Tag: Hot Photo

  • ಬಾತ್ ಟಬ್ ನಲ್ಲಿ ಸಮಂತಾ: ಹಾಟ್ ಮಗಾ ಹಾಟ್ ಅಂತಿದ್ದಾರೆ ಫ್ಯಾನ್ಸ್

    ಬಾತ್ ಟಬ್ ನಲ್ಲಿ ಸಮಂತಾ: ಹಾಟ್ ಮಗಾ ಹಾಟ್ ಅಂತಿದ್ದಾರೆ ಫ್ಯಾನ್ಸ್

    ಕ್ಷಿಣದ ಹೆಸರಾಂತ ತಾರೆ ಸಮಂತ್ ರುತ್ ಪ್ರಭು (Samant) ಕಾಲಿಗೆ ಚಕ್ರಕಟ್ಟಿಕೊಂಡು ದೇಶ ದೇಶಗಳನ್ನು ಸುತ್ತುತ್ತಿದ್ದಾರೆ. ಅಲ್ಲಿನ ಪ್ರವಾಸಿ ತಾಣಗಳು, ಸುಂದರ ಜಾಗಗಳಿಗೆ ಭೇಟಿ ನೀಡಿ, ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಾರೆ. ಇದೀಗ ಸಮಂತಾ ಭೂತಾನ್ (Bhutan)  ಪ್ರವಾಸದಲ್ಲಿ ಇದ್ದಾರೆ.

    ಫ್ರೆಂಡ್ಸ್ ಜೊತೆ ಭೂತಾನ್ ಗೆ ಹೋಗಿರುವ ಸಮಂತಾ, ಅಲ್ಲಿ ಕಳೆದ ಕ್ಷಣಗಳನ್ನು ಫೋಟೋದಲ್ಲಿ ಸೆರೆ ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅದರಲ್ಲೂ ಬಾತ್ ರೂಮ್ ನಲ್ಲಿ ಸಖತ್ ರೊಮ್ಯಾಂಟಿಕ್ ಆಗಿ ಮಲಗಿರುವ ಫೋಟೋ (Hot Photo) ವೈರಲ್ ಆಗಿದೆ.

    ಮೊನ್ನೆಯಷ್ಟೇ ಅವರು ಮೈಯೋಸಿಟಿಸ್ ಟ್ರೀಟ್ ಮೆಂಟ್ ನ ಒಂದು ಭಾಗವಾಗಿರುವ ಕ್ರೈಯೊಥೆರಪಿಯನ್ನು ಪಡೆಯುತ್ತಿದ್ದ ಫೋಟೋವನ್ನು ಅವರು ಶೇರ್ ಮಾಡಿದ್ದರು. ಜೊತೆಗೆ ಎಷ್ಟೊಂದು ಕಷ್ಟದ ದಿನಗಳು ಎಂದೂ ಅವರು ಬರೆದುಕೊಂಡಿದ್ದರು. ಒಂದು ಕಡೆ ತಮಗಿರೋ ಕಾಯಿಲೆಗೆ ಟ್ರೀಟ್ ಮೆಂಟ್ ಪಡೆಯುತ್ತಾ, ಮತ್ತೊಂದು ಕಡೆ ಪ್ರವಾಸ ಮಾಡುತ್ತಾ, ಒಟ್ಟಿನಲ್ಲಿ ಖುಷಿಯ ದಿನಗಳನ್ನು ಕಳೆಯುತ್ತಿದ್ದಾರೆ ಸಮಂತಾ.

     

    ಒಂದು ಕಡೆ ಕಾಯಿಲೆ ಮತ್ತೊಂದು ಕಡೆ ಒಂಟಿತನ.. ಇವೆರಡೂ ತಮ್ಮನ್ನು ಇನ್ನಷ್ಟು ಕುಗ್ಗಿಸುತ್ತಿವೆ ಎಂದು ಹೇಳಿದ್ದರು. ಕುಗ್ಗುವಿಕೆಯಿಂದಾಗಿ ಮತ್ತಿನ್ನೇನು ದೇಹಕ್ಕೆ ಆಗದಿರಲಿ ಎಂದು ಅವರು ಹೆಚ್ಚೆಚ್ಚು ಪ್ರವಾಸ ಮಾಡುತ್ತಿದ್ದಾರೆ ಎನ್ನುವುದು ಅವರ ಆಪ್ತರ ಕೊಡುವ ಮಾಹಿತಿ.

