Tag: Hotel employee

  • ಆರ್ಡರ್ ಲೇಟಾಗಿದ್ದಕ್ಕೆ 20 ಝೊಮ್ಯಾಟೋ ಹುಡುಗರಿಂದ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ

    ಆರ್ಡರ್ ಲೇಟಾಗಿದ್ದಕ್ಕೆ 20 ಝೊಮ್ಯಾಟೋ ಹುಡುಗರಿಂದ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ

    ಬೆಂಗಳೂರು: ಆರ್ಡರ್ ಲೇಟಾಯ್ತು ಎಂದು ಹೋಟೆಲ್ ಸಿಬ್ಬಂದಿ ಮೇಲೆ 20ಕ್ಕೂ ಹೆಚ್ಚು ಝೊಮ್ಯಾಟೋ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಹೆಬ್ಬಾಳದ ಬಳಿಯ ತ್ರೀಪ್ಸಿ ರೆಸ್ಟೋರೆಂಟ್‌ನಲ್ಲಿ ನಡೆದಿದೆ.

    ಕಿರಣ್ ಮತ್ತು ರಾಜಶೇಖರ್ ಎಂಬವರಿಗೆ ಥಳಿಸಿದ ಝೊಮ್ಯಾಟೋ ಸಿಬ್ಬಂದಿ. ಝೊಮ್ಯಾಟೋ ಬಾಯ್ ತ್ರೀಪ್ಸಿ ರೆಸ್ಟೋರೆಂಟ್‌ಗೆ ಊಟ ಅರ್ಡರ್ ಕೊಟ್ಟಿದ್ದನು. ಅರ್ಧ ಗಂಟೆಯಾದರೂ ಊಟ ಕೊಟ್ಟಿಲ್ಲ ಎಂದು ಝೊಮ್ಯಾಟೋ ಬಾಯ್ ಕಿಚನ್ ಒಳಗೆ ಹೋಗಿ ಗಲಾಟೆ ಮಾಡಿದ್ದಾನೆ.

    ಝೊಮ್ಯಾಟೋ ಕಿಚನ್‌ನೊಳಗೆ ಹೋಗುವಾಗ ಇಲ್ಲಿ ಪ್ರವೇಶವಿಲ್ಲ ಎಂದು ಹೋಟೆಲ್ ಸಿಬ್ಬಂದಿ ಹೇಳಿದ್ದಾರೆ. ಇದರಿಂದ ಕೋಪಗೊಂಡ ಝೊಮ್ಯಾಟೋ ಬಾಯ್ ಇತರೆ 20 ಜನರನ್ನು ಕರೆದುಕೊಂಡು ಬಂದು ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.

    ಇಬ್ಬರು ಹೋಟೆಲ್ ಸಿಬ್ಬಂದಿ ಮೇಲೆ ಝೊಮ್ಯಾಟೋ ಬಾಯ್ ಹಲ್ಲೆ ನಡೆಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಈ ಬಗ್ಗೆ ಎರಡು ಕಡೆಯವರು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಿಸಿದ್ದಾರೆ.