Tag: hosur

  • ಟೈರ್ ಬ್ಲಾಸ್ಟ್ ಆಗಿ ಕಾಂಪೌಂಡ್ ಗೋಡೆಗೆ ಖಾಸಗಿ ಬಸ್ ಡಿಕ್ಕಿ – 10 ಮಂದಿಗೆ ಗಂಭೀರ ಗಾಯ

    ಟೈರ್ ಬ್ಲಾಸ್ಟ್ ಆಗಿ ಕಾಂಪೌಂಡ್ ಗೋಡೆಗೆ ಖಾಸಗಿ ಬಸ್ ಡಿಕ್ಕಿ – 10 ಮಂದಿಗೆ ಗಂಭೀರ ಗಾಯ

    ಆನೇಕಲ್: ಟೈರ್ ಬ್ಲಾಸ್ಟ್ (Tyre Blast) ಆದ ಪರಿಣಾಮ ನಿಯಂತ್ರಣ ತಪ್ಪಿ ಖಾಸಗಿ ಕಂಪನಿಯ ಕಾಂಪೌಂಡ್ ಗೋಡೆಗೆ ಖಾಸಗಿ ಬಸ್ (Private Bus) ಡಿಕ್ಕಿಯಾಗಿ 10 ಮಂದಿ ಗಂಭೀರ ಗಾಯಗೊಂಡ ಘಟನೆ ತಮಿಳುನಾಡಿನ (Tamil Nadu) ಹೊಸೂರಿನ (Hosur) ದರ್ಗಾ ಎಂಬಲ್ಲಿ ನಡೆದಿದೆ.

    ಬೆಂಗಳೂರು-ಹೊಸೂರು ಹೆದ್ದಾರಿಯ ಹೊಸೂರಿನಲ್ಲಿ ಚಲಿಸುತ್ತಿದ್ದ ಬಸ್ಸಿನ ಟೈರ್ ಬ್ಲಾಸ್ಟ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೇಸ್ – ಜಾಮೀನಿನ ಮೇಲೆ ಹೊರಗಿರುವ 5 ಆರೋಪಿಗಳಿಗೂ ಶುರುವಾದ ಸಂಕಷ್ಟ

    ಘಟನೆ ಸಂಭವಿಸಿದ ವೇಳೆ ಬಸ್ಸಿನಲ್ಲಿ 25ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಈ ಪೈಕಿ 10 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಹೊಸೂರಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಸಿಪ್ಕಾಟ್ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಕ್ಷೇತ್ರಕ್ಕೆ ಅವಮಾನ – ಯೂಟ್ಯೂಬರ್‌ ಸಮೀರ್‌ ನಾಪತ್ತೆ

  • ಬೆಂಗಳೂರಿಗೆ ಬರುತ್ತಿದ್ದಾಗ ಹೊಸೂರು ಬಳಿ ಕಂದಕಕ್ಕೆ ಉರುಳಿದ ಬಸ್ಸು

    ಬೆಂಗಳೂರಿಗೆ ಬರುತ್ತಿದ್ದಾಗ ಹೊಸೂರು ಬಳಿ ಕಂದಕಕ್ಕೆ ಉರುಳಿದ ಬಸ್ಸು

    ಚೆನ್ನೈ: ತಮಿಳುನಾಡಿನಿಂದ (Tamil Nadu) ಬೆಂಗಳೂರಿಗೆ ಬರುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ, ಕಂದಕಕ್ಕೆ ಉರುಳಿದ ಪರಿಣಾಮ 40 ಮಂದಿ ಗಾಯಗೊಂಡಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಹೊಸೂರು (Hosur) ಬಳಿ ನಡೆದಿದೆ.

    ಮಧುರೈನಿಂದ ಬೆಂಗಳೂರಿಗೆ (Bengaluru) ಬರುತ್ತಿದ್ದ ಬಸ್ ಇದಾಗಿತ್ತು. ಬಸ್‌ನಲ್ಲಿದ್ದ ಬಹುತೇಕ ಮಂದಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಅತಿ ವೇಗವಾಗಿ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಬಸ್ ಕರುಕಂಪಟ್ಟಿ ಬಳಿ ರಸ್ತೆ ಬದಿಯ ಕಂದಕಕ್ಕೆ ಉರುಳಿದ ಬಿದ್ದಿದೆ. ಇದನ್ನೂ ಓದಿ: ಮೋಟೆಬೆನ್ನೂರಿನಲ್ಲಿ ಖಾಸಗಿ ಬಸ್‌ ಪಲ್ಟಿ – ಇಬ್ಬರು ಸಾವು, 6 ಜನರಿಗೆ ಗಂಭೀರ ಗಾಯ

    ಪರಿಣಾಮ ಬಸ್‌ನಲ್ಲಿದ್ದ 40 ಮಂದಿ ಗಾಯಗೊಂಡಿದ್ದು, ಮೂವರು ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನ ಹೊಸೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಉತ್ತನಪಲ್ಲಿ ಪೊಲೀಸ್ (Uttanapalli Police) ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಖಾಸಗಿ ಆಸ್ಪತ್ರೆಯ ಉದ್ಘಾಟನೆ ವೇಳೆ 10 ನಿಮಿಷ ಲಿಫ್ಟ್‌ನಲ್ಲಿ ಸಿಲುಕಿದ ರಾಮಲಿಂಗಾ ರೆಡ್ಡಿ

    ಖಾಸಗಿ ಆಸ್ಪತ್ರೆಯ ಉದ್ಘಾಟನೆ ವೇಳೆ 10 ನಿಮಿಷ ಲಿಫ್ಟ್‌ನಲ್ಲಿ ಸಿಲುಕಿದ ರಾಮಲಿಂಗಾ ರೆಡ್ಡಿ

    ಆನೇಕಲ್: ಖಾಸಗಿ ಆಸ್ಪತ್ರೆಯ ಉದ್ಘಾಟನೆ ವೇಳೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) 10 ನಿಮಿಷಗಳ ಕಾಲ ಲಿಫ್ಟ್‌ನಲ್ಲಿ (Lift) ಸಿಲುಕಿದ ಘಟನೆ ರಾಜ್ಯ ಗಡಿಭಾಗ ತಮಿಳುನಾಡಿನ (Tamil Nadu) ಹೊಸೂರಿನಲ್ಲಿ (Hosur) ನಡೆದಿದೆ.

    ಹೊಸೂರಿನ ಖಾಸಗಿ ಆಸ್ಪತ್ರೆಯ ಉದ್ಘಾಟನೆ ವೇಳೆ ಘಟನೆ ನಡೆದಿದೆ. ನೆಲಮಹಡಿಯಿಂದ ಲಿಫ್ಟ್‌ನಲ್ಲಿ ಹೋಗುವ ವೇಳೆ ಸಚಿವ ರಾಮಲಿಂಗಾರೆಡ್ಡಿ, ಹೊಸೂರು ಶಾಸಕ ಪ್ರಕಾಶ್ ಸೇರಿ ಸುಮಾರು ಹತ್ತು ಮಂದಿ ಇದ್ದ ಲಿಫ್ಟ್ ಕೆಟ್ಟು ನಿಂತು ಕೆಲಕಾಲ ಪರದಾಟ ನಡೆಸಿದರು. ಸುಮಾರು 10 ನಿಮಿಷಗಳ ಕಾಲ ಸಚಿವರು ಹಾಗೂ ಶಾಸಕರು ಲಿಫ್ಟ್‌ನಲ್ಲಿ ಸಿಲುಕಿದ್ದಾರೆ. ಇದನ್ನೂ ಓದಿ: ಟರ್ಕಿಯಲ್ಲಿ 6.1 ತೀವ್ರತೆಯ ಭೂಕಂಪ – ಓರ್ವ ಸಾವು, 29 ಮಂದಿಗೆ ಗಾಯ

    ಘಟನೆಯಿಂದ ಕೆಲಹೊತ್ತು ಆಸ್ಪತ್ರೆಯ ಆವರಣ ಗೊಂದಲಕ್ಕೀಡಾಗಿತ್ತು. ಬಳಿಕ ಲಿಫ್ಟ್ ಆಪರೇಟರ್ ಸಹಾಯದಿಂದ ಡೋರ್ ಓಪನ್ ಮಾಡಲಾಯಿತು. ತದನಂತರ ರಾಮಲಿಂಗಾ ರೆಡ್ಡಿ ಆಸ್ಪತ್ರೆ ಉದ್ಘಾಟಿಸಿ ಅಲ್ಲಿಂದ ತೆರಳಿದ್ದಾರೆ. ಇದನ್ನೂ ಓದಿ: ರಾಯರು ಸಶರೀರರಾಗಿ ವೃಂದಾವನಸ್ಥರಾಗಿ ಇಂದಿಗೆ 354 ವರ್ಷ: ಮಂತ್ರಾಲಯದಲ್ಲಿ ಮಧ್ಯಾರಾಧನೆ ಸಂಭ್ರಮ

  • ಬೆಂಗಳೂರು ಜನತೆಗೆ ಮತ್ತೆ ದರ ಏರಿಕೆ ಬಿಸಿ – ಹೊಸೂರು ರಸ್ತೆಯ ಎರಡು ಟೋಲ್ ದರ ಏರಿಕೆ

    ಬೆಂಗಳೂರು ಜನತೆಗೆ ಮತ್ತೆ ದರ ಏರಿಕೆ ಬಿಸಿ – ಹೊಸೂರು ರಸ್ತೆಯ ಎರಡು ಟೋಲ್ ದರ ಏರಿಕೆ

    – ಸೋಮವಾರ ಮಧ್ಯರಾತ್ರಿಯಿಂದಲೇ ನೂತನ ದರ ಜಾರಿ

    ಬೆಂಗಳೂರು: ದರ ಏರಿಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಇಂದಿನಿಂದ ಬೆಂಗಳೂರಿನ ಮತ್ತೆರೆಡು ಪ್ರಮುಖ ಟೋಲ್ ದರ (Toll Price) ಏರಿಕೆಯಾಗಿದೆ.

    ಬೆಂಗಳೂರಿನಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಹೊಸೂರು ರಸ್ತೆಯ (Hosur Road) ಎರಡು ಟೋಲ್‌ಗಳಲ್ಲೂ ದರ ಏರಿಕೆಯಾಗಿದೆ. ಸೋಮವಾರ ಮಧ್ಯರಾತ್ರಿಯಿಂದಲೇ ನೂತನ ದರ ಜಾರಿಯಾಗಿದೆ. ಇದನ್ನೂ ಓದಿ: ಅಬ್ದುಲ್ ರಹಿಮಾನ್ ಹತ್ಯೆ ಕೇಸ್ – ಇನ್ನೋರ್ವ ಆರೋಪಿ ಅರೆಸ್ಟ್

    ಇಂದಿನಿಂದ ಬೆಂಗಳೂರು ಎಲಿವೇಟೆಡ್ ಕಾರಿಡಾರ್ ಟೋಲ್‌ವೇ ಶುಲ್ಕ ಹೆಚ್ಚಳವಾಗಿದೆ. ಪರಿಣಾಮ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಎಲೆಕ್ಟ್ರಾನಿಕ್ ಸಿಟಿಗೆ ಮತ್ತು ಕರ್ನಾಟಕ, ತಮಿಳುನಾಡು ಗಡಿಯ ಬಳಿಯ ಅತ್ತಿಬೆಲೆ ಕಡೆಯ ಮಾರ್ಗದಲ್ಲಿ ಚಲಿಸುವ ಪ್ರಯಾಣಿಕರು ಎಲಿವೇಟೆಡ್ ರಸ್ತೆಗೆ ಹೆಚ್ಚಿನ ಟೋಲ್ ಶುಲ್ಕವನ್ನು ಪಾವತಿಸಬೇಕಾಗಿದೆ. ಈ ಕುರಿತ ಪರಿಷ್ಕೃತ ದರಗಳನ್ನ ಮಾರ್ಚ್ 31ರ ಸಗಟು ಬೆಲೆ ಸೂಚ್ಯಂಕ ಆಧರಿಸಿ ದರ ಏರಿಕೆ ಮಾಡಲಾಗಿದೆ. ಇದನ್ನೂ ಓದಿ: ಶೀಘ್ರದಲ್ಲೇ ಡಿಕೆಶಿ ಸಿಎಂ ಆಗ್ತಾರೆ – ಇಕ್ಬಾಲ್ ಹುಸೇನ್ ಬಾಂಬ್

    ಎಲಿವೇಟೆಡ್ ಎಕ್ಸ್‌ಪ್ರೆಸ್ ವೇ ಹೊಸ ಟೋಲ್ ರಚನೆಯಡಿಯಲ್ಲಿ, ಕಾರುಗಳು, ಜೀಪ್‌ಗಳು ಮತ್ತು ವ್ಯಾನ್‌ಗಳಿಗೆ ಏಕಮುಖ ಪ್ರಯಾಣಕ್ಕೆ 65 ರೂ. ಇದೆ. ವಾಪಸ್ ಹಿಂತಿರುಗಿ ಬರಲು ಅದೇ ದಿನಕ್ಕೆ 95 ರೂ. ಮತ್ತು ಮಾಸಿಕ ಪಾಸ್‌ಗೆ 1,885 ರೂ. ಪಾವತಿಸಬೇಕಾಗುತ್ತದೆ. ಈ ಹಿಂದೆ ಈ ಎಲ್ಲಾದಕ್ಕೂ 5 ರೂ. ಕಡಿಮೆ ಇತ್ತು. ಈಗ ಬಿಇಟಿಪಿಎಲ್‌ನಿಂದ 5 ರೂ. ಏರಿಕೆ ಮಾಡಿದ್ದು, ದರ ಜಾರಿಯಾಗಿದೆ. ಆದರೆ ಬಸ್‌ಗಳು ಮತ್ತು ಟ್ರಕ್‌ಗಳಿಗೆ ಶುಲ್ಕ ಭಾರೀ ಹೆಚ್ಚಳವಾಗಿದೆ. ಒಂದೇ ಪ್ರಯಾಣಕ್ಕೆ 175 ರೂ. ಮತ್ತು ಮಾಸಿಕ ಪಾಸ್‌ಗೆ 5,275 ರೂ.ಗೆ ಶುಲ್ಕ ಏರಿಕೆಯಾಗಿದೆ. ಮಲ್ಟಿ-ಆಕ್ಸಲ್ ವಾಹನಗಳಿಗೆ ಪ್ರತಿ ಟ್ರಿಪ್‌ಗೆ 350 ರೂ. ಮತ್ತು ತಿಂಗಳಿಗೆ 10,550 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಇದನ್ನೂ ಓದಿ: ಪ್ರಾಣ ಹೋದ್ರೂ ಸರಿ ಮಸೀದಿ ನಿರ್ಮಾಣಕ್ಕೆ ಬಿಡಲ್ಲ: ಮುಸ್ಲಿಂ ಮುಖಂಡರ ವಿರುದ್ಧ ಸ್ಥಳೀಯರ ಆಕ್ರೋಶ

    ಇನ್ನೂ ಅತ್ತಿಬೆಲೆ ಟೋಲ್‌ನಲ್ಲೂ ದರ ಏರಿಕೆಯಾಗಿದೆ. ಹಳೆಯ ದರಕ್ಕಿಂತ 5 ರೂ. ಹೆಚ್ಚಳವಾಗಿದ್ದು, ಈ ಭಾಗದ ಸವಾರರಿಗೂ ಇಂದಿನಿಂದಲೇ ದರ ಏರಿಕೆ ಬಿಸಿ ತಟ್ಟಲಿದೆ. ಇದನ್ನೂ ಓದಿ: Bengaluru | ಸ್ಪೋರ್ಟ್ಸ್ ಪ್ರಾಕ್ಟಿಸ್ ನೋಡಲು ಹೋಗಿದ್ದ ವಿದ್ಯಾರ್ಥಿ ನಾಪತ್ತೆ

    ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ದರ ಎಷ್ಟಾಗಲಿದೆ?
    *ಕಾರು, ಜೀಪ್, ನಾಲ್ಕು ಚಕ್ರದ ಲಘು ವಾಹನಗಳಿಗೆ ಒಂದು ಪ್ರಯಾಣಕ್ಕೆ ರೂ.65 – ಹಳೆ ಬೆಲೆ 60
    *ಎರಡು ಕಡೆಗಿನ ಪ್ರಯಾಣಕ್ಕೆ ರೂಪಾಯಿ 90- ಹಳೆಯ ಬೆಲೆ 85
    *ದ್ವಿಚಕ್ರ ವಾಹನಗಳಿಗೆ ಒಂದು ಮಾರ್ಗದ ಪ್ರಯಾಣಕ್ಕೆ ?25 ಪಾವತಿಸಬೇಕಾಗಿದೆ (ಬದಲಾವಣೆ ಇಲ್ಲ)
    *ಲಾರಿ (ಟ್ರಕ್) ಹಾಗೂ ಬಸ್‌ಗಳಿಗೆ ಒಂದು ಬದಿ ಪ್ರಯಾಣಕ್ಕೆ 175 (ಹಳೆ ಬೆಲೆ 170) ರೂಪಾಯಿ
    *ಮಲ್ಟಿ-ಆಕ್ಸಲ್ ವಾಹನಗಳಿಗೆ ಒಂದು ಬದಿಗೆ 350 ರೂಪಾಯಿ ಕಟ್ಟಬೇಕಿದೆ (ಹಳೆ ಬೆಲೆ 345)

    ಅತ್ತಿಬೆಲೆ ಟೋಲ್ ದರವೂ ಹೆಚ್ಚಳ:
    *ಕಾರುಗಳು ಏಕ ಬದಿ ಪ್ರಯಾಣಕ್ಕೆ 40 ರೂ. (ಹಳೆ ಬೆಲೆ 35 ರೂ.)
    *ಲಘು ವಾಹನಗಳು, ಮಿನಿ ಬಸ್ 65 ರೂ. (ಹಳೆ ಬೆಲೆ 60 ರೂ.)
    *ಟ್ರಕ್, ಬಸ್ 125 ರೂ. (ಹಳೆ ಬೆಲೆ 120 ರೂ.)
    *ದೊಡ್ಡ ಮಲ್ಟಿ ಆಕ್ಸೆಲ್ ವಾಹನಗಳಿಗೆ ಒಂದು ಟ್ರಿಪ್‌ಗೆ 265 ರೂ. ಇದೆ (ಹಳೆ ಬೆಲೆ 260 ರೂ.)

  • ಕೊಲೆ ಕೇಸಲ್ಲಿ ಬೇಲ್ ಪಡೆದ ರೌಡಿಗಳ ಬಿಲ್ಡಪ್ – ಗನ್‌ಮ್ಯಾನ್, ಎಸ್ಕಾರ್ಟ್ ಭದ್ರತೆಯಲ್ಲಿ ಕೋರ್ಟ್‌ಗೆ ಬಂದ ಗ್ಯಾಂಗ್

    ಕೊಲೆ ಕೇಸಲ್ಲಿ ಬೇಲ್ ಪಡೆದ ರೌಡಿಗಳ ಬಿಲ್ಡಪ್ – ಗನ್‌ಮ್ಯಾನ್, ಎಸ್ಕಾರ್ಟ್ ಭದ್ರತೆಯಲ್ಲಿ ಕೋರ್ಟ್‌ಗೆ ಬಂದ ಗ್ಯಾಂಗ್

    – ಬಿಲ್ಡಪ್ ಕೊಡಲು ಹೋಗಿ ಮತ್ತೆ ಜೈಲು ಸೇರಿದ ಗ್ಯಾಂಗ್

    ಬೆಂಗಳೂರು ಗ್ರಾಮಾಂತರ: ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ ರೌಡಿಗಳು ಬಿಲ್ಡಪ್ ಕೊಡಲು ಹೋಗಿ ಮತ್ತೆ ಪೊಲೀಸರ ಅತಿಥಿಯಾಗಿದ್ದಾರೆ. ಕೊಲೆ ಪ್ರಕರಣದ ಆರೋಪಿಗಳು ಎಸ್ಕಾರ್ಟ್ ಕಾರು, ಗನ್‌ಮ್ಯಾನ್‌ಗಳ ಭದ್ರತೆಯಲ್ಲಿ ಕೋರ್ಟ್ ಬಂದು ಬಿಲ್ಡಪ್ ಕೊಟ್ಟಿದ್ದರು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರೌಡಿಶೀಟರ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಮುಂದೆ ಒಂದು ಎಸ್ಕಾರ್ಟ್ ಕಾರು, ಹಿಂದೆ ಒಂದು ಎಸ್ಕಾರ್ಟ್ ಕಾರು, ಎಸ್ಕಾರ್ಟ್ ಕಾರಿನಲ್ಲಿ ಐದು ಜನ ಗನ್‌ಮ್ಯಾನ್‌ಗಳು, ಹತ್ತಾರು ಪುಡಿ ರೌಡಿಗಳು.. ಹೀಗೆ ಹತ್ಯೆ ಪ್ರಕರಣದ ಆರೋಪಿಗಳ ಬಿಲ್ಡಪ್ ತೆಗೆದುಕೊಂಡು ಸುದ್ದಿಯಾಗಿದ್ದಾರೆ. ಆರೋಪಿಗಳು ನಿನ್ನೆ (ಗುರುವಾರ) ನ್ಯಾಯಾಲಯಕ್ಕೆ ಹಾಜರಾಗಲು ತೆರಳುವಾಗ ಈ ಘಟನೆ ನಡೆದಿದೆ. ಯಾವ ಮಂತ್ರಿಗೂ ಕಮ್ಮಿ ಇಲ್ಲ ಎಂಬಂತೆ ಭದ್ರತೆಯಲ್ಲಿ ರೌಡಿಶೀಟರ್‌ಗಳು ತೆರಳಿ ಅಚ್ಚರಿ ಮೂಡಿಸಿದ್ದರು.

    ತಮಿಳುನಾಡಿನ ಹೊಸೂರು ನ್ಯಾಯಾಲಯದ ಬಳಿ ಆತಂಕ ಸೃಷ್ಟಿಸಿದ್ದಾರೆ. ಸರ್ಜಾಪುರ ರಸ್ತೆಯ ಸೂಲಿಕುಂಟೆ ಮೂಲದ ಹತ್ಯೆ ಆರೋಪಿಗಳು ನಿನ್ನೆ ಹೊಸೂರಿನ ನ್ಯಾಯಲಯಕ್ಕೆ ಹಾಜರಾಗಲು ಹೋಗಿದ್ದಾಗ ಘಟನೆ ನಡೆದಿದೆ.

    ಸೆ.18 ರಂದು ಸೂಲಿಕುಂಟೆ ಗ್ರಾಮದ ಯುವಕನೊಬ್ಬನನ್ನು ಹತ್ಯೆ ಮಾಡಿದ್ದ ಆರೋಪಿಗಳು ತಮಿಳುನಾಡಿನ ಬಾಗಲೂರು ಬಳಿ ಮೃತದೇಹವನ್ನು ಎಸೆದು ಪರಾರಿಯಾಗಿದ್ದರು. ಆರೋಪಿಗಳಾದ ರೌಡಿಶೀಟರ್ ರೇವಾ, ರೌಡಿಶೀಟರ್ ಸೂಲಿಕುಂಟೆ ಶೀನನ್ನು ಬಾಗಲೂರು ಪೊಲೀಸರು ಬಂಧಿಸಿದ್ದರು. ಇತ್ತೀಚೆಗೆ ನ್ಯಾಯಲಯದಲ್ಲಿ ಜಾಮೀನು ಪಡೆದು ಆರೋಪಿಗಳು ಹೊರಬಂದಿದ್ದರು.

    ಭದ್ರತೆಯಲ್ಲಿ ಬಂದ ಆರೋಪಿಗಳನ್ನು ಹೊಸೂರಿನ ಟೌನ್ ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆ. ಹತ್ಯೆ ಆರೋಪಿಗಳು ಸೇರಿದಂತೆ ಗನ್ ಮ್ಯಾನ್‌ಗಳ ಮೇಲೆ ಪ್ರಕರಣ ದಾಖಲಾಗಿದೆ.

  • ಟೊಮೆಟೋ ಬೆಳೆ ಲಾಸ್: ಸಾಲ ತೀರಿಸಲು ಲ್ಯಾಪ್‌ಟಾಪ್ ಕಳ್ಳತನ ಮಾಡಿದ್ದ ಟೆಕ್ಕಿ ಅರೆಸ್ಟ್

    ಟೊಮೆಟೋ ಬೆಳೆ ಲಾಸ್: ಸಾಲ ತೀರಿಸಲು ಲ್ಯಾಪ್‌ಟಾಪ್ ಕಳ್ಳತನ ಮಾಡಿದ್ದ ಟೆಕ್ಕಿ ಅರೆಸ್ಟ್

    – 50 ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ಪಡೆದ ಬೆಂಗಳೂರು ಪೊಲೀಸರು

    ಬೆಂಗಳೂರು: ಟೊಮೆಟೋ ಬೆಳೆಯಿಂದ ನಷ್ಟ ಆಗಿದ್ದಕ್ಕೆ ಲ್ಯಾಪ್‌ಟಾಪ್ ಕಳ್ಳತನ (Laptop Theft) ಮಾಡಿ ಮಾರುತ್ತಿದ್ದ ಟೆಕ್ಕಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ವ್ಯಕ್ತಿಯನ್ನು ಮುರುಗೇಶ ಎಂದು ಗುರುತಿಸಲಾಗಿದ್ದು, ಸಿಸ್ಟಮ್ ಆಡ್ಮಿನ್ ಆಗಿ ಕೆಲಸ ಮಾಡುತ್ತಿದ್ದ. ಜೊತೆಗೆ ಕೃಷಿಯಲ್ಲಿ ತೊಡಗಿಕೊಂಡಿದ್ದನು ಎನ್ನಲಾಗಿದೆ.ಇದನ್ನೂ ಓದಿ: ಉಡುಪಿ: ಇನ್ನೊಬ್ಬರ ಜೀವ ಉಳಿಸಲು ಹೋಗಿ ತನ್ನ ಪ್ರಾಣವನ್ನೇ ತೆತ್ತ ಶಿಕ್ಷಕಿ ಅರ್ಚನಾ ಕಾಮತ್

    ಮುರುಗೇಶ 6 ಎಕರೆಯಲ್ಲಿ ಟೊಮೆಟೋ ಬೆಳೆದಿದ್ದ. ಅದಕ್ಕಾಗಿ ಹೊಸೂರಿನಲ್ಲಿ ಸಾಲ ಮಾಡಿದ್ದ. ಆದರೆ ಬೆಳೆ ಕೈಕೊಟ್ಟ ಕಾರಣ ಸಾಕಷ್ಟು ನಷ್ಟವನ್ನು ಅನುಭವಿಸಿದ್ದ. ಸಾಲ ತೀರಿಸಲಾಗದೇ ಕಳೆದ ಆರು ತಿಂಗಳಿನಿಂದ ಮುರುಗೇಶ ಲ್ಯಾಪ್‌ಟಾಪ್ ಸರ್ವಿಸ್, ರಿಪೇರಿ ಮಾಡುವ ಕೆಲಸದಲ್ಲಿ ತೊಡಗಿದ್ದ. ಹೀಗೆ ಕೆಲಸದ ನೆಪ ಹೂಡಿ ಹಲವಾರು ಲ್ಯಾಪ್‌ಟಾಪ್ ಕದ್ದಿದ್ದ.

    ತಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿಯೂ ಇದೇ ನೆಪ ಹೇಳಿ ಲ್ಯಾಪ್‌ಟಾಪ್‌ನ್ನು ಕಳ್ಳತನ ಮಾಡಿದ್ದ. ಈ ಬಗ್ಗೆ ಕಂಪನಿಯವರು ಪ್ರಶ್ನೆ ಮಾಡಿದಾಗ ರಜೆ ಹಾಕಿ ಪಾರಾಗಿದ್ದ. ಜೊತೆಗೆ ಕದ್ದ ಲ್ಯಾಪ್‌ಟಾಪ್‌ಗಳನ್ನು ಹೊಸೂರಿನಲ್ಲಿ (Hosur) ಮಾರಾಟ ಮಾಡಿದ್ದ.ಇದನ್ನೂ ಓದಿ: ನ್ಯೂಯಾರ್ಕ್‌ನಲ್ಲಿ ಬಿಎಪಿಎಸ್ ಸ್ವಾಮಿನಾರಾಯಣ ದೇವಸ್ಥಾನ ಧ್ವಂಸ

    ಸದ್ಯ ಟೆಕ್ಕಿ ಮುರುಗೇಶನನ್ನು ಬಂಧಿಸಲಾಗಿದ್ದು, 22 ಲಕ್ಷ ಮೌಲ್ಯದ 50 ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ (Whitefield Police Station) ಪ್ರಕರಣ ದಾಖಲಾಗಿದೆ.

