Tag: Hotel

  • 10 ರೂಪಾಯಿಗಾಗಿ ಹೋಟೆಲ್‍ನಲ್ಲಿ 2 ವರ್ಷದ ಮಗುವನ್ನೇ ಅಡವಿಟ್ಟ ತಂದೆ!

    10 ರೂಪಾಯಿಗಾಗಿ ಹೋಟೆಲ್‍ನಲ್ಲಿ 2 ವರ್ಷದ ಮಗುವನ್ನೇ ಅಡವಿಟ್ಟ ತಂದೆ!

    ಬೀಜಿಂಗ್: ಹೋಟೆಲ್‍ನಲ್ಲಿ ಬಿಲ್ ಕಟ್ಟಲು 10 ರೂ. ಕಡಿಮೆಯಾಗಿದಕ್ಕೆ ತಂದೆಯೊಬ್ಬ ತನ್ನ 2 ವರ್ಷದ ಮಗುವನ್ನೇ ಅಡವಿಟ್ಟ ಘಟನೆ ದಕ್ಷಿಣ ಚೀನಾದಲ್ಲಿ ನಡೆದಿದ್ದು, ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ವ್ಯಕ್ತಿಯೊಬ್ಬ ಹೋಟೆಲ್‍ನಲ್ಲಿ ಊಟ ಮಾಡಿದ್ದ ಬಿಲ್ 62 ರೂ. ಆಗಿತ್ತು. ಆದ್ರೆ ಹಣ ಕಟ್ಟುವಾಗ 10 ರೂ. ಕಡಿಮೆಯಾಗಿದೆ. ಆಗ ತಂದೆ ತನ್ನ 2 ವರ್ಷದ ಮಗಳನ್ನೇ ಅಡವಿಡಲು ನಿರ್ಧರಿಸಿದ್ದಾನೆ. ಅಲ್ಲದೆ ಮರುದಿನ ಬಂದು ಹಣ ನೀಡಿ ಮಗಳನ್ನು ಕರೆದುಕೊಂಡು ಹೋಗುವುದಾಗಿ ಹೋಟೆಲ್ ಸಿಬ್ಬಂದಿ ಬಳಿ ಹೇಳಿದ್ದಾನೆ.

    ಈ ತಂದೆ ತನ್ನ ಮಗಳನ್ನು ಅಡವಿಟ್ಟ ದೃಶ್ಯವು ಹೋಟೆಲ್‍ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಗುವನ್ನು ಅಡವಿಟ್ಟು ತಂದೆ ಹೋಟೆಲ್‍ನಿಂದ ಹೊರಹೋಗುತ್ತಿದ್ದಾಗ ಮಗು ಅಪ್ಪನ ಬಳಿ ಅಳುತ್ತ ಓಡಿ ಬಂದರೂ, ತಂದೆ ಮತ್ತೆ ಮಗಳನ್ನು ಹೋಟೆಲ್‍ನೊಳಗೆ ಬಿಟ್ಟು ಹೋಗಿದ್ದಾನೆ. ಈ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಆದರೆ, ಹೋಟೆಲ್ ಅವರು ಮಗುವಿಗೆ ಆಹಾರ ಹಾಗು ಒಂದು ಬಾಟಲ್ ಸೋಯಾ ಹಾಲು ನೀಡಿ ಚೆನ್ನಾಗಿಯೇ ನೋಡಿಕೊಂಡಿದ್ದಾರೆ. ಆದ್ರೆ ಮರುದಿನ ತಂದೆ ಮಗುವನ್ನು ಕರೆದುಕೊಂಡು ಹೋಗಲು ಬಂದಿಲ್ಲ. ಆದ್ದರಿಂದ ಹೋಟೆಲ್ ಅವರು ಮಗುವನ್ನು ಪೊಲೀಸರಿಗೆ ಒಪ್ಪಿಸಿ, ನಡೆದ ವಿಷಯವನ್ನು ತಿಳಿಸಿದ್ದಾರೆ. ಬಳಿಕ ತಂದೆಯನ್ನು ಪತ್ತೆ ಹಚ್ಚಿ ಮಗುವನ್ನು ಆತನಿಗೆ ನೀಡಿ ಬುದ್ಧಿ ಮಾತು ಹೇಳಿ ಪೊಲೀಸರು ಕಳುಹಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

    https://www.youtube.com/watch?time_continue=30&v=bRDucsbLZvQ

  • ಪಶ್ಚಿಮ ಘಟ್ಟದಿಂದ ಮಲ್ಪೆಗೆ ಬಂತು ಕಲರ್ ಕಲರ್ ಹಾವು!

    ಪಶ್ಚಿಮ ಘಟ್ಟದಿಂದ ಮಲ್ಪೆಗೆ ಬಂತು ಕಲರ್ ಕಲರ್ ಹಾವು!

    -ಮೂರು ಬಣ್ಣದ ಹಾವು ಕಂಡು ಜನ ಶಾಕ್

    ಉಡುಪಿ: ಜಿಲ್ಲೆಯಲ್ಲಿ ಅಪರೂಪದ ಮೂರು ಬಣ್ಣದ ಹಾವು ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲೇ ಹೆಚ್ಚಾಗಿ ಕಂಡು ಬರುವ ಈ ಅಪರೂಪದ ಹಾರುವ ಹಾವು ನಗರ ಪ್ರದೇಶಕ್ಕೆ ಬಂದಿದೆ. ಮೂರು ಬಣ್ಣದ ಹಾವು ಕಂಡು ಮಲ್ಪೆ ಜನ ಆಶ್ಚರ್ಯಚಕಿತರಾಗಿದ್ದಾರೆ.

