Tag: Hotel

  • ಪೆಟ್ರೋಲ್, ಡೀಸೆಲ್ ಆಯ್ತು-ಈಗ ಹೆಚ್ಚಾಯ್ತು ಹೋಟೆಲ್ ಫುಡ್ ದರ

    ಪೆಟ್ರೋಲ್, ಡೀಸೆಲ್ ಆಯ್ತು-ಈಗ ಹೆಚ್ಚಾಯ್ತು ಹೋಟೆಲ್ ಫುಡ್ ದರ

    ಬೆಂಗಳೂರು: ಡೀಸೆಲ್ ರೇಟ್ ಜಾಸ್ತಿ ಆಯ್ತು. ಪೆಟ್ರೋಲ್ ಕೂಡ ದಿನನಿತ್ಯ ದರ ಹೆಚ್ಚಾಗುತ್ತಾನೆ ಇದೆ. ಇದರ ಜೊತೆ ಗ್ಯಾಸ್ ಸಿಲಿಂಡರ್ ದರ ಕೂಡ ಜಾಸ್ತಿ ಆಗಿದೆ. ಮನೆಯಲ್ಲಿ ಯಾರ್ ಅಡುಗೆ ಮಾಡಿ ಊಟ ಮಾಡ್ತಾರೆ ಅಂತ ಹೋಟೆಲ್‍ಗೆ ಹೋದ್ರೆ ಅಲ್ಲೂ ನಿಮ್ಮ ನಾಲಿಗೆ ಸುಡೋದು ಗ್ಯಾರಂಟಿ.

    ನಮ್ಮ ಬೆಂಗಳೂರು ಮಂದಿ ವೀಕೆಂಡ್ ಬಂದರೆ ಮನೆಯಲ್ಲಿ ಗ್ಯಾಸ್ ಹಚ್ಚೋದು ಬಹುತೇಕ ಕಡಿಮೆ. ಬೆಳ್ಳಂಬೆಳಗ್ಗೆ ಬೇಗ ಎದ್ದು ತಿಂಡಿ ರೆಡಿ ಮಾಡೋದ್ಯಾರು ಅಂತ ಹೋಟೆಲ್ ಕಡೆ ಹೋಗೋರೆ ಜಾಸ್ತಿ. ಇಂತವರು ಇನ್ಮುಂದೆ ಜೇಬಲ್ಲಿ ಸ್ವಲ್ಪ ಜಾಸ್ತಿ ದುಡ್ಡು ಇಟ್ಕೊಂಡು ಹೋಗಿ, ಯಾಕಂದ್ರೆ ಬೆಂಗಳೂರಿನ ಶೇ. 50 ರಷ್ಟು ಹೋಟೆಲ್‍ಗಳಲ್ಲಿ ಊಟ ತಿಂಡಿ ಬೆಲೆ ಸೈಲೆಂಟಾಗಿ ಐದು ರೂಪಾಯಿವರೆಗೆ ದರ ಹೆಚ್ಚಳ ಮಾಡಲಾಗಿದೆ.

    ಎಷ್ಟು ಹೆಚ್ಚಳವಾಗಿದೆ?
    ಈ ಮೊದಲು ಒಂದು ಪ್ಲೇಟ್ ಇಡ್ಲಿಗೆ 20 ರೂ. ಇತ್ತು. ಈಗ ಒಂದು ಪ್ಲೇಟ್ ಇಡ್ಲಿ 25 ರೂ.ಗೆ ಸಿಗುತ್ತದೆ. ಅಂತೆಯೇ ಉದ್ದಿನ ವಡೆ 20 ರೂ. ದಿಂದ 25 ರೂ, ರೈಸ್ ಬಾತ್ 30 ರಿಂದ 35ಕ್ಕೆ ಮತ್ತು 50 ರಿಂದ 55 ರೂ.ಗೆ ಏರಿಕೆ ಕಂಡಿದೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರ ಸಂಘದ ಅಧ್ಯಕ್ಷರು, ನಮ್ಮ ಸಂಘದ ಕಡೆಯಿಂದ ಯಾರಿಗೂ ದರ ಹೆಚ್ಚಳ ಮಾಡಿ ಅಂತ ಆದೇಶಿಸಿಲ್ಲ. ಆದರೆ ಅವರವರ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ಈಗಾಗಳೇ ದರ ಹೆಚ್ಚಳ ಮಾಡಿಕೊಂಡಿದ್ದಾರೆ. ಅಲ್ಲದೇ ಸದ್ಯದ ವಾಣಿಜ್ಯ ಬಳಕೆ ಸಿಲಿಂಡರ್ ದರ ಹೆಚ್ಚಳ ಆಗ್ತಿರೋದ್ರಿಂದ ಊಟ ತಿಂಡಿ ದರ ಹೆಚ್ಚಳ ಅನಿವಾರ್ಯ ಎಂದು ಸಮರ್ಥಿಸಿಕೊಳ್ಳುತ್ತಾರೆ.

