Tag: Hotel Association

  • ಹೋಟೆಲ್‌ಗಳಿಗೆ ಬರೆ – ತಿಂಗಳಿಗೆ 30 ಸಾವಿರ ಕಸದ ಸೆಸ್!

    ಹೋಟೆಲ್‌ಗಳಿಗೆ ಬರೆ – ತಿಂಗಳಿಗೆ 30 ಸಾವಿರ ಕಸದ ಸೆಸ್!

    – ಬೆಂಗಳೂರು ಹೋಟೆಲ್ ಮಾಲೀಕರ ಕಿಡಿ

    ಬೆಂಗಳೂರು: ಮೆಟ್ರೋ ದರ, ಬಸ್ ದರ, ವಿದ್ಯುತ್ ದರ ಏರಿಕೆಯಾಯ್ತ. ಈಗ ಏಪ್ರಿಲ್ 1ರಿಂದ ಕಸದ ಸೆಸ್ ಬರೆ ಶುರುವಾಗಲಿದೆ. ಬೆಂಗಳೂರಿನ (Bengaluru) ಹೋಟೆಲ್‌ಗಳಿಗೆ ಕಸದ ಸೆಸ್ (Garbage Cess) ಬರೆಯ ಬಿಸಿ ತಟ್ಟಿದ್ದು, ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ದರ ಏರಿಕೆಯ ಹೊರೆ ಜನರ ಪಾಲಿಗೆ ಬಿಸಿ ತುಪ್ಪದಂತಾಗಿದೆ. ಇದರ ಮಧ್ಯೆ ಈಗ ಏಪ್ರಿಲ್‌ನಿಂದ ಕಸದ ಸೆಸ್ ಬರೆ ಬೀಳಲಿದೆ. ಕಸದ ಸೆಸ್‌ಗೆ ಈಗ ಬೆಂಗಳೂರು ಹೋಟೆಲ್ ಅಸೋಸಿಯೇಷನ್ (Hotel Association) ಕಿಡಿಕಾರಿದೆ. ಒಂದು ಕೆಜಿಗೆ 12 ರೂ. ಫಿಕ್ಸ್ ಮಾಡಿದ್ದು, ಈ ಹಿಂದೆ ತಿಂಗಳಿಗೆ 5 ಸಾವಿರ ಕಸದ ಸೆಸ್ ಕಟ್ಟಲಾಗುತ್ತಿತ್ತು. ಆದರೆ ಈಗ ಬರೋಬ್ಬರಿ 30 ಸಾವಿರ ರೂ. ಕಸದ ಸೆಸ್ ಕಟ್ಟಬೇಕಾಗುತ್ತದೆ. ಇದನ್ನೂ ಓದಿ: ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ – ರನ್ಯಾ ರಾವ್‌ ಜಾಮೀನು ಅರ್ಜಿ ಆದೇಶ ಇಂದು

    ಸಾಮಾನ್ಯವಾಗಿ ದರ್ಶಿನಿ ಹೋಟೆಲ್‌ನಲ್ಲಿ, ದಿನಕ್ಕೆ 60-100 ಕೆಜಿಯಷ್ಟು ಕಸ ಉತ್ಪಾದನೆಯಾಗಲಿದೆ. ಮೊದಲೆಲ್ಲ ಪ್ರತಿ ತಿಂಗಳು ಕಸದ ಸೆಸ್ ಅಂತ ಬಿಬಿಎಂಪಿಗೆ ಕಟ್ಟಲಾಗುತ್ತಿತ್ತು. ಆದರೆ ಈಗ ಏಕಾಏಕಿ ಕಸದ ಸೆಸ್ 30 ಸಾವಿರಕ್ಕೆ ಏರಿಕೆ ಮಾಡಿರೋದು ಸರಿಯಲ್ಲ. ಇದು ಅವೈಜ್ಞಾನಿಕ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಐಎಎಸ್ ಅಧಿಕಾರಿ ಅಂತ ಹೇಳ್ಕೊಂಡು ದೇಶ್ಯಾದ್ಯಂತ 20ಕ್ಕೂ ಅಧಿಕ ಮಹಿಳೆಯರಿಗೆ ವಂಚನೆ

    ಒಟ್ಟಾರೆ, ದರ ಏರಿಕೆಯ ಭಾರವನ್ನು ಹೊರಲಾರದೇ ಜನ ಹೈರಾಣಾಗಿದ್ದಾರೆ. ಅದರ ಮಧ್ಯೆ ದಿನಕ್ಕೊಂದು ದರ ಏರಿಕೆ ಬಿಸಿಗೆ ಜನ ಹಿಡಿಶಾಪ ಹಾಕುವ ಪರಿಸ್ಥಿತಿ ಉದ್ಭವವಾಗಿದೆ. ಇದನ್ನೂ ಓದಿ: ಚಾಮರಾಜನಗರ| ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವ – 18 ಅಡಿ ಉದ್ದದ ಸರಳಲ್ಲಿ ಬಾಯಿ ಬೀಗ