    ಉಡುಪಿಯ ಮಲ್ಪೆ ಪರಿಸರದ ಹೋಟೆಲೊಂದರಲ್ಲಿ ಈ ಅಪರೂಪದ ಹಾವು ಸರಿದಾಡಿದೆ. ಇದನ್ನು ಗೋಲ್ಡನ್ ಟ್ರೀ ಸ್ನೇಕ್ ಎಂದು ಸಾಮಾನ್ಯ ಭಾಷೆಯಲ್ಲಿ ಕರೆಯುತ್ತಾರೆ. ಹಾವಿನ ವೈಜ್ಞಾನಿಕ ಹೆಸರು ಕೈಸೋಪೆಲಿಯಾ ಆರ್ನೆಟ. ಮಲ್ಪೆಯ ಹೊಟೇಲಿಗೆ ಚಿಕ್ಕಮಗಳೂರು, ಶಿವಮೊಗ್ಗದಿಂದ ತರಕಾರಿ ತರಲಾಗುತ್ತದೆ. ತರಕಾರಿ ಬುಟ್ಟಿಯ ಮೂಲಕ ಈ ಹಾವು ಹೊರ ಬಂದಿರುವ ಸಾಧ್ಯತೆಯಿದೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಗುರುರಾಜ್ ಸನಿಲ್, ಹೆಚ್ಚಾಗಿ ದೊಡ್ಡ ದೊಡ್ಡ ಮರದಲ್ಲೇ ಈ ಹಾವು ವಾಸಿಸುತ್ತವೆ. ಮರದಿಂದ ಮರಕ್ಕೆ ಕೆಳಮುಖವಾಗಿ ನೆಗೆಯೋದು ಈ ಹಾವಿನ ವಿಶೇಷ. ಇದೇ ಮೊದಲ ಬಾರಿಗೆ ನಗರ ಭಾಗದಲ್ಲಿ ಇಂತಹ ಹಾವು ಪತ್ತೆಯಾಗಿವೆ. ಶಿವಮೊಗ್ಗ, ಚಿಕ್ಕಮಗಳೂರು ಭಾಗದಿಂದ ಸಾಕಷ್ಟು ತರಕಾರಿ ಲಾರಿಗಳು ಉಡುಪಿಗೆ ಬರುತ್ತದೆ. ಹೀಗಾಗಿ ತರಕಾರಿ ವಾಹನಕ್ಕೆ ಈ ಹಾವು ಮರದಿಂದ ಹಾರಿರಬಹುದು. ಹೀಗೆ ಹಾರಿ ಬಂದಿರೋ ಹಾವು ಮಲ್ಪೆಗೆ ತಲುಪಿರುವ ಸಾಧ್ಯತೆಯಿದೆ ಎಂದರು.

    ಮೈಮೇಲೆ ಆಕರ್ಷಕ ಕೆಂಪು, ಕಪ್ಪು, ಬಿಳಿ ಪಟ್ಟಿಗಳನ್ನು ಹೊಂದಿರುವ ಈ ಹಾವು, ಗರಿಷ್ಟ ಒಂದೂವರೆ ಮೀಟರ್ ನಷ್ಟು ಉದ್ದವಿರುತ್ತದೆ. ಭಯಾನಕವಾಗಿ ಕಂಡುಬಂದರೂ ಈ ಹಾವು ವಿಷಕಾರಿಯಲ್ಲ. ಸೆರೆ ಹಿಡಿದ ಹಾವನ್ನು ಗುರುರಾಜ್ ಸುರಕ್ಷಿತ ಸ್ಥಳಕ್ಕೆ ಬಿಡಲಿದ್ದಾರೆ.

  • ಸ್ಪೈಕ್ಯಾಮ್ ಮೂಲಕ 800 ದಂಪತಿಯ ಸೆಕ್ಸ್ ಲೈವ್: ಅತಿ ದೊಡ್ಡ ಹಗರಣ ಬೇಧಿಸಿದ ಪೊಲೀಸರು

    ಸ್ಪೈಕ್ಯಾಮ್ ಮೂಲಕ 800 ದಂಪತಿಯ ಸೆಕ್ಸ್ ಲೈವ್: ಅತಿ ದೊಡ್ಡ ಹಗರಣ ಬೇಧಿಸಿದ ಪೊಲೀಸರು

    ಸಿಯೋಲ್: ಹೋಟೆಲ್‍ಗಳಲ್ಲಿ ತಂಗಿದ್ದ ದಕ್ಷಿಣ ಕೊರಿಯಾದ ಸುಮಾರು 800 ದಂಪತಿಯ ಸೆಕ್ಸ್ ನಲ್ಲಿ ತೊಡಗಿದ್ದ ವಿಡಿಯೋವನ್ನು ಸ್ಪೈಕ್ಯಾಮ್ ಮೂಲಕ ಲೈವ್ ಮಾಡುತ್ತಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.

    ದೇಶದ ಸ್ಪೈಕ್ಯಾಮೆರಾ ಪ್ರಕರಣಗಳಲ್ಲೇ ಇದು ಅತಿ ದೊಡ್ಡ ಸೆಕ್ಸ್ ಹಗರಣ ಎಂದು ಪೊಲೀಸರು ತಿಳಿಸಿದ್ದಾರೆ. ದಕ್ಷಿಣ ಕೊರಿಯಾದಲ್ಲಿ ಸ್ಪೈಕ್ಯಾಮ್ ಹಗರಣ ಈಗ ಜಾಸ್ತಿ ನಡೆಯುತ್ತಿದ್ದು, ಸಾಮಾನ್ಯವಾಗಿ ರಹಸ್ಯವಾಗಿ ಶಾಲೆಗಳು, ಟ್ರಯಲ್ ರೂಮ್ ಮತ್ತು ಮಹಿಳೆಯರ ಶೌಚಾಲಯ ಸೇರಿದಂತೆ ಅನೇಕ ಕಡೆಯಲ್ಲಿ ಈ ಕ್ಯಾಮೆರಾವನ್ನು ಬಳಸಲಾಗುತ್ತದೆ. ಆದರೆ ಹೋಟೆಲ್ ನಲ್ಲಿ ಸ್ಪೈಕ್ಯಾಮ್ ಬಳಸಿ ಅದನ್ನು ಲೈವ್ ಮಾಡಿದ್ದು ಇದೆ ಮೊದಲು ಎಂದು ತಿಳಿದು ಬಂದಿದೆ.