    ಕಳೆದ ವರ್ಷಕ್ಕೆ ಹೋಲಿಸಿದರೆ ವಾಣಿಜ್ಯ ಬಳಕೆ ಗ್ಯಾಸ್ ದರ 500 ರಿಂದ 800 ರೂಪಾಯಿ ವರೆಗೆ ಹೆಚ್ಚಳವಾಗಿದೆ. ದಿನವೊಂದಕ್ಕೆ ಹತ್ತು ಸಿಲಿಂಡರ್ ಬಳಸುವ ಹೋಟೆಲ್‍ಗಳಿಗೆ ಏನಿಲ್ಲವೆಂದ್ರು ತಿಂಗಳಿಗೆ ಒಂದೂವರೆ ಲಕ್ಷ ದಷ್ಟು ಹೊರೆಯಾಗತ್ತೆ. ಇದನ್ನ ಗ್ರಾಹಕರ ಮೇಲೆ ಹೋಟೆಲ್ ಮಾಲೀಕರು ವಿಧಿಸುತ್ತಿದ್ದಾರೆ. ಈ ಬಗ್ಗೆ ಗ್ರಾಹಕರು ಅಸಹಾಯಕತೆ ವ್ಯಕ್ತಪಡಿಸ್ತಿದ್ದಾರೆ. ವಾರದಲ್ಲಿ ಒಂದಿನ ಫ್ಯಾಮಿಲಿ ಜೊತೆ ಹೊರಗೆ ಹೋಗಿ ಊಟ ಮಾಡೋಣ ಅಂದರೆ ಕಷ್ಟವಾಗುತ್ತಿದೆ ಅಂತಿದ್ದಾರೆ.

    ಯಾವ ವಸ್ತುಗಳ ಬೆಲೆ ಹೆಚ್ಚಳವಾಗಲೀ ಅದರ ನೇರ ಎಫೆಕ್ಟ್ ತಟ್ಟೋದು ಜನಸಾಮಾನ್ಯರಿಗೆ ಅನ್ನೋದಂತೂ ಸತ್ಯ. ಸೋ ಜೇಬಲ್ಲಿ ಕಾಸು ಜಾಸ್ತಿ ಇದ್ದರೆ ಹೋಟೆಲ್ ಗೆ ಹೋಗಿ, ಇಲ್ಲ ಅಂದ್ರೆ ಮನೆಯಲ್ಲೆ ಅಡುಗೆ ಮಾಡಿಕೊಂಡು ಫ್ಯಾಮಿಲಿ ಜೊತೆ ಕೂತು ನೆಮ್ಮದಿ ಇಂದ ಊಟ ಮಾಡಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಡಿಯೋ ಮೂಲಕ ಕ್ಷಮೆಯಾಚಿಸಿದ ನಟ ಕಿಚ್ಚ ಸುದೀಪ್

    ವಿಡಿಯೋ ಮೂಲಕ ಕ್ಷಮೆಯಾಚಿಸಿದ ನಟ ಕಿಚ್ಚ ಸುದೀಪ್

    ದಾವಣಗೆರೆ: ಇಂದು ನಟ ಕಿಚ್ಚ ಸುದೀಪ್ ಜಿಲ್ಲೆಗೆ ಆಗಮಿಸಬೇಕಿತ್ತು. ಆದರೆ ಕಾರಣಾಂತರದಿಂದ ಸುದೀಪ್ ಬರಲು ಸಾಧ್ಯವಾಗದೇ ವಿಡಿಯೋ ಮೂಲಕ ಸಂದೇಶ ರವಾನಿಸಿ ಕ್ಷಮೆ ಕೇಳಿದ್ದಾರೆ.

    ಇಂದು ದಾವಣಗೆರೆಯ ಬಿಐಟಿ ಕಾಲೇಜ್ ರೋಡಿನಲ್ಲಿರುವ ಕಿಚ್ಚ ಸುದೀಪ್, ದೊನ್ನೆ ಬಿರಿಯಾನಿ ಹೋಟೆಲ್ ಪ್ರಾರಂಭೋತ್ಸವಕ್ಕೆ ಸುದೀಪ್ ಅವರು ಆಗಮಿಸಬೇಕಿತ್ತು. ನಿರ್ದೇಶಕ ನಂದ ಕಿಶೋರ್ ಒಡೆತನದ ದೊನ್ನೆ ಬಿರಿಯಾನಿ ಹೋಟೆಲ್ ಇದಾಗಿದೆ. ಈ ಹೋಟೆಲ್ ಉದ್ಘಾಟನೆಗೆ ಸುದೀಪ್ ಬರಬೇಕಿತ್ತು. ಆದ್ದರಿಂದ ಇಂದು ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪ್ರಾರಂಭೋತ್ಸವವನ್ನು ನಂದ ಕಿಶೋರ್ ಮುಂದಕ್ಕೆ ಹಾಕಿದ್ದಾರೆ.

    ಈ ಬಗ್ಗೆ ಸುದೀಪ್ ಅವರು ವಿಡಿಯೋ ಮೂಲಕ ಸಂದೇಶ್ ರವಾನಿಸಿದ್ದಾರೆ. “ಎಲ್ಲರಿಗೂ ಕಿಚ್ಚನ ನಮಸ್ಕಾರ, ಇಂದು ನಾನು ದಾವಣಗೆರೆಯಲ್ಲಿರುವ ಒಂದು ಹೋಟೆಲ್ ಓಪನಿಂಗ್ ಗೆ ಬರಬೇಕಿತ್ತು. ಕಾರಣಾಂತರದಿಂದ ಬರಲು ಸಾಧ್ಯವಾಗುತ್ತಿಲ್ಲ. ಕ್ಷಮೆ ಇರಲಿ, ಇದನ್ನು ಮುಂದಕ್ಕೆ ಹಾಕಿ ನಾನು ಅಕ್ಟೋಬರ್ 19 ರಂದು ನಾನು ಬರುತ್ತಿದ್ದೇನೆ. ಶಾಸಕ ಎಸ್ ವಿ ರಾಮಚಂದ್ರಪ್ಪ, ಹಾಗೂ ವಾಲ್ಮೀಕಿ ಶ್ರೀ ಸೇರಿದಂತೆ ನನ್ನನ್ನು ಕರೆದಿದ್ದರೋ ಅವರಿಗೆಲ್ಲ ನಂದಕಿಶೋರ್ ಪರ ಕ್ಷಮೆ ಕೇಳುತ್ತಿದ್ದೇನೆ. ಕಾರಣಾಂತರದಿಂದ ನಾನು ಹೈದರಾಬಾದಿನಲ್ಲಿ ಉಳಿದುಕೊಂಡಿದ್ದೇನೆ. 19ಕ್ಕೆ ಖಂಡಿತ ನಾನು ಬರುತ್ತೇನೆ” ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭಾರತ್ ಬಂದ್- ಊಟ ಸಿಗದೆ ಮಾಜಿ ಸಿಎಂ ಬಂಗಾರಪ್ಪ ಅವರನ್ನು ನೆನೆದು ಕುಡುಕರ ರಂಪಾಟ