  • ಹೊಸೂರು-ಬೆಂಗಳೂರು ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ – ಸಾಲುಗಟ್ಟಿ ನಿಂತಿರುವ ವಾಹನಗಳು

    ಹೊಸೂರು-ಬೆಂಗಳೂರು ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ – ಸಾಲುಗಟ್ಟಿ ನಿಂತಿರುವ ವಾಹನಗಳು

    ಬೆಂಗಳೂರು: ಹೊಸೂರು-ಬೆಂಗಳೂರು (Hosur-Bengaluru) ಮುಖ್ಯರಸ್ತೆಯಲ್ಲಿ ಏಕಾಏಕಿ ಟ್ರಾಫಿಕ್ ಜಾಮ್ (Traffic Jam) ಉಂಟಾಗಿದ್ದು, ವಾಹನಗಳು ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತಿವೆ.

    ಚಂದಾಪುರದಿಂದ ಅತ್ತಿಬೆಲೆಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಮಧ್ಯಾಹ್ನ 3 ಗಂಟೆಗೆ ದಿಢೀರ್ ಟ್ರಾಫಿಕ್ ಉಂಟಾಗಿದೆ. ಸಂಜೆ 5 ಗಂಟೆ ಕಳೆದರೂ ಹೆದ್ದಾರಿಯಲ್ಲಿ ವಾಹನದಟ್ಟಣೆ ಕಡಿಮೆ ಆಗಿಲ್ಲ. ಇದನ್ನೂ ಓದಿ: iPhone Pro, Pro Max | ದುಬಾರಿ ಫೋನ್‌ಗಳು ಫಸ್ಟ್‌ ಟೈಂ ಭಾರತದಲ್ಲೇ ತಯಾರು – ಬೆಲೆ ಎಷ್ಟು ಕಡಿಮೆಯಾಗಬಹುದು?

    ಟ್ರಾಫಿಕ್ ಜಾಮ್ ಉಂಟಾದ ಹಿನ್ನೆಲೆ ಶಾಲಾ ಬಸ್, ಅಂಬುಲೆನ್ಸ್ ಸೇರಿದಂತೆ ಇತರೆ ವಾಹನ ಸವಾರರು ಟ್ರಾಫಿಕ್‌ನಲ್ಲಿ ಸಿಲುಕಿ ಪರದಾಡುತ್ತಿದ್ದಾರೆ. ಇದನ್ನೂ ಓದಿ: ಲೋಕಾಯುಕ್ತ, ಸಿಬಿಐಗಿಂತ ಜಾಸ್ತಿ ಹಿಂಸೆ ಕೊಡ್ತಿದೆ – ಡಿಕೆಶಿ

  • 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರ್ನಾಟಕ ಮುಂದಾಗುತ್ತಿದ್ದಂತೆ ಹೊಸೂರಿನಲ್ಲಿ ಏರ್ಪೋರ್ಟ್ ಘೋಷಿಸಿದ ಸ್ಟಾಲಿನ್

    2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರ್ನಾಟಕ ಮುಂದಾಗುತ್ತಿದ್ದಂತೆ ಹೊಸೂರಿನಲ್ಲಿ ಏರ್ಪೋರ್ಟ್ ಘೋಷಿಸಿದ ಸ್ಟಾಲಿನ್

    ಚೆನ್ನೈ: ಹೊಸೂರಿನಲ್ಲಿ (Hosur) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು (International Airpor) ನಿರ್ಮಿಸುವುದಾಗಿ ತಮಿಳುನಾಡು (Tamil Nadu) ಸಿಎಂ ಸ್ಟಾಲಿನ್ (CM Stalin) ವಿಧಾನಸಭೆಯಲ್ಲಿ ಘೋಷಿಸಿದ್ದಾರೆ. ಪ್ರತಿ ವರ್ಷ 3 ಕೋಟಿ ಪ್ರಯಾಣಿಕರ ಸಂಚಾರ ಸಾಮರ್ಥ್ಯವನ್ನು ಹೊಂದಿರುವ ವಿಮಾನ ನಿಲ್ದಾಣ ಇದಾಗಲಿದ್ದು, 2,000 ಎಕರೆಗಳಷ್ಟು ವಿಸ್ತಾರವಾಗಲಿದೆ ಎಂದು ಅವರು ತಿಳಿಸಿದ್ದಾರೆ.

    ಹೊಸೂರು ಇತ್ತೀಚಿನ ವರ್ಷಗಳಲ್ಲಿ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ಈ ಭಾಗದಲ್ಲಿ ಆಧುನಿಕ ಮೂಲಸೌಕರ್ಯಗಳ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಈ ಮೂಲಕ ಪ್ರಮುಖ ಆರ್ಥಿಕ ಕೇಂದ್ರವನ್ನಾಗಿ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಹೊಸೂರು, ಕೃಷ್ಣಗಿರಿ ಮತ್ತು ಧರ್ಮಪುರಿ ಅಭಿವೃದ್ಧಿಗೆ ಹೊಸೂರಿನಲ್ಲಿ ವಿಮಾನ ನಿಲ್ದಾಣ ಸ್ಥಾಪಿಸುವುದು ಅಗತ್ಯವಾಗಿದೆ ಅವರು ತಿಳಿಸಿದ್ದಾರೆ.

    ಕರ್ನಾಟಕ ಸರ್ಕಾರ ಬೆಂಗಳೂರಿನಲ್ಲಿ (Bengaluru) ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಜಾಗದ ಹುಡುಕಾಟ ಪ್ರಾರಂಭಿಸಿದ ನಂತರ ತಮಿಳುನಾಡಿನಿಂದ ಈ ನಿರ್ಧಾರ ಹೊರ ಬಿದ್ದಿದೆ. ಬೆಂಗಳೂರಿನ ತುಮಕೂರು ರಸ್ತೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುವ ಸಾಧ್ಯತೆಯಿದೆ.

    ಹೊಸೂರಿನಲ್ಲಿ ಥಾಲಿ ವಿಮಾನ ನಿಲ್ದಾಣವನ್ನು ಹೊಂದಿರುವ ಮತ್ತು ನಿರ್ವಹಿಸುವ ತನೇಜಾ ಏರೋಸ್ಪೇಸ್ ಮತ್ತು ಏವಿಯೇಷನ್ ಲಿಮಿಟೆಡ್, ಕೇಂದ್ರ ಸರ್ಕಾರ ಮತ್ತು ಬೆಂಗಳೂರು ಇಂಟರ್‌ನ್ಯಾಶನಲ್ ಏರ್ಪೋಟ್ ಲಿಮಿಟೆಡ್ ನಡುವಿನ ರಿಯಾಯಿತಿ ಒಪ್ಪಂದದಿಂದಾಗಿ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಸಾಧ್ಯವಾಗಿಲ್ಲ. ಬೆಂಗಳೂರು ವಿಮಾನ ನಿಲ್ದಾಣದಿಂದ 150 ಕಿಲೋಮೀಟರ್ ವೈಮಾನಿಕ ಅಂತರದಲ್ಲಿ 25 ವರ್ಷಗಳವರೆಗೆ (2033 ರವರೆಗೆ) ಯಾವುದೇ ಹೊಸ ಅಥವಾ ಅಸ್ತಿತ್ವದಲ್ಲಿರುವ ದೇಶೀಯ ವಿಮಾನ ನಿಲ್ದಾಣಗಳನ್ನು ತೆರೆಯುವುದನ್ನು ಈ ಒಪ್ಪಂದವು ನಿಷೇಧಿಸುತ್ತದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 2008ರ ಮೇ 24 ರಂದು ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.

    ವಿಮಾನ ನಿಲ್ದಾಣ ನಿರ್ಮಾಣದ ನಿರ್ಧಾರದ ಘೋಷಣೆ ಬಳಿಕ, ಪ್ರತಿಕ್ರಿಯಿಸಿರುವ ತಮಿಳುನಾಡು ಕೈಗಾರಿಕಾ ಸಚಿವ ಟಿಆರ್‌ಬಿ ರಾಜಾ ಅವರು, ಬೆಂಗಳೂರು ಮತ್ತು ಚೆನ್ನೈಗೆ ಸಮೀಪದ ಹೊಸೂರು ಅಭಿವೃದ್ಧಿ ಹೊಂದುತ್ತಿದೆ. ಬೆಳೆಯುತ್ತಿರುವ ಉದ್ಯಮಗಳಿಂದಾಗಿ ಆರ್ಥಿಕತೆ ಉತ್ತೇಜನಕ್ಕೆ ವಿಮಾನ ನಿಲ್ದಾಣ ನೆರವಾಗಲಿದೆ ಎಂದಿದ್ದಾರೆ.

    ಹೊಸೂರಿನಲ್ಲಿ ಹೊಸ ವಿಮಾನ ನಿಲ್ದಾಣದ ಘೋಷಣೆ ಈ ಪ್ರದೇಶಕ್ಕೆ ಒಂದು ಹೆಗ್ಗುರುತಾಗಲಿದೆ. ಈ ಯೋಜನೆಯು ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಹೊಸೂರು ಮಾತ್ರವಲ್ಲದೆ ನೆರೆಯ ಜಿಲ್ಲೆಗಳಾದ ಧರ್ಮಪುರಿ ಮತ್ತು ಸೇಲಂಗೂ ಪ್ರಯೋಜನವಾಗಲಿದೆ. ಬೆಂಗಳೂರಿನ ವಿವಿಧ ಭಾಗಗಳಿಗೆ ಗಮನಾರ್ಹವಾದ ಉತ್ತೇಜನವನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ.

    ಹೊಸೂರ್ ಎಕ್ಸಿಮ್ ಗೇಟ್‍ವೇಗಳಿಗೆ ಅತ್ಯುತ್ತಮ ಸಂಪರ್ಕವನ್ನು ಹೊಂದಿದೆ. ಚೆನ್ನೈ, ತಿರುವಳ್ಳೂರ್, ಶ್ರೀಪೆರಂಬದೂರ್ ಮತ್ತು ಕೊಯಮತ್ತೂರು ಸೇರಿದಂತೆ ಇತರ ಪ್ರಮುಖ ವ್ಯಾಪಾರ ಕೇಂದ್ರಗಳು ಮತ್ತು ಕೈಗಾರಿಕಾ ಕ್ಲಸ್ಟರ್‍ಗಳಿಗೆ ಸಮೀಪದಲ್ಲಿದೆ. ಈ ಪ್ರದೇಶವು ಆಟೋ ಮತ್ತು ಇವಿ ಉತ್ಪಾದನೆ, ಲಾಜಿಸ್ಟಿಕ್ಸ್ ಸೇರಿದಂತೆ ಐಟಿ ಕೇಂದ್ರವಾಗಿಯೂ ಅಭಿವೃದ್ಧಿ ಹೊಂದುತ್ತಿದೆ. ಟಾಟಾ ಎಲೆಕ್ಟ್ರಾನಿಕ್ಸ್, ಟಿವಿಎಸ್, ಅಶೋಕ್ ಲೇಲ್ಯಾಂಡ್, ಟೈಟಾನ್ ಮತ್ತು ರೋಲ್ಸ್ ರಾಯ್ಸ್ (ಐಎಎಂಪಿಎಲ್) ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ.

    ವಿಮಾನ ನಿಲ್ದಾಣದ ನಿರ್ಮಾಣದ ಉದ್ದೇಶದಿಂದ, ಬೆಂಗಳೂರು ಮೆಟ್ರೋವನ್ನು ಹೊಸೂರಿಗೆ ವಿಸ್ತರಿಸಲು ತಮಿಳುನಾಡು ಒತ್ತಾಯಿಸುತ್ತಿದೆ. ಬೊಮ್ಮಸಂದ್ರ ಮತ್ತು ಆರ್‍ವಿ ರಸ್ತೆಯನ್ನು ಸಂಪರ್ಕಿಸುವ ಬೆಂಗಳೂರು ಮೆಟ್ರೋದ ಹಳದಿ ಮಾರ್ಗವು ಡಿಸೆಂಬರ್ 2024ರ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಪ್ರಸ್ತಾವಿತ ಬೊಮ್ಮಸಂದ್ರ-ಹೊಸೂರು ಮೆಟ್ರೋ ಕಾರಿಡಾರ್ ಒಟ್ಟು 20.5 ಕಿಮೀ ವ್ಯಾಪಿಸಿದೆ, ಕರ್ನಾಟಕದಲ್ಲಿ 11.7 ಕಿಮೀ ಮತ್ತು ಉಳಿದ 8.8 ಕಿಮೀ ತಮಿಳುನಾಡಿನಲ್ಲಿ ಇದೆ.

  • ಮಿಡ್‍ನೈಟ್ ಪಾರ್ಟಿ ಮಾಡಿ ಜಾಲಿ ರೈಡ್? – ಜೊಮಾಟೊ ಡೆಲಿವರಿ ಬಾಯ್ ಜಸ್ಟ್ ಮಿಸ್

    ಮಿಡ್‍ನೈಟ್ ಪಾರ್ಟಿ ಮಾಡಿ ಜಾಲಿ ರೈಡ್? – ಜೊಮಾಟೊ ಡೆಲಿವರಿ ಬಾಯ್ ಜಸ್ಟ್ ಮಿಸ್

    ಬೆಂಗಳೂರು: ಕರುಣಾ ಸಾಗರ್ ಮತ್ತು ಸ್ನೇಹಿತರು ಮಿಡ್‍ನೈಟ್ ಪಾರ್ಟಿ ಮಾಡಿ ಜಾಲಿ ರೈಡ್ ಮಾಡಿರಬಹುದು ಎಂಬ ಬಲವಾದ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸುತ್ತಿದಾರೆ.

    ಪೊಲೀಸರು ಈ ಅನುಮಾನ ವ್ಯಕ್ತಪಡಿಸಲು ಕಾರಣವಿದೆ. ಬೆಂಗಳೂರು ರಸ್ತೆಗಳಲ್ಲಿ 90-100 ಕಿ.ಮೀ ವೇಗದಲ್ಲಿ ಹೋಗುವುದೇ ಕಷ್ಟ. ಹೀಗಿರುವಾಗ 150 ಕಿ.ಮೀಗಿಂತಲೂ ಹೆಚ್ಚಿನ ವೇಗದಲ್ಲಿ ಕಾರು ಸಂಚರಿಸಿದೆ ಎಂದರೆ ಯಾವುದಾದರೂ ನಶೆ ಇರಲೇಬೇಕು ಎಂಬ ಅನುಮಾನ ಪೊಲೀಸರಿಗೆ ಬಂದಿದೆ. ಹೀಗಾಗಿ ಎಚ್‍ಎಸ್‍ಆರ್ ಲೇಔಟ್, ಕೋರಮಂಗಲ, ಎಂಜಿ ರಸ್ತೆ, ಇಂದಿರಾನಗರದ ಹೋಟೆಲ್, ಪಬ್‍ಗಳ ಪರಿಶೀಲನೆಗೆ ಈಗ ಪೊಲೀಸರು ಮುಂದಾಗಿದ್ದಾರೆ.