    ನಾಲ್ವರು ಹುಡುಗರು ಈ ರೀತಿ ಸಣ್ಣ ಕ್ಯಾಮೆರಾಗಳನ್ನು 30 ಹೋಟೆಲ್ ಗಳಲ್ಲಿ 42 ರೂಮ್‍ಗಳಲ್ಲಿ ಗ್ರಾಹಕರ ಗಮನಕ್ಕೆ ಬಾರದಂತೆ ಅಳವಡಿಸಿದ್ದಾರೆ. ಹೇರ್ ಡ್ರೈಯರ್, ಗೋಡೆ ಸಾಕೆಟ್ (ಸ್ವಿಚ್ ಬೋರ್ಡ್)ಮತ್ತು ಡಿಜಿಟಲ್ ಟಿವಿ ಬಾಕ್ಸ್ ಗಳಲ್ಲಿ ರಹಸ್ಯವಾಗಿ ಸ್ಪೈಕ್ಯಾಮೆರಾ ಅವರನ್ನು ಅಳವಡಿಸಲಾಗಿತ್ತು. ನಂತರ ಅದರ ಮೂಲಕ 42 ರೂಮ್ ಗಳಲ್ಲಿ ನಡೆಯುವ ದೃಶ್ಯಗಳನ್ನು ವೆಬ್ ಸೈಟ್ ವೊಂದು ತನ್ನ 4000 ಗ್ರಾಹಕರಿಗೆ 24 ಗಂಟೆಗಳ ಕಾಲ ಲೈವ್ ಮಾಡಿದೆ. ಈ ಲೈವ್ ವಿಡಿಯೋಗಾಗಿ ಗ್ರಾಹಕರು ಪ್ರತಿ ತಿಂಗಳು 50 ಸಾವಿರ ವೊನ್( ಅಂದಾಜು 3 ಸಾವಿರ ರೂ.) ಪಾವತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕಳೆದ ಮೂರು ತಿಂಗಳಿಂದ ಸುಮಾರು 800 ದಂಪತಿಯ ಸೆಕ್ಸ್ ನಲ್ಲಿ ತೊಡಗಿದ್ದನ್ನು ವೆಬ್ ಸೈಟ್ ಮೂಲಕ ಲೈವ್ ಮಾಡಲಾಗಿದೆ. ಈ ಹಗರಣದ ಮೂಲಕ ಗ್ಯಾಂಗ್ ಸುಮಾರು 70 ಲಕ್ಷ ವೊನ್(ಅಂದಾಜು 4.25 ಲಕ್ಷ ರೂ.) ಗಳಿಸಿದ್ದಾರೆ. ಈ ಸಂಬಂಧ ಇಬ್ಬರು ಶಂಕಿತರನ್ನು ಬಂಧಿಸಲಾಗಿದ್ದು, ಮತ್ತಿಬ್ಬರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    2017 ರಲ್ಲಿ ದಕ್ಷಿಣ ಕೊರಿಯಾದಲ್ಲಿ ಸ್ಪೈಕಾಮ್ ಹಗರಣಕ್ಕೆ ಸಂಬಂಧಿಸಿದಂತೆ 5,400 ಕ್ಕಿಂತಲೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿತ್ತು. ಕಳೆದ ವರ್ಷ ಸಿಯೋಲ್‍ನಲ್ಲಿ ಮೀಟೂ ಅಭಿಯಾನದಲ್ಲಿ ಸಾವಿರಾರು ಮಹಿಳೆಯರು ಸ್ಪೈಕಾಮ್ ವೀಡಿಯೋಗಳ ವಿರುದ್ಧ ಪ್ರತಿಭಟಿಸಿದ್ದರು.

  • ಹೋಟೆಲ್ ರೂಮಿನಲ್ಲಿ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿ – ಕಿಟಕಿಯಿಂದ ಹೊರಜಿಗಿದ ಪ್ರೇಯಸಿ

    ಹೋಟೆಲ್ ರೂಮಿನಲ್ಲಿ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿ – ಕಿಟಕಿಯಿಂದ ಹೊರಜಿಗಿದ ಪ್ರೇಯಸಿ

    ಇಂದೋರ್: ಪತಿ ತನ್ನ ಪ್ರೇಯಸಿ ಜೊತೆಯಲ್ಲಿ ಹೋಟೆಲ್ ರೂಮಿನಲ್ಲಿ ಇದ್ದಾಗ ಪತ್ನಿಯ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಪ್ರಿಯಕರನ ಪತ್ನಿಯನ್ನು ನೋಡಿದ ಪ್ರೇಯಸಿ ಎರಡನೇ ಮಹಡಿಯಿಂದ ಜಿಗಿದು ಗಂಭೀರವಾಗಿ ಗಾಯಗೊಂಡ ಘಟನೆ ಮಧ್ಯಪ್ರದೇಶದ ಇಂದೋರ್ ನ ಲಸುಡಿಯಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಮಹಿಳೆಯೊಬ್ಬಳು ತನ್ನ ವಿವಾಹಿತ ಪ್ರೇಮಿ ರೂಪೇಶ್ ಜೊತೆ ಇಂದೋರ್ ನ ಜೆಎಂಸಿ ಹೋಟೆಲ್‍ಗೆ ಹೋಗಿದ್ದಳು. ಈ ವೇಳೆ ರೂಪೇಶ್‍ನ ಪತ್ನಿ ಪ್ರಿಯಾ ಕೂಡ ಅವನನ್ನು ಹಿಂಬಾಲಿಸಿ ಅದೇ ಹೋಟೆಲ್‍ನ 208 ರೂಂ ನಂಬರ್ ಗೆ ತಲುಪಿದ್ದಾಳೆ.