    ಭಾರತ್ ಬಂದ್- ಊಟ ಸಿಗದೆ ಮಾಜಿ ಸಿಎಂ ಬಂಗಾರಪ್ಪ ಅವರನ್ನು ನೆನೆದು ಕುಡುಕರ ರಂಪಾಟ

    ಉಡುಪಿ: ಭಾರತ್ ಬಂದ್ ಆಗಿರುವುದರಿಂದ ಊಟ ಸಿಗದ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಕುಡುಕರು ರಂಪಾಟ ಮಾಡಿದ್ದಾರೆ. ಊಟ ಇಲ್ಲ ಅಂತ ಮಾಜಿ ಸಿಎಂ ಬಂಗಾರಪ್ಪ ಅವರನ್ನು ನೆನಪು ಮಾಡಿಕೊಂಡಿದ್ದಾರೆ.

    ಭಾರತ್ ಬಂದ್ ಹಿನ್ನೆಲೆಯಲ್ಲಿ ಉಡುಪಿಯಲ್ಕಿ ಹೋಟೆಲ್ ಎಲ್ಲಾ ಬಂದ್ ಆಗಿದೆ. ಸಿಟಿ ಬಸ್ ನಿಲ್ದಾಣ ಸಮೀಪ ಐದಾರು ಕುಡುಕರು ಹೊಟ್ಟೆ ಹಸಿವಿನಿಂದ ಗೋಳಾಡಿದ್ದಾರೆ. ಕುಡುಕರಿಗೆ ಬಂದ್ ಎಫೆಕ್ಟ್ ನೇರವಾಗಿ ತಟ್ಟಿದೆ. ಹಸಿವು, ಹಸಿವು ಅಂತ ಗೋಳಾಟ ಮಾಡಿದ ಜನ, ಹೊಟೇಲ್ ಓಪನ್ ಮಾಡಿ ಅಂತ ರಂಪಾಟ ಮಾಡಿದರು.

    ಹೊಟೇಲ್, ಅಂಗಡಿ ಓಪನ್ ಮಾಡಿ. ಊಟ ಕೊಡಿ ಅಂತ ಅಂಗಲಾಚಿದರು. ಉಡುಪಿ ಬಸ್ ಸಮೀಪ ಹೈಡ್ರಾಮಾ ನಡೆಸಿದರು. ರಸ್ತೆ ಮಧ್ಯದಲ್ಲಿ ಮಾಧ್ಯಮಗಳ ಕಾಲಿಗೆ ಬಿದ್ದು ಊಟ ಬೇಕು ಅಂತ ಕೇಳಿಕೊಂಡರು. ನಮ್ಮ ಬಂಗಾರಪ್ಪನವರ ಕಾಲದಲ್ಲಿ ಹೀಗೆ ಇರಲಿಲ್ಲ. ಎಲ್ಲವೂ ಚೆನ್ನಾಗಿತ್ತು ಅಂತ ಮಾಜಿ ಸಿಎಂ ದಿವಂಗತ ಬಂಗಾರಪ್ಪ ಅವರನ್ನು ನೆನಪಿಸಿಕೊಂಡರು.

    ನಮ್ಮ ಬಂಗಾರಪ್ಪನವರು ಅಧಿಕಾರದಲ್ಲಿದ್ದಾಗ ಹೀಗೆಲ್ಲ ಇರಲಿಲ್ಲ. ರಾಜ್ಯ ಸುಗಮವಾಗಿ ಸಾಗುತ್ತಿತ್ತು ಅಂತ ಬೇಸರ ವ್ಯಕ್ತಪಡಿಸಿದರು. ನಿನ್ನೆಯಿಂದ ಊಟವೇ ಮಾಡಿಲ್ಲ ಅಂತ ಗುರುವಪ್ಪ ಕುಡಿದ ಮತ್ತಿನಲ್ಲಿತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೋಟೆಲ್‍ನಲ್ಲಿ ನಟಿಯ ಮೃತದೇಹ ಪತ್ತೆ

    ಹೋಟೆಲ್‍ನಲ್ಲಿ ನಟಿಯ ಮೃತದೇಹ ಪತ್ತೆ

    ಕೋಲ್ಕತ್ತಾ: ನಟಿಯೊಬ್ಬರ ಮೃತದೇಹ ಪಶ್ಚಿಮ ಬಂಗಾಳದ ಸಿಲಿಗುರಿ ಹೋಟೆಲ್‍ನಲ್ಲಿ ಪತ್ತೆಯಾಗಿದೆ.

