Tag: hot oil

  • ತಿಂಡಿ ಕೊಡಲು ತಡವಾಗಿದ್ದಕ್ಕೆ ಬಿಸಿ ಎಣ್ಣೆ ಎರಚಿದ ಗ್ರಾಹಕ

    ತಿಂಡಿ ಕೊಡಲು ತಡವಾಗಿದ್ದಕ್ಕೆ ಬಿಸಿ ಎಣ್ಣೆ ಎರಚಿದ ಗ್ರಾಹಕ

    ರಾಯಚೂರು: ಗ್ರಾಹಕನೊಬ್ಬ ಹೊಟೇಲ್ ಮಾಲೀಕನ ಮೇಲೆ ಅಡುಗೆ ಎಣ್ಣೆ ಎರಚಿದ ಪ್ರಕರಣವೊಂದು ರಾಯಚೂರಿನಲ್ಲಿ (Raichur) ಬೆಳಕಿಗೆ ಬಂದಿದೆ.

    ರಾಯಚೂರಿನ ಮಾನ್ವಿ ತಾಲೂಕಿನ ರಾಜೋಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಗಾಯಾಳು ಹೋಟೆಲ್ (Hotel) ಮಾಲೀಕನನ್ನು ರಂಗಯ್ಯ ಶೆಟ್ಟಿ ಎಂದು ಗುರುತಿಸಲಾಗಿದೆ. ಅದೇ ಗ್ರಾಮದ ಭೀಮಾ ನಾಯಕ್ ಎಂಬಾತ ಈ ಕೃತ್ಯ ಎಸಗಿದ್ದಾನೆ.

    ನಡೆದಿದ್ದೇನು..?: ಇಂದು ಬೆಳ್ಳಂಬೆಳಗ್ಗೆ ಭೀಮಾ ನಾಯಕ್ ಹೋಟೆಲ್‍ಗೆ ಬಂದಿದ್ದಾನೆ. ಹೀಗೆ ಬಂದವನು ಇಡ್ಲಿ ಕೊಡಿ ಎಂದು ಕೇಳಿದ್ದಾನೆ. ಆಗ ಮಾಲೀಕ ರಂಗಯ್ಯ, ಇಡ್ಲಿ ಇಲ್ಲ ಎಂದು ಹೇಳಿ ವಾಪಸ್ ಕಳಿಸಿದ್ದಾರೆ. ಅಂತೆಯೇ ಹೋದ ಭೀಮಾ ನಾಯಕ್ ಸ್ವಲ್ಪ ಹೊತ್ತಿನ ಬಳಿಕ ಮತ್ತೆ ವಾಪಸ್ ಹೋಟೆಲ್‍ಗೆ ಬಂದಿದ್ದಾನೆ. ಇದನ್ನೂ ಓದಿ: ಪಂಚ ರಾಜ್ಯಗಳ ಮತದಾರರು ಕಾಂಗ್ರೆಸ್ ಗ್ಯಾರಂಟಿ ಭಜನೆಗೆ ಮರುಳಾಗಬಾರದು: ಹೆಚ್‍ಡಿಕೆ

    ಈ ವೇಳೆ ಒಗ್ಗರಣೆ ಮಿರ್ಚಿ ಕೊಡುವಂತೆ ಕೇಳಿದ್ದಾನೆ. ಆದರೆ ಇದು ತಂದುಕೊಡುವುದು ಸ್ವಲ್ಪ ತಡವಾಗಿದೆ. ಇದರಿಂದ ಸಿಟ್ಟಿಗೆದ್ದ ಭೀಮಾ ನಾಯಕ್, ಉಪ್ಪಿಟ್ಟು ಮಾಡಲು ಇಟ್ಟಿದ್ದ ಬಿಸಿ ಎಣ್ಣೆಯನ್ನು ರಂಗಯ್ಯ ಮುಖಕ್ಕೆ ಎರಚಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ.