    ಅಪಘಾತ ಆಗಿರುವ ಕಾರಿನಲ್ಲಿ ಮೂರು ಮೊಬೈಲ್ ಫೋನ್‍ಗಳು ಸಿಕ್ಕಿದೆ. ಮೂರು ಮೊಬೈಲ್ ಫೋನ್‍ಗಳ ಡಿಸ್‍ಪ್ಲೇ ಒಡೆದು ಹೋಗಿದೆ. ಈ ಮೊಬೈಲ್ ಮೂಲಕ ಕಾಲ್ ಲಿಸ್ಟ್ ಆಧರಿಸಿ ಟವರ್ ಲೊಕೇಷನ್ ಮೂಲಕ ಪಾರ್ಟಿ ಸ್ಥಳ ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದೆ. ಸುಮಾರು 30 ಪೊಲೀಸರಿಗೆ ಪಾರ್ಟಿ ಜಾಗವನ್ನು ಪತ್ತೆ ಮಾಡಲು ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.

    ಬಹುತೇಕ ಕುಡಿದು ವಾಹನ ಚಲಾಯಿಸಿರುವ ಸಾಧ್ಯತೆಯೇ ಜಾಸ್ತಿ ಇದ್ದು, ಈಗಾಗಲೇ ಮೃತರ ರಕ್ತದ ಮಾದರಿಯನ್ನು ಸಂಗ್ರಹ ಮಾಡಲಾಗಿದೆ. ಒಂದೆರಡು ದಿನದಲ್ಲಿ ವೈದ್ಯಕೀಯ ಪರೀಕ್ಷೆಯ ವರದಿ ಬರುವ ನಿರೀಕ್ಷೆಯಿದೆ. ಇದನ್ನೂ ಓದಿ : ಫೋನ್ ಟ್ಯಾಪಿಂಗ್‍ನಲ್ಲಿ ಐಪಿಎಸ್ ಅಧಿಕಾರಿಗಳ ಫೈಟ್

    ಮೃತಪಟ್ಟ 7 ಮಂದಿಯ ಪೈಕಿ ಆಡಿ ಕಾರಿನ ಚಾಲಕನಾಗಿದ್ದ ಕರುಣಾ ಸಾಗರ್ ಮರಣೋತ್ತರ ಪರೀಕ್ಷೆಯ ವರದಿ ಮುಖ್ಯವಾಗುತ್ತದೆ. ನಿರ್ಲಕ್ಷ್ಯದ ಚಾಲನೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದರೂ ಈ ರೀತಿ ವೇಗದ ಚಾಲನೆಗೆ ಕಾರಣವಾದ ಅಂಶ ಏನು ಎನ್ನುವುದು ತನಿಖೆಗೆ ಬಹಳ ಅಗತ್ಯ. ಹೊಸೂರು ಡಿಎಂಕೆ ಶಾಸಕ ಪ್ರಕಾಶ್ ಅವರ ಪುತ್ರನಾಗಿರುವ ಕಾರಣ ಇದು ಹೈಪ್ರೊಫೈಲ್ ಅಪಘಾತ ಪ್ರಕರಣವೂ ಹೌದು.  ಅಷ್ಟೇ ಅಲ್ಲದೇ ರಾತ್ರಿ ಆ ಸಮಯದಲ್ಲಿ ಎಲ್ಲರೂ ಪ್ರಯಾಣ ಹೊರಟಿದ್ದು ಎಲ್ಲಿಗೆ ಎನ್ನುವುದು ತಿಳಿಯಬೇಕಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲ ಆಯಾಮಗಳಿಂದ ತನಿಖೆಗೆ ಇಳಿದಿದ್ದಾರೆ. ಇದನ್ನೂ ಓದಿ :ಪಿ.ವಿ. ಸಿಂಧುಗೆ ಮೆಗಾ ಸ್ಟಾರ್ ಸನ್ಮಾನ

    ತಪ್ಪಿತು ಮತ್ತೆರಡು ದುರಂತ:
    ಕೋರಮಂಗಲ ಅಪಘಾತ ಪ್ರಕರಣದ ತನಿಖೆ ವೇಳೆ ಮತ್ತೆರಡು ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ಅಪಘಾತಕ್ಕೂ ಮುನ್ನ ಮತ್ತೆರಡು ದೊಡ್ಡ ದುರಂತಗಳು ನಡೆಯುವ ಸಾಧ್ಯತೆಯಿತ್ತು. ಸೋನಿ ವರ್ಲ್ಡ್ ಸಿಗ್ನಲ್ ಬಳಿ ಜೊಮಾಟೊ ಡೆಲಿವರಿ ಬಾಯಿಗೆ ಕಾರು ಗುದ್ದುವ ಸಾಧ್ಯತೆ ಇತ್ತು. ಇದನ್ನು ನೋಡಿ ಕಾರು ತಡೆಯಲು ಹೋದ ಪೊಲೀಸರ ಮೇಲೆ ಜಿಗ್ ಜ್ಯಾಗ್ ರೀತಿಯಲ್ಲಿ ಕಾರು ಹರಿಸಲು ಯತ್ನ ನಡೆದಿತ್ತು. ಅದೃಷ್ಟವಶಾತ್ ಕಾರಿನ ವೇಗ ನೋಡಿ ರಸ್ತೆಯ ಪಕ್ಕಕ್ಕೆ ಪೊಲೀಸರು ಸರಿದಿದ್ದರು.