    ಪಾಯೆಲ್ ಚಕ್ರವರ್ತಿ, ಮಂಗಳವಾರ ಸಂಜೆ ಸಿಲಿಗುರಿ ಚರ್ಚ್ ರೋಡಿನ ಹೋಟೆಲ್‍ವೊಂದರಲ್ಲಿ ರೂಮ್ ಬುಕ್ ಮಾಡಿದ್ದರು. ನಂತರ ಅಲ್ಲಿಂದ ಬುಧವಾರ ಬೆಳಗ್ಗೆ ಗ್ಯಾಂಗ್ಟೋಕ್ ಹೋಗಲು ನಿರ್ಧರಿಸಿದ್ದರು. ಆದರೆ ಅವರು ಹೋಟೆಲ್‍ಗೆ ಬಂದಾಗಿನಿಂದ ರೂಮಿನ ಬಾಗಿಲು ಹಾಕಿಕೊಂಡಿದ್ದರು ಎಂದು ಹೋಟೆಲ್ ಸಿಬ್ಬಂದಿ ಹೇಳಿದ್ದಾರೆ.

    ಹೋಟೆಲ್ ಸಿಬ್ಬಂದಿಯವರು ಪಾಯೆಲ್ ಇದ್ದ ರೂಮಿನ ಬಾಗಿಲನ್ನು ಸಾಕಷ್ಟು ಬಾರಿ ತಟ್ಟಿದ್ದಾರೆ. ಆದರೆ ಪಾಯೆಲ್ ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾಗ ಆಕೆಯ ಮೃತದೇಹ ಪತ್ತೆಯಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

    ಇತ್ತೀಚೆಗೆ ಪಾಯೆಲ್ ತನ್ನ ಪತಿಯಿಂದ ವಿಚ್ಛೇದನ ಪಡೆದು ಮಗನ ಜೊತೆ ವಾಸವಿದ್ದರು. ಸದ್ಯ ಪಾಯೆಲ್ ಮೃತಪಟ್ಟಿರುವ ವಿಷಯವನ್ನು ಕೋಲ್ಕತ್ತಾದಲ್ಲಿರುವ ಅವರ ಕುಟುಂಬಕ್ಕೆ ತಿಳಿಸಲಾಗಿದೆ. ಪಾಯೆಲ್ ಬಂಗಾಳಿಯ ‘ಕೇಲೋ’, ‘ಕಾಕ್‍ಪಿಟ್’ ಹಾಗೂ ಹಲವಾರು ಧಾರವಾಹಿಯಲ್ಲಿ ನಟಿಸಿದ್ದಾರೆ.

    ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸದ್ಯ ಪ್ರಾಥಮಿಕ ತನಿಖೆ ಪ್ರಕಾರ ಪಾಯೆಲ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಶಂಕೆ ವ್ಯಕ್ತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಡಗಿನಲ್ಲಿ ಮತ್ತೆ 4 ದಿನ ಭಾರೀ ಮಳೆ- ಆ.31 ರವರೆಗೆ ಪ್ರವಾಸಿಗರಿಗೆ ನಿರ್ಬಂಧ

    ಕೊಡಗಿನಲ್ಲಿ ಮತ್ತೆ 4 ದಿನ ಭಾರೀ ಮಳೆ- ಆ.31 ರವರೆಗೆ ಪ್ರವಾಸಿಗರಿಗೆ ನಿರ್ಬಂಧ

    – ಆದೇಶ ನಿರಾಕರಿಸಿದ್ರೆ ಕೇಸ್ ಹಾಕಲು ಡಿಸಿ ಸೂಚನೆ

    ಮಡಿಕೇರಿ: ಪ್ರವಾಹ ಪೀಡಿತ ಕೊಡಗಿಗೆ ಕೆಲವು ದಿನಗಳ ಕಾಲ ತಪ್ಪಿದ್ದ ವರುಣನ ಕಾಟ ಮತ್ತೆ ಶುರುವಾಗಲಿದ್ದು, ಇತ್ತ ಕರ್ನಾಟಕ ಕಾಶ್ಮೀರಕ್ಕೆ ಪ್ರವಾಸಿಗರಿಗೆ ಆಗಸ್ಟ್ 31ರವರೆಗೆ ನಿರ್ಬಂಧ ಹಾಕಲಾಗಿದೆ.

    ಕೊಡಗು, ಕರಾವಳಿಯಲ್ಲಿ ಮತ್ತೆ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದ್ದರಿಂದ ಮುಂಜಾಗೃತ ಕ್ರಮವಾಗಿ ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇತ್ತ ಮಳೆ, ಪ್ರವಾಹ ಹಿನ್ನೆಲೆಯಲ್ಲಿ ಕೊಡಗಿಗೆ ಆಗಸ್ಟ್ 31ರವರೆಗೆ ಪ್ರವಾಸಿಗರಿಗೂ ನಿರ್ಬಂಧ ವಿಧಿಸಲಾಗಿದೆ.

