ಬಾಗಲಕೋಟೆ: ಆಂಜನೇಯನ ಗುಡಿ ಮುಂದೆ ಕುದುರೆ ಪ್ರಾರ್ಥನೆ ಮಾಡುವ ರೀತಿಯಲ್ಲಿ ನಿಂತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ಬಾಗಲಕೋಟೆ ತಾಲೂಕಿನ ಮುರನಾಳ ಗ್ರಾಮದ ಪುನರ್ ವಸತಿ ಕೇಂದ್ರದ ಸಮೀಪವಿರುವ ದೇವಸ್ಥಾನದ ಬಳಿ ನಡೆದಿದೆ, ಇಲ್ಲಿರುವ ಪುಟ್ಟ ಆಂಜನೇಯ ಸ್ವಾಮಿ ಗುಡಿಗೆ ತಲೆ ಕೊಟ್ಟು ಕುದುರೆ ಪ್ರಾರ್ಥನೆ ಮಾಡುವ ರೀತಿಯಲ್ಲಿ ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ನಿಂತು ಕೊಂಡಿದೆ.
ಕುದುರೆ ದೇವರ ಗುಡಿಯ ಕಟ್ಟಡಕ್ಕೆ ಹಣೆ ಕೊಟ್ಟು ನಿಂತರು ಹಾವ-ಭಾವ ನೋಡಿ ಸ್ಥಳೀಯರು ಹಾಗೂ ದಾರಿಹೋಕರಿಗೆ ಆಶ್ಚರ್ಯಗೊಂಡಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಶಾಲಾ ಶಿಕ್ಷಕರೊಬ್ಬರ ಮೊಬೈಲ್ ನಲ್ಲಿ ವಿಡಿಯೋ ಸೆರೆ ಹಿಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದಾವಣಗೆರೆ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪ್ರಾಣಿ ಪ್ರೀತಿ ಇರುವುದು ತಿಳಿದೇ ಇದೆ. ಅದೇ ರೀತಿ ಇದೀಗ ಗೋವು ಸಾಕಣೆ ಹಾಗೂ ಕುದುರೆ ಸಾಕಣೆ ಕುರಿತು ಮಾಹಿತಿ ಪಡೆಯಲು ಶಾಸಕ, ಮಾಜಿ ಸಚಿವ, ಶಾಮನೂರು ಶಿವಶಂಕರಪ್ಪನವರ ಫಾರ್ಮ್ ಹೌಸ್‍ಗೆ ಭೇಟಿ ನೀಡಿದ್ದಾರೆ.
ಇಂದು ಮಧ್ಯಾಹ್ನದಿಂದ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದುಗ್ಗಾವತಿಯಲ್ಲಿನ ಶಾಮನೂರ ಅವರ ತೋಟಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿನ ಗೋ ಪಾಲನೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ನಂತರ ದಾವಣಗೆರೆ ನಗರದ ಕಲ್ಲೇಶ್ವರ ರೈಸ್ ಮಿಲ್ ಬಳಿ ಕುದುರೆಗಳ ಪಾಲನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ವೇಳೆ ನಟ ದರ್ಶನ್‍ಗೆ ಶಾಸಕ ಶಾಮನೂರ ಶಿವಶಂಕರಪ್ಪ ಪುತ್ರ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸಾಥ್ ನೀಡಿದ್ದಾರೆ.
ಇಂದು ಸಂಜೆ ವರೆಗೆ ವಿವಿಧ ಫಾರ್ಮ್ ಹೌಸ್‍ಗೆ ದರ್ಶನ್ ಭೇಟಿ ನೀಡಿದ್ದು, ಮಾಹಿತಿ ಸಂಗ್ರಹಿಸಿದ್ದಾರೆ. ನಂತರ ರಾತ್ರಿ ಎಸ್‍ಎಸ್ ಮನೆಯಲ್ಲಿಯೇ ಊಟ ಮಾಡಿದ್ದಾರೆ. ಇಂದು ದಾವಣಗೆರೆಯಲ್ಲಿಯೇ ವಾಸ್ತವ್ಯ ಹೂಡಲಿದ್ದು, ಬಾಪೂಜಿ ಗೆಸ್ಟ್ ಹೌಸ್‍ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
ಬೆಳಗ್ಗೆ ಮತ್ತೆ ಕೆಲ ಪ್ರಗತಿಪರ ರೈತರನ್ನು ಡಿ ಬಾಸ್ ಭೇಟಿ ಮಾಡಲಿದ್ದು, ವಿವಿಧ ವಿಚಾರಗಳ ಕುರಿತು ಚರ್ಚಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ವೇಳೆ ನಟ ದರ್ಶನ್ ನೋಡಿದ ಅಭಿಮಾನಿಗಳು ಅವರನ್ನು ನೋಡಲು ಮುಗಿಬಿದ್ದಿದ್ದರು.