     

  • ಟೈಗರ್ ಶ್ರಾಫ್ ಇಲ್ಲದ ಸಿಂಗಲ್ ಫೋಟೋ ಹಂಚಿಕೊಂಡ ದಿಶಾ ಪಟಾನಿ

    ಟೈಗರ್ ಶ್ರಾಫ್ ಇಲ್ಲದ ಸಿಂಗಲ್ ಫೋಟೋ ಹಂಚಿಕೊಂಡ ದಿಶಾ ಪಟಾನಿ

    ಮಾದಕ ಸುಂದರಿ ದಿಶಾ ಪಟಾನಿ ಬಾಲಿವುಡ್ ಅಂಗಳದಲ್ಲಿ ಸದಾ ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಲೇ ಇರುತ್ತಾರೆ. ಅಭಿಮಾನಿಗಳಿಗಾಗಿ ಒಂದಲ್ಲಾ ಒಂದು ರೀತಿ ಹೊಸ ಹೊಸ ಉಡುಗೆ ತೊಟ್ಟು ಸಾಮಾಜಿಕ ಜಾಲತಾಣದಲ್ಲಿ ಆ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಅವರ ವಿವಿಧ ಹಾಟ್ ಫೋಟೋ ಶೂಟ್ ಭಂಗಿಗಳಿಂದ ಕೂಡಿದ ಫೋಟೋಗಳು ನೋಡುಗರ ಎದೆಯಲ್ಲಿ ಕಿಚ್ಚು ಹಚ್ಚುವ ಕಲೆಯನ್ನು ಚೆನ್ನಾಗಿಯೇ ಕರಗತ ಮಾಡಿಕೊಂಡಿವೆ. ಸೋಮವಾರ ದಿಶಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಮತ್ತೊಂದು ಫೋಟೋ ಹಂಚಿಕೊಂಡಿರುವ ಚಿತ್ರ ಇದಕ್ಕೆ ಮತ್ತೊಂದು ಉದಾಹರಣೆ ಎನ್ನಬಹುದು. ಇದನ್ನೂ ಓದಿ: ಲಿವ್ ಇನ್ ರಿಲೇಶನ್‍ಶಿಪ್ – ಮದುವೆ ಬಗ್ಗೆ ವಿದ್ಯಾ ಬಾಲನ್ ಹೇಳೋದೇನು?

    ಹೌದು, ದಿಶಾ ಈ ಬಾರಿ ಅದ್ಭುತ ಚಿತ್ರವೊಂದನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಹೆಚ್ಚಾಗಿ ಟೈಗರ್ ಶ್ರಾಫ್ ಜೊತೆಗೆ ಬಿಕಿನಿ ತೊಟ್ಟು ಬೀಚ್ ಡೈರಿಗಳಿಂದ ಅಥವಾ ಜಿಮ್‍ನಲ್ಲಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು ದಿಶಾ. ಆದರೆ ಈ ಬಾರಿ ಸಿಂಗಲ್ ಗ್ಲಾಮರಸ್ ಫೋಟೋ ಹಂಚಿಕೊಂಡಿದ್ದು, ಸ್ವತಃ ತಾವೇ ತಮ್ಮ ಕೂದಲು ಮತ್ತು ಮೇಕಪ್ ಅನ್ನು ಮಾಡಿಕೊಂಡಿರುವುದಾಗಿ ಶೀರ್ಷಿಕೆ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬ್ಲಾಕ್ ಹಾಟ್ ಗೌನ್ ನಲ್ಲಿ ರಿಚಾ ಚಡ್ಡಾ : ಪಡ್ಡೆಗಳ ರಾಣಿಜೇನಿನ ಹಾಟ್ ಫೋಟೋ ಶೂಟ್

    ಸದ್ಯ ಆ ಫೋಟೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಫೋಟೋಗೆ ವಾವ್ಹ್! ಅದ್ಭುತ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಬಾಲಿವುಡ್‍ನಲ್ಲಿ ತಮ್ಮ ಮಾದಕ ಭಂಗಿಗಳ ಫೋಟೋಗಳಿಂದಲೇ ಫೇಮಸ್ ಆಗಿರುವ ಇವರಿಗೆ ಅಪಾರ ಅಭಿಮಾನಿ ಬಳಗವಿದೆ. ದಿಶಾ ಅವರು ‘ಏಕ್ ವಿಲನ್ -2’ ಸಿನಿಮಾದಲ್ಲಿ ಅರ್ಜುನ್ ಕಪೂರ್ ಮತ್ತು ಜಾನ್ ಅಬ್ರಹಾಂ ಅವರೊಂದಿಗೆ ಕಾಣಿಕೊಳ್ಳಲಿದ್ದಾರೆ. ದಿಶಾ ಮತ್ತು ಟೈಗರ್ ಲವ್ವಿ ಡವ್ವಿ ಸದಾ ಬಿ-ಟೌನ್‍ನಲ್ಲಿ ಹಾಟ್ ಟಾಪಿಕ್.

