈತ್ರಿ ಕಡಿದುಕೊಳ್ಳುವಂತೆ ಬಂಡಾಯ ಎದ್ದಿದ್ದಾರೆ.

    ಸದ್ಯ ಬಂಡಾಯ ಎದ್ದಿರುವ 42 ಶಾಸಕರು ಶಿಂಧೆ ಜೊತೆ ಅಸ್ಸಾಂನ ಗುವಾಹಟಿಯಲ್ಲಿದ್ದಾರೆ. ಇವರ ಪೈಕಿ 34 ಶಿವಸೇನಾ ಶಾಸಕರು ಹಾಗೂ 8 ಪಕ್ಷೇತರರು ಇದ್ದಾರೆ. ಇಂದೂ ಸಹ 7 ಮಂದಿ ಶಿಂಧೆ ಬಣ ಸೇರಿದ್ದು ಶಿವಸೇನೆಯಲ್ಲಿನ ಬಿಕ್ಕಟ್ಟು ತೀವ್ರಗೊಂಡಿದೆ. ಈ ನಡುವೆ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ ಅವರು, ಪ್ರವಾಹಪೀಡಿತ ಅಸ್ಸಾಂಗೆ ಶಾಸಕರನ್ನೇಕೆ ಕಳುಹಿಸಲಾಗುತ್ತಿದೆ? ಮಹಾರಾಷ್ಟ್ರ ಶಾಸಕರನ್ನು ಬಂಗಾಳಕ್ಕೆ ಕಳುಹಿಸಿ ನಾವು ಅವರಿಗೆ ಉತ್ತಮ ಆತಿಥ್ಯ ನೀಡುತ್ತೇವೆ ಎಂದು ಹೇಳಿದ್ದಾರೆ.

    Live Tv

  • ಹೋಟೆಲ್‍ಗಳಿಗೆ ನಿಗದಿತ ವಿದ್ಯುತ್ ಶುಲ್ಕ ವಿನಾಯಿತಿ: ಬೆಸ್ಕಾಂ ಭರವಸೆ

    ಹೋಟೆಲ್‍ಗಳಿಗೆ ನಿಗದಿತ ವಿದ್ಯುತ್ ಶುಲ್ಕ ವಿನಾಯಿತಿ: ಬೆಸ್ಕಾಂ ಭರವಸೆ

    ಬೆಂಗಳೂರು: ಹೋಟೆಲ್ ಮತ್ತು ಫಲಹಾರ ಮಂದಿರಗಳಿಗೆ ಕೋವಿಡ್-19 ಸಮಯದಲ್ಲಿ ರಾಜ್ಯ ಸರ್ಕಾರ ನೀಡಿದ್ದ ನಿಗದಿತ ವಿದ್ಯುತ್ ಶುಲ್ಕ ವಿನಾಯಿತಿಯನ್ನು ಪ್ರವಾಸೋದ್ಯಮ ಇಲಾಖೆಯಡಿ ನೋಂದಣಿಯಾಗಿರುವ ಬೆಂಗಳೂರು ನಗರ ವ್ಯಾಪ್ತಿಯಲ್ಲಿನ ಹೋಟೆಲ್‍ಗಳಿಗೆ ನೀಡಲು ಬೆಸ್ಕಾಂ ಸಮ್ಮತಿಸಿದೆ.

    ಬೃಹತ್ ಬೆಂಗಳೂರು ಹೋಟೆಲ್‍ಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್ ನೇತೃತ್ವದ ಸಂಘ ಪದಾಧಿಕಾರಿಗಳ ಜೊತೆ ಮಂಗಳವಾರ ಸಭೆ ನಡೆದಿದೆ. ಈ ವೇಳೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಿ.ರಾಜೇಂದ್ರ ಚೋಳನ್ ಅವರು, ಪ್ರವಾಸೋದ್ಯಮ ಇಲಾಖೆಯಡಿಯಲ್ಲಿ ನೋಂದಣಿ ಆಗಿರುವ ಹೋಟೆಲ್ ಮತ್ತು ಫಲಹಾರ ಮಂದಿರಗಳ ವಿವರಗಳನ್ನು ವಲಯವಾರು ನೀಡಿದ್ದಲ್ಲಿ ಏಪ್ರಿಲ್ 2021 ರಿಂದ ಜೂನ್ 2021 ರ ಅವಧಿಯವರೆಗಿನ ನಿಗದಿತ ವಿದ್ಯುತ್ ಶುಲ್ಕದ ವಿನಾಯಿತಿಯನ್ನು ಪಡೆಯಬಹುದು ಭರವಸೆ ಕೊಟ್ಟರು. ಇದನ್ನೂ ಓದಿ: ಗಿಡ ನೆಡುವುದರ ಜೊತೆಗೆ ಸಂರಕ್ಷಿಸಿ: ರಾಜ್ಯಪಾಲರ ಕರೆ 