    ಮುಂದಿನ ನಾಲ್ಕು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇರುವುದರಿಂದ ಆಗಸ್ಟ್ 31ರವರೆಗೆ ಕೊಡಗು ಪ್ರವಾಸಕ್ಕೆ ಬರಬೇಡಿ ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ಆದೇಶ ಹೊರಡಿಸಿದ್ದಾರೆ. ಒಂದು ವೇಳೆ ಅಧಿಕಾರಗಳ ಆದೇಶವನ್ನು ನಿರಾಕರಿಸಿ ಪ್ರವಾಸಿಗರ ವಾಸ್ತವ್ಯಕ್ಕೆ ಅನುವು ಮಾಡಿಕೊಡುವ ಹೋಟೆಲ್ ರೆಸಾರ್ಟ್ ಮತ್ತು ಹೋಂಸ್ಟೇಗಳ ಮೇಲು ಕೇಸ್ ಹಾಕುವಂತೆ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

    ಕೊಡಗಿಗೆ ಹೆಚ್ಚಿನ ಪ್ರವಾಸಿಗರು ಬಂದರೆ ರಸ್ತೆ ರಿಪೇರಿ ಕಷ್ಟವಾಗುತ್ತದೆ. ಅಷ್ಟೇ ಅಲ್ಲದೇ ಕಾರ್ಯಾಚರಣೆಗೂ ತೊಂದರೆ ಆಗುತ್ತದೆ. ಆದ್ದರಿಂದ ಯಾರು ಕೊಡಗು ಪ್ರವಾಸಕ್ಕೆ ಸ್ವಲ್ಪ ದಿನ ಬರಬೇಡಿ ಅಂತ ಡಿಸಿ ಮನವಿ ಮಾಡಿದ್ದಾರೆ. ಆದರೆ ಈ ಆದೇಶಕ್ಕೆ ಕೊಡಗು ಹೋಟೆಲ್ ಮತ್ತು ರೆಸಾರ್ಟ್ ಮಾಲೀಕರ ಸಂಘ ವಿರೋಧ ವ್ಯಕ್ತಪಡಿಸಿದೆ. ಕೊಡಗಿನ ಜೀವನಾಡಿಯ ಪ್ರವಾಸೋದ್ಯಮ. ಇದನ್ನ ನಿಲ್ಲಿಸಿದರೆ ಕೊಡಗು ಹೇಗೆ ಚೇತರಿಸಿಕೊಳ್ಳುವುದು. ಆದ್ದರಿಂದ ಕೂಡಲೇ ಆದೇಶ ಹಿಂಪಡೆಯಿರಿ ಎಂದು ಸಂಘ ಡಿ.ಸಿಗೆ ಮನವಿ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಂದಿಗಿರಿಧಾಮದಲ್ಲಿದ್ದ ಅಕ್ರಮ ನಂದಿಫುಡ್ ಕೋರ್ಟ್ ಎತ್ತಂಗಡಿ

    ನಂದಿಗಿರಿಧಾಮದಲ್ಲಿದ್ದ ಅಕ್ರಮ ನಂದಿಫುಡ್ ಕೋರ್ಟ್ ಎತ್ತಂಗಡಿ

    ಚಿಕ್ಕಬಳ್ಳಾಪುರ: ವಿಶ್ವ ವಿಖ್ಯಾತ ನಂದಿಗಿರಿಧಾಮದಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ನಂದಿಫುಡ್ ಕೋರ್ಟ್ ಅಂಗಡಿಯನ್ನು ಅಧಿಕಾರಿಗಳು ತೆರುವುಗೊಳಿಸಿದ್ದಾರೆ.

    ವಿಶ್ವ ಪ್ರಸಿದ್ಧ ಪ್ರವಾಸಿ ತಾಣವೊಂದರಲ್ಲಿ ಸರ್ಕಾರಿ ಹೊಟೇಲ್ ಕಟ್ಟಡ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರನೊಬ್ಬ ಗುತ್ತಿಗೆ ಅವಧಿ ಮುಗಿದು 15 ತಿಂಗಳು ಕಳೆದರೂ ಸ್ಥಳ ಖಾಲಿ ಮಾಡದೇ ದಬ್ಬಾಳಿಕೆ ನಡೆಸುತ್ತಾ ವ್ಯಾಪಾರ ನಡೆಸುತ್ತಿದ್ದ. ಕೊನೆಗೆ ಹೈಕೋರ್ಟ್ ಆದೇಶದ ಮೆರೆಗೆ ಅಧಿಕಾರಿಗಳು ನಂದಿಫುಡ್ ಕೋರ್ಟ್ ನಲ್ಲಿದ್ದ ಸರಕು ಸಾಮಾನುಗಳನ್ನು ಹೊರಕ್ಕೆ ಎಸೆದು ಖಾಲಿ ಮಾಡಿಸಿದ್ದಾರೆ.

    ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳವಾಗಿರುವ ನಂದಿಬೆಟ್ಟ ಸುಂದರ, ತಂಪಾದ ವಾತಾವರಣಕ್ಕೆ ಹೆಸರು ಪಡೆದಿದೆ. ಅದ್ದರಿಂದ ಇಲ್ಲಿನ ಗಿರಿಧಾಮಕ್ಕೆ ವಾರಾಂತ್ಯದಲ್ಲಿ ಬೆಂಗಳೂರು ಸೇರಿದಂತೆ ಹಲವು ಪ್ರದೇಶದ ಮಂದಿ ಭೇಟಿ ನೀಡುತ್ತಾರೆ. ಪ್ರವಾಸಿಗರ ಅನುಕೂಲಕ್ಕಾಗಿ ತೋಟಗಾರಿಕೆ ಇಲಾಖೆ ನಂದಿಫುಡ್ ಕೋರ್ಟ್ ಎಂಬ ಹೋಟೆಲ್ ಆರಂಭಿಸಿ ಗುತ್ತಿಗೆ ನೀಡಿತ್ತು. ಆದರೆ 2017 ರಲ್ಲಿಯೇ ಗುತ್ತಿಗೆ ಅವಧಿ ಮುಗಿದರು ಹೋಟೆಲ್ ಮಾಲೀಕ ಸ್ಥಳ ಬಿಟ್ಟುಕೊಡದೆ ಅಧಿಕಾರಿಗಳ ವಿರುದ್ಧವೇ ದೌರ್ಜನ್ಯ ನಡೆಸುತ್ತಿದ್ದ.

    ಸರ್ಕಾರಿ ನಿಯಮಗಳ ಅನ್ವಯ ಇಲಾಖೆ ನೂತನ ಗುತ್ತಿಗೆದಾರಿಗೆ ಅಂಗಡಿ ನೀಡಿತ್ತು. ಆದರೆ ಸ್ಥಳ ಖಾಲಿ ಮಾಡದ ಕಾರಣ ಗುತ್ತಿಗೆದಾರರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೊರ್ಟ್ ಅಧಿಕಾರಿಗಳಿಗೆ ನೋಟಿಸ್ ನೀಡಿ ತೆರವಿಗೆ ಸೂಚಿಸಿತ್ತು. ನ್ಯಾಯಾಲಯದ ಸೂಚನೆಯಂತೆ ಹೋಟಲ್ ನಲ್ಲಿದ್ದ ಸರಕು ಸಾಮಾನುಗಳನ್ನು ಖಾಲಿ ಮಾಡಿದ್ದಾರೆ.

    ದೇಶ-ವಿಧೇಶಗಳಿಂದ ನಂದಿಗಿರಿಧಾಮಕ್ಕೆ ಬರುವ ಪ್ರವಾಸಿಗರಿಂದ, ಮನಸ್ಸೊ ಇಚ್ಚೆ ಹಣ ವಸೂಲಿ ಮಾಡುತ್ತಾ ಹೋಟೆಲ್ ಉದ್ಯಮದಲ್ಲಿ ಕೈತುಂಬ ಕಾಸು ಮಾಡುತ್ತಿದ್ದ ಅಕ್ರಮ ಗುತ್ತಿಗೆದಾರನ ವಿರುದ್ಧ ಕ್ರಮಕೈಗೊಳ್ಳಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ವೇಶ್ಯಾವಾಟಿಕೆ ದಂಧೆ ನಡೆಸ್ತಿದ್ದ ಹೋಟೆಲ್ ಮೇಲೆ ದಾಳಿ – 3 ಮಹಿಳೆಯರು, ಪುರುಷರು ಸಿಕ್ಕಿಬಿದ್ರು

    ವೇಶ್ಯಾವಾಟಿಕೆ ದಂಧೆ ನಡೆಸ್ತಿದ್ದ ಹೋಟೆಲ್ ಮೇಲೆ ದಾಳಿ – 3 ಮಹಿಳೆಯರು, ಪುರುಷರು ಸಿಕ್ಕಿಬಿದ್ರು

    ಬಳ್ಳಾರಿ: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಎರಡು ಹೋಟೆಲ್ ಗಳು ಮೇಲೆ ಬಳ್ಳಾರಿ ಪೊಲೀಸರು ದಾಳಿ ನಡೆಸಿದ್ದಾರೆ.

    ಬಳ್ಳಾರಿಯ ರಾಯಲ್ ವೃತ್ತದ ಬಳಿಯಿರುವ ಭರಣಿ ಹಾಗೂ ದುರ್ಗಾ ಲಾಡ್ಜ್ ಗಳ ಮೇಲೆ ಎಸ್.ಪಿ ಅರುಣ ರಂಗರಾಜನ್ ದಾಳಿ ನಡೆಸಿ ವೇಶ್ಯಾವಾಟಿಕೆ ದಂಧೆಯ ಜಾಲ ಭೇದಿಸಿದ್ದಾರೆ. ನೆರೆಯ ಆಂಧ್ರ ಮತ್ತು ಒಡಿಸ್ಸಾ ಸೇರಿದಂತೆ ಹಲವು ರಾಜ್ಯಗಳ ಮಹಿಳೆಯರನ್ನು ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿದ್ದರು.

    ಖಚಿತ ಮಾಹಿತಿ ಮೇರೆಗೆ ಪೊಲೀಸರು ಈ ಹೋಟೆಲ್ ಮೇಲೆ ದಾಳಿ ನಡೆಸಿದ್ದು, ಲಾಡ್ಜ್ ನಲ್ಲಿದ್ದ ಮೂವರು ಮಹಿಳೆಯರು ಹಾಗೂ ಮೂವರು ಪುರುಷರನ್ನು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ 2 ಲಾಡ್ಜ್ ಗಳಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದರು ಎಂಬ ಆರೋಪವಿದ್ದರೂ ಮಾಂಸ ದಂಧೆ ಮುಂದುವರಿದಿದ್ದಕ್ಕೆ ದಾಳಿಯ ವೇಳೆಯಲ್ಲೇ ಸ್ಥಳದಲ್ಲಿದ್ದ ಅಧಿಕಾರಿಗಳನ್ನು ಎಸ್.ಪಿ. ಅರುಣ ರಂಗರಾಜನ್ ತರಾಟೆಗೆ ತೆಗೆದುಕೊಂಡಿದ್ದು, ವಿಶೇಷವಾಗಿತ್ತು.

