ಬಳ್ಳಾರಿ: ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ವಿಜಯನಗರ (Vijayanagar) ಜಿಲ್ಲೆಯ ಹೊಸಪೇಟೆ (Hosapete) ನಗರದ ಸಿದ್ಧಲಿಂಗಪ್ಪ ಕ್ರಾಸ್ ಬಳಿ ನಡೆದಿದೆ.
ಕುಡಿದ ಮತ್ತಿನಲ್ಲಿ ಸಣ್ಣ ವಿಚಾರಕ್ಕೆ ಸ್ನೇಹಿತರ ನಡುವೆ ಜಗಳ ಆರಂಭವಾಗಿತ್ತು. ಜಗಳ ವಿಕೋಪಕ್ಕೆ ತಿರುಗಿ ಶಾಂತಕುಮಾರನ ತಲೆ ಭಾಗಕ್ಕೆ ಹುಲಿಗೇಶ ಬಲವಾಗಿ ಹೊಡೆದಿದ್ದ. ಆರೋಪಿ ಹುಲಿಗೇಶ ನಡುರಸ್ತೆಯಲ್ಲಿಯೇ ಸ್ನೇಹಿತ ಶಾಂತಕುಮಾರನನ್ನು ಹೊಡೆದಿದ್ದ. ಕೈಯಿಂದ ತಲೆಭಾಗಕ್ಕೆ ಬಲವಾಗಿ ಏಟು ಬಿದ್ದ ಹಿನ್ನೆಲೆ ಶಾಂತಕುಮಾರ್ ತೀವ್ರ ಅಸ್ವಸ್ಥನಾಗಿದ್ದ.
ತಕ್ಷಣವೇ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಕೊಪ್ಪಳ (Koppala) ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಇನ್ನೂ ಆರೋಪಿ ಹುಲಿಗೇಶನನ್ನ ಹೊಸಪೇಟೆ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸ್ಥಳಕ್ಕೆ ಹೊಸಪೇಟೆ ಡಿವೈಎಸ್ಪಿ, ಸಿಪಿಐ ಭೇಟಿ, ಪರಿಶೀಲನೆ ನಡೆಸಿದ್ದು, ಹೊಸಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ತಿರುಮಲನ ಸನ್ನಿಧಿಗೆ 2 ಟ್ರಕ್‌ಗಳಲ್ಲಿ ಕೆಎಂಎಫ್ ಶುದ್ಧ ನಂದಿನಿ ತುಪ್ಪ ಸರಬರಾಜು
ವಿಜಯನಗರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಎಸಿಯ ವಿಷಾನಿಲ ಸೋರಿಕೆಯಾಗಿದ್ದು, ನಾಲ್ಕು ಜನ ಮಲಗಿದ್ದಲ್ಲೇ ಮೃತಪಟ್ಟಿರುವ ಘಟನೆ ವಿಜಯನಗರದ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿಯ ರಾಘವೇಂದ್ರ ಶೆಟ್ಟಿ ಎಂಬುವವರ ಮನೆಯಲ್ಲಿ ತಡರಾತ್ರಿ ಸಂಭವಿಸಿದೆ.
ರಾಘವೇಂದ್ರ ಶೆಟ್ಟಿ ಎಂಬವರ ಮನೆಯಲ್ಲಿ ಅವಘಡ ಸಂಭವಿಸಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಎಸಿಯ ವಿಷಾನಿಲ ಸೋರಿಕೆಯಾಗಿದ್ದು, ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಈ ಅವಘಡದಲ್ಲಿ ವೆಂಕಟ್ ಪ್ರಶಾಂತ್ (42), ಪತ್ನಿ ಡಿ.ಚಂದ್ರಕಲಾ (38), ಮಕ್ಕಳಾದ ಎಚ್.ಎ.ಅದ್ವಿಕ್(16), ಪ್ರೇರಣಾ,(8) ಹೊರಬರಲಾಗದೇ ಮೃತಪಟ್ಟಿದ್ದಾರೆ. ಮೃತ ದೇಹಗಳನ್ನು ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: 2 ಕೋಟಿ ದರೋಡೆ ಕೇಸ್ – ಪತ್ನಿ ಸಾಲ ತೀರಿಸಲು ಕನ್ನ ಹಾಕಿದ ಇಬ್ಬರು ಪತ್ನಿಯರ ಮುದ್ದಿನ ಗಂಡ
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಎಸಿಯಲ್ಲಿ ಸೋರಿಕೆಯೊಗಿ ಸ್ಫೋಟ ಸಂಭವಿಸಿದೆ. ತಡರಾತ್ರಿ ಹೊತ್ತು ನಿದ್ದೆ ಮಾಡುತ್ತಿದ್ದ ವೇಳೆ ಎಸಿ ಸ್ಫೋಟಗೊಂಡು ಬೆಂಕಿ ಧಗಧಗನೆ ಹೊತ್ತಿ ಉರಿದು ಇಡೀ ಮನೆ ಆವರಿಸಿದ್ದರಿಂದ ದಂಪತಿ ಮತ್ತು ಮಕ್ಕಳು ಹೊರಬರಲಾಗದೆ ಸಜೀವ ದಹನಗೊಂಡಿದ್ದಾರೆ.
ಇಷ್ಟಾದರು ಅಗ್ನಿಯ ರೌದ್ರಾವತಾರ ಮತ್ತೆ ಮುಂದುವರಿದಿದ್ದು, ಎಸಿಯ ವೈರ್ ಮತ್ತು ಮನೆಯ ವೈರಿಂಗ್ ಮೂಲಕ ಮತ್ತೊಮ್ಮೆ ಬೆಂಕಿಯ ಕಿಡಿ ಹೊತ್ತಿಕೊಂಡಿದೆ. ಸ್ಥಳೀಯರು ಮತ್ತು ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ. ಇದನ್ನೂ ಓದಿ: ಮದ್ಯದ ಬಾಟಲಿಯಿಂದ ಸಿಕ್ಕಿ ಬಿದ್ರು 2 ಕೋಟಿ ಕದ್ದ ಖದೀಮರು
ಈ ಸಂಬಂಧ ಮರಿಯಮ್ಮನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ಬಗ್ಗೆ ಎಲ್ಲಾ ಕೋನಗಳಿಂದ ತನಿಖೆ ನಡೆಸಲಾಗುತ್ತಿದೆ. ಕುಟುಂಬದಲ್ಲಿ ಸ್ವಲ್ಪ ವೈಮನಸ್ಸು, ವಿವಾದಗಳಿದ್ದು ತೆಗೆದುಕೊಂಡ ಸಾಲ ಮರುಪಾವತಿ ಮಾಡಿರಲಿಲ್ಲ, ಆ ಬಗ್ಗೆ ಕೂಡ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೀವ ಉಳಿಸುತ್ತಿತ್ತು ಫೋನ್ ಕಾಲ್: ಘಟನೆ ಸಂಬಂಧ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ರಾಘವೇಂದ್ರ ಶೆಟ್ಟಿ, ಮನೆಯಲ್ಲಿ ಎಲ್ಲರೂ ಮಲಗಿದ್ದ ವೇಳೆ ಬೆಂಕಿ ಕಾಣಿಸಿಕೊಂಡಿದೆ. ನಾವು ಕೆಳ ಮನೆಯಲ್ಲಿ ಮಲಗಿದ್ದು, ಮಗ, ಸೊಸೆ ಹಾಗೂ ಇಬ್ಬರು ಮೊಮ್ಮಕ್ಕಳು ಮಹಡಿಯಲ್ಲಿ ಮಲಗಿದ್ದರು. ಈ ವೇಳೆ ಬೆಂಕಿ ಕಾಣಿಸಿಕೊಂಡಾಗ, ನಾನು ಫೋನ್‌ಕಾಲ್ ಮಾಡಿ ಮಗನನ್ನು ಎಬ್ಬಿಸಲು ಪ್ರಯತ್ನಿಸಿದೆ. ಆದರೆ ಮಗ ಫೋನ್ ತೆಗೆಯಲೇ ಇಲ್ಲ. ನಾವು ಹೊರಬಂದು ಬಿಟ್ಟೆವು. ಮಹಡಿ ಮೇಲಿನ ರೂಂ ಒಳಗಡೆಯಿಂದ ಲಾಕ್ ಆಗಿದ್ದರಿಂದ ಅವರು ಗಾಬರಿಯಿಂದ ಹೊರ ಬರಲು ಆಗಲಿಲ್ಲ. ಇದರಿಂದಾಗಿ ಅವಘಡ ಸಂಭವಿಸಿದ್ದು, ಈಗ ಮನೆಯಲ್ಲಿ ನೀರವ ಮೌನ ತುಂಬಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ನಡುಬೀದಿಯಲ್ಲೇ 25 ವರ್ಷದ ಮಗನಿಗೆ ಬೆಂಕಿ ಹಚ್ಚಿದ ತಂದೆ: ಸಾವು-ಬದುಕಿನ ನಡ್ವೆ ಹೋರಾಡ್ತಿದ್ದಾಗ ಅರ್ಪಿತ್ ಹೇಳಿದ್ದೇನು..?
ರಾಘವೇಂದ್ರ ಅವರಿಗೆ ಮತ್ತೆ ಶಾಕ್: ಘಟನೆಯಲ್ಲಿ ಈಗಾಗಲೇ ಮಗ ಸೊಸೆ, ಮೊಮ್ಮಕ್ಕಳನ್ನು ಕಳೆದುಕೊಂಡಿರುವ ರಾಘವೇಂದ್ರ ಶೆಟ್ಟಿ ಅವರಿಗೆ ಘಟನೆ ಮಾಸುವ ಮುನ್ನವೇ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಂಗಡಿಯಲ್ಲಿ ಕಾಣಿಸಿಕೊಂಡ ದಟ್ಟ ಹೊಗೆಯನ್ನು ಗಮನಿಸಿ ಸ್ಥಳೀಯರೇ ಬೆಂಕಿ ನಂದಿಸಿದ್ದಾರೆ.
ವಿಜಯನಗರ: ಜಿಲ್ಲೆಯ ಹೊಸಪೇಟೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಒಂದೇ ಕಾಲಿನಲ್ಲಿ 9 ಬೆರಳವುಳ್ಳ ಗಂಡು ಮಗು ಜನಿಸಿದೆ. ಹೊಸಪೇಟೆ ಮೂಲದ ಮಹಿಳೆಗೆ ಇಂದು ಜನಿಸಿದ ಮಗುವಿನ ಬಲಗಾಲಿನಲ್ಲಿ ಒಂಬತ್ತು ಬೆರಳುಗಳಿದ್ದು ಅಚ್ಚರಿಗೆ ಕಾರಣವಾಗಿದೆ.
ಗಂಡು ಮಗುವಿಗೆ ಜನ್ಮ ನೀಡಿದ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಎಡಗಾಲಿನಲ್ಲಿ ಸಾಮಾನ್ಯವಾಗಿ ಐದು ಬೆರಳುಗಳಿದ್ದು ಎಡಗಾಲಿಗೆ ಮಾತ್ರ ಒಂಬತ್ತು ಬೆರಳುಗಳಿವೆ. ಆದರೆ ಸಿಜರೀನ್ ಮಾಡುವ ಮೂಲಕ ಹೆರಿಗೆಯನ್ನು ಮಾಡಿಸಲಾಗಿದೆ. ತಾಯಿ ಹೊಸಪೇಟೆ ತಾಲೂಕಿನ ನಿವಾಸಿಗಳಾಗಿದ್ದಾರೆ. ಆದರೆ ತಾಯಿ ಹೆಸರು ಹಾಗೂ ವಿಳಾಸವನ್ನು ಬಹಿರಂಗಪಡಿಸಲು ಕುಟುಂಬಸ್ಥರು ಒಪ್ಪಿಲ್ಲ.
ಜಗತ್ತಿನಲ್ಲಿ 9 ಬೆರಳುಗಳುಳ್ಳ ಮಕ್ಕಳು ಜನಿಸುವುದು ತುಂಬಾ ಅಪರೂಪ. ಒಂಬತ್ತು ಬೆರಳುವುಳ್ಳ ಮಗು ಜನ್ಮತಾಳುವುದು ತೀರಾ ಕಡಿಮೆ. ಅಲ್ಲದೇ ಬೆರಳು ಇರುವುದು ಮುಂಚಿತವಾಗಿ ತಿಳಿಯುವುದಿಲ್ಲ. ಜನನವಾದ ಬಳಿಕ ಅದು ತಿಳಿಯಲಿದೆ ಎನ್ನುತ್ತಾರೆ ವೈದ್ಯರು.
ಬಳ್ಳಾರಿ: ಕಳೆದ 41 ದಿನಗಳಿಂದ ಮದ್ಯಕ್ಕಾಗಿ ಕಾದು ಕುಳಿತಿದ್ದ ಜಿಲ್ಲೆಯ ಹೊಸಪೇಟೆ ನಗರದ ನಿವಾಸಿಗಳಿಗೆ ನಿರಾಶೆ ಎದುರಾಗಿದೆ. ಕೊರೊನಾ ಹರಡುವಿಕೆಯ ಹಿನ್ನೆಲೆಯಲ್ಲಿ ಲಾಕ್‍ಡೌನ್ ಮಾಡಿದ್ದ ಸರ್ಕಾರ ಸದ್ಯ ಕೆಲ ಸಡಿಲಿಕೆಯನ್ನು ಜಾರಿ ಮಾಡಿದೆ. ಲಾಕ್‍ಡೌನ್ ಜಾರಿ ಇದ್ದರೂ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿತ್ತು. ಆದರೆ ಜಿಲ್ಲೆಯ ಹೊಸಪೇಟೆ ನಗರವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಿರುವುದರಿಂದ ಮದ್ಯ ಪ್ರಿಯಯರು ನಿರಾಸೆ ಅನುಭವಿಸಿದ್ದಾರೆ.
ಹಳದಿ ವಲಯದಲ್ಲಿರುವ ಜಿಲ್ಲೆಯ ಹೊಸಪೇಟೆ ನಗರ ಹೊರತುಪಡಿಸಿ ಉಳಿದ ಭಾಗಗಳಲ್ಲಿ ಮದ್ಯ ಮಾರಾಟ ಜೋರಾಗಿದೆ. ಆದರೆ ಹೊಸಪೇಟೆ ನಗರದಲ್ಲಿ ಮಾತ್ರ ಎಣ್ಣೆ ಮಾರಾಟಕ್ಕೆ ಅವಕಾಶ ನೀಡಿಲ್ಲ. ನಗರವನ್ನು ಸಂಪೂರ್ಣವಾಗಿ ಕಂಟೈನ್ಮೆಂಟ್ ಝೋನ್ ಮಾಡಿಲಾಗಿರುವ ಕಾರಣ ಮದ್ಯ ಮಾರಾಟ ಮಾಡಲು ನಿರಾಕರಿಸಲಾಗಿದೆ.
ಇತ್ತ ಮದ್ಯ ದಂಗಡಿ ತೆರೆಯಲಿದೆ ಎಂದು ಭಾವಿಸಿದ್ದ ಹಲವರು ಬೆಳಿಗ್ಗೆ ಇಂದಲೇ ಹೊಸಪೇಟೆ ನಗರದಲ್ಲಿರುವ ಮದ್ಯದಂಗಡಿ ಎದುರು ಕಾದು ಕುಳಿತ್ತಿದ್ದರು. ಆದರೆ ಶಾಪ್ ಮಾತ್ರ ಓಪನ್ ಆಗಲೇ ಇಲ್ಲಾ. ಪರಿಣಾಮ ಅಂಗಡಿಯ ಎದುರು ಕಾದು ಕಾದು ಸುಸ್ತಾದ ಜನ ಸರ್ಕಾರದ ವಿರುದ್ಧ ಹಿಡಿಶಾಪ ಹಾಕಿ ಬೇಸರದಿಂದಲೇ ಮನೆಗಳತ್ತ ತೆರಳಿದರು.
ಬಳ್ಳಾರಿ: ಜಿಲ್ಲೆಯನ್ನು ಇಬ್ಭಾಗ ಮಾಡಲು ಬಿಡಲ್ಲ. ಹೊಸಪೇಟೆ ಜಿಲ್ಲೆ ಮಾಡಿದರೆ ಇದೊಂದು ತುಘಲಕ್ ದರ್ಬಾರ್ ಆಗುತ್ತದೆ ಎಂದು ಶಾಸಕ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.
ನಗರದ ತಾಳೂರು ರಸ್ತೆಯ ಒಂದನೇ ವಾರ್ಡಿನಲ್ಲಿ ಮಳೆ ಹಾನಿ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯನಗರ ಜಿಲ್ಲೆ ರಚನೆ ಮಾಡುವ ವಿಚಾರ ನಮಗೆ ಒಪ್ಪಿಗೆ ಇಲ್ಲ. ಬಳ್ಳಾರಿ ಜಿಲ್ಲೆಯ ಹೆಸರನ್ನೇ ವಿಜಯನಗರ ಎಂದು ಬದಲಿಸಿವುದು ಭಾವನಾತ್ಮಕ ವಿಚಾರ, ಮುಂದೆ ಕೂಡ ಅಖಂಡ ಜಿಲ್ಲೆ ಒಗ್ಗಟ್ಟಾಗಿಯೇ ಇರಬೇಕು. ಈ ಬಗ್ಗೆ ಸಿಎಂ ಅವರನ್ನು ಭೇಟಿ ಮಾಡುತ್ತೇವೆ. ಸಚಿವ ಶ್ರೀರಾಮುಲು ನೇತೃತ್ವದಲ್ಲಿ ಸಿಎಂ ಅವರನ್ನು ಭೇಟಿ ಮಾಡುತ್ತೇವೆ. ಜಿಲ್ಲೆಯನ್ನು ವಿಭಜಿಸುವ ಪ್ರಕ್ರಿಯೆಗೆ ಸ್ವಾಮೀಜಿಗಳು ಬೆಂಬಲ ನೀಡಿರುವುದು ಬೇಸರ ತರಿಸಿದೆ ಎಂದು ಹೇಳಿದರು. ಇದನ್ನೂ ಓದಿ: ಹೊಸಪೇಟೆ ಜಿಲ್ಲೆ ಆಗ್ಬೇಕು- ಎರಡು ವಿಶೇಷ ವಿಮಾನದಲ್ಲಿ ಬರಲಿದೆ ನಿಯೋಗ
ನಿಯೋಗದ ಜೊತೆಗೆ ಹೋದವರೆಲ್ಲ ಸ್ವಾರ್ಥಿಗಳು. ಯಾರದ್ದೋ ಸ್ಚಾರ್ಥಕ್ಕೆ ವಿಜಯನಗರ ಜಿಲ್ಲೆ ಮಾಡುತ್ತಿದ್ದಾರೆ ಎಂದು ಶಾಸಕರು, ಆನಂದ್ ಸಿಂಗ್ ಗೆ ಟಾಂಗ್ ಕೊಟ್ಟರು. ಆಖಂಡ ಬಳ್ಳಾರಿ ಜಿಲ್ಲೆ ನಮ್ಮ ಆಗ್ರಹ. ಬಳ್ಳಾರಿಗೆ ಜಿಲ್ಲೆಗೆ ವಿಜಯನಗರವೆಂದು ನಾಮಕರಣ ಮಾಡಿ. ಬೆಳಗಾವಿಯಲ್ಲಿ 18 ತಾಲೂಕುಗಳಿವೆ. ಅನಂತಪುರ ಜಿಲ್ಲೆ 300 ಕಿ.ಮಿ. ವಿಸ್ತೀರ್ಣ ಇದೆ. ಅವರಗಿಲ್ಲದ ತೊಂದರೆ ನಮಗೆ ಬಂದಿದೆಯಾ? ಬೆಳಗಾವಿ ಯಾಕೆ ವಿಭಜನೆ ಮಾಡ್ತಿಲ್ಲ? ಬಳ್ಳಾರಿಯೇ ಕಣ್ಣಿಗೆ ಕಾಣ್ತಿದೆಯಾ? ಜಿಲ್ಲೆಯ ಯಾವ ನಾಯಕರ ಅಭಿಪ್ರಾಯವೂ ಪಡೆದಿಲ್ಲ. ಹೀಗಾಗಿ ಈ ಬಗ್ಗೆ ತರಾತುರಿಯಲ್ಲಿ ಘೋಷಣೆ ಮಾಡದಂತೆ ಸಿಎಂ ಬಳಿ ಮನವಿ ಮಾಡುವುದಾಗಿ ತಿಳಿಸಿದರು.
ಬಳ್ಳಾರಿ: ಬೇಸಿಗೆ ಆರಂಭದಲ್ಲೇ ಬಿಸಿಲಿನ ಪ್ರಭಾವ ಹೆಚ್ಚಾಗಿದ್ದು, ಪರಿಣಾಮ ಜನರು ಹನಿ ನೀರಿಗೆ ಪರಿತಪಿಸುತ್ತಿದ್ದಾರೆ. ಆದರೆ ನೀರು ಸರಬರಾಜು ಹೊಣೆ ಹೊತ್ತ ಅಧಿಕಾರಿ ಮಾತ್ರ ಕಚೇರಿಯಲ್ಲಿ ನಿದ್ದಗೆ ಜಾರಿದ್ದ ಘಟನೆ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ.
ಹೊಸಪೇಟೆ ನಗರಸಭೆ ನೀರು ಸರಬರಾಜು ಇಲಾಖೆಯ ಎಇಇ ಮಹೇಶ್ವರಪ್ಪ ಅವರು ಕೆಲಸದ ಅವಧಿಯಲ್ಲೇ ನಿದ್ದೆಗೆ ಜಾರಿದ್ದಾರೆ. ನಗರದ ಎಲ್ಲಾ ವಾರ್ಡ್ ಗಳಿಗೆ ದಿನದ 24 ಗಂಟೆ ನೀರು ಸರಬರಾಜು ಮಾಡುವ ಹೊಣೆಯನ್ನು ಮಹೇಶ್ವರಪ್ಪ ಹೊತ್ತಿದ್ದಾರೆ.
ಕೆಲಸ ಅವಧಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದ್ದ ಅಧಿಕಾರಿ ಕಚೇರಿಯ ಫ್ಯಾನ್ ಕೆಳಗೆ ನಿದ್ದೆ ಜಾರಿದ್ದನ್ನು ಕಂಡ ಸ್ಥಳೀಯರು ಅಧಿಕಾರಿಯ ನಿರ್ಲಕ್ಷ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅಧಿಕಾರಿ ನಿದ್ದೆ ಮಾಡುತ್ತಿರುವ ಫೋಟೋ ತೆಗೆದು ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಹೊಸಪೇಟೆ ತಾಲೂಕಿನ ಹಂಪಿ ಪವರ್ ಹೌಸ್ ಕ್ಯಾಂಪ್‍ನಲ್ಲಿ ಬೇವಿನ ಮರದಲ್ಲಿದ್ದ ಹಸಿರು ಹಾವೊಂದು ಗುಬ್ಬಿಯನ್ನು ನುಂಗಿದ ಅಪರೂಪದ ದೃಶ್ಯ ಮೊಬೈಲ್‍ನಲ್ಲಿ ಸೆರೆ ಸಿಕ್ಕಿದೆ. ಬೇವಿನಮರದಲ್ಲಿದ್ದ ಹಾವು ಗುಬ್ಬಚ್ಚಿಯನ್ನು ನುಂಗುತ್ತಿದ್ದಂತೆ ಗುಬ್ಬಚ್ಚಿ ಅರಚುವುದನ್ನು ಸ್ಥಳೀಯರು ನೋಡಿದ್ದು, ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.
ಹಾವು ಸುಮಾರು ಒಂದು ಗಂಟೆ ಕಾಲ ಗುಬ್ಬಚ್ಚಿ ನುಂಗಲು ಪ್ರಯತ್ನಪಟ್ಟರೂ ಸಂಪೂರ್ಣವಾಗಿ ಗುಬ್ಬಚ್ಚಿಯನ್ನು ನುಂಗಲು ಸಾಧ್ಯವಾಗಿಲ್ಲ.