Tag: hostage

  • 60 ಉಗ್ರರ ಕೊಂದು 250 ಒತ್ತೆಯಾಳುಗಳನ್ನು ಸುರಕ್ಷಿತವಾಗಿ ರಕ್ಷಿಸಿದ ಇಸ್ರೇಲ್ ಸೈನಿಕರು

    60 ಉಗ್ರರ ಕೊಂದು 250 ಒತ್ತೆಯಾಳುಗಳನ್ನು ಸುರಕ್ಷಿತವಾಗಿ ರಕ್ಷಿಸಿದ ಇಸ್ರೇಲ್ ಸೈನಿಕರು

    ಟೆಲ್ ಅವಿವ್: ಹಮಾಸ್ (Hamas) ಭಯೋತ್ಪಾದಕರಿಂದ ಅಪಹರಣಕ್ಕೊಳಗಾಗಿ ಒತ್ತೆಯಾಳಾಗಿದ್ದ ಸುಮಾರು 250 ಜನರನ್ನು ಶುಕ್ರವಾರ ಇಸ್ರೇಲ್‌ನ ರಕ್ಷಣಾ ಪಡೆಗಳು (IDF) ಸುರಕ್ಷಿತವಾಗಿ ರಕ್ಷಿಸಿದ್ದಾರೆ.

    ಗಾಝಾ (Gaza) ಭದ್ರತಾ ಬೇಲಿ ಪ್ರದೇಶದ ಬಳಿ 60ಕ್ಕೂ ಹೆಚ್ಚು ಹಮಾಸ್ ಭಯೋತ್ಪಾದಕರನ್ನು ಕೊಂದು ಒತ್ತೆಯಾಳುಗಳನ್ನು ಹೇಗೆ ರಕ್ಷಿಸಿದರು ಎಂಬುದನ್ನು ತೋರಿಸುವ ಹೆಡ್‌ಕ್ಯಾಮ್ ದೃಶ್ಯಗಳನ್ನು ಐಡಿಎಫ್ ಎಕ್ಸ್ ಪೋಸ್ಟ್‌ನಲ್ಲಿ ಹಂಚಿಕೊಂಡಿದೆ.

    ಈ ಬಗ್ಗೆ ಬರೆದಿರುವ ಐಡಿಎಫ್, ಫ್ಲೋಟಿಲ್ಲಾ 13 ಎಲೈಟ್ ಘಟಕವನ್ನು ಅಕ್ಟೋಬರ್ 7 ರಂದು ಸುಫಾ ಮಿಲಿಟರಿ ಪೋಸ್ಟ್‌ನ ನಿಯಂತ್ರಣವನ್ನು ಮರಳಿ ಪಡೆಯುವ ಜಂಟಿ ಪ್ರಯತ್ನದಲ್ಲಿ ಗಾಜಾ ಭದ್ರತಾ ಬೇಲಿಯ ಸುತ್ತಲಿನ ಪ್ರದೇಶಕ್ಕೆ ನಿಯೋಜಿಸಲಾಗಿದೆ.

    ಸೈನಿಕರು ಸುಮಾರು 250 ಒತ್ತೆಯಾಳುಗಳನ್ನು ಜೀವಂತವಾಗಿ ರಕ್ಷಿಸಿದ್ದಾರೆ. 60ಕ್ಕೂ ಹೆಚ್ಚು ಹಮಾಸ್ ಭಯೋತ್ಪಾದಕರನ್ನು ಕೊಲ್ಲಲಾಗಿದೆ ಮತ್ತು ಹಮಾಸ್ ದಕ್ಷಿಣ ನೌಕಾ ವಿಭಾಗದ ಉಪ ಕಮಾಂಡರ್ ಮುಹಮ್ಮದ್ ಅಬು ಅಲಿ ಸೇರಿದಂತೆ 26 ಮಂದಿಯನ್ನು ಬಂಧಿಸಲಾಗಿದೆ ಎಂದು ಐಡಿಎಫ್ ತಿಳಿಸಿದೆ.

    ಹಮಾಸ್ ಭಯೋತ್ಪಾದಕರು ಇಸ್ರೇಲ್ (Israel) ಮೇಲೆ ಮಾರಣಾಂತಿಕ ದಾಳಿ ನಡೆಸಿ ಅದರ ಭೂಪ್ರದೇಶಕ್ಕೆ ನುಸುಳಿದ ಕೂಡಲೇ ಐಡಿಫ್‌ನಿಂದ ಸೇನಾ ಕಾರ್ಯಾಚರಣೆ ನಡೆಸಲಾಯಿತು. ಹಮಾಸ್ ಉಗ್ರರನ್ನು ಎದುರಿಸಲು ಸುಮಾರು 13 ಸೈನಿಕರನ್ನು ಘಟನಾ ಸ್ಥಳಕ್ಕೆ ಹೆಲಿಕಾಪ್ಟರ್ ಮೂಲಕ ಕಳುಹಿಸಲಾಯಿತು. ಇದನ್ನೂ ಓದಿ: Operation Ajay: ಭಾರತ ಸರ್ಕಾರಕ್ಕೆ ಸಲಾಂ – ಇಸ್ರೇಲ್‌ ಯುದ್ಧ ಭೂಮಿಯ ಅನುಭವ ಬಿಚ್ಚಿಟ್ಟ ಕನ್ನಡಿಗರು

    ಸೈನಿಕರ ಹೆಡ್‌ಕ್ಯಾಮ್‌ನಲ್ಲಿ ಸೆರೆಯಾಗಿರುವ ವೀಡಿಯೋದಲ್ಲಿ ಫ್ಲೋಟಿಲ್ಲಾ 13 ಎಲೈಟ್ ಯುನಿಟ್ ಸಿಬ್ಬಂದಿ ಹಲವಾರು ಸುತ್ತು ಗುಂಡುಗಳನ್ನು ಹೊಡೆದು, ಭಯೋತ್ಪಾದಕರನ್ನು ಸೆರೆಹಿಡಿಯುವುದು ಕಂಡುಬಂದಿದೆ.

    ಇತ್ತೀಚಿನ ವರದಿಗಳ ಪ್ರಕಾರ, ಇಸ್ರೇಲ್‌ನಲ್ಲಿ ಹಮಾಸ್ ಭಯೋತ್ಪಾದಕರ ದಾಳಿಗೆ ಸಾವನ್ನಪ್ಪಿರುವವರ ಸಂಖ್ಯೆ 1,300 ದಾಟಿದೆ. 3,300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಹಮಾಸ್ ಹೆಚ್ಚಿನ ಸಂಖ್ಯೆಯಲ್ಲಿ ಇಸ್ರೇಲ್‌ನಿಂದ ಜನರನ್ನು ಅಪಹರಿಸಿ, ಅವರನ್ನು ಗಾಜಾದಲ್ಲಿ ಒತ್ತೆಯಾಳಾಗಿ ಇಟ್ಟುಕೊಂಡಿತು. ಇನ್ನು ಇಸ್ರೇಲ್‌ನ ಪಡೆಗಳು ಪ್ರತಿದಾಳಿ ನಡೆಸಿದ್ದು, ಇಸ್ರೇಲ್ ಹಾಗೂ ಗಡಿ ಪ್ರದೇಶದಲ್ಲಿ 1,500ಕ್ಕೂ ಹೆಚ್ಚು ಹಮಾಸ್ ಭಯೋತ್ಪಾದಕರ ಮೃತದೇಹಗಳು ಪತ್ತೆಯಾಗಿವೆ. ಇದನ್ನೂ ಓದಿ: Operation Ajay: ಇಸ್ರೇಲ್‌ನಿಂದ 230 ಮಂದಿ ಭಾರತೀಯರ ಆಗಮನ – ಕನ್ನಡಿಗರಿಗೆ ಟಿ.ಬಿ ಜಯಚಂದ್ರ ಆತ್ಮೀಯ ಸ್ವಾಗತ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನನ್ನ ಮಗಳು ಬದುಕಿದ್ದಾಳೆ, ಆಕೆಯನ್ನು ರಕ್ಷಿಸಿ – ಅರೆಬೆತ್ತಲೆ ಮೆರವಣಿಗೆಯಾಗಿದ್ದ ಶಾನಿ ಲೌಕ್ ತಾಯಿ ಮನವಿ

    ನನ್ನ ಮಗಳು ಬದುಕಿದ್ದಾಳೆ, ಆಕೆಯನ್ನು ರಕ್ಷಿಸಿ – ಅರೆಬೆತ್ತಲೆ ಮೆರವಣಿಗೆಯಾಗಿದ್ದ ಶಾನಿ ಲೌಕ್ ತಾಯಿ ಮನವಿ

    ಬರ್ಲಿನ್: ಇಸ್ರೇಲ್ (Israel) ಮೇಲೆ ದಾಳಿ ಮಾಡಿದ ಹಮಾಸ್ (Hamas) ಉಗ್ರರು ಅರೆಬೆತ್ತಲಾಗಿ ಮೆರವಣಿಗೆ ಮಾಡಿದ್ದ ಯುವತಿ ಶಾನಿ ಲೌಕ್ (Shani Louk) ಇನ್ನೂ ಜೀವಂತವಾಗಿದ್ದಾಳೆ, ಆಕೆಯನ್ನು ರಕ್ಷಿಸಿ ಎಂದು ಆಕೆಯ ತಾಯಿ ಮನವಿ ಮಾಡಿಕೊಂಡಿದ್ದಾರೆ.

    ಈ ಬಗ್ಗೆ ವೀಯೋವನ್ನು ಸಾಮಾಜಿಕ ಜಾಲತಾಣಗದಲ್ಲಿ ಬಿಡುಗಡೆ ಮಾಡಿರುವ ಶಾನಿ ಲೌಕ್ ತಾಯಿ ರಿಕಾರ್ಡಾ ಲೌಕ್, ನನ್ನ ಮಗಳು ಇನ್ನೂ ಜೀವಂತವಾಗಿದ್ದಾಳೆ. ಆಕೆ ಹಮಾಸ್ ಆಸ್ಪತ್ರೆಯಲ್ಲಿ ಇರುವುದಾಗಿ ಗಾಜಾ ಪಟ್ಟಿಯಲ್ಲಿರುವ ನನ್ನ ಕುಟುಂಬದ ಸ್ನೇಹಿತರು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

    ಶಾನಿ ಇನ್ನೂ ಜೀವಂತವಾಗಿದ್ದಾಳೆ. ಆದರೆ ಆಕೆಯ ತಲೆಗೆ ಗಂಭೀರವಾದ ಗಾಯವಾಗಿದೆ. ಆಕೆ ಗಂಭೀರ ಸ್ಥಿತಿಯಲ್ಲಿದ್ದಾಳೆ. ಆಕೆಯ ಜೀವ ಪ್ರತಿ ನಿಮಿಷವೂ ನಿರ್ಣಾಯಕ ಸ್ಥಿತಿಯಲ್ಲಿದೆ. ನಾವು ಜರ್ಮನ್ (German) ಸರ್ಕಾರವನ್ನು ತ್ವರಿತವಾಗಿ ಕಾರ್ಯನಿರ್ವಹಿಸುವಂತೆ ಕೇಳಿಕೊಳ್ಳುತ್ತಿದ್ದೇವೆ ಎಂದು ಮಹಿಳೆ ವೀಡಿಯೋದಲ್ಲಿ ಹೇಳಿದ್ದಾರೆ.

    ಅಧಿಕಾರದ ಪ್ರಶ್ನೆಯ ಬಗ್ಗೆ ಯಾರೂ ವಾದಿಸಕೂಡದು. ಶಾನಿಯನ್ನು ಗಾಜಾ ಪಟ್ಟಿಯಿಂದ ಹೊರತರಲು ತಕ್ಷಣವೇ ಕಾರ್ಯನಿರ್ವಹಿಸಬೇಕು. ಶಾನಿಯನ್ನು ಜೀವಂತವಾಗಿ ಹಾಗೂ ಆರೋಗ್ಯವಾಗಿ ಮನೆಗೆ ಮರಳಿ ಕರೆತರಲು ಜರ್ಮನಿ ಅಧಿಕಾರಿಗಳಿಗೆ ಇದು ನನ್ನ ಕಡೆಯ ಮನವಿ ಎಂದು ಅವರು ಹೇಳಿದ್ದಾರೆ.

    ಶಾನಿ ಇನ್ನೂ ಬದುಕಿದ್ದಾಳೆ ಎಂದು ಮಾಹಿತಿ ನೀಡಿರುವ ಮಹಿಳೆಯ ಕುಟುಂಬದ ಸ್ನೇಹಿತರಿಗೆ ಸ್ವತಃ ಹಮಾಸ್‌ನ ಆಸ್ಪತ್ರೆಯಲ್ಲಿ ಆಕೆಯನ್ನು ಭೇಟಿಯಾಗಲು ಅವಕಾಶ ನೀಡಲಾಗಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: ಇಸ್ರೇಲ್‌ಗೆ ಬಂದಿಳಿದ ಅಮೆರಿಕದ ಶಸ್ತ್ರಾಸ್ತ್ರ ಹೊತ್ತ ಮೊದಲ ವಿಮಾನ – ಇಸ್ರೇಲ್‌ಗೆ ನೂರಾನೆ ಬಲ

    ಶಾನಿ ಲೌಕ್ ಟ್ಯಾಟೂ ಕಲಾವಿದೆಯಾಗಿದ್ದು, ಶನಿವಾರ ಗಾಜಾ ಪಟ್ಟಿಯ ಸಮೀಪ ನಡೆದ ಟ್ರೈಬ್ ಆಫ್ ಸೂಪರ್‌ನೋವಾ ಸಂಗೀತ ಉತ್ಸವದಲ್ಲಿ ಪಾಲ್ಗೊಂಡಿದ್ದಳು. ಇದೇ ವೇಳೆ ಹಮಾಸ್ ಉಗ್ರರು ಅಲ್ಲಿ ದಾಳಿ ನಡೆಸಿ, ಶಾನಿ ಸೇರಿದಂತೆ ಹಲವು ಯುವತಿಯರನ್ನು ಅಪಹರಿಸಿ ಒತ್ತೆಯಾಳಾಗಿಟ್ಟಿದ್ದರು. ಉಗ್ರರು ಶಾನಿಯನ್ನು ಪಿಕಪ್ ಟ್ರಕ್‌ನ ಹಿಂಭಾಗದಲ್ಲಿ ಹಿಂಸಾತ್ಮಕ ರೀತಿಯಲ್ಲಿ ತುಂಬಿ, ಅರೆಬೆತ್ತಲೆ ಸ್ಥಿತಿಯಲ್ಲಿ ಮೆರವಣಿಗೆ ಮಾಡಿದ್ದರು. ಈ ವೀಡಿಯೋ ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಮಾತ್ರವಲ್ಲದೆ ಹಮಾಸ್ ಉಗ್ರರ ಕ್ರೌರ್ಯ ಜಾಗತಿಕವಾಗಿ ಕೆಂಗಣ್ಣಿಗೆ ಕಾರಣವಾಗಿದೆ.

    ಶಾನಿ ಲೌಕ್ ಅರೆಬೆತ್ತಲಾಗಿ ಮೆರವಣಿಗೆ ಮಾಡಿದ್ದ ಸಂದರ್ಭ ರಕ್ತಸಿಕ್ತ ಸ್ಥಿತಿಯಲ್ಲಿ ಹಾಗೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು. ಈ ಹಿನ್ನೆಲೆ ಆಕೆಯನ್ನು ಹಮಾಸ್ ಉಗ್ರರು ಕೊಂದಿರಬಹುದು ಎನ್ನಲಾಗಿತ್ತು. ಈ ಹಿನ್ನೆಲೆ ಆಕೆಯ ತಾಯಿ ಇದಕ್ಕೂ ಮೊದಲು ವೀಡಿಯೋ ಮಾಡಿ, ನನ್ನ ಮಗಳ ಶವವನ್ನಾದರೂ ಕೊಡಿ ಎಂದು ಕೇಳಿಕೊಂಡಿದ್ದರು. ಇದನ್ನೂ ಓದಿ: ಹಮಾಸ್-ಇಸ್ರೇಲ್‌ ಸಂಘರ್ಷದಲ್ಲಿ 14 ಅಮೆರಿಕನ್ನರ ಸಾವು; ದಾಳಿಯನ್ನು ಖಂಡಿಸಿದ ಜೋ ಬೈಡನ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಾಜಾ ಸೀಜ್‌ಗೆ ಇಸ್ರೇಲ್ ಆದೇಶದ ಬೆನ್ನಲ್ಲೇ ಒತ್ತೆಯಾಳುಗಳನ್ನು ಕೊಲ್ಲುವ ಬೆದರಿಕೆ ಹಾಕಿದ ಹಮಾಸ್

    ಗಾಜಾ ಸೀಜ್‌ಗೆ ಇಸ್ರೇಲ್ ಆದೇಶದ ಬೆನ್ನಲ್ಲೇ ಒತ್ತೆಯಾಳುಗಳನ್ನು ಕೊಲ್ಲುವ ಬೆದರಿಕೆ ಹಾಕಿದ ಹಮಾಸ್

    ಟೆಲ್ ಅವಿವ್: ಇಸ್ರೇಲ್‌ನ (Israel) ರಕ್ಷಣಾ ಸಚಿವ ಯೋವ್ ಗ್ಯಾಲಟ್ ಸೋಮವಾರ ಗಾಜಾದ (Gaza) ಮೇಲೆ ಸಂಪೂರ್ಣ ಮುತ್ತಿಗೆಯ ಆದೇಶ ಹೊರಡಿಸಿದೆ. ಇದಾದ ನಂತರ ಪ್ಯಾಲೆಸ್ಟೀನ್ ಹಮಾಸ್ (Hamas) ಗುಂಪು ಒತ್ತೆಯಾಳಾಗಿ (Hostage) ಇಟ್ಟಿರುವ ನೂರಾರು ಇಸ್ರೇಲಿ ನಾಗರಿಕರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದೆ.

    ಇಸ್ರೇಲ್ ಗಾಜಾವನ್ನು ಸಂಪೂರ್ಣ ಸೀಜ್ ಮಾಡಿದ್ದು, ವಿದ್ಯುತ್, ಆಹಾರ, ನೀರು, ಗೃಹ ಅಥವಾ ವಾಣಿಜ್ಯ ಬಳಕೆ ಅನಿಲ ಪೂರೈಕೆಯನ್ನು ಸ್ಥಗಿತಗೊಳಿಸಿದೆ. ಇದರ ಬೆನ್ನಲ್ಲೇ ಎಚ್ಚರಿಕೆ ನೀಡಿದ ಹಮಾಸ್ ಸಶಸ್ತ್ರ ವಿಭಾಗ, ಯಾವುದೇ ಸೂಚನೆ ನೀಡದೆ ನಮ್ಮ ಜನರನ್ನು ಗುರಿಪಡಿಸಿದ್ದಲ್ಲಿ, ನಾವು ಒತ್ತೆಯಾಳಾಗಿ ಇಟ್ಟಿರುವವರಲ್ಲಿ ಒಬ್ಬೊಬ್ಬರನ್ನೇ ಕೊಲ್ಲಲಾಗುವುದು ಎಂದಿದೆ. ಈಗಾಗಲೇ ಇಸ್ರೇಲ್‌ನ ವೈಮಾನಿಕ ದಾಳಿಯಿಂದಾಗಿ ಒತ್ತೆಯಾಳಾಗಿದ್ದ ನಾಲ್ವರು ನಾಗರಿಕರು ಕೊಲ್ಲಲ್ಪಟ್ಟಿದ್ದಾಗಿ ಹಮಾಸ್ ಹೇಳಿಕೊಂಡಿದೆ. ಆದರೆ ಇದು ಖಚಿತವೇ ಎಂಬುದು ದೃಢವಾಗಿಲ್ಲ.

    ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹಮಾಸ್‌ಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಅವರ ಸರ್ಕಾರ ಯುದ್ಧಕ್ಕೆ 3,00,000 ಸೈನಿಕರನ್ನು ಸಜ್ಜುಗೊಳಿಸಿದೆ ಎಂದು ವರದಿಯಾಗಿದೆ. ನಾವು ಈ ಯುದ್ಧವನ್ನು ಬಯಸಿರಲಿಲ್ಲ. ಆದರೆ ಇದು ಅತ್ಯಂತ ಕ್ರೂರ ಮತ್ತು ಅನಾಗರಿಕ ರೀತಿಯಲ್ಲಿ ನಮ್ಮ ಮೇಲೆ ದಾಳಿಮಾಡಿರುವುದು ಯುದ್ಧಕ್ಕೆ ಪ್ರಚೋದನೆ ನೀಡಿದೆ. ಆದರೆ ನಾವು ಈ ಯುದ್ಧವನ್ನು ಪ್ರಾರಂಭಿಸದಿದ್ದರೂ, ಇಸ್ರೇಲ್ ಅದನ್ನು ಮುಗಿಸುತ್ತದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಶೋಪಿಯಾನದಲ್ಲಿ ಇಬ್ಬರು ಲಷ್ಕರ್ ಉಗ್ರರ ಎನ್‍ಕೌಂಟರ್

    ಶನಿವಾರ ಪ್ರಾರಂಭವಾದ ಉದ್ವಿಗ್ನತೆಯಿಂದ ಇಲ್ಲಿಯವರೆಗೆ ಎರಡೂ ಕಡೆಗಳಿಂದ ಸುಮಾರು 1,600 ನಾಗರಿಕರು ಸಾವನ್ನಪ್ಪಿದ್ದಾರೆ. ಇಸ್ರೇಲ್‌ನಲ್ಲಿ 900ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರೆ, ಗಾಜಾದಲ್ಲಿ ಸಾವಿನ ಸಂಖ್ಯೆ 687ಕ್ಕೆ ಏರಿಕೆಯಾಗಿದೆ. ಇದನ್ನೂ ಓದಿ: ಹಮಾಸ್ ಉಗ್ರರ ನಡೆಗೆ ಮೋದಿ ಖಂಡನೆ- ಇಸ್ರೇಲ್ ಪರ ನಿಂತ ಭಾರತ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ ಒತ್ತೆಯಾಳಾಗಿರಿಸಿಕೊಂಡಿದೆ – ರಷ್ಯಾ ಆರೋಪ

    ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ ಒತ್ತೆಯಾಳಾಗಿರಿಸಿಕೊಂಡಿದೆ – ರಷ್ಯಾ ಆರೋಪ

    ಕೀವ್: ಯುದ್ಧ ಪೀಡಿತ ಉಕ್ರೇನ್‍ನಲ್ಲಿ ಸಿಲುಕಿರುವ ತನ್ನ ನಾಗರಿಕರನ್ನು ಸ್ಥಳಾಂತರಿಸಲು ಭಾರತವು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಈ ನಡುವೆ ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ ಒತ್ತೆಯಾಳಾಗಿ ಇರಿಸಿಕೊಂಡಿದೆ ಎಂದು ರಷ್ಯಾ ಆರೋಪಿಸಿದೆ.

    ಖಾರ್ಕಿವ್‍ನಿಂದ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ರಷ್ಯಾ ಪ್ರಯತ್ನಿಸುತ್ತಿರುವಾಗ ಉಕ್ರೇನ್ ಪಡೆಗಳು ಭಾರತೀಯರನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಬ್ರೀಫಿಂಗ್‍ನಲ್ಲಿ ತಿಳಿಸಿದೆ. ಇದನ್ನು ಓದಿ: ಅಕ್ರಮ ಶಸ್ತ್ರಾಸ್ತ್ರಗಳ ಬದಲಿಗೆ, ಯುಪಿ ಈಗ ಕ್ಷಿಪಣಿಗಳನ್ನು ತಯಾರಿಸುತ್ತಿದೆ: ಅಮಿತ್ ಶಾ

    ಈ ಕುರಿತಂತೆ ಮಾತನಾಡಿದ ಮೇಜರ್ ಜನರಲ್ ಇಗೊರ್ ಕೊನಾಶೆಂಕೋವ್, ನಮ್ಮ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಖಾರ್ಕಿವ್‍ನಲ್ಲಿ, ಉಕ್ರೇನಿಯನ್ ಅಧಿಕಾರಿಗಳು ಉಕ್ರೇನಿಯನ್ ಪ್ರದೇಶವನ್ನು ತೊರೆದು ಬೇರೆಡೆಗೆ ಹೋಗಲು ಪ್ರಯತ್ನಿಸಿದ ಭಾರತೀಯ ವಿದ್ಯಾರ್ಥಿಗಳ ದೊಡ್ಡ ಗುಂಪನ್ನು ಬಲವಂತವಾಗಿ ಬಂಧಿಸುತ್ತಿದ್ದಾರೆ.

    ಭಾರತೀಯ ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ಸಶಸ್ತ್ರ ಪಡೆಗಳು ಸಿದ್ಧವಾಗಿವೆ ಮತ್ತು ಭಾರತದ ಕಡೆಯವರು ಪ್ರಸ್ತಾಪಿಸಿದಂತೆ ಅವರನ್ನು ತಮ್ಮ ಮಿಲಿಟರಿ ಸಾರಿಗೆ ವಿಮಾನಗಳು ಅಥವಾ ಭಾರತೀಯ ವಿಮಾನಗಳೊಂದಿಗೆ ರಷ್ಯಾದ ಪ್ರದೇಶದಿಂದ ಮನೆಗೆ ಕಳುಹಿಸಲಾಗುತ್ತದೆ ಎಂದಿದ್ದಾರೆ.

    ಮತ್ತೊಂದೆಡೆ ಉಕ್ರೇನ್ ಎಂಎಫ್‍ಎ ಕೂಡ ಭಾರತ, ಪಾಕಿಸ್ತಾನ, ಚೀನಾ ಮತ್ತು ಇತರ ದೇಶಗಳ ವಿದ್ಯಾರ್ಥಿಗಳನ್ನು ರಷ್ಯಾ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ ಎಂದು ಆರೋಪಿಸಿದೆ. ಇದನ್ನು ಓದಿ: ಪುಟಿನ್‌ ಜೊತೆ 2ನೇ ಬಾರಿ ಮೋದಿ ಮಾತುಕತೆ