    ಈ ಸಂಬಂಧ ಬಳ್ಳಾರಿಯ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಯುವತಿ ಜೊತೆ ಲವ್ವಿ-ಡವ್ವಿ- 4 ವರ್ಷದ ಬಳಿಕ ಯುವಕನ ಮನೆಗೆ ಹೋದಾಗ ಬಯಲಾಯ್ತು ಸತ್ಯ!

    ಯುವತಿ ಜೊತೆ ಲವ್ವಿ-ಡವ್ವಿ- 4 ವರ್ಷದ ಬಳಿಕ ಯುವಕನ ಮನೆಗೆ ಹೋದಾಗ ಬಯಲಾಯ್ತು ಸತ್ಯ!

    ತುಮಕೂರು: ಅನ್ಯಕೋಮಿನ ಹುಡುಗನೊಬ್ಬ ಹಿಂದೂ ಎಂದು ನಂಬಿಸಿ ಯುವತಿಯನ್ನು ಮದುವೆಯಾಗಲು ಯತ್ನಿಸಿ ಒಪ್ಪದಿದ್ದಾಗ ಆಕೆಯ ಮೇಲೆ ಹಲ್ಲೆ ನಡೆಸಿರುವ ಘಟನೆ ನಗರದ ಖಾಸಗಿ ಹೋಟೆಲ್ ಬಳಿ ನಡೆದಿದೆ.

    ತುಮಕೂರು ನಗರದ ಇಮ್ರಾನ್, ರಮೇಶ್ ಎಂಬ ಹೆಸರಿನೊಂದಿಗೆ ಪರಿಚಯ ಮಾಡಿಕೊಂಡು ವಿಕಲಚೇತನ ಯುವತಿಯನ್ನು ಪ್ರೇಮದ ಬಲೆಗೆ ಬೀಳಿಸಿಕೊಂಡಿದ್ದಾನೆ. ಹೀಗೆ ಇಬ್ಬರೂ ನಾಲ್ಕು ವರ್ಷಗಳ ಪರಸ್ಪರ ಪ್ರೀತಿಸಿದ್ದಾರೆ. ಕೆಲ ತಿಂಗಳ ಹಿಂದೆ ಯುವತಿ ಯುವಕನ ಮನೆಗೆ ಹೋದಾಗ ಆತ ಅನ್ಯಕೋಮಿಗೆ ಸೇರಿದವನು ಎಂದು ತಿಳಿದು ಮದುವೆಗೆ ನಿರಾಕರಿಸಿದ್ದಾಳೆ.

    ಯುವತಿ ಮನೆಯಲ್ಲೂ ಮದುವೆ ತೀವ್ರ ವಿರೋಧವ್ಯಕ್ತವಾಗಿದೆ. ಹಾಗಾಗಿ ಯುವಕ ಇಮ್ರಾನ್ ಮದುವೆಯಾಗದೇ ಇದ್ದರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ. ಈ ನಡುವೆ ಯುವತಿ ನಗರದ ಹೋಟೆಲ್ ನಲ್ಲಿ ಊಟಕ್ಕೆ ಬಂದಾಗ ಯುವಕ ಇಮ್ರಾನ್ ಹಾಗೂ ಆತನ ಸ್ನೇಹಿತೆ ಇಬ್ಬರೂ ಸೇರಿ ನಡುರಸ್ತೆಯಲ್ಲಿಯೇ ಯುವತಿಯನ್ನು ಥಳಿಸಿದ್ದಾರೆ.

    ಇವರ ಗಲಾಟೆ ನೋಡಿ ಸುತ್ತುವರಿದ ಜನರು ಯುವತಿಯನ್ನು ರಕ್ಷಿಸಿದ್ದಾರೆ. ಬಳಿಕ ಮೂವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

  • ಹುಬ್ಬಳ್ಳಿ-ಧಾರವಾಡ ಹೋಟೆಲ್ ಗಳಿಗೆ ಇಂದು ಬೀಗ!

    ಹುಬ್ಬಳ್ಳಿ-ಧಾರವಾಡ ಹೋಟೆಲ್ ಗಳಿಗೆ ಇಂದು ಬೀಗ!

    ಹುಬ್ಬಳ್ಳಿ: ಹೋಟೆಲ್ ಕಾರ್ಮಿಕರ ಮೇಲೆ ನಡೆದ ಹಲ್ಲೆ ಖಂಡಿಸಿ ಇಂದು ಹುಬ್ಬಳ್ಳಿ-ಧಾರವಾಡ ಹೋಟೆಲ್ ಬಂದ್ ಗೆ ಕರೆನೀಡಲಾಗಿದ್ದು, ಬಂದ್ ಹಿನ್ನೆಲೆಯಲ್ಲಿ ಅವಳಿನಗರದ ಎಲ್ಲಾ ಹೋಟೆಲ್ ಗಳಿಗೆ ಬೀಗ ಹಾಕಲಾಗಿದೆ.

    ಹೋಟೆಲ್ ಮಾಲೀಕರು ಕರೆ ನೀಡಿರುವ ಬಂದ್ ಗೆ ಬಾರ್ ಆಂಡ್ ರೆಸ್ಟೋರೆಂಟ್ ಮಾಲೀಕರು, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಸ್ವೀಟ್ ಮಾರ್ಟ್ ಮತ್ತು ಬೇಕರಿ ವರ್ತಕರು ಕೂಡ ಬೆಂಬಲ ಸೂಚಿಸಿದ್ದಾರೆ. ಕೇವಲ ಅವಳಿ ನಗರ ಮಾತ್ರವಲ್ಲದೆ ಕುಂದಗೋಳ ಹಾಗೂ ಕಲಘಟಗಿ ಹೋಟೆಲ್ ಮಾಲೀಕರ ಸಂಘ ಕೂಡ ಬಂದ್ ಗೆ ಬೆಂಬಲ ನೀಡಿದ್ದು, ಅಲ್ಲಿನ ಹೋಟೆಲ್ ಗಳನ್ನೂ ಕೂಡ ಬಂದ್ ಮಾಡಿದ್ದಾರೆ.

