Tag: Hotel

  • ಟ್ರಂಪ್ ತಂಗಲಿರುವ ‘ಚಾಣಕ್ಯ’ ಸೂಟ್ ವಿಶೇಷತೆ ಏನು? ಒಂದು ದಿನದ ಬಾಡಿಗೆ ಎಷ್ಟು?

    ಟ್ರಂಪ್ ತಂಗಲಿರುವ ‘ಚಾಣಕ್ಯ’ ಸೂಟ್ ವಿಶೇಷತೆ ಏನು? ಒಂದು ದಿನದ ಬಾಡಿಗೆ ಎಷ್ಟು?

    ನವದೆಹಲಿ: ಅಹಮದಾಬಾದ್, ಆಗ್ರಾ ಪ್ರವಾಸದ ಬಳಿಕ ದೆಹಲಿ ತೆರಳಿರುವ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ದಾರ್ ಪಟೇಲ್ ರಸ್ತೆಯಲ್ಲಿರುವ ಐಟಿಸಿ ಮೌರ್ಯ ಹೋಟೆಲ್‍ನಲ್ಲಿ ಟ್ರಂಪ್ ವಾಸ್ತವ್ಯ ಹೂಡಲಿದ್ದಾರೆ. ‘ಚಾಣಕ್ಯ’ ಹೆಸರಿನ ಎರಡು ಬೆಡ್‍ರೂಂಗಳ ಐಷಾರಾಮಿ ಗ್ರ್ಯಾಂಡ್ ಪ್ರೆಸಿಡೆನ್ಶಿಯಲ್ ಸೂಟ್‍ನಲ್ಲಿ ಟ್ರಂಪ್ ತಂಗಲಿದ್ದು ಮಂಗಳವಾರ ದೆಹಲಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ.

    ‘ಚಾಣಕ್ಯ’ ಹೆಸರಿನ ಪ್ರೆಸಿಡೆನ್ಶಿಯಲ್ ಸೂಟ್ ಒಂದು ಖಾಸಗಿ ಡ್ರಾಯಿಂಗ್ ರೂಮ್, ಒಂದು ಖಾಸಗಿ ಟೆರೇಸ್, ಜಿಮ್, ಖಾಸಗಿ ಪ್ರವೇಶ ಭಾಗವಿರುವ 12 ಆಸನಗಳ ಭೋಜನ ಸ್ಥಳ, ಅತಿ ವೇಗದ ಎಲಿವೆಟರ್, ಬೃಹತ್ ಸ್ನಾನದ ಕೊಠಡಿ, ಮಿನಿ ಸ್ಪಾ ಮತ್ತು ವಿಶೇಷ ಪರಿಣತ ಬಾಣಸಿಗ ಹಾಗೂ ಅತ್ಯುನ್ನತ ಭದ್ರತಾ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ.

    ಭಾರತಕ್ಕೆ ಮೊದಲ ಬಾರಿಗೆ ಭೇಟಿ ನೀಡಿರುವ ಡೊನಾಲ್ಡ್ ಟ್ರಂಪ್, ಈ ಐಷಾರಾಮಿ ಹೋಟೆಲ್‍ನಲ್ಲಿ ಉಳಿದುಕೊಳ್ಳಲಿರುವ ಅಮೆರಿಕದ ನಾಲ್ಕನೇ ಅಧ್ಯಕ್ಷರಾಗಿದ್ದಾರೆ. ಇದಕ್ಕೂ ಮೊದಲು ಜಿಮ್ಮಿ ಕಾರ್ಟರ್, ಬಿಲ್ ಕ್ಲಿಂಟನ್, ಜಾರ್ಜ್ ಡಬ್ಲ್ಯೂ ಬುಷ್, ಬರಾಕ್ ಒಬಾಮ ಈ ಹೋಟೆಲ್‍ನಲ್ಲಿ ಆತಿಥ್ಯ ಸ್ವೀಕರಿಸಿದ್ದರು. ಸುಮಾರು 4,600 ಚದರ ಅಡಿ ವಿಸ್ತೀರ್ಣ ಇರುವ ಈ ಚಾಣಕ್ಯ ಸೂಟ್‍ನಲ್ಲಿ ಒಂದು ರಾತ್ರಿ ಕಳೆಯಲು 8 ಲಕ್ಷ ರೂಪಾಯಿ ವೆಚ್ಚವಾಗಲಿದೆ.

    ಟ್ರಂಪ್ ವಾಸ್ತವ್ಯದ ಹಿನ್ನಲೆ ಎರಡು ವಾರಕ್ಕೂ ಮುಂಚಿನಿಂದಲೇ ಹೋಟೆಲ್ ನಲ್ಲಿ ಎನ್‍ಎಸ್‍ಜಿ ಕಮಾಂಡೋಗಳು ಭದ್ರತಾ ವ್ಯವಸ್ಥೆ ಮೇಲೆ ನಿಗಾ ವಹಿಸಿದ್ದಾರೆ. ಡೊನಾಲ್ಡ್ ಟ್ರಂಪ್ ವಾಸ್ತವ್ಯದ ಸಂದರ್ಭದಲ್ಲಿ ಇಲ್ಲಿ ಇತರೆ ಅತಿಥಿಗಳ ವಾಸ್ತವ್ಯಕ್ಕೆ ಅವಕಾಶ ನೀಡದೇ ಹೋಟೆಲ್‍ನಲ್ಲಿರುವ ಎಲ್ಲ 438 ಕೊಠಡಿಗಳನ್ನು ಕೂಡ ಟ್ರಂಪ್ ಅವರಿಗಾಗಿಯೇ ಕಾಯ್ದಿರಿಸಲಾಗಿದೆ.

    ಬಿಲ್ ಕ್ಲಿಂಟನ್ ಭೇಟಿ ನೀಡಿದ್ದ ಸಂದರ್ಭದಲ್ಲಿ ವಿಶೇಷವಾಗಿ ಕ್ಲಿಂಟನ್ ಪ್ಲಾಟರ್ ಮತ್ತು ಚೆಲ್ಸಾ ಪ್ಲಾಟರ್ ಹೆಸರಿನ ವಿಶೇಷ ಆಹಾರವನ್ನು ಈ ಹೋಟೆಲ್ ಸಿದ್ದಪಡಿಸಿತ್ತು. ಬರಾಕ್ ಒಬಾಮ ಭಾರತಕ್ಕೆ ಎರಡು ಬಾರಿ ಭೇಟಿ ವೇಳೆ ಕೂಡ ಹೋಟೆಲ್ ‘ಒಬಾಮ ಪ್ಲಾಟರ್’ ಸಿದ್ಧಪಡಿಸಿತ್ತು. ಸದ್ಯ ಟ್ರಂಪ್ ಗಾಗಿ ‘ಟ್ರಂಪ್ ಪ್ಲಾಟರ್’ ಹೆಸರಿನ ವಿಶೇಷ ಸಸ್ಯಾಹಾರ ತಯಾರಿ ಮಾಡಲಾಗಿದೆ.