    ಕೋವಿಡ್ ಹಿನ್ನೆಲೆ ಹೋಟೆಲ್ ಮತ್ತು ಫಲಹಾರ ಮಂದಿರಗಳಿಗೆ 3 ತಿಂಗಳ ಕಾಲ ನಿಗದಿತ ವಿದ್ಯುತ್ ಶುಲ್ಕ ವಿನಾಯಿತಿ ನೀಡಿ ರಾಜ್ಯ ಸರ್ಕಾರ 2021 ಆಗಸ್ಟ್ 16 ರಂದು ಆದೇಶಿಸಿತ್ತು. ನಿಗದಿತ ವಿದ್ಯುತ್ ಶುಲ್ಕದ ವಿನಾಯಿತಿಗೆ ಸಂಬಂಧಿಸಿದಂತೆ ಸುತ್ತೋಲೆಯನ್ನು ಹೊರಡಿಸಲಾಗುವುದು. ಹೋಟೆಲ್‍ಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಸಲು ಬೆಸ್ಕಾಂ ಎಲ್ಲ ರೀತಿಯ ಕ್ರಮ ಕೈಗೊಂಡಿದ್ದು, ಪ್ರಕೃತಿ ವಿಕೋಪದಂತಹ ಸಂದರ್ಭಗಳನ್ನು ಹೊರತು ಪಡಿಸಿ ಹೋಟೆಲ್‍ಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಸಲಾಗುವುದು ಎಂದು ತಿಳಿಸಿದೆ.

    ಕುಂಬಳಗೋಡು ಪ್ರದೇಶದಲ್ಲಿ ಉಂಟಾಗಿರುವ ವಿದ್ಯುತ್ ವ್ಯತ್ಯಾಯದ ಕುರಿತು ಹೋಟೆಲ್ ಸಂಘದ ಪದಾಧಿಕಾರಿಗಳು ಬೆಸ್ಕಾಂ ಗಮನಕ್ಕೆ ತಂದಿದ್ದು, ವಿಪರೀತ ಗಾಳಿ ಮಳೆಗೆ 300 ಕ್ಕೂ ಹೆಚ್ಚು ಮರಗಳು ಮತ್ತು 150 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದಿದ್ದರಿಂದ ಕುಂಬಳಗೋಡು ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಾಯ ಉಂಟಾಗಿತ್ತು. ದುರಸ್ಥಿಗೊಂಡಿರುವ ವಿದ್ಯುತ್ ಕಂಬಗಳನ್ನು ಸರಿಪಡಿಸಲಾಗಿದ್ದು, ಆ ಪ್ರದೇಶದಲ್ಲಿನ ವಿದ್ಯುತ್ ವ್ಯತ್ಯಾಯವನ್ನು ಸರಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಕುಂಬಳಗೋಡು ಪ್ರದೇಶದಲ್ಲಿ ಈಗಿರುವ ಟ್ರಾನ್ಸ್ ಫಾರ್ಮರ್ ಮೇಲ್ದರ್ಜೆಗೆ ಏರಿಸಲು ಕೆಪಿಟಿಸಿಎಲ್ ಕಾರ್ಯಪ್ರವರ್ತವಾಗಿತ್ತು. ಈ ಕೆಲಸ ಇನ್ನೊಂದು ವಾರದಲ್ಲಿ ಪೂರ್ಣಗೊಳ್ಳಲಿದೆ ಎಂದು ಬೆಸ್ಕಾಂ ಹೋಟೆಲ್ ಸಂಘದ ಪದಾಧಿಕಾರಿಗಳಿಗೆ ಭರವಸೆ ನೀಡಿದೆ. ವಿದ್ಯುತ್ ಸಂಬಂಧಿತ ಯಾವುದೇ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ಬೆಸ್ಕಾಂ ಗಮನಕ್ಕೆ ತಂದರೆ, ಅದರ ಆದ್ಯತೆ ಮೇರೆಗೆ ಸರಿಪಡಿಸಲಾಗುವುದು ಎಂದರು. ಇದನ್ನೂ ಓದಿ: ಕಡೇ ಕ್ಷಣದ ಬದಲಾವಣೆ ಮಧ್ಯೆ ಟಿಕೆಟ್ ಘೋಷಣೆ – ಹೈಡ್ರಾಮಾ ಮೂಲಕ ಕಮಲ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ 