    ಈ ವೇಳೆ ಮಹಿಳೆ ರೂಪೇಶ್‍ನ ಪತ್ನಿಯನ್ನು ನೋಡಿ ಭಯದಿಂದ ಎರಡನೇ ಮಹಡಿಯ ಕಿಟಕಿಯಿಂದ ಹೊರಗೆ ಜಿಗಿದಿದ್ದಾಳೆ. ಪರಿಣಾಮ ಆಕೆ ಗಂಭೀರವಾಗಿ ಗಾಯಗೊಂಡಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ.

    ರೂಪೇಶ್ ಹಾಗೂ ಮಹಿಳೆ ಇಬ್ಬರು ವಿವಾಹಿತರಾಗಿದ್ದು, ಫೇಕ್ ಐಡಿ ಕಾರ್ಡ್ ತೋರಿಸಿ ಹೋಟೆಲಿನಲ್ಲಿ ರೂಂ ಬುಕ್ ಮಾಡಿದ್ದಾರೆ. ಸದ್ಯ ಪೊಲೀಸರು ರೂಪೇಶ್‍ನನ್ನು ಬಂಧಿಸಿದ್ದಾರೆ. ಅಲ್ಲದೆ ಹೋಟೆಲ್ ಮಾಲೀಕ ನಿರ್ಲಕ್ಷ್ಯ ವಹಿಸಿದಕ್ಕೆ ಆತನ ವಿರುದ್ಧ ಕೂಡ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ರೂಪೇಶ್ ಪತ್ನಿ ಪ್ರಿಯಾ ತನ್ನ ಪತಿ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿದ್ದಳು. ರೂಪೇಶ್‍ನನ್ನು ರೆಡ್ ಹ್ಯಾಂಡಾಗಿ ಹಿಡಿಯಲು ಪ್ರಿಯಾ ಆತನನ್ನು ಹಿಂಬಾಲಿಸಿ ಹೋಟೆಲ್ ತಲುಪಿದ್ದಾಳೆ ಎಂದು ಪೊಲೀಸ್ ಅಧಿಕಾರಿ ಸಂತೋಷ್ ದುದಿ ತಿಳಿಸಿದ್ದಾರೆ.

  • 5 ಅಂತಸ್ತಿನ ಕಟ್ಟಡದಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ

    5 ಅಂತಸ್ತಿನ ಕಟ್ಟಡದಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ

    ಬೆಂಗಳೂರು: 5 ಅಂತಸ್ತಿನ ಕಟ್ಟಡದಿಂದ ಜಿಗಿದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶೇಷಾದ್ರಿಪುರಂನ ನಟರಾಜ್ ಚಿತ್ರಮಂದಿರದ ಬಳಿ ನಡೆದಿದೆ.

    40 ವರ್ಷದ ಪ್ರವೀಣ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಪ್ರವೀಣ್ ಮೂಲತಃ ಚಿಕ್ಕಮಗಳೂರ ನಿವಾಸಿಯಾಗಿದ್ದು, ಕಳೆದ ಮೂರು ವರ್ಷಗಳಿಂದ ಆನಂದ್ ರಾವ್ ಸರ್ಕಲ್ ನಲ್ಲಿರುವ ಹೋಟೆಲ್‍ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದನು.

    ಆರು ತಿಂಗಳ ಹಿಂದೆ ಕೆಲಸ ಬಿಟ್ಟು ಹೋಗಿ ವಾರದ ಹಿಂದಷ್ಟೇ ಬಂದು ಕೆಲಸಕ್ಕೆ ಸೇರಿದ್ದ. ಎರಡು ಮೂರು ದಿನ ಕೆಲಸಕ್ಕೆ ಹೋಗಿ ಎರಡು ದಿನದಿಂದ ಕುಡಿದು ರೂಮಿನಲ್ಲಿಯೇ ಇದ್ದನು. ಬಳಿಕ ಬುಧವಾರ ಸಂಜೆ 7 ಗಂಟೆ ಸುಮಾರಿಗೆ ಬಹು ಮಹಡಿ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಘಟನಾ ಸ್ಥಳಕ್ಕೆ ಶೇಷಾದ್ರಿಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

  • ಒಂದು ವರ್ಷ ರೂಂ ಬುಕ್ ಮಾಡಿ ಜೊತೆಗಿದ್ದೆವು ಅನ್ನೋದಕ್ಕೆ ನಿಮ್ಮಲ್ಲಿ ಸಾಕ್ಷಿ ಇದ್ಯಾ: ಪೂಜಾ ಗಾಂಧಿ

    ಒಂದು ವರ್ಷ ರೂಂ ಬುಕ್ ಮಾಡಿ ಜೊತೆಗಿದ್ದೆವು ಅನ್ನೋದಕ್ಕೆ ನಿಮ್ಮಲ್ಲಿ ಸಾಕ್ಷಿ ಇದ್ಯಾ: ಪೂಜಾ ಗಾಂಧಿ

    ಬೆಂಗಳೂರು: ನಗರದ ಲಲಿತ್ ಅಶೋಕ್ ಹೊಟೇಲಿನಲ್ಲಿ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಜೊತೆ ಒಂದು ವರ್ಷ ರೂಂ ಬುಕ್ ಮಾಡಿ ಹೊಟೇಲಿಗೆ ಪಂಗನಾಮ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಳೆಹುಡುಗಿ ಪೂಜಾಗಾಂಧಿ ಸ್ಪಷ್ಟನೆ ನೀಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ಯಾವುದೇ ಹೋಟೆಲ್ ನ ಬಾಕಿ ಉಳಿಸಿಕೊಂಡಿಲ್ಲ, ಪಾವತಿಸಬೇಕಾಗಿಯೂ ಇಲ್ಲ. ಅಷ್ಟಕ್ಕೂ ನಾನ್ಯಾಕೆ ಹೋಟೆಲ್‍ಗೆ ಹೋಗಲಿ. ಹೋಗೋ ಅಗತ್ಯನೂ ನನಗಿಲ್ಲ ಎಂದು ತನ್ನ ಮೇಲಾದ ಎನ್‍ಸಿಆರ್ ಅನ್ನು ಅಲ್ಲಗೆಳೆದಿದ್ದಾರೆ.