    ಮೌರ್ಯ ಹೋಟೆಲಿನ 14ನೇ ಅಂತಸ್ತಿನಲ್ಲಿ ಟ್ರಂಪ್ ಉಳಿದುಕೊಳ್ಳಲಿದ್ದಾರೆ. ಸದ್ಯಕ್ಕೆ ವಿಶ್ವಸಂಸ್ಥೆಯ ಮಾನದಂಡಕ್ಕೆ ಅನುಗುಣವಾಗಿ ಗುಣಮಟ್ಟದ ಶುದ್ಧಗಾಳಿ ಒದಗಿಸುವ ಏಕೈಕ ಹೋಟೆಲ್ ಐಟಿಸಿ ಮೌರ್ಯ ಆಗಿದ್ದು, ಈ ಹಿಂದೆ ಟಿಬೆಟ್ ಧರ್ಮ ಗುರು ದಲೈ ಲಾಮಾ, ಮಾಜಿ ಬ್ರಿಟಿಷ್ ಪ್ರಧಾನಿ ಟೋನಿ ಬ್ಲೇರ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಸೌದಿ ಅರೇಬಿಯಾದ ಕಿಂಗ್ ಅಬ್ದುಲ್ಲಾ ಸಹ ಈ ಹೋಟೆಲಿನಲ್ಲೇ ತಂಗಿದ್ದರು.

  • ಇನ್ಮುಂದೆ ಹೋಟೆಲ್ ತಿಂಡಿ ದುಬಾರಿ

    ಇನ್ಮುಂದೆ ಹೋಟೆಲ್ ತಿಂಡಿ ದುಬಾರಿ

    ಬೆಂಗಳೂರು: ಕಳೆದ ಎರಡು ತಿಂಗಳುಗಳಿಂದ ಈರುಳ್ಳಿ, ತರಕಾರಿ, ದವಸ-ಧಾನ್ಯಗಳು, ಗ್ಯಾಸ್, ಹಾಲಿನ ದರ ಏರಿಕೆಯಾಗಿತ್ತು. ಆದರೆ ಈಗ ಹೋಟೆಲ್ ಊಟ-ತಿಂಡಿ ದರ ಕೂಡ ಸಹ ದುಬಾರಿಯಾಗಿದ್ದು, ಗ್ರಾಹಕರಿಗೆ ಹೋಟೆಲ್ ಮಾಲೀಕರು ಶಾಕ್ ನೀಡಿದ್ದಾರೆ.

    ಕೆಲವೇ ದಿನಗಳಲ್ಲಿ ಹೋಟೆಲ್ ಊಟ-ತಿಂಡಿಗಳ ಬೆಲೆಗಳಲ್ಲಿ ಶೇ. 5 ರಿಂದ 10ರಷ್ಟು ಹೆಚ್ಚಳ ಮಾಡಲು ಬೃಹತ್ ಬೆಂಗಳೂರು ಹೋಟೆಲ್ ಸಂಘ ನಿರ್ಧರಿಸಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಮೊದಲೇ ತತ್ತರಿಸಿರುವ ರಾಜ್ಯದ ಜನತೆಗೆ ಇದು ಬರೆಯೆಳೆದಂತಾಗಿದೆ. ಹಾಲು, ಎಣ್ಣೆ, ಮೊಸರು, ಬೆಳೆ ಕಾಳುಗಳ ಬೆಲೆ ಏರಿಕೆಯಾಗಿರುವುದರಿಂದ ಹೋಟೆಲ್ ಊಟ-ತಿಂಡಿಗಳ ಬೆಲೆ ಏರಿಕೆ ಅನಿವಾರ್ಯ ಎಂದು ಬೃಹತ್ ಬೆಂಗಳೂರು ಹೋಟೆಲ್ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಹೇಳಿದ್ದಾರೆ.

    ಬೆಂಗಳೂರಿನಲ್ಲಿ 17,000 ಹೋಟೆಲ್‍ಗಳಿವೆ. ಇವುಗಳಲ್ಲಿ ಸಣ್ಣ, ಮಧ್ಯಮ ಹಾಗೂ ದೊಡ್ಡ ಮಟ್ಟದ ಮೂರು ರೀತಿಯ ಹೋಟೆಲ್‍ಗಳು ಸೇರಿದೆ. ಸಣ್ಣ ಮತ್ತು ಮಾಧ್ಯಮ ಗಾತ್ರದ ಹೋಟೆಲ್‍ಗಳಲ್ಲಿ ಇಂದಿನಿಂದಲೇ ಕಾಫಿ, ಟೀ ದರ ಹೆಚ್ಚಾಗಲಿದೆ. ಕೇವಲ ಬೆಂಗಳೂರು ಮಾತ್ರವಲ್ಲದೇ ರಾಜ್ಯಾದ್ಯಂತ ಈ ಹೆಚ್ಚಳ ಜಾರಿಗೆ ಬರಲಿದೆಯಂತೆ. ಈ ಬಗ್ಗೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ವೋಡ್ಕಾ ಕುಡಿಸಿದ ಗೆಳೆಯ – 1 ಗಂಟೆ ನಂತ್ರ ಎಚ್ಚರವಾಗಿ ಆಸ್ಪತ್ರೆಗೆ ಹೋದ ವಿದ್ಯಾರ್ಥಿನಿ

    ವೋಡ್ಕಾ ಕುಡಿಸಿದ ಗೆಳೆಯ – 1 ಗಂಟೆ ನಂತ್ರ ಎಚ್ಚರವಾಗಿ ಆಸ್ಪತ್ರೆಗೆ ಹೋದ ವಿದ್ಯಾರ್ಥಿನಿ

    – ನಿದ್ದೆಗೆ ಜಾರುತ್ತಿದ್ದಂತೆ ಗೆಳತಿಯ ಮೇಲೆರಗಿದ ಗೆಳೆಯ
    – ಇನ್‍ಸ್ಟಾಗ್ರಾಂ ಮೂಲಕ ಒಂದು ತಿಂಗ್ಳ ಹಿಂದೆ ಪರಿಚಯ