  • ಬೆಂಗಳೂರಲ್ಲಿ ತಡರಾತ್ರಿ 2 ಗಂಟೆಯವರೆಗೆ ಹೋಟೆಲ್, ಬಾರ್&ರೆಸ್ಟೋರೆಂಟ್ ಓಪನ್‌ಗೆ ಮನವಿ

    ಬೆಂಗಳೂರಲ್ಲಿ ತಡರಾತ್ರಿ 2 ಗಂಟೆಯವರೆಗೆ ಹೋಟೆಲ್, ಬಾರ್&ರೆಸ್ಟೋರೆಂಟ್ ಓಪನ್‌ಗೆ ಮನವಿ

    – ಅಬಕಾರಿ ಸಚಿವರಿಗೆ ಮನವಿ ಸಲ್ಲಿಸಿದ ಹೋಟೆಲ್ ಅಸೋಸಿಯೇಷನ್

    ಬೆಂಗಳೂರು: ತಡರಾತ್ರಿ 2 ಗಂಟೆಯವರೆಗೆ ಬಾರ್, ಪಬ್ ಮತ್ತು ರೆಸ್ಟೋರೆಂಟ್‌ಗಳ (Bar And Restaurant) ಓಪನ್‌ಗೆ ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘವು (Hotel Association) ಅಬಕಾರಿ ಸಚಿವರಿಗೆ ಮನವಿ ಮಾಡಿದೆ.

    ಪಬ್, ಬಾರ್ & ರೆಸ್ಟೋರೆಂಟ್ ಲೈಸೆನ್ಸ್ ನವೀಕರಣಕ್ಕೆ ಆನ್‌ಲೈನ್ ಸಮಸ್ಯೆಯಾಗಿದೆ. ಹೆಚ್ಚುವರಿ ಶುಲ್ಕ ಕಟ್ಟಿದರೂ ಲೈಸೆನ್ಸ್ ನೀಡುತ್ತಿಲ್ಲ ಎಂದು ಹೋಟೆಲ್ ಅಸೋಸಿಯೇಷನ್ ಆರೋಪಿಸಿದೆ. ಇದನ್ನೂ ಓದಿ: ಶಕ್ತಿ ಯೋಜನೆಯಿಂದ ನಷ್ಟದಲ್ಲಿದ್ದೇವೆ, ಬಸ್ ಟಿಕೆಟ್ ದರ ಹೆಚ್ಚಿಸುವ ಚಿಂತನೆ: ರಾಜು ಕಾಗೆ

    ಅಲ್ಲದೇ ಅಬಕಾರಿ ಇಲಾಖೆಯಲ್ಲಿ (Excise Department) ಕಾನೂನು ತೊಡಕಿನ ಆರೋಪವನ್ನೂ ಹೋಟೆಲ್ ಅಸೋಸಿಯೇಷನ್ ಹೊರಿಸಿದೆ. ಕಾನೂನು ಸಬಲೀಕರಣ ಮಾಡದೆ ನಮಗೆ ನೋಟಿಸ್ ಕೊಟ್ಟು ಸಮಸ್ಯೆ ಮಾಡುತ್ತಿದ್ದಾರೆ. ನಗರದಲ್ಲಿ ತಡರಾತ್ರಿ 2 ಗಂಟೆವರೆಗೆ ಹೋಟೆಲ್, ಬಾರ್ & ರೆಸ್ಟೋರೆಂಟ್ ಓಪನ್‌ಗೆ ಅನುಮತಿ ನೀಡುವಂತೆ ಬೃಹತ್ ಬೆಂಗಳೂರು ಹೋಟೆಲ್ ಸಂಘಟನೆಗಳು ಅಬಕಾರಿ ಸಚಿವರಲ್ಲಿ ಮನವಿ ಮಾಡಿದೆ. ಇದನ್ನೂ ಓದಿ: ಬೆಂಗಳೂರು ಮೆಟ್ರೋ ನಿಲ್ದಾಣಗಳಿಗೆ ಶಂಕರ್‌ ನಾಗ್‌, ಅಪರ್ಣಾ ಹೆಸರಿಡಿ: ಸರ್ಕಾರಕ್ಕೆ ಯತ್ನಾಳ್‌ ಆಗ್ರಹ

  • ಹಾಲು, ಮೊಸರು ಆಯ್ತು, ಈಗ ಗ್ರಾಹಕರಿಗೆ ತುಪ್ಪದ ಬಿಸಿ

    ಹಾಲು, ಮೊಸರು ಆಯ್ತು, ಈಗ ಗ್ರಾಹಕರಿಗೆ ತುಪ್ಪದ ಬಿಸಿ

    ಬೆಂಗಳೂರು: ಗ್ರಾಹಕರಿಗೆ ಹಾಲು (Milk), ಮೊಸರಿನ ದರದ ಬಿಸಿ ತಟ್ಟಿದೆ. ಇದರ ಮಧ್ಯೆ ಕೆಎಂಎಫ್ (KMF) ಎಲ್ಲ ಇತರ ಉತ್ಪನ್ನಗಳ (Milk Products) ದರವನ್ನೂ ಏರಿಕೆ ಮಾಡಿದ್ದು, ಈ ಮೂಲಕ ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಿದೆ. ಹಾಲು, ಮೊಸರಿನ ದರವನ್ನು ಲೀಟರ್‌ಗೆ ಎರಡು ರೂಪಾಯಿ ಹೆಚ್ಚಳ ಮಾಡಿದ್ದ ಕೆಎಂಎಫ್ ಮತ್ತೆ ಗ್ರಾಹಕರಿಗೆ ಮಾಸ್ಟರ್ ಸ್ಟ್ರೋಕ್‌ ನೀಡಿದೆ.

    ದಸರಾ ಹಬ್ಬದಿಂದಲೂ ತುಪ್ಪದ ದರ ಹೆಚ್ಚಾಗುತ್ತಲೇ ಇದೆ. ಒಮ್ಮೆಗೆ ದರ ಏರಿಕೆ ಮಾಡದೇ ಕಳೆದ 2 ತಿಂಗಳಿನಲ್ಲಿ 4 ಬಾರಿ ಹಂತ-ಹಂತವಾಗಿ ತುಪ್ಪದ ದರ ಏರಿಕೆ ಮಾಡಿದೆ. ಸದ್ಯ ಒಟ್ಟು 170 ರೂ.ವರೆಗೆ ದರ ಹೆಚ್ಚಳ ಮಾಡಿದೆ. ಕೇವಲ ತುಪ್ಪ ಮಾತ್ರವಲ್ಲ ಇದೀಗ ಕೆಎಂಎಫ್‌ನ ಎಲ್ಲ ಉತ್ಪನ್ನಗಳ ದರವೂ ಶೇ.5 ರಿಂದ 15 ರಷ್ಟು ಏರಿಕೆ ಕಂಡಿದೆ. ಒಂದು ಕೆಜಿಗೆ ತುಪ್ಪದ ದರ 50 ರೂ. ಹೆಚ್ಚಳವಾಗುವ ಸಾಧ್ಯತೆಯಿದೆ.‌ ಇದನ್ನೂ ಓದಿ: ವಿದ್ಯಾಭರಣ್ ಬಗ್ಗೆ ಮೊದಲೇ ಗೊತ್ತಾಗಿದ್ದು ಒಳ್ಳೆಯದಾಯ್ತು: ನಟಿ ವೈಷ್ಣವಿ ಸ್ಪಷ್ಟನೆ

    ಈ ಮೊದಲು ಹಾಲು, ಮೊಸರು ದರ ಹೆಚ್ಚಳಕ್ಕೆ ಕೆಎಂಎಫ್ ಹಲವು ಬಾರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಚುನಾವಣೆ ವರ್ಷ ದರ ಏರಿಕೆಗೆ ಸಿಎಂ ಒಪ್ಪಿರಲಿಲ್ಲ. ಇದರಿಂದಾಗಿ ಸೈಲೆಂಟಾಗಿಯೇ ತುಪ್ಪದ ದರ ಏರಿಕೆ ಮಾಡುತ್ತಿತ್ತು. ಅದೇ ರೀತಿ ಕೆಎಂಎಫ್ ತನ್ನ ಇತರೆ ಉತ್ಪನ್ನಗಳ ದರವನ್ನೂ ಹೆಚ್ಚಳ ಮಾಡಿದೆ. ಈ ಬಗ್ಗೆ ಕೆಎಂಎಫ್ (KMF) ಅಧ್ಯಕ್ಷರನ್ನು ಕೇಳಿದ್ರೆ ತುಪ್ಪದ ದರ ಹೆಚ್ಚಳ ಮಾಡಿದ್ದು ನಿಜ. ಇತರ ಉತ್ಪನ್ನಗಳ ದರವೂ ಜಾಸ್ತಿ ಮಾಡಿದ್ದೇವೆ. ತುಪ್ಪ, ಇತರ ಪ್ರಾಡೆಕ್ಟ್ ದರ ಹೆಚ್ಚು ಮಾಡೋದಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ (KMF Balachandra) ಜಾರಕಿಹೊಳಿ ತಿಳಿಸಿದ್ದಾರೆ. ಇದನ್ನೂ ಓದಿ: ವಿದ್ಯಾಭರಣ್ ಬಗ್ಗೆ ಮೊದಲೇ ಗೊತ್ತಾಗಿದ್ದು ಒಳ್ಳೆಯದಾಯ್ತು: ನಟಿ ವೈಷ್ಣವಿ ಸ್ಪಷ್ಟನೆ

