ಬೆಂಗಳೂರು: ಖಾಸಗಿ ಹೋಟೆಲ್‌ನ (Hotel) 19ನೇ ಫ್ಲೋರ್‌ನಿಂದ ಬಿದ್ದು ಯುವಕ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.
ಮಾದವನಗರದಲ್ಲಿರುವ (Madavanagar) ಖಾಸಗಿ ಹೋಟೆಲ್‌ವೊಂದರಲ್ಲಿ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ತಮಿಳುನಾಡು ಮೂಲದ ಶರಣ್ (28) ಎಂದು ತಿಳಿದುಬಂದಿದೆ. ಈತ ಭಾನುವಾರ ಹೋಟೆಲ್‌ಗೆ ಬಂದು ಚೆಕ್ ಇನ್ ಆಗಿದ್ದು, ಬ್ಯುಸಿನೆಸ್ ವಿಚಾರವಾಗಿ ಬಂದಿರುವುದಾಗಿ ರಿಸೆಪ್ಷನ್ ಬುಕ್‌ನಲ್ಲಿ ಎಂಟ್ರಿ ಮಾಡಿದ್ದ. ಈ ಹಿಂದೆ ಕೂಡ ಈತ ಹೋಟೆಲ್‌ಗೆ ಬಂದು ಉಳಿದುಕೊಂಡಿದ್ದ. ಈ ಬಾರಿ ಎರಡು ದಿನ ಉಳಿಯೋದಾಗಿ ಹೋಟೆಲ್ ಸಿಬ್ಬಂದಿಗೆ ಹೇಳಿದ ಈತ ಇಂದು ಮಧ್ಯಾಹ್ನ 2 ಗಂಟೆಯ ಸುಮಾರಿಗೆ 19ನೇ ಫ್ಲೋರ್‌ನ ಬಾಲ್ಕನಿಗೆ ಬಂದು ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಶೋಭಾ ಕರಂದ್ಲಾಜೆ ಕಾರಿಗೆ ಬೈಕ್ ಡಿಕ್ಕಿ- ಸವಾರ ಸಾವು
ಆತ್ಮಹತ್ಯೆ ಮಾಡಿಕೊಳ್ಳುವ ಅರ್ಧಗಂಟೆಗೂ ಮೊದಲು ಈತ ತನ್ನ ರೂಮಿನಿಂದ ಹೊರಗೆ ಬಂದು ಬಾಲ್ಕನಿಯಲ್ಲಿ ಕುಳಿತಿದ್ದು, ಆತ್ಮಹತ್ಯೆ ಮಾಡಿಕೊಳ್ಳಬೇಕೋ ಬೇಡವೋ ಎಂದು ಯೋಚಿಸಿದ್ದ ಎಂದು ಶಂಕಿಸಲಾಗಿದೆ. ಕೊನೆಗೆ 19ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಹೈಗ್ರೌಂಡ್ಸ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ನಿಂತಿದ್ದ ಕಸದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ – ಟೆಕ್ಕಿ ಸ್ಥಳದಲ್ಲೇ ಸಾವು!
ಮುಂಬೈ: ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಯನ್ನು 8 ಮಂದಿ ದುಷ್ಕರ್ಮಿಗಳ ತಂಡವು ಮಾರಣಾಂತಿಕವಾಗಿ ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ನಡೆದಿದೆ.
ಮೃತನನ್ನು ಅವಿನಾಶ್ ಧನ್ವೆ (31) ಎಂದು ಗುರುತಿಸಲಾಗಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಂದಾಪುರ ಪ್ರದೇಶದಲ್ಲಿ ಶನಿವಾರ ರಾತ್ರಿ ಈ ಘಟನೆ ಸಂಭವಿಸಿದ್ದು, ಹಳೆಯ ದ್ವೇಷದಿಂದ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಿಸಿಟಿವಿಯಲ್ಲಿ ಏನಿದೆ..?: ಅವಿನಾಶ್ ಧನ್ವೆ ಸಹಿತ ನಾಲ್ವರು ಪುಣೆ-ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೋಟೆಲ್ ಜಗದಂಬಾದಲ್ಲಿ ಕುಳಿತಿರುತ್ತಾರೆ. ಧನ್ವೆ ಫೋನಿನಲ್ಲಿ ಮಾತನಾಡುತ್ತಿರುತ್ತಾನೆ. ಈ ವೇಳೆ ಇಬ್ಬರು ಬಂದು ಏಕಾಏಕಿ ಧನ್ವೆ ಮೇಲೆ ಗುಂಡಿನ ಸುರಿಮಳೆಗೈಯುತ್ತಾರೆ. ಇದರಿಂದ ಉಳಿದ ಮೂವರು ಗಾಬರಿಗೊಂಡು ಅಲ್ಲಿಂದ ಎಸ್ಕೇಪ್ ಆಗುತ್ತಾರೆ. ಇತ್ತ ಮತ್ತೆ 3-4 ಮಂದಿ ಓಡೋಡಿ ಬಂದು ಮಚ್ಚಿನಿಂದ ಮನಬಂದಂತೆ ಮಾರಣಾಂತಿಕವಾಗಿ ಹಲ್ಲೆ ಮಾಡುತ್ತಾರೆ. ಪರಿಣಾಮ ಧನ್ವೆ ಸ್ಥಳದಲ್ಲಿಯೇ ಸಾವನ್ನಪ್ಪುತ್ತಾನೆ. ಇದನ್ನೂ ಓದಿ: ಬೀದರ್‌ನಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ- ನಾನಾ ಅವಾಂತರ ಸೃಷ್ಠಿ
ಇತ್ತ ಧನ್ವೆ ಸಾವನ್ನಪ್ಪುತ್ತಿದ್ದಂತೆಯೇ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗುವುದನ್ನು ಸಿಸಿಟಿವಿ ದೃಶ್ಯದಲ್ಲಿ ಕಾಣಬಹುದಾಗಿದೆ. ಐದರಿಂದ ಆರು ಮಂದಿ ಕಾರಿನಲ್ಲಿ ಬಂದು ಹೋಟೆಲ್‌ಗೆ ಧಾವಿಸಿ ಕೃತ್ಯ ಎಸಗಿರುವುದು ಸಿಸಿಟಿವಿಯಿಂದ ಬಯಲಾಗಿದೆ. ಸದ್ಯ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಸಿಸಿಟಿವಿ ದೃಶ್ಯಗಳ ಮೂಲಕ 8 ಮಂದಿ ದುಷ್ಕರ್ಮಿಗಳನ್ನು ಗುರುತಿಸಿದ್ದೇವೆ. ಸದ್ಯ ಅವರನ್ನು ಬಂಧಿಸಲು ತಂಡಗಳನ್ನು ರಚಿಸಿದ್ದೇವೆ ಎಂದು ಪುಣೆ ಗ್ರಾಮಾಂತರ ಠಾಣೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಹರಿಯಾಣ: ಕಳೆದ ಒಂದು ವಾರಗಳ ಹಿಂದೆಯಷ್ಟೇ ಗುರುಗ್ರಾಮ್‌ನ ಹೋಟೆಲ್‌ವೊಂದರಲ್ಲಿ (Gurugram Hotel) ಗುಂಡು ಹಾರಿಸಿ ಹತ್ಯೆಗೀಡಾದ ಮಾಜಿ ಮಾಡೆಲ್ ದಿವ್ಯಾ ಪಹುಜಾ (Divya Pahuja) ಅವರ ಮೃತದೇಹವು ಹರಿಯಾಣದ ಕಾಲುವೆಯಲ್ಲಿ ಪತ್ತೆಯಾಗಿದೆ. ಪಂಜಾಬ್‌ನ ಭಾಕ್ರಾ ಕಾಲುವೆಯಲ್ಲಿ ಮೃತದೇಹವನ್ನು ಎಸೆಯಲಾಗಿದ್ದು, ಪಕ್ಕದ ರಾಜ್ಯಕ್ಕೆ ತೇಲಿಹೋಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಹರಿಯಾಣದ ಕಾಲುವೆಯಲ್ಲಿ ಪತ್ತೆಯಾದ ಮೃತದೇಹವನ್ನು ಗುರುಗ್ರಾಮ್ ಪೊಲೀಸರ ತಂಡವು ಹೊರತೆಗೆದು, ಪಹುಜಾ ಕುಟುಂಬಕ್ಕೆ ಫೋಟೋಗಳನ್ನ ಕಳುಹಿಸಿದೆ. ಕುಟುಂಬಸ್ಥರು ಮೃತದೇಹವನ್ನು ಗುರುತಿಸಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ (ಜ.12) ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಆರೋಪಿ ಬಾಲರಾಜ್ ಗಿಲ್ ಎಂಬಾತನನ್ನು ಗುರುಗ್ರಾಮ್ ಪೊಲೀಸರ ತಂಡ ಬಂಧಿಸಿ ವಿಚಾರಣೆಗೆ ಒಳಪಡಿಸಿತ್ತು. ಈ ವೇಳೆ ಆರೋಪಿ, ಜನವರಿ 2 ರಂದು ಕೊಲೆ ಮಾಡಿ, ಮರುದಿನ ಗುರುಗ್ರಾಮ್‌ನಿಂದ ಸುಮಾರು 270 ಕಿಮೀ ದೂರದಲ್ಲಿರುವ ಪಟಿಯಾಲದ ಕಾಲುವೆಯಲ್ಲಿ ಎಸೆದಿದ್ದೆವು ಎಂದು ಒಪ್ಪಿಕೊಂಡಿದ್ದ. ಆರೋಪಿ ಹೇಳಿಕೆ ಪಡೆದು ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ಹರಿಯಾಣದ ಕಾಲುವೆಯಲ್ಲಿ ಮೃತದೇಹವನ್ನು ಪತ್ತೆಹಚ್ಚಿದ್ದಾರೆ. ಇದನ್ನೂ ಓದಿ: ದರ್ಶನ್ ಟಾರ್ಗೆಟ್: ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ
ಏನಿದು ಘಟನೆ?
ಜನವರಿ 2 ರಂದು ಗುರ್ಗಾಂವ್ ಹೋಟೆಲ್‌ನಲ್ಲಿ ದಿವ್ಯಾ ಪಹುಜಾ (27) ಅವರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿತ್ತು. ಬಳಿಕ ಆಕೆಯ ಶವವನ್ನು ಹೋಟೆಲ್‌ನಿಂದ ಕಾರಿಗೆ ಎಳೆದೊಯ್ಯುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಶಂಕಿತ ಆರೋಪಿ ಅಭಿಜಿತ್ ಸೇರಿದಂತೆ ಪ್ರಕಾಶ್ ಮತ್ತು ಇಂದ್ರಜ್ ಎಂಬವರನ್ನು ಗುರುಗ್ರಾಮ್ ಕ್ರೈಂ ಬ್ರಾಂಚ್ ಅಧಿಕಾರಿಗಳು ಬಂಧಿಸಿದ್ದರು. ಪ್ರಕಾಶ್ ಮತ್ತು ಇಂದ್ರಜ್ ಇಬ್ಬರೂ ಅಭಿಜಿತ್‌ನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿತ್ತು. ಹೋಟೆಲ್ ಮಾಲೀಕ ಅಭಿಜಿತ್ ತನ್ನ ಸಹಚರರೊಂದಿಗೆ ಸೇರಿ ದಿವ್ಯಾಳನ್ನು ಕೊಲೆ ಮಾಡಿ ನಂತರ ಆಕೆಯ ಶವವನ್ನು ವಿಲೇವಾರಿ ಮಾಡಲು ತನ್ನ ಸಹಚರರಿಗೆ 10 ಲಕ್ಷ ರೂ. ನೀಡಿದ್ದಾನೆ ಎಂದು ಮೂಲಗಳಿಂದ ತಿಳಿದುಬಂದಿತ್ತು.
ದಿವ್ಯಾ ಪಹುಜಾ ಯಾರು?
ದಿವ್ಯಾ ಪಹುಜಾ 2016ರ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಗ್ಯಾಂಗ್‌ಸ್ಟರ್ ಸಂದೀಪ್ ಗಡೋಲಿಯ ಗೆಳತಿ. ಹನಿಟ್ರ್ಯಾಪ್ ಮೂಲಕ ದಿವ್ಯಾ ಪಹುಜಾ ಸಂದೀಪ್‌ನನ್ನು ಕರೆಸಿಕೊಂಡು ಬಳಿಕ ಪೊಲೀಸರ ಸಹಾಯದಿಂದ ನಕಲಿ ಎನ್‌ಕೌಂಟರ್‌ನಲ್ಲಿ ಆತನನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ಮುಂಬೈ ಪೊಲೀಸರು ತಿಳಿಸಿದ್ದರು. ಈ ಪ್ರಕರಣದಲ್ಲಿ ದಿವ್ಯಾ ಪ್ರಮುಖ ಆರೋಪಿಯಾಗಿದ್ದಳು, ಅಲ್ಲದೇ ಆಕೆಯ ತಾಯಿ ಮತ್ತು ಐವರು ಪೊಲೀಸ್ ಸಿಬ್ಬಂದಿಯ ವಿರುದ್ಧವೂ ಹತ್ಯೆ ಪ್ರಕರಣ ದಾಖಲಾಗಿತ್ತು. ಕಳೆದ ವರ್ಷವಷ್ಟೇ ದಿವ್ಯಾಳಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿತ್ತು. ಜಾಮೀನು ಪಡೆಯುವ ಮೊದಲು ದಿವ್ಯಾ ಸುಮಾರು 7 ವರ್ಷಗಳ ಕಾಲ ಜೈಲಿನಲ್ಲಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು: ಹೋಟೆಲ್‌ಗೆ ಊಟಕ್ಕೆ ಹೋಗೋಣ ಎಂದು ಹೇಳಿ ಕಂಪೆನಿ ವ್ಯವಸ್ಥಾಪಕನೇ ಮಹಿಳಾ ಸಹೋದ್ಯೋಗಿಯನ್ನು ಮನೆಗೆ ಕರೆದೊಯ್ದು ಅತ್ಯಾಚಾರ ನಡೆಸಿದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಹೊಸ ವರ್ಷದ ಮುನ್ನಾ ದಿನ ಡಿಸೆಂಬರ್ 31ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅತ್ಯಾಚಾರಕ್ಕೀಡಾದ ಸಂತ್ರಸ್ತೆಯ ಪತಿಯೂ ಇದೇ ಕಂಪೆನಿಯಲ್ಲಿ (Private Company) ಕೆಲಸ ಮಾಡುತ್ತಿದ್ದರು ಎಂಬ ವಿಚಾರವೂ ಬೆಳಕಿಗೆ ಬಂದಿದೆ.
ಘಟನೆ ವಿವರ: ಡಿಸೆಂಬರ್ 31ರಂದು ಊಟಕ್ಕೆ ಕರೆದೊಯ್ದು ಮಹಿಳಾ ಸಹೋದ್ಯೋಗಿ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಬಸವೇಶ್ವರ ನಗರದಲ್ಲಿರುವ ಕಾಲ್ ಸೆಂಟರ್ ಕಂಪೆನಿ ವ್ಯವಸ್ಥಾಪಕ ಕೆ.ಆರ್ .ಪುರಂ ನಿವಾಸಿ ಸೈಯದ್ ಅಕ್ರಂ ಬಂಧಿತ ಆರೋಪಿ. 32 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಬಸವೇಶ್ವರ ನಗರ ಪೊಲೀಸರು (Basaveshwaranagara Police) ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾನೆ. ಇದನ್ನೂ ಓದಿ: ಮೆಟ್ರೋ ರೈಲು ಬಂದಾಗ ಏಕಾಏಕಿ ಹಳಿಗೆ ಧುಮುಕಿ ಆತ್ಮಹತ್ಯೆಗೆ ಯತ್ನ- ICUವಿನಲ್ಲಿ ಚಿಕಿತ್ಸೆ
ದೂರಿನಲ್ಲೇನಿದೆ?
ನಾನು ಮತ್ತು ನನ್ನ ಪತಿ ಬಸವೇಶ್ವರನಗರದ ಕಂಪನಿಯಲ್ಲಿ ಟೆಲಿ ಕಾಲಿಂಗ್ ಕೆಲಸ ಮಾಡಿಕೊಂಡಿದ್ದೇವೆ. ನಮ್ಮ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಸೈಯದ್ ಅಕ್ರಂ ಎಂಬುವವರು ಕೆಲಸ ಮಾಡಿಕೊಂಡಿರುತ್ತಾರೆ. 31 ಡಿಸೆಂಬರ್ 2023 ರಂದು ಮಧ್ಯಾಹ್ನ ಸುಮಾರು 1 ಗಂಟೆಯ ಸಮಯಕ್ಕೆ ಊಟ ಮಾಡಲು ಹೋಟೆಲ್ ಗೆ ಹೋಗೋಣವೆಂದು ಹೇಳಿದ್ದಾರೆ. ಬಳಿಕ ತನ್ನ ಬೈಕಿನಲ್ಲಿ ಆತನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರವನ್ನು ಮಾಡಿದ್ದಾರೆ. ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುದಾಗಿ ಬೆದರಿಕೆಯನ್ನು ಹಾಕಿದ್ದಾರೆ. ಇದನ್ನೂ ಓದಿ: ಧೋನಿಗೆ 15 ಕೋಟಿ ರೂ. ದೋಖಾ – ಮಾಜಿ ಪಾಲುದಾರರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ ಮಹಿ
ಘಟನೆ ನಡೆದ ಎರಡು ದಿನಗಳ ಬಳಿಕ ಜನವರಿ 2ರಂದು ಬೆಂಗಳೂರಿನ ಬಸವೇಶ್ವರ ನಗರ ಠಾಣೆಯಲ್ಲಿ ಸೈಯದ್ ಅಕ್ರಂ ವಿರುದ್ಧ ಪ್ರಕರಣ ದಾಖಲಾಗಿದೆ.
