Tag: Horse

  • ಕಾರಿನ ಮುಂಭಾಗದ ಗ್ಲಾಸ್ ಮೇಲೆ ಹಾರಿ ಸಿಲುಕಿಕೊಂಡ ಕುದುರೆ!

    ಕಾರಿನ ಮುಂಭಾಗದ ಗ್ಲಾಸ್ ಮೇಲೆ ಹಾರಿ ಸಿಲುಕಿಕೊಂಡ ಕುದುರೆ!

    ಜೈಪುರ: ಟಾಂಗಾಕ್ಕೆ ಕಟ್ಟಿದ ಕುದುರೆ ತನ್ನ ನಿಯಂತ್ರಣ ತಪ್ಪಿ ಕಾರಿನ ಮುಂಬದಿಯ ಗಾಜಿನ ಮೇಲೆ ಹಾರಿದ ಪರಿಣಾಮ ಕಾರು ಚಾಲಕ ಹಾಗೂ ಕುದುರೆ ಗಾಯಗೊಂಡ ಘಟನೆ ಜೈಪುರದಲ್ಲಿ ನಡೆದಿದೆ.

    ಈ ಘಟನೆಯು ಭಾನುವಾರ ಸುಮಾರು 1.30ರ ವೇಳೆಗೆ ಜೈಪುರದ ಸಿವಿಲ್ ಲೈನ್ಸ್ ಪ್ರದೇಶದ ಬಳಿ ನಡೆದಿದೆ. ಈ ವೇಳೆ ಅಲ್ಲಿನ ಬಿಸಿಲಿನ ತಾಪ 42 ಡಿಗ್ರಿ ಸೆಲ್ಸಿಯಸ್ ಇತ್ತು. ಹೀಗಾಗಿ ಬಿಸಿಲಿನ ಬೇಗೆಗೆ ಕಂಗೆಟ್ಟ ಕುದುರೆ ತನ್ನ ನಿಯಂತ್ರಣ ತಪ್ಪಿ ಕಾರಿನ ಮುಂಬದಿಯ ಗ್ಲಾಸ್ ಮೇಲೆ ಹಾರಿದೆ. ಪರಿಣಾಮ ಮುಂಬದಿಯ ಗಾಜು ಪುಡಿಪುಡಿಯಾಗಿ ಕುದುರೆ ಕಾರೊಳಗೆ ಸಿಲುಕಿದೆ. ಇದರಿಂದ ಚಾಲಕ ಗಾಯಗೊಂಡಿದ್ದು, ಕುದುರೆಗೂ ಸಣ್ಣಪುಟ್ಟ ಗಾಯಗಳಾಗಿವೆ ಅಂತಾ ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

    ಗಾಯಗೊಂಡ ಕಾರು ಚಾಲಕನನ್ನು ಪಂಕಜ್ ಜೋಶಿ ಅಂತಾ ಗುರುತಿಸಲಾಗಿದೆ. ಇನ್ನು ಸಾರ್ವಜನಿಕರು ಘಟನೆಯ ಫೊಟೋ ಹಾಗೂ ವಿಡಿಯೋ ಮಾಡಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    `ನಾನು ಆಗಷ್ಟೇ ನನ್ನ ಕಾರು ಸ್ಟಾರ್ಟ್ ಮಾಡಿದೆ. ಸಡನ್ ಆಗಿ ನನ್ನ ಕಾರಿನ ಮುಂಬದಿಯ ಗ್ಲಾಸ್ ಒಡೆದಿದ್ದು ಗೊತ್ತಾಗಿದೆ. ನೋಡನೋಡುತ್ತಲೇ ಕುದರೆ ತನ್ನ ಕಾರೊಳಗೆ ಸಿಲುಕಿಕೊಂಡಿದೆ. ಪರಿಣಾಮ ನನ್ನ ಎರಡೂ ಕೈಗಳಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಅಂತಾ ಜೋಶಿ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

    ಘಟನೆ ನಡೆಯುತ್ತಿದ್ದಂತೆಯೇ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿದ್ದು, ಕಾರೊಳಗಿನಿಂದ ಕುದುರೆಯನ್ನು ಹೊರ ತೆಗೆದಿದ್ದಾರೆ. ಘಟನೆಯಿಂದ ಗಾಯಗೊಂಡ ಕುದುರೆಗೆ ಅಲ್ಲಿಯೇ ಪ್ರಥಮ ಚಿಕಿತ್ಸೆ ನೀಡಲಾಗಿದೆ. ವಿಪರೀತ ಬಿಸಿಲು ಇದ್ದ ಕಾರಣ ಈ ಘಟನೆ ನಡೆದಿದೆ ಅಂತಾ ಪೊಲೀಸರು ಹೇಳಿದ್ದಾರೆ.

    https://www.youtube.com/watch?v=zg1tBy-aZbI