    ಲಕ್ನೋ: ಇನ್‍ಸ್ಟಾಗ್ರಾಂ ಮೂಲಕ ಪರಿಯಚನಾಗಿದ್ದ ಸ್ನೇಹಿತನೊಬ್ಬ ಗೆಳೆತಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಉತ್ತರದ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

    ಹತ್ರಾಸ್ ಜಿಲ್ಲೆಯವನಾದ ದರ್ಶ್ ಗೌತಮ್ (23) ಬಂಧಿತ ಆರೋಪಿ. ಈಗ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದು, ತನ್ನ ಪೋಷಕರೊಂದಿಗೆ ಸದರ್ ಪ್ರದೇಶದಲ್ಲಿ ವಾಸಿಸುತ್ತಿದ್ದನು. ಆದರೆ ತಾಜ್‍ಗಂಜ್ ಪ್ರದೇಶದ ಹೋಟೆಲ್‍ವೊಂದರಲ್ಲಿ 20 ವರ್ಷದ ವಿದ್ಯಾರ್ಥಿನಿಗೆ ವೋಡ್ಕಾ ಕುಡಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ಗೌತಮ್ ಒಂದು ತಿಂಗಳ ಹಿಂದೆ ಇನ್‍ಸ್ಟಾಗ್ರಾಂ ಮೂಲಕ ಪರಿಚಯನಾಗಿದ್ದ. ಆದರೆ ತಾಜ್‍ಗಂಜ್ ಪ್ರದೇಶದ ಹೋಟೆಲಿನಲ್ಲಿ ಗೌತಮ್ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರು ನೀಡಿದ್ದಾಳೆ. ಸಂತ್ರಸ್ತೆ ನೀಡಿದ ದೂರಿ ಆಧಾರದ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಶುರು ಮಾಡಿದ್ದರು. ಆಗ ಹೋಟೆಲ್ ಸಿಸಿಟಿವಿಯಲ್ಲಿ ಸಂತ್ರಸ್ತೆ ಮತ್ತು ಆರೋಪಿ ಹೋಗಿರುವುದು ಕಂಡುಬಂದಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಬಬ್ಲೂ ಕುಮಾರ್ ತಿಳಿಸಿದ್ದಾರೆ.

    ಇಬ್ಬರೂ ತಾಜ್‍ಗಂಜ್ ಪ್ರದೇಶದ ಹೋಟೆಲ್‍ಗೆ ಹೋಗಿದ್ದರು. ಅಲ್ಲಿ ಆರೋಪಿ ಸಂತ್ರಸ್ತೆಗೆ ಕುಡಿಯಲು ಜ್ಯೂಸ್ ಕೊಟ್ಟಿದ್ದನು. ಅದನ್ನು ಕುಡಿದ ನಂತರ ಆಕೆ ಪ್ರಜ್ಞೆ ತಪ್ಪಿದ್ದಾಳೆ. ಆಗ ಆರೋಪಿ ಗೌತಮ್ ಅತ್ಯಾಚಾರ ಎಸಗಿದ್ದಾನೆ. ಒಂದು ಗಂಟೆಯ ನಂತರ ಸಂತ್ರಸ್ತೆಗೆ ಎಚ್ಚರವಾಗಿದೆ. ಆಗ ಆಕೆಯ ಖಾಸಗಿ ಭಾಗಗಳಲ್ಲಿ ಗಾಯದ ಗುರುತುಗಳು ಕಂಡುಬಂದಿದೆ. ತಕ್ಷಣ ಸಂತ್ರಸ್ತೆ ಸ್ನೇಹಿತರ ಜೊತೆ ಖಾಸಗಿ ಆಸ್ಪತ್ರೆಗೆ ಹೋಗಿ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾಳೆ.

    ಇತ್ತ ಆರೋಪಿ ತನ್ನ ಸ್ನೇಹಿತರ ಜೊತೆ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೋಗಿದ್ದನು. ಅಲ್ಲಿಯೇ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯ ಸ್ನೇಹಿತರು ಮತ್ತು ಹೋಟೆಲ್ ಸಿಬ್ಬಂದಿಯ ಹೇಳಿಕೆಯ ಮೇರೆಗೆ ಆರೋಪಿಯನ್ನು ಬಂಧಿಸಿದ್ದೇವೆ. ವಿಚಾರಣೆ ವೇಳೆ ಆರೋಪಿ ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಹೀಗಾಗಿ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದೇವೆ ಎಂದು ಬಬ್ಲೂ ಕುಮಾರ್ ಹೇಳಿದ್ದಾರೆ.

    ಸಂತ್ರಸ್ತೆಯ ಖಾಸಗಿ ಭಾಗದಲ್ಲಿ ಆಗಿರುವ ಗಾಯದಿಂದ ಆಕೆಯ ಮೇಲೆ ಕ್ರೂರವಾಗಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ವೈದ್ಯಕೀಯ ವರದಿಯಲ್ಲಿ ತಿಳಿದುಬಂದಿದೆ. ಅತ್ಯಾಚಾರ ಎಸಗುವ ಮೊದಲು ಸಂತ್ರಸ್ತೆಗೆ ಜ್ಯೂಸಿನಲ್ಲಿ ವೋಡ್ಕಾವನ್ನು ಮಿಕ್ಸ್ ಮಾಡಲಾಗಿತ್ತು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

  • ಉಡುಪಿಯ ವಿದ್ಯಾರ್ಥಿಗಳ ವನ್ ಡೇ ಹೋಟೆಲ್ – ಆಟದ ದಿನ ಜೀವನ ಪಾಠದ ಪ್ಲ್ಯಾನ್

    ಉಡುಪಿಯ ವಿದ್ಯಾರ್ಥಿಗಳ ವನ್ ಡೇ ಹೋಟೆಲ್ – ಆಟದ ದಿನ ಜೀವನ ಪಾಠದ ಪ್ಲ್ಯಾನ್

    ಉಡುಪಿ: ಜಿಲ್ಲೆಯ ಪ್ರತಿಷ್ಠಿತ ಎಂಜಿಎಂ ಕಾಲೇಜಿನ ಸ್ಟೂಡೆಂಟ್ಸ್ ವೆಲ್ಫೇರ್ ಕೌನ್ಸಿಲ್‍ನ ವಿದ್ಯಾರ್ಥಿಗಳು ನಾಳೆ ಒಂದು ದಿನದ ಮಟ್ಟಿಗೆ ಹೋಟೆಲ್ ಬಿಸಿನೆಸ್ ಮಾಡಲಿದ್ದಾರೆ. ಉಡುಪಿಯ ಹೋಟೆಲ್‍ಗಳಲ್ಲಿ ಸಿಗುವ ಎಲ್ಲಾ ಸ್ಪೆಷಲ್ ತಿಂಡಿಗಳನ್ನು ಒಂದೇ ಸೂರಿನಡಿ ಮಾರಾಟ ಮಾಡಲಿದ್ದಾರೆ.