  • ಯೂಟ್ಯೂಬ್ ನೋಡಿ ಕಳ್ಳತನಕ್ಕೆ ಸ್ಕೆಚ್ ರೂಪಿಸಿದ್ದ ಗ್ರಾಜುಯೇಟ್ಸ್

    ಯೂಟ್ಯೂಬ್ ನೋಡಿ ಕಳ್ಳತನಕ್ಕೆ ಸ್ಕೆಚ್ ರೂಪಿಸಿದ್ದ ಗ್ರಾಜುಯೇಟ್ಸ್

    – ಬಾಡಿಗೆ ಮನೆ ಕೇಳೋ ನೆಪದಲ್ಲಿ ದರೋಡೆಗೆ ಪ್ಲಾನ್, ಕೊಲೆಗೆ ಯತ್ನ

    ಬೆಂಗಳೂರು: ದಿನ ನಿತ್ಯದ ಕರ್ಚಿಗೆ ಹಣವಿಲ್ಲವೆಂದು ಇಬ್ಬರು ಗ್ರಾಜುಯೇಟ್ ವಿದ್ಯಾರ್ಥಿಗಳು ಯೂಟ್ಯೂಬ್ ನೋಡಿ ದರೋಡೆಗೆ ಯತ್ನಿಸಿ ಸಿಕ್ಕಿಬಿದ್ದ ಘಟನೆ ಹೊಸೂರಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಮನೆ ಬಾಡಿಗೆ ಕೇಳುವ ನೆಪದಲ್ಲಿ ಎಂಜಿನಿಯರ್ ಸುವೇತ ಮತ್ತು ಯತೀಶ್ ದರೋಡೆಗೆ ಯತ್ನಿಸಿ ಸಿಕ್ಕಿಬಿದ್ದಿದ್ದಾರೆ. ಇವರಿಬ್ಬರು 2012 ರಲ್ಲಿ ಬೆಂಗಳೂರಲ್ಲಿ ಒಟ್ಟಿಗೆ ಓದಿದ್ದ ಸ್ನೇಹಿತರಾಗಿದ್ದು, ಮಾರ್ಚ್ 7 ರಂದು ಹೊಸೂರಿನ ಮುನೇಶ್ವರ ನಗರದಲ್ಲಿ ಟು-ಲೆಟ್ ಬೋರ್ಡ್ ನೋಡಿ ಬಾಡಿಗೆ ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ್ದರು. ಮನೆ ನೋಡಿ 2 ಸಾವಿರ ಅಡ್ವಾನ್ಸ್ ನೀಡಿ ಅನಂತರ ನೀರು ಕೇಳುವ ನೆಪದಲ್ಲಿ ಅಡುಗೆ ಮನೆಗೆ ಹೋಗಿ ಕಳ್ಳತನಕ್ಕೆ ಯತ್ನಿಸಿ, ಕೊಲೆಗೆ ಸಂಚು ರೂಪಿಸಿದ್ದರು.

    ಹೊಸೂರಿನ ಲಕ್ಷಿ ಮತ್ತು ಸುರೇಶ್ ದಂಪತಿ ಮನೆಯಲ್ಲಿ ಈ ಘಟನೆ ನಡೆದಿದ್ದು ಲಕ್ಷೀಯನ್ನ ಬಟ್ಟೆಯಿಂದ ಬಾಯಿ ಮುಚ್ಚಿ ಕಳ್ಳತನಕ್ಕೆ ಯತ್ನಿಸಿದ್ದರು. ನಂತರ ಸಿಕ್ಕಿಬಿದ್ದಾಗ ತನಿಖೆ ವೇಳೆ ಸತ್ಯ ಬಾಯಿ ಬಿಟ್ಟಿದ್ದಾರೆ.

    ಹೇಗಿರುತ್ತೆ ಇವರ ಪ್ಲಾನ್?: ನೋಡೋಕೆ ವಿದ್ಯಾವಂತರಂತೆ, ಟಿಪ್ ಟಾಪ್ ಆಗಿ ಡ್ರೆಸ್ ಮಾಡಿಕೊಳ್ಳೋ ಚಂದದ ಹುಡುಗ -ಹುಡುಗಿ ತಾವು ಹೊಸದಾಗಿ ಮದುವೆಯಾದ ದಂಪತಿ ಅಂತಾ ಹೇಳಿಕೊಂಡು ಬಾಡಿಗೆ ಮನೆ ಕೇಳುವ ನೆಪದಲ್ಲಿ ಮನೆ ಹೊಕ್ಕುತ್ತಾರೆ. ಫಾರ್ ರೆಂಟ್ ಅನ್ನುವ ಕೊಂಚ ಹೈ-ಫೈ ಆಗಿ ಕಾಣೋ ಮನೆಗೆ ಎಂಟ್ರಿ ಕೊಡ್ತಾರೆ. ಪಕ್ಕದ ಮನೆಯಲ್ಲಿ ಯಾರಿದ್ದಾರೆ ಅಂತಾ ಸೂಕ್ಷ್ಮವಾಗಿ ಅವಲೋಕನ ಮಾಡ್ತಾರೆ. ಬಾಡಿಗೆ, ಮನೆ ಬಗ್ಗೆ ವಿಚಾರಿಸಿಕೊಳ್ತಾರೆ. ಒಂಟಿ ಹೆಂಗಸು ಇದ್ದರು ಅಂದ್ರೆ ಮುಗೀತು. ಆಗ ಹುಡುಗಿ ಕೈಯಲ್ಲಿರುವ ಬ್ಯಾಗ್ ಓಪನ್ ಆಗುತ್ತೆ. ಅದರೊಳಗೆ ಸುತ್ತಿಗೆ, ಚಾಕು, ವೈಯರ್ ಇರುತ್ತೆ. ಕೂಡಲೇ ಆ ಸುತ್ತಿಗೆ ಎತ್ತಿ ಮನೆ ಮಾಲೀಕರ ತಲೆಗೆ ಹೊಡೆದೇ ಬಿಡ್ತಾರೆ, ಚಾಕುವಿನಿಂದ ಚುಚ್ತಾರೆ ಅಥವಾ ವೈರ್ ಕತ್ತಿಗೆ ಹಾಕಿ ಹಿಡಿದು ಎಳೆಯುತ್ತಾರೆ. ನಂತರ ಮನೆಯೊಳಗೆ ನಗದು, ಆಭರಣ ದೋಚಿ ಪರಾರಿಯಾಗ್ತಾರೆ.

    ಸಿಕ್ಕಿಬಿದ್ರು ಖದೀಮರು: ಆದ್ರೇ ಮೊನ್ನೆ ಈ ಜೋಡಿಯ ಅದೃಷ್ಟ ಕೆಟ್ಟಿತ್ತು ಅನಿಸುತ್ತೆ. ಈ ಇಬ್ಬರೂ ಹೊಸೂರು ರಸ್ತೆಯ ಮನೆಯೊಳಗೆ ಬಾಡಿಗೆ ಕೇಳಿಕೊಂಡು ಹೋಗಿದ್ರು. ಒಂಟಿ ಮಹಿಳೆ ಇರೋದನ್ನು ನೋಡಿ ಇನ್ನೇನು ಆಕೆಯ ಕೈಯನ್ನು ಹಿಡಿದು ಸುತ್ತಿಗೆ ಹಿಡಿದು ತಲೆಗೆ ಹೊಡೆಯಬೇಕೆನ್ನುವಷ್ಟರಲ್ಲಿ ಆಕೆ ಕಿರುಚಿಕೊಂಡಿದ್ರು. ಆಗ ಅಕ್ಕಪಕ್ಕದ ಮನೆಯವರು ಓಡಿ ಬಂದಿದ್ದು, ಈ ಜೋಡಿ ತಪ್ಪಿಸಿಕೊಳ್ಳೋದಕ್ಕೆ ಪ್ರಯತ್ನ ಪಟ್ಟಿದ್ದಾರೆ. ಆದ್ರೆ ಅಷ್ಟರಲ್ಲಿ ರಸ್ತೆಯ ಜನ ಓಡಿ ಬಂದು ಇವರಿಬ್ಬರನ್ನು ಹಿಡಿದುಕೊಂಡಿದ್ದಾರೆ. ಬ್ಯಾಗ್ ಓಪನ್ ಮಾಡಿದಾಗ ಚಾಕು, ವೈರ್, ಸುತ್ತಿಗೆ ಇರೋದು ಗೊತ್ತಾಗಿದೆ. ಕೂಡಲೇ ಜನರು ಹೊಸೂರು ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದು, ಪೊಲೀಸರು ಸ್ಥಳಕ್ಕೆ ಬಂದು ಇಬ್ಬರನ್ನೂ ಸ್ಟೇಷನ್ ಗೆ ಎಳೆದೊಯ್ದಿದ್ದಾರೆ.