Tag: Horse Riding

  • ಹನಿಮೂನ್‌ಗೆ ಹೋದಾತ ಕುದುರೆ ಸವಾರಿ ಮಾಡ್ತಿದ್ದಾಗ ಬಿದ್ದು ಸಾವು

    ಹನಿಮೂನ್‌ಗೆ ಹೋದಾತ ಕುದುರೆ ಸವಾರಿ ಮಾಡ್ತಿದ್ದಾಗ ಬಿದ್ದು ಸಾವು

    ಮುಂಬೈ: ನವ ವಿವಾಹಿತ ವ್ಯಕ್ತಿಯೊಬ್ಬ ಹನಿಮೂನ್‌ಗೆ (Honeymoon) ಹೋಗಿದ್ದ ಸಂದರ್ಭ ಕುದುರೆ ಸವಾರಿ (Horse Riding) ಮಾಡುತ್ತಿದ್ದಾಗ ಬಿದ್ದು ಸಾವನ್ನಪ್ಪಿರುಗ ಘಟನೆ ಮಹಾರಾಷ್ಟ್ರದಲ್ಲಿ (Maharashtra) ನಡೆದಿದೆ.

    ಮೃತ ವ್ಯಕ್ತಿಯನ್ನು ಮೊಹಮ್ಮದ್ ಕಾಶಿಫ್ ಇಮ್ತಿಯಾಜ್ ಶೇಖ್ ಎಂದು ಗುರುತಿಸಲಾಗಿದೆ. ಶೇಕ್ ತನ್ನ ಪತ್ನಿ ಹಾಗೂ ಮತ್ತೊಬ್ಬ ದಂಪತಿಯೊಂದಿಗೆ ಹನಿಮೂನ್‌ಗೆ ತೆರಳಿದ್ದ ವೇಳೆ ದುರ್ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಜನವರಿ 25 ರಂದು ಮಾಥೆರಾನ್‌ನಲ್ಲಿ (Matheron) ನಾಲ್ವರು ಬೇರೆ ಬೇರೆ ಕುದುರೆಗಳಲ್ಲಿ ಸವಾರಿ ಮಾಡುತ್ತಿದ್ದರು. ಅವರು ನಗರದ ಸನ್ ಶೇಡ್ ಹೋಟೆಲ್‌ನಿಂದ ಸುಮಾರು 70 ಮೀ. ದೂರದಲ್ಲಿದ್ದಾಗ ಕುದುರೆ ಏಕಾಏಕಿ ವೇಗವಾಗಿ ಓಡತೊಡಗಿತ್ತು. ಇದರಿಂದ ಸವಾರ ನಿಯಂತ್ರಣ ತಪ್ಪಿ ಬಿದ್ದಿದ್ದಾರೆ.

    ಅವರನ್ನು ಮೊದಲು ಮಾಥೆರಾನ್‌ನ ಬಿಜೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ವ್ಯಕ್ತಿಯನ್ನು ಉಲ್ಲಾಸ್‌ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರವಾದ ಗಾಯಗಳಿಂದಾಗಿ ಅವರು ಶನಿವಾರ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೇರೊಬ್ಬನ ಜೊತೆ ಮೊಬೈಲ್‍ನಲ್ಲಿ ಮಾತನಾಡಿದ್ದಕ್ಕೆ ಪ್ರಿಯತಮೆಯ ಮೇಲೆ ಶೂಟೌಟ್!

    ಕುದುರೆ ಸವಾರಿಯ ಸಂದರ್ಭದಲ್ಲಿ ಪ್ರವಾಸಿಗರಿಗೆ ಹೆಲ್ಮೆಟ್ ನೀಡಬೇಕು ಎಂಬ ನಿಯಮವಿದ್ದರೂ ಅದನ್ನು ಹೆಚ್ಚಿನವರು ಪಾಲಿಸುತ್ತಿಲ್ಲ. ಹಲವು ಬಾರಿ ಪ್ರವಾಸಿಗರು ಹೆಲ್ಮೆಟ್ ಬಳಸಲು ನಿರಾಕರಿಸುತ್ತಾರೆ. ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    2010 ರಲ್ಲಿ ‘ಲೋಯಿನ್ಸ್ ಆಫ್ ಪಂಜಾಬ್ ಪ್ರೆಸೆಂಟ್ಸ್’ನ ನಟ, ನಿರ್ಮಾಪಕ ಮನೀಶ್ ಆಚಾರ್ಯ ಅವರು ತಮ್ಮ ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ಮಾಥೆರಾನ್‌ಗೆ ತೆರಳಿದ್ದಾಗಿ ಕುದುರೆಯಿಂದ ಬಿದ್ದು ತಲೆಗೆ ಗಂಭೀರವಾದ ಗಾಯಗಳಾಗಿತ್ತು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಲ್ಲಿ ಅವರು ಸಾವನ್ನಪ್ಪಿದ್ದರು. ಇದನ್ನೂ ಓದಿ:  ಬೆಂಗಳೂರಿನಲ್ಲಿ ಬಿಬಿಸಿ ಸಾಕ್ಷ್ಯಚಿತ್ರ ಪ್ರಸಾರ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕುದುರೆ ಸವಾರಿ ಮಾಡುತ್ತೇನೆಂದಿದ್ದಕ್ಕೆ ಜೀವ ಬೆದರಿಕೆ- ಪೊಲೀಸರ ಮೊರೆ ಹೋದ ವರ

    ಕುದುರೆ ಸವಾರಿ ಮಾಡುತ್ತೇನೆಂದಿದ್ದಕ್ಕೆ ಜೀವ ಬೆದರಿಕೆ- ಪೊಲೀಸರ ಮೊರೆ ಹೋದ ವರ

    ಲಕ್ನೋ: ವಿವಾಹ ಸಮಯದಲ್ಲಿ ಕುದುರೆ ಸವಾರಿ ಮಾಡದಂತೆ ಸ್ಥಳೀಯರ ಬೆದರಿಕೆ ಹಾಕಿರುವುದಕ್ಕೆ ವರನ ಕುಟುಂಬ ಪೊಲೀಸರ ರಕ್ಷಣೆ ಕೋರಿದ ಘಟನೆ ಉತ್ತರಪ್ರದೇಶದ ಮಹೋಬಾದಲ್ಲಿ ನಡೆದಿದೆ.

    ಕಳೆದ ಹಲವಾರು ವರ್ಷಗಳಿಂದ, ನಮ್ಮ ಹಳ್ಳಿಯಲ್ಲಿ ಹಳೆಯ ಸಂಪ್ರದಾಯಗಳ ಪ್ರಕಾರ ಮದುವೆಗಳು ನಡೆಯುತ್ತಿವೆ. ಮದುವೆ ಸಮಯದಲ್ಲಿ ಕುದುರೆ ಸವಾರಿ ಮಾಡುವುದು ಸಂಪ್ರದಾಯವಾಗಿದೆ. ನನ್ನ ಮದುವೆ ಮೆರವಣಿಗೆಗಾಗಿ ನಾನು ಕುದುರೆ ಸವಾರಿ ಮಾಡಲು ಬಯಸುತ್ತೇನೆ ಆದರೆ ಇತರ ಸಮುದಾಯಗಳಿಂದ ಬಂದ ಕೆಲವರು ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ವರ ಅಲಕ್ ರಾಮ್ ಹೇಳಿದ್ದಾರೆ. ಇದನ್ನೂ ಓದಿ: ಗಂಡನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಐಪಿಎಸ್ ಅಧಿಕಾರಿ

    ಮದುವೆ ಸಂದರ್ಭದಲ್ಲಿ ಕುದುರೆ ಸವಾರಿ ಮಾಡದಂತೆ ಸ್ಥಳೀಯರು ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ರಕ್ಷಣೆ ನೀಡುವಂತೆ ವರ ಪೊಲೀಸರಲ್ಲಿ ರಕ್ಷಣೆ ಕೋರಿದ್ದಾರೆ. ಈ ಸಂಬಂದ ತೀವ್ರ ನಿಗಾ ವಹಿಸಿದ್ದೇವೆ. ಆದರೆ ಕುದುರೆ ಸವಾರಿ ಮಾಡುವುದರಿಂದ ಗ್ರಾಮದಲ್ಲಿ ಯಾರಿಗೆ ತೊಂದರೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದರೇ ಕೊಲ್ಲುವುದಾಗಿ ಗ್ರಾಮಸ್ಥರು ಬೆದರಿಕೆ ಹಾಕಿದ್ದಾರೆ ಎಂದು ವರ ಅಲಕ್ ರಾಮ್ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ನನ್ನ ಮಗನ ಮದುವೆ ಜೂನ್ 18 ರಂದು ನಡೆಯಲಿದ್ದು, ಈ ವೇಳೆ ಕುದುರೆ ಸವಾರಿ ಮಾಡಿದರೆ ಗ್ರಾಮಸ್ಥರು ಕೊಲ್ಲುವ ಬೆದರಿಕೆ ಹಾಕಿರುವುದರಿಂದ ಪೊಲೀಸರ ರಕ್ಷಣೆ ಕೋರುತ್ತಿರುವುದಾಗಿ ರಾಮ್ ತಂದೆ ಗಯಾದಿನ್ ತಿಳಿಸಿದ್ದಾರೆ.

  • ಲಾಕ್‍ಡೌನ್ ಇದ್ರೂ ಹೆದ್ದಾರಿಯಲ್ಲಿ ಬಿಜೆಪಿ ಶಾಸಕನ ಪುತ್ರನಿಂದ ಕುದುರೆ ಸವಾರಿ

    ಲಾಕ್‍ಡೌನ್ ಇದ್ರೂ ಹೆದ್ದಾರಿಯಲ್ಲಿ ಬಿಜೆಪಿ ಶಾಸಕನ ಪುತ್ರನಿಂದ ಕುದುರೆ ಸವಾರಿ

    ಚಾಮರಾಜನಗರ: ಇಡೀ ದೇಶವೇ ಕೊರೊನಾ ಅರ್ಭಟಕ್ಕೆ ನಲುಗಿ ಹೋಗುತ್ತಿದೆ. ಹೀಗಿರುವಾಗ ಗುಂಡ್ಲುಪೇಟೆ ಬಿಜೆಪಿ ಶಾಸಕ ನಿರಂಜನ ಕುಮಾರ್ ಪುತ್ರ ಭುವನಕುಮಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುದುರೆ ಸವಾರಿ ನಡೆಸಿದ್ದಾರೆ.

    ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಕೇರಳ ಹೆದ್ದಾರಿಯಲ್ಲಿ ಕುದುರೆ ಓಡಿಸಿದ್ದಾರೆ. ಕೊರೊನಾ ಭೀತಿ ಎಲ್ಲರನ್ನೂ ಕಾಡುತ್ತಿದೆ. ಅಲ್ಲದೇ ಲಾಕ್‍ಡೌನ್ ಕೂಡ ಇನ್ನೂ ಮುಕ್ತಾಯವಾಗಿಲ್ಲ. ಮಾಸ್ಕ್ ಅನ್ನೂ ಕೂಡ ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ. ಇಷ್ಟೆಲ್ಲಾ ಇರುವಾಗ ಮೋಜು ಮಸ್ತಿಗೆ ಕುದುರೆ ಸವಾರಿ ಮಾಡಿರುವ ಶಾಸಕರ ಪುತ್ರನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

    ಶಾಸಕನ ಪುತ್ರ ಎಂಬ ಕಾರಣಕ್ಕೆ ಈ ರೀತಿ ಕುದುರೆ ಸವಾರಿ ನಡೆಸಿರುವುದು ಎಷ್ಟು ಸರಿ ಎಂಬ ಮಾತುಗಳನ್ನು ಸಾರ್ವಜನಿಕರ ವಲಯದಲ್ಲಿ ಕೇಳಿಬರುತ್ತಿದೆ. ಯಾರಾದರೂ ಸರಿ ಸರ್ಕಾರದ ನಿಯಮ ಉಲ್ಲಂಘಿಸುವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕ ವಲಯದಿಂದ ಒತ್ತಾಯ ಕೇಳಿಬಂದಿದೆ.

  • ಸಾರ್ವಕಾಲಿಕ ಇಷ್ಟಪಡುವ ಹವ್ಯಾಸವನ್ನ ರಿವೀಲ್ ಮಾಡಿದ ಜಡೇಜಾ

    ಸಾರ್ವಕಾಲಿಕ ಇಷ್ಟಪಡುವ ಹವ್ಯಾಸವನ್ನ ರಿವೀಲ್ ಮಾಡಿದ ಜಡೇಜಾ

    ಗಾಂಧಿನಗರ: ಭಾರತ ಕ್ರಿಕೆಟ್ ತಂಡದ ಆಲ್‍ರೌಡರ್ ರವೀಂದ್ರ ಜಡೇಜಾ ಅವರಿಗೆ ಕ್ರಿಕೆಟ್ ಅಷ್ಟೇ ಅಲ್ಲದೆ ವಿವಿಧ ಹವ್ಯಾಸಗಳಿವೆ. ಈ ಪೈಕಿ ಒಂದನ್ನು ಸಾರ್ವಕಾಲಿಕ ಇಷ್ಟಪಡುವ ಹವ್ಯಾಸವೆಂದು ಜಡ್ಡು ಹೇಳಿದ್ದಾರೆ.

    ರವೀಂದ್ರ ಜಡೇಜಾ ಕುದುರೆ ಓಡಿಸುತ್ತಿರುವ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ‘ಇದು ನಾನು ಇಷ್ಟ ಪಡುವ ಸರ್ವಕಾಲಿಕ ಹವ್ಯಾಸ’ ಎಂದು ಬರೆದುಕೊಂಡಿದ್ದಾರೆ.

    ಹೆಮ್ಮಾರಿ ಕೊರೊನಾ ವೈರಸ್ ವಿಶ್ವದ ಎಲ್ಲಾ 195 ದೇಶಗಳಿಗೆ ಹರಡಿ ತಲ್ಲಣಗೊಳಿಸಿದೆ. ಇದರಿಂದಾಗಿ ಭಾರತದಲ್ಲಿ ಏಪ್ರಿಲ್ 14ರವರೆಗೆ ಲಾಕ್‍ಡೌನ್ ಘೋಷಿಸಲಾಗಿದೆ. ಈ ಸಮಯದಲ್ಲಿ ಭಾರತ ಸೇರಿದಂತೆ ಎಲ್ಲಾ ಕ್ರೀಡಾ ಪಂದ್ಯಾವಳಿಗಳನ್ನು ರದ್ದುಪಡಿಸಲಾಗಿದೆ ಅಥವಾ ಮುಂದೂಡಲಾಗಿದೆ. ಲಾಕ್‍ಡೌನ್‍ನಿಂದಾಗಿ ಎಲ್ಲಾ ಆಟಗಾರರು ತಮ್ಮ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ.

    ಟೀಂ ಇಂಡಿಯಾ ಆಲ್‍ರೌಡಂರ್ ರವೀಂದ್ರ್ ಜಡೇಜಾ ಅವರು ಮಂಗಳವಾರ ತಮ್ಮ ಫಾರ್ಮ್ ಹೌಸ್‍ನಲ್ಲಿ ಕುದುರೆ ಸವಾರಿ ಮಾಡಿದ್ದಾರೆ. ಜಡೇಜಾ ಕುದುರೆ ಸವಾರಿ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಜಡೇಜಾ ಅವರು ಟ್ವೀಟ್‍ನಲ್ಲಿ ವಿಡಿಯೋ ಹಂಚಿಕೊಂಡು, ‘ಲಾಕ್‍ಡೌನ್ ಅನ್ನು ಅನುಸರಿಸಿ, ಮನೆಯಲ್ಲಿಯೇ ಇರಿ ಎಂದು ಜನರಿಗೆ ಮನವಿ ಮಾಡಿಕೊಂಡಿದ್ದರು.

  • ಪುತ್ರನಿಗೆ ಕುದುರೆ ಸವಾರಿ ಹೇಳಿಕೊಟ್ಟ ದರ್ಶನ್- ವಿಡಿಯೋ ನೋಡಿ

    ಪುತ್ರನಿಗೆ ಕುದುರೆ ಸವಾರಿ ಹೇಳಿಕೊಟ್ಟ ದರ್ಶನ್- ವಿಡಿಯೋ ನೋಡಿ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಪುತ್ರ ವಿನೀತ್‍ರನ್ನು ಈಗಾಗಲೇ ಬಾಲ ನಟನಾಗಿ ಸ್ಯಾಂಡಲ್‍ವುಡ್‍ಗೆ ಪರಿಚಯ ಮಾಡಿಸಿದ್ದಾರೆ. ಹೊಸ ವರ್ಷದ ಸಂಭ್ರಮದಲ್ಲಿ ದರ್ಶನ್ ಅವರು ಪುತ್ರನೊಂದಿಗೆ ಕುದುರೆ ಸವಾರಿ ಮಾಡುತ್ತಿರುವ ವಿಡಿಯೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    ದರ್ಶನ್ ಪಾರ್ಮ್ ಹೌಸ್‍ನಲ್ಲಿ ಕುದುರೆ ಸವಾರಿಯನ್ನು ಮಾಡಲಾಗಿದ್ದು, 4:47 ನಿಮಿಷದ ವಿಡಿಯೋವನ್ನು ದರ್ಶನ್ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಅಪ್ಪನ ಸೂಚನೆಗಳಂತೆ ವಿನೀತ್ ಕುದುರೆ ಸವಾರಿ ಕಲಿಯುತ್ತಿರುವುದನ್ನು ಕಾಣಬಹುದಾಗಿದೆ.

    ದರ್ಶನ್ ಅವರ ಈ ಟ್ವೀಟ್ ಅಭಿಮಾನಿಗಳು ಪ್ರತಿಕ್ರಿಯೆ ನೀಡುತ್ತಿದ್ದು, ಇಬ್ಬರ ಕುದುರೆ ಸವಾರಿ ನೋಡಲು ತುಂಬಾ ಚೆನ್ನಾಗಿದೆ. ಸದಾ ತಮ್ಮ ನೆಚ್ಚಿನ ನಟನ ಕುಟುಂಬದಲ್ಲಿ ಸಂತೋಷ ತುಂಬಿರಲಿ ಎಂದು ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.

    ಹೊಸ ವರ್ಷದ ಮೊದಲ ದಿನ ದರ್ಶನ್ ತಮ್ಮ ಕುಟುಂಬದೊಂದಿಗೆ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ದರ್ಶನ್ ಪತ್ನಿ ಹಾಗೂ ಪುತ್ರನೊಂದಿಗೆ ನಿರ್ಮಾಪಕಿ ಶೈಲಜಾ ನಾಗ್ ಹಾಗೂ ಸಂಗೀತ ನಿರ್ದೇಶಕ ಹರಿಕೃಷ್ಣ ಅವರನ್ನು ಫೋಟೋದಲ್ಲಿ ಕಾಣಬಹುದಾಗಿದೆ. ಈ ಫೋಟೋವನ್ನು ದರ್ಶನ್ ಅವರ ಟ್ವೀಟ್ ಖಾತೆಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿರುವ ಅಭಿಮಾನಿಗಳು ‘ಅಣ್ಣ-ಅತ್ತಿಗೆ ಜೊತೆಗಿರುವುದನ್ನು ನೋಡಲು ಎರಡು ಸಾಲದು’ ಎಂದು ಹೇಳಿದ್ದಾರೆ.