    ಇತ್ತ ಗಾಯಗೊಂಡ ರಂಗಯ್ಯ ಅವರನ್ನು ಕುಡಲೇ ಮಾನ್ವಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಚಿಕಿತ್ಸೆ ಮುಂದುವರಿದಿದೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಇಎಂಐ ಕಟ್ಟು ಎಂದಿದ್ದಕ್ಕೆ ಖಾಸಗಿ ಫೈನಾನ್ಸ್ ಕಂಪನಿಯ ಉದ್ಯೋಗಳ ಮೇಲೆ ಬಿಸಿ ಎಣ್ಣೆ ಎರಚಿದ

    ಇಎಂಐ ಕಟ್ಟು ಎಂದಿದ್ದಕ್ಕೆ ಖಾಸಗಿ ಫೈನಾನ್ಸ್ ಕಂಪನಿಯ ಉದ್ಯೋಗಳ ಮೇಲೆ ಬಿಸಿ ಎಣ್ಣೆ ಎರಚಿದ

    ಜೈಪುರ: ಇಎಂಐ (EMI) ಕಟ್ಟು ಎಂದು ಹೇಳಿದ ಫೈನಾನ್ಸ್ ಕಂಪನಿಯ ಇಬ್ಬರು ಉದ್ಯೋಗಿಗಳ ಮೇಲೆ ವ್ಯಕ್ತಿಯೊಬ್ಬ ಬಿಸಿ ಎಣ್ಣೆಯನ್ನು (Hot Oil) ಎರಚಿ ಪರಾರಿಯಾಗಿರುವ ಘಟನೆ ರಾಜಸ್ಥಾನದ (Rajasthan) ಜುಂಜುನು ಎಂಬಲ್ಲಿ ನಡೆದಿದೆ. ದಾಳಿಗೊಳಗಾದ ಇಬ್ಬರು ಉದ್ಯೋಗಿಗಳಿಗೆ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

    ವರದಿಗಳ ಪ್ರಕಾರ ಜುಂಜುನುವಿನ ರಾಝಿ ಸತಿ ರಸ್ತೆಯಲ್ಲಿರುವ ಖಾಸಗಿ ಬ್ಯಾಂಕ್ ಶಾಖೆಯ ಬಳಿ ಈ ಘಟನೆ ನಡೆದಿದೆ. ಆರೋಪಿ ವ್ಯಕ್ತಿ ಸುರೇಂದ್ರ ಸ್ವಾಮಿ ಫೈನಾನ್ಸ್ ಕಂಪನಿಯಲ್ಲಿ ವೈಯಕ್ತಿಕ ಸಾಲ (Loan) ಪಡೆದಿದ್ದು, ಇಎಂಐ ವಸೂಲಿಗಾಗಿ ಬಂದಿದ್ದ ಇಬ್ಬರು ನೌಕರರು ಕುಲದೀಪ್ ಹಾಗೂ ನವೀನ್ ಮೇಲೆ ಬಿಸಿ ಎಣ್ಣೆ ಎರಚಿದ್ದಾನೆ.

    ಆರೋಪಿಯು ವಾರ್ಡ್ ನಂ.44ರ ಖೈತಾನ್ ಕಾ ಮೊಹಲ್ಲಾದ ನಿವಾಸಿಯಾಗಿದ್ದು, ಕುಲದೀಪ್ ಮತ್ತು ನವೀನ್ ಇಬ್ಬರೂ ಇಎಂಐ ಕೇಳಲು ಸ್ವಾಮಿ ಮನೆಗೆ ಬಂದಿದ್ದರು. ಆದರೆ ಸ್ವಾಮಿ ಅವರನ್ನು ರಾಣಿ ಸತಿ ರಸ್ತೆಯಲ್ಲಿರುವ ಖಾಸಗಿ ಬ್ಯಾಂಕ್ ಬಳಿ ಭೇಟಿಯಾಗುವಂತೆ ಕರೆದಿದ್ದಾನೆ. ಇದನ್ನೂ ಓದಿ: ದತ್ತಜಯಂತಿಯಂದು ದತ್ತಪೀಠ ಮಾರ್ಗದಲ್ಲಿ ಮೊಳೆ ಸುರಿದಿದ್ದ ಇಬ್ಬರ ಬಂಧನ

    ಸ್ವಾಮಿ ಅವರನ್ನು ಭೇಟಿಯಾದ ಬಳಿಕ ಅವರ ನಡುವೆ ವಾಗ್ವಾದ ಪ್ರಾರಂಭವಾಗಿದೆ. ಈ ವೇಳೆ ಸಿಟ್ಟಾದ ಸ್ವಾಮಿ ಹತ್ತಿರದ ಅಂಗಡಿಯ ಬಾಣಲೆಯಲ್ಲಿದ್ದ ಬಿಸಿ ಎಣ್ಣೆಯನ್ನು ಜಗ್‌ನಲ್ಲಿ ತೆಗೆದುಕೊಂಡು ಅವರಿಬ್ಬರ ಮೇಲೆ ಎರಚಿದ್ದಾನೆ. ಬಳಿಕ ಸ್ವಾಮಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ದಾಳಿಯಿಂದಾಗಿ ತೀವ್ರವಾದ ಸುಟ್ಟ ಗಾಯಗಳಾಗಿ ಉದ್ಯೋಗಿಗಳಿಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

    ಘಟನೆಯ ಬಳಿಕ ಆರೋಪಿ ಸುರೇಂದ್ರ ಸ್ವಾಮಿ ತಲೆಮರೆಸಿಕೊಂಡಿದ್ದಾನೆ. ಕುಲದೀಪ್ ಅವರಿಗೆ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ನವೀನ್ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊತ್ವಾಲಿ ಪೊಲೀಸರು ಸುರೇಂದ್ರ ಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ತಿಂಡಿ ಪ್ಯಾಕೆಟ್‍ನಲ್ಲಿ 500 ರೂ. ನೋಟುಗಳು – ಕಿರಾಣಿ ಅಂಗಡಿಗಳಿಗೆ ಮುಗಿಬಿದ್ದ ಜನ

    Live Tv
    [brid partner=56869869 player=32851 video=960834 autoplay=true]

  • ಊಟ ರುಚಿಯಿಲ್ಲ ಎಂದಿದ್ದಕ್ಕೆ ಗ್ರಾಹಕನ ಮೇಲೆ ಬಿಸಿ ಎಣ್ಣೆ ಸುರಿದ ಹೋಟೆಲ್ ಮಾಲೀಕ

    ಊಟ ರುಚಿಯಿಲ್ಲ ಎಂದಿದ್ದಕ್ಕೆ ಗ್ರಾಹಕನ ಮೇಲೆ ಬಿಸಿ ಎಣ್ಣೆ ಸುರಿದ ಹೋಟೆಲ್ ಮಾಲೀಕ

    ಭುವನೇಶ್ವರ: ಹೋಟೆಲ್‍ನಲ್ಲಿ (Restaurant) ಆಹಾರದ ರುಚಿ ಹಾಗೂ ಬೆಲೆಗೆ (Price) ಸಂಬಂಧಿಸಿ ನಡೆದ ಜಗಳದಲ್ಲಿ  ಮಾಲೀಕನೊಬ್ಬ (Owner) ಗ್ರಾಹಕನ (Customer) ಮೇಲೆ ಬಿಸಿ ಎಣ್ಣೆ (Hot Oil) ಸುರಿದಿರುವ ಘಟನೆ ಓಡಿಶಾದ (Odisha) ಜಾಜ್‍ಪುರ್ ಜಿಲ್ಲೆಯಲ್ಲಿ ನಡೆದಿದೆ.

    ಬಲಿಚಂದ್ರಾಪುರ ಗ್ರಾಮದ ನಿವಾಸಿ ಪ್ರಸಂಜಿತ್ ಪರಿದಾ (48) ಊಟ ಮಾಡಲೆಂದು ಸ್ಥಳೀಯ ಮಾರುಕಟ್ಟೆಯಲ್ಲಿರುವ ಹೋಟೆಲ್‍ವೊಂದಕ್ಕೆ ತೆರಳಿದ್ದ. ಈ ವೇಳೆ ಊಟ ಚೆನ್ನಾಗಿಲ್ಲ ಎಂದು ಅಲ್ಲಿನ ಹೋಟೆಲ್ ಮಾಲೀಕ ಪ್ರವಾಕರ ಸಾಹೂಗೆ ದೂರು ನೀಡಿದ್ದಾನೆ. ಈ ವೇಳೆ ಆಹಾರದ ಬೆಲೆಯ ವಿಚಾರವಾಗಿಯೂ ಗಲಾಟೆ ನಡೆದಿದೆ.