ನವದೆಹಲಿ: ಗುರುಗ್ರಾಮ್‌ನ (Gurugram) ಹೋಟೆಲ್‌ವೊಂದರಲ್ಲಿ (Hotel) 27 ವರ್ಷದ ಮಾಜಿ ಮಾಡೆಲ್ (Ex Model) ಒಬ್ಬಳನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಯಾದಾಕೆಯನ್ನು ದಿವ್ಯಾ ಪಹುಜಾ (Divya Pahuja) ಎಂದು ಗುರುತಿಸಲಾಗಿದ್ದು, ಕೊಲೆ ನಡೆದ ಹೋಟೆಲ್‌ನ ಮಾಲೀಕ ಅಭಿಜಿತ್ ಸಿಂಗ್ ಎಂಬಾತ ಆಕೆಯನ್ನು ಕೊಲೆಗೈದಿದ್ದಾನೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಶಂಕಿತ ಆರೋಪಿ ಅಭಿಜಿತ್ ಸೇರಿದಂತೆ ಪ್ರಕಾಶ್ ಮತ್ತು ಇಂದ್ರಜ್ ಎಂಬವರನ್ನು ಗುರುಗ್ರಾಮ್ ಕ್ರೈಂ ಬ್ರಾಂಚ್ ಬಂಧಿಸಿದೆ. ಪ್ರಕಾಶ್ ಮತ್ತು ಇಂದ್ರಜ್ ಇಬ್ಬರೂ ಅಭಿಜಿತ್‌ನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಜಪಾನ್ ವಿಮಾನ ಅವಘಡ- ಕೋಸ್ಟ್ ಗಾರ್ಡ್‌ನ ಐವರು ಸಿಬ್ಬಂದಿ ದುರ್ಮರಣ
ಹೋಟೆಲ್ ಮಾಲೀಕ ಅಭಿಜಿತ್ ತನ್ನ ಸಹಚರರೊಂದಿಗೆ ಸೇರಿ ದಿವ್ಯಾಳನ್ನು ಕೊಲೆ ಮಾಡಿ ನಂತರ ಆಕೆಯ ಶವವನ್ನು ವಿಲೇವಾರಿ ಮಾಡಲು ತನ್ನ ಸಹಚರರಿಗೆ 10 ಲಕ್ಷ ರೂ. ನೀಡಿದ್ದಾನೆ ಎನ್ನಲಾಗಿದೆ. ಘಟನೆ ಕುರಿತಂತೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಭಿಜಿತ್ ಸೇರಿದಂತೆ ಕೊಲೆ ಆರೋಪಿಗಳು ನೀಲಿ ಬಣ್ಣದ ಬಿಎಂಡಬ್ಲ್ಯು ಕಾರಿನಲ್ಲಿ ದಿವ್ಯಾಳ ಶವವನ್ನು ತೆಗೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಇದನ್ನೂ ಓದಿ: Iran Blasts: ಅವಳಿ ಬಾಂಬ್ ಸ್ಫೋಟದಲ್ಲಿ 103 ಸಾವು, 141ಕ್ಕೂ ಹೆಚ್ಚು ಮಂದಿಗೆ ಗಾಯ
ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ಘಟನೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಅಭಿಜಿತ್, ಯುವತಿ ಮತ್ತು ಇನ್ನೊಬ್ಬ ವ್ಯಕ್ತಿ ಜನವರಿ 2 ರಂದು (ಮಂಗಳವಾರ) ಮುಂಜಾನೆ 4 ಗಂಟೆಗೆ ಹೋಟೆಲ್‌ಗೆ ಆಗಮಿಸಿ ಕೊಠಡಿಯೊಂದಕ್ಕೆ ಹೋಗುತ್ತಿರುವ ದೃಶ್ಯವನ್ನು ತೋರಿಸುತ್ತದೆ. ನಂತರ ರಾತ್ರಿ ಅಭಿಜಿತ್ ಮತ್ತು ಇತರರು ದಿವ್ಯಾಳ ದೇಹವನ್ನು ಎಳೆದುಕೊಂಡು ಹೋಗುವುದು ಕೂಡಾ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಮಕ್ಕಳು ಹೂ ಕಿತ್ತಿದ್ದಕ್ಕೆ ಅಂಗನವಾಡಿ ಸಹಾಯಕಿ ಮೂಗು ಕತ್ತರಿಸಿದ ಮಾಲೀಕ
ಗುರುಗ್ರಾಮ್ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕೊಲೆಯ ತನಿಖೆ ನಡೆಸುತ್ತಿದ್ದಾರೆ. ಕ್ರೈಂ ಬ್ರಾಂಚ್‌ನ ಹಲವಾರು ತಂಡಗಳು ಪಂಜಾಬ್ ಮತ್ತು ಇತರ ಪ್ರದೇಶಗಳಲ್ಲಿ ಶವವನ್ನು ಪತ್ತೆಹಚ್ಚಲು ಶೋಧ ನಡೆಸುತ್ತಿವೆ. ದಿವ್ಯಾ ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ಅಭಿಜಿತ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ದಲಿತ ಯುವತಿಯ ಅತ್ಯಾಚಾರ ಮಾಡಿ ಕತ್ತು ಹಿಸುಕಿ ಹತ್ಯೆ ಮಾಡಿದ ಪೊಲೀಸ್ ಪೇದೆ
ದಿವ್ಯಾ ಪಹುಜಾ ಯಾರು?: ದಿವ್ಯಾ ಪಹುಜಾ 2016ರ ಗ್ಯಾಂಗ್‌ಸ್ಟರ್ ಸಂದೀಪ್ ಗಡೋಲಿ ‘ನಕಲಿ’ ಎನ್‌ಕೌಂಟರ್ ಪ್ರಕರಣದಲ್ಲಿ ಆರೋಪಿಯಾಗಿದ್ದಳು. ಅಲ್ಲದೇ ಈಕೆ ಸಂದೀಪ್ ಗಡೋಲಿಯ ಗೆಳತಿಯಾಗಿದ್ದಳು. ಹನಿಟ್ರ್ಯಾಪ್ ಮೂಲಕ ದಿವ್ಯಾ ಪಹುಜಾ ಸಂದೀಪ್‌ನನ್ನು ಕರೆಸಿಕೊಂಡು ಬಳಿಕ ಪೊಲೀಸರ ಸಹಾಯದಿಂದ ನಕಲಿ ಎನ್‌ಕೌಂಟರ್‌ನಲ್ಲಿ ಆತನನ್ನು ಗುಂಡಿಕ್ಕಿ ಕೊಲ್ಲಲಾಯಿತು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬಸ್, ಟ್ರಕ್ ನಡುವೆ ಅಪಘಾತ – 12 ಮಂದಿ ದುರ್ಮರಣ
ಗ್ಯಾಂಗ್‌ಸ್ಟರ್ ಸಂದೀಪ್ ಗಡೋಲಿಯ ಸಹೋದರಿ ಸುದೇಶ್ ಕಟಾರಿಯಾ ಮತ್ತು ಆತನ ಸಹೋದರ ಬ್ರಹ್ಮ್ ಪ್ರಕಾಶ್ ಅವರು ಅಭಿಜಿತ್ ಜೊತೆ ಶಾಮೀಲಾಗಿ ಆಕೆಯ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ದಿವ್ಯಾ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಹೋಟೆಲ್ ಮಾಲೀಕ ಅಭಿಜಿತ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: ನಾನು ಸತ್ತೇ ಹೋದೆ ಅಂದ್ಕೊಂಡೆ – ಅವಘಡಕ್ಕೀಡಾದ ವಿಮಾನದೊಳಗಿದ್ದ ಪ್ರಯಾಣಿಕ
ಸಂದೀಪ್ ಗಡೋಲಿ ಹತ್ಯೆಯ ಆರೋಪಿ ದಿವ್ಯಾ ಪಹುಜಾಳಿಗೆ ಕಳೆದ ವರ್ಷ ಜೂನ್‌ನಲ್ಲಿ ಬಾಂಬೆ ಹೈಕೋರ್ಟ್ ಜಾಮೀನು ನೀಡಿತ್ತು. 2016 ಫೆಬ್ರವರಿ 6ರಂದು ಮುಂಬೈನ ಹೋಟೆಲ್‌ನಲ್ಲಿ ನಡೆದ ‘ನಕಲಿ’ ಎನ್‌ಕೌಂಟರ್‌ನಲ್ಲಿ ದಿವ್ಯಾ, ಆಕೆಯ ತಾಯಿ ಮತ್ತು ಐವರು ಪೊಲೀಸ್ ಸಿಬ್ಬಂದಿಯ ಮೇಲೆ ಗಡೋಲಿ ಹತ್ಯೆಯ ಪ್ರಕರಣ ದಾಖಲಾಗಿತ್ತು. ಜಾಮೀನು ಪಡೆಯುವ ಮೊದಲು ದಿವ್ಯಾ ಸುಮಾರು ಏಳು ವರ್ಷಗಳ ಕಾಲ ಜೈಲಿನಲ್ಲಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ; ಮಹಿಳೆ ಅರೆಬೆತ್ತಲೆಗೊಳಿಸಿ ಹಲ್ಲೆ ಆರೋಪ – 20 ಜನರ ವಿರುದ್ಧ ದೂರು
ರಾಯಚೂರು: ಗ್ರಾಹಕನೊಬ್ಬ ಹೊಟೇಲ್ ಮಾಲೀಕನ ಮೇಲೆ ಅಡುಗೆ ಎಣ್ಣೆ ಎರಚಿದ ಪ್ರಕರಣವೊಂದು ರಾಯಚೂರಿನಲ್ಲಿ (Raichur) ಬೆಳಕಿಗೆ ಬಂದಿದೆ.
ರಾಯಚೂರಿನ ಮಾನ್ವಿ ತಾಲೂಕಿನ ರಾಜೋಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಗಾಯಾಳು ಹೋಟೆಲ್ (Hotel) ಮಾಲೀಕನನ್ನು ರಂಗಯ್ಯ ಶೆಟ್ಟಿ ಎಂದು ಗುರುತಿಸಲಾಗಿದೆ. ಅದೇ ಗ್ರಾಮದ ಭೀಮಾ ನಾಯಕ್ ಎಂಬಾತ ಈ ಕೃತ್ಯ ಎಸಗಿದ್ದಾನೆ.
ನಡೆದಿದ್ದೇನು..?: ಇಂದು ಬೆಳ್ಳಂಬೆಳಗ್ಗೆ ಭೀಮಾ ನಾಯಕ್ ಹೋಟೆಲ್‍ಗೆ ಬಂದಿದ್ದಾನೆ. ಹೀಗೆ ಬಂದವನು ಇಡ್ಲಿ ಕೊಡಿ ಎಂದು ಕೇಳಿದ್ದಾನೆ. ಆಗ ಮಾಲೀಕ ರಂಗಯ್ಯ, ಇಡ್ಲಿ ಇಲ್ಲ ಎಂದು ಹೇಳಿ ವಾಪಸ್ ಕಳಿಸಿದ್ದಾರೆ. ಅಂತೆಯೇ ಹೋದ ಭೀಮಾ ನಾಯಕ್ ಸ್ವಲ್ಪ ಹೊತ್ತಿನ ಬಳಿಕ ಮತ್ತೆ ವಾಪಸ್ ಹೋಟೆಲ್‍ಗೆ ಬಂದಿದ್ದಾನೆ. ಇದನ್ನೂ ಓದಿ: ಪಂಚ ರಾಜ್ಯಗಳ ಮತದಾರರು ಕಾಂಗ್ರೆಸ್ ಗ್ಯಾರಂಟಿ ಭಜನೆಗೆ ಮರುಳಾಗಬಾರದು: ಹೆಚ್‍ಡಿಕೆ
ಈ ವೇಳೆ ಒಗ್ಗರಣೆ ಮಿರ್ಚಿ ಕೊಡುವಂತೆ ಕೇಳಿದ್ದಾನೆ. ಆದರೆ ಇದು ತಂದುಕೊಡುವುದು ಸ್ವಲ್ಪ ತಡವಾಗಿದೆ. ಇದರಿಂದ ಸಿಟ್ಟಿಗೆದ್ದ ಭೀಮಾ ನಾಯಕ್, ಉಪ್ಪಿಟ್ಟು ಮಾಡಲು ಇಟ್ಟಿದ್ದ ಬಿಸಿ ಎಣ್ಣೆಯನ್ನು ರಂಗಯ್ಯ ಮುಖಕ್ಕೆ ಎರಚಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಇತ್ತ ಗಾಯಗೊಂಡ ರಂಗಯ್ಯ ಅವರನ್ನು ಕುಡಲೇ ಮಾನ್ವಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಚಿಕಿತ್ಸೆ ಮುಂದುವರಿದಿದೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಹುಬ್ಬಳ್ಳಿ: ಕಾಮ ತೃಷೆಗಾಗಿ ಅಪ್ರಾಪ್ತ ಬಾಲಕರೊಂದಿಗೆ ಲೈಂಗಿಕ ಕ್ರಿಯೆ ನಡೆಸಿ, ಅದನ್ನು ವೀಡಿಯೋ ಮಾಡಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಹುಬ್ಬಳ್ಳಿ (Hubballi) ಪ್ರತಿಷ್ಠಿತ ಹೋಟೆಲ್ ಕುಕ್‌ನನ್ನು (ಬಾಣಸಿಗ) ಸ್ಥಳೀಯರು ಹಿಡಿದು, ಥಳಿಸಿ ಪೊಲೀಸರಿಗೆ (Police) ಒಪ್ಪಿಸಿರುವ ಘಟನೆ ನಡೆದಿದೆ.
ನಗರದ ಸಿದ್ಧಲಿಂಗೇಶ್ವರ ಕಾಲೋನಿಯಲ್ಲಿ ವಾಸವಿದ್ದ ಒಡಿಶಾ ಮೂಲದ ಕುಕ್, ನಗರದ ಪ್ರತಿಷ್ಠಿತ ಹೋಟೆಲೊಂದರಲ್ಲಿ (Hotel) ಕೆಲಸ ಮಾಡುತ್ತಿದ್ದ. ಸಲಿಂಗಕಾಮಿಯಾಗಿದ್ದ ಈತ ಅಪ್ರಾಪ್ತ ಮಕ್ಕಳನ್ನೇ ಟಾರ್ಗೆಟ್ ಮಾಡಿ ಹಣ ಮತ್ತು ಚಾಕ್ಲೇಟ್ ಆಸೆ ತೋರಿಸಿ ಲೈಂಗಿಕ ಕ್ರಿಯೆ ನಡೆಸಿ ವೀಡಿಯೋ ಮಾಡ್ತಿದ್ದ. ಬಳಿಕ ಅದೇ ವೀಡಿಯೋ ಇಟ್ಟುಕೊಂಡು ಮಕ್ಕಳಿಗೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಲಿಂಗಾಯತ ವಿರೋಧಿ ಅಲ್ಲ; ಲಿಂಗಾಯತ ಅಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ ಬಸವರಾಜ ರಾಯರೆಡ್ಡಿ
ಬೆಂಗಳೂರು: ಡಿಎಂಕೆ (DMK) ಮುಖಂಡ ವಿ.ಕೆ.ಗುರುಸ್ವಾಮಿ (V.K Guruswamy) ಮೇಲೆ ಹಲ್ಲೆ ನಡೆದಿದ್ದ ಹೋಟೆಲ್‍ನಲ್ಲಿ ವಿಶೇಷ ಪೂಜೆ ಹೋಮ-ಹವನ ಮಾಡಲಾಗಿದೆ.
ಹೌದು. ಸೋಮವಾರ ಸಂಜೆ ಬಾಣಸವಾಡಿಯ ಸುಖ್ ಸಾಗರ್ ಹೋಟೆಲ್ ನಲ್ಲಿ ಗುರುಸ್ವಾಮಿ ಮೇಲೆ ಅಟ್ಯಾಕ್ ಆಗಿತ್ತು. ಹಲ್ಲೆಯಿಂದ ಹೋಟೆಲ್ ತುಂಬಾ ರಕ್ತ ಚೆಲ್ಲಿತ್ತು. ಹೋಟೆಲ್‍ನಲ್ಲಿ ರಕ್ತ ಹರಿದಿದ್ದಕ್ಕೆ ಹೋಟೆಲ್ ಸ್ವಚ್ಛಗೊಳಿಸಿ ಮಾಲೀಕರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಡಿಎಂಕೆ ನಾಯಕ ಅಳಗಿರಿ ಆಪ್ತನ ಮೇಲೆ ಬೆಂಗಳೂರಲ್ಲಿ ಡೆಡ್ಲಿ ಅಟ್ಯಾಕ್
ಏನಿದು ಘಟನೆ..?: ತಮಿಳುನಾಡಿನ ಡಿಎಂಕೆ ನಾಯಕ ಅಳಗಿರಿಯ ಆಪ್ತ ಮಧುರೈನ ವಿಕೆ ಗುರುಸ್ವಾಮಿ ಮೂರ್ತಿ (55) ಮೇಲೆ 4-5 ಜನರ ಗುಂಪು ದಾಳಿ ಮಾಡಿತ್ತು. ಗುರುಸ್ವಾಮಿ ಮೂರ್ತಿ ಕಾನೂನು ಸಮಸ್ಯೆ ಇರುವ ಸೈಟ್ ವಿಚಾರವಾಗಿ ಮಾತುಕತೆಗೆ ಬೆಂಗಳೂರಿಗೆ ಬಂದಿದ್ದ. ಭಾನುವಾರ ವಿಮಾನದ ಮೂಲಕ ಬಂದು ಹೋಟೆಲ್ ನಲ್ಲಿ ರೂಂ ಮಾಡಿಕೊಂಡಿದ್ದ.
ಸೋಮವಾರ ಮನೆಯೊಂದನ್ನು ಹುಡುಕಿ ಸಂಜೆ ಸೈಟ್ ಬಗ್ಗೆ ಮಾತುಕತೆ ಮಾಡಲು ಹೋಟೆಲ್‍ಗೆ ಹೋಗಿದ್ದ. ಬ್ರೋಕರ್ ಜೊತೆ ಮಾತುಕತೆ ನಡೆಸುತ್ತಿದ್ದಾಗ ತಮಿಳುನಾಡು ರಿಜಿಸ್ಟ್ರೇಷನ್ ಕಾರಿನಲ್ಲಿ ಬಂದ 4-5 ಜನರು ಏಕಾಏಕಿ ಗುರುಸ್ವಾಮಿ ಮೂರ್ತಿ ಮೇಲೆ ಹಲ್ಲೆ ನಡೆಸಿದ್ದಾರೆ. ಮಾರಣಾಂತಿಕವಾಗಿ ಹಲ್ಲೆಗೆ ಒಳಗಾಗಿರುವ ಗುರುಸ್ವಾಮಿಯನ್ನು ಹತ್ತಿರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಚಿಕ್ಕಮಗಳೂರು: ಮಾಂಸಾಹಾರಿ ಹೋಟೆಲಿನಲ್ಲಿ (Non Veg Hotel) ಕುರಿ ಬದಲು ದನದ ಮಾಂಸ (Beef Meat) ಬಳಸುತ್ತಿರುವುದು ಸಾಕ್ಷಿ ಸಮೇತ ಸಾಬೀತಾಗಿದ್ದು, ಪೊಲೀಸರು ರೆಡ್ ಹ್ಯಾಂಡಾಗಿ ಸೀಜ್ ಮಾಡಿದ ಘಟನೆ ಚಿಕ್ಕಮಗಳೂರಿನಲ್ಲಿ (Chikkamagaluru) ನಡೆದಿದೆ.
ನಗರದ ಐ.ಜಿ. ರಸ್ತೆಯಲ್ಲಿರುವ ಬೆಂಗಳೂರು ಹೋಟೆಲ್ ಹಾಗೂ ಎವರೆಸ್ಟ್ ಹೋಟೆಲ್‍ನಲ್ಲಿ ದನದ ಮಾಂಸ ಇದ್ದಾಗಲೇ ಪೊಲೀಸರು (Police) ರೆಡ್ ಹ್ಯಾಂಡಾಗಿ ಸೀಜ್ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಾಫಿನಾಡು ಚಿಕ್ಕಮಗಳೂರು ಪ್ರವಾಸಿ ಜಿಲ್ಲೆ. ಆ ಪ್ರವಾಸೋದ್ಯಮದಿಂದಲೇ ಕಾಫಿನಾಡಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಲಕ್ಷಾಂತರ ಕುಟುಂಬಗಳು ಬದುಕುತ್ತಿವೆ. ಪ್ರವಾಸಿಗರನ್ನು ಆಕರ್ಷಿಸಲು ಹೋಟೆಲ್, ರೆಸಾರ್ಟ್, ಹೋಂಸ್ಟೇ ಮಾಲೀಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಆದರೆ ಪ್ರವಾಸಿಗರನ್ನು ಆಕರ್ಷಿಸುವುದರ ಜೊತೆ ಹಣ ಮಾಡುವ ಉದ್ದೇಶದಿಂದ ಕೆಲ ಹೋಟೆಲ್‍ಗಳಲ್ಲಿ ಕುರಿ ಮಾಂಸದ ಬದಲು ದನದ ಮಾಂಸದಲ್ಲಿ ಬಿರಿಯಾನಿ ಸೇರಿದಂತೆ ನಾನ್ ವೆಜ್ ಅಡುಗೆ ಮಾಡುತ್ತಿದ್ದಾರೆ.
ಕುರಿ ಮಟನ್ ಕೆ.ಜಿ.ಗೆ 700-800 ರೂ. ಇದೆ. ಆದರೆ ದನದ ಮಾಂಸ ಕೆಜಿಗೆ 200-300 ರೂ. ಸಿಗುತ್ತದೆ. ಹೀಗಾಗಿ ಕೆಲ ಹೋಟೆಲ್ ಮಾಲೀಕರು ಹಣ ಮಾಡುವ ಉದ್ದೇಶದಿಂದ ಕುರಿ ಮಟನ್ ಜೊತೆ ದನದ ಮಾಂಸ ಮಿಶ್ರಣದ ಅಡುಗೆಯನ್ನು ಪ್ರವಾಸಿಗರಿಗೆ ನೀಡುತ್ತಿದ್ದಾರೆ. ಸ್ಥಳಿಯರು ದೂರಿನ ಮೇರೆಗೆ ನಗರದ ಎವರೆಸ್ಟ್ ಹಾಗೂ ಬೆಂಗಳೂರು ಹೋಟೆಲ್ ಮೇಲೆ ಪೊಲೀಸರು ದಾಳಿ ಮಾಡಿ 5 ಕೆ.ಜಿ. ದನದ ಮಾಂಸ ಹಾಗೂ ಅದೇ ಮಾಂಸದ ಬಿರಿಯಾನಿ ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿದ್ದಾರೆ.
ನವದೆಹಲಿ: ಸೆಪ್ಟೆಂಬರ್ ಎರಡನೇ ವಾರದಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ (G20 Summit) ಭಾಗವಹಿಸಲು ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ಮತ್ತು ಇತರ ವಿಶ್ವ ನಾಯಕರು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆ ಇವರಿಗಾಗಿ ಹಲವಾರು ಹೋಟೆಲ್‌ಗಳನ್ನು (Hotel) ಮೀಸಲಿಡಲಾಗಿದೆ.
