Tag: Hotel

  • ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ವತಿಯಿಂದ ರಕ್ತದಾನ ಶಿಬಿರ

    ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ವತಿಯಿಂದ ರಕ್ತದಾನ ಶಿಬಿರ

    ದುಬೈ: ದುಬೈ ಉದ್ಯಮಿ, ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯುಎಇ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿಯವರ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ವತಿಯಿಂದ ಸತತ ಏಳನೇ ವರ್ಷದ ರಕ್ತದಾನ ಶಿಬಿರ ದುಬೈನ ಫಾರ್ಚೂನ್ ಏಟ್ರಿಯಂ ಹೋಟೆಲ್ ನಲ್ಲಿ ಯಶಸ್ವಿಯಾಗಿ ನಡೆಯಿತು.

    ಪ್ರವೀಣ್ ಶೆಟ್ಟಿಯವರು ತಮ್ಮ ಹೆತ್ತವರಾದ ನಾರಾಯಣ ಶೆಟ್ಟಿ ಮತ್ತು ಸರೋಜಿನಿಯವರ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಪ್ರತೀ ವರ್ಷ ಫಾರ್ಚೂನ್ ಗ್ರೂಪ್ ಹೋಟೆಲ್ ಸಿಬ್ಬಂದಿ ಸಹಕಾರದೊಂದಿಗೆ ರಕ್ತದಾನ ಶಿಬಿರ ನಡೆಸುತ್ತಿದ್ದು, ರಕ್ತದಾನದ ಮಹತ್ವದ ಕುರಿತು ಸತತವಾಗಿ ಜಾಗೃತಿ ಮೂಡಿಸುವ ಅಭಿಯಾನದಲ್ಲಿ ನಿರತರಾಗಿದ್ದಾರೆ.

    ರಕ್ತದಾನ ಶಿಬಿರದ ನೇತೃತ್ವದ ವಹಿಸಿ, ಸ್ವಯಂ ರಕ್ತದಾನ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರವೀಣ್ ಶೆಟ್ಟಿ, ರಕ್ತದಾನ ಮಾಡಿದರೆ 24 ಗಂಟೆಯೊಳಗೆ ನಮ್ಮ ದೇಹ ರಕ್ತವನ್ನು ಪುನರುತ್ಪತ್ತಿ ಮಾಡುತ್ತದೆ. ಆದರೆ ಜೀವ ಹೋದರೆ ಮತ್ತೆ ವಾಪಸ್ ಬರುವುದಿಲ್ಲ ಹಾಗಾಗಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು, ಜೀವದಾನಿ ಆಗಬೇಕು. ಕೊರೊನಾ ಸಂದರ್ಭದಲ್ಲಿ ಇದೀಗ ಪ್ರಪಂಚದಾದ್ಯಂತ ಬ್ಲಡ್ ಬ್ಯಾಂಕ್ ನಲ್ಲಿ ರಕ್ತದ ಕೊರತೆ ಇದ್ದು, ಕೊರೊನಾ ಸುರಕ್ಷತೆಯ ನಿಯಮಗಳನ್ನು ಪಾಲಿಸಿ ನಮ್ಮ ಶಿಬಿರ ಆಯೋಜಿಸಿದ್ದು, ಇದರ ಯಶಸ್ವಿ ಆಯೋಜನೆಗೆ ಕಾರಣಕರ್ತರಾದ ಫಾರ್ಚೂನ್ ಹೋಟೆಲ್ ಸಿಬ್ಬಂದಿ ಸಂದೇಶ್, ರಾಕೇಶ್ ಶೆಟ್ಟಿ ಮತ್ತು ಪಾಲ್ಗೊಂಡ ಎಲ್ಲಾ ರಕ್ತದಾನಿಗಳಿಗೆ ಹಾಗೂ ದುಬೈ ಹೆಲ್ತ್ ಅಥೋರಿಟಿಗೆ ಮನಃಪೂರ್ವಕ ಧನ್ಯವಾದ ತಿಳಿಸಿದರು.

    ರಕ್ತದಾನ ಶಿಬಿರದಲ್ಲಿ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯ ಹಲವು ಸದಸ್ಯರು, ಕನ್ನಡಿಗಾಸ್ ಫೆಡರೇಷನ್ ನ ಸಂಚಾಲಕರಾದ ಹಿದಾಯತ್ ಅಡ್ಡೂರ್, ಯಶವಂತ್ ಕರ್ಕೇರಾ, ಇಮ್ರಾನ್ ಖಾನ್ ಎರ್ಮಾಳ್ ಪಾಲ್ಗೊಂಡಿದ್ದು, ಯುಎಇಯಲ್ಲಿ ರಕ್ತದಾನ ಜಾಗೃತಿ ಮೂಡಿಸುವಲ್ಲಿ ಮುಂಚೂಣಿಯಲ್ಲಿರುವ ಬಾಲಕೃಷ್ಣ ರವರು ಶಿಬಿರ ಸುಸೂತ್ರವಾಗಿ ನಡೆಯಲು ಸಹಕರಿಸಿದರು.

  • ಇಂದಿನಿಂದ ಹೋಟೆಲ್‍ಗಳಲ್ಲಿ ಪಾರ್ಸೆಲ್‍ಗಷ್ಟೇ ಅವಕಾಶ

    ಇಂದಿನಿಂದ ಹೋಟೆಲ್‍ಗಳಲ್ಲಿ ಪಾರ್ಸೆಲ್‍ಗಷ್ಟೇ ಅವಕಾಶ

    ಬೆಂಗಳೂರು: ಟಫ್ ರೂಲ್ಸ್ ಜಾರಿ ಹಿನ್ನೆಲೆ ಇಂದಿನಿಂದ ಹೋಟೆಲ್ ಗಳಲ್ಲಿ ಪಾರ್ಸೆಲ್ ಗಷ್ಟೆ ಅವಕಾಶ ನೀಡಲಾಗುತ್ತದೆ.

    ಸರ್ವಿಸ್‍ಗೆ ಅವಕಾಶ ಇಲ್ಲದಿರುವುದರಿಂದ ಪಾರ್ಸೆಲ್ ತೆಗೆದುಕೊಂಡು ಹೋಗಬೇಕು. ಹೀಗಾಗಿ ಸಿಲಿಕಾನ್ ಸಿಟಿಯ ಬಹುತೇಕ ಹೋಟೆಲ್ ಗಳಲ್ಲಿ ಈಗಾಗಲೇ ಪಾರ್ಸೆಲ್ ಗಷ್ಟೆ ಅವಕಾಶ ಅಂತ ಬೋರ್ಡ್ ಹಾಕಲಾಗಿದೆ.

    ಇತ್ತ ಹಫಟೆಲ್ ಸಿಬ್ಬಂದಿ ಕೂಡ ತಮ್ಮ, ಗ್ರಾಹಕರಿಗೆ ಪಾರ್ಸೆಲ್ ನೀಡಿ ಕಳುಹಿಸುತ್ತಿದ್ದಾರೆ. ತಿಂಡಿ, ಉಪಹಾರ, ಕಾಫಿ ಟೀ ಸೇವಿಸಲು ಅವಕಾಶವಿಲ್ಲ. ಮೇ 4 ರವರೆಗೆ ಈ ನಿಯಮ ಜಾರಿಯಲ್ಲಿರುತ್ತದೆ.

  • ಈ ಸಲ ಕಪ್ ನಮ್ದೆ – ಹೋಟೆಲ್ ಬಿಲ್ ನಲ್ಲಿ ಪ್ರಿಂಟ್ ಹಾಕಿಸಿದ ಮಾಲೀಕ

    ಈ ಸಲ ಕಪ್ ನಮ್ದೆ – ಹೋಟೆಲ್ ಬಿಲ್ ನಲ್ಲಿ ಪ್ರಿಂಟ್ ಹಾಕಿಸಿದ ಮಾಲೀಕ

    – ಬೈಕ್ ಮೇಲೂ ಈ ಸಲ ಕಪ್ ನಮ್ದೆ ಎಂದು ಬರೆಸಿದ ಅಭಿಮಾನಿ

    ಶಿವಮೊಗ್ಗ: ಇಂದಿನಿಂದ ಐಪಿಎಲ್ 14ನೇ ಆವೃತ್ತಿಯ ಕ್ರಿಕೆಟ್ ಟೂರ್ನಿ ಆರಂಭವಾಗುತ್ತಿದೆ. ಐಪಿಎಲ್ ಕ್ರಿಕೆಟ್ ಮ್ಯಾಚ್ ಆರಂಭವಾದ ದಿನದಿಂದ ಕ್ರಿಕೆಟ್ ಪ್ರೇಮಿಗಳಲ್ಲಿ ಕ್ರಿಕೆಟ್ ಫೀವರ್ ಹೆಚ್ಚಾಗುತ್ತಿದೆ. ಕ್ರಿಕೆಟ್ ಅಭಿಮಾನಿಗಳು ಒಬ್ಬೊಬ್ಬರು ಒಂದೊಂದು ತಂಡದ ಮೇಲೆ ಅಭಿಮಾನ ಇಟ್ಟುಕೊಂಡಿರುತ್ತಾರೆ. ಅದೇ ಮಾದರಿಯಲ್ಲಿ ಶಿವಮೊಗ್ಗದ ಸಾಗರದಲ್ಲಿ ಆರ್‌ಸಿಬಿ ಅಭಿಮಾನಿಯೊಬ್ಬರು ‘ಈ ಸಲ ಕಪ್ ನಮ್ದೆ’ ಎಂದು ತನ್ನ ಹೋಟೆಲ್ ಬಿಲ್ ನಲ್ಲಿ ಪ್ರಿಂಟ್ ಹಾಕಿಸುವ ಮೂಲಕ ಆರ್‍ಸಿಬಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

    ಸಾಗರದಲ್ಲಿರುವ ಹೋಟೆಲ್ ಸದ್ಗುರು ಮಾಲೀಕ ಸಂತೋಷ್ ಆರ್‌ಸಿಬಿ ಅಭಮಾನಿ ಆಗಿದ್ದು, ಈ ಸಲವಾದರು ಐಪಿಎಲ್ ನಲ್ಲಿ ಆರ್‌ಸಿಬಿ ಕಪ್ ಗೆಲ್ಲಲಿ ಎಂಬ ಮಹಾದಾಸೆ ಹೊಂದಿದ್ದಾರೆ. ಹೀಗಾಗಿ ಈ ಬಾರಿ ತನ್ನ ಹೋಟೆಲ್‍ನ ಬಿಲ್ ನಲ್ಲಿಯೇ ಈ ಸಲ ಕಪ್ ನಮ್ದೆ, ಆರ್‌ಸಿಬಿ ಎಂದು ಪ್ರಿಂಟ್ ಹಾಕಿಸಿದ್ದಾರೆ. ಇದನ್ನು ನೋಡಿದ ಗ್ರಾಹಕರು ಕೂಡ ಇವರ ಅಭಿಮಾನಕ್ಕೆ ಖುಷಿಯಾಗಿದ್ದಾರೆ.

    ಸಂತೋಷ್ ಅವರು ಆರ್‌ಸಿಬಿ ಮೇಲಿನ ಅಭಿಮಾನದಿಂದಾಗಿ ತನ್ನ ಪ್ರೀತಿಯ ಬಜಾಜ್ ಚೇತಕ್ ಬೈಕ್ ಮೇಲೂ ಸಹ ಈ ಸಲ ಕಪ್ ನಮ್ದೆ ಎಂದು ಬರೆಸುವ ಮೂಲಕ ಆರ್‌ಸಿಬಿ ತಂಡಕ್ಕೆ ಶುಭ ಕೋರಿದ್ದಾರೆ. ಪ್ರತಿ ಬಾರಿ ಈ ಸಲ ಕಪ್ ನಮ್ದೆ ಎಂಬ ಅಭಿಮಾನ ಇರುತ್ತದೆ. ಆದರೆ ಪ್ರತಿ ಬಾರಿ ಕೈ ತಪ್ಪಿ ಹೋಗುತ್ತಿದೆ. ಆದರೂ ಅಭಿಮಾನ ಮಾತ್ರ ಕಡಿಮೆಯಾಗಿಲ್ಲ. ಈ ಬಾರಿಯೂ ಅದೇ ಅಭಿಮಾನ, ಆಸೆ ಇದೆ ನೋಡೋಣ ಏನು ಆಗುತ್ತೆ ಎಂದು ಹೋಟೆಲ್ ಉದ್ಯಮಿ, ಆರ್‌ಸಿಬಿ ಅಭಿಮಾನಿ ಸಂತೋಷ್ ತಮ್ಮ ಅಭಿಪ್ರಾಯವನ್ನು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.

  • ಹೋಟೆಲ್, ಸೂಪರ್ ಮಾರ್ಕೆಟ್ ಮೇಲೆ ದಿಢೀರ್ ದಾಳಿ – 20 ಉದ್ದಿಮೆಗಳು ಬಂದ್, ಭಾರೀ ದಂಡ

    ಹೋಟೆಲ್, ಸೂಪರ್ ಮಾರ್ಕೆಟ್ ಮೇಲೆ ದಿಢೀರ್ ದಾಳಿ – 20 ಉದ್ದಿಮೆಗಳು ಬಂದ್, ಭಾರೀ ದಂಡ

    ಬೆಂಗಳೂರು: ಕೋವಿಡ್ 19 ಮಾರ್ಗಸೂಚಿಯನ್ನು ಪಾಲಿಸದ ಹಿನ್ನೆಲೆಯಲ್ಲಿ ಹೋಟೆಲ್, ಅಂಗಡಿ, ಸೂಪರ್ ಮಾರ್ಕೆಟ್ ಸೇರಿ ಒಟ್ಟು 20 ಅಂಗಡಿ ಮುಗ್ಗಟ್ಟುಗಳನ್ನು ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಬಂದ್ ಮಾಡಿದ್ದಾರೆ.