    ನನ್ನ ಸಿನಿಮಾ ನಿರ್ಮಾಣವಾಗುತ್ತಿದ್ದ ಸಂದರ್ಭದಲ್ಲಿ 2 ವರ್ಷ ನನ್ನ ಸಹಕಲಾವಿದರು ಹಾಗೂ ಟೆಕ್ನಿಷಿಯನ್ಸ್ ಅವರು ಅಶೋಕ ಹೊಟೇಲಿನಲ್ಲಿ ಉಳಿದುಕೊಂಡಿದ್ದರು. ಆದ್ರೆ ನಾನು ರೂಂ ಬುಕ್ ಮಾಡಿ ಯಾರ ಜೊತೆಗೆ ಇದ್ದೆ ಎನ್ನುವುದು ಸುಳ್ಳು. ನಾವಿಬ್ಬರು ಒಂದು ವರ್ಷ ರೂಂ ಬುಕ್ ಮಾಡಿ ಜೊತೆಗಿದ್ದೆವು ಎನ್ನುವುದಕ್ಕೆ ನಿಮ್ಮಲ್ಲಿ ಸಾಕ್ಷಿ ಇದೆಯೇ ಎಂದು ಪ್ರಶ್ನಿಸಿದ್ದಾರೆ.

    ಆ ಸಮಯದ ಹಣ ಯಾವುದೇ ಬಾಕಿ ಉಳಿಸಿಕೊಂಡಿಲ್ಲ. ಎಲ್ಲವೂ ಚುಕ್ತಾ ಆಗಿದೆ. ಬೇಕಿದ್ರೆ ಹೋಟಿಲಿನ ನ ಜನರಲ್ ಮ್ಯಾನೇಜರ್ ಅವರನ್ನೇ ಕೇಳಿ ಎಂದು ಗರಂ ಆದ್ರು. ಇದನ್ನೂ ಓದಿ: ಬಿಜೆಪಿ ಮುಖಂಡನ ಜೊತೆಗೆ ರೂಂ ಬುಕ್ ಮಾಡಿದ್ದ ನಟಿ ಪೂಜಾ ಗಾಂಧಿ!

    ಇಂದಿನವರೆಗೂ ಕಾಫಿ ಕುಡಿಯಲು ಅಥವಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹೋಗುತ್ತಾ ಇರುತ್ತೇನೆ. ನಾನು ನನ್ನ ಕುಟುಂಬ, ಅಮ್ಮನ ಜೊತೆ ವಾಸವಾಗಿದ್ದೇನೆ. ಹೀಗಾಗಿ ನಾನು ಯಾಕೆ ಹೋಟೆಲ್‍ಗೆ ಹೋಗಿ ನೆಲೆಸಲಿ ಎಂದು ಹೇಳಿದ್ರು. ಈ ದೂರು ಎಲ್ಲಿಂದ ಬಂದಿದೆ ಎಂದು ನನಗೆ ಗೊತ್ತಿಲ್ಲ. ನನಗೆ ಬಂದೂ ಇಲ್ಲ ಎಂದು ತಿಳಿಸಿದ್ರು.

    ಹಣ ಸಂದಾಯವಾಗಿದೆ: ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆ ಅಶೋಕ್ ಹೋಟೆಲ್ ಸ್ಪಷ್ಟನೆ ನೀಡಿ, ಪೂಜಾ ಗಾಂಧಿಯವರು ಪಾವತಿಸಬೇಕಿದ್ದ ಹಣ ಪಾವತಿಯಾಗಿದೆ. ದೂರು ಯಾರು ಕೊಟ್ಟಿದ್ದಾರೆ ಎನ್ನುವುದು ಗೊತ್ತಿಲ್ಲ ಎಂದು ಹೇಳಿದೆ.

  • ಬಿಜೆಪಿ ಮುಖಂಡನ ಜೊತೆಗೆ ರೂಂ ಬುಕ್ ಮಾಡಿದ್ದ ನಟಿ ಪೂಜಾ ಗಾಂಧಿ!

    ಬಿಜೆಪಿ ಮುಖಂಡನ ಜೊತೆಗೆ ರೂಂ ಬುಕ್ ಮಾಡಿದ್ದ ನಟಿ ಪೂಜಾ ಗಾಂಧಿ!

    ಬೆಂಗಳೂರು: ಸ್ಯಾಂಡಲ್‍ವುಡ್ ಮಳೆ ಹುಡುಗಿ ಪೂಜಾ ಗಾಂಧಿ ವಿರುದ್ಧ ದೂರು ದಾಖಲಾದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪೂಜಾಗಾಂಧಿಯವರು ಬಿಜೆಪಿ ಮುಖಂಡನ ಜೊತೆಗೆ ರೂಂ ಬುಕ್ ಮಾಡಿದ್ದರು ಎಂಬ ಮಾಹಿತಿ ಹೊರಬಿದ್ದಿದೆ.

