Tag: Host

  • ಗಂಡು ಮಗುವಿನ ತಾಯಿಯಾದ ಕಾಮಿಡಿ ಕ್ವೀನ್ ಭಾರತಿ

    ಗಂಡು ಮಗುವಿನ ತಾಯಿಯಾದ ಕಾಮಿಡಿ ಕ್ವೀನ್ ಭಾರತಿ

    ಕಾಮಿಡಿಯನ್, ನಿರೂಪಕಿ ಭಾರತಿ ಸಿಂಗ್ ಹಾಗೂ ಅವರ ಪತಿ ಹರ್ಷ್ ಲಿಂಬಾಚಿಯಾ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿರುವ ಕಾಮಿಡಿ ಕ್ವೀನ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ಭಾರತಿ ಸಿಂಗ್ ಗಂಡು ಮಗುವಿಗೆ ಜನ್ಮ ನೀಡಿರುವ ಬಗ್ಗೆ ಪತಿ ಹರ್ಷ ಲಿಂಬಾಚಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಇಟ್ಸ್ ಎ ಬಾಯ್ (ಇದು ಗಂಡು ಮಗು) ಎಂದು ಬರೆದಿರುವ ಫೋಟೋವನ್ನು ಹಂಚಿಕೊಂಡು ಅಭಿಮಾನಿಗಳಿಗೂ ಸರ್ಪೈಸ್ ನೀಡಿದ್ದಾರೆ. ಇದನ್ನೂ ಓದಿ: ‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ಯಾಗಿ ಅಗ್ನಿಸಾಕ್ಷಿ ವೈಷ್ಣವಿ ಮೋಡಿ

    ಇತ್ತೀಚೆಗೆ ಭಾರತಿ ಸಿಂಗ್ ತಮ್ಮ ಗರ್ಭಾವಸ್ಥೆ ಕ್ಷಣಗಳ ಫೊಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು ಭಾರೀ ಸುದ್ದಿಯಾಗಿದ್ದರು. ಆನೆ ವಾಲೇ ಬೇಬಿ ಕಿ ಮಮ್ಮಿ(ಬರಲಿರುವ ಮಗುವಿನ ತಾಯಿ) ಎಂಬ ಮಜವಾದ ಶೀರ್ಷಿಕೆ ನೀಡಿದ ಪೋಸ್ಟ್ ಅನ್ನು ಅಭಿಮಾನಿಗಳು ಅತಿಯಾಗಿ ಮೆಚ್ಚಿಕೊಂಡಿದ್ದರು. ಇದನ್ನೂ ಓದಿ: ಜಾನ್ ಅಬ್ರಾಹಾಂ ಹೊಸ ಚಿತ್ರದಲ್ಲಿ ಬಿಟೌನ್ ಕಿಲಾಡಿ

    ಜನಪ್ರಿಯ ಶೋಗಳನ್ನು ನಿರೂಪಣೆ ಮಾಡುವ ಭಾರತಿ ತುಂಬು ಗರ್ಭಿಣಿಯಾಗಿದ್ದಾಗಲೂ ಹೆರಿಗೆ ವರೆಗೂ ಆ್ಯಕ್ಟಿವ್ ಆಗಿರಲು ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ ಎಂದು ತಿಳಿಸಿದ್ದರು.

  • ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೊಸ ನಿರೂಪಕಿ ಎಂಟ್ರಿ

    ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೊಸ ನಿರೂಪಕಿ ಎಂಟ್ರಿ

    ಮುಂಬೈ: ಹಿಂದಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೊಸ ನಿರೂಪಕಿ ಎಂಟ್ರಿ ಕೊಟ್ಟಿದ್ದು, ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಶೋಯಿಂದ ಹೊರ ಬಂದಿದ್ದಾರೆ.

    ಸಲ್ಮಾನ್ ಖಾನ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೆ ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಲ್ಮಾನ್ ಬಿಗ್ ಬಾಸ್ ಕಾರ್ಯಕ್ರಮದಿಂದ ಹೊರ ಬರಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಸಲ್ಮಾನ್ ನರವೈಜ್ಞಾನಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆದಿದ್ದಾರೆ. ಅಲ್ಲದೆ ಕೋಪ ಮಾಡಿಕೊಳ್ಳದಂತೆ ವೈದ್ಯರು ಸಲ್ಮಾನ್ ಅವರಿಗೆ ಸಲಹೆ ನೀಡಿದ್ದಾರೆ. ಆದರೆ ಪ್ರತಿವಾರ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸಲ್ಮಾನ್ ಸ್ಪರ್ಧಿಗಳ ವಿರುದ್ಧ ಕೋಪ ಮಾಡಿಕೊಳ್ಳುತ್ತಾರೆ. ಹಾಗಾಗಿ ಸಲ್ಮಾನ್ ಈ ಕಾರ್ಯಕ್ರಮದಿಂದ ಹೊರ ನಡೆದಿದ್ದಾರೆ ಎನ್ನಲಾಗಿದೆ.

    ನಿರ್ದೇಶಕಿ, ನಿರ್ಮಾಪಕಿ ಫರ್ಹಾ ಖಾನ್ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮುಂದಿನ ವಾರಗಳಲ್ಲಿ ಫರ್ಹಾ ಖಾನ್ ಬಿಗ್‍ಬಾಸ್ ನಿರೂಪಣೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯಕ್ಕೆ ಹಿಂದಿ ಬಿಗ್‍ಬಾಸ್‍ನ 13ನೇ ಆವೃತ್ತಿ ನಡೆಯುತ್ತಿದ್ದು, ಜನವರಿ ತಿಂಗಳಿನಿಂದ ಫರ್ಹಾ ಖಾನ್ ಕಾರ್ಯಕ್ರಮವನ್ನು ನಿರೂಪಣೆ ಮಾಡಲಿದ್ದಾರೆ.

    ಸದ್ಯಕ್ಕೆ ಸಲ್ಮಾನ್ ಖಾನ್ ನಟನೆಯ `ದಬಾಂಗ್ 3′ ಸಿನಿಮಾ ಡಿಸೆಂಬರ್ 20 ರಂದು ಬಿಡುಗಡೆಯಾಗುತ್ತಿದೆ. ಹೀಗಾಗಿ ಚಿತ್ರತಂಡ ಪ್ರಚಾರದಲ್ಲಿ ತೊಡಗಿಕೊಂಡಿದೆ. ಪ್ರಭುದೇವ್ ನಿರ್ದೇಶನದ ಈ ಚಿತ್ರದಲ್ಲಿ ಸುದೀಪ್, ಸೋನಾಕ್ಷಿ ಸಿನ್ಹಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  • ಎಲ್ಲವನ್ನು ಬಾಚಿಕೊಳ್ಳಬೇಕು ಎಂಬ ದುರಾಸೆ ನನಗಿಲ್ಲ: ದರ್ಶನ್

    ಎಲ್ಲವನ್ನು ಬಾಚಿಕೊಳ್ಳಬೇಕು ಎಂಬ ದುರಾಸೆ ನನಗಿಲ್ಲ: ದರ್ಶನ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಎಲ್ಲವನ್ನು ಬಾಚಿಕೊಳ್ಳಬೇಕು ಎಂಬ ದುರಾಸೆ ನನಗಿಲ್ಲ ಎಂದು ಹೇಳುವ ಮೂಲಕ ಕಿರುತೆರೆಗೆ ಎಂಟ್ರಿ ಕೊಡುವುದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

    ದರ್ಶನ್ ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನಾನು ಕಿರುತೆರೆಗೆ ಬರಬಾರದು ಎಂಬ ಯಾವುದೇ ಕಾರಣ ಇಲ್ಲ. ಜೀವನ ನಡೆಸಲು ನನಗೆ ಏನೂ ಬೇಕು ಅದನ್ನು ಭಗವಂತ ಹಾಗೂ ಅಭಿಮಾನಿಗಳು ನೀಡಿದ್ದಾರೆ. ನನಗೆ ಅಷ್ಟೇ ಸಾಕು. ಎಲ್ಲ ಬಾಚಿಕೊಳ್ಳಬೇಕು ಎಂಬ ದುರಾಸೆ ನನಗಿಲ್ಲ. ನಾನು ಎಷ್ಟು ಪ್ರೀತಿಯಿಂದ ಸಿನಿಮಾ ಮಾಡುತ್ತೇನೋ, ಹಾಗೆಯೇ ನನಗೆ ಬೇರೆ ಕೆಲಸವಿದೆ. ಅದನ್ನು ಕೂಡ ಅಷ್ಟೇ ಪ್ರೀತಿಯಿಂದ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಕೆಲವು ದಿನಗಳ ಹಿಂದೆ ದರ್ಶನ್ ಕಿರುತೆರೆಗೆ ನಿರೂಪಕರಾಗಿ ಎಂಟ್ರಿ ಕೊಡುತ್ತಿದ್ದಾರೆ ಎಂಬ ವಿಷಯ ಕೇಳಿ ಬರುತ್ತಿತ್ತು. ಖಾಸಗಿ ವಾಹಿನಿಯಲ್ಲಿ ಹೊಸದಾಗಿ ಶೋವೊಂದು ಶುರುವಾಗುತ್ತಿದ್ದು, ಈ ಕಾರ್ಯಕ್ರಮದ ನಿರೂಪಣೆಯನ್ನು ನಟ ದರ್ಶನ್ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಆದರೆ ಈಗ ಕಿರುತೆರೆಗೆ ಎಂಟ್ರಿ ಕೊಡುತ್ತಿಲ್ಲ ಎಂದು ದರ್ಶನ್ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದಾರೆ.

  • ಬಿಗ್ ಬಾಸ್ ಹೊಸ ಸೀಸನ್‍ಗೆ ಅನುಷ್ಕಾ ಶೆಟ್ಟಿ ನಿರೂಪಣೆ!

    ಬಿಗ್ ಬಾಸ್ ಹೊಸ ಸೀಸನ್‍ಗೆ ಅನುಷ್ಕಾ ಶೆಟ್ಟಿ ನಿರೂಪಣೆ!

    ಹೈದರಾಬಾದ್: ದಕ್ಷಿಣ ಭಾರತದ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ ತೆಲುಗಿನ ಬಿಗ್ ಬಾಸ್ ಸೀಸನ್ -3 ರಿಯಾಲಿಟಿ ಶೋಗೆ ನಿರೂಪಣೆ ಮಾಡುತ್ತಾರೆ ಎಂಬ ಮಾತು ಟಿ-ಟೌನ್‍ನಲ್ಲಿ ಕೇಳಿಬರುತ್ತಿದೆ.

    ಬಿಗ್ ಬಾಸ್ ಮೊದಲ ಸೀಸನ್ ನಟ ಜೂ. ಎನ್‍ಟಿಆರ್ ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು. ನಂತರ ಎರಡನೇ ಸೀಸನ್ ನಟ ನಾನಿ ನಿರೂಪಣೆ ಮಾಡಿದ್ದರು. ಈಗ ಮೂರನೇ ಸೀಸನ್‍ಗೆ ಜೂ. ಎನ್‍ಟಿಆರ್ ಅವರ ಜೊತೆ ಮಾತುಕತೆ ನಡೆಸಲಾಗಿತ್ತು. ಆದರೆ ಅವರು ರಾಜಮೌಳಿ ನಿರ್ದೇಶನದ ‘ಆರ್‍ಆರ್‍ಆರ್’ ಚಿತ್ರದಲ್ಲಿ ಬ್ಯುಸಿ ಇರುವ ಕಾರಣ ಈ ಶೋ ನಿರೂಪಣೆ ಮಾಡಲು ನಿರಾಕರಿಸಿದ್ದಾರೆ. ಇದನ್ನೂ ಓದಿ: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಸ್ಟಾರ್ ನಟಿ ಎಂಟ್ರಿ?

    ಜೂ. ಎನ್‍ಟಿಆರ್ ಅಲ್ಲದೆ ನಾಗಾರ್ಜುನ, ವೆಂಕಟೇಶ್, ರಾಣಾ ದಗ್ಗುಬಾಟಿ ಹಾಗೂ ವಿಜಯ್ ದೇವರಕೊಂಡ ಅವರನ್ನು ಬಿಗ್ ಬಾಸ್ ಸೀಸನ್ -3 ನಿರೂಪಣೆ ಮಾಡಲು ಅಪ್ರೋಚ್ ಮಾಡಲಾಗಿದೆ. ಆದರೆ ಕಾರಣಾಂತರದಿಂದ ನಟರು ಈ ಅವಕಾಶವನ್ನು ತಿರಸ್ಕರಿಸಿದ್ದಾರೆ.

    ನಟರು ನಿರೂಪಣೆ ಮಾಡಲು ಒಪ್ಪದ ಕಾರಣ ಖಾಸಗಿ ವಾಹಿನಿ ನಿರೂಪಕಿಯಿಂದ ಕಾರ್ಯಕ್ರಮವನ್ನು ನಡೆಸಿಕೊಡಲು ಪ್ಲಾನ್ ಮಾಡಿದೆ. ಹಾಗಾಗಿ ರಿಯಾಲಿಟಿ ಶೋ ತಂಡ ನಟಿ ಅನುಷ್ಕಾ ಶೆಟ್ಟಿ ಅವರಿಗೆ ನಿರೂಪಣೆ ಮಾಡಲು ಅಪ್ರೋಚ್ ಮಾಡಿದೆ ಎನ್ನಲಾಗಿದೆ. ಆದರೆ ಇದರ ಬಗ್ಗೆ ಅನುಷ್ಕಾ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

    ಮೊದಲ ಸೀಸನ್ ನಿರೂಪಣೆ ಮಾಡಿದ ಜೂ. ಎನ್‍ಟಿಆರ್ ಅವರು ಒಂದು ಸಂಚಿಕೆಗೆ 50 ಲಕ್ಷ ರೂ. ಸಂಭಾವನೆ ನೀಡಲಾಗುತ್ತಿತ್ತು ಎಂದು ಹೇಳಲಾಗಿದೆ. ಎರಡನೇ ಸೀಸನ್ ನಟ ನಾನಿ ಅವರಿಗೆ ಒಂದು ಸಂಚಿಕೆಗೆ 10 ಲಕ್ಷ ರೂ. ಸಂಭಾವನೆ ನೀಡಲಾಗುತ್ತಿತ್ತು ಎನ್ನಲಾಗಿದೆ.