Tag: Hosur National Highway

  • ಹೊಸೂರು ಹೈವೇಯಲ್ಲಿ ತುಂಬಿ ಹರಿದ ಮಳೆ ನೀರು – ವಾಹನ ಸವಾರರು ಪರದಾಟ

    ಹೊಸೂರು ಹೈವೇಯಲ್ಲಿ ತುಂಬಿ ಹರಿದ ಮಳೆ ನೀರು – ವಾಹನ ಸವಾರರು ಪರದಾಟ

    ಬೆಂಗಳೂರು: ಫೆಂಗಲ್‌ ಚಂಡಮಾರುತ ಎಫೆಕ್ಟ್‌ನಿಂದಾಗಿ ಬೆಂಗಳೂರಲ್ಲಿ (Bengaluru Rains) ಕಳೆದ 2 ದಿನಗಳಿಂದ ನಿರಂತರ ಮಳೆ ಸುರಿಯುತ್ತಿದೆ. ಹೊಸೂರು ಹೈವೇಯಲ್ಲಿ ನೀರು ತುಂಬಿ ಸಂಚಾರಕ್ಕೆ ಸಮಸ್ಯೆಯಾಗಿದೆ.

    ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಮಳೆ ನೀರು ತುಂಬಿ ಹರಿಯುತ್ತಿದೆ. ಹೊಸೂರು-ಬೆಂಗಳೂರು ಮುಖ್ಯರಸ್ತೆಯ ನೆರಳೂರಲ್ಲಿ ನಿಂತಿದ್ದ ನೀರು ಅರ್ಧದಷ್ಟು ಟ್ರಕ್‌ ಅನ್ನೇ ಮುಳುಗಿಸಿಕೊಂಡಿದೆ. ಇದನ್ನೂ ಓದಿ: ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟ್ ಬ್ಲಾಕ್ ದಂಧೆ ಪ್ರಕರಣ – ಕಿಂಗ್‌ಪಿನ್ ಸೇರಿ 10 ಮಂದಿ ಅರೆಸ್ಟ್

    ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯ ಕನ್ನಡಿ ಹಿಡಿದಂತಿದೆ. ವಾಹನಗಳು ಸಂಚಾರ ಮಾಡಲು ಸಾಧ್ಯ ಆಗದೇ ಪರದಾಡಿವೆ. ಅಂಡರ್ ಪಾಸ್ ಮೂಲಕ ರಸ್ತೆ ದಾಟಲು ಕೂಡ ಸಾಧ್ಯ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೆದ್ದಾರಿಯ ಅಂಡರ್‌ಪಾಸ್ ಮುಂಭಾಗ ನೀರು ತುಂಬಿದೆ.

    ನಗರದಲ್ಲಿ ಮೂರು ದಿನಗಳಿಂದ ತುಂತುರು ಮಳೆಯಾದ ಹಿನ್ನೆಲೆಯಲ್ಲಿ ಮಳೆಯ ತೇವ ಹೆಚ್ಚಾಗಿ ವಿದ್ಯಾಪೀಠ ವಾರ್ಡ್‌ನಲ್ಲಿ ಕಾಂಪೌಂಡ್ ಮಣ್ಣು ಕುಸಿದಿದೆ. ಎರಡು ತಿಂಗಳ ಹಿಂದೆ ಮಳೆಗೆ ಪಾರ್ಕ್ ಗೋಡೆ ಕುಸಿದಿತ್ತು. ಮತ್ತೆ ಮೂರು ದಿನಗಳಿಂದ ತುಂತುರು ಮಳೆಯ ಹಿನ್ನೆಲೆ, ಕಾಂಪೌಂಡ್ ಜಾಗದಲ್ಲಿ ಮಣ್ಣು ಕುಸಿತ ಆಗಿದೆ. ಇದನ್ನೂ ಓದಿ: ರಾಜ್ಯದ ವಿವಿಧೆಡೆ ಮುಂದಿನ 3 ಗಂಟೆಯ ಒಳಗೆ ಭಾರೀ ಮಳೆಯ ಎಚ್ಚರಿಕೆ

    ವಿಧಾನಸೌಧದ ಎದುರು ನೆಲಕ್ಕುರುಳಿದ ಮರ
    ನಿರಂತರ ಮಳೆಯಿಂದಾಗಿ ವಿಧಾನಸೌಧದ ಎದುರು ಮರ ನೆಲಕ್ಕುರುಳಿದೆ. ಫುಟ್‌ಪಾತ್‌ ಮೇಲೆ ಮರ ಬಿದ್ದಿದ್ದರಿಂದ ಜನರಿಗೆ ಓಡಾಟಕ್ಕೆ ಸಮಸ್ಯೆಯಾಗಿದೆ. ಆದರೆ, ಅದನ್ನು ತೆರವುಗೊಳಿಸುವ ಕಾರ್ಯದಲ್ಲಿ ವಿಳಂಬವಾಗಿದೆ.

  • ಮೆಟ್ರೋ ಕಾಮಗಾರಿ- 150 ವರ್ಷದಷ್ಟು ಹಳೆಯ ದೇಗುಲ ತೆರವು

    ಮೆಟ್ರೋ ಕಾಮಗಾರಿ- 150 ವರ್ಷದಷ್ಟು ಹಳೆಯ ದೇಗುಲ ತೆರವು

    ಬೆಂಗಳೂರು: ಅನಾದಿಕಾಲದಿಂದಲೂ ಇದ್ದ ಪ್ರಸಿದ್ಧ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಮೆಟ್ರೋ ಕಾಮಗಾರಿಗೆ ಅಡ್ಡಿ ಬಂದ ಹಿನ್ನೆಲೆಯಲ್ಲಿ ಜನರ ವಿರೋಧದ ನಡುವೆಯೂ ಇಂದು ತೆರವುಗೊಳಿಸಿರುವ ಘಟನೆ ಬೆಂಗಳೂರು ಹೊಸೂರು ರಾಷ್ಟ್ರೀಯ ಹೆದ್ದಾರಿಯ ಗಾರೇಬಾವಿಪಾಳ್ಯದಲ್ಲಿ ನಗರದಲ್ಲಿ ನಡೆದಿದೆ.

    ಗಾರೇಬಾವಿಪಾಳ್ಯದಲ್ಲಿದ್ದ ದೇವಸ್ಥಾನಕ್ಕೆ ನಿತ್ಯ ಸಾವಿರಾರು ಭಕ್ತಾಧಿಗಳು ಬಂದು ದೇವರ ಕೃಪೆಗೆ ಪಾತ್ರರಾಗುತ್ತಿದ್ದರು. ಸದ್ಯ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿಗೆ ದೇವಸ್ಥಾನ ಅಡ್ಡಿ ಬಂದ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗಿದೆ. ದೇವಸ್ಥಾನ ತೆರವಿಗೆ ಸಾಕಷ್ಟು ಜನರು ಅಡ್ಡಿ ಪಡಿಸಿದ್ದರೂ ಸಹ ಫಲ ಸಿಗದೆ ಜೆಸಿಬಿಗಳ ಮೂಲಕ ಇಂದು ಅಧಿಕಾರಿಗಳು ತೆರವು ಕಾರ್ಯಚರಣೆ ನಡೆಸಿದರು.

    ಮೆಟ್ರೋ ಕಾಮಗಾರಿ ನಡೆಯುತ್ತಿದ್ದ ಜಾಗದಲ್ಲಿ ದೇವಸ್ಥಾನ ಅಡ್ಡಿ ಇದ್ದ ಕಾರಣ ಕೆಲವು ದಿನಗಳ ಹಿಂದೆ ದೇವಾಲಯ ಟ್ರಸ್ಟ್ ಹಾಗೂ ಊರಿನ ಮುಖಂಡರನ್ನು ಕರೆಯಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕೊಡುವಂತೆ ಸೂಚಿಸಿ ನೋಟಿಸ್ ಸಹ ನೀಡಿದ್ದರು. ಇಂದು ಅಧಿಕಾರಿಗಳ ತಂಡ ದೇವಸ್ಥಾನದಲ್ಲಿದ್ದ ವಿಗ್ರಹ ಹಾಗೂ ವಸ್ತುಗಳನ್ನು ಟ್ರಸ್ಟ್ ನವರಿಗೆ ಸ್ಥಳಾಂತರಿಸಿ ಬಳಿಕ ತೆರವುಗೊಳಿಸಿದರು.

    ದೇವಸ್ಥಾನ ತೆರವು ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಋಷಿಕುಮಾರ ಕಾಳಿ ಸ್ವಾಮಿಗಳು ಭೇಟಿ ನೀಡಿ ದೇವಸ್ಥಾನ ತೆರವಿಗೆ ಅಡ್ಡಿ ಪಡಿಸಿದರು. ಇನ್ನು ಕೆಲ ಜನರು ದೇವಾಲಯಕ್ಕೆ ಪರ್ಯಾಯ ವ್ಯವಸ್ಥೆ ಸಿಕ್ಕಿರುವುದರಿಂದ ತೆರವು ಕಾರ್ಯಚರಣೆಗೆ ಒಪ್ಪಿಗೆ ಸೂಚಿಸಿದ್ದರು. ಸದ್ಯ ಪೋಲಿಸರ ಭದ್ರತೆಯೊಂದಿಗೆ ದೇವಾಲಯ ತೆರವುಗೊಳಿಸಿದ್ದು, ಪಕ್ಕದಲ್ಲಿಯೇ ಮತ್ತೊಂದು ಸ್ಥಳದಲ್ಲಿ ದೇವಾಲಯ ನಿರ್ಮಾಣಕ್ಕೆ 1 ಕೋಟಿ ರೂ. ಹಣವನ್ನು ಬಿಎಂಆರ್ ಸಿಎಲ್ ನೀಡಿದೆ.