    ಎಫ್ ಕೆಸಿಸಿಐ ಅಧ್ಯಕ್ಷ ಐ.ಎಸ್.ಪ್ರಸಾದ್ ಮತ್ತು ಹೋಟೆಲ್ ಸಂಘದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

  • ಹೊಟೇಲ್‍ನಲ್ಲಿ ಇಡ್ಲಿ ತಿಂದು 15 ಮಂದಿ ಅಸ್ವಸ್ಥ

    ಹೊಟೇಲ್‍ನಲ್ಲಿ ಇಡ್ಲಿ ತಿಂದು 15 ಮಂದಿ ಅಸ್ವಸ್ಥ

    ಬಳ್ಳಾರಿ: ಹೋಟೆಲ್‍ನಲ್ಲಿ ಇಡ್ಲಿ ತಿಂದು 15 ಮಂದಿ ಅಸ್ವಸ್ಥಗೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕುರುವಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಹೋಟೆಲ್‍ನಲ್ಲಿ ಇಡ್ಲಿ ತಿಂದು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಬೆಳಗ್ಗೆಯಿಂದ ಪ್ರಾಥಮಿಕ ಆರೋಗ್ಯ ಕೆಂದ್ರದಲ್ಲಿ ಚಿಕಿತ್ಸೆ ಪಡೆದರು. ನಂತರ ಇದೀಗ ಎಲ್ಲರನ್ನೂ ಸಿರಗುಪ್ಪ ತಾಲೂಕು ಸರ್ಕಾರಿ ಅಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಮಕ್ಕಳು ಸಹಿತ ಮಹಿಳೆಯರೂ ಇಡ್ಲಿ ತಿಂದು ಅಸ್ವಸ್ಥಗೊಂಡಿದ್ದಾರೆ. ಇದನ್ನೂ ಓದಿ: ಬೇಬಿ ಫಾರ್ಮುಲಾ ಕೊರತೆ: 118 ಲೀಟರ್ ಎದೆಹಾಲು ಮಾರಾಟ ಮಾಡಿದ ತಾಯಿ

     

  • ಕ್ಯೂಬಾದ ಹೆಸರಾಂತ ಹೋಟೆಲ್‌ನಲ್ಲಿ ಭೀಕರ ಸ್ಫೋಟ – 22 ಮಂದಿ ಸಾವು

    ಹವಾನಾ: ಕ್ಯೂಬಾದ ರಾಜಧಾನಿ ಹವಾನಾದ ಡೌನ್‌ಟೌನ್‌ನಲ್ಲಿರುವ ಪ್ರಸಿದ್ಧ ಹೋಟೆಲ್‌ನಲ್ಲಿ ಶುಕ್ರವಾರ ಭಾರೀ ಸ್ಫೋಟ ಸಂಭವಿಸಿದ್ದು, 22 ಮಂದಿ ಸಾವನ್ನಪ್ಪಿದ್ದಾರೆ. 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

    ನಗರದ ಹೆಸರಾಂತ ಸರಟೋಗಾ ಹೋಟೆಲ್‌ನಲ್ಲಿ ಭಾರೀ ಸ್ಫೋಟಕ್ಕೆ ಅನಿಲ ಸೋರಿಕೆ ಕಾರಣ ಎಂದು ತಿಳಿದುಬಂದಿದೆ. ಸ್ಫೋಟದಿಂದಾಗಿ ಕಟ್ಟಡ ಭಾಗಶಃ ಧ್ವಂಸಗೊಂಡಿದೆ. ಸ್ಫೋಟದ ಬಳಿಕ ಕ್ಯೂಬಾ ಅಧ್ಯಕ್ಷ ಮಾಧ್ಯಮಗಳ ಮುಂದೆ ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಹಸಿರು ಜೆರ್ಸಿಯಲ್ಲಿ ಕಂಗೊಳಿಸಲಿದೆ ಆರ್‌ಸಿಬಿ