  • ಇದೊಂದು ಬಾಕಿ ಇತ್ತು ಉರ್ಫಿಗೆ : ಹಾಟ್ ಹುಡುಗಿ ಬಿಂದಾಸ್ ಉಡುಪು

    ಇದೊಂದು ಬಾಕಿ ಇತ್ತು ಉರ್ಫಿಗೆ : ಹಾಟ್ ಹುಡುಗಿ ಬಿಂದಾಸ್ ಉಡುಪು

    ಮ್ಮ ಔಟ್‍ ಫಿಟ್ ವಿಚಾರದಲ್ಲಿ ಸದಾ ಸುದ್ದಿ ಆಗುವ ನಟಿ ಉರ್ಫಿ ಜಾವೇದ್, ತಮ್ಮ ಡ್ರೆಸ್ ಗಳಿಂದಾಗಿಯೇ ಸಖತ್ ಟ್ರೋಲ್ ಆಗುತ್ತಾರೆ. ಈ ಹಿಂದೆ ‘ಬಟ್ಟೆ ಎಂದರೆ ನನಗೆ ಅಲರ್ಜಿ’ ಎಂದು ಸ್ಟೇಟ್ ಮೆಂಟ್ ಕೊಟ್ಟು ಕೆಲವರ ಕೆಂಗೆಣ್ಣಿಗೆ ಗುರಿಯಾಗಿದ್ದರು. ವಿವಾದ ಏನೇ ಆದರೂ, ತಲೆಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ತಾವು ಇಷ್ಟದ ಬಟ್ಟೆ ಹಾಕಿಕೊಂಡು ಎಂಜಾಯ್ ಮಾಡುತ್ತಾರೆ ಈ ನಟಿ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು

    ಇದೀಗ ಮತ್ತೆ ತಮ್ಮ ಕಾಸ್ಟ್ಯೂಮ್ ಕಾರಣಕ್ಕಾಗಿ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸುದ್ದಿ ಮಾಡುತ್ತಿರುವ ಅವರು, ತಮ್ಮದೇ ಫೋಟೋ ಇರುವ ಉಡುಪು ಧರಿಸಿ, ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದ್ದಾರೆ. ಜಾವೇದ್ ತಮ್ಮದೇ ಫೋಟೋಗಳ ಪ್ರಿಂಟ್ ಬಳಸಿ, ಈ ಉಡುಪನ್ನು ತಯಾರಿಸಿದ್ದು, ಇದಕ್ಕೆ ಸ್ಫೂರ್ತಿ ಸೋಷಿಯಲ್ ಮೀಡಿಯಾ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಣಬೀರ್ ಕಪೂರ್‌ಗೆ ಪತ್ನಿ ಆಗ್ತಾರಾ ನ್ಯಾಷಿನಲ್ ಕ್ರಶ್ ರಶ್ಮಿಕಾ ಮಂದಣ್ಣ?

    ‘ಸೋಷಿಯಲ್ ಮೀಡಿಯಾದಲ್ಲಿ ಇಂಥದ್ದೊಂದು ಡಿಸೈನ್ ನನಗೆ ಕಂಡಿತು. ತುಂಬಾ ಹಿಡಿಸಿತು. ನಾನೇಕೆ ಪ್ರಯತ್ನಿಸಬಾರದು ಅನಿಸಿ, ನನಗಿಷ್ಟವಾದ ಫೋಟೋವನ್ನು ಪ್ರಿಂಟ್ ಮಾಡಿಸಿ, ಈ ಉಡುಪು ಸಿದ್ಧಪಡಿಸಿದ್ದೇನೆ. ಹೇಗೆ ಫಲಿತಾಂಶ ಎಂದು ಅಭಿಮಾನಿಗಳನ್ನು ಕೇಳಿದ್ದಾರೆ ಉರ್ಫಿ. ಇದನ್ನೂ ಓದಿ:  ರಶ್ಮಿಕಾ ವೀಡಿಯೋ ನೋಡಿ ಸುಸ್ತಾದ ಅಭಿಮಾನಿಗಳು – ಕೊಡಗಿನ ಬೆಡಗಿಯ ಜಿಮ್ ಕಸರತ್ತು

    ಸದಾ ಹಾಟ್ ಹಾಟ್ ಆಗಿಯೇ ಕಾಣಿಸಿಕೊಳ್ಳುವ ಉರ್ಫಿಗೆ ಬಟ್ಟೆ ಡಿಸೈನ್ ಮಾಡೋದು ಯಾರು ಎಂಬ ಚರ್ಚೆ ಕೂಡ ನಡೆದಿದೆ. ಕೆಲವರಂತೂ ಇನ್ನೂ ಮುಂದೆ ಹೋಗಿ, ಉರ್ಫಿಗೆ ಖರ್ಚಿಫಿನಷ್ಟು ಬಟ್ಟೆಯಾದರೆ ಸಾಕು, ಅತ್ಯುತ್ತಮ ಕಾಸ್ಟ್ಯೂಮ್ ರೆಡಿ ಮಾಡಬಹುದು ಎಂದು ಕಾಲೆಳೆದವರೂ ಇದ್ದಾರೆ. ಆದರೆ, ಉರ್ಫಿ ಮಾತ್ರ ಹೊಸ ಹೊಸ ಕಾಸ್ಟ್ಯೂಮ್ ಹಾಕಿಕೊಂಡು, ಬಿಂದಾಸ್ ಆಗಿ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ತಾ ಬರುವ ಕಾಮೆಂಟ್ ಗಳನ್ನು ಓದಿಕೊಂಡು ಎಂಜಾಯ್ ಮಾಡುತ್ತಿದ್ದಾರೆ.

