Tag: Hospital Bill

  • ಬೆಂಗಳೂರು | ಒಂದು ಗುಂಡಿಗೆ ಬಿದ್ದಿದ್ದಕ್ಕೆ ಒಂದೂವರೆ ಲಕ್ಷ ಖರ್ಚು

    ಬೆಂಗಳೂರು | ಒಂದು ಗುಂಡಿಗೆ ಬಿದ್ದಿದ್ದಕ್ಕೆ ಒಂದೂವರೆ ಲಕ್ಷ ಖರ್ಚು

    – ಗುಂಡಿ ಮುಚ್ಚಿ ಜನ್ರ ಜೀವ ಉಳಿಸಿ; ಗಾಯಳು ಕುಟುಂಬಸ್ಥರ ಮನವಿ

    ಬೆಂಗಳೂರು: ನಗರದಲ್ಲಿ ಗುಂಡಿಗಳ ಕಾರುಬಾರು ಹೆಚ್ಚಾಗ್ತಿದೆ. ನಿತ್ಯ ಗುಂಡಿಗಳಿಂದ (Pothole) ವಾಹನ ಸವಾರರು ನರಕ ಅನುಭವಿಸ್ತಿದ್ದಾರೆ. ಮಹಾದೇವಪುರ (Mahadevpura) ರಸ್ತೆ ಗುಂಡಿಗೆ ಬಿದ್ದ ಮಹಿಳೆ ಕುಟುಂಬಸ್ಥರು ಒಂದೂವರೆ ಲಕ್ಷ ರೂ. ಆಸ್ಪತ್ರೆ ಬಿಲ್ ಪಾವತಿಸಿದ್ದಾರೆ.

    ಮಂಜುಳಾ (39) ಎಂಬ ಮಹಿಳೆ ರಸ್ತೆ ಗುಂಡಿಗೆ ಬಿದ್ದು, ಪ್ರಜ್ಞೆ ಕಳೆದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಒಂದು ಗುಂಡಿಯಿಂದ ಒಂದೂವರೆ ಲಕ್ಷ ರೂ. ಆಸ್ಪತ್ರೆ ಬಿಲ್ ಪಾವತಿಸಿ ನೊಂದಿರುವ ಕುಟುಂಬಸ್ಥರು ದಯವಿಟ್ಟು ಗುಂಡಿಗಳನ್ನು ಮುಚ್ಚಿ, ಜನ್ರ ಜೀವಗಳನ್ನ ಉಳಿಸಿ ಅಂತ ಸಿಎಂ, ಡಿಸಿಎಂಗೆ ಮನವಿ ಮಾಡಿದ್ದಾರೆ.

    ರ‍್ಯಾಪಿಡೋ ಬೈಕ್ ಬುಕ್ ಮಾಡಿಕೊಂಡು ಮಂಜುಳಾ ಪ್ರಯಾಣ ಮಾಡ್ತಿದ್ರು. ಕೆ.ಆರ್ ಪುರಂ ರೈಲ್ವೆ ಸ್ಟೇಷನ್ ಕಡೆಯಿಂದ ಕಾರ್ತಿಕ ನಗರ ಕಡೆ ತೆರಳುವ ವೇಳೆ ಗುಂಡಿಯಲ್ಲಿ ಬೈಕ್ ಬಿದ್ದಿದೆ. ಈ ವೇಳೆ ಹಿಂದೆ ಕೂತಿದ್ದ ಮಂಜುಳಾ ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ದಿದ್ದು, ತಲೆಗೆ ತೀವ್ರ ಪೆಟ್ಟಾಗಿತ್ತು. ಇದನ್ನೂ ಓದಿ: ರಸ್ತೆ ಗುಂಡಿ ಮುಚ್ಚದ ಸರ್ಕಾರದ ವಿರುದ್ಧ ಸಿಡಿದ ಕೇಸರಿ ಪಡೆ – ರಾಜ್ಯಾದ್ಯಂತ ರಸ್ತೆ ತಡೆ ಪ್ರತಿಭಟನೆ

    ಕೂಡಲೇ ರ‍್ಯಾಪಿಡೋ ಬೈಕ್ ಚಾಲಕ ಧರ್ಮಿಚಂದ ಶಿರ್ವಿ ಹಾಗೂ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆಯ ರಕ್ತ ಹೆಪ್ಪುಗಟ್ಟಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಮಹಿಳೆ, ಒಂದು ವಾರದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮಹಿಳೆಯು ಮನೆಯವರನ್ನೇ ಸರಿಯಾಗಿ ಗುರುತು ಹಿಡಿಯತ್ತಿಲ್ಲ ಎನ್ನುತ್ತಿದ್ದಾರೆ.

    ಗುಂಡಿಯಿಂದಲೇ ಬಿದ್ದು ಇಷ್ಟೆಲ್ಲಾ ಅವತಾರಗಳು ಆಗಿದೆ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ ಮಹಾದೇವಪುರ ಪೊಲೀಸರು ರ‍್ಯಾಪಿಡೋ ಚಾಲಕನ ನಿರ್ಲಕ್ಷ್ಯ ಹಾಗೂ ವೇಗದ ಚಾಲನೆಯಿಂದ ಮಹಿಳೆ ಕೆಳಗೆ ಬಿದ್ದಿದ್ದಾರೆಂದು ಹೇಳಿಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ.

  • ಕೊರೊನಾ ಸಂಕಷ್ಟದಲ್ಲಿ ಲೂಟಿಗಿಳಿದ ಖಾಸಗಿ ಆಸ್ಪತ್ರೆ

    ಕೊರೊನಾ ಸಂಕಷ್ಟದಲ್ಲಿ ಲೂಟಿಗಿಳಿದ ಖಾಸಗಿ ಆಸ್ಪತ್ರೆ

    -ಖಾಸಗಿ ಆಸ್ಪತ್ರೆಯ ಧನದಾಹದ ಬಿಗ್ ಎಕ್ಸ್ ಪೋಸ್

    ಬೆಂಗಳೂರು: ರಾಜಧಾನಿಯಲ್ಲಿ ಬೆಡ್ ಗಳಿದ್ರೂ ಖಾಸಗಿ ಆಸ್ಪತ್ರೆಗಳು ಸುಳ್ಳು ಹೇಳುತ್ತಿವೆಯಾ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕೊರೊನಾ ಸಮಯದಲ್ಲಿ ಕೆಲ ಖಾಸಗಿ ಆಸ್ಪತ್ರೆಗಳ ದುಡ್ಡು ಮಾಡೋಕೆ ನಿಂತಿವೆ. ಪಬ್ಲಿಕ್ ಟಿವಿಯಲ್ಲಿ ಖಾಸಗಿ ಆಸ್ಪತ್ರೆಗಳ ದಂಧೆ ಬಯಲಾಗಿದೆ. ಖಾಸಗಿ ಆಸ್ಪತ್ರೆಗಳು ಹೇಳುವ ಹಣ ಕೇಳಿದ್ರೆ ರೋಗಿ ಗುಣಮುಖರಾಗಿ ಸಾಲ ಹೊತ್ತುಕೊಂಡು ಹೊರ ಬರುವ ಪರಿಸ್ಥಿತಿ ನಿರ್ಮಾಣವಾಗುತ್ತೆ.

    ಒಂದು ದಿನದ ಬೆಡ್‍ಗೆ ಖಾಸಗಿ ಆಸ್ಪತ್ರೆಗಳು 70 ಸಾವಿರ ರೂ. ಬಿಲ್ ಮಾಡುತ್ತಿವೆ. ರೋಗಿಯ ಸಂಬಂಧಿಯೊಬ್ಬರು ಖಾಸಗಿ ಆಸ್ಪತ್ರೆ ಮಾತನಾಡಿದ ಆಡಿಯೋ ಕ್ಲಿಪ್ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಮೊದಲಿಗೆ ಬೆಡ್ ಇಲ್ಲ ಅಂತ ಹೇಳುವ ಆಸ್ಪತ್ರೆ, ನಗದು ಬಿಲ್ ನೀಡುತ್ತೇವೆ ಎಂದಾಗ ಬಂದು ದಾಖಲಾಗಿ ಅಂತ ಹೇಳುತ್ತೆ. ತದನಂತರ ಮುಂಗಡವಾಗಿಯೇ ಮೂರುವರೆ ಲಕ್ಷ ನೀಡುವಂತೆ ಆಸ್ಪತ್ರೆ ಸಿಬ್ಬಂದಿ ಡಿಮ್ಯಾಂಡ್ ಮಾಡುತ್ತಾರೆ. ರೋಗಿಯ ಸಂಬಂಧಿ ಮತ್ತು ಖಾಸಗಿ ಆಸ್ಪತ್ರೆಯ ಸಂಭಾಷಣೆ ಹೀಗಿದೆ.

    ರೋಗಿಯ ಕಡೆಯವರು – ಕೋವಿಡ್ ವಾರ್ಡ್ ಬೆಡ್ ಇದ್ಯಾ?
    ಖಾಸಗಿ ಆಸ್ಪತ್ರೆ ಸಿಬ್ಬಂದಿ – ಪೇಷೆಂಟ್ ಕಂಡಿಷನ್ ಹೇಗಿದೆ ನಾರ್ಮಲ್ ಇದ್ಯಾ? ಆಕ್ಸಿಜನ್ ಬೇಕಾ..?
    ರೋಗಿಯ ಕಡೆಯವರು – ಆಕ್ಸಿಜನ್ ಬೇಡ. ಆದ್ರೇ ಸ್ವಲ್ಪ ಪ್ಯಾನಿಕ್ ಆಗಿದ್ದಾರೆ
    ಖಾಸಗಿ ಆಸ್ಪತ್ರೆ ಸಿಬ್ಬಂದಿ- ಹೌದಾ …? ಸಿರೀಯಸ್ ಆಗಿಲ್ವಲ್ಲ?
    ರೋಗಿಯ ಕಡೆಯವರು- ಇಲ್ಲ.. ಎಷ್ಟಾಗುತ್ತೆ ಬೆಡ್…?
    ಖಾಸಗಿ ಆಸ್ಪತ್ರೆ ಸಿಬ್ಬಂದಿ- ಅದೇ ನಾರ್ಮಲ್ ಆಕ್ಸಿಜನ್ ಒಂದು, ವೆಂಟಿಲೇಟರ್ ಇದೆ: ಪೇಷೆಂಟ್ ಕಂಡೀಷನ್ ಮೇಲೆ ಡಿಪೆಂಡ್ ಆಗುತ್ತೆ.
    ರೋಗಿಯ ಕಡೆಯವರು – ಇದ್ಯಾ….?

    ಖಾಸಗಿ ಆಸ್ಪತ್ರೆ ಸಿಬ್ಬಂದಿ- ಇದೆ… ಇರಿ ಇನ್ನೊಂದು ಲೈನ್ ಗೆ ಕನೆಕ್ಟ್ ಮಾಡ್ತೀನಿ..
    ರೋಗಿಯ ಕಡೆಯವರು – ಸರ್… ನಾರ್ಮಲ್ ಬೆಡ್ ಎಷ್ಟಾಗುತ್ತೆ…?
    ಖಾಸಗಿ ಆಸ್ಪತ್ರೆ ಸಿಬ್ಬಂದಿ– ಕೋವಿಡ್ ಪೇಷೆಂಟಾ…?
    ರೋಗಿಯ ಕಡೆಯವರು – ಹೌದು
    ಖಾಸಗಿ ಆಸ್ಪತ್ರೆ ಸಿಬ್ಬಂದಿ– ಇಲ್ಲ… ಕೋವಿಡ್ ಪೇಷೆಂಟ್‍ಗೆ ಬೆಡ್ ಇಲ್ಲ ಯಾರು ಹೇಳಿದ್ದು?
    ರೋಗಿಯ ಕಡೆಯವರು – ಈಗ ಹೇಳಿದ್ರಲ್ಲ… ಕಾಲ್ ಟ್ರಾನ್ಸ್ ಫರ್ ಮಾಡಿರೋರು
    ಖಾಸಗಿ ಆಸ್ಪತ್ರೆ ಸಿಬ್ಬಂದಿ– ಏನ್ ನಿಮ್ಮ ಹತ್ರ ಇನ್ಶೂರೆನ್ಸ್ ಇರೋದಾ ಕ್ಯಾಶ್?
    ರೋಗಿಯ ಕಡೆಯವರು – ಕ್ಯಾಶ್

    ಖಾಸಗಿ ಆಸ್ಪತ್ರೆ ಸಿಬ್ಬಂದಿ– ಆಕ್ಸಿಜನ್ ಬೇಕಾ
    ರೋಗಿಯ ಕಡೆಯವರು – ಬೇಡ. ನಾರ್ಮಲ್ ಬೆಡ್ ಸಾಕು.
    ಖಾಸಗಿ ಆಸ್ಪತ್ರೆ ಸಿಬ್ಬಂದಿ– ಆಯ್ತು ಎರಡು ನಿಮಿಷ ಬಿಟ್ಟು ಕಾಲ್ ಮಾಡಿ ಹೇಳ್ತೀವಿ
    ರೋಗಿಯ ಕಡೆಯವರು – ಎರಡು ನಿಮಿಷ ಬಿಟ್ಟು ಕಾಲ್ ಮಾಡೋಕೆ ಹೇಳಿದ್ರಲ್ಲ
    ಖಾಸಗಿ ಆಸ್ಪತ್ರೆ ಸಿಬ್ಬಂದಿ– ಹಾ… ಜನರಲ್ ವಾರ್ಡ್ ಅಂತಾ ಹೇಳಿದ್ರಲ್ಲ ನೀವು
    ರೋಗಿಯ ಕಡೆಯವರು – ಹೌದು ಬ್ರದರ್
    ಖಾಸಗಿ ಆಸ್ಪತ್ರೆ ಸಿಬ್ಬಂದಿ– ಎಲ್ಲಿಂದ ಬರ್ತಾ ಇರೋದು…?
    ರೋಗಿಯ ಕಡೆಯವರು – ಅಭಿನವ್ ಆಸ್ಪತ್ರೆ ನಲ್ಲಿದ್ದಾರೆ. ಅಲ್ಲಿ ಬೆಡ್ ಇಲ್ಲ ಅದಕೆ ಶಿಫ್ಟ್

    ಖಾಸಗಿ ಆಸ್ಪತ್ರೆ ಸಿಬ್ಬಂದಿ– ಪ್ರತಿದಿನ ಬೆಡ್ ಚಾರ್ಜ್ ಬಂದು 75 ಸಾವಿರ ಆಗುತ್ತೆ.
    ರೋಗಿಯ ಕಡೆಯವರು – 75 ಸಾವಿರ ಆಗುತ್ತಾ…?
    ಖಾಸಗಿ ಆಸ್ಪತ್ರೆ ಸಿಬ್ಬಂದಿ– ಹಾ 75 ಆಗುತ್ತೆ .ಪ್ರತಿ ದಿನ ಬೆಡ್ ಚಾರ್ಜ್ ನೀವು ಈಗ್ಲೇ ಆಟ್ ಲೀಸ್ಟ್ 4 ಲಕ್ಷ ಅಡ್ವಾನ್ಸ್ ಮಾಡಬೇಕು.
    ರೋಗಿಯ ಕಡೆಯವರು – ಓಕೆ…. ಸರಿ ಟೂ ಮಿನಿಟ್ ಹೇಳ್ತೀನಿ
    ಖಾಸಗಿ ಆಸ್ಪತ್ರೆ ಸಿಬ್ಬಂದಿ: ಇದು ಬರೀ ನಾನು ಹೇಳ್ತಿರೋದು ಬೆಡ್ ಚಾರ್ಜ್ ಮಾತ್ರ. ಇಂಜೆಕ್ಷನ್ ಸಪರೇಟ್ ನೀವು ನೋಡ್ಕೇಬೇಕು. ಡಾಕ್ಟರ್ ಚಾರ್ಜ್. ಬೆಡ್ ಚಾರ್ಜ್ ಇನ್ ಕ್ಲ್ಯೂಡ್ ಆಗುತ್ತೆ.  ಆದ್ರೇ ಲ್ಯಾಬ್ ಇನ್ವೇಸ್ಟಿಗೇಷನ್ ಫಾರ್ಮಸಿ ಸಪರೇಟ್..
    ರೋಗಿಯ ಕಡೆಯವರು – ಓಕೆ….ಫ್ಯಾಮಿಲಿ ಜೊತೆ ಮಾತಾನಾಡಿ ಹೇಳ್ತೀನಿ..

    ರೋಗಿ ದಾಖಲಾಗುವ ಮೊದಲೇ ವಿಮೆ ಇದೆಯಾ? ಬಿಬಿಎಂಪಿ ಖೋಟಾನಾ ಎಂಬುದನ್ನ ಮೊದಲೇ ಖಚಿತ ಪಡಿಸಿಕೊಳ್ಳುತ್ತಾರೆ. ನಗದು ನೀಡಲು ರೋಗಿಗಳು ಮುಂದಾದ್ರೆ ಮಾತ್ರ ಬೆಡ್ ಸಿಗುತ್ತೆ. ಆದ್ಗರೆ ಸರ್ಕಾರ ಕೋವಿಡ್ ರೋಗಿಗೆ ಚಿಕಿತ್ಸೆ ನೀಡಲು ದರ ನಿಗದಿ ಮಾಡಿದೆ. ಆದ್ರೆ ಆ ದರಗಳಿಗೆ ಖಾಸಗಿ ಆಸ್ಪತ್ರೆಗಳು ಡೋಂಟ್ ಕೇರ್ ಮಾಡುತ್ತಿವೆ. ಇನ್ನಾದ್ರೂ ಸರ್ಕಾರ ಎಚ್ಚತ್ತುಕೊಳ್ಳುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.