    ಇಂದು ಬೆಳಗ್ಗೆ ಮರಾಠ ಗಲ್ಲಿಯಲ್ಲಿರುವ ಸಂಘದ ಕಚೇರಿಯಿಂದ ದುರ್ಗದ ಬೈಲ್, ದಾಜೀಬಾನಪೇಟ್ ಮಾರ್ಗವಾಗಿ ತಹಶೀಲ್ದಾರ್ ಕಚೇರಿವರಗೆ ಕೈಗೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಿದ್ದಾರೆ.

  • ಹೊಟ್ಟೆತುಂಬಾ ತಿಂದು, ಊಟ ಚೆನ್ನಾಗಿಲ್ಲ ಅಂತಾ ಹೋಟೆಲ್ ಸಿಬ್ಬಂದಿಯನ್ನ ಥಳಿಸಿದ್ರು!

    ಹೊಟ್ಟೆತುಂಬಾ ತಿಂದು, ಊಟ ಚೆನ್ನಾಗಿಲ್ಲ ಅಂತಾ ಹೋಟೆಲ್ ಸಿಬ್ಬಂದಿಯನ್ನ ಥಳಿಸಿದ್ರು!

    ಹುಬ್ಬಳ್ಳಿ: ಕಳಪೆ ಊಟ ನೀಡಿದ್ದೀರಿ ಎಂದು ಆರೋಪಿಸಿ ಹೋಟೆಲ್ ಮಾಲೀಕ ಹಾಗೂ ಸಹಾಯಕರ ಮೇಲೆ ಹಲ್ಲೆ ನಡೆಸಿ ಪುಂಡ ಗ್ರಾಹಕರಿಬ್ಬರು ಪರಾರಿಯಾದ ಘಟನೆ ನಗರದ ಹೋಟೆಲ್‍ವೊಂದರಲ್ಲಿ ನಡೆದಿದೆ.

    ಹೋಟೆಲ್ ಮಾಲೀಕ ನಾರಾಯಣಶೆಟ್ಟಿ ಮತ್ತು ಸಿಬ್ಬಂದಿ ಪ್ರಕಾಶ್ ಶೆಟ್ಟಿ ಮೇಲೆ ಹಲ್ಲೆ ನಡೆಸಿದ್ದಾರೆ. ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣ ಸಮೀಪದ ಬ್ರಹ್ಮ ಶ್ರೀ ಹೋಟೆಲ್ ನಲ್ಲಿ ಘಟನೆ ನಡೆದಿದೆ. ಹೋಟೆಲ್‍ನ ಸಿಸಿಟಿವಿ ಕ್ಯಾಮೆರಾದಲ್ಲಿ ಹಲ್ಲೆಯ ದೃಶ್ಯಗಳು ಸೆರೆಯಾಗಿದೆ.

    ನಡೆದಿದ್ದು ಏನು?
    ಬುಧವಾರ ರಾತ್ರಿ ಹೋಟೆಲ್ ಊಟಕ್ಕೆಂದು ಬಂದಿದ್ದ ನಾಲ್ವರು ಊಟ ಸರಿಯಾಗಿಲ್ಲವೆಂದು ಆರೋಪಿಸಿ ಮೂವರು ಹೊರಹೋಗಿದ್ದಾರೆ. ಆದರೆ ಅವರಲ್ಲಿ ಒಬ್ಬ ಹಣ ಪಡೆಯುತ್ತಿದ್ದ ಹೋಟೆಲ್ ಸಿಬ್ಬಂದಿ ಪ್ರಕಾಶ್ ಜೊತೆಗೆ ವಾಗ್ವಾದಕ್ಕೆ ಮುಂದಾಗಿದ್ದಾನೆ. ಮಾತಿನ ಚಕಮಕಿ ಹೆಚ್ಚಾಗಿದ್ದು, ಹೊರಗಿದ್ದ ಮೂವರು ಒಳಗೆ ಬಂದು ಪ್ರಕಾಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಹೋಟೆಲ್‍ನಲ್ಲಿದ್ದ ಹೆಲ್ಮೆಟ್, ಬಾಟಲ್ ಬಾಕ್ಸ್ ಎತ್ತಿಕೊಂಡು ಪ್ರಕಾಶ್ ಗೆ ಮನಬಂದಂತೆ ಥಳಿಸಿದ್ದು, ಇದನ್ನು ತಡೆಯಲು ಬಂದ ಮಾಲೀಕ ನಾರಾಯಣ ಅವರ ಮೇಲೂ ಹಲ್ಲೆ ನಡೆಸಿದ್ದಾರೆ. ನಂತರ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಕಿತ್ತುಹಾಕಿ ಪರಾರಿಯಾಗಿದ್ದಾರೆ.

    ಹೋಟೆಲ್ ಸಿಬ್ಬಂದಿ ಪ್ರಕಾಶ್ ತಲೆಗೆ ಗಂಭೀರಗಾಯವಾಗಿದ್ದು, ಸದ್ಯ ಕಿಮ್ಸ್‍ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.