  • ರಾಮ್ ಗೋಪಾಲ ವರ್ಮಾ ಡೇಂಜರೆಸ್ ಹುಡುಗಿ ಅಂತ ಹೇಳಿದ್ದು ಯಾರಿಗೆ?

    ರಾಮ್ ಗೋಪಾಲ ವರ್ಮಾ ಡೇಂಜರೆಸ್ ಹುಡುಗಿ ಅಂತ ಹೇಳಿದ್ದು ಯಾರಿಗೆ?

    ಬಾಲಿವುಡ್ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇತ್ತೀಚಿನ ವರ್ಷಗಳಲ್ಲಿ ಸಿನಿಮಾಕ್ಕಿಂತ ಹೆಚ್ಚು ಹುಡುಗಿಯರ ಅಂದವನ್ನು ಹೊಗಳುವುದರಲ್ಲಿ ಮತ್ತು ಸದಾ ಹುಡುಗಿಯರ ಜತೆಯೇ ಕಾಲ ಕಳೆಯುವುದರಲ್ಲಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ : ರಣಬೀರ್ ಮತ್ತು ಆಲಿಯಾ ಮದ್ವೆ ಡೇಟ್ ಮತ್ತೆ ಬದಲು: ಪ್ರಣಯ ಹಕ್ಕಿಗಳ ಪ್ರಲಾಪ

    ಮಾಡೆಲ್ಗಳ ಜತೆ ಬಾರ್ ನಲ್ಲಿ ಪಾರ್ಟಿ ಮಾಡುವುದು ಮತ್ತು ತಮ್ಮದೇ ಸಿನಿಮಾಗಳಲ್ಲಿ ನಟಿಸಿರುವ ನಟಿಯರ ಜತೆ ಬಿಂದಾಸ್ ಆಗಿ ಇರುವುದನ್ನೇ ಹವ್ಯಾಸ ಮಾಡಿಕೊಂಡಿರುವ ವರ್ಮಾ, ಈಗ ನಟಿ ಅಪ್ಸರಾ ರಾಣಿಯನ್ನು ಹಿತವಾಗಿ ಹೊಗಳಿದ್ದಾರೆ. ಇದನ್ನೂ ಓದಿ : ನಟ ಚೇತನ್ ಗಡಿಪಾರು? : ಹೋರಾಟಗಳೇ ನಟನಿಗೆ ಮುಳುವಾಗುತ್ತಾ..?

    ಅಪ್ಸರಾ ರಾಣಿ ಕೆಲವೇ ಗಂಟೆಗಳ ಹಿಂದೆ ಒಂದು ಹಾಟ್ ಹಾಟ್ ಆಗಿರುವ ವಿಡಿಯೋವನ್ನು ಟ್ವಿಟ್ ಮಾಡಿದ್ದಾರೆ. ಪಡ್ಡೆಗಳ ನಿದ್ದೆಗೆಡಿಸುವಂತಹ ಆ ವಿಡಿಯೋಗೆ ರಾಮ್ ಗೋಪಾಲ್ ವರ್ಮಾ ಅಷ್ಟೇ ಸುಂದರವಾಗಿ ಪದಗಳನ್ನು ಪೋಣಿಸಿದ್ದಾರೆ. ‘ಡೇಂಜರೆಸ್ ಹುಡುಗಿಯ ನೋಟವು, ಅಪಾಯಕಾರಿ ಅಲ್ಲವೆಂದು ಹೇಳುತ್ತದೆ’ ಎಂದು ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಕಂಗನಾಳನ್ನು ಹೀರೋಯಿನ್ ಮಾಡಿದ್ದು ಆ ಜ್ಯೋತಿಷಿ: ಅಸಲಿ ಸತ್ಯ ಬಾಯ್ಬಿಟ್ಟ ನಟ ಪ್ರಭಾಸ್

    ಅಪ್ಸರಾ ರಾಣಿಯು ಬೆಡ್ ಮೇಲೆ ಅರೆಬೆತ್ತಲೆಯಾಗಿ ಮಲಗಿಕೊಂಡು ಮಾದಕ ನೋಟದೊಂದಿಗೆ ಗುಲಾಬಿಯ ಒಂದೊಂದೆ ಪಕಳೆಗಳನ್ನು ಎಸೆಯುತ್ತಾರೆ. ಆ ಮಾದಕ ನಗು ಮತ್ತು ನೋಟಕ್ಕೆ ಆರ್.ಜಿ.ವಿ. ಫಿದಾ ಆಗಿದ್ದಾರೆ. ಇದನ್ನೂ ಓದಿ: ಎಂಟು ವರ್ಷಗಳ ನಂತರ ಒಂದಾದ ನೀನಾಸಂ ಸತೀಶ್ ಮತ್ತು ಸಿಂಧು

    ಅಪ್ಸರಾ ರಾಣಿ ಹಾಕಿರುವ ವಿಡಿಯೋ ಜತೆ ಅನ್ನಿ ಬ್ರಾಂಟೆ ಅವರ “ಮುಳ್ಳನ್ನು ಹಿಡಿಯಲು ಧೈರ್ಯವಿಲ್ಲದವರು ಹೂವಿಗೆ ಹಂಬಲಿಸಬಾರು” ಎಂಬ ಸಾಲುಗಳನ್ನು ಹಾಕಿದ್ದಾರೆ. ಬಹುಶಃ ಈ ಲೈನ್ ಗಳಿಗೂ ರಾಮ್ ಗೋಪಾಲ್ ವರ್ಮಾ ಪ್ರತಿಕ್ರಿಯೆ ಕೊಟ್ಟಂತಿದೆ ಅವರು ಸಾಲುಗಳು.

  • ಬಿಕಿನಿ ಫೋಟೋಗೆ ಕಾಮೆಂಟ್ ಮಾಡಿದ್ದ ಅರ್ಜುನ್‍ಗೆ ಚೋರ್ ಎಂದ ಮಲೈಕಾ

    ಬಿಕಿನಿ ಫೋಟೋಗೆ ಕಾಮೆಂಟ್ ಮಾಡಿದ್ದ ಅರ್ಜುನ್‍ಗೆ ಚೋರ್ ಎಂದ ಮಲೈಕಾ

    ಮುಂಬೈ: ಬಾಲಿವುಡ್ ನಟಿ ಮಲೈಕಾ ಅರೋರಾ ಹಾಟ್ ಬಿಕಿನಿ ಫೋಟೋಗೆ ಕಾಮೆಂಟ್ ಮಾಡಿದ ಅರ್ಜುನ್ ಕಪೂರ್‌ಗೆ ಚೋರ್ ಎಂದು ಕರೆದಿದ್ದಾರೆ.

    ಬಾಲಿವುಡ್ ಕ್ಯೂಟ್ ಜೋಡಿಗಳಲ್ಲಿ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಜೋಡಿ ಕೂಡ ಒಂದು. ರಿಲೇಶನ್ ಶಿಪ್ ವಿಚಾರಕ್ಕೆ ಬಂದರೆ ಮಲೈಕಾ ಮತ್ತು ಅರ್ಜುನ್ ಇಬ್ಬರು ಪರಸ್ಪರ ಎಂದಿಗೂ ಒಬ್ಬರನ್ನೊಬ್ಬರು ಬಿಟ್ಟು ಕೊಡುವುದಿಲ್ಲ. ಹಲವಾರು ಸಂಕಷ್ಟದ ಸಮಯದಲ್ಲಿ ಇಬ್ಬರು ಒಬ್ಬರಿಗೊಬ್ಬರು ಪರಸ್ಪರ ಸೋಶಿಯಲ್ ಮೀಡಿಯಾದಲ್ಲಿ ಬೆಂಬಲಿಸುತ್ತಾ ಬಂದಿದ್ದಾರೆ.

    ಸದ್ಯ ಇತ್ತೀಚೆಗಷ್ಟೇ ಮಲೈಕಾ ಆರೆಂಜ್ ಕಲರ್ ಬ್ರಾ ಮತ್ತು ಶಾರ್ಟ್ಸ್ ತೊಟ್ಟಿರುವ ಸುಂದರವಾದ ಫೋಟೋವೊಂದನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ಮಧ್ಯೆ ಎಲ್ಲರ ಗಮನ ಸೆಳೆದಿದ್ದು, ಅರ್ಜುನ್ ಕಪೂರ್ ಮಾಡಿದ್ದ ಕಾಮೆಂಟ್. ಇದನ್ನೂ ಓದಿ: ಸಖತ್ ಹಾಟ್ ಫೋಟೋಗಳಿಂದ ಮೋಡಿ ಮಾಡಿದ ರಾಯ್ ಲಕ್ಷ್ಮೀ

    ಹೌದು, ಮಲೈಕಾ ಅರೋರಾ ಆರೆಂಜ್ ಕಲರ್ ಬ್ರಾ ಮತ್ತು ಶಾರ್ಟ್ಸ್ ತೊಟ್ಟು ಸ್ವೀಮಿಂಗ್ ಪೂಲ್‍ನಲ್ಲಿ ಫೋಟೋಗೆ ಸಖತ್ ಸೆಕ್ಸಿಯಾಗಿ ಪೋಸ್ ನೀಡಿದ್ದಾರೆ. ಇದರ ಜೊತೆಗೆ ಕ್ಯಾಪ್ಷನ್‍ನಲ್ಲಿ ಸನ್ ಡೇ ಸನ್ನಿ ಸೈಡ್ ಅಪ್ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇನ್ನೂ ಈ ಫೋಟೋಗೆ ಅರ್ಜುನ್ ಕಪೂರ್ ಫುಲ್ ಫಿದಾ ಆಗಿದ್ದು, ನೈಸ್ ಕ್ಯಾಪ್ಷನ್ ಎಂದು ರಿಯಾಕ್ಟ್ ಮಾಡಿದ್ದಾರೆ. ಇದಕ್ಕೆ ಮಲೈಕಾ, ಅರ್ಜುನ್ ಕಪೂರ್ ಅವರನ್ನು ಕ್ಯಾಪ್ಷನ್ ಚೋರ್ ಎಂದು ಕರೆದಿದ್ದಾರೆ.

     

    View this post on Instagram

     

    A post shared by Malaika Arora (@malaikaaroraofficial)

    ಮಲೈಕಾ ಹಾಗೂ ಅರ್ಜುನ್ ಕಪೂರ್ ಇಬ್ಬರಿಗೂ ಬಹಳಷ್ಟು ವಯಸ್ಸಿನ ಅಂತರವಿದೆ ಎಂದು ಅನೇಕ ಮಂದಿ ಟೀಕೆ ವ್ಯಕ್ತಪಡಿಸಿದರು, ಇದ್ಯಾವುದನ್ನು ಇಬ್ಬರೂ ಲೆಕ್ಕಿಸದೇ ಪ್ರೀತಿಸುತ್ತಿದ್ದಾರೆ. ಈ ಕುರಿತಂತೆ ಮಲೈಕಾ ಇತ್ತೀಚೆಗಷ್ಟೇ ಫೋಟೋವೊಂದನ್ನು ಪೋಸ್ಟ್ ಮಾಡಿದ್ದರು. ಇದರಲ್ಲಿ 40ರಲ್ಲಿ ಪ್ರೀತಿಸುವುದನ್ನು ಸಾಮಾನ್ಯವಾಗಿಸಿ, 30ರಲ್ಲಿ ನಿಮ್ಮ ಕನಸುಗಳನ್ನು ಬೆನ್ನಟ್ಟುವುದನ್ನು ಸಾಮಾನ್ಯಗೊಳಿಸಿ. 50ರಲ್ಲಿ ನಿಮ್ಮ ಉದ್ದೇಶವನ್ನು ಕಂಡುಕೊಳ್ಳಿ. 25ಕ್ಕೆ ಪ್ರೀತಿಯ ಜೀವನ ಕೊನೆಗೊಳ್ಳುವುದಿಲ್ಲ ಎಂದು ತಿಳಿಸಿದ್ದರು. ಇದನ್ನೂ ಓದಿ:  ಹೊಸ ಮೆಟ್ರೋ ನಿಲ್ದಾಣಕ್ಕೆ ಅಪ್ಪು ಹೆಸರಿಡುವಂತೆ ಒತ್ತಾಯ

  • ಸ್ವಿಮ್ ಸೂಟ್‍ನಲ್ಲಿ ಮರ್ಡರ್ ಬೆಡಗಿ ಹಾಟ್ ಅವತಾರ ವೈರಲ್

    ಸ್ವಿಮ್ ಸೂಟ್‍ನಲ್ಲಿ ಮರ್ಡರ್ ಬೆಡಗಿ ಹಾಟ್ ಅವತಾರ ವೈರಲ್

    ಮುಂಬೈ: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಸ್ವಿಮ್ ಸೂಟ್ ಧರಿಸಿ ಫೋಟೋಗೆ ಸಖತ್ ಸೆಕ್ಸಿಯಾಗಿ ಪೋಸ್ ನೀಡಿದ್ದಾರೆ.

    ಜಾಕ್ವೆಲಿನ್ ಫರ್ನಾಂಡೀಸ್ ಅವರಿಗೆ ಮೊದಲಿನಿಂದಲೂ ದುಬೈ ಎಂದರೆ ಅಚ್ಚುಮೆಚ್ಚು. ಸದ್ಯ ದುಬೈನಲ್ಲಿ ಟೈಂ ಸ್ಪೆಂಡ್ ಮಾಡುತ್ತಿರುವ ಜಾಕ್ವೆಲಿನ್ ಸ್ವಿಮ್ಮಿಂಗ್ ಪೂಲ್ ಬಳಿ ಒಂದಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಇನ್ನೂ ಈ ಫೋಟೋಗಳನ್ನು ಜಾಕ್ವೆಲಿನ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಪೂಲ್ ಬೇಬಿ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮನೆಯಲ್ಲಿದ್ರೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತೆ ಅನ್ನೋ ಭಯವಿದೆ: ಸೈಫ್ ಆಲಿ ಖಾನ್