    ಸ್ಫೋಟ ಸಂಭವಿಸಿದ ಹೋಟೆಲ್ ಬಳಿಯಲ್ಲಿ ಶಾಲೆಯೂ ಇದ್ದು, 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಫೋಟದ ವೇಳೆ ಹಾಜರಾಗಿದ್ದರು. ಘಟನೆಯಿಂದಾಗಿ 15 ಮಕ್ಕಳು ಗಾಯಗೊಂಡಿದ್ದು, ಒಂದು ಮಗು ಸಾವನ್ನಪ್ಪಿರುವುದಾಗಿ ಆರೋಗ್ಯ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಸಾವಿರ ಟ್ವಿಟ್ಟರ್ ಉದ್ಯೋಗಿಗಳನ್ನು ವಜಾಗೊಳಿಸಲು ಮಸ್ಕ್ ಯೋಜನೆ

    ಸರಟೋಗಾ ಹೋಟೇಲ್ ಕಟ್ಟಡ ಶತಮಾನಕ್ಕೂ ಹಳೆಯದ್ದಾಗಿದ್ದು, ಸ್ಫೋಟದ ಸಮಯದಲ್ಲಿ ಮುಚ್ಚಲಾಗಿತ್ತು. ಕಾರ್ಮಿಕರು ಮಾತ್ರವೇ ಹೋಟೆಲ್ ಒಳಗಿದ್ದರು ಎಂದು ವರದಿಯಾಗಿದೆ.

  • ಎಸಿ ಸ್ಫೋಟ – ಓರ್ವ ಸಾವು, ಐವರಿಗೆ ಗಾಯ

    ಎಸಿ ಸ್ಫೋಟ – ಓರ್ವ ಸಾವು, ಐವರಿಗೆ ಗಾಯ

    ನವದೆಹಲಿ: ಹವಾನಿಯಂತ್ರಣ(ಎಸಿ)ದ ಕಂಪ್ರೆಸರ್ ಸ್ಫೋಟಗೊಂಡ ಪರಿಣಾಮ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿರುವ ಘಟನೆ ಆಗ್ನೇಯ ದೆಹಲಿಯ ಜಾಮಿಯಾ ನಗರದಲ್ಲಿನ ಉಪಾಹಾರ ಗೃಹವೊಂದರಲ್ಲಿ ನಡೆದಿದೆ.

    ಎರಡು ಅಂತಸ್ತಿನ ಕಟ್ಟಡದ ನೆಲ ಅಂತಸ್ತಿನಲ್ಲಿರುವ ಉಪಾಹಾರ ಗೃಹದಲ್ಲಿ ಎಸಿಯನ್ನು ಸರಿಪಡಿಸಲು ನದೀಮ್ ಮತ್ತು ಶಾನ್ ಅವರನ್ನು ಕರೆಸಲಾಗಿತ್ತು. ಈ ವೇಳೆ ಎಸಿ ಸ್ಫೋಟಗೊಂಡಿದ್ದು, ನದೀಮ್ ಅವರ ತಲೆ ಮತ್ತು ಎದೆಯ ಮೇಲೆ ತೀವ್ರವಾಗಿ ಗಾಯವಾಗಿ ರಕ್ತಸ್ರಾವದಿಂದ ಪ್ರಜ್ಞೆ ತಪ್ಪಿದ್ದರು. ನಂತರ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ರಷ್ಯಾದಿಂದ ಬಂತು ಎಸ್ 400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ

    ಉಳಿದಂತೆ ಶಾನ್, ಡ್ಯಾನಿಶ್, ಅಜ್ಜು, ಬಿಜಯ್ ಮತ್ತು ಇಕ್ರಾ ಅವರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವು ಗಂಟೆಗಳ ಬಳಿಕ ಇಕ್ರಾ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    POLICE JEEP

    ಘಟನೆ ಕುರಿತಂಯತೆ ಪ್ರಾಥಮಿಕ ತನಿಖೆ ವೇಳೆ ಮೊದಲಿಗೆ ಅಗ್ನಿಶಾಮಕ ದಳ ಇಲಾಖೆ ಉಪಾಹಾರ ಗೃಹದಲ್ಲಿ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ 13 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದರು. ಆದರೆ ನಂತರ ಎಸಿ ಕಂಪ್ರೆಸರ್ ಆಗಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸರಿಗೆ ತಿಳಿದುಬಂದಿದೆ. ಇದನ್ನೂ ಓದಿ: ಏನಿದು ಎಸ್-400 ಟ್ರಯಂಫ್? ಹೇಗೆ ಕೆಲಸ ಮಾಡುತ್ತೆ? ಅಮೆರಿಕ, ಚೀನಾ, ಪಾಕಿಸ್ತಾನಕ್ಕೆ ಆತಂಕ ಯಾಕೆ?

  • ಹೋಟೆಲ್ ಮಾಲೀಕನಿಗೆ 2.4 ಲಕ್ಷ ರೂ. ಪಂಗನಾಮ, ಸ್ವಾಗತಕಾರ ಪರಾರಿ

    ಹೋಟೆಲ್ ಮಾಲೀಕನಿಗೆ 2.4 ಲಕ್ಷ ರೂ. ಪಂಗನಾಮ, ಸ್ವಾಗತಕಾರ ಪರಾರಿ

    ಬೆಂಗಳೂರು: ಸ್ವಾಗತಕಾರನೊಬ್ಬನು 2.4 ಲಕ್ಷ ರೂ. ಹಣವನ್ನು ಹೋಟೆಲ್ ಮಾಲೀಕರೊಬ್ಬರಿಗೆ ವಂಚಿಸಿ, ಪರಾರಿಯಾದ ಘಟನೆ ಜಯನಗರದಲ್ಲಿ ನಡೆದಿದೆ.

    ಮೊರ್ನಾಕ್ ಇಂಟರ್ ನ್ಯಾಷನಲ್ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿದ್ದ ಜಾಬಿರ್ ಹುಸೇನ್ ಮೂಲತಃ ಅಸ್ಸಾಂ ರಾಜ್ಯದವನಾಗಿದ್ದಾನೆ. ಜಾಬೀರ್ ಮೂರು ವರ್ಷಗಳಿಂದ ಅದೇ ಹೋಟೆಲ್‍ನಲ್ಲಿ ಕೆಲಸ ಮಾಡಿಕೊಂಡಿದ್ದ. ಇದನ್ನೂ ಓದಿ: ಶಕ್ತಿ ಸ್ವರೂಪಿಣಿ ದೇವಿಯು ಅಪಾರ ದ್ವೇಷದಿಂದ ಕೂಡಿದ ಬಿಜೆಪಿ ನಾಯಕರ ಆತ್ಮವನ್ನು ಶುದ್ಧೀಕರಿಸಲಿ: ಸುರ್ಜೇವಾಲಾ

    BRIBE

    ಹೋಟೆಲ್‍ಗೆ ಬರುತ್ತಿದ್ದ ಗ್ರಾಹಕರಿಗೆ ಹೋಟೆಲ್ ಬ್ಯಾಂಕ್ ಖಾತೆ ಕೊಡುವುದು ಬಿಟ್ಟು ತನ್ನ ಖಾತೆ ನೀಡಿ ಹಣ ಹಾಕಿಸಿಕೊಳ್ಳುತ್ತಿದ್ದ. ಬಳಿಕ ಕಲೆಕ್ಷನ್ ಆಗಿದ್ದ 2.40 ಲಕ್ಷ ರೂ. ಹಣವನ್ನು ಮಾಲೀಕನಿಗೆ ನೀಡದೇ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಮದ್ಯದ ಬಾಟಲಿಯಿಂದ ಸಿಕ್ಕಿ ಬಿದ್ರು 2 ಕೋಟಿ ಕದ್ದ ಖದೀಮರು

    ಏಪ್ರಿಲ್ 3 ರಂದು ಬೆಳಗ್ಗೆ ಟೀ ಕುಡಿದು ಬರುತ್ತೇನೆ ಅಂತ ಹೊರಗಡೆ ಬಂದು ಎಸ್ಕೇಪ್ ಆಗಿದ್ದಾನೆ. ಬಳಿಕ ಆತನ ನಂಬರಿಗೆ ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಈ ವೇಳೆ ಹೋಟೆಲ್ ಮಾಲೀಕ ಹರೀಶ್ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೋಲಿಸರು ಆರೋಪಿಗಾಗಿ ಬಲೆ ಬಿಸಿದ್ದಾರೆ.