ಧಾರವಾಡ: ನಟ ದರ್ಶನ್ ಮೇಕೆ ಸಾಕಾಣಿಕೆ ಮಾಡುತ್ತಿದ್ದಾರೆ. ಈ ಹಿನ್ನೆಲೆ ಇಂದು ಧಾರವಾಡಕ್ಕೆ ಆಗಮಿಸಿರುವ ದರ್ಶನ್, ಮಾಜಿ ಸಚಿವ ವಿನಯ್ ಕುಲಕರ್ಣಿ ಡೈರಿಗೆ ಭೇಟಿ ನೀಡಿದ್ದಾರೆ.
ವಿನಯ ಕುಲಕರ್ಣಿ ಅವರ ಬಳಿ 30 ಜಮುನಾಪೂರಿ ಮೇಕೆಯನ್ನು ಖರೀದಿ ಮಾಡಿರುವ ನಟ ದರ್ಶನ್, ನಾನು ಮೇಕೆ ಸಾಕಾಣಿಕೆ ಮಾಡುತ್ತಿರುವ ಹಿನ್ನೆಲೆ ಧಾರವಾಡಕ್ಕೆ ಮೇಕೆ ಖರೀದಿಗೆ ಬಂದಿದ್ದೇನೆ ಎಂದು ಹೇಳಿದರು. ಇವತ್ತು ಬೆಳಿಗ್ಗೆಯಿಂದ ಡೇರಿಯಲ್ಲೇ ಚಕ್ಕಡಿ ಓಡಿಸಿದ್ದ ದರ್ಶನ್, ನಾನು ಲ್ಯಾಂಬೊರ್ಗಿನಿ ಓಡಿಸೋಕು ರೇಡಿ, ಚಕ್ಕಡಿ ಓಡಿಸೋಕೂ ರೆಡಿ ಎಂದು ಹೇಳಿದರು.
ಈ ಮೊದಲು ಹಸುಗಳನ್ನು ಕೂಡಾ ಇಲ್ಲೇ ಖರೀದಿ ಮಾಡಿದ್ದೇನೆ ಎಂದ ದರ್ಶನ್, ವಿನಯ ಕುಲಕರ್ಣಿ ಬಳಿ ಎತ್ತುಗಳು ಚನ್ನಾಗಿವೆ ಎಂದು ಹೇಳಿದರು. ಇದೇ ವೇಳೆ ದರ್ಶನ್ ಬಗ್ಗೆ ಮಾತನಾಡಿದ ವಿನಯ್ ಕುಲಕರ್ಣಿ, ದರ್ಶನ್ ಮೊದಲಿನಿಂದಲೂ ಪ್ರಾಣಿ ಪ್ರಿಯ. ಮೊದಲು ಹಸುಗಳ ಹಾಲನ್ನು ಕೂಡಾ ಅವರು ಮನೆಗಳಿಗೆ ಕೊಟ್ಟಿದ್ದನ್ನು ನಾನು ನೋಡಿದ್ದೇನೆ ಎಂದು ದರ್ಶನ್ ಬಗ್ಗೆ ಹೊಗಳಿದ ವಿನಯ್ ಕುಲಕರ್ಣಿ, ಇವತ್ತು ನಾನು ದರ್ಶನ್ ಅವರಿಗೆ ಜೀವಂತ ಮೇಕೆಯನ್ನು ಪ್ರತಿ ಕೆಜಿಗೆ 400ರಂತೆ ಕೊಟ್ಟಿದ್ದೇನೆ ಎಂದು ಹೇಳಿದರು.
ದರ್ಶನ್ ಇದೇ ಡೈರಿಯಲ್ಲಿ ಒಂದು ಕುದುರೆಯನ್ನು ಕೂಡಾ ಖರೀದಿ ಮಾಡಿ ತೆಗೆದುಕೊಂಡು ಹೋಗುತ್ತಿದ್ದಾರೆ. ನಟ ದರ್ಶನ್ ವಿನಯ್ ಡೈರಿಗೆ ಬಂದಿದ್ದಾರೆ ಎಂದು ತಿಳಿದ ಅಭಿಮಾನಿಗಳು ಸಾಲು ಸಾಲಾಗಿ ಬಂದು ಕಾದರು. ನಂತರ ದರ್ಶನ್ ಅವರನ್ನು ಭೇಟಿ ಮಾಡಿ ಸಂತಸಪಟ್ಟರು.
ಶಿವಮೊಗ್ಗ: ತಾಯಿಯೊಂದಿಗೆ ಪಾರ್ಕ್ ನಲ್ಲಿ ಹುಲ್ಲು ಮೇಯುತ್ತಿದ್ದಾಗ ಪಾರ್ಕ್ ನಲ್ಲಿ ಅಳವಡಿಸಿದ್ದ ಗ್ರಿಲ್ ಗೆ ಸಿಲುಕಿಕೊಂಡ ಪರಿಣಾಮ ಮರಿ ಕುದುರೆಯ ಕರುಳು ಹೊರ ಬಂದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗದ ವಿನೋಬನಗರದ ಪಾರ್ಕ್‍ನಲ್ಲಿ ತಾಯಿ ಕುದುರೆಯೊಂದಿಗೆ ಮರಿ ಕುದುರೆ ಹುಲ್ಲು ಮೇಯುತಿತ್ತು. ಈ ವೇಳೆ ಪಾರ್ಕ್‍ನಿಂದ ತಾಯಿ ಕುದುರೆ ಮರೆಯಾಗಿದೆ. ಇದನ್ನು ಗಮನಿಸದ ಮರಿ ಕುದುರೆ ಅಲ್ಲಿಯೇ ಹುಲ್ಲು ಮೇಯುತಿತ್ತು. ನಂತರ ಪಾರ್ಕ್ ನಿಂದ ಹೊರ ಬರಲಾರದೇ ಚಡಪಡಿಸಿದೆ. ಅಲ್ಲದೇ ಪಾರ್ಕ್ ಅಳವಡಿಸಿದ್ದ ಗ್ರಿಲ್ ದಾಟಿ ಹೋಗಲು ಪ್ರಯತ್ನಿಸಿದೆ.
ಆದರೆ ಈ ವೇಳೆ ಗ್ರಿಲ್‍ಗೆ ಅಳವಡಿಸಿದ್ದ ಚೂಪಾದ ಭರ್ಜಿಗೆ ಸಿಲುಕಿಕೊಂಡ ಕುದುರೆಯ ಕರುಳು ಹೊಟ್ಟೆ ಭಾಗದಿಂದ ಹೊರಬಂದಿದೆ. ನಂತರ ಕುದುರೆ ಅಲ್ಲಿಯೇ ನರಳಾಡುತ್ತಿದ್ದ ದೃಶ್ಯ ಗಮನಿಸಿದ ಯುವಕರು ತಕ್ಷಣವೇ ಪಶು ವೈದ್ಯರನ್ನು ಸ್ಥಳಕ್ಕೆ ಕರೆಯಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪಶು ವೈದ್ಯರು ಸ್ಥಳದಲ್ಲಿಯೇ ಕುದುರೆಗೆ ಶಸ್ತ್ರಚಿಕಿತ್ಸೆ ನಡೆಸಿ ಕರಳನ್ನು ಉದರದ ಒಳಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುಂಬೈ: ಕೊರೊನಾ ಭೀತಿಗೆ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಈ ಸಮಯವನ್ನು ಸೆಲೆಬ್ರಿಟಿಗಳು ಹೇಗೆ ಕಳೆಯುತ್ತಿದ್ದಾರೆ ಎನ್ನುವ ವಿಡಿಯೋಗಳು, ಫೋಟೋಗಳನ್ನು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಸಮಯವನ್ನು ನಟ ಸಲ್ಮಾನ್ ಖಾನ್ ಹೇಗೆ ಕಳೆಯುತ್ತಿದ್ದಾರೆ ಎನ್ನುವ ವಿಡಿಯೋವನ್ನು ಅವರೇ ಹಂಚಿಕೊಂಡಿದ್ದಾರೆ.
ಸದ್ಯ ಸಲ್ಲು ಭಾಯ್ ತಮ್ಮ ಕುಟುಂಬದ ಜೊತೆಗೆ ಮುಂಬೈನ ಪನ್ವೆಲ್‍ನಲ್ಲಿರುವ ತೋಟದ ಮನೆಯಲ್ಲಿ ಸೆಲ್ಫ್ ಕ್ವಾರಂಟೈನ್ ಆಗಿದ್ದಾರೆ. ಈ ಸಮಯವನ್ನು ತಮ್ಮ ಪ್ರೀತಿಪಾತ್ರರ ಜೊತೆ ಕಳೆಯುತ್ತಿರುವ ಸಲ್ಲು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ತೋಟದಲ್ಲಿ ಸಾಕಿದ್ದ ತಮ್ಮ ಕುದುರೆಗೆ ಸೊಪ್ಪು ತಿನ್ನಿಸುತ್ತಾ, ಆ ಸೊಪ್ಪನ್ನು ತಾವೂ ತಿನ್ನುತ್ತಿರುವ ವಿಡಿಯೋವನ್ನು ಸಲ್ಲು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ನನ್ನ ಪ್ರೀತಿ ಜೊತೆ ಬೆಳಗ್ಗಿನ ತಿಂಡಿ ಎಂದು ವಿಡಿಯೋಗೆ ಕ್ಯಾಪ್ಷನ್ ಕೂಡ ಹಾಕಿ ಖುಷಿಯನ್ನು ಹಂಚಿಕೊಂಡಿದ್ದಾರೆ.
ಈ ವಿಡಿಯೋ ಸದ್ಯ ಎಲ್ಲೆಡೆ ಸಖತ್ ವೈರಲ್ ಆಗಿದ್ದು, ಸಲ್ಮಾನ್ ಅವರ ಸರಳತೆ, ಪ್ರಾಣಿ ಪ್ರೀತಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸೊಪ್ಪು ತಿನ್ನುವಾಗ ಇದು ರುಚಿಯಾಗಿದೆ ಎಂದು ಸಲ್ಲು ಭಾಯ್ ಹೇಳುತ್ತಿರುವ ಮಾತುಗಳು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ.
ಸದ್ಯ ತೋಟದ ಮನೆಯಲ್ಲಿಯೇ ಇರುವ ಸಲ್ಮಾನ್ ಅವರು ತಮಗೆ ಭಯವಾಗುತ್ತಿದೆ ಎಂದು ಹೇಳಿಕೊಂಡಿರುವ ವಿಡಿಯೋವೊಂದನ್ನು ಈ ಹಿಂದೆ ಹಂಚಿಕೊಂಡಿದ್ದರು. ನಾನು ನಿರ್ವಾಣ್ ಜೊತೆಗಿದ್ದು, ನಮ್ಮಿಬ್ಬರಿಗೂ ತುಂಬಾ ಭಯವಾಗುತ್ತಿದೆ. ಆದರೆ ಭಯವಾಗುತ್ತಿರುವುದು ನಮಗೆ ಒಳ್ಳೆಯದೇ ಆಗಿದೆ. ಭಯವಾಗುತ್ತಿರುವುದರಿಂದಲೇ ನಾವು ಬದುಕಿದ್ದೇವೆ ಎಂದು ಹೇಳಿಕೊಂಡಿದ್ದರು. ಅಲ್ಲದೆ ಕೊನೆಗೆ ಮಾರಲ್ ಆಫ್ ದಿ ಸ್ಟೋರಿ ಇಸ್, `ಕೆ ಹಮ್ ಡರ್ ಗಯಾ’ ಎಂದು ಹೇಳಿಕೊಂಡಿದ್ದಾರೆ. ನೀವು ಮನೆಯಲ್ಲಿರಿ, ಸುರಕ್ಷಿತವಾಗಿರಿ ಎಂದು ಕೇಳಿಕೊಂಡಿದ್ದರು.
ಆದರೆ ಮನೆಯಲ್ಲಿ ತಂದೆ ಸಲೀಂ ಖಾನ್ ಒಬ್ಬರೇ ಇದ್ದು, ಅವರನ್ನು ನೋಡಿ 3 ವಾರಗಳಾಯಿತು ಎಂದು ಸಲ್ಮಾನ್ ಅಳಲು ತೋಡಿಕೊಂಡಿದ್ದರು. ಆದರೂ ಸದ್ಯದ ಪರಿಸ್ಥಿತಿಯಲ್ಲಿ ಇದ್ದಲ್ಲೇ ಇರುವುದು ಒಳ್ಳೆಯದು ಎಂದು ಸಲ್ಮಾನ್ ಅಭಿಪ್ರಾಯ ಪಟ್ಟಿದ್ದರು. ಇತ್ತೀಚೆಗಷ್ಟೇ ಸಲ್ಮಾನ್ ಖಾನ್ ಸಿನಿಮಾ ದಿನಗೂಲಿ ಕಾರ್ಮಿಕರಿಗೆ ಸಹಾಯ ಹಸ್ತ ಚಾಚಿದ್ದರು. ಈ ಮೂಲಕ ಇತರರಿಗೆ ಮಾದರಿಯಾಗಿದ್ದರು. ಸುಮಾರು 25,000 ಮಂದಿ ಸಿನಿಮಾ ದಿನಗೂಲಿ ಕಾರ್ಮಿಕರ ನೆರವಿಗೆ ನಿಂತಿರುವ ಸಲ್ಲು ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ತಲಾ 3,000 ರೂ. ಹಣವನ್ನು ಕೂಡ ಹಾಕಿದ್ದರು.