    ಇನ್ನೊಂದೆಡೆ ಹಾಲಿನ ದರ ಹೆಚ್ಚಳ ಬೆನ್ನಲ್ಲೆ ಟೀ ಕಾಫಿ ದರ ಏರಿಕೆಯ ಭೀತಿ ಎದುರಾಗಿತ್ತು. ಆದರೆ ಸದ್ಯ ಈ ವಿಚಾರಕ್ಕೆ ಹೊಟೇಲ್ ಮಾಲೀಕರ ಸಂಘ ಫುಲ್‌ಸ್ಟಾಪ್ ಇಟ್ಟಿದೆ. ಹಾಲು, ಮೊಸರಿನ ದರ ಎರಡು ರೂಪಾಯಿ ಹೆಚ್ಚಳ ಮಾಡಿದರೂ ಹೊಟೇಲ್‌ನಲ್ಲಿ ದರ ಏರಿಕೆ ಮಾಡಲ್ಲ. ಈ ವಿಚಾರದ ಬಗ್ಗೆ ಸ್ವಲ್ಪ ದಿನ ಕಾದು ಚರ್ಚೆ ಮಾಡ್ತೀವಿ ಎಂದು ಬೆಂಗಳೂರು ಹೋಟೆಲ್ (Hotel) ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ ರಾವ್ ಸ್ಪಷ್ಟನೆ ನೀಡಿದ್ದಾರೆ.

    ಸಾಂದರ್ಭಿಕ ಚಿತ್ರ

    ಯಾವ ಉತ್ಪನ್ನ – ಎಷ್ಟು ಏರಿಕೆ?
    * ಪೇಡ – ಹಿಂದಿನ ದರ 220ರೂ.- ಈಗಿನ ದರ 240 ರೂ. (1/4 ಕೆ.ಜಿ)
    * ಬಾದಾಮ್ ಪೌಡರ್ – ಹಿಂದಿನ ದರ 400 ರೂ. – ಈಗಿನ ದರ 440 ರೂ. (1 ಕೆ.ಜಿಗೆ 40 ರೂ. ಹೆಚ್ಚಳ)
    * ಕೋಡ್ಬಳೆ – ಹಿಂದಿನ ದರ 500 ರೂ. – ಈಗಿನ ದರ 600 ರೂ. (200 ಗ್ರಾಂ.)
    * ರಸ್ಕ್ – ಹಿಂದಿನ ದರ 15 ರೂ. – ಈಗಿನ ದರ 29 ರೂ. (100 ಗ್ರಾಂ.)
    * ಜಾಮೂನು – ಹಿಂದಿನ ದರ 130 ರೂ.- ಈಗಿನ ದರ 150 ರೂ. (1/2 ಕೆ.ಜಿ)
    * ಪ್ಲೇವರ್ಡ್ ಮಿಲ್ಕ್ – ಹಿಂದಿನ ದರ 20 ರೂ. – ಈಗಿನ ದರ 25 ರೂ. (200 ಎಂಎಲ್‌ಗೆ 5 ರೂ. ಹೆಚ್ಚಳ)
    * ರಸಗುಲ್ಲ – ಹಿಂದಿನ ದರ 130 ರೂ. – ಈಗಿನ ದರ 150 ರೂ. (1/4 ಕೆ.ಜಿ)
    * ಬರ್ಫಿ – ಹಿಂದಿನ ದರ 195 ರೂ. – ಈಗಿನ ದರ 210 ರೂ. (1/4 ಕೆ.ಜಿ)
    * ಗುಡ್‌ಲೈಫ್ – ಹಿಂದಿನ ದರ 26 ರೂ.- ಈಗಿನ ದರ 28 ರೂ. ಪ್ರತಿ ಲೀಟರ್‌ಗೆ
    * ಮೈಸೂರು ಪಾಕ್ – ಹಿಂದಿನ ದರ 135 ರೂ. – ಈಗಿನ ದರ 160 ರೂ. (1/4 ಕೆ.ಜಿ)
    * ಕೋವಾ – ಹಿಂದಿನ ದರ 60 ರೂ. – ಈಗಿನ ದರ 90ರೂ. (200 ಗ್ರಾಂ)

    Live Tv
    [brid partner=56869869 player=32851 video=960834 autoplay=true]