    crime

    ಇದರಿಂದ ಕೋಪಗೊಂಡ ಸಾಹೂ, ಪರಿದಾ ಮೇಲೆ ಬಿಸಿ ಎಣ್ಣೆ ಸುರಿದಿದ್ದಾನೆ. ಈ ವೇಳೆ ಪರಿದಾನ ಮುಖ, ಕುತ್ತಿಗೆ, ಎದೆ, ಹೊಟ್ಟೆ ಹಾಗೂ ಕೈಗಳು ಸುಟ್ಟು ಹೋಗಿದೆ. ತಕ್ಷಣ ಪರಿದಾನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದನ್ನೂ ಓದಿ: RSS ಸಾಧನದಂತೆ ರಾಜ್ಯಪಾಲರು ಕಾರ್ಯ ನಿರ್ವಹಿಸ್ತಿದ್ದಾರೆ: ಪಿಣರಾಯಿ ವಾಗ್ದಾಳಿ

    ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಕುರಿತು ಸದ್ಯ ತನಿಖೆ ನಡೆಯುತ್ತಿದ್ದು, ಶೀಘ್ರವೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಕಲು ಮಾಡ್ಬಾರ್ದು ಅಂತ ಚಿತ್ರ ವಿಚಿತ್ರ ಕಿರೀಟ ಹಾಕಿಸಿ ಪರೀಕ್ಷೆ ಬರೆಸಿದ್ರು

    Live Tv
    [brid partner=56869869 player=32851 video=960834 autoplay=true]

  • 6 ವರ್ಷದ ಬಾಲಕಿಯ ಖಾಸಗಿ ಅಂಗಕ್ಕೆ ಕುದಿಯುವ ಎಣ್ಣೆ ಎರಚಿದ ಮಲತಾಯಿ!

    6 ವರ್ಷದ ಬಾಲಕಿಯ ಖಾಸಗಿ ಅಂಗಕ್ಕೆ ಕುದಿಯುವ ಎಣ್ಣೆ ಎರಚಿದ ಮಲತಾಯಿ!

    ಲಕ್ನೋ: 35 ವರ್ಷದ ಮಹಿಳೆಯೊಬ್ಬಳು 6 ವರ್ಷದ ದುತ್ತು ಪುತ್ರಿಯ ಖಾಸಗಿ ಅಂಗಕ್ಕೆ ಕುದಿಯುತ್ತಿರುವ ಎಣ್ಣೆ ಎರಚಿದ ವಿಲಕ್ಷಣ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಆರೋಪಿ ಮಹಿಳೆಯನ್ನು ಪೂನಂ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧಿಸಿದಂತೆ ಬುಧವಾರ ರಾತ್ರಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

    ಮಹಿಳೆ ದತ್ತು ಪುತ್ರಿಗೆ ಎಣ್ಣೆ ಎರಚಿ ಚಿತ್ರಹಿಂಸೆ ನೀಡಿದ ಬೆನ್ನಲ್ಲೇ ಪೂನಂ ಪತಿ ಅಜಯ್ ಕುಮಾರ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಇತ್ತ ಮಗಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇದನ್ನೂ ಓದಿ: ನನ್ನ ಮಗನ ಕೊಲೆಯಾಗಿದೆ- ಮೃತ ಕಿಕ್ ಬಾಕ್ಸರ್ ತಂದೆ ಆರೋಪ

    ಪ್ರಕರಣ ದಾಖಲಿಸಿಕೊಂಡ ಬಳಿಕ ಅಲ್ಲಿನ ಎಸ್‍ಹೆಚ್‍ಒ ಹರಿ ಶಂಕರ್ ಚಂದ್ರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಪೂನಂ ಹಾಗೂ ಅಜಯ್ ದಂಪತಿಗೆ ಮಕ್ಕಳಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು 6 ತಿಂಗಳ ಹಿಂದೆಯಷ್ಟೇ ಹೆಣ್ಣು ಮಗುವೊಂದನ್ನು ದತ್ತು ಪಡೆದಿದ್ದಾರೆ. ಆದರೆ ಪತಿಯ ಈ ನಿರ್ಧಾರ ಪೂನಂಗೆ ಇಷ್ಟವಾಗಿರಲಿಲ್ಲ. ಹೆಣ್ಣು ಮಗು ದತ್ತು ಪಡೆದಿದ್ದು ಇಷ್ಟವಿಲ್ಲದ ಕಾರಣ ಆಕೆಯ ಜೊತೆ ಅಸಭ್ಯವಾಗಿ ವರ್ತಿಸಲು ಪೂನಂ ಆರಂಭಿಸಿದ್ದಾಳೆ ಎಂದು ತಿಳಿಸಿದರು.

    ಮಗಳ ಜೊತೆ ಅಸಭ್ಯವಾಗಿ ವರ್ತಿಸಿದ ಪೂನಂ ನಂತರ ಅಡುಗೆ ಮನೆಗೆ ತೆರಳಿ ಎಣ್ಣೆ ಬಿಸಿ ಮಾಡಲು ಇಟ್ಟಿದ್ದಾಳೆ. ಎಣ್ಣೆ ಚೆನ್ನಾಗಿ ಕಾದ ಬಳಿಕ ಅದನ್ನು ತಂದು ಪುತ್ರಿಯ ಖಾಸಗಿ ಅಂಗಕ್ಕೆ ಎರಚಿದ್ದಾಳೆ ಎಂದು ಅಜಯ್ ಕುಮಾರ್ ದೂರು ದಾಖಲಿಸಿರುವುದಾಗಿ ಎಸ್‍ಹೆಚ್‍ಒ ವಿವರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 1 ರೂ. ಕಡಿಮೆ ಕೊಟ್ಟಿದ್ದಕ್ಕೆ ಗ್ರಾಹಕರ ಮೇಲೆ ಕಾದ ಎಣ್ಣೆ ಎರಚಿದ

    1 ರೂ. ಕಡಿಮೆ ಕೊಟ್ಟಿದ್ದಕ್ಕೆ ಗ್ರಾಹಕರ ಮೇಲೆ ಕಾದ ಎಣ್ಣೆ ಎರಚಿದ

    ಆಗ್ರಾ: ಸಮೋಸಕ್ಕೆ 1 ರೂಪಾಯಿ ಕಡಿಮೆ ಕೊಟ್ಟಿದ್ದಕ್ಕೆ ರೊಚ್ಚಿಗೆದ್ದ ವ್ಯಾಪಾರಿಯೋರ್ವ ಗ್ರಾಹಕನ ಸಹೋದರನ ಮೈಮೇಲೆ ಕಾದ ಎಣ್ಣೆ ಎರಚಿ ವಿಕೃತಿ ಮೆರೆದಿದ್ದಾನೆ.

    ಮಂಗಳವಾರದಂದು ಉತ್ತರಪ್ರದೇಶದ ಮಥುರಾದಲ್ಲಿ ಈ ಘಟನೆ ನಡೆದಿದೆ. ಮಥುರಾ ನಿವಾಸಿ ಹೇಮರಾಜ್(26) ಹಾಗೂ ಆತನ ಸಹೋದರ ವಿಷ್ಣು(22) ಇಬ್ಬರ ಮೇಲು ಕಾದ ಎಣ್ಣೆ ಎರಚಲಾಗಿದೆ. ಕೇವಲ 1 ರೂ. ಹಣ ಕಡಿಮೆ ನೀಡಿದ್ದೇ ಅಂಗಡಿ ಮಾಲೀಕ ಸುರೇಶ್ ಮತ್ತು ಗ್ರಾಹಕರ ನಡುವೆ ಗಲಾಟೆ ನಡೆಯಲು ಕಾರಣವಾಗಿದೆ.

    ರೆಟಿಯಾ ಮಾರುಕಟ್ಟೆಯಲ್ಲಿರುವ ಸ್ವೀಟ್ ಅಂಗಡಿಗೆ ಹೋಗಿ ವಿಷ್ಣು ಸಮೋಸಾ ಖರೀದಿಸಿದ್ದನು. ಈ ವೇಳೆ ಆತನ ಬಳಿಕ ಕೇವಲ ಐದು ರೂಪಾಯಿ ಇದ್ದ ಕಾರಣಕ್ಕೆ ಅಷ್ಟನ್ನೇ ಅಂಗಡಿ ಮಾಲೀಕನಿಗೆ ಯುವಕ ಕೊಟ್ಟಿದ್ದಾನೆ. ಆದರೆ ಸಮೋಸಕ್ಕೆ 6 ರೂ. ನೀನು 1 ರೂ. ಕಡಿಮೆ ಕೊಟ್ಟಿದ್ದೀಯಾ ಎಂದು ಮಾಲೀಕ ಯುವಕನ ಮೇಲೆ ಜಗಳಕ್ಕಿಳಿದಿದ್ದಾನೆ. ಬಳಿಕ ಜಗಳ ದೊಡ್ಡದಾಗಿ ಅಂಗಡಿ ಮಾಲೀಕ ಹಾಗೂ ಅವನ ಮಕ್ಕಳು ಯುವಕನನ್ನು ಬೈದು, ಮನ ಬಂದಂತೆ ಥಳಿಸಿದ್ದಾರೆ.

    ಈ ವೇಲೆ ಸಹೋದರನನ್ನು ರಕ್ಷಸಿಲು ಹೇಮರಾಜ್ ಬಂದು ಗಲಾಟೆ ನಿಲ್ಲುಸುವಂತೆ ಹೇಳಿದ್ದಾನೆ. ಆದರೆ ಸಿಟ್ಟಿನಲ್ಲಿದ್ದ ಮಾಲೀಕ ಮಾತ್ರ ಯಾರ ಮಾತನ್ನು ಕೇಳದೆ ಅವರಿಬ್ಬರ ಮೇಲೆ ಕಾದ ಎಣ್ಣೆಯನ್ನು ಎರಚಿ ಕ್ರೌರ್ಯ ಮೆರೆದಿದ್ದಾನೆ. ಪರಿಣಾಮ ಹೇಮರಾಜ್‍ಗೆ ಗಂಭೀರ ಗಾಯಗೊಂಡಿದ್ದು, ವಿಷ್ಣುಗೆ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಇಬ್ಬರು ಸಹೋದರರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಆರೋಪಿ ಸುರೇಶ್ ಮಾತ್ರ ನಾನೇನು ತಪ್ಪು ಮಾಡಿಲ್ಲ. ಸಮೋಸದ ಬಾಕಿ 1 ರೂಪಾಯಿ ಕೊಡಿ ಎಂದಿದ್ದಕ್ಕೆ ಸಹೋದರರು ನಮ್ಮ ಅಂಗಡಿಯನ್ನು ಧ್ವಂಸ ಮಾಡಿ, ಹಣ ದೋಚಿದ್ದಾರೆ ಎಂದು ಆರೋಪಿಸಿದ್ದಾನೆ.

    ಈ ಬಗ್ಗೆ ಈಗಾಗಲೇ ಪೊಲೀಸರು 6 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆರೋಪಿ ಸುರೇಶ್ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಅಪ್ರಾಪ್ತೆಗೆ ಪತಿಯಿಂದ ಕಿರುಕುಳ- ದೂರು ನೀಡಲು ಬಂದ ಬಾಲಕಿ ಕೈಯನ್ನ ಬಿಸಿ ಎಣ್ಣೆಗೆ ಹಾಕಿದ್ಳು ಪತ್ನಿ

    ಅಪ್ರಾಪ್ತೆಗೆ ಪತಿಯಿಂದ ಕಿರುಕುಳ- ದೂರು ನೀಡಲು ಬಂದ ಬಾಲಕಿ ಕೈಯನ್ನ ಬಿಸಿ ಎಣ್ಣೆಗೆ ಹಾಕಿದ್ಳು ಪತ್ನಿ

    ಗಾಂಧಿನಗರ: ನಿಮ್ಮ ಪತಿ ನನ್ನನ್ನು ಚೇಡಿಸುತ್ತಿದ್ದಾನೆಂದು ಮಹಿಳೆಗೆ ದೂರು ನೀಡಲು ಬಂದ ಬಾಲಕಿಯ ಕೈಯನ್ನು ಬಿಸಿ ಎಣ್ಣೆಯಲ್ಲಿ ಹಾಕಿರುವ ಅಮಾನವೀಯ ಘಟನೆಯೊಂದು ಗುಜರಾತ್ ರಾಜ್ಯದ ರಾಜ್‍ಕೋಟ್‍ನಲ್ಲಿ ನಡೆದಿದೆ.

    ಕೆಲವು ದಿನಗಳಿಂದ ಬಾಲಕಿಗೆ ವ್ಯಕ್ತಿಯೊಬ್ಬ ಕಿರುಕುಳ ನೀಡುತ್ತಿದ್ದನು. ಇದ್ರಿಂದ ಬೇಸತ್ತ ಬಾಲಕಿ ವ್ಯಕ್ತಿಯ ಪತ್ನಿಗೆ ದೂರು ನೀಡಲು ಆತನ ಮನೆಗೆ ತೆರಳಿದ್ದಾಳೆ. ಈ ವೇಳೆ ಬಾಲಕಿಯ ಮಾತನ್ನು ಕೇಳಿದ ಮಹಿಳೆ, ನೀನು ಮಾಡುತ್ತಿರುವ ಆರೋಪಗಳೆಲ್ಲಾ ಸತ್ಯವಾಗಿದ್ರೆ ಬಿಸಿ ಎಣ್ಣೆಯಲ್ಲಿ ಕೈ ಹಾಕಿ ತೋರಿಸು ಅಂತಾ ಹೇಳಿದ್ದಾಳೆ.

    ಒಂದು ವೇಳೆ ನೀನು ಸತ್ಯ ಹೇಳಿದ್ರೆ ನಿನ್ನ ಕೈಗಳಿಗೆ ಯಾವುದೇ ರೀತಿಯಲ್ಲಿ ಅಪಾಯವಾಗಲ್ಲ ಅಂತಾ ನಂಬಿಸಿದ್ದಾಳೆ. ಮಹಿಳೆಯ ಮಾತನ್ನು ನಂಬಿದ ಬಾಲಕಿ ಬಿಸಿ ಎಣ್ಣೆಯಲ್ಲಿ ಕೈ ಹಾಕಿದ್ದಾಳೆ. ಇದೇ ವೇಳೆ ಬಾಲಕಿಯ ಸಂಬಂಧಿ ಮನೆಗೆ ಬಂದು ಗಾಯಗೊಂಡಿದ್ದ ಅಪ್ರಾಪ್ತೆಯನ್ನು ಕಾಪಾಡಿದ್ದಾರೆ.

    ಈ ಸಂಬಂಧ ಬಾಲಕಿಯ ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಮಹಿಳೆಯ ಪತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಘಟನೆ ಸಂಬಂಧ ನಮ್ಮಲ್ಲಿ ದೂರು ದಾಖಲಾಗಿದ್ದು, ಮಹಿಳೆ ಘಟನೆಯ ಬಳಿಕ ಪರಾರಿಯಾಗಿದ್ದಾಳೆ. ಆದ್ರೆ ದೂರಿನಲ್ಲಿ ಕೇವಲ ಬಾಲಕಿಯ ಕೈಯನ್ನು ಬಿಸಿ ಎಣ್ಣೆಯಲ್ಲಿ ಹಾಕಿಸಿದ್ದಾರೆ ಎಂದು ಮಾತ್ರ ಉಲ್ಲೇಖಿಸಲಾಗಿದೆ. ದೂರಿನಲ್ಲಿ ಎಲ್ಲಿಯೂ ಬಾಲಕಿಗೆ ಕಿರುಕುಳ ನೀಡಲಾಗಿದೆ ಎಂದು ಹೇಳಿಲ್ಲ. ಸದ್ಯ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಎಂ.ಎಂ.ಝಾಲಾ ತಿಳಿಸಿದ್ದಾರೆ.

  • ಊಟ ಚೆನ್ನಾಗಿಲ್ಲ ಎಂದು ದೂರಿದ್ದಕ್ಕೆ ಮುಖದ ಮೇಲೆ ಬಿಸಿ ಎಣ್ಣೆ ಎರಚಿದ

    ಊಟ ಚೆನ್ನಾಗಿಲ್ಲ ಎಂದು ದೂರಿದ್ದಕ್ಕೆ ಮುಖದ ಮೇಲೆ ಬಿಸಿ ಎಣ್ಣೆ ಎರಚಿದ

    ಮುಂಬೈ: ಚೈನೀಸ್ ಉಪಹಾರ ಗೃಹದಲ್ಲಿ ನೀಡಿದ ಊಟದ ರುಚಿ ಹಾಗೂ ಅದರ ಬೆಲೆಯ ವಿಚಾರವಾಗಿ ಮಾಲೀಕ ಮತ್ತು ಗ್ರಾಹಕನ ನಡುವೆ ವಾಗ್ವಾದ ನಡೆದು, ಅಲ್ಲಿನ ಸಿಬ್ಬಂದಿ ಗ್ರಾಹಕನ ಸಹೋದರನ ಮೇಲೆ ಬಿಸಿ ಎಣ್ಣೆ ಎರಚಿರುವ ಘಟನೆ ಮುಂಬೈನ ಉಲ್ಲಾಸ್‍ನಗರದ ವೀನಸ್ ಚೌಕ್‍ನಲ್ಲಿ ನಡೆದಿದೆ.

    ಇಲ್ಲಿನ ಮನೋಜ್ ಕೋಳಿವಾಡಾ ಚೈನೀಸ್ ಕಾರ್ನರ್ ಸಿಬ್ಬಂದಿ ದೀಪಕ್ ಎಂಬವರ ಮೇಲೆ ಬಿಸಿಯಾದ ಎಣ್ಣೆ ಎರಚಿದ್ದಾರೆ. ಪರಿಣಾಮ ದೀಪಕ್‍ಗೆ ಸುಟ್ಟ ಗಾಯಗಳಾಗಿವೆ.

    ಏನಿದು ಘಟನೆ: ಮಂಗಳವಾರ ರಾತ್ರಿ ಸುಮಾರು 11.30ರ ವೇಳೆಯಲ್ಲಿ ವಿಕ್ಕಿ ಮಾಸ್ಕೆ ತನ್ನ ಮೂವರು ಸ್ನೇಹಿತರೊಂದಿಗೆ ಊಟಕ್ಕೆಂದು ಹೋಗಿದ್ದರು. ಊಟ ಮುಗಿಸಿದ ನಂತರ ವಿಕ್ಕಿ ಮೊದಲು ಊಟದ ರುಚಿಯ ಬಗ್ಗೆ ಮಾಲೀಕನಿಗೆ ದೂರಿದ್ದರು. ನಂತರ ಬಿಲ್ ವಿಷಯವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ನಂತರ ವಿಕ್ಕಿ ತನ್ನ ಸಹೋದರ ದೀಪಕ್ ಮಾಸ್ಕೆಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಹೇಳಿದ್ದರು. ಈ ವೇಳೆ ಅಲ್ಲಿನ ಸಿಬ್ಬಂದಿಯೊಬ್ಬ ದೀಪಕ್ ಮುಖದ ಮೇಲೆ ಬಿಸಿ ಎಣೆ ಎರಚಿದ್ದಾನೆ. ದೀಪಕ್ ಸ್ನೇಹಿತ ವಿಜಯ್ ಪಗಾರೆ ಎಂಬವರಿಗೂ ಹೊಟ್ಟೆಯ ಮೇಲೆ ಸುಟ್ಟ ಗಾಯಗಳಾಗಿದೆ. ಕೂಡಲೇ ಇಬ್ಬರನ್ನೂ ಉಲ್ಲಾಸ್‍ನಗರದ ಸೆಂಟ್ರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿಠಲ್‍ವಾಡಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಉಪಹಾರ ಗೃಹದ ಮಾಲೀಕನ ವಿರುದ್ಧ ಹಾಗೂ ಸಿಬ್ಬಂದಿಯ ವಿರುದ್ಧ ಐಪಿಸಿ ಸೆಕ್ಷನ್ 323, 324, 504 ಹಾಗೂ 34ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಯನ್ನು ವಶಪಡಿಸಿಕೊಂಡಿದ್ದೇವೆ. ಸಂತ್ರಸ್ತ ವ್ಯಕ್ತಿಯ ಮೇಲೆ ಬಿಸಿ ಎಣ್ಣೆ ಎರಚಿರುವುದನ್ನ ವಿಡಿಯೋದಲ್ಲಿ ಕಾಣಬಹುದು ಎಂದು ಪೊಲೀಸರು ಹೇಳಿದ್ದಾರೆ.