    ಸ್ವಿಮ್ಮಿಂಗ್ ಪೂಲ್ ಪಕ್ಕದ ಕುಳಿತುಕೊಳ್ಳುವುದರಿಂದ ಹಿಡಿದು ಸ್ವಿಮ್ಮಿಂಗ್ ಪೂಲ್ ಒಳಗೆ ಇಳಿದು ಸಖತ್ ಹಾಟ್ ಆ್ಯಂಡ್ ಬೋಲ್ಡ್ ಆಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಫೋಟೋದಲ್ಲಿ ಜಾಕ್ವೆಲಿನ್ ಬ್ಲೂ ಕಲರ್ ಸ್ವಿಮ್ ಸೂಟ್ ಮತ್ತು ಸನ್ ಗ್ಲಾಸ್ ತೊಟ್ಟು ಬಿಸಿಲಿನಲ್ಲಿ ಕೂಲ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಜಾಕ್ವೆಲಿನ್ ಹಾಟ್ ಅವತಾರಕ್ಕೆ ತುಂಡೈಕ್ಳು ಫುಲ್ ಫಿದಾ ಆಗಿದ್ದಾರೆ. ಇದನ್ನೂ ಓದಿ: ಡೆಸರ್ಟ್ ಸಫಾರಿ ಬಳಿಕ ಬಿಕಿನಿಯಲ್ಲಿ ಜಾನ್ವಿ, ಖುಷಿ ಕಪೂರ್ ಮೋಜು, ಮಸ್ತಿ

    ಇತ್ತೀಚೆಗಷ್ಟೇ ಬಾಲಿವುಡ್ ಜಾನ್ ಅಬ್ರಹಾಂ ಮತ್ತು ಜಾಕ್ವೆಲಿನ್ ಅಭಿನಯದ ಅಟ್ಯಾಕ್ ಸಿನಿಮಾ 2022ರ ಜನವರಿ 26ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಅಕ್ಷಯ್ ಕುಮಾರ್ ಮತ್ತು ನುಶ್ರತ್ ಭರುಚ್ಚ ಅವರೊಂದಿಗೆ ರಾಮ್ ಸೇತು ಚಿತ್ರದಲ್ಲಿ ಕೂಡ ಜಾಕ್ವೆಲಿನ್ ಕಾಣಿಸಿಕೊಳ್ಳಲಿದ್ದು, ಈ ಸಿನಿಮಾ ಕೂಡ 2022ರ ದೀಪಾವಳಿಯಂದು ಬಿಡುಗಡೆಯಾಗಲಿದೆ. ಅಲ್ಲದೇ ಬಚ್ಚನ್ ಪಾಂಡೆ ಎಂಬ ಅಕ್ಷಯ್ ಕುಮಾರ್ ಅಭಿನಯದ ಮತ್ತೊಂದು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಸ್ಯಾಂಡಲ್‍ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾದ ಹಾಡೊಂದರಲ್ಲಿ ಸುದೀಪ್ ಜೊತೆ ಜಾಕ್ವೆಲಿನ್ ಫರ್ನಾಂಡೀಸ್ ಸೊಂಟ ಬಳುಕಿಸಿದ್ದಾರೆ.

  • ಹಾಟ್ ಬಟ್ಟೆತೊಟ್ಟಾಗ ಟ್ರೋಲ್ ಮಾಡುವವರಿಗೆ ಸವಾಲ್ ಹಾಕಿದ ಸಮಂತಾ

    ಹಾಟ್ ಬಟ್ಟೆತೊಟ್ಟಾಗ ಟ್ರೋಲ್ ಮಾಡುವವರಿಗೆ ಸವಾಲ್ ಹಾಕಿದ ಸಮಂತಾ

    ಬೆಂಗಳೂರು: ನಟಿಯರು ಹಾಟ್ ಬಟ್ಟೆ ಧರಿಸಿದಾಗ ಟ್ರೋಲ್ ಮಾಡುವವರಿಗೆ ತೆಲುಗಿನ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಸವಾಲ್ ಹಾಕಿದ್ದಾರೆ.

    ತಾವು ತೊಡುವ ಬಟ್ಟೆಯಿಂದಾಗಿ ಸಮಂತಾ ಅವರು ಆಗಾಗ ಸುದ್ದಿಯಾಗುತ್ತಿರುತ್ತಾರೆ. ಈ ಹಿಂದೆ ವಿದೇಶಕ್ಕೆ ತೆರಳಿದ್ದ ಅವರು ಬಿಕಿನಿ ಧರಿಸಿ ಸುದ್ದಿಯಾಗಿದ್ದರು. ಜೊತೆಗೆ ಕೆಲ ಟ್ರೋಲ್ ಪೇಜ್‍ಗಳು ಹಾಗೂ ಅಭಿಮಾನಿಗಳು ಕೂಡ ಅಕ್ಕಿನೇನಿ ಕುಟುಂಬದ ಸೊಸೆಯಾಗಿ ನೀವು ರೀತಿ ಬಟ್ಟೆ ಧರಿಸಬಾರದು ಎಂದು ಟ್ರೋಲ್ ಮಾಡಿದ್ದರು.