    ಉಡುಪಿಯ ಮಹಾತ್ಮಾಗಾಂಧಿ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಫೆಬ್ರವರಿ 1 ಕ್ಕೆ ಕಾಲೇಜಿನ ಮೈದಾನದಲ್ಲಿ ನಡೆಯಲಿದೆ. ಸ್ಪೋರ್ಟ್ ಡೇ ದಿನ ಮಧ್ಯಾಹ್ನ ಊಟ, ಬೆಳಗ್ಗೆ ತಿಂಡಿ, ಸಂಜೆ ಟೀಗೆ ವಿದ್ಯಾರ್ಥಿಗಳು ರಸ್ತೆ ಪಕ್ಕದ ಹೋಟೆಲ್-ಬೇಕರಿಗಳನ್ನು ಅವಲಂಬಿಸುತ್ತಾರೆ. ಆದರೆ ಈ ಬಾರಿ ಡಿಫರೆಂಟ್ ಕಾನ್ಸೆಪ್ಟ್ ಅನ್ನು ಕಾಲೇಜು ವಿದ್ಯಾರ್ಥಿಗಳೇ ಮಾಡಲು ಹೊರಟಿದ್ದಾರೆ.

    13 ವಿದ್ಯಾರ್ಥಿಗಳ ತಂಡ ಮೈದಾನದಲ್ಲಿ ಹೋಟೆಲ್ ತೆರೆಯಲಿದೆ. ಕೂಲ್ ಡ್ರಿಂಕ್ಸ್ ನಿಂದ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ವಿದ್ಯಾರ್ಥಿಗಳು ಮಾಡಲಿದ್ದಾರೆ. ಉಡುಪಿ ನಗರದ ಹೋಟೆಲ್ ಗಳಲ್ಲಿ ಸಿಗುವ 10 ಡಿಫರೆಂಟ್ ಡಿಫರೆಂಟ್ ತಿಂಡಿ ತಿನಿಸುಗಳನ್ನು ತಂದು ಒಂದು ಕಡೆ ಮಾರಾಟ ಮಾಡಲಿದ್ದಾರೆ. ಬಿಸಿ ಚಕ್ಕುಲಿ ತೋವೆ, ತಂಪು ಎಳನೀರು ಶರಬತ್ತು, ಸಿಪ್ಪೆ ಲೋಟದ ಕಲ್ಲಂಗಡಿ ಜ್ಯೂಸ್, ಫ್ರೈಡ್ ರೈಸ್, ಬೆಲ್ಲ ಕ್ಯಾಂಡಿ, ದೂದ್ ಕ್ಯಾಂಡಿ, ವಡಪಾವ್, ಉಡುಪಿ ಪಾನಿಪುರಿ, ಬೆಂಕಿ ಬೀಡ, ಹೋಳಿಗೆ ತುಪ್ಪ, ಐಸ್ ಕ್ರೀಂ ಹೀಗೆ ತರಹೇವಾರಿ ಐಟಂಗಳು ಹೋಟೆಲ್ ಅಲ್ಲಿ ಸಿಗಲಿದೆ. ಚಹಾ, ಕಾಫಿ, ಮಾಲ್ಟ್, ಹಾರ್ಲಿಕ್ಸ್, ಕೂಲ್ ಡ್ರಿಂಕ್ ಕೂಡಾ ವಿದ್ಯಾರ್ಥಿಗಳ ಹೋಟೆಲಿನಲ್ಲಿ ಲಭ್ಯವಿರುತ್ತದೆ.

    ಸ್ಟೂಡೆಂಟ್ಸ್ ವೆಲ್ಫೇರ್ ಕೌನ್ಸಿಲ್ ಗೆ ಸ್ಪೋರ್ಟ್ಸ್ ಡೇ ದಿನ ಹೋಟೆಲ್ ಓಪನ್ ಮಾಡಿ ಲಾಭ ಮಾಡಬೇಕೆಂಬ ಉದ್ದೇಶ ಇಲ್ಲ. ನಮಗೆ ಸಿಗುವ ಬೆಲೆಯಲ್ಲೇ ನಮ್ಮ ಹೋಟೆಲ್ ನಲ್ಲಿ ನಾವು ವ್ಯಾಪಾರ ಮಾಡುತ್ತೇವೆ. ಸ್ಥಳ ಬಾಡಿಗೆ ಇಲ್ಲ. ಲಾಭ ಮಾಡಿ ಯಾರಿಗೂ ಸಹಾಯ ಮಾಡುವ ಉದ್ದೇಶವೂ ಇಲ್ಲ ಎಂದು ವಿದ್ಯಾರ್ಥಿ ನಾಯಕ ಶ್ರೇಯಸ್ ಕೋಟ್ಯಾನ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.

    ಕಾಲೇಜಿನ ವಾಟ್ಸಾಪ್ ಗ್ರೂಪ್, ಫೇಸ್ ಬುಕ್ ಪೇಜ್, ವೆಬ್ ಸೈಟ್ ಗಳಲ್ಲಿ ವಿದ್ಯಾರ್ಥಿ ಹೋಟೆಲ್ ನ ಬಗ್ಗೆ ಪ್ರಚಾರ ಶುರುವಾಗಿದೆ. ವಿಭಿನ್ನ ಕಾರ್ಯಕ್ರಮದ ಬಗ್ಗೆ ವಿಭಿನ್ನ ಆಮಂತ್ರಣ ಪತ್ರಿಕೆ ಮಾಡಿ ಶೇರ್ ಮಾಡುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿಗಳಲ್ಲಿ ಸದ್ಯ ಸ್ಟೂಡೆಂಟ್ಸ್ ಹೋಟೆಲ್ ನ ಬಗ್ಗೆ ಚರ್ಚೆ ನಡೆಯುತ್ತಿದೆ.

    ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಎಂ.ಜಿ ವಿಜಯ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ ಈಗಿನ ಮಕ್ಕಳಿಗೆ ಜೀವನ ಪಾಠದ ಅಗತ್ಯವಿದೆ. ಪುಸ್ತಕ ಮತ್ತು ಮೊಬೈಲ್ ನಿಂದ ಮಾತ್ರ ಜೀವನ ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ರಮೇಶ್ ಕಾರ್ಲ ಮತ್ತು ಶಿಕ್ಷಕರ ತಂಡ ವಿದ್ಯಾರ್ಥಿಗಳ ಹೊಸ ತರದ ಆಲೋಚನೆಗೆ ಬೆಂಬಲ ನೀಡಿದೆ.

  • ಡಿಕೆಶಿಯನ್ನು ಕಟ್ಟಿ ಹಾಕಲು ಖರ್ಗೆ ಮೊರೆ ಹೋದ ಸಿದ್ದರಾಮಯ್ಯ

    ಡಿಕೆಶಿಯನ್ನು ಕಟ್ಟಿ ಹಾಕಲು ಖರ್ಗೆ ಮೊರೆ ಹೋದ ಸಿದ್ದರಾಮಯ್ಯ

    ಬೆಂಗಳೂರು: ಡಿಕೆ ಶಿವಕುಮಾರ್ ಮಟ್ಟ ಹಾಕಲು ಹಾಗೂ ತಮ್ಮ ಪಾಲಿನ ಸ್ಥಾನ ಮಾನಗಳಿಸಿಕೊಳ್ಳಲು ಮಾಜಿ ಸಿಎಂ ಸಿದ್ದರಾಮಯ್ಯ ಮಲ್ಲಿಕಾರ್ಜುನ ಖರ್ಗೆ ನೆರವು ಪಡೆಯಲು ಮುಂದಾಗಿದ್ದಾರೆ. ಅದಕ್ಕಾಗಿ “ನೀವು ರಾಜ್ಯಸಭೆಗೆ ಆಯ್ಕೆ ಆಗಲೇಬೇಕು ಸರ್” ಅಂತ ಖರ್ಗೆ ಮನವೊಲಿಕೆಗೆ ಸಿದ್ದರಾಮಯ್ಯ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಗಣರಾಜ್ಯೋತ್ಸವ ಮುಗಿಸಿ ಒಟ್ಟೊಟ್ಟಿಗೆ ಜನಾರ್ದನ ಹೋಟೆಲಿನಲ್ಲಿ ತಿಂಡಿ ಸವಿಯಲು ಹೋದ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ನಡುವೆ ಸ್ವಾರಸ್ಯಕರ ಮಾತುಕತೆ ನಡೆದಿದೆ. ಪಕ್ಕಾ ಪ್ಲಾನ್ ಮಾಡಿಕೊಂಡೆ ತಿಂಡಿಗೆ ಕರೆದೊಯ್ದ ಸಿದ್ದರಾಮಯ್ಯ,”ಸಿಎಎ, ಎನ್‌ಆರ್‌ಸಿಯಂತಹ ದೊಡ್ಡ ವಿಚಾರಗಳ ಕಾಯ್ದೆ ಜಾರಿ ಸಂದರ್ಭದಲ್ಲಿ ನೀವು ಸಂಸತ್ತಿನಲ್ಲಿ ಇರಬೇಕಿತ್ತು ಸಾರ್” ಎಂದು ಸೆಂಟಿಮೆಂಟ್ ದಾಳ ಉರುಳಿಸಿದ್ದಾರೆ.

    ಹೇಗಿದ್ದರೂ ಜೂನ್ ತಿಂಗಳಿನಲ್ಲಿ ರಾಜ್ಯಸಭಾ ಚುನಾವಣೆ ಇದೆ. ರಾಜ್ಯಸಭೆಗೆ ಹೋಗಿ ಬಿಡಿ ಎಂದು ಖರ್ಗೆಯವರ ಮನವೊಲಿಕೆಗೆ ಯತ್ನಿಸಿದ್ದಾರೆ. ಆ ಮೂಲಕ ಮಲ್ಲಿಕಾರ್ಜುನ ಖರ್ಗೆಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಮ್ಮ ರಾಜಕೀಯ ದಾಳ ಉರುಳಿಸಲು ಮುಂದಾಗಿದ್ದಾರೆ.

    ಸಿದ್ದರಾಮಯ್ಯನವರಿಗೆ ವಿಪಕ್ಷ ಹಾಗೂ ಕಾಂಗ್ರೆಸ್ ಶಾಸಕಾಂಗ ನಾಯಕ ಎರಡು ಸ್ಥಾನ ಎರಡು ನೀಡಲು ಖರ್ಗೆ ಒಪ್ಪುತ್ತಿಲ್ಲ. ಇತ್ತ ಸಿದ್ದರಾಮಯ್ಯ ಬಯಕೆಯಂತೆ ಕೆಪಿಸಿಸಿ ಗೆ ನಾಲ್ಕು ಕಾರ್ಯಾಧ್ಯಕ್ಷರ ನೇಮಕ ವಿಚಾರದಲ್ಲೂ ಖರ್ಗೆ ಅಡ್ಡಗಾಲು ಹಾಕಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಆಯ್ಕೆಯಲ್ಲೂ ಸಿದ್ದರಾಮಯ್ಯ ಬಣಕ್ಕಿಂತ ಡಿಕೆಶಿ ಕೈಗೆ ಸಾರಥ್ಯ ಸಿಕ್ಕರೆ ಒಳ್ಳೆಯದು ಎಂದು ಖರ್ಗೆ ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.

    ಇಷ್ಟು ದಿನ ಖರ್ಗೆಗಿಂತ ನಾನೇ ಪವರ್ ಫುಲ್ ಎಂದುಕೊಂಡಿದ್ದ ಸಿದ್ದರಾಮಯ್ಯ ಈಗ ಯು ಟರ್ನ್ ಹೊಡೆದಿದ್ದಾರೆ. ಮಲ್ಲಿಕಾರ್ಜುನ ಖರ್ಗೆಗೆ ರಾಜ್ಯಸಭಾ ಕನಸು ತುಂಬಿ ತಮ್ಮ ಹಾದಿಗೆ ಅಡ್ಡ ಬರದಂತೆ ನೋಡಿಕೊಳ್ಳಲು ಮುಂದಾಗಿದ್ದಾರೆ. ಆ ಮೂಲಕ ಸಿಎಲ್‍ಪಿ ಹಾಗೂ ವಿಪಕ್ಷ ನಾಯಕನ ಸ್ಥಾನ ಎರಡು ತಾವೇ ಪಡೆಯುವ ಪ್ಲಾನ್ ಒಂದಾದರೆ ಇನ್ನೊಂದು ಕಡೆ ಕೆಪಿಸಿಸಿ ಪಟ್ಟದಲ್ಲೂ ಖರ್ಗೆ ನೆರವು ಸಿಕ್ಕರೆ ಡಿಕೆಶಿಗೆ ತಪ್ಪಿಸಲು ಸಿದ್ದರಾಮಯ್ಯಗೆ ಸಹಾಯವಾಗಲಿದೆ.

    ಈ ಎಲ್ಲ ಉಪಾಯ ಮಾಡಿಕೊಂಡೇ ಸಿದ್ದರಾಮಯ್ಯ ರಾಜ್ಯಸಭಾ ದಾಳವನ್ನು ಖರ್ಗೆಯವರ ಮುಂದೆ ಉರುಳಿಸಿದ್ದಾರೆ. ಸಿದ್ದು ದಾಳವನ್ನೇನೋ ಉರುಳಿಸಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಕೊಡದ ಮಲ್ಲಿಕಾರ್ಜುನ ಖರ್ಗೆ ಮಾತ್ರ ಎಂದಿನಂತೆ ಮೌನಕ್ಕೆ ಜಾರಿ ಸಿದ್ದರಾಮಯ್ಯನವರಿಗೆ ನಿರಾಸೆ ಮಾಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

  • ಹೋಟೆಲ್‍ಗೆಂದು ಲೈಸೆನ್ಸ್ ಪಡೆದು ಮದ್ಯ ಮಾರಾಟ – 63 ಲೀಟರ್ ಮದ್ಯ ವಶ

    ಹೋಟೆಲ್‍ಗೆಂದು ಲೈಸೆನ್ಸ್ ಪಡೆದು ಮದ್ಯ ಮಾರಾಟ – 63 ಲೀಟರ್ ಮದ್ಯ ವಶ

    ಬೆಂಗಳೂರು: ನಗರದ ಲಗ್ಗರೆ ವಾರ್ಡ್ ನ ಹೋಟೆಲ್ ಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಅಡ್ಡೆಗಳ ಮೇಲೆ ಪಾಲಿಕೆ ಆರೋಗ್ಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಹಿರಿಯ ಆರೋಗ್ಯ ಅಧಿಕಾರಿ ದಿವ್ಯ ನೇತೃತ್ವದಲ್ಲಿ ಈ ದಾಳಿ ಮಾಡಲಾಗಿದೆ.

    ಲಗ್ಗೆರೆಯ ಬಾಲಾಜಿ ಹಿಂದೂ ಮಿಲಿಟರಿ ಹೋಟೆಲ್ ಶೋಧಿಸಿ, ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 24,840 ಲೀಟರ್ ಮದ್ಯ, 27,950 ಲೀಟರ್ ಬಿಯರ್ ವಶಪಡಿಸಿಕೊಳ್ಳಲಾಗಿದೆ. ಲಗ್ಗೆರೆ ಮುನೇಶ್ವರ ಬಡಾವಣೆಯ ಜೈ ಮಾರುತಿ ಮಿಲಿಟರಿ ಹೋಟೆಲ್ ಮೇಲೆ ದಾಳಿ ಮಾಡಿ 10,800 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಇತ್ತ ಶ್ರೀನಿವಾಸ ಮಿಲಿಟರಿ ಹೋಟೆಲ್‍ನಿಂದ 9 ಲೀಟರ್ ಮದ್ಯ, 5.250 ಲೀಟರ್ ಬಿಯರ್ ಜಪ್ತಿ ಮಾಡಲಾಗಿದೆ.

    ದಾಳಿ ನಡೆಸಲಾದ ಹೋಟೆಲ್‍ಗಳಿಗೆ ಆರೋಗ್ಯಾಧಿಕಾರಿಯಿಂದ ನೋಟಿಸ್ ಜಾರಿಯಾಗಿದ್ದು, ನೋಟಿಸ್ ಜಾರಿಗೊಳಿಸಿದ್ದಕ್ಕೆ ಮಾಜಿ ನಾಮನಿರ್ದೇಶಿತ ಸದಸ್ಯ ಸಿದ್ದೇಗೌಡರಿಂದ ನೋಟಿಸ್ ವಾಪಸ್ ಪಡೆಯುವಂತೆ ಒತ್ತಡ ಹಾಕಲಾಗಿದೆ ಎನ್ನಲಾಗಿದೆ. ಈ ದಾಳಿಯಲ್ಲಿ ಒಟ್ಟು 63,854 ಲೀಟರ್ ಮದ್ಯವನ್ನು ಪಾಲಿಕೆಯ ಆರೋಗ್ಯ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

  • ಮಾನಸಿಕ ರೋಗಿಯಂತಿದ್ದ, ಯಾರೊಂದಿಗೂ ಮಾತನಾಡುತ್ತಿರಲಿಲ್ಲ: ಆದಿತ್ಯ ಸಹದ್ಯೋಗಿ

    ಮಾನಸಿಕ ರೋಗಿಯಂತಿದ್ದ, ಯಾರೊಂದಿಗೂ ಮಾತನಾಡುತ್ತಿರಲಿಲ್ಲ: ಆದಿತ್ಯ ಸಹದ್ಯೋಗಿ

    ಮಂಗಳೂರು: ಆದಿತ್ಯ ಮಾನಸಿಕ ರೋಗಿಯಂತೆ ಕಾಣುತ್ತಿದ್ದನು. ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ ಎಂದು ಆರೋಪಿ ಜೊತೆ ಕೆಲಸ ಮಾಡಿದ್ದ ಸಹದ್ಯೋಗಿಗಳು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಆದಿತ್ಯ ಸಹದ್ಯೋಗಿ, ಡಿಸೆಂಬರ್ 16ರಂದು ಆದಿತ್ಯ ಕುಡ್ಲ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ಕೆಲಸಕ್ಕೆ ಸೇರಿದ್ದು, ಇಲ್ಲಿ ಆತ ಬಿಲ್ಲಿಂಗ್ ಕೆಲಸ ಮಾಡುತ್ತಿದ್ದನು. ಜನವರಿ 13ರಂದು ಸಂಬಳವಾದ ನಂತರ ಆತ ರೆಸ್ಟೋರೆಂಟ್ ತೊರೆದಿದ್ದ. ಬಳಿಕ ಆತನ ಬಗ್ಗೆ ನಮಗೆ ಮಾಹಿತಿ ಇಲ್ಲ. ಆದಿತ್ಯ ಒಂದು ವಿಭಾಗದ ಬಿಲ್ಲಿಂಗ್ ಕೆಲಸ ಮಾತ್ರ ಮಾಡುತ್ತಿದ್ದನು. ಆದಿತ್ಯ ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಸೈಲೆಂಟ್ ಆಗಿ ಇರುತ್ತಿದ್ದನು ಎಂದರು.  ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಉದ್ಯೋಗ ಸಿಗದ್ದಕ್ಕೆ ಬೆದರಿಕೆ ಕರೆ ಮಾಡಿದ್ದ ಬಾಂಬರ್ ಈಗ ಬಾಂಬ್ ಇಟ್ಟ

    ಅಲ್ಲದೆ ಆದಿತ್ಯ ಮಾನಸಿಕ ರೋಗಿಯಂತೆ ಕಾಣುತ್ತಿದ್ದನು. ಈ ಬಗ್ಗೆ ಆತನಿಗೆ ಪ್ರಶ್ನಿಸಿದಾಗ, ನನ್ನ ತಂದೆಗೆ ಹುಷಾರಾಗಿಲ್ಲ. ಹಾಗಾಗಿ ನಾನು ಈ ರೀತಿ ಇದ್ದೇನೆ ಎಂದು ಹೇಳುತ್ತಿದ್ದನು. ಆದರೆ ಬಿಲ್ಲಿಂಗ್ ಕೆಲಸ ಮಾತ್ರ ಚೆನ್ನಾಗಿ ಮಾಡುತ್ತಿದ್ದನು. ಆದಿತ್ಯ ಕೆಲಸ ಕೇಳಿ ಬರುವಾಗ ನಮ್ಮ ಮ್ಯಾನೇಜರ್ ಇದ್ದರು, ನಾನು ಇಲ್ಲಿ ಇರಲಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಮಂಗಳೂರು ಬಾಂಬರ್ ಅರೆಸ್ಟ್

    ಇದೇ ವೇಳೆ ಮತ್ತೊಬ್ಬ ಸಹದ್ಯೋಗಿ ಮಾತನಾಡಿ, ನಾವು ಆದಿತ್ಯ ಜೊತೆ ಹೆಚ್ಚು ಸಂಪರ್ಕದಲ್ಲಿ ಇರುತ್ತಿರಲಿಲ್ಲ. ಆತ ಎಷ್ಟು ಬೇಕೋ ಅಷ್ಟು ಮಾತನಾಡುತ್ತಿದ್ದನು. ನೀವು ಯಾಕೆ ಮಾತನಾಡಲ್ಲ ಎಂದು ನಾವು ಪ್ರಶ್ನಿಸಿದಾಗ, ನಾನು ಅಷ್ಟೇ ಮಾತನಾಡುವುದು ಎಂದು ಹೇಳುತ್ತಿದ್ದನು. ಆದಿತ್ಯ ಚಲನವಲನದ ಬಗ್ಗೆ ನಮಗೆ ಯಾವುದೇ ಸುಳಿವು ಸಿಕ್ಕಿಲ್ಲ. ಆದರೆ ಆದಿತ್ಯ ಜೊತೆ ಯಾವಾಗಲೂ ಒಂದು ಬ್ಯಾಗ್ ತನ್ನ ಜೊತೆಯಲ್ಲಿಯೇ ಇಟ್ಟುಕೊಳ್ಳುತ್ತಿದ್ದನು. ಹೊರಗೆ ಹೋಗುವಾಗಲೂ ಆ ಬ್ಯಾಗ್ ತನ್ನ ಜೊತೆಯಲ್ಲೇ ತೆಗೆದುಕೊಂಡು ಹೋಗುತ್ತಿದ್ದನು ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಹೌದು, ಬಾಂಬ್ ಇಟ್ಟಿದ್ದು ನಾನೇ – ತಪ್ಪೊಪ್ಪಿಕೊಂಡ ಆದಿತ್ಯ ರಾವ್

    ಮಣಿಪಾಲ ಮೂಲದ ಆದಿತ್ಯ ರಾವ್ ಇಂದು ಬೆಳಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರ ಕಚೇರಿಗೆ ಆಗಮಿಸಿ ಶರಣಾಗಿದ್ದಾನೆ. ಈಗ ಪೊಲೀಸರು ಈತನನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

  • ಸಿಲಿಕಾನ್ ಸಿಟಿಯಲ್ಲಿ ಐಸ್ ಕ್ರೀಂ ಥಾಲಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

    ಸಿಲಿಕಾನ್ ಸಿಟಿಯಲ್ಲಿ ಐಸ್ ಕ್ರೀಂ ಥಾಲಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

    ಬೆಂಗಳೂರು: ಸಾಮಾನ್ಯವಾಗಿ ನಾವು ರೆಸ್ಟೋರೆಂಟ್‍ಗಳಿಗೆ ಹೋದ್ರೆ ನಾರ್ಥ್ ಇಂಡಿಯನ್, ಸೌತ್ ಇಂಡಿಯನ್, ರಾಜಸ್ಥಾನಿ, ಗುಜರಾತಿ ಥಾಲಿಗಳ ಬಗ್ಗೆ ಕೇಳಿರುತ್ತೇವೆ. ಬಾಯಿ ಚಪ್ಪರಿಸಿಕೊಂಡು ತಿದ್ದಿರುತ್ತೇವೆ. ಆದರೆ ಜಯನಗರದ ಖಾಸಗಿ ಹೋಟೆಲ್‍ವೊಂದರಲ್ಲಿ ಐಸ್ ಕ್ರೀಂ ಥಾಲಿಯೊಂದನ್ನು ತಯಾರಿಸಿ ಪರಿಚಯಿಸಲಾಗುತ್ತಿದೆ.

    ಸುಮಾರು 10 ಬಗೆ ಬಗೆಯ ಐಸ್ ಕ್ರೀಮ್ ಫ್ಲೇವರ್ ಗಳು ಹಾಗೂ ಒಂದು ಬೌಲ್ ಪೂರ್ತಿ ಹಣ್ಣುಗಳ ಜೊತೆ ಇದನ್ನು ಸರ್ವ್ ಮಾಡಲಾಗುತ್ತೆದೆ. ಈ ಥಾಲಿ ಐಸ್ ಕ್ರೀಂನಲ್ಲಿ ಸಾವಯವ ರೀತಿಯಲ್ಲಿ ಬೆಳೆಸಿದ ಬೆರ್ರಿ ಸೇರಿದಂತೆ ವೆನಿಲ್ಲಾ, ಸ್ಟ್ರಾಬೆರಿ, ಚಾಕೊಲೇಟ್, ಪಿಸ್ತಾ, ಮ್ಯಾಂಗೋ, ಬಟರ್ ಸ್ಕಾಚ್, ಬ್ಲಾಕ್ ಕರೆಂಟ್ ಮತ್ತು ಅರೇಬಿಯನ್ ಡಿಲೈಟ್ ಐಸ್ ಕ್ರೀಂಗಳನ್ನು ಥಾಲಿಯಲ್ಲಿ ನೀಡಲಾಗುತ್ತದೆ. ಪ್ರತೀ ಫ್ಲೇವರ್ ನಲ್ಲೂ ಕೂಡ ಆಯಾ ಹಣ್ಣಿನ ತುಣುಕುಗಳು ಸಿಗುತ್ತವೆ. ಒಂದು ಐಸ್ ಕ್ರೀಂ ಥಾಲಿ 350 ರೂಪಾಯಿಗೆ ಸಿಗುತ್ತದೆ.

