Tag: Hot Photo Shoot

  • ಸಮಂತಾ ಹೊಸ ಫೋಟೋ ಶೂಟ್: ಬೇಸಿಗೆ ಮತ್ತಷ್ಟು ಹಾಟ್ ಹಾಟ್

    ಸಮಂತಾ ಹೊಸ ಫೋಟೋ ಶೂಟ್: ಬೇಸಿಗೆ ಮತ್ತಷ್ಟು ಹಾಟ್ ಹಾಟ್

    ಕ್ಷಿಣದ ಪ್ರಸಿದ್ಧ ನಟಿ ಸುಮಂತಾ ವಿಚ್ಚೇದನದ ನಂತರ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಪುಷ್ಪಾ ಸಿನಿಮಾದ ‘ಹ್ಞೂಂ ಅಂತೀಯಾ ಮಾವ’ ಹಾಡು ಅವರನ್ನು ಮತ್ತೊಂದು ಲೇವಲ್ ಗೆ ತಂದು ನಿಲ್ಲಿಸಿದೆ. ಪುಷ್ಪಾ ಸಿನಿಮಾದ ಗೆಲುವಿಗೆ ಈ ಹಾಡೂ ಕಾರಣವಾಗಿದೆ. ಹಾಗಾಗಿ ಗೆಳತಿ ನಯನಾ ತಾರಾ ನಟನೆಯ ಹೊಸ ಸಿನಿಮಾದಲ್ಲಿ ಸಮಂತಾ ಹಾಡೊಂದರಲ್ಲಿ ಕಾಣಿಸಿಕೊಂಡರು. ಇದನ್ನೂ ಓದಿ:  ಕಷ್ಟಪಟ್ಟು ಮಾಡುವ ಸಿನಿಮಾ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಆಲಿಯಾ ಗರಂ

    ಇದೀಗ ಅವರು ಪತ್ರಿಕೆಯೊಂದಕ್ಕೆ ಹೊಸ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಆ ಫೋಟೋ ಪಡ್ಡೆಗಳ ನಿದ್ದೆ ಹಾಳು ಮಾಡಿದೆ. ಬೇಸಿಗೆಯನ್ನು ಮತ್ತಷ್ಟು ಹಾಟ್ ಆಗಿಸಿದೆ. ಸ್ವತಃ ಆ ಫೋಟೋವನ್ನು ತಮ್ಮ ಇನ್ಸ್ಟಾ ಪೇಜಿನಲ್ಲಿ ಹಂಚಿಕೊಂಡಿರುವ ಅವರು ಫಿಟ್ ನೆಸ್ ಕುರಿತಾಗಿ ಕೆಲವು ಅನಿಸಿಕೆಗಳನ್ನೂ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬಾಲ್ಯ ವಿವಾಹ ಮಾಡಿ ತಾಳಿ ಬಿಚ್ಚಿಸಿ ಪರೀಕ್ಷೆಗೆ ಕಳುಹಿಸಿದ್ರು

    ಇತ್ತೀಚಿನ ದಿನಗಳಲ್ಲಿ ಆತ್ಮವಿಶ್ವಾಸದ ಬಗ್ಗೆ ಸಾಕಷ್ಟು ಅನಿಸಿಕೆಗಳನ್ನು ಬರೆದುಕೊಳ್ಳುತ್ತಿರುವ ಸಮಂತಾ, ನೊಂದವರ ಪಾಲಿಗೆ ಒಂದು ರೀತಿಯಲ್ಲಿ ಟಾನಿಕ್ ರೀತಿಯಲ್ಲಿ ಅವುಗಳು ಬಳಕೆ ಆಗುತ್ತಿವೆ. ಅಲ್ಲದೇ, ಫಿಟ್ ನೆಸ್, ಆರೋಗ್ಯಕ್ಕೆ ಸಂಬಂಧಿಸಿದ ಟಿಪ್ಸ್ ಗಳು ಕೂಡ ಅಭಿಮಾನಿಗಳ ಪಾಲಿಗೆ ಮಾರ್ಗದರ್ಶಿ ಆಗುತ್ತಿವೆ. ಇದನ್ನೂ ಓದಿ : ಸೆನ್ಸಾರ್ ಪಾಸ್ ಆದ ರಾಕಿಭಾಯ್ : ಕೆಜಿಎಫ್ 1 ಗಿಂತ ಕೆಜಿಎಫ್ 2 ಸಿನಿಮಾ 13 ನಿಮಿಷ ಉದ್ದ

    ಸದ್ಯ ಸಮಂತಾ ಶಾಕುಂತಲಂ ಮತ್ತು ತಮಿಳಿನ ಕಾತುವಾಕುಲ ರೆಂಡು ಕಾದಲ್ ಸಿನಿಮಾದ ಶೂಟಿಂಗ್ ಮುಗಿಸಿದ್ದು, ವಿಜಯ್ ಸೇತುಪತಿ ಅವರ ಸಿನಿಮಾದ ಸ್ಪೆಷಲ್ ಸಾಂಗ್ ಗೆ ಹೆಜ್ಜೆ ಹಾಕಿದ್ದಾರೆ. ಸದ್ಯಲ್ಲೇ ಅವರ ವೆಬ್ ಸಿರೀಸ್ ಕೂಡ ಶುರುವಾಗಲಿದೆ.