Tag: hospitalised

  • ಯುಟ್ಯೂಬ್ ನೋಡಿ ಗರ್ಭಪಾತಕ್ಕೆ ಮುಂದಾದ ಯುವತಿ

    ಯುಟ್ಯೂಬ್ ನೋಡಿ ಗರ್ಭಪಾತಕ್ಕೆ ಮುಂದಾದ ಯುವತಿ

    ಮುಂಬೈ: ಹೊಸ ಮೊಬೈಲ್, ಕಾರ್, ಬೈಕ್ ಸೇರಿದಂತೆ ಎಲ್ಲ ತರಹದ ಮಾಹಿತಿ ಪಡೆಯಲು ಯುಟ್ಯೂಬ್ ಸಹಾಯ ಪಡೆದುಕೊಳ್ಳುತ್ತೇವೆ. ಆದರೆ ಇಲ್ಲೋಬ್ಬ ಯುವತಿ ಯುಟ್ಯೂಬ್ ನೋಡಿ ಗರ್ಭಪಾತ ಮಾಡಿಕೊಳ್ಳಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದ ಘಟನೆ ನಾಗ್ಪುರದ ಯಶೋಧರ ನಗರದಲ್ಲಿ ನಡೆದಿದೆ.

    25 ವರ್ಷದ ಯುವತಿಯೊಬ್ಬಳು ಯುಟ್ಯೂಬ್ ನೋಡಿ ಆಬಾರ್ಷನ್ ಮಾಡಿಕೊಳ್ಳಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಳು. ಸರಿಯಾದ ಸಮಯಕ್ಕೆ ಯುವತಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರಿಂದ ಬದುಕುಳಿದಿದ್ದಾಳೆ. ಯುಟ್ಯೂಬ್ ನೋಡಿ ಭ್ರೂಣವನ್ನು ಹೊರತೆಗೆಯಲು ಯುವತಿಗೆ ಆಕೆಯ ಗೆಳೆಯ ಸಲಹೆ ನೀಡಿದ್ದನು. ಇನಿಯನ ಮಾತು ನಂಬಿ ಅಬಾರ್ಷನ್‍ಗೆ ಮುಂದಾಗಿ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಳು. ಇದನ್ನೂ ಓದಿ:  ರಾಜ್ಯದಲ್ಲಿ ಸದ್ದಿಲ್ಲದೆ ನಡೀತಿದ್ಯಾ ಮತಾಂತರ?- ಬೆಂಗ್ಳೂರು ಸೇರಿ 5 ಕಡೆ ಮತಾಂತರ ಯತ್ನ

    ಮಹಾರಾಷ್ಟ್ರದ ನಾಗ್ಪುರ ಮೂಲದ ಯುವತಿ, 30 ವರ್ಷದ ಶೋಯೆಬ್ ಖಾನ್ ಎಂಬಾತನನ್ನು ಪ್ರೀತಿಸುತಿದ್ದಳು. ಶೋಯೆಬ್ ಖಾನ್ ಮದುವೆಯಾಗೋದಾಗಿ ನಂಬಿಸಿ 2016ರಿಂದಲೂ ಯುವತಿಯ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದ. ಗರ್ಭಿಣಿ ಎಂಬ ವಿಷಯ ತಿಳಿದು ಕೂಡಲೇ ಶೋಯೆಬ್‍ಗೆ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದಾಳೆ. ಯುವತಿ ಗರ್ಭಿಣಿ ಎಂಬ ವಿಷಯ ತಿಳಿಯುತ್ತಲೇ ಯುಟ್ಯೂಬ್ ನಲ್ಲಿರುವ ಕೆಲ ವೀಡಿಯೋಗಳ ಮೂಲಕ ಗರ್ಭಪಾತ ಹೇಗೆ ಮಾಡಿಕೊಳ್ಳಬೇಕೆಂದು ತೋರಿಸಿದ್ದಾನೆ. ನಂತರ ಔಷಧಿಯನ್ನು ಸಹ ತಂದು ಕೊಟ್ಟಿದ್ದಾನೆ. ಯುವತಿಗೆ ಗರ್ಭಪಾತ ಮಾಡಿಕೊಳ್ಳುವಂತೆ ಒತ್ತಡ ಹಾಕಿದ್ದಾನೆ. ಇದನ್ನೂ ಓದಿ:  ನನ್ನ ಕಣ್ಣಲ್ಲಿ ಜಾದೂ ಇದೆ: ರಶ್ಮಿಕಾ ಮಂದಣ್ಣ

    ಯುವತಿ ಗರ್ಭಪಾತ ಮಾಡಿಕೊಳ್ಳಲು ಮುಂದಾದಾಗ ಆಕೆಯ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದರಿಂದ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ. ಯುವತಿ ಹೇಳಿಕೆಯನ್ನಾಧರಿಸಿ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯುವಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಗುರುವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

  • ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಆಸ್ಪತ್ರೆಗೆ ದಾಖಲು

    ಬೆಂಗಳೂರು: ರಾಜ್ಯದ ಖ್ಯಾತ ಪರಿಸರ ಪ್ರೇಮಿ ಸಾಲು ಮರದ ತಿಮ್ಮಕ್ಕ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    105 ವರ್ಷ ವಯಸ್ಸಾಗಿರೋ ಇವರಿಗೆ ಉಸಿರಾಟದ ತೊಂದರೆಯಿತ್ತು. ಹೀಗಾಗಿ ಅವರನ್ನು ಜಯನಗರದ ಅಪ್ಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವು ತಿಂಗಳ ಹಿಂದಷ್ಟೇ ಅನಾರೋಗ್ಯ ಸಮಸ್ಯೆಯಿಂದಾಗಿ ಚಿಕಿತ್ಸೆ ಪಡೆದು ಡಿಸ್ಜಾರ್ಜ್ ಆಗಿದ್ದರು.

    ಇದೀಗ ಮತ್ತೆ ಉಸಿರಾಟದ ತೊಂದರೆ ಹೆಚ್ಚಾಗಿ ಕಂಡುಬಂದಿದ್ದು, ಇದೇ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.