    ಒಟ್ಟಾರೆ ಮನೆ ಮಂದಿಯಲ್ಲಾ ಊಟಕ್ಕೆ ಹೋದಾಗ ಒಬ್ಬೊಬ್ಬರು ಒಂದೊಂದು ಐಸ್ ಕ್ರೀಮ್ ಆರ್ಡರ್ ಮಾಡುವ ಬದಲು, ಡಿಫರೆಂಟ್ ಟೇಸ್ಟಿ ಮತ್ತು ಟ್ರೆಂಡಿ ಥಾಲಿ ಐಸ್ ಕ್ರೀಂಗಳನ್ನು ಸವಿಯಬಹುದು.

  • ಮಧುವಣಗಿತ್ತಿಯಂತೆ ಸಿಂಗಾರಗೊಂಡಿವೆ ಹೋಟೆಲ್, ಹೋಮ್ ಸ್ಟೇಗಳು

    ಮಧುವಣಗಿತ್ತಿಯಂತೆ ಸಿಂಗಾರಗೊಂಡಿವೆ ಹೋಟೆಲ್, ಹೋಮ್ ಸ್ಟೇಗಳು

    ಮಡಿಕೇರಿ: ಹಳೆ ವರ್ಷಕ್ಕೆ ವಿದಾಯ ಹೇಳಿ, ಹೊಸ ವರ್ಷ ಸ್ವಾಗತಿಸಲು ಇನ್ನೇನು ಕ್ಷಣಗಣನೆ ಆರಂಭಗೊಂಡಿದೆ. ಇದಕ್ಕೆ ಮಂಜಿನ ನಗರಿಯ ಹೋಟೆಲ್, ಹೋಮ್ ಸ್ಟೇ ಹಾಗೂ ರೆಸಾರ್ಟ್‍ಗಳು ಮಧುವಣಗಿತ್ತಿಯಂತೆ ಸಿಂಗಾರಗೊಂಡಿವೆ.

    ಇಯರ್ ಎಂಡ್ ಮತ್ತು ನ್ಯೂ ಇಯರ್ ಸೆಲೆಬ್ರೇಷನಿಗೆ ಪ್ರವಾಸಿಗರ ಸ್ವರ್ಗ, ಮಂಜಿನ ನಗರಿ ಮಡಿಕೇರಿಗೆ ಪ್ರವಾಸಿಗರು ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದಾರೆ. ನಗರದ ಪ್ರವಾಸಿ ತಾಣಗಳೆಲ್ಲ ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ. ಹೋಮ್ಸ್ ಸ್ಟೇ ಗಳು ಭರ್ತಿಯಾಗಿವೆ, ಕೊಡಗಿನ ಹೋಟೆಲ್, ಹೋಮ್ಸ್ ಸ್ಟೇ, ರೆಸಾರ್ಟ್ ಗಳು ನ್ಯೂ ಇಯರ್ ವೆಲ್ ಕಮ್ ಮಾಡಿಕೊಳ್ಳಲು ಭರ್ಜರಿಯಾಗಿಯೇ ತಯಾರಾಗಿವೆ.

    ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಹೋಟೆಲ್, ಹೋಮ್ಸ್ ಸ್ಟೇ, ರೆಸಾರ್ಟ್ ಗಳು ಮಧುವಣಗಿತ್ತಿಯಂತೆ ಅಲಂಕಾರಗೊಂಡಿವೆ. ಸುಂದರ ಪ್ರಕೃತಿಯ ಮಡಿಲಲ್ಲಿ 2019ಕ್ಕೆ ಗುಡ್ ಬೈ ಹೇಳಿ, 2020ನ್ನು ಸ್ವಾಗತಿಸಲು ಜಿಲ್ಲೆಯ ಜನತೆ ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ ಪ್ರವಾಸಿಗರು ಕಾತುರದಿಂದ ಕಾಯುತ್ತಿದ್ದಾರೆ.

  • ಪ್ರೇಮ ವೈಫಲ್ಯ ಶಂಕೆ-ಯುವಕ ನೇಣಿಗೆ ಶರಣು

    ಪ್ರೇಮ ವೈಫಲ್ಯ ಶಂಕೆ-ಯುವಕ ನೇಣಿಗೆ ಶರಣು

    ಚಿಕ್ಕಬಳ್ಳಾಪುರ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ತೊಂಡೆಬಾವಿ ಗ್ರಾಮದಲ್ಲಿ ನಡೆದಿದೆ.

    ಯೋಗೇಶ್ (25) ಆತ್ಮಹತ್ಯೆ ಮಾಡಿಕೊಂಡ ಯುವಕ. ಹೋಟೆಲ್ ಮಾಲೀಕ ಬೋಜಣ್ಣನವರ ಹಿರಿಯ ಮಗ ಯೋಗೇಶ್ ಕಾರಣಾಂತರಗಳಿಂದ ಎಂಜಿನಿಯರಿಂಗ್ ವ್ಯಾಸಂಗ ಅರ್ಧಕ್ಕೆ ಬಿಟ್ಟಿದ್ದನು. ಬಳಿಕ ಹೋಟೆಲ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದನು.

    ಯೋಗೇಶ್ ತನ್ನ ಸಂಬಂಧಿಕರೊಬ್ಬರನ್ನು ಪ್ರೀತಿ ಮಾಡುತ್ತಿದ್ದ ಎಂದು ಹೇಳಲಾಗುತ್ತಿದ್ದು, ಕೆಲ ಕಾರಣಾಂತರಗಳಿಂದ ಮನೆಯವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ. ಹೀಗಾಗಿ ಮನನೊಂದ ಯೋಗೇಶ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾನೆ.

    ಈ ಸಂಬಂಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.