    ಅಂದು ಬಿಕಿನಿ ಹಾಕಿಕೊಂಡಿದ್ದಕ್ಕೆ ಟ್ರೋಲ್ ಮಾಡಿದವರ ವಿರುದ್ಧ ಖಾರವಾಗಿ ಪ್ರತಿಕ್ರಿಯಿಸಿದ್ದ ಸಮಂತಾ, ಮಧ್ಯದ ಬೆರಳಿನ ಫೋಟೋ ಹಾಕಿ ಟ್ರೋಲ್‍ಗಳಿಗೆ ಚಮಕ್ ನೀಡಿದ್ದರು. ಈಗ ಮತ್ತೆ ಹಾಟ್ ಆಗಿ ಕಾಣಿಸಿಕೊಂಡಿರುವ ಸಮಂತಾ, ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ನಾನು ಟ್ರೋಲ್‍ಗಳಿಗೆ ಭಯಪಡುವುದಿಲ್ಲ ಎಂದು ಸವಾಲ್ ಹಾಕಿದ್ದಾರೆ.

    https://www.instagram.com/p/Be7eVsgnUl-/

    ಈಗ ಸಂದರ್ಶನವೊಂದರಲ್ಲಿ ಟ್ರೋಲ್ ವಿಚಾರವಾಗಿ ಮಾತನಾಡಿರುವ ಸಮಂತಾ, ನನಗೆ ಇನ್ನೂ ನೆನಪಿದೆ ನಾನು ಮದುವೆಯಾದ ಮೇಲೆ ಧರಿಸಿದ್ದ ಒಂದು ಡ್ರೆಸ್ ಸಖತ್ ಟ್ರೋಲ್ ಆಗಿತ್ತು. ಈ ಡ್ರೆಸ್‍ನ ಫೋಟೋ ಇಟ್ಟುಕೊಂಡು ಭಯಾಂಕರವಾಗಿ ಟ್ರೋಲ್ ಮಾಡಿದ್ದರು. ಆಗ ನನಗೆ ಬಹಳ ಬೇಜಾರಾಗಿತ್ತು. ಆದರೆ ನಾನು ಮತ್ತೆ ಎರಡನೇ ಬಾರಿ ಅದೇ ಉಡುಪಿನಲ್ಲಿ ಕಾಣಿಸಿಕೊಂಡಾಗ ಅವರು ನನ್ನನ್ನು ಟ್ರೋಲ್ ಮಾಡಲಿಲ್ಲ ಎಂದು ಹೇಳಿದ್ದಾರೆ.

    https://www.instagram.com/p/B7OGZc_BHvd/

    ಮೊದಲು ನನಗೆ ಟ್ರೋಲ್‍ಗಳು ಎಂದರೆ ಭಯವಾಗುತ್ತಿತ್ತು. ಆ ಭಯ ನಾವು ಒಂದು ಹೆಜ್ಜೆ ಇಡುವವರಿಗೆ ಅಮೇಲೆ ಅದು ನಮಗೆ ಅಭ್ಯಾಸವಾಗಿ ಹೋಗುತ್ತದೆ. ಹೀಗೆ ಹೇಳುತ್ತಿದ್ದೇನೆ ಎಂದ ಮಾತ್ರಕ್ಕೆ ನಾನು ಅಷ್ಟೊಂದು ಧೈರ್ಯಶಾಲಿಯಲ್ಲ. ಕೆಲವು ಬದಲಾಗಬೇಕು. ಆ ಬದಲಾವಣೆ ಸಮಾಜದಲ್ಲಿ ಬರಲು ಏನೂ ಮಾಡಬೇಕು ಅದನ್ನು ನಾನು ಮಾಡುತ್ತೇನೆ ಎಂದು ಸಮಂತಾ ಟ್ರೋಲ್‍ಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

    https://www.instagram.com/p/B7OHwP3hh1i/

    ಇತ್ತೀಚಿಗೆ ಫ್ಲಾಪ್ ನಟಿ ಎಂದು ಕರೆದವರ ವಿರುದ್ಧ ಕಿಡಿಕಾರಿದ್ದ ಸಮಂತಾ, ಸ್ಟಾರ್ ನಟರ ಸಿನಿಮಾಗಳು ಸಾಲು ಸಾಲು ಫ್ಲಾಪ್ ಆದರೂ ಅವರನ್ನು ಒಪ್ಪುತ್ತಾರೆ. ಆದರೆ ನಟಿಯರು ಕಷ್ಟಪಟ್ಟು ಸಿನಿಮಾ ಮಾಡಿದರೂ ಯಾರೂ ಅವರನ್ನು ಹೊಗಳುವುದಿಲ್ಲ. ಸಿನಿಮಾ ಫ್ಲಾಪ್ ಆದರೆ ಆ ಚಿತ್ರದ ನಟಿಯರೇ ಕಾರಣ ಎಂದು ಹೇಳುತ್ತಾರೆ. ನಟಿಯರ ಒಂದು ಸಿನಿಮಾ ಸೋತರು ಫ್ಲಾಪ್ ಎಂದು ಕರೆಯುತ್ತಾರೆ ಎಂದು ಗರಂ ಆಗಿದ್ದರು.