    ಹೌದು. ಬೆಂಗಳೂರಿನ ದಿ ಲಲಿತ್ ಅಶೋಕ್ ಹೋಟೆಲ್‍ನಲ್ಲಿ ನಟಿ ಪೂಜಾ ಗಾಂಧಿ ಹಾಗೂ ಗದಗ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ 1 ವರ್ಷ ರೂಂ ಬುಕ್ ಮಾಡಿದ್ದರು. ಕಳೆದ 2016ರ ಏಪ್ರಿಲ್‍ನಿಂದ ಮಾರ್ಚ್ 2017ರವರೆಗೆ ಬರೋಬ್ಬರಿ 1 ವರ್ಷ ರೂಂ ಬುಕ್ ಮಾಡಿದ್ದರು.

    ಬಿಜೆಪಿ ಮುಖಂಡನ ಜೊತೆ ರೂಂ ಬುಕ್ ಮಾಡಿ ಆತಿಥ್ಯ ಸ್ವೀಕರಿಸಿದ್ದ ನಟಿ, 26 ಲಕ್ಷ ರೂಪಾಯಿ ಬಿಲ್ ಕಟ್ಟದೆ ಹೋಟೆಲಿಗೆ ಸತಾಯಿಸುತ್ತಿದ್ದರು. ಅಲ್ಲದೆ ಇದರಲ್ಲಿ 22 ಲಕ್ಷ ರೂಪಾಯಿ ಪಾವತಿಸಿ 3.53 ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಹೋಟೆಲ್ ಆಡಳಿತ ಮಂಡಳಿ ಬೆಂಗಳೂರಿನ ಹೈ ಗ್ರೌಂಡ್ ಪೊಲೀಸರಿಗೆ ದೂರು ನೀಡಿದ್ದಾರೆ.

    ದೂರು ಹಿನ್ನೆಲೆಯಲ್ಲಿ ಪೊಲೀಸರು ನಟಿ ವಿರುದ್ಧ ಎನ್‍ಸಿಆರ್(ಗಂಭೀರ ಸ್ವರೂಪವಲ್ಲದ ಪ್ರಕರಣ) ದಾಖಲು ಮಾಡಿಕೊಂಡಿದ್ದಾರೆ. ಅಲ್ಲದೆ ದೂರು ದಾಖಲಾದ ಕೂಡಲೇ ಪೊಲೀಸರು ನಟಿಯನ್ನು ಠಾಣೆಗೆ ಕರೆಸಿದ್ದಾರೆ. ಬಳಿಕ ಪೊಲೀಸರ ಸಮ್ಮುಖದಲ್ಲಿಯೇ ನಟಿ ಎರಡು ಲಕ್ಷ ರೂ. ನೀಡಿದ್ದಾರೆ. ಉಳಿದ ಹಣ ಕೊಡಲು ಕಾಲಾವಕಾಶ ಕೇಳಿದ್ದಾರೆ. ಒಟ್ಟಿನಲ್ಲಿ ಓರ್ವ ಸ್ಟಾರ್ ನಟಿಯ ಬಳಿ ಬಿಲ್ ಕಟ್ಟಲೂ ಹಣ ಇರಲಿಲ್ಲವೇ? ನಾಲ್ಕೂವರೆ ಲಕ್ಷ ಹಣ ಕೊಡದೇ ಎಸ್ಕೇಪ್ ಆಗಿದ್ದು ಯಾಕೆ ಎಂಬ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತಿದೆ.

  • ಎಲೆಕ್ಷನ್ ಹೊತ್ತಲ್ಲೇ ಐಟಿ ಶಾಕ್ – ಹೋಟೆಲ್‍ನಲ್ಲಿ ಕೂಡಿಟ್ಟಿದ್ದ 2 ಕೋಟಿ ರೂ. ಸೀಜ್

    ಎಲೆಕ್ಷನ್ ಹೊತ್ತಲ್ಲೇ ಐಟಿ ಶಾಕ್ – ಹೋಟೆಲ್‍ನಲ್ಲಿ ಕೂಡಿಟ್ಟಿದ್ದ 2 ಕೋಟಿ ರೂ. ಸೀಜ್

    ಬೆಂಗಳೂರು: ಲೋಕಸಭಾ ಚುನಾವಣೆಯ ಹೊತ್ತಲ್ಲೇ ಕರ್ನಾಟಕದಲ್ಲಿ ಅತೀ ದೊಡ್ಡ ಐಟಿ ದಾಳಿ ನಡೆದಿದ್ದು, ಖಾಸಗಿ ಹೋಟೆಲ್‍ನಲ್ಲಿ ಕೂಡಿಟ್ಟಿದ್ದ ಬರೋಬ್ಬರಿ 2 ಕೋಟಿ ರೂ. ಸೀಜ್ ಮಾಡಲಾಗಿದೆ.

    ಬೆಂಗಳೂರಿನ ಗಾಂಧಿನಗರದ ರಾಜಮಹಲ್ ಹೋಟೆಲ್‍ನಲ್ಲಿ ಐಟಿ ರೇಡ್ ಆಗಿದ್ದು, ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ನಾರಾಯಣಗೌಡ ಬಿ. ಪಾಟೀಲ್‍ಗೆ ಆದಾಯ ತೆರಿಗೆ ಇಲಾಖೆಯವರು ಶಾಕ್ ಕೊಟ್ಟಿದ್ದಾರೆ. ಆರ್ ಡಿಪಿಆರ್ ಕಾರ್ಯನಿರ್ವಾಹಕ ಎಂಜಿನಿಯರ್ ನಾರಾಯಣಗೌಡ ಬಿ ಪಾಟೀಲ್, ರಾಜಮಹಲ್ ಹೋಟೆಲ್ ನಲ್ಲಿ ಮೂರು ರೂಮ್ ಬುಕ್ ಮಾಡಿದ್ದರು.

