Tag: Horse

  • ಕುದುರೆ ಜೊತೆ ಸೆಕ್ಸ್‌ – ಕಾಮುಕನ ಕೃತ್ಯ ಸಿಸಿಟಿವಿಯಲ್ಲಿ ಸೆರೆ; ಸೈಕೋ ಅರೆಸ್ಟ್‌

    ಕುದುರೆ ಜೊತೆ ಸೆಕ್ಸ್‌ – ಕಾಮುಕನ ಕೃತ್ಯ ಸಿಸಿಟಿವಿಯಲ್ಲಿ ಸೆರೆ; ಸೈಕೋ ಅರೆಸ್ಟ್‌

    ಮುಂಬೈ: ಮಹಾರಾಷ್ಟ್ರದ ನಾಗ್ಪುರದ (Nagpur) ಹಾರ್ಸ್ ರೈಡಿಂಗ್ ಅಕಾಡೆಮಿಯಲ್ಲಿ  (Horse Riding Academy ) ಕುದುರೆಯ (Horse) ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 30 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಚೋಟ್ಯಾ ಸುಂದರ್ ಖೋಬ್ರಗಡೆ ಎಂದು ಗುರುತಿಸಲಾಗಿದೆ. ಆರೋಪಿ ಮೇ 17 ರಂದು ಗಿಟ್ಟಿಖಾದನ್ ಪ್ರದೇಶದಲ್ಲಿರುವ ಜಿಲ್ಲಾ ಹಾರ್ಸ್‌ ರೈಡಿಂಗ್‌ ಅಕಾಡೆಮಿ ಆವರಣಕ್ಕೆ ರಾತ್ರಿ ವೇಳೆ ಅತಿಕ್ರಮವಾಗಿ ಪ್ರವೇಶಿಸಿದ್ದಾನೆ. ಬಳಿಕ ಕುದುರೆ ಒಂದರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ, ಅಕಾಡೆಮಿಯ ಮೇಲ್ವಿಚಾರಕರಿಗೆ ಮಾಹಿತಿ ರವಾನಿಸಿದ್ದಾರೆ.

    ಆರೋಪಿಯ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರೋಪಿ ವಿರುದ್ಧ ಅಕಾಡೆಮಿಯ ಸಿಬ್ಬಂದಿ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯ ವಿರುದ್ಧ ಬಿಎನ್‌ಎಸ್ ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ವಿರುದ್ಧ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಕಾಲುವೆಗೆ ಬಿದ್ದಿದ್ದ ಕುದುರೆ ರಕ್ಷಣೆ ಮಾಡಿದ ಯುವಕ

    ಕಾಲುವೆಗೆ ಬಿದ್ದಿದ್ದ ಕುದುರೆ ರಕ್ಷಣೆ ಮಾಡಿದ ಯುವಕ

    ಯಾದಗಿರಿ: ತುಂಬಿ ಹರಿಯುತ್ತಿದ್ದ ಕಾಲುವೆಗೆ ಬಿದ್ದ ಕುದುರೆಯನ್ನು ಯುವಕ ರಕ್ಷಿಸಿದ ಘಟನೆ ಯಾದಗಿರಿ (Yadagiri) ಜಿಲ್ಲೆಯ ಹುಣಸಗಿ ತಾಲೂಕಿನ ಅಗ್ನಿ ಗ್ರಾಮದಲ್ಲಿ ನಡೆದಿದೆ.