    ಪ್ರವೇಶದ್ವಾರದಲ್ಲಿ ಸ್ಯಾನಿಟೈಸರ್ ಇಡಬೇಕು, ಥರ್ಮಲ್ ಸ್ಕ್ಯಾನಿಂಗ್ ಮಾಡಬೇಕು, ಕಡ್ಡಾಯವಾಗಿ ಮಾಸ್ಕ್ ಧರಿಸಿದ ಗ್ರಾಹಕರಿಗೆ ಮಾತ್ರ ಒಳಗಡೆ ಪ್ರವೇಶಿಸಲು ಅನುಮತಿ ನೀಡಬೇಕು, ಒಳಗಡೆ ಸಾಮಾಜಿಕ ಅಂತರಗಳನ್ನು ಕಾಪಾಡಬೇಕು ಎಂಬ ನಿಯಮ ಈಗಾಗಲೇ ಜಾರಿಯಲ್ಲಿದೆ.

    ಈ ನಿಯಮನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಇಂದು ಅಂಗಡಿ, ಹೋಟೆಲ್‍ಗಳ ಮೇಲೆ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಮತ್ತು ಪೊಲೀಸರು ದಿಢೀರ್ ದಾಳಿ ಮಾಡಿ ಬಂದ್ ಮಾಡಿಸಿದ್ದಾರೆ. ಅಷ್ಟೇ ಅಲ್ಲದೇ 15 ಸಾವಿರ ರೂ. ದಂಡವನ್ನು ವಿಧಿಸಿದ್ದಾರೆ. ಬೆಂಗಳೂರಿನ ಕೋರಮಂಗಲ, ಹೆಚ್‍ಎಸ್‍ಆರ್ ಲೇಔಟ್ ವ್ಯಾಪ್ತಿಯ ಐದು ಹೋಟೆಲ್‍ಗಳ ಮೇಲೆ ದಂಡ ಹಾಕಿ ಬಂದ್ ಮಾಡಿಸಿದ್ದಾರೆ.

    ಎಲ್ಲಿ ಎಷ್ಟು?
    ಯಲಹಂಕ 1, ಮಹದೇವಪುರ 4, ಬೆಂಗಳೂರು ಪಶ್ಚಿಮ 3, ಬೆಂಗಳೂರು ದಕ್ಷಿಣ 4, ಬೊಮ್ಮನಹಳ್ಳಿ 2, ಬೆಂಗಳೂರು ಪೂರ್ವ 3, ರಾಜರಾಜೇಶ್ವರಿ ನಗರ 3 ಸೇರಿದಂತೆ ಒಟ್ಟು 20 ಉದ್ದಿಮೆಗಳನ್ನು ಬಂದ್ ಮಾಡಲಾಗಿದೆ.

  • ಪುಣೆಯಲ್ಲಿ 7 ದಿನಗಳ ಕಾಲ ನೈಟ್ ಕರ್ಫ್ಯೂ – ಬಾರ್, ಹೋಟೆಲ್, ಧಾರ್ಮಿಕ ಸ್ಥಳಗಳು ಬಂದ್

    ಪುಣೆಯಲ್ಲಿ 7 ದಿನಗಳ ಕಾಲ ನೈಟ್ ಕರ್ಫ್ಯೂ – ಬಾರ್, ಹೋಟೆಲ್, ಧಾರ್ಮಿಕ ಸ್ಥಳಗಳು ಬಂದ್

    ಮುಂಬೈ: ಕೊರೊನಾ ವೈರಸ್ ಹೆಚ್ಚಾಗುತ್ತಿರುವ ಹಿನ್ನೆಲೆ ಪುಣೆಯ ಬಾರ್‌ಗಳು, ಹೋಟೆಲ್‍ಗಳು ಹಾಗೂ ರೆಸ್ಟೋರೆಂಟ್‍ಗಳನ್ನು 7 ದಿನಗಳವರೆಗೂ ಮುಚ್ಚುವುದರ ಜೊತೆಗೆ ಕೆಲವು ನಿರ್ಬಂಧಗಳನ್ನು ಜಾರಿಗೆ ತರಲು ಜಿಲ್ಲಾಡಳಿತ ನಿರ್ಧರಿಸಿದೆ.

    ಇದಲ್ಲದೆ ಕೋವಿಡ್-19 ಹರಡುವುದನ್ನು ತಡೆಗಟ್ಟಲು ಏಪ್ರಿಲ್ 3 ರಿಂದ ಪುಣೆಯಲ್ಲಿ ಸಂಜೆ 6ರಿಂದ ಬೆಳಗ್ಗೆ 6ರವರೆಗೆ 12 ಗಂಟೆಗಳ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

    ಜಿಲ್ಲೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಹೀಗಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಬಾರ್‍ಗಳು, ಹೋಟೆಲ್‍ಗಳನ್ನು 7 ದಿನಗಳ ಕಾಲ ಮುಚ್ಚಲಾಗಿದ್ದು, ಕೇವಲ ಹೋಂ ಡೆಲಿವರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ.

    ಅಂತ್ಯಕ್ರಿಯೆ ಮತ್ತು ವಿವಾಹ ಸಮಾರಂಭಗಳನ್ನು ಹೊರತುಪಡಿಸಿ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗುವುದಿಲ್ಲ. ಅಲ್ಲದೆ ಒಂದು ವಾರ ಧಾರ್ಮಿಕ ಸ್ಥಳಗಳನ್ನು ಕೂಡ ಸಂಪೂರ್ಣವಾಗಿ ಮುಚ್ಚಬೇಕು ಪುಣೆಯ ವಿಭಾಗೀಯ ಆಯುಕ್ತರು ತಿಳಿಸಿದ್ದಾರೆ.

  • ಹಸಿದ ಹೊಟ್ಟೆಗೆ ಊಟ ಕೊಡುತ್ತಿರುವ ಕುಟುಂಬ- 1 ರೂ.ಗೆ ಇಡ್ಲಿ, 5 ರೂ.ಗೆ ಊಟ

    ಹಸಿದ ಹೊಟ್ಟೆಗೆ ಊಟ ಕೊಡುತ್ತಿರುವ ಕುಟುಂಬ- 1 ರೂ.ಗೆ ಇಡ್ಲಿ, 5 ರೂ.ಗೆ ಊಟ

    ಚೆನ್ನೈ: ಕೋವಿಡ್ ಲಾಕ್‍ಡೌನ್ ಸಮಯದಲ್ಲಿ ಹಸಿದ ಹೊಟ್ಟೆಗಳಿಗೆ ಒಂದು ರೂಪಾಯಿಗೆ ಇಡ್ಲಿ, 5 ರೂಪಾಯಿಗೆ ಊಟ ನೀಡುವ ಮೂಲಕವಾಗಿ ತಮಿಳುನಾಡಿನ ದಂಪತಿ ಮಾನವೀಯ ಕಾರ್ಯವನ್ನು ಮಾಡುತ್ತಿದ್ದಾರೆ.

    ಪುಷ್ಪರಾಣಿ, ಚಂದ್ರಶೇಖರ್ ದಂಪತಿ ಲಾಕ್‍ಡೌನ್ ವೇಳೆಯಲ್ಲಿ ಬಡವರಿಗೆ, ನಿರ್ಗತಿಕರಿಗೆ ಕಡಿಮೆ ಬೆಲೆಯಲ್ಲಿ ಆರೋಗ್ಯಕರವಾದ ಆಹಾರವನ್ನು ನೀಡುವ ಮೂಲಕವಾಗಿ ಎಲ್ಲರ ಗಮನವನ್ನು ಸೆಳೆದಿದ್ದಾರೆ.

    ಕೊರೊನಾ ಸೋಂಕು ಎಲ್ಲೆಡೆ ಹಬ್ಬಿರುವಾಗ ಲಾಕ್‍ಡೌನ್ ಮಾಡಲಾಗಿತ್ತು. ಈ ವೇಳೆ ಎಷ್ಟೋ ಜನ ಊಟವಿಲ್ಲದೆ ಹಸಿದುಕೊಂಡು ಇದ್ದರು. ರಸ್ತೆ ಬದಿಯಲ್ಲಿ ದಿನಗೂಲಿ ಮಾಡುವವರು, ಕೆಲಸ ಕಳೆದುಕೊಂಡಿರುವ ಅದೆಷ್ಟೋ ಜನರನ್ನು ನಾವು ನೋಡಿದ್ದೇವೆ. ಈ ವಿಚಾರವನ್ನು ನಾವು ಗಮನದಲ್ಲಿಟ್ಟುಕೊಂಡು ಕಡಿಮೆ ಬೆಲೆ ಉತ್ತಮ ಆಹಾರವನ್ನು ಕೊಡಲು ನಿರ್ಧರಿಸಿದ್ದೆವು. 1 ರುಪಾಯಿಗೆ ಇಡ್ಲಿ, ಚಟ್ನಿ ನೀಡುತ್ತೇವೆ ಎಂದು ಪುಷ್ಪರಾಣಿ ಹೇಳಿದ್ದಾರೆ.

    ಲಾಕ್‍ಡೌನ್ ಆಗುವ ಮೊದಲು ಚಂದ್ರಶೇಖರ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. ನಂತರ ಆರ್ಥಿಕ ಸಮಸ್ಯೆಯಿಂದಾಗಿ ಆ ಕೆಲಸವನ್ನು ಬಿಟ್ಟು ಹೋಟೆಲ್ ಪ್ರಾರಂಭಿಸಿದ್ದರು. ಬ್ಯಾಂಕಿನಲ್ಲಿ 50.000 ಸಾಲ ಪಡೆದು ಈ ದಂಪತಿ ಬಡ ಜನರಿಗಾಗಿ ಸಹಾಯವಾಗುವಂತೆ ಊಟವನ್ನು ಕೊಡಲು ಪ್ರಾರಂಭಿಸಿದರು.

    ಪ್ರತಿದಿನ ಸರಿಸುಮಾರು 400 ಮಂದಿ ಊಟವನ್ನು ಮಾಡುತ್ತಾರೆ. ಪ್ರತಿನಿತ್ಯ 4 ಗಂಟೆಗೆ ಎದ್ದು ಅಡುಗೆಯನ್ನು ಪ್ರಾರಂಭಿಸುತ್ತೇವೆ. ಮನೆಯ ಮಕ್ಕಳು ಕೂಡಾ ಸಹಾಯ ಮಾಡುತ್ತಾರೆ. ಬೆಳಗ್ಗೆ 7 ಗಂಟೆಗೆ ತಿಂಡಿ ಮಾರಾಟ ಮಾಡಿದರೆ, ಮಧ್ಯಾಹ್ನ 3 ಗಂಟೆ ಸುಮಾರಿಗೆ ಊಟವನ್ನು ಮಾರಾಟ ಮಾಡುತ್ತೇವೆ. ಜನರಿಗೆ ನಮ್ಮಿಂದಾದಷ್ಟು ಸಹಾಯವಾಗಲಿ ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದು ಕುಟುಂಬ ಹೇಳಿಕೊಂಡಿದೆ.

  • ಹೋಟೆಲ್‍ನಲ್ಲಿ ಸೆಕ್ಸ್ ದಂಧೆ- 12 ಯುವತಿ, 10 ಯುವಕರು ಅರೆಸ್ಟ್

    ಹೋಟೆಲ್‍ನಲ್ಲಿ ಸೆಕ್ಸ್ ದಂಧೆ- 12 ಯುವತಿ, 10 ಯುವಕರು ಅರೆಸ್ಟ್

    – ರಾಶಿ ರಾಶಿ ಕಾಂಡೋಮ್, ವಿವಿಧ ಮಾತ್ರೆಗಳು ಪತ್ತೆ

    ನವದೆಹಲಿ: ಹೋಟೆಲ್ ಸೆಕ್ಸ್ ದಂಧೆ ಮೇಲೆ ನೊಯ್ಡಾ ಪೊಲೀಸರು 12 ಯುವತಿಯರು ಸೇರಿದಂತೆ 23 ಜನರನ್ನ ಬಂಧಿಸಿದ್ದಾರೆ. ದಾಳಿ ವೇಳೆ ಕಾಂಡೋಮ್, ವಿವಿಧ ಮಾತ್ರೆಗಳು ಪತ್ತೆಯಾಗಿವೆ.

    ನೋಯ್ಡಾದ ಗೌತಮಬುದ್ಧ ನಗರ ಜಿಲ್ಲೆಯ ಚೀತಿ ಗ್ರಾಮದಲ್ಲಿರುವ ಕ್ರೌನ್ ಪ್ಲಾಜಾ ಹೋಟೆಲ್ ನಲ್ಲಿ ಸೆಕ್ಸ್ ದಂಧೆ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಶನಿವಾರ ರಾತ್ರಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಸೆಕ್ಸ್ ನಲ್ಲಿ ತೊಡಗಿದ್ದ ಜೋಡಿಗಳನ್ನ ರೆಡ್ ಹ್ಯಾಂಡ್ ಹಿಡಿದಿದ್ದಾರೆ. ಹೋಟೆಲ್ ಮ್ಯಾನೇಜರ್ ಸೇರಿದಂತೆ ಒಟ್ಟು 23 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಗೆಳೆಯನೊಂದಿಗೆ ಸುತ್ತಾಟ, ಸೆಕ್ಸ್ – ಮನೆಗೆ ಬಂದು ರೇಪ್ ಆಯ್ತು ಅಂದ್ಳು!

    ಹೋಟೆಲ್ ನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸಾರ್ವಜನಿಕರ ಮಾಹಿತಿ ಮೇರೆಗೆ ಗ್ರೇಟರ್ ನೊಯ್ದಾದ ಡಿಸಿಪಿ ರಾಜೇಶ್ ಕುಮಾರ್ ನೇ ತೃತ್ವದಲ್ಲಿ ಶನಿವಾರ ತಡರಾತ್ರಿ ಈ ದಾಳಿ ನಡೆಸಲಾಗಿತ್ತು. ಓರ್ವ ಪೇದೆ ಮತ್ತು ಚಾಲಕ ಈ ತಂಡಕ್ಕೆ ಸಹಾಯ ಮಾಡುತ್ತಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತವಾಗಿದ್ದರಿಂದ ಇಬ್ಬರನ್ನ ಅಮಾನತುಗೊಳಿಸಿ ತನಿಖೆಗೆ ಆದೇಶಿಸಲಾಗಿದೆ. ಇದನ್ನೂ ಓದಿ:  ಸೆಕ್ಸ್ ವೇಳೆ ಹಂದಿಯಂತೆ ಕಿರುಚಬೇಡ – ಮಹಿಳೆಗೆ ನೆರೆಮನೆಯವರಿಂದ ಪತ್ರ

  • ತಂದೂರಿ ರೋಟಿಯನ್ನ ಉಗುಳಿ ಬೇಯಿಸೋ ವ್ಯಕ್ತಿ – ವೀಡಿಯೋ ವೈರಲ್

    ತಂದೂರಿ ರೋಟಿಯನ್ನ ಉಗುಳಿ ಬೇಯಿಸೋ ವ್ಯಕ್ತಿ – ವೀಡಿಯೋ ವೈರಲ್

    – ಮೀರತ್ ಬಳಿಕ ಮತ್ತೊಂದು ವೀಡಿಯೋ

    ನವದೆಹಲಿ: ಉತ್ತರ ಪ್ರದೇಶದ ಮೀರತ್ ನಲ್ಲಿ ಯುವಕನೋರ್ವ ಉಗುಳಿ ತಂದೂರಿ ರೋಟಿ ತಯಾರಿಸುತ್ತಿದ್ದ ವೀಡಿಯೋ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಇದೀಗ ಅಂತಹುವುದೇ ಮತ್ತೊಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರು ಬಾಣಸಿಗ ಮತ್ತು ಆತನ ಸಹಾಯಕನನ್ನು ಬಂಧಿಸಿದ್ದಾರೆ.

    ಮೊಹಮದ್ ಇಬ್ರಾಹಿಂ (40) ಮತ್ತು ಸಾಬಿ ಅನ್ವರ್ (22) ಬಂಧಿತರು. ಪಶ್ಚಿಮ ದೆಹಲಿಯ ಖ್ಯಾಲಾ ಇಲಾಖೆಯ ಚಾಂದ್ ಹೆಸರಿನಲ್ಲಿ ಬಂಧಿತರು ಅಡುಗೆ ಕೆಲಸ ಮಾಡಿಕೊಂಡಿದ್ದರು. ಗ್ರಾಹಕರೊಬ್ಬರು ಇಬ್ಬರು ತಂದೂರಿ ರೋಟಿ ತಯಾರಿಸುವ ವೀಡಿಯೋ ಚಿತ್ರೀಕರಿಸಿ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿ, ದೆಹಲಿ ಪೊಲೀಸರು ಮತ್ತು ಪಶ್ಚಿಮ ದೆಹಲಿಯ ಡಿಸಿಪಿ ಅವರ ಖಾತೆಗೆ ಟ್ಯಾಗ್ ಮಾಡಿದ್ದರು. ಇದನ್ನೂ ಓದಿ: ಮದುವೆ ಮನೆಯಲ್ಲಿ ರೋಟಿಗೆ ಉಗುಳಿ ಬೇಯಿಸ್ತಿದ್ದ ವ್ಯಕ್ತಿಯ ವೀಡಿಯೋ ವೈರಲ್

    ವೀಡಿಯೋ ಗಮನಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನ ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 269, 270 ಮತ್ತು 273 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಹೋಟೆಲ್ ಯಾವುದೇ ಅನುಮತಿ ಪಡೆಯದಿರುವ ವಿಷಯ ದಾಳಿ ವೇಳೆ ಬೆಳಕಿಗೆ ಬಂದಿದೆ. ಹೋಟೆಲ್ ಮಾಲೀಕನಿಗೆ ದಂಡ ವಿಧಿಸಲಾಗಿದೆ. ಸದ್ಯ ಇಬ್ಬರು ಜಾಮೀನಿನ ಮೇಲೆ ಹೊರ ಬಂದಿದ್ದಾರೆ.

  • ಶುಚಿತ್ವ ಕಾಪಾಡಿಕೊಳ್ಳದ ಹೋಟೆಲ್, ಬೇಕರಿಗಳ ಮೇಲೆ ಅಧಿಕಾರಿಗಳ ದಾಳಿ

    ಶುಚಿತ್ವ ಕಾಪಾಡಿಕೊಳ್ಳದ ಹೋಟೆಲ್, ಬೇಕರಿಗಳ ಮೇಲೆ ಅಧಿಕಾರಿಗಳ ದಾಳಿ

    ಯಾದಗಿರಿ: ನಗರದ ಹೊಟೇಲ್ ಮತ್ತು ಬೇಕರಿಗಳಲ್ಲಿ ಸ್ವಚ್ಛತೆ ಕಾಪಾಡದೇ ನಿರ್ಲಕ್ಷ್ಯ ತೊರಿದ ಅಂಗಡಿ ಮಾಲಿಕರಿಗೆ ಯಾದಗಿರಿ ನಗರಸಭೆ ಪೌರಾಯುಕ್ತ ಭೀಮಣ್ಣ ನಾಯಕ ಚಾಟಿ ಬೀಸಿದ್ದಾರೆ.

    ನಗರದ ಸುಭಾಷ್ ವೃತ್ತ, ಶಾಸ್ತ್ರಿ ವೃತ್ತ, ನೂತನ ಬಸ್ ನಿಲ್ದಾಣಗಳ ಹೋಟೆಲ್, ಬೇಕರಿ, ಬಿಡಾ ಅಂಗಡಿಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳು ಭೇಟಿ ನೀಡಿದ ವೇಳೆ ಹೋಟೆಲ್‍ನಲ್ಲಿ ಸ್ವಚ್ಛತೆ ಮರಿಚಿಕೆಯಾಗಿತ್ತು. ಇದನ್ನು ಕಂಡು ಗರಂ ಆದ ಪೌರಾಯುಕ್ತ ಭೀಮಣ್ಣ ನಾಯಕ, ಹೋಟೆಲ್ ಅಡುಗೆ ಕೋಣೆ ಪರಿಶೀಲನೆ ಮಾಡಿ ಸ್ವಚ್ಛತೆ ಕಾಪಾಡಬೇಕು ಇಲ್ಲದಿದ್ದರೆ ಅಂಗಡಿ ಪರವಾನಗಿ ರದ್ದು ಮಾಡಲಾಗುತ್ತದೆ ಎಂದು ಅಂಗಡಿ ಮಾಲಿಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಹಲವು ಅಂಗಡಿ ಮುಂಗಟ್ಟುಗಳಲ್ಲಿ ಅನಧಿಕೃತವಾಗಿ ಬಳಕೆ ಮಾಡುತ್ತಿದ್ದ ಪ್ಲಾಸ್ಟಿಕ್ ಜಪ್ತಿ ಮಾಡಿದ್ದಾರೆ. ಇದರೊಂದಿಗೆ ನಿಯಮ ಮಿರಿ ಕೆಲ ಕಡೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದನ್ನು ಗಮನಿಸಿ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ. ಪರಿಸರ ಅಭಿಯಂತರ ಸಂಗಮೇಶ್ ಪಣಶೇಟ್ಟಿ, ಆರೋಗ್ಯ ನಿರೀಕ್ಷಕರಾದ ಶರಣಮ್ಮ ಇನ್ನಿತರರು ದಾಳಿಯಲ್ಲಿ ಪಾಲ್ಗೊಂಡಿದ್ದರು.

  • ಹೋಟೆಲ್‍ನಲ್ಲಿ ದಂಪತಿ ನಿಗೂಢ ಸಾವು

    ಹೋಟೆಲ್‍ನಲ್ಲಿ ದಂಪತಿ ನಿಗೂಢ ಸಾವು

    ಪಾಟ್ನಾ: ಗುಂಡು ತಗುಲಿ ದಂಪತಿ ಮೃತಪಟ್ಟಿರುವ ಘಟನೆ ಬಿಹಾರದಲ್ಲಿ ಸೋಮವಾರ ನಡೆದಿದೆ. ತನಿಖೆ ವೇಳೆ ಮೃತಪಟ್ಟವರು ದಂಪತಿಯಾಗಿದ್ದು, ಪರೀಕ್ಷೆಗಾಗಿ ಮುಜಾಫರ್‍ಪುರ್‍ಗೆ ಬಂದಿದ್ದರು ಎಂದು ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದಾರೆ.

    ದಂಪತಿ ವಿಚಾರಿಸಲೆಂದು ಹೋಟೆಲ್ ಮ್ಯಾನೇಜರ್ ಚೋಟು ಕುಮಾರ್, ಕೋಣೆ ಬಳಿ ಹೋಗಿ ಬಾಗಿಲು ತಟ್ಟಿದ್ದಾರೆ. ಆದರೆ ದಂಪತಿ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಒಡೆದು ಹಾಕಿ ಕೋಣೆ ಒಳಗೆ ಪ್ರವೇಶಿಸಿದಾಗ ತಲೆಗೆ ಬುಲೆಟ್ ತಗುಲಿ ದಂಪತಿ ಹಾಸಿಗೆ ಮೇಲೆ ಶವವಾಗಿ ಬಿದ್ದಿರುವುದು ಪತ್ತೆಯಾಗಿದೆ.

    ಘಟನೆ ಕುರಿತಂತೆ ವಿಚಾರಣೆ ನಡೆಸಲು ಎಫ್‍ಎಸ್‍ಎಲ್ ವಿಶೇಷ ತಂಡವನ್ನು ರಚಿಸಲಾಗಿದ್ದು, ತನಿಖೆ ನಂತರ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಸತ್ಯ ಬಹಿರಂಗಗೊಳ್ಳಲಿದೆ ಎಂದು ಡಿಎಸ್‍ಪಿ ರಾಮ್ನಾರೇಶ್ ಪಾಸ್ವಾನ್ ತಿಳಿಸಿದ್ದಾರೆ.