    ಐಟಿ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಹೋಟೆಲ್ ಮೇಲೆ ದಾಳಿ ಮಾಡಿದ್ದಾರೆ. ಆಗ ಕೊಠಡಿ ಸಂಖ್ಯೆ 104, 105, 115ರಲ್ಲಿ ಕೋಟಿ ಕೋಟಿ ಹಣ ಸಂಗ್ರಹಿಸಿಟ್ಟಿರುವುದು ಬೆಳಕಿಗೆ ಬಂದಿದೆ. ಐಟಿ ದಾಳಿಯಾಗುತ್ತಿದ್ದಂತೆ ನಾರಾಯಣಗೌಡ ಬಿ ಪಾಟೀಲ್ ಪರಾರಿಯಾಗಿದ್ದಾರೆ. 500 ಮತ್ತು 2000 ರೂ. ಮುಖಬೆಲೆಯ ಕಂತೆ ಕಂತೆ ನೋಟುಗಳು ಪತ್ತೆಯಾಗಿದೆ.

    ನಾರಾಯಣಗೌಡ ಹಾವೇರಿಯಲ್ಲಿ ಕಳೆದ ಮೂರು-ನಾಲ್ಕು ವರ್ಷಗಳಿಂದ ಗ್ರಾಮೀಣಾಭಿವೃದ್ದಿ ಇಲಾಖೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಕೆಲಸ ಮಾಡುತ್ತಿದ್ದರು. ಹಾವೇರಿಯಲ್ಲೂ ಮೂರು ಮನೆಯನ್ನು ಕಟ್ಟಿಸಿದ್ದಾರೆ. ಇವರು ಬೆಂಗಳೂರಿಗೆ ಹಣ ಸಾಗಾಟ ಮಾಡುತ್ತಿದ್ದಾರೆ ಅನ್ನೋ ಮಾಹಿತಿ ಐಟಿ ಅಧಿಕಾರಿಗಳಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನ 3.30ಕ್ಕೆ ದಾಳಿ ಮಾಡಿದ್ದಾರೆ.

    ಬೆಂಗಳೂರು ಗಾಂಧಿನಗರದಲ್ಲಿದ್ದ ರಾಜಮಹಲ್ ಹೋಟೆಲಿನಲ್ಲಿ ಮೂರು ರೂಂ ಬುಕ್ ಮಾಡಿದ್ದು, ನಾರಾಯಣಗೌಡ ತನ್ನ ಕಾರಿನ ಮೂಲಕ ಹಣವನ್ನು ತಂದು ಸಂಗ್ರಹಿಸಿಟ್ಟಿದ್ದರು. ಸದ್ಯಕ್ಕೆ ನಾರಾಯಗೌಡ ಪರಾರಿಯಾಗಿದ್ದು, ಐಟಿ ಅಧಿಕಾರಿಗಳು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊಪ್ಪಳದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ..!

    ಕೊಪ್ಪಳದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ..!

    ಕೊಪ್ಪಳ: ಆಧುನಿಕವಾಗಿ ಎಷ್ಟೇ ಮುಂದುವರಿದಿದ್ದರೂ ಅಸ್ಪೃಶ್ಯತೆ ಅನ್ನೋ ಅನಿಷ್ಠ ಪದ್ಧತಿ ಕೊಪ್ಪಳದ ಗಂಗಾವತಿ ತಾಲೂಕಿನ ಗುಡೂರು, ಹಿರೇಖೇಡ ಗ್ರಾಮದಲ್ಲಿ ಇಂದಿಗೂ ಜೀವಂತವಾಗಿದೆ.

    ದೇಶದ ಪ್ರಗತಿಗೆ ಮಾರಕವಾದ ಕೆಲ ಅನಿಷ್ಠ ಪದ್ಧತಿಗಳಲ್ಲಿ ಅಸ್ಪೃಶ್ಯತೆಯೂ ಒಂದು. ಈ ಅನಿಷ್ಟ ತಡೆಯಲು ಸ್ವಾತಂತ್ರ್ಯ ಪೂರ್ವದಿಂದಲೂ ಸಾಕಷ್ಟು ಹೋರಾಟ ನಡೆಯಿತು. ಕಾನೂನು ರಚಿಸಿದರೂ ರಾಜ್ಯದ ಹಲವೆಡೆ ಅಸ್ಪೃಶ್ಯತೆ ಪದ್ಧತಿ ಇನ್ನೂ ಜೀವಂತವಾಗಿದೆ.

    ಜಿಲ್ಲೆಯ ಕನಕಗಿರಿಯಿಂದ ಕೇವಲ 20 ಕಿಮೀ ದೂರದಲ್ಲಿರುವ ಗುಡೂರು ಗ್ರಾಮದಲ್ಲಿ ದಲಿತರಿಗೆ ಇನ್ನೂ ಹೋಟೆಲ್‍ಗಳಲ್ಲಿ ಪ್ರವೇಶವಿಲ್ಲ. ಇವತ್ತಿಗೂ ಕೂಡ ದಲಿತರು ಬೊಗಸೆಯಲ್ಲಿ ನೀರು ಕೊಡುವ ಪದ್ಧತಿ ಈ ಭಾಗದಲ್ಲಿದೆ.

    ಇಲ್ಲಿನ ಜನರು ದಲಿತರಿಗೆ ದೂರದಿಂದಲೇ ನೀರನ್ನು ಎತ್ತಿ ಹಾಕುತ್ತಾರೆ. ಅದನ್ನೇ ದಲಿತರು ಬೊಗಸೆಯಲ್ಲಿ ಕುಡಿಯುತ್ತಾರೆ. ಮೇಲ್ವರ್ಗದ ಹೋಟೆಲ್‍ನಲ್ಲಿ ದಲಿತರು ನೀರು ಮುಟ್ಟೋ ಹಾಗಿಲ್ಲ. ಹೋಟೆಲ್ ಹೊರಗಡೆ ಬಂದು ನೀರು ಹಾಕುತ್ತಿರೋ ದೃಶ್ಯವನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.