ಸೆಪ್ಟೆಂಬರ್ 9-10ರಂದು ದೆಹಲಿಯಲ್ಲಿ (Delhi) ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಯುರೋಪಿಯನ್ ಒಕ್ಕೂಟದ ಉನ್ನತ ಅಧಿಕಾರಿಗಳು, 14 ಅಂತರಾಷ್ಟ್ರೀಯ ಸಂಸ್ಥೆಗಳು ಮತ್ತು ಅತಿಥಿ ರಾಷ್ಟ್ರಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ. ವರದಿಗಳ ಪ್ರಕಾರ ಅಧಿಕಾರಿಗಳು ಐಟಿಸಿ ಮೌರ್ಯ, ತಾಜ್ ಪ್ಯಾಲೆಸ್, ದಿ ಒಬೆರಾಯ್, ದಿ ಲೋಧಿ, ದಿ ಇಂಪೀರಿಯಲ್ ಮತ್ತು ಲೆ ಮೆರಿಡಿಯನ್ ಸೇರಿದಂತೆ ನವದೆಹಲಿಯ ಪ್ರಮುಖ ಹೋಟೆಲ್‌ಗಳಲ್ಲಿ ರೂಮ್‌ಗಳನ್ನು ಕಾಯ್ದಿರಿಸಲಾಗಿದೆ. ಇದನ್ನೂ ಓದಿ: ಸರ್ಕಾರಿ ಭೂಮಿ ಒತ್ತುವರಿ – ಪ್ರಕಾಶ್ ರಾಜ್‌ಗೆ ನೋಟಿಸ್
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಅವರ ಪರಿವಾರದ ಆತಿಥ್ಯಕ್ಕಾಗಿ ಐಟಿಸಿ ಮೌರ್ಯ ಹೋಟೆಲ್‌ನಲ್ಲಿ 400 ರೂಮ್ ಬುಕ್ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಹಿಂದೆ ಈ ಹೋಟೆಲಿನಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದ ಜಾರ್ಜ್ ಡಬ್ಲ್ಯು ಬುಷ್, ಬಿಲ್ ಕ್ಲಿಂಟನ್, ಬರಾಕ್ ಒಬಾಮ ಮತ್ತು ಇತರ ರಾಷ್ಟ್ರಗಳ ಮುಖ್ಯಸ್ಥರಿಗೆ ಆತಿಥ್ಯ ನೀಡಲಾಗಿತ್ತು. ಜಿ20 ಸಭೆ ಹಿನ್ನೆಲೆ ಭಾರತಕ್ಕೆ ಆಗಮಿಸುತ್ತಿರುವ ಜೋ ಬೈಡೆನ್ ಅವರ ಸುರಕ್ಷತೆಗಾಗಿ ಅಮೆರಿಕ ರಹಸ್ಯ ಸೇವೆಯು ಹೋಟೆಲ್‌ಆವರಣವನ್ನು ಪರಿಶೀಲಿಸುತ್ತಿದೆ. ಇದನ್ನೂ ಓದಿ: ಚಂದ್ರನ ದಕ್ಷಿಣ ಧ್ರುವದಲ್ಲಿ ಗಂಧಕ ಪತ್ತೆ ಹಚ್ಚಿದ ಚಂದ್ರಯಾನ-3
ಇನ್ನು ಚೀನಾ ಅಧ್ಯಕ್ಷ ಜಿನ್‌ಪಿಂಗ್ (Xi Jinping) ಅವರು ದೆಹಲಿಯ ತಾಜ್ ಹೋಟೆಲ್‌ನಲ್ಲಿ ಉಳಿಯುವ ಸಾಧ್ಯತೆಯಿದೆ. ಹೊಟೇಲ್ ಶಾಂಗ್ರಿ-ಲಾ ಜರ್ಮನಿ ಅಧಿಕಾರಿಗಳೊಂದಿಗೆ ಯುಕೆ ಪ್ರಧಾನಿ ರಿಷಿ ಸುನಕ್ (Rishi Sunak) ಅವರಿಗೆ ಆತಿಥ್ಯ ವಹಿಸಲು ಸಿದ್ಧತೆ ನಡೆಸುತ್ತಿದೆ. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ತಮ್ಮ ಸಿಬ್ಬಂದಿಯೊಂದಿಗೆ ದಿ ಕ್ಲಾರಿಡ್ಜಸ್ ಹೋಟೆಲ್‌ನಲ್ಲಿ ತಂಗಲಿದ್ದು, ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ದೆಹಲಿಯ ಇಂಪೀರಿಯಲ್ ಹೋಟೆಲ್‌ನಲ್ಲಿ ತಂಗಲಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಗೆ ಮೊದಲ ಮಹಿಳಾ ಅಧಿಕಾರಿ
ವರದಿಗಳ ಪ್ರಕಾರ ಸೆಪ್ಟೆಂಬರ್ 8ರಿಂದ 10ನೇ ತಾರೀಕಿನವರೆಗೂ ದೆಹಲಿಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಮುಚ್ಚಿರಲಿವೆ. ಅಲ್ಲದೇ ನವದೆಹಲಿ ಜಿಲ್ಲೆಯ ಮಾರುಕಟ್ಟೆಗಳು ಸೇರಿದಂತೆ ವಾಣಿಜ್ಯ ಸಂಸ್ಥೆಗಳು ಮತ್ತು ಬ್ಯಾಂಕುಗಳು ಈ ಮೂರು ದಿನಗಳು ಮುಚ್ಚಲಿದೆ. ಜಿ20 ಶೃಂಗಸಭೆ ಹಿನ್ನೆಲೆ ದೆಹಲಿ ಪೊಲೀಸರು ಹಲವು ತಿಂಗಳಿನಿಂದ ಕೆಲಸ ಮಾಡುತ್ತಿದ್ದು, ಈಗ ಕೊನೆಯ ಹಂತ ತಲುಪಿದೆ. ಜಿ20 ಶೃಂಗಸಭೆಗೆ ಸಂಪೂರ್ಣ ಸಿದ್ಧರಾಗಿದ್ದೇವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: CWRC ಶಿಫಾರಸ್ಸು ಎತ್ತಿ ಹಿಡಿದ CWMA – ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಕುಡಿಯುವ ನೀರಿಗೆ ಸಂಕಷ್ಟ ಸಾಧ್ಯತೆ