Tag: Hosapete

  • 5.20 ಕೋಟಿ ಇನ್ಶೂರೆನ್ಸ್ ಹಣಕ್ಕಾಗಿ ಕೊಲೆ – ಅಪಘಾತವೆಂದು ಬಿಂಬಿಸಲು ಯತ್ನಿಸಿ ಸಿಕ್ಕಿಬಿದ್ದ ಗ್ಯಾಂಗ್

    5.20 ಕೋಟಿ ಇನ್ಶೂರೆನ್ಸ್ ಹಣಕ್ಕಾಗಿ ಕೊಲೆ – ಅಪಘಾತವೆಂದು ಬಿಂಬಿಸಲು ಯತ್ನಿಸಿ ಸಿಕ್ಕಿಬಿದ್ದ ಗ್ಯಾಂಗ್

    – ವಾಹನ ಕೀಯಿಂದಲೇ ಖದೀಮರನ್ನು ಪತ್ತೆಹಚ್ಚಿದ ಪೊಲೀಸರು

    ಬಳ್ಳಾರಿ: 5.20 ಕೋಟಿ ರೂ. ಇನ್ಶೂರೆನ್ಸ್ ಹಣಕ್ಕಾಗಿ ವ್ಯಕ್ತಿಯನ್ನು ಕೊಲೆ ಮಾಡಿ, ಅಪಘಾತವೆಂದು ಬಿಂಬಿಸಿದ ಘಟನೆ ಹೊಸಪೇಟೆ (Hosapete) ಹೊರವಲಯದಲ್ಲಿ ನಡೆದಿದ್ದು, ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ.

    ಮೃತ ವ್ಯಕ್ತಿಯನ್ನು ಹೊಸಪೇಟೆಯ ಕೌಲ್ ಪೇಟೆಯ ನಿವಾಸಿ ಗಂಗಾಧರ ಹಾಗೂ ಬಂಧಿತರನ್ನು ಕೊಪ್ಪಳ ಜಿಲ್ಲೆಯ ಕೃಷ್ಣಪ್ಪ, ರವಿ ಗೋಸಂಗಿ, ವಿಜಯನಗರ ಜಿಲ್ಲೆಯ ಅಜೇಯ, ರಿಯಾಜ್, ಯೋಗರಾಜ್ ಸಿಂಗ್, ನಕಲಿ ಹೆಂಡತಿ ಹುಲಿಗೆಮ್ಮ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಭಾರತ ಯಾರ ಮುಂದೆಯೂ ಅವಮಾನಕ್ಕೆ ಒಳಗಾಗಲು ರಷ್ಯಾ ಬಿಡಲ್ಲ: ಅಮೆರಿಕ ಟ್ಯಾರಿಫ್‌ಗೆ ಪುಟಿನ್‌ ಟಾಂಗ್‌

    ಖದೀಮರು ಮೃತ ಗಂಗಾಧರ್ ಹೆಸರಲ್ಲಿ 5.20 ಕೋಟಿ ರೂ. ಇನ್ಶೂರೆನ್ಸ್ ಮಾಡಿಸಿದ್ದರು. ಈ ಹಣವನ್ನು ಪಡೆಯುವ ಆಸೆಯಿಂದಾಗಿ ಕೊಲೆಗೆ ಸಂಚು ಹೂಡಿದ್ದರು. ಮೊದಲು ಕೊಲೆ ಮಾಡಿ, ಬಳಿಕ ಹೊಸಪೇಟೆ ಹೊರವಲಯದ ಜಂಬುನಾಥ ಹಳ್ಳಿಗೆ ಹೋಗುವ ರಸ್ತೆಗೆ ಕರೆತಂದಿದ್ದರು. ಸೆಕೆಂಡ್ ಹ್ಯಾಂಡ್ ಎಕ್ಸೆಲ್ ಬೈಕ್‌ನ್ನು ಬಾಡಿಗೆಗೆ ತಂದು, ಅದರ ಮೇಲೆ ಕೂರಿಸಿ ಕಾರಿನಿಂದ ಗುದ್ದಿಸಿದ್ದರು. ಅಪಘಾತವೆಂದು ಬಿಂಬಿಸುವಂತೆ ಮಾಡಿ, ಪರಾರಿಯಾಗಿದ್ದರು.

    ಈ ಕುರಿತು ಮೃತನ ಪತ್ನಿ ಹೊಸಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಪಘಾತವಾದರೆ ಬೈಕ್ ಬೀಗ ಗಾಡಿಯಲ್ಲಿರಬೇಕು ಇಲ್ಲ, ಕೆಳಗೆ ಬಿದ್ದಿರಬೇಕು. ಆದರೆ ಬೀಗ ಸೈಡ್ ಬ್ಯಾಗ್‌ನಲ್ಲಿದೆ ಎಂದು ಅನುಮಾನಗೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದರು. ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನೆ ನಡೆದ 24 ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಕೃತ್ಯಕ್ಕೆ ಬಳಸಿದ ಕಾರು, ಬೈಕ್‌ನ್ನು ವಶಕ್ಕೆ ಪಡೆದಿದ್ದಾರೆ.ಇದನ್ನೂ ಓದಿ: 2016 ರಲ್ಲಿ ಒಂದು ಪ್ರದರ್ಶನಕ್ಕಾಗಿ ಒದ್ದಾಡಿದ ದಿನದಿಂದ, ಹೌಸ್‌ಫುಲ್‌ ಶೋಗಳ ಈ ಅದ್ಭುತ ಪಯಣ: ಜನತೆಗೆ ರಿಷಬ್‌ ಕೃತಜ್ಞತೆ

  • ಕ್ಷೇತ್ರದ ಅಭಿವೃದ್ಧಿಗೆ ಅನುದಾನವೇ ಸಿಗುತ್ತಿಲ್ಲ: ಸರ್ಕಾರದ ವಿರುದ್ಧವೇ ಕೈ ಶಾಸಕ ಗವಿಯಪ್ಪ ಆಕ್ರೋಶ

    ಕ್ಷೇತ್ರದ ಅಭಿವೃದ್ಧಿಗೆ ಅನುದಾನವೇ ಸಿಗುತ್ತಿಲ್ಲ: ಸರ್ಕಾರದ ವಿರುದ್ಧವೇ ಕೈ ಶಾಸಕ ಗವಿಯಪ್ಪ ಆಕ್ರೋಶ

    – ಜನರು ಕೇಳುವ ಪ್ರಶ್ನೆಗೆ ನನ್ನ ಬಳಿ ಉತ್ತರ ಇಲ್ಲ
    – ಆನಂದ್‌ ಸಿಂಗ್‌ ತಂದ ಅನುದಾನಲ್ಲಿ ಒಂದೂವರೆ ವರ್ಷ ಕೆಲಸ

    ಬಳ್ಳಾರಿ: ಇಲ್ಲಿಯವರೆಗೆ ನಮ್ಮ ಕ್ಷೇತ್ರಕ್ಕೆ ಅನುದಾನ ಕೊಡುತ್ತಿಲ್ಲ ಎಂದು ಬಿಜೆಪಿ ಶಾಸಕರು (BJP MLA’s) ಕಾಂಗ್ರೆಸ್‌ ಸರ್ಕಾರದ ವಿರುದ್ಧ ದೂರುತ್ತಿದ್ದರು. ಆದರೆ ಈಗ ಕಾಂಗ್ರೆಸ್‌ ಶಾಸಕರೇ ಅನುದಾನದ ವಿಚಾರವನ್ನು ಪ್ರಸ್ತಾಪಿಸಿ ಸಿದ್ದರಾಮಯ್ಯ (Siddaramaiah) ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಲು ಆರಂಭಿಸಿದ್ದಾರೆ.

    ನೀವು ಶಾಸಕರಾಗಿ ಎರಡು ವರ್ಷ ಆಗುತ್ತಾ ಬಂದಿದೆ. ಏನು ಕೆಲಸ ಮಾಡಿದ್ದೀರಿ ತೋರಿಸಿ ಎಂದು ಜನ ನನ್ನನ್ನು ಕೇಳುತ್ತಿದ್ದಾರೆ. ಆದರೆ ನನ್ನ ಕ್ಷೇತ್ರ ಅಭಿವೃದ್ಧಿ ಮಾಡಲು ಹಣ ಇಲ್ಲ. ನಮ್ಮದೇ ಸರ್ಕಾರ ಇದ್ದರೂ ಅನುದಾನ ಬಿಡುಗಡೆ  ಆಗುತ್ತಿಲ್ಲ ಎಂದು ವಿಜಯನಗರ (Vijayanagara) ಜಿಲ್ಲೆಯ ಹೊಸಪೇಟೆ (Hosapete) ಶಾಸಕ ಎಚ್ ಆರ್ ಗವಿಯಪ್ಪ (H. R. Gaviyappa) ತಮ್ಮದೇ ಸರ್ಕಾರದ ವಿರುದ್ದ ಸಿಟ್ಟು ಹೊರಹಾಕಿದ್ದಾರೆ. ಇದನ್ನೂ ಓದಿ: VRS ತೆಗೆದುಕೊಳ್ಳಿ ಅಥವಾ ವರ್ಗಾವಣೆಯಾಗಿ – ಹಿಂದೂಯೇತರ ಸಿಬ್ಬಂದಿ ಬೇಡ: ತಿರುಪತಿ ಬೋರ್ಡ್‌

    ಬೇರೆ ಬೇರೆ ಕಡೆ ಅನುದಾನ ಸಿಗುತ್ತಿದೆ. ಆದರೆ ನನ್ನ ಕ್ಷೇತ್ರಕ್ಕೆ KKRDB ಸೇರಿದಂತೆ ಯಾವ ಅನುದಾನವೂ ಸರಿಯಾಗಿ ಸಿಗುತ್ತಿಲ್ಲ. ಕ್ಷೇತ್ರದಲ್ಲಿ ಯಾವುದೇ ಕಾಮಗಾರಿ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಎಲ್ಲವನ್ನು ತಿಳಿದುಕೊಳ್ಳುವುದ್ದಕ್ಕೆ ಒಂದೂವರೆ ವರ್ಷ ಕಳೆದು ಬಿಟ್ಟೆ. ಇನ್ನು ಎಷ್ಟು ವರ್ಷ ಹೀಗೆ ಅನುದಾನವಿಲ್ಲದೇ ಇರಲು ಸಾಧ್ಯ ಎಂದು ಹೇಳುವ ಮೂಲಕ ಸರ್ಕಾರಕ್ಕೆ ಚಾಟಿ ಬೀಸಿದರು.

    ಈ ಹಿಂದೆ ಇದ್ದ ಬಿಜೆಪಿ ಶಾಸಕ ಆನಂದ್ ಸಿಂಗ್ (Anand Singh) ತಂದ ಅನುದಾನದಲ್ಲಿಯೇ ಒಂದೂವರೆ ವರ್ಷ ಕೆಲಸ ನಡೆದಿದೆ. ಈಗಲಾದರೂ ನಮಗೆ ಕೆಲಸ ಮಾಡಲು ಅನುದಾನ ಬೇಕಲ್ವಾ? ಕೆಕೆಆರ್‌ಡಿಬಿಯಿಂದ ನೂತನ ವಿಜಯನಗರ ಜಿಲ್ಲೆಗೆ ಒಟ್ಟು 348 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.‌ ವಿಜಯನಗರ ಜಿಲ್ಲೆಯ ಬೇರೆ ಬೇರೆ ಕ್ಷೇತ್ರಗಳಿಗೆ 60, 70 ಕೋಟಿ ರೂ. ಅನುದಾನ ನೀಡಿದ್ದಾರೆ. ವಿಜಯನಗರ ಕ್ಷೇತ್ರಕ್ಕೆ ಕೇವಲ 22 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ.ಅದರಲ್ಲಿ ಜಿಲ್ಲಾಸ್ಪತ್ರೆ ಕಟ್ಟಡಕ್ಕೆ 12 ಕೋಟಿ ರೂ. ಅನುದಾನ ನೀಡಿದ್ದೇನೆ.‌ ಉಳಿದ 8 ಕೋಟಿ ರೂ. ಅನುದಾನದಲ್ಲಿ ಕ್ಷೇತ್ರದಲ್ಲಿ ಏನು ಕೆಲಸ ಮಾಡಲು ಸಾಧ್ಯವಾಗುತ್ತೆ ಎಂದು ಪ್ರಶ್ನಿಸಿದ್ದಾರೆ.

     

    ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ದವೂ ಅಸಮಾಧಾನ ಹೊರ ಹಾಕಿದ ಅವರು, ಜಿಲ್ಲೆಗೆ ಬರುವ ಅನುದಾನದಲ್ಲಿ ಜಿಲ್ಲಾ ಕೇಂದ್ರದ‌ ಅಭಿವೃದ್ಧಿಗೆ ಉಸ್ತುವಾರಿ ಸಚಿವರು 25% ರಷ್ಟು ಅನುದಾನ ಮೀಸಲಿಡಬೇಕು. ಅದು ಜಿಲ್ಲಾ ಉಸ್ತುವಾರಿ‌ ಸಚಿವರ ಕೈಯಲ್ಲಿ ಇರುತ್ತದೆ. ನಮ್ಮ ಜಿಲ್ಲಾ ಉಸ್ತುವಾರಿ ಜಮೀರ್‌ ಅಹ್ಮದ್‌ ಅವರು ಅದನ್ನು ಮಾಡಿಲ್ಲ. ಬೇಕಾದ್ರೆ ಅವರ ವಿವೇಚನೆಗೆ ಬಂದಂತೆ ಅನುದಾನ‌ ಬಳಸಲಿ. ನಾನು ಏನೂ ಕೇಳಲ್ಲ. ಒಟ್ಟಿನಲ್ಲಿ ನನ್ನ ಕ್ಷೇತ್ರದಲ್ಲಿ ಕೆಲಸ ಆಗಬೇಕು ಎಂದು ನೇರವಾಗಿಗೆ ಸಿಟ್ಟು ಹೊರ ಹಾಕಿದರು.

     

  • ಟ್ರೇಡ್ ಲೈಸೆನ್ಸ್ ಇಲ್ಲದೇ ಕತ್ತೆ ಮಾರಾಟ ಮಾಡ್ತಿದ್ದ ಕಂಪನಿ ಕ್ಲೋಸ್

    ಟ್ರೇಡ್ ಲೈಸೆನ್ಸ್ ಇಲ್ಲದೇ ಕತ್ತೆ ಮಾರಾಟ ಮಾಡ್ತಿದ್ದ ಕಂಪನಿ ಕ್ಲೋಸ್

    – 3 ಲಕ್ಷಕ್ಕೆ ಮೂರು ಕತ್ತೆ ಮಾರಾಟ, ಲೀ.ಗೆ 2300 ರೂ.ನಂತೆ ಹಾಲು ಖರೀದಿ

    ಬಳ್ಳಾರಿ: ಟ್ರೇಡ್ ಲೈಸೆನ್ಸ್ (Trade License) ಇಲ್ಲದೇ ಅನಧಿಕೃತವಾಗಿ ಕತ್ತೆಗಳ ಮಾರಾಟ ಮಾಡುತ್ತಿದ್ದ ಕಂಪನಿಯನ್ನು ಕ್ಲೋಸ್ ಮಾಡಿ, ಕಂಪನಿಯ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ವಿಜಯನಗರ (Vijayanagar) ಜಿಲ್ಲೆಯ ಹೊಸಪೇಟೆ (Hosapete) ತಾಲೂಕಿನಲ್ಲಿ ನಡೆದಿದೆ.

    ಆಂಧ್ರಪ್ರದೇಶದ (Andhrapradesh) ಅನಂತಪುರ (Anantapur) ಮೂಲದ ಜೆನ್ನಿ ಮಿಲ್ಕ್ ಕಂಪನಿಯನ್ನು (Jenny Milk Company) ಅನಧಿಕೃತವಾಗಿ, ಟ್ರೇಡ್ ಲೈಸೆನ್ಸ್ ಇಲ್ಲದೇ ಕತ್ತೆಗಳ ಮಾರಾಟ ಮಾಡುತ್ತಿದ್ದ ಕಾರಣಕ್ಕೆ ಅಧಿಕಾರಿಗಳು ತಾತ್ಕಾಲಿಕವಾಗಿ ಕ್ಲೋಸ್ ಮಾಡಿಸಿದ್ದಾರೆ.ಇದನ್ನೂ ಓದಿ: ಕೇಂದ್ರದವರೇ ಪ್ಯಾಲೆಸ್ತೀನ್‌ಗೆ ಬೆಂಬಲ ಇದೆ ಅಂತಾರೆ, ಧ್ವಜ ತೋರಿಸೋದ್ರಲ್ಲಿ ತಪ್ಪೇನಿದೆ ಅಂತ ವಾದ ಮಾಡ್ತಾರೆ: ಪರಮೇಶ್ವರ್‌

    ಅನಧಿಕೃತ ಕಚೇರಿ ಓಪನ್ ಮಾಡಿ, ರೈತರನ್ನ ಗುರಿಯಾಗಿಸಿಕೊಂಡು ಕತ್ತೆ ಮಾರಾಟ ಮಾಡಿ, ಹಾಲು ಖರೀದಿಸುತ್ತಿದ್ದ ಬಗ್ಗೆ ಅಧಿಕೃತ ಮಾಹಿತಿಯನ್ನು ಪಡೆದು ಅಧಿಕಾರಿಗಳ ತಂಡ ದಾಳಿ ನಡೆಸಿದೆ. ನಗರಾಭಿವೃದ್ಧಿ ಕೋಶಾಧಿಕಾರಿ ಮನೋಹರ್, ಹೊಸಪೇಟೆ ನಗರಸಭೆ ಪೌರಾಯುಕ್ತ ಚಂದ್ರಪ್ಪ ನೇತೃತ್ವದ ಅಧಿಕಾರಿಗಳ ತಂಡ ದಾಳಿ ಮಾಡಿ, ಒಂದು ಘಂಟೆಗಳ ಕಾಲ ತಪಾಸಣೆ ನಡೆಸಿ ಕಚೇರಿಗೆ ಬೀಗ ಜಡಿದು, ಸೀಲ್ ಹಾಕಿಸಿದ್ದಾರೆ.

    ಈ ಕಂಪನಿಯಿಂದ ರೈತರು 3 ಲಕ್ಷ ರೂ.ಗೆ ಕತ್ತೆ ಪಡೆದು, ಬಳಿಕ ಪ್ರತಿ ಲೀಟರ್ ಹಾಲಿಗೆ 2,300 ರೂ. ನಂತೆ ಕಂಪನಿಗೆ ಹಾಲನ್ನು ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಅಲರ್ಟ್ ಆಗಿದ್ದ ಅಧಿಕಾರಿಗಳು ಟ್ರೇಡಿಂಗ್ ಲೈಸೆನ್ಸ್ ಇಲ್ಲದ ಕಾರಣಕ್ಕೆ ಈ ಕಂಪನಿಯನ್ನು ಕ್ಲೋಸ್ ಮಾಡಿಸಿದ್ದಾರೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.

    ಕಳೆದ ಮೂರು ತಿಂಗಳಿನಿಂದ ಕರ್ನಾಟಕದ (Karnataka) ನಾನಾ ಭಾಗಗಳಲ್ಲಿ ಕಚೇರಿ ಓಪನ್ ಮಾಡಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಜಿಲ್ಲೆಯ ರೈತರು ಕತ್ತೆಗಳ ಖರೀದಿ ಬಗ್ಗೆ ಮೋಸ ಹೋಗದಂತೆ ಜಿಲ್ಲಾಡಳಿತದಿಂದ ಎಚ್ಚರಿಕೆಯ ಸಂದೇಶವನ್ನು ರವಾನಿಸಲಾಗಿತ್ತು.ಇದನ್ನೂ ಓದಿ: ಅತಿ ವೇಗವಾಗಿ ಹರಡುವ ಕೋವಿಡ್‌ ಹೊಸ ತಳಿ ಪತ್ತೆ – ಯುಕೆ, ಯುಎಸ್‌, ಉಕ್ರೇನ್‌ ಸೇರಿ 27 ದೇಶಗಳಿಗೆ XEC ಆತಂಕ

  • ಟಿಬಿ ಡ್ಯಾಂ ಹಿನ್ನೀರಿನ ಕಂದಕಕ್ಕೆ ಬಿತ್ತು ಬೈಕ್‌ – ಯವಕ ಸಾವು, ಓರ್ವ ಗಂಭೀರ

    ಟಿಬಿ ಡ್ಯಾಂ ಹಿನ್ನೀರಿನ ಕಂದಕಕ್ಕೆ ಬಿತ್ತು ಬೈಕ್‌ – ಯವಕ ಸಾವು, ಓರ್ವ ಗಂಭೀರ

    ಬಳ್ಳಾರಿ: ಬೈಕ್‌ ರೈಡ್‌ ವೇಳೆ ತುಂಗಭದ್ರಾ ಜಲಾಶಯದ (TB Dam) ಹಿನ್ನೀರಿನ ಕಂದಕಕ್ಕೆ ಬಿದ್ದು ಯುವಕ ಸಾವನ್ನಪ್ಪಿ ಮತ್ತೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಹೊಸಪೇಟೆ (Hosapete) ಹೊರ ವಲಯದಲ್ಲಿ ನಡೆದಿದೆ.

    ಇಳಕಲ್‌ ಮೂಲದ ಜಗದೀಶ್ (28) ಮೃತಪಟ್ಟರೆ, ಶಶಾಂಕ್ ಪಾಟೀಲ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಗಳೂರಿನಿಂದ (Bengaluru) ಇಳಕಲ್‌ಗೆ ಇವರಿಬ್ಬರು ಬೈಕ್‌ನಲ್ಲಿ ತೆರಳುತ್ತಿದ್ದರು.

    ವೇಗದಲ್ಲಿದ್ದ ಬೈಕ್‌ ತುಂಗಭದ್ರಾ ಜಲಾಶಯದ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ನೊಂದಿಗೆ ಇವರು ಕೆಳಗಡೆ ಬಿದ್ದಿದ್ದಾರೆ.  ಇದನ್ನೂ ಓದಿ:  ಮತಗಟ್ಟೆವಾರು ದತ್ತಾಂಶ ನೀಡಿದ್ರೆ ದುರ್ಬಳಕೆ ಆಗಬಹುದು: ಚುನಾವಣಾ ಆಯೋಗ ಆತಂಕ

    ಗಾಯಾಳುವನ್ನು ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮರಿಯಮ್ಮನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

     

  • ರಾಮಭಕ್ತರಿದ್ದ ರೈಲಿಗೆ ಬೆಂಕಿ ಹಚ್ತೀನಿ- ಓರ್ವ ವಶಕ್ಕೆ

    ರಾಮಭಕ್ತರಿದ್ದ ರೈಲಿಗೆ ಬೆಂಕಿ ಹಚ್ತೀನಿ- ಓರ್ವ ವಶಕ್ಕೆ

    ಗದಗ: ಅಯೋಧ್ಯೆ (Ayodhya Ram Mandir) ಧಾಮ ರೈಲಿಗೆ ಬೆಂಕಿ ಹಚ್ಚುತ್ತೇನೆ ಎಂದು ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಮಾನದ ಮೇರೆಗೆ ಗದಗ ನಿಲ್ದಾಣದಲ್ಲಿ ಓರ್ವನನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಅನ್ಯಕೋಮಿನ ನಾಲ್ವರು ಯುವಕರು ಪರಾರಿಯಾಗಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

    ನಡೆದಿದ್ದೇನು..?: ಅಯೋಧ್ಯೆ ಧಾಮ ಟ್ರೈನ್ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಅನ್ಯಕೋಮಿನ ಯುವಕನೊಬ್ಬ ಟ್ರೈನ್‍ಗೆ ಬೆಂಕಿ ಹಚ್ಚುತ್ತೇನೆ ಎಂದು ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಚೈನ್ ಎಳೆದ ಕಾರಣ ರೈಲು ಸುಮಾರು 2 ಗಂಟೆಗಳ ಕಾಲ ತಡವಾಗಿ ಚಲಿಸಿದೆ. ಇದನ್ನೂ ಓದಿ: ಬೆಂಕಿ ಹಚ್ಚುತ್ತೇನೆಂದು ಅನ್ಯಕೋಮಿನ ಯುವಕನಿಂದ ಬೆದರಿಕೆ; ಮೈಸೂರು-ಅಯೋಧ್ಯೆ ರೈಲು 2 ಗಂಟೆ ಸ್ಥಗಿತ!

    ಮೈಸೂರು- ಅಯೋಧ್ಯೆ ಧಾಮ ರೈಲಿನಲ್ಲಿ (Mysuru- Ayodhya Train) 1500 ರಾಮ ಭಕ್ತರು ಪ್ರಯಾಣ ಮಾಡುತ್ತಿದ್ದರು. ಈ ವೇಳೆಯಲ್ಲಿ ರಾಮ ಭಕ್ತರು ಮಾರ್ಗದುದ್ದಕ್ಕೂ ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದ್ದಾರೆ. ಇದರಿಂದ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ, ಸುಮಾರು 4 ಜನ ಅನ್ಯ ಕೋಮಿನ ಯುವಕರು ರಾಮ ಭಕ್ತರ ಜೊತೆಯಲ್ಲಿ ವಾಗ್ವಾದ ಆರಂಭ ಮಾಡಿದ್ದಾರೆ. ಈ ವೇಳೆಯಲ್ಲಿ ಹಿಂದೂ ಹಾಗೂ ಅನ್ಯಕೋಮಿನ ಯುವಕನ ಜೊತೆಯಲ್ಲಿ ವಾಗ್ವಾದ ಆರಂಭವಾಗಿದೆ. ಹಿಂದೂ ಕಾರ್ಯಕರ್ತರು ಹಾಗೂ ಅನ್ಯಕೋಮಿನ ಯುವಕರು ಪದೇ ಪದೇ ಚೈನ್ ಎಳೆದ ಕಾರಣ ಟ್ರೈನ್ ಮುಂದೆ ಸಾಗಲು ತೊಂದರೆಯಾಗಿದೆ.

    ಹಿಂದೂಪರ ಕಾರ್ಯಕರ್ತರು ರೈಲು ನಿಲ್ದಾಣದಲ್ಲಿ ಪ್ರತಿಭಟನೆ ಆರಂಭ ಮಾಡುತ್ತಿದ್ದಂತೆಯೇ ಅಲ್ಲಿಂದ ಅನ್ಯಕೋಮಿನ ಯುವಕರು ಪರಾರಿಯಾಗಿದ್ದಾರೆ. ಇದರಿಂದ ಕೆರಳಿದ ರಾಮ ಭಕ್ತರು ರೈಲು ನಿಲ್ದಾಣದಲ್ಲಿ ಪ್ರತಿಭಟನೆ ಮಾಡಲು ಆರಂಭ ಮಾಡಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತೆರಳುವ ಮುನ್ನವೇ ಸ್ಥಳಕ್ಕೆ ಆಗಮಿಸಿದ ಎಸ್‍ಪಿ ಶ್ರೀಹರಿಬಾಬು ಹಾಗೂ ಸಿಬ್ಬಂದಿ ಎಲ್ಲರ ಮನವೊಲಿಸಿ, ರೈಲು ಚಲಿಸುವಂತೆ ಮಾಡಿದ್ದಾರೆ. ಈ ನಡುವೆ ರೈಲು ನಿಲ್ದಾಣದಲ್ಲಿ ಹಿಂದೂ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಂತೆ ಗಲಾಟೆ ಮಾಡಿದ ಅನ್ಯಕೋಮಿನ ನಾಲ್ವರು ಯುವಕರು ಪರಾರಿಯಾಗಿದ್ದಾರೆ.

  • ಲಾರಿ ಹರಿದು 40ಕ್ಕೂ ಹೆಚ್ಚು ಕುರಿಗಳ ಮಾರಣಹೋಮ

    ಲಾರಿ ಹರಿದು 40ಕ್ಕೂ ಹೆಚ್ಚು ಕುರಿಗಳ ಮಾರಣಹೋಮ

    ವಿಜಯನಗರ: ಕುರಿ ಮಂದೆಯ ಮೇಲೆ ಲಾರಿ ಹರಿದು 40 ಕ್ಕೂ ಅಧಿಕ ಕುರಿಗಳ ಸಾವಿಗೀಡಾದ ಘಟನೆ ಕೂಡ್ಲಿಗಿಯ (Kudligi) ಶಿವಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ.

    ಸಾವಿಗೀಡಾದ ಕುರಿಗಳು ಶಿವಪುರದ ಬಾಲಪ್ಪ ಎಂಬ ರೈತನಿಗೆ ಸೇರಿದ್ದಾಗಿವೆ. ಹೊಸಪೇಟೆ (Hosapete) ಕಡೆಯಿಂದ ಬೆಂಗಳೂರು (Bengaluru) ಕಡೆಗೆ ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಕುರಿಗಳ ಮೇಲೆ ಹರಿದಿದೆ. ಡಿಕ್ಕಿಯಾದ ರಭಸಕ್ಕೆ ರಸ್ತೆಯ ತುಂಬೆಲ್ಲಾ ಕುರಿಗಳು ಛಿದ್ರವಾಗಿ ಬಿದ್ದಿವೆ. ಇದನ್ನೂ ಓದಿ: ಪಿಎಸ್‍ಐ ಹಗರಣ – ಎಡಿಜಿಪಿ ಅಮೃತ್ ಪೌಲ್‌ಗೆ ಮತ್ತೊಂದು ಸಂಕಷ್ಟ

    ಅತಿವೇಗವಾದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಲಾರಿ ಚಾಲಕ ಅಪಘಾತ ನಡೆಸಿ, ಅಲ್ಲಿಂದ ಲಾರಿ ನಿಲ್ಲಿಸದೇ ಮುಂದೆ ಸಾಗಿದ್ದಾನೆ. ಗ್ರಾಮಸ್ಥರು ಲಾರಿ ತಡೆದು ನಿಲ್ಲಿಸಿದ್ದಾರೆ. ಈ ವೇಳೆ ರಸ್ತೆ ಪಕ್ಕದ ಕಬ್ಬಿಣದ ತಡೆಗೋಡೆಗೆ ಲಾರಿ ಡಿಕ್ಕಿಯಾಗಿದೆ. ಸ್ಥಳಕ್ಕೆ ಕೂಡ್ಲಿಗಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ವಿಪಕ್ಷ ನಾಯಕನಿಲ್ಲದೆ ಕಲಾಪ ನಡೆದಿದ್ದು ದುರ್ದೈವ: ಹೆಚ್.ಕೆ ಪಾಟೀಲ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಡ್ಡರಹಳ್ಳಿ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ: ಜಮೀರ್

    ವಡ್ಡರಹಳ್ಳಿ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ: ಜಮೀರ್

    ಬಳ್ಳಾರಿ: ಹೊಸಪೇಟೆ ತಾಲೂಕಿನ ವಡ್ಡರಹಳ್ಳಿ ಬ್ರಿಡ್ಜ್ (Accident Near Hosapete Vaddarahalli Bridge) ಬಳಿ ಶುಕ್ರವಾರ ನಡೆದ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರವನ್ನು ಸರ್ಕಾರದ ವತಿಯಿಂದ ನೀಡಲಾಗುವುದು ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.

    ವಿಜಯನಗರ ಉಸ್ತುವಾರಿ ಸಚಿವರೂ ಆಗಿರುವ ಜಮೀರ್ (Zameer Ahmed Khan) ಇಂದು (ಶನಿವಾರ) ಬಳ್ಳಾರಿಯ ಟ್ರಾಮಾ ಕೇರ್ ಸೆಂಟರ್ ಭೇಟಿ ನೀಡಿ ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿದ್ದಾರೆ. ಅಲ್ಲದೆ ವಿಮ್ಸ್ ಶವಗಾರ ಮತ್ತು ಮೃತರ ಮನೆಗೆ ಕೂಡ ಜಮೀರ್ ಭೇಟಿ ನೀಡಿ ಕುಟುಂಬಕ್ಕೆ ಧೃತಿಗೆಡದಂತೆ ಧೈರ್ಯ ತುಂಬಿದರು.

    ಬಳಿಕ ಮಾತನಾಡಿದ ಅವರು, ಮುಸ್ಲಿಮರಲ್ಲಿ ಬಕ್ರಿದ್ (Bakrid) ಬಳಿಕ ಬಾಸಿ ಖುತ್ಬ ಎನ್ನುವ ಆಚರಣೆ ಮಾಡುತ್ತೇವೆ. ಹಬ್ಬದಾಚರಣೆ ಮಾಡಲು ಕೌಲಬಜಾರನ 19 ಮಂದಿ ಎರಡು ಆಟೋ ಮೂಲಕ ತೆರಳಿದ್ರು. ಈ ವೇಳೆ ಅಪಘಾತ ಸಂಭವಿಸಿದ್ದು, 9 ಜನರು ಸಾವನ್ನಪ್ಪಿದ್ದಾರೆ. ಸರ್ಕಾರದ ವತಿಯಿಂದ ಮೃತರ ಕುಟುಂಬಕ್ಕೆ ಎರಡು ಲಕ್ಷ ಪರಿಹಾರ ನೀಡಲಾಗ್ತದೆ ಎಂದರು.

    ಗಾಯಾಳುಗಳಿಗೆ 50 ಸಾವಿರ ಹಣ ನೀಡಲಾಗುತ್ತದೆ. ಅಲ್ಲದೇ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸುತ್ತದೆ. ಆಟೋದಲ್ಲಿ ನಿಗದಿಗಿಂತ ಹೆಚ್ಚು ಪ್ರಯಾಣ ಮಾಡಿರುವುದರ ಬಗ್ಗೆ ವಿಚಾರ ಮಾಡ್ತೇವೆ. ಇಂತಹ ಘಟನೆ ನಡೆಯಬಾರದ್ದಾಗಿತ್ತು ಎಂದು ಸಚಿವರು ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಫ್ರಾನ್ಸ್‌ ಧಗ ಧಗ – ಭದ್ರತೆಗೆ 45 ಸಾವಿರ ಪೊಲೀಸರ ನಿಯೋಜನೆ, 994 ಮಂದಿ ಅರೆಸ್ಟ್‌

    ನಡೆದಿದ್ದೇನು..?: ಹೊಸಪೆಟೆಯ ವಡ್ಡರಹಳ್ಳಿ ಬಿಡ್ಜ್ ಬಳಿ ಎರಡು ಆಟೋ ಹಾಗೂ ಲಾರಿ ನಡುವೆ ನಡೆದ ಭೀಕರ ಸರಣಿ ಅಪಘಾತ ನಡೆದಿತ್ತು. ಘಟನೆಯಲ್ಲಿ 9 ಜನ ಮೃತಪಟ್ಟು, 10 ಮಂದಿ ಗಾಯಗೊಂಡಿದ್ದರು. ಸ್ಥಳಕ್ಕೆ ಹೊಸಪೇಟೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಕೋಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾಳೆ ಹೊಸಪೇಟೆಯಲ್ಲಿ ಪುನೀತ್ ಬೃಹತ್ ಪುತ್ಥಳಿ ಉದ್ಘಾಟನೆ

    ನಾಳೆ ಹೊಸಪೇಟೆಯಲ್ಲಿ ಪುನೀತ್ ಬೃಹತ್ ಪುತ್ಥಳಿ ಉದ್ಘಾಟನೆ

    ಪುನೀತ್ ರಾಜ್ ಕುಮಾರ್ ಅಗಲಿ ಏಳು ತಿಂಗಳು ಕಳೆದರೂ, ಅವರ ಆರಾಧನೆ ಮಾತ್ರ ಇನ್ನೂ ನಿಂತಿಲ್ಲ. ಅಪ್ಪು ಅಭಿಮಾನಿಗಳು ಒಂದಿಲ್ಲೊಂದು ರೀತಿಯಲ್ಲಿ ನೆಚ್ಚಿನ ನಟನನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಜೊತೆಗೆ ನೂರಾರು ಅಭಿಮಾನಿಗಳು ನಿತ್ಯವೂ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಗೆ ಬಂದು ನಮನ ಸಲ್ಲಿಸುತ್ತಲೇ ಇದ್ದಾರೆ. ಅಷ್ಟೊಂದು ಅಭಿಮಾನ ಮತ್ತು ಪ್ರೀತಿಯನ್ನು ಅಪ್ಪು ಅಭಿಮಾನಿಗಳು ಇಟ್ಟುಕೊಂಡಿದ್ದಾರೆ.

    ಈಗಾಗಲೇ ಪುನೀತ್ ಅವರ ಪುತ್ಥಳಿಗಳು ರಾಜ್ಯದ ನಾನಾ ಕಡೆ ಸ್ಥಾಪಿಸಲಾಗಿದ್ದು, ನಾಳೆ ಹೊಸಪೇಟೆಯಲ್ಲಿ ಬೃಹತ್ ಪುತ್ಥಳಿಯ ಉದ್ಘಾಟನೆ ಆಗಲಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆಯ ಅಪ್ಪು ಹುಡುಗರು ಡಾ. ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಬಳಗದಿಂದ ಈ ಪ್ರತಿಮೆ ಸ್ಥಾಪಿಸಲಾಗುತ್ತಿದ್ದು, ನಾಳೆ ಅದನ್ನು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆನಂದ್ ಸಿಂಗ್ ಅವರು ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಇದನ್ನೂ ಓದಿ : Exclusive : ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಮೊದಲ ವರ್ಷದ ಪುಣ್ಯಸ್ಮರಣೆ : ಪುತ್ಥಳಿ ಅನಾವರಣ

    ಈ ಕಾರ್ಯಕ್ರಮಕ್ಕೆ ಪುನೀತ್ ಅವರ ಸಹೋದರ, ನಟ ರಾಘವೇಂದ್ರ ರಾಜ್ ಕುಮಾರ್, ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ಸಂಗೀತ ನಿರ್ದೇಶಕ ಗುರುಕಿರಣ್ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಈ ಪುತ್ಥಳಿ ಉದ್ಘಾಟನೆಯ ಕಾರ್ಯಕ್ರಮವನ್ನು ರಾಘವೇಂದ್ರ ರಾಜ್ ಕುಮಾರ್ ಮತ್ತು ಕುಟುಂಬದವರು ನೆರವೇರಿಸಲಿದ್ದಾರೆ. ನಾಳೆ ಸಂಜೆ 4 ಗಂಟೆಗೆ ಪುನೀತ್ ರಾಜ್ ಕುಮಾರ್ ಸರ್ಕಲ್ ನಲ್ಲಿ ಈ ಪುತ್ಥಳಿ ಉದ್ಘಾಟನೆ ಆಗಲಿದೆ.

  • ಸಚಿವ ಆನಂದ್ ಸಿಂಗ್ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಅಜಯ್ ರಾವ್!

    ಸಚಿವ ಆನಂದ್ ಸಿಂಗ್ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಅಜಯ್ ರಾವ್!

    ಬಳ್ಳಾರಿ: ನಟ ಅಜಯ್ ರಾವ್ ಅವರು ಅರಣ್ಯ ಸಚಿವ ಆನಂದ್ ಸಿಂಗ್ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

    ಹೌದು. ವಿಜಯನಗರ ಜಿಲ್ಲೆಯಾಗುತ್ತಿರುವುದಕ್ಕೆ ನಟ ಅಜಯ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿರುವ ಆನಂದ್ ಸಿಂಗ್ ಅಚೇರಿಗೆ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ.

    ಮೂಲತಃ ಹೊಸಪೇಟೆಯ ನಿವಾಸಿಯಾಗಿರುವ ಅಜಯ್ ರಾವ್, ಹೊಸಪೇಟೆ ಕೇಂದ್ರಿತ ವಿಜಯನಗರ ಜಿಲ್ಲೆ ರಚನೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಜಿಲ್ಲೆ ಘೋಷಣೆಯಾಗುವ ಮೂಲಕ ವಿಜಯನಗರ ಗತವೈಭವ ಮರಳಿ ಬಂದಂತಾಗಿದೆ. ನಾನು ಕೂಡ ಹೊಸಪೇಟೆ ನಗರದಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆಯಾಗುತ್ತಿದೆ ಎಂದಿದ್ದಾರೆ.

    ನನ್ನ ಹೂಟ್ಟೂರು ಹೊಸಪೇಟೆ ಈಗ ವಿಜಯನಗರ ಜಿಲ್ಲೆಯಾಗುತ್ತಿರುವುದು ಹೆಮ್ಮೆಯ ವಿಷಯ. ಸರ್ಕಾರ ಆದಷ್ಟು ಬೇಗ ಫೈನಲ್ ನೋಟಿಫಿಕೇಷನ್ ಸಹ ಹೊರಡಿಸಲಿ. ಫೈನಲ್ ನೋಟಿಫಿಕೇಷನ್ ಗಾಗಿ ಎದುರು ನೋಡುತ್ತಿರುವೆ. ವಿಜಯನಗರ ಜಿಲ್ಲೆಯ ಅಭಿವೃದ್ಧಿಗೆ ನಾನು ಕೂಡ ಕೈ ಜೋಡಿಸುವೆ ಎಂದು ನಟ ಭರವಸೆ ನೀಡಿದ್ದಾರೆ.

  • ಜಗಳ ಆಡಿರೋದು ಕೆಟ್ಟ ಗಳಿಗೆ – ಆನಂದ್ ಸಿಂಗ್ ಹೋರಾಟಕ್ಕೆ ಕಂಪ್ಲಿ ಗಣೇಶ್ ಸಾಥ್

    ಜಗಳ ಆಡಿರೋದು ಕೆಟ್ಟ ಗಳಿಗೆ – ಆನಂದ್ ಸಿಂಗ್ ಹೋರಾಟಕ್ಕೆ ಕಂಪ್ಲಿ ಗಣೇಶ್ ಸಾಥ್

    ಬಳ್ಳಾರಿ: ನಾವು ಜಗಳ ಆಡಿರೋದು ಒಂದು ಕೆಟ್ಟ ಗಳಿಗೆ ಆನಂದ್ ಸಿಂಗ್ ಮತ್ತು ನಮ್ಮ ನಡುವೆ ಭಿನ್ನಾಭಿಪ್ರಾಯ ಇಲ್ಲ ಎಂದು ಕಂಪ್ಲಿ ಕ್ಷೇತ್ರದ ಶಾಸಕ ಗಣೇಶ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಹೊಸಪೇಟೆಯನ್ನು ಹೊಸ ಜಿಲ್ಲೆಯಾಗಿ ಮಾಡಬೇಕು ಎಂದು ಹೊರಟಿರುವ ಅನರ್ಹ ಶಾಸಕ ಆನಂದ್ ಸಿಂಗ್‍ಗೆ ಬೆಂಬಲ ನೀಡುವುದಾಗಿ ಹೇಳಿದರು. ಇದರ ಜೊತೆಗೆ ನಾವು ಪಕ್ಷಾತೀತವಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ಇದೇ ವೇಳೆ ಕಂಪ್ಲಿ ಕೂಡ ಹೊಸಪೇಟೆಗೆ ಸೇರಿಸಲು ಮನವಿ ಮಾಡುತ್ತೆವೆ. ಹೊಸಪೇಟೆ ಜಿಲ್ಲೆಯಾದರೇ ಕಂಪ್ಲಿ ಹೊಸಪೇಟೆ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಹೇಳುವ ಮೂಲಕ ಆನಂದ್ ಸಿಂಗ್ ನಿಯೋಗದಲ್ಲಿ ನಾನು ಕೂಡ ಇರುತ್ತೇನೆ ಎಂದು ಹೇಳಿದರು. ಇಂದು ಅನಂದ್ ಸಿಂಗ್ ನೇತೃತ್ವದ ನಿಯೋಗ ಸಿಎಂ ಬಿಎಸ್‍ವೈ ಅವರನ್ನು ಭೇಟಿ ಹೊಸಪೇಟೆಯನ್ನು ಜಿಲ್ಲೆ ಮಾಡಲು ಮನವಿ ಸಲ್ಲಿಸಲಿದ್ದಾರೆ.