ಹೈದರಾಬಾದ್: ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಸರ್ಕಾರ ಸೇರಿದಂತೆ ಪೊಲೀಸರು ಕೂಡ ವಿವಿಧ ರೀತಿಯಲ್ಲಿ ಕೊರೊನಾ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಆಂಧ್ರ ಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ಕುದುರೆಯನ್ನೇರಿ ವಿಭಿನ್ನ ರೀತಿಯಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಕರ್ನೂಲ್ ಜಿಲ್ಲೆಯ ಸಬ್ ಇನ್ಸ್‌ಪೆಕ್ಟರ್ ಮಾರುತಿ ಶಂಕರ್ ಕುದುರೆ ಸವಾರಿ ಮಾಡುತ್ತಾ ಕೊರೊನಾ ಬಗ್ಗೆ ವಿಭಿನ್ನವಾಗಿ ಜಾಗೃತಿ ಮೂಡಿಸಿದ್ದಾರೆ. ಕುದುರೆ ಏರಿ ಜಾಗೃತಿ ಮೂಡಿಸುವುದರಲ್ಲಿ ವಿಶೇಷತೆ ಏನು ಇರಲಿಲ್ಲ. ಆದರೆ ಕುದುರೆಯ ಮೇಲೆ ಬರೆದಿದ್ದ ಚಿತ್ರ ಎಲ್ಲರ ಗಮನ ಸೆಳೆದಿತ್ತು.
ಬಿಳಿ ಕುದುರೆಯ ಮೈ-ಮೇಲೆ ಕೆಂಪು ಬಣ್ಣದಿಂದ ವೈರಸ್ ಮಾದರಿಯ ಚಿತ್ರವನ್ನು ಬಿಡಿಸಲಾಗಿತ್ತು. ಈ ಕುದುರೆ ಏರಿದ ಇನ್ಸ್‌ಪೆಕ್ಟರ್ ಮಾರುತಿ ಶಂಕರ್ ಪ್ಯಾಪಿಲಿ ಪಟ್ಟಣಗಳಲ್ಲಿ ಸಂಚರಿಸುತ್ತಾ ಜಾಗೃತಿ ಮೂಡಿಸಿದ್ದಾರೆ.
ಕೊರೊನಾ ಹರಡದಂತೆ ನಾವೆಲ್ಲರೂ ಎಚ್ಚರಿಕೆ ವಹಿಸಬೇಕು. ಆಗಾಗ ಕೈ ತೊಳೆಯಿರಿ. ಲಾಕ್‍ಡೌನ್ ಸಂದರ್ಭದಲ್ಲಿ ಯಾರೂ ಕೂಡ ಮನೆಯಿಂದ ಹೊರಗೆ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಯ ನೂತನ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚೆಗೆ ಚೆನ್ನೈನಲ್ಲಿ ಪೊಲೀಸ್ ಅಧಿಕಾರಿಯೊಬ್ಬ ಕೊರೊನಾ ಹೆಲ್ಮೆಟ್ ಧರಿಸಿಕೊಂಡು ರಸ್ತೆಯಲ್ಲಿ ಬರುವ ವಾಹನ ಸವಾರರಿಗೆ ಎಚ್ಚರಿಕೆ ನೀಡುತ್ತಿದ್ದರು. ಹೆಲ್ಮೆಟ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಆ ಹೆಲ್ಮೆಟ್ ಅನ್ನು ಕಲಾವಿದ ಗೌತಮ್ ಡಿಸೈನ್ ಮಾಡಿದ್ದರು.
Andhra Pradesh: Sub Inspector Maruti Sankar, Peapally Mandal, Kurnool district rides a horse painted with images of #COVID19 virus, to create awareness among the public about the pandemic pic.twitter.com/xIFsktWahG
ಚಿಕ್ಕೋಡಿ (ಬೆಳಗಾವಿ): ವಾಹನಗಳ ಮಧ್ಯೆ ಸರಣಿ ಅಪಘಾತವಾಗುವುದು ಕಾಮನ್. ಆದರೆ ಕುದುರೆಗಳ ಷರತ್ತಿನ ಸ್ಪರ್ಧೆಯ ವೇಳೆ ಕುದುರೆ ಗಾಡಿಗಳ ಸರಣಿ ಅಪಘಾತವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಘಟನೆ ನಡೆದಿದೆ.
ಸಂಕೇಶ್ವರ ಪಟ್ಟಣದ ಶಂಕರಲಿಂಗ ಜಾತ್ರಾ ಮಹೋತ್ಸವ ಅಂಗವಾಗಿ ಜರುಗಿದ ಜೋಡಿ ಕುದುರೆಯ ಶರತ್ತಿನ ವೇಳೆ ಕುದುರೆ ಗಾಡಿಗಳು ಅಪಘಾತಕ್ಕಿಡಾಗಿವೆ. ಸಂಕೇಶ್ವರ ಬಸ್ ನಿಲ್ದಾಣದಿಂದ ನೀಡಸೊಸಿ ಗ್ರಾಮದವರೆಗೆ ಕುದುರೆ ಗಾಡಿ ಷರತ್ತು ಬಿಡಲಾಗಿತ್ತು.
ಈ ವೇಳೆ ಓಡುತ್ತಿದ್ದ ಕುದುರೆ ಕಾಲು ಜಾರಿ ಕೆಳಗೆ ಬಿದ್ದಿದೆ. ನಂತರ ಹಿಂದಿನಿಂದ ಬರುತ್ತಿದ್ದ ಮತ್ತೊಂದು ಕುದುರೆ ಗಾಡಿ ಬಂದು ಬಿದ್ದಿರುವ ಕುದುರೆ ಗಾಡಿಗೆ ಡಿಕ್ಕಿ ಹೊಡೆದಿದೆ. ನಂತರ ಇದಕ್ಕೆ ಮತ್ತೊಂದು ಗಾಡಿ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ಸಂಭವಿಸಿದರೂ ಕುದುರೆ ರೇಸ್‍ನ ಮಧ್ಯದಲ್ಲೇ ಬಿಡದೆ ಮತ್ತೆ ಸ್ಪರ್ಧೆಯಲ್ಲಿ ಭಾಗಿಯಾಗಿದ್ದು ಎಲ್ಲರ ಪ್ರಶಂಸೆಗೆ ಕಾರಣವಾಗಿದೆ. ಅದೃಷ್ಟವಶ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸಂಕೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಂಡೀಗಢ: ವರ ಬರೋದಕ್ಕೂ ಮೊದಲೇ ಮೆರವಣಿಗೆಗೆ ಸಿದ್ಧಪಡಿಸಿದ್ದ ಕುದುರೆ ಹತ್ತಿ ಊರೆಲ್ಲ ಒಂದು ಸುತ್ತು ಹಾಕಿದ್ದಾರೆ. ಉತ್ತರ ಭಾರತದ ಮದುವೆಗಳಲ್ಲಿ ವರನನ್ನು ಸಿಂಗರಿಸಿದ್ದ ಕುದುರೆಯ ಮೇಲೆ ಕೂರಿಸಿ ಮೆರವಣಿಗೆ ಮೂಲಕ ಕಲ್ಯಾಣ ಮಂಟಪಕ್ಕೆ ಕರೆತರಲಾಗುತ್ತದೆ.
ಪಂಜಾಬ್ ನ ಹೋಶಿಯಾರಪುರದ ಶಾಂತಿನಗರದಲ್ಲಿ ಶುಕ್ರವಾರ ಮದುವೆ ನಿಗದಿಯಾಗಿತ್ತು. ಒಂದು ದಿನ ಮೊದಲೇ ವಧು ಆರತಿ ಶರ್ಮಾ ಕುದುರೆ ಏರಿ ಊರೆಲ್ಲ ಸುತ್ತಿದ್ದಾರೆ. ವಧುವಿನ ಕುದುರೆ ಸವಾರಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದನ್ನೂ ಓದಿ: ವಿವಾಹ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದ ವಧು – ವಿಡಿಯೋ ವೈರಲ್
ಈ ಕುರಿತು ಪ್ರತಿಕ್ರಿಯಿಸಿರುವ ವಧುವಿನ ತಂದೆ, ನನಗೆ ಒಬ್ಬ ಮಗ ಮತ್ತು ಒಬ್ಬಳೇ ಮಗಳು. ಪುತ್ರಿ ಆರತಿ ವಿವಾಹ ಅಮೆರಿಕಾದಲ್ಲಿರುವ ಅನ್ಮೋಲ್ ವಿಜಯ್ ಪಾಟೀಲ್ ಜೊತೆ ಫೆಬ್ರವರಿ 1ರಂದು ನಿಶ್ಚಯವಾಗಿತ್ತು. ಮಗಳು ಕುದುರೆ ಸವಾರಿ ಮಾಡುಲು ಇಷ್ಟಪಟ್ಟಿದ್ದರಿಂದ ಅವಕಾಶ ನೀಡಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕುದುರೆ ಏರಿ ಪತಿ ಮನೆಗೆ ಹೋದ ಸಹೋದರಿಯರು
ಇಂದು ಮಹಿಳೆಯರು ಪುರುಷರಿಗಿಂತ ಕಡಿಮೆ ಇಲ್ಲ. ಮದುವೆಯಲ್ಲಿ ವರ ಕುದುರೆ ಮೇಲೆ ಬಂದ್ರೆ, ನಾವು ಸವಾರಿ ಮಾಡಿದ್ರೆ ತಪ್ಪಿಲ್ಲ ಎಂದು ಕುದುರೆ ಸವಾರಿ ಬಳಿಕ ಆರತಿ ಹೇಳಿಕೊಂಡಿದ್ದಾರೆ. ಸವಾರಿಯುದ್ದಕ್ಕೂ ಆರತಿ ಅವರಿಗೆ ಗೆಳತಿಯರು ಸಾಥ್ ನೀಡಿದ್ದರು. ಇದನ್ನೂ ಓದಿ: ವಧುವಿಲ್ಲದೆ ಮದುವೆ ಮಾಡಿ ಮಗನ ಕನಸು ನನಸು ಮಾಡಿದ ಅಪ್ಪ!
ಭೋಪಾಲ್: ಮದುವೆ ಸಮಾರಂಭದಲ್ಲಿ ವರ ಕುದುರೆ ಏರಿ ಮದುವೆ ಮಂಟಪಕ್ಕೆ ಬರುವುದು ಸಾಮಾನ್ಯ. ಆದರೆ ಮಧ್ಯ ಪ್ರದೇಶದ ಖಂಡ್ವಾದಲ್ಲಿ ನವವಿವಾಹಿತ ಸಹೋದರಿಯರು ಕುದುರೆ ಏರಿ ಪತಿಯ ಮನೆಗೆ ಹೋಗಿದ್ದಾರೆ.
ಸಾಕ್ಷಿ ಮತ್ತು ದೃಷ್ಟಿ ಸಹೋದರಿಯರು ಕುದುರೆ ಏರಿ ತಮ್ಮ ಪತಿಯ ಮನೆಗೆ ಹೋಗಿದ್ದಾರೆ. ಇವರ ಮದುವೆ ಜನವರಿ 22 ರಂದು ನಡೆದಿದ್ದು, ಇಬ್ಬರು ಸಹೋದರಿಯರು ವಧುವಿನ ಉಡುಪನ್ನು ಧರಿಸಿ, ತಮ್ಮ ವಿವಾಹ ಮೆರವಣಿಗೆಯಲ್ಲಿ ಕುದುರೆ ಏರಿ ತಮ್ಮ ಪತಿಯ ಮನೆಗೆ ಹೋಗಿದ್ದಾರೆ.
ಪಾಟಿದಾರ್ ಮನೆತನದಲ್ಲಿ ಮದುವೆಯಾದವರು ಕುದುರೆ ಮೂಲಕವೇ ತಮ್ಮ ಪತಿಯ ಮನೆಗೆ ಹೋಗಬೇಕೆಂಬ ಸಂಪ್ರದಾಯವಿದೆ. ಹೀಗಾಗಿ ಸಹೋದರಿಯರು ಒಂದೇ ದಿನ ಮದುವೆಯಾಗಿದ್ದರು. ವಿಶೇಷವಾಗಿ ಇಬ್ಬರು ಕುದುರೆ ಏರಿ ತಮ್ಮ ತಮ್ಮ ಪತಿಯ ಮನೆಗೆ ಹೋಗಿದ್ದಾರೆ.
ಈ ಸಮುದಾಯದ ಭಾಗವಾಗಲು ನನಗೆ ಹೆಮ್ಮೆ ಇದೆ. ದೇಶದ ಮಹಿಳೆಯರಿಗೆ ಗೌರವ ನೀಡುವಂತೆ ಸಂಪ್ರದಾಯವನ್ನು ಅನುಸರಿಸಬೇಕು. ನಾವು ನಮ್ಮ ಸಂಪ್ರದಾಯವನ್ನು ಅನುಸರಿಸುತ್ತಿದ್ದೇವೆ ಎಂದು ವಧು ಸಾಕ್ಷಿ ಹೇಳಿದ್ದಾರೆ.
Madhya Pradesh: Sakshi and Srishti, two sisters who had their wedding ceremonies on 22nd January, took out their own wedding procession (baraat) and rode horses to reach houses of their grooms in Khandwa, as a tradition followed by Patidar community. pic.twitter.com/80o27FtZuY
ಇದು 400-500 ವರ್ಷಗಳ ಹಳೆಯ ಸಂಪ್ರದಾಯವಾಗಿದೆ. ಈ ದೇಶದ ಹೆಣ್ಣುಮಕ್ಕಳನ್ನು ಸಮಾನವಾಗಿ ಪರಿಗಣಿಸಬೇಕು. ಈ ಮೂಲಕ ನಮ್ಮ ಸಂಪ್ರದಾಯವನ್ನು ಮುಂದುವರಿಸಬೇಕು. ನಮ್ಮ ಹೆಣ್ಣುಮಕ್ಕಳಿಗೆ ಗೌರವವನ್ನು ನೀಡುವಂತೆ ಇತರ ಹೆಣ್ಣುಮಕ್ಕಳಿಗೂ ಗೌರವ ಕೊಡಬೇಕೆಂದು ನಾನು ಮನವಿ ಮಾಡಿಕೊಳ್ಳುತ್ತೇನೆ ಎಂದು ವಧು ತಂದೆ ಅರುಣ್ ಹೇಳಿದರು.
ಮಂಡ್ಯ: ತಾಯಿ ಪ್ರೀತಿ ಮುಂದೆ ಎಲ್ಲವೂ ನಶ್ವರ. ಅದರಲ್ಲೂ ಪ್ರಾಣಿಗಳ ಪ್ರೀತಿ ಮುಂದೆ ಮಾನವನು ಕೂಡ ಕಣ್ಣೀರು ಹಾಕಬೇಕು. ಇಲ್ಲೊಂದು ಕುದುರೆ ಮರಿ ಶ್ವಾನಗಳ ದಾಳಿಗೆ ಬಲಿಯಾಗಿದೆ. ತನ್ನ ಮರಿ ಸಾವಿಗೀಡಾದ ನೋವಿನಿಂದ ಹೊರ ಬರದ ತಾಯಿ ಕುದುರೆ ಸುಮಾರು 5 ಗಂಟೆಗಳ ಕಾಲ ಮರಿಯ ಮೃತದೇಹದ ಮುಂದೆ ನಿಂತು ರೋದನೆ ವ್ಯಕ್ತಪಡಿಸಿತ್ತು.
ಜಿಲ್ಲೆಯ ಶ್ರೀರಂಗಪಟ್ಟಣದ ತಾಲೂಕಿನ ಗಂಜಾಮ್ ಗ್ರಾಮದಲ್ಲಿ ಈ ದೃಶ್ಯ ಕಂಡು ಬಂದಿದೆ. ಗ್ರಾಮದ ಟಬು ಎಂಬವರು ಕುದುರೆ ಹಾಗೂ ಮರಿಯನ್ನು ಸಾಕಿದ್ದರು. ಸೋಮವಾರ ರಾತ್ರಿ ಟಬು ತಮ್ಮ ಮನೆಯ ಮುಂದೆ ಕುದುರೆ ಹಾಗೂ ಮರಿಯನ್ನು ಕಟ್ಟಿದ್ದರು.
ಈ ವೇಳೆ ನಾಯಿಗಳ ಹಿಂಡು ಕುದುರೆ ಮರಿಯನ್ನು ಎಳೆದೊಯ್ದು ಕಚ್ಚಿ ಸಾಯಿಸಿವೆ. ಮರಿಯ ಸಾವಿನಿಂದ ಕಂಗಾಲಾದ ತಾಯಿ ಕುದುರೆ ಮೃತ ಮರಿ ಕುದುರೆ ಮುಂದೆ ನಿಂತ ಮೂಕ ರೋದನೆ ವ್ಯಕ್ತಪಡಿಸಿತ್ತು. ಮೃತ ಕುದುರೆ ಮರಿ ಬಳಿ ತೆರಳಲು ಯಾರಿಗೂ ಅವಕಾಶ ಕೊಡದೆ ರೋಧನೆ ಅನುಭವಿಸಿತು.
ಮರಿಯ ಮುಂದೆ ನಿಂತ ಕುದುರೆ ಸ್ಥಿತಿ ಕಂಡು ಸ್ಥಳೀಯರು ಕಂಬಿನಿ ಮಿಡಿದರು. ಕಳೆದ ಹಲವು ದಿನಗಳಿಂದ ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇವುಗಳ ನಿಯಂತ್ರಣಕ್ಕೆ ಕಡಿವಾಣ ಹಾಕುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.