    ಅಗತೀರ್ಥ ಗ್ರಾಮದ ಯುವಕ ಮೌನೇಶ ಕುದುರೆ ರಕ್ಷಿಸಿದ (Horse Rescue) ಸಾಹಸಿ ಯುವಕ ಎಂದು ಹೇಳಲಾಗಿದೆ. ಯುವಕ ಮೌನೇಶ್ ಕುದುರೆ ಕಾಲುವೆಗೆ ಬಿದ್ದಿದ್ದನ್ನು ಗಮನಿಸಿದ ಕೂಡಲೇ ಪ್ರಾಣದ ಹಂಗು ತೊರೆದು ಕಾಲುವೆಗಿಳಿದಿದ್ದಾನೆ. ತುಂಬಿ ಹರಿಯುತ್ತಿದ್ದ ಕಾಲುವೆಯಲ್ಲಿ ಕೊಚ್ಚಿ ಹೋಗ್ತಿದ್ದ ಕುದುರೆಯನ್ನ ಸುರಕ್ಷಿತವಾಗಿ ದಡ ಸೇರಿಸಿದ್ದಾನೆ. ಇದನ್ನೂ ಓದಿ: ಯಾವ್ದೇ ಕೇಸ್ ಹಾಕಿದ್ರೂ ಫೇಸ್ ಮಾಡೋಕೆ ನಾನ್ ರೆಡಿ – ಬಿಜೆಪಿಗೆ ಎಂ.ಕೆ ಸ್ಟಾಲಿನ್ ಪುತ್ರ ಸವಾಲ್

    ಅಗ್ನಿ ಗ್ರಾಮದ ಹೊರವಲಯದ ನಾರಾಯಣಪುರ ಡ್ಯಾಂ ಎಡದಂಡೆ ಕಾಲುವೆಗೆ ಕುದುರೆ ಬಿದ್ದಿತ್ತು. ಪ್ರಾಣದ ಹಂಗು ತೊರೆದು ಕುದುರೆ ರಕ್ಷಣೆ ಮಾಡಿದ ಯುವಕನ ಕಾರ್ಯಕ್ಕೆ ಗ್ರಾಮಸ್ಥರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • SDRF ತಂಡದಿಂದ 20 ಅಡಿ ಬಾವಿಗೆ ಬಿದ್ದಿದ್ದ ಕುದುರೆಯ ರಕ್ಷಣೆ

    SDRF ತಂಡದಿಂದ 20 ಅಡಿ ಬಾವಿಗೆ ಬಿದ್ದಿದ್ದ ಕುದುರೆಯ ರಕ್ಷಣೆ

    ಬೆಳಗಾವಿ: ನಗರದ ಹೊರವಲಯ ಖಾಸಬಾಗ್‍ನ ಟೀಚರ್ಸ್ ಕಾಲೋನಿಯಲ್ಲಿ 20 ಅಡಿ ಆಳದ ಬಾವಿಗೆ ಬಿದ್ದಿದ್ದ ಕುದುರೆ (Horse Rescue) ಯನ್ನು ಅಗ್ನಿ ಮತ್ತು ಎಸ್ ಡಿಆರ್ ಎಫ್ ತಂಡದ ಸಿಬ್ಬಂದಿ ಜಂಟಿ ಕಾರ್ಯಾಚರಣೆ ಮೂಲಕ ಸುರಕ್ಷಿತವಾಗಿ ರಕ್ಷಣೆ ಮಾಡಿರುವ ಘಟನೆ ನಡೆದಿದೆ.

    ನಗರದ ಹೊರವಲಯ ಖಾಸಬಾಗ್‍ನ ಟೀಚರ್ಸ್ ಕಾಲೋನಿ ಯ ನವೀನ್ ಹೇರೇಕರ್ ಎಂಬವರ ಮನೆ ಎದುರು ನಿರ್ಮಿಸಿದ್ದ ಬಾವಿಯಲ್ಲಿ ಆಯಾತಪ್ಪಿ ಕುದುರೆ ಬಿದ್ದಿತ್ತು. ಭಾನುವಾರ ಮಧ್ಯಾಹ್ನ 1.30ರ ಸುಮಾರಿಗೆ ನಡೆದ ಘಟನೆಯ ದೃಶ್ಯ ವೈರಲ್ ಆಗಿದ್ದು, ಮೂರು ಅಡಿ ಅಗಲ ಇರುವ 20 ಅಡಿ ಆಳದ ಬಾವಿಗೆ ಕುದುರೆ ಬಿದ್ದಿತ್ತು.

    ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ, ಎಸ್‍ಡಿಆರ್ ಎಫ್ ಸಿಬ್ಬಂದಿ ಕುದುರೆಯ ರಕ್ಷಣೆ ಮಾಡಿದ್ದಾರೆ. ಬಳಿಕ ಮನೆ ಮಾಲೀಕರಿಗೆ ಸೂಕ್ತ ಸುರಕ್ಷಾ ಕ್ರಮ ಅನುಸರಿಸುವಂತೆ ಎಚ್ಚರಿಕೆ ನೀಡಿದ್ದಾರೆ. ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಭಾರೀ ಮಳೆಗೆ ಪ್ರವಾಹದಂತಾದ ಜ್ಯುವೆಲ್ಲರಿ ಶಾಪ್ – ಕೊಚ್ಚಿ ಹೋಯ್ತು 2.5 ಕೋಟಿಯ ಆಭರಣ

     

  • ಕುದುರೆ ಕುಸಿದು ಬಿದ್ದು ಖ್ಯಾತ ಮಾಡೆಲ್ ನಿಧನ

    ಕುದುರೆ ಕುಸಿದು ಬಿದ್ದು ಖ್ಯಾತ ಮಾಡೆಲ್ ನಿಧನ

    ಮಗೆ ಕುದುರೆ (Horse) ಓಡಿಸುವುದು ಅಂದರೆ ತುಂಬಾ ಇಷ್ಟ. ಅವಕಾಶ ಸಿಕ್ಕಾಗೆಲ್ಲ ನಾನು ಕುದುರೆಯೊಂದಿಗೆ ವೇಳೆ ಕಳೆಯುತ್ತೇನೆ ಎಂದು ಸದಾ ಹೇಳುತ್ತಿದ್ದ ಆಸ್ಟ್ರೇಲಿಯಾದ (Australia) ಖ್ಯಾತ ಮಾಡಲ್ ಸಿಯನ್ನಾ ವಿಯರ್ (Sienna Weir), ಅದೇ ಕುದುರೆ ಸವಾರಿಯಲ್ಲಿ ನಡೆದ ಅವಘಡದಲ್ಲಿ ಪ್ರಾಣಬಿಟ್ಟಿದ್ದಾರೆ.

    ಏಪ್ರಿಲ್ 2 ರಂದು ಆಸ್ಟ್ರೇಲಿಯಾದ ವಿಂಡ್ಸರ್ ಪೋಲೋ ಗ್ರೌಂಡ್ ನಲ್ಲಿ ನಡೆಯುತ್ತಿದ್ದ ಹಾರ್ಸ್ ರೈಡ್ ನಲ್ಲಿ ಸಿಯನ್ನಾ ಪಾಲ್ಗೊಂಡಿದ್ದರು. ಕುದುರೆ ಸವಾರಿ ಮಾಡುವಾಗ ಕುದುರೆ ಕುಸಿದು ಬಿದ್ದಿದೆ. ಆ ಅವಘದಲ್ಲಿ ನೆಲಕ್ಕೆ ಬಿದ್ದ ಸಿಯನ್ನಾ ತಲೆಗೆ ತೀವ್ರ ಪೆಟ್ಟುಬಿದ್ದಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿ ವಿಶೇಷ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

    ಒಂದು ತಿಂಗಳು ಕಳೆದರೂ ಸಿಯನ್ನಾ ವಿಯರ್ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಳ್ಳದೇ ಇರುವ ಕಾರಣಕ್ಕಾಗಿ ಕುಟುಂಬದ ಅನುಮತಿಯೊಂದಿಗೆ ಮೇ 4ರಂದು ಲೈಫ್ ಸಪೋರ್ಟ್ ತೆಗೆಯಲಾಗಿದೆ. ಈ ಮೂಲಕ ಸಿಯನ್ನಾ ನಿಧನರಾಗಿದ್ದಾರೆ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ:ಮೂಗಿನ ಶಸ್ತ್ರಚಿಕಿತ್ಸೆ ಬಳಿಕ ಖಿನ್ನತೆಗೆ ಒಳಗಾಗಿದ್ಯಾಕೆ? ಅಸಲಿ ವಿಚಾರ ಬಿಚ್ಚಿಟ್ಟ ಪ್ರಿಯಾಂಕಾ ಚೋಪ್ರಾ