    ವಿಡಿಯೋದಲ್ಲಿ, ಹೋಟೆಲ್‍ವೊಂದರಲ್ಲಿ ದಲಿತ ವ್ಯಕ್ತಿಯೋರ್ವನನ್ನು ಒಳಗೆ ಸೇರಿಸದೆ ದೂರದಿಂದಲೇ ಆಹಾರ ಮತ್ತು ನೀರು ಕೊಡುತ್ತಿರುವುದನ್ನು ನಾವು ಕಾಣಬಹುದಾಗಿದೆ. ಈ ರೀತಿ ಮಾಡಿದ ಹೋಟೆಲ್ ಮಾಲೀಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆಲ್ಸದ ನಿಮಿತ್ತ ಬೆಂಗ್ಳೂರಿಗೆ ಬಂದ ಮಹಿಳಾ ಟೆಕ್ಕಿ – ಹೋಟೆಲ್ ರೂಮಿನಲ್ಲೇ ಅತ್ಯಾಚಾರ, ಕೊಲೆ

    ಕೆಲ್ಸದ ನಿಮಿತ್ತ ಬೆಂಗ್ಳೂರಿಗೆ ಬಂದ ಮಹಿಳಾ ಟೆಕ್ಕಿ – ಹೋಟೆಲ್ ರೂಮಿನಲ್ಲೇ ಅತ್ಯಾಚಾರ, ಕೊಲೆ

    ಬೆಂಗಳೂರು: ಕಂಪನಿಯ ಕೆಲಸದ ನಿಮಿತ್ತ ಮಹಿಳಾ ಟೆಕ್ಕಿ ಮುಂಬೈನಿಂದ ಬೆಂಗಳೂರಿಗೆ ಬಂದಿದ್ದರು. ಕೆಲಸ ಮುಗಿಸಿ ತನ್ನ ಊರಿಗೆ ತೆರಳಬೇಕು ಅಂದುಕೊಂಡಿದ್ದ ಮಹಿಳೆಯನ್ನು ಹೋಟೆಲ್ ರೂಮ್ ನಲ್ಲಿ ಅತ್ಯಾಚಾರ ಎಸಗಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ಬೆನ್ನತ್ತಿದ ಪೋಲಿಸರು ದುಷ್ಕರ್ಮಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ರಂಜಿತಾ ಮೃತ ದುರ್ದೈವಿ. ಮುಂಬೈ ಮೂಲದ ಈ ಮಹಿಳೆ ಕಳೆದ ವಾರ ಬೆಂಗಳೂರಿನ ಕಾಡುಗೋಡಿ ಸಮೀಪದ ಐಟಿಪಿಎಲ್ ರಸ್ತೆಯ ಕ್ರೈಸ್ಟ್ ಹೋಟೆಲ್ ಗೆ ಬಂದಿದ್ದರು. ಆದರೆ ಇದ್ದಕ್ಕಿದ್ದಂತೆ ಹೋಟೆಲ್ ನ 7ನೇ ಮಹಡಿಯಲ್ಲಿರುವ 701 ನೇ ನಂಬರ್ ರೂಮ್ ನಲ್ಲಿ ಕೊಲೆಯಾಗಿ ಹೋಗಿದ್ದರು.

    ಈ ಪ್ರಕರಣ ದಾಖಲಿಸಿಕೊಂಡ ಕಾಡುಗೋಡಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆಗ ಅದೇ ಹೋಟೆಲ್ ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಮಣಿಪುರ ಮೂಲದ ಯಂಬಾ ಸಿಂಗ್ ವ್ಯಕ್ತಿ ಕಳೆದ ಫೆಬ್ರವರಿ 8 ರಂದು ಮಹಿಳೆ ತಂಗಿದ್ದ ರೂಮಿನಲ್ಲಿಯೇ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ. ಬಳಿಕ ಮಹಿಳೆ ಬಳಿ ಇದ್ದ ಒಪ್ಪೊ ಮತ್ತು ಆಪಲ್ ಐ ಫೋನ್‍ಗಳನ್ನು ತೆಗೆದುಕೊಂಡು ಪರಾರಿಯಾಗಿದ್ದನೆಂದು ತಿಳಿದು ಬಂದಿದೆ ಎಂದು ಡಿಸಿಪಿ ಅಬ್ದುಲ್ ಅಹ್ಮದ್ ಹೇಳಿದ್ದಾರೆ.

    ಕಂಪನಿಯ ಕೆಲಸದ ನಿಮಿತ್ತ ಹೊರ ರಾಜ್ಯದಿಂದ ಬೆಂಗಳೂರಿಗೆ ಬಂದಿದ್ದ ಮಹಿಳೆಯನ್ನು ಹೋಟೆಲ್ ರೂಮ್ ಒಂದರಲ್ಲಿ ಬರ್ಬರವಾಗಿ ಕೊಲೆ ಮಾಡಿದ್ದರಿಂದ ಹೋಟೆಲ್ ಗಳು ಮಹಿಳೆಯರಿಗೆ ಸೇಫ್ ಅಲ್ವಾ ಎಂಬ ಪ್ರಶ್ನೆ ಹುಟ್ಟುಕೊಂಡಿದೆ. ಇನ್ನಾದರೂ ಹೋಟೆಲ್ ಸಿಬ್ಬಂದಿ ಕೆಲಸಗಾರರನ್ನು ನೇಮಿಸಿಕೊಳ್ಳುವಾಗ ಕೊಂಚ ಜಾಗರೂಕತೆಯಿಂದ ಇರಬೇಕಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv