Tag: hosur road

  • ಹೈಟೆಕ್ ಸ್ಕೈವಾಕ್‍ಗೆ ಚಾಲನೆ

    ಹೈಟೆಕ್ ಸ್ಕೈವಾಕ್‍ಗೆ ಚಾಲನೆ

    ಬೆಂಗಳೂರು: ಹೊಸೂರು ಮುಖ್ಯ ರಸ್ತೆಯ ಸರ್ಜಾಪುರ ಜಂಕ್ಷನ್ ಬಳಿ ನೂತನವಾಗಿ ನಿರ್ಮಾಣವಾದ ಸ್ಕೈವಾಕ್‍ಗೆ ಮೇಯರ್ ಗೌತಮ್ ಕುಮಾರ್, ಸ್ಥಳೀಯ ಶಾಸಕ ರಾಮಲಿಂಗಾರೆಡ್ಡಿ ಹಾಗೂ ಸಂಸದ ತೇಜಸ್ವಿ ಸೂರ್ಯ ಚಾಲನೆ ನೀಡಿದರು.

    ಬಿಬಿಎಂಪಿ ವತಿಯಿಂದ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಹೊಸೂರು ಮುಖ್ಯ ರಸ್ತೆಯ ಸರ್ಜಾಪುರ ಜಂಕ್ಷನ್ ಬಳಿ ನೂತನವಾಗಿ ಸ್ಕೈವಾಕ್ ನಿರ್ಮಿಸಲಾಗಿದೆ. ಹೊಸೂರು ಮುಖ್ಯರಸ್ತೆ ಸರ್ಜಾಪುರ ಜಂಕ್ಷನ್‍ನಲ್ಲಿ ಪಾದಚಾರಿ ಮೇಲ್ಸೇತುವೆಗೆ ಬಹಳ ದಿನಗಳಿಂದ ಬೇಡಿಕೆ ಇತ್ತು. ಸ್ಥಳೀಯರ ಮನವಿ ಮೇರೆಗೆ ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗಲು ಖಾಸಗೀ ಸಂಸ್ಥೆಯ ಸಹಭಾಗಿತ್ವದಲ್ಲಿ ಸುಸಜ್ಜಿತ ಸ್ಕೈವಾಕ್ ನಿರ್ಮಾಣ ಮಾಡಲಾಗಿದೆ.

    ವಿನೂತನ ರೀತಿಯಲ್ಲಿ ಸ್ಕೈವಾಕ್ ಅನ್ನು ನಿರ್ಮಿಸಿದ್ದು, ಸಿಸಿಟಿವಿ ಕ್ಯಾಮೆರಾ, ಎರಡೂ ಬದಿಯಲ್ಲಿ ಲಿಫ್ಟ್, ಸಾರ್ವಜನಿಕರು ರಾತ್ರಿ ವೇಳೆ ಸುರಕ್ಷಿತವಾಗಿ ತೆರಳಲು ಎಲ್‍ಇಡಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ ಎಂದು ಉದ್ಘಾಟನೆ ಬಳಿಕ ಮೇಯರ್ ಗೌತಮ್ ಕುಮಾರ್ ತಿಳಿಸಿದರು.

  • ದ್ವಿಚಕ್ರ ವಾಹನಸವಾರರಿಗೆ ಶಾಕಿಂಗ್ ಸುದ್ದಿ – ಹೊಸೂರು ಫ್ಲೈಓವರ್‍ ನಲ್ಲಿ ಓಡಾಟ ಶೀಘ್ರದಲ್ಲೇ ಬಂದ್ ಸಾಧ್ಯತೆ

    ದ್ವಿಚಕ್ರ ವಾಹನಸವಾರರಿಗೆ ಶಾಕಿಂಗ್ ಸುದ್ದಿ – ಹೊಸೂರು ಫ್ಲೈಓವರ್‍ ನಲ್ಲಿ ಓಡಾಟ ಶೀಘ್ರದಲ್ಲೇ ಬಂದ್ ಸಾಧ್ಯತೆ

    ಬೆಂಗಳೂರು: ಬೈಕ್ ಸವಾವರರಿಗೆ ಟ್ರಾಫಿಕ್ ಪೊಲೀಸರು ದೂಡ್ಡ ಶಾಕ್ ನೀಡಿದ್ದಾರೆ. ನೀವೇನಾದ್ರೂ ಹೊಸರು ರಸ್ತೆಯ ಎಲಿವೇಟೆಡ್ ಎಕ್ಸ್ ಪ್ರೆಸ್‍ನಲ್ಲಿ ದ್ವಿಚಕ್ರ ವಾಹನಗಳಲ್ಲಿ ಹೋಗಬೇಕು ಅಂತಿದ್ರೆ ನಿಮಗಿದು ಕಹಿ ಸುದ್ದಿ.

    ಇನ್ಮುಂದೆ ಈ ಫ್ಲೈಓವರ್‍ನಲ್ಲಿ ದ್ವಿಚಕ್ರ ವಾಹನಗಳನ್ನ ಓಡಸೋ ಹಾಗಿಲ್ಲ. ಕಳೆದ ಹಲವು ದಿನಗಳಿಂದ ಈ ಫ್ಲೈಓವರ್‍ನಲ್ಲಿ ಸಾಕಷ್ಟು ಅಪಘಾತಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಇವುಗಳನ್ನು ತೆಡಗಟ್ಟುವ ಹಿತದೃಷ್ಠಿಯಿಂದ ದ್ವಿಚಕ್ರ ವಾಹನಗಳನ್ನು ಬ್ಯಾನ್ ಮಾಡಲು ಟ್ರಾಫಿಕ್ ಪೋಲಿಸರು ಮುಂದಾಗಿದ್ದಾರೆ.

    ಈ ವರ್ಷದಲ್ಲಿ ಈ ಹೈವೇನಲ್ಲಿ ಮೂರು ಅಪಘಾತಗಳು ಸಂಭವಿಸಿವೆ. ಹಾಗಾಗಿ ಈ ಹೈವೇ ವಿನ್ಯಾಸದ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸಲಾಗುವುದು. ನಂತರ ದ್ವಿಚಕ್ರ ವಾಹನಗಳನ್ನು ಹೈವೇನಲ್ಲಿ ಬಿಡಬೇಕಾ ಅಥವಾ ಬೇಡವಾ ಅಂತಾ ನಿರ್ಧರಿಸಲಾಗುವುದು ಎನ್ನಲಾಗಿದೆ.