Tag: hospital. Public tow

  • ಗರ್ಭಿಣಿಯಾದ್ರೂ ಸೆಕ್ಸ್‌ಗೆ  ಒತ್ತಾಯ- ಊಟದಲ್ಲಿ ವಿಷ ಬೆರೆಸಿ ಪತಿಯ ಕೊಂದ ಪತ್ನಿ

    ಗರ್ಭಿಣಿಯಾದ್ರೂ ಸೆಕ್ಸ್‌ಗೆ  ಒತ್ತಾಯ- ಊಟದಲ್ಲಿ ವಿಷ ಬೆರೆಸಿ ಪತಿಯ ಕೊಂದ ಪತ್ನಿ

    ಚೆನ್ನೈ: ಗರ್ಭಿಣಿ ಪತ್ನಿಗೆ ಪ್ರತಿನಿತ್ಯ ಸೆಕ್ಸ್‌ಗೆ ಒತ್ತಾಯಿಸುತ್ತಿದ್ದ ಪತಿಯನ್ನು ಪತ್ನಿ ವಿಷಕೊಟ್ಟು ಕೊಂದಿರುವ ಘಟನೆ ತಮಿಳುನಾಡಿನ ಪೆರಿಯಮೋಲಪಾಲಯಂನಲ್ಲಿ ನಡೆದಿದೆ.

    ಮೈಥಿಲಿ(21) ಪತಿಯನ್ನು ಕೊಂದಿರುವ ಮಹಿಳೆ. ಪತ್ನಿಯಿಂದ ಕೊಲೆಯಾದವನನ್ನು ನಂದ ಕುಮಾರ್ ಎಂದು ಗುರುತಿಸಲಾಗಿದೆ. ನಾನೇ ನನ್ನ ಪತಿಯನ್ನು ಕೊಲೆ ಮಾಡಿದ್ದೇನೆ. ನಾನು ಐದು ತಿಂಗಳ ಗರ್ಭಿಣಿ ಎಂದು ಮೈಥಿಲಿ ಪೊಲೀಸರ ಮುಂದೆ ಹೇಳಿದ್ದಾಳೆ.

    ಕಳೆದ 8 ತಿಂಗಳ ಹಿಂದೆ ನಂದ ಕುಮಾರ್‍ನನ್ನು ಮೈಥಿಲಿ ಮದುವೆಯಾಗಿದ್ದಳು. ಈತನಿಗೆ 2 ನೇ ಮದುವೆಯಾಗಿತ್ತು. ದಾಂಪತ್ಯ ಜೀವನ ಚೆನ್ನಾಗಿಯೇ ಇದ್ದು, ಮೈಥಿಲಿ 5 ತಿಂಗಳ  ಗರ್ಭಿಣಿಯಾಗಿದ್ದಳು. ಪತ್ನಿ ಗರ್ಭಿಣಿಯಾಗಿದ್ದರೂ ನಂದ ಕುಮಾರ್ ಸೆಕ್ಸ್‌ಗಾಗಿ ಪ್ರತಿನಿತ್ಯ ಆಕೆಯನ್ನು ಪೀಡಿಸುತ್ತಿದ್ದನು.

    ಈ ವಿಚಾರವಾಗಿ ಮನನೊಂದ ಮೈಥಿಲಿ ಊಟದಲ್ಲಿ ಕೀಟನಾಶಕ ಹಾಕಿ ಬಡಿಸಿದ್ದಾಳೆ. ವಿಷ ಬೆರೆಸಿದ ಊಟವನ್ನು ತಿಂದು ಅಸ್ವಸ್ಥನಾದಗಿದ್ದ ನಂದ ಕುಮಾರ್‍ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸುಮಾರು 15 ದಿನಗಳ ಕಾಲ ಚಿಕಿತ್ಸೆ ಪಡೆದ ನಂದ ಆಸ್ಪತ್ರೆಯಲ್ಲಿ ಕೊನೆಯುಸಿರೆಳದಿದ್ದಾನೆ. ನಾನೇ ನನ್ನ ಪತಿಯನ್ನು ವಿಷವಿಟ್ಟು ಕೊಂದಿದ್ದೇನೆ ಒಂದು ಕಾರಣವನ್ನು ಹೇಳಿ ಮೈಥಿಲಿ ತನ್ನ ತಪ್ಪನ್ನು ಪೊಲೀಸರ ಮುಂದೆ ಒಪ್ಪಕೊಂಡಿದ್ದಾಳೆ.