    ಸಿಯನ್ನಾ ವಿಯರ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೆ ಅಪಾರ ಅಭಿಮಾನಿಗಳು ದುಃಖಕ್ಕೆ ಜಾರಿದ್ದಾರೆ. ಅಗಲಿದ ಮಾಡಲ್ ಗೆ ಕಂಬನಿ ಮಿಡಿದಿದ್ದಾರೆ. ‘ನಮ್ಮ ಹೃದಯದಲ್ಲಿ ಸದಾ ನೀವು ಇರುತ್ತೀರಿ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ಅವರ ಫೋಟೋ ಹಂಚಿಕೊಂಡಿದ್ದಾರೆ.

  • ಬಾಲಿವುಡ್ ಖ್ಯಾತನಟ ರಣದೀಪ್ ಹೂಡಾಗೆ ಅಪಘಾತ: ಸ್ಥಿತಿ ಗಂಭೀರ

    ಬಾಲಿವುಡ್ ಖ್ಯಾತನಟ ರಣದೀಪ್ ಹೂಡಾಗೆ ಅಪಘಾತ: ಸ್ಥಿತಿ ಗಂಭೀರ

    ಕುದುರೆ ಸವಾರಿ ಮಾಡುವಾಗ ಪ್ರಜ್ಞಾಹೀನರಾಗಿ ಬಿದ್ದ ಪರಿಣಾಮ ಬಾಲಿವುಡ್ ನಟ ರಣದೀಪ್ ಹೂಡಾ ಗಾಯಗೊಂಡಿದ್ದಾರೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ರಣದೀಪ್ ಅವರಿಗೆ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆಗೆ ನಟ ಸ್ಪಂದಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ಕುದುರೆ ಮೇಲಿಂದ ಬಿದ್ದ ಪರಿಣಾಮವಾಗಿ ಕಾಲಿಗೆ ತೀವ್ರ ಪೆಟ್ಟಾಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಅವರು ಸಿಕ್ಕಿದ್ದರಿಂದ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಕೂಡಲೇ ಅವರನ್ನು ಕೋಕಿಲಾಬೆನ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಇದೀಗ ವೈದ್ಯರು ಬೆಡ್ ರೆಸ್ಟ್ ತಗೆದುಕೊಳ್ಳುವಂತೆ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಅವರು ಸಾವರ್ಕರ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಆ ಸಿನಿಮಾ ದೃಶ್ಯಕ್ಕಾಗಿ ಅವರು ಕುದುರೆ ಸವಾರಿ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: 15 ದಿನಗಳಿಂದ ಸುಧಾರಾಣಿ ಮನೆ ಶ್ವಾನ ನಾಪತ್ತೆ: ಬಿಬಿಎಂಪಿ ವಿರುದ್ಧ ನಟಿ ಗರಂ

    ಸಾವರ್ಕರ್ ಪಾತ್ರ ಮಾಡುವುದಕ್ಕಾಗಿಯೇ ಅವರು 22 ಕೆಜಿ ತೂಕವನ್ನು ಇಳಿಸಿಕೊಳ್ಳುತ್ತಿದ್ದರು. ಈ ನೆಪದಲ್ಲಿ ಕುದುರೆ ಸವಾರಿ ಕೂಡ ಅವರು ಮಾಡುತ್ತಿದ್ದರು. ಈ ಸಮಯದಲ್ಲಿ ಕುದುರೆ ಮೇಲಿಂದ ಬಿದ್ದು ತೀವ್ರಗಾಯಗೊಂಡಿದ್ದಾರೆ. ಬಿದ್ದಿರುವ ಹೊಡೆತಕ್ಕೆ ಪ್ರಜ್ಞೆ ಕೂಡ ಕಳೆದುಕೊಂಡಿದ್ದರು. ಈ ಹಿಂದೆಯೂ ರಾಧೆ ಸಿನಿಮಾದ ಶೂಟಿಂಗ್ ವೇಳೆಯೂ ರಣದೀಪ್ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಶ್ವಾರೋಹಣ ಸ್ಪರ್ಧೆಗೆ ಅಭ್ಯಾಸ ನಡೆಸುತ್ತಿದ್ದ ಬಿಎಸ್‌ಎಫ್ ಯೋಧನಿಗೆ ಕುದುರೆ ತುಳಿದು ಸಾವು

    ಅಶ್ವಾರೋಹಣ ಸ್ಪರ್ಧೆಗೆ ಅಭ್ಯಾಸ ನಡೆಸುತ್ತಿದ್ದ ಬಿಎಸ್‌ಎಫ್ ಯೋಧನಿಗೆ ಕುದುರೆ ತುಳಿದು ಸಾವು

    ಭೋಪಾಲ: ಅಶ್ವಾರೋಹಣ ಸ್ಪರ್ಧೆಗೆ (Equestrian Championship) ಅಭ್ಯಾಸ ನಡೆಸುತ್ತಿದ್ದ ವೇಳೆ ಬಿಎಸ್‌ಎಫ್ ಯೋಧನೊಬ್ಬ (BSF Jawan) ಕುದುರೆ (Horse)ತುಳಿತಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಮಧ್ಯ ಪ್ರದೇಶದ (Madhya Pradesh) ಗ್ವಾಲಿಯರ್ (Gwalior) ಜಿಲ್ಲೆಯ ತೇಕನ್‌ಪುರ (Tekanpur) ಬಿಎಸ್‌ಎಫ್ ಅಕಾಡೆಮಿಯಲ್ಲಿ ನಡೆದಿದೆ.

    ಮೃತಪಟ್ಟ ಬಿಎಸ್‌ಎಫ್ ಕಾನ್‌ಸ್ಟೆಬಲ್ ಜಿಡಿ ಥೋರಟ್ ಸುಧೀರ್ ಫಂಢರಿ ನಾಥ್ (33) ಮಹಾರಾಷ್ಟ್ರದ ಪುಣೆ ನಿವಾಸಿಯಾಗಿದ್ದು, ಬಿಎಸ್‌ಎಫ್‌ನ ಹಾರ್ಸ್ ವಿಂಗ್‌ನಲ್ಲಿ ನಿಯೋಜಿಸಲ್ಪಟ್ಟಿದ್ದರು. ಅಭ್ಯಾಸದ ವೇಳೆ ಅವರ ಹಣೆಗೆ ಕುದುರೆ ಒದ್ದಿದ್ದ ಪರಿಣಾಮ ನಾಥ್ ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಅವರನ್ನು ಬಿಎಸ್‌ಎಫ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವರು ಅಲ್ಲಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬಸ್ ನಿಲ್ದಾಣ ತೆರವು ಮಾಡಲ್ಲ, ಗುಂಬಜ್ ಮಾತ್ರ ತೆರವು ಮಾಡ್ತೇನೆ: ಪ್ರತಾಪ್ ಸಿಂಹ

    ವರದಿಗಳ ಪ್ರಕಾರ ಯೋಧನ ಸಾವಿನ ಬಳಿಕವೂ ಸ್ಥಳೀಯ 3 ಠಾಣೆಗಳ ನಡುವೆ ವಾಗ್ವಾದ ಏರ್ಪಟ್ಟಿತ್ತು. ಪಿಂಚೋರ್, ಬಿಲೌವಾ ಹಾಗೂ ದಾಬ್ರಾ ಪೊಲೀಸ್ ಠಾಣೆಗಳು ನ್ಯಾಯವ್ಯಾಪ್ತಿಯನ್ನು ನಿರ್ಧರಿಸುವಲ್ಲಿ ಜಗಳ ಏರ್ಪಟ್ಟಿದ್ದರಿಂದ ಮೃತದೇಹದ ಮರಣೋತ್ತರ ಪರೀಕ್ಷೆ ವಿಳಂಬವಾಗಿತ್ತು. ಬಳಿಕ ತೇಕನ್‌ಪುರ ಠಾಣೆಯ ಇನ್‌ಚಾರ್ಜ್ ದೇವೇಂದ್ರ ಲೋಧಿ ಅವರಿಗೆ ಮರಣೋತ್ತರ ಪರೀಕ್ಷೆಯ ಜವಾಬ್ದಾರಿ ನೀಡಲಾಯಿತು. ಇದನ್ನೂ ಓದಿ: ನನ್ನನ್ನು ರಕ್ಷಿಸು, ಇಲ್ಲದಿದ್ರೆ ಆತ ಕೊಂದು ಬಿಡ್ತಾನೆ- ಸ್ನೇಹಿತನಿಗೆ ಮೊದಲೇ ತಿಳಿಸಿದ್ದ ಶ್ರದ್ಧಾ!

    41ನೇ ಅಖಿಲ ಭಾರತ ಪೊಲೀಸ್ ಕುದುರೆ ಸವಾರಿ ಸ್ಪರ್ಧೆಯನ್ನು (ಈಕ್ವೆಸ್ಟ್ರಿಯನ್ ಚಾಂಪಿಯನ್‌ಶಿಪ್) ನವೆಂಬರ್ 14ರಿಂದ 26ರ ವರೆಗೆ ಜಿಲ್ಲೆಯ ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಅಕಾಡೆಮಿ ತೇಕನ್‌ಪುರದಲ್ಲಿ ಆಯೋಜಿಸಲಾಗಿದೆ. ಇದಕ್ಕಾಗಿ ಯೋಧ ಅಭ್ಯಾಸ ನಡೆಸುತ್ತಿದ್ದ ವೇಳೆ ದುರ್ಘಟನೆ ನಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ಮಂಗೋಲಿಯಾ ಅಧ್ಯಕ್ಷನಿಂದ ರಾಜನಾಥ್ ಸಿಂಗ್‍ಗೆ ವಿಭಿನ್ನ ಉಡುಗೊರೆ

    ಮಂಗೋಲಿಯಾ ಅಧ್ಯಕ್ಷನಿಂದ ರಾಜನಾಥ್ ಸಿಂಗ್‍ಗೆ ವಿಭಿನ್ನ ಉಡುಗೊರೆ

    ಉಲಾನ್‍ಬಾತರ್: ಮಂಗೋಲಿಯಾಕ್ಕೆ ಭೇಟಿ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಅಲ್ಲಿನ ಅಧ್ಯಕ್ಷ ಬಿಳಿ ಕುದುರೆಯನ್ನು ಉಡುಗೊರೆಯಾಗಿ ನೀಡಿದರು.

    ಈ ಬಗ್ಗೆ ರಾಜ್‍ನಾಥ್‍ಸಿಂಗ್(Rajnath Singh) ಟ್ವೀಟ್ ಮಾಡಿದ್ದು, ಮಂಗೋಲಿಯಾದ(Mongolia) ಸ್ನೇಹಿತರಿಂದ ವಿಶೇಷ ಉಡುಗೊರೆ ಬಂದಿದೆ. ಕುದುರೆಗೆ(Horse) ತೇಜಸ್ ಎಂದು ಹೆಸರಿಡಲಾಗಿದೆ. ಇದನ್ನು ಉಡುಗೊರೆಯಾಗಿ ನೀಡಿದ ಮಂಗೋಲಿಯಾದ ಅಧ್ಯಕ್ಷ ಎಚ್‍ಇಯು ಖುರೆಲ್‍ಸುಖ್‍ಗೆ(H.E.U. Khurelsuk) ಧನ್ಯವಾದ ತಿಳಿಸಿದರು. ಇದನ್ನೂ ಓದಿ: ಪಟಾಕಿಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯ ಮೇಲಿನ ನಿಷೇಧ ವಿಸ್ತರಣೆ

    ಭೇಟಿ ಸಂದರ್ಭದಲ್ಲಿ ಮಂಗೋಲಿಯಾ ಅಧ್ಯಕ್ಷರೊಂದಿಗೆ ಕಾರ್ಯತಂತ್ರದ ಸಂಬಂಧಗಳನ್ನು ಚರ್ಚಿಸಲಾಯಿತು. ರಾಜನಾಥ್ ಸಿಂಗ್ ಅವರು ಮಂಗೋಲಿಯಾ ದೇಶಕ್ಕೆ ಭೇಟಿ ನೀಡಿದ ಮೊದಲ ರಕ್ಷಣಾ ಸಚಿವರೆನಿಸಿಕೊಂಡಿದ್ದಾರೆ. ಇದನ್ನೂ ಓದಿ: 2024ರ ಲೋಕಸಭೆ ಚುನಾವಣೆಗೆ ಬಿಜೆಪಿ ತಯಾರಿ ಹೇಗಿದೆ?- 144 ಕ್ಷೇತ್ರಗಳ ಮೇಲೆ ಮೋದಿ ಕಣ್ಣು

    Live Tv
    [brid partner=56869869 player=32851 video=960834 autoplay=true]

  • ಮ್ಯೂಸಿಕ್ ಸದ್ದಿಗೆ ಗಾಬರಿಯಿಂದ ಜನರ ಮೇಲೆ ಓಡಿದ ಕುದುರೆ – 6 ಮಂದಿಗೆ ಗಾಯ

    ಮ್ಯೂಸಿಕ್ ಸದ್ದಿಗೆ ಗಾಬರಿಯಿಂದ ಜನರ ಮೇಲೆ ಓಡಿದ ಕುದುರೆ – 6 ಮಂದಿಗೆ ಗಾಯ

    ಲಕ್ನೋ: ಮದುವೆ ವೇಳೆ ಮ್ಯೂಸಿಕ್ ಹಾಕಿ ಸಂಭ್ರಮಿಸುವುದು ಸಾಮಾನ್ಯ. ಅನೇಕ ಮಂದಿ ಮದುವೆ ಮೆರವಣಿಗೆಯಲ್ಲಿ ಮ್ಯೂಸಿಕ್ ಹಾಕಿ ಡ್ಯಾನ್ಸ್ ಮಾಡಿ ಎಂಜಾಯ್ ಮಾಡುತ್ತಾರೆ. ಆದರೆ ಇಲ್ಲೊಂದು ಮದುವೆ ಮೆರವಣಿಗೆಯಲ್ಲಿ ಜೋರಾದ ಮ್ಯೂಸಿಕ್ ಸದ್ದಿಗೆ ಗಾಬರಿಗೊಂಡ ಕುದುರೆಯೊಂದು ಜನರನ್ನು ತನ್ನ ಪಾದಗಳಿಂದ ತುಳಿದು ಓಡಿದೆ.

    MARRIAGE

    ಹೌದು, ಉತ್ತರ ಪ್ರದೇಶದ ಹಮೀರ್‍ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮದುವೆ ಮೆರವಣಿಗೆಯಲ್ಲಿ ಧ್ವನಿವರ್ಧಕಗಳನ್ನು ಜೋಡಿಸಿ 1996ರಲ್ಲಿ ತೆರೆಕಂಡಿದ್ದ ರಾಜಾ ಹಿಂದೂಸ್ತಾನಿ ಸಿನಿಮಾದ ತೇರೆ ಇಷ್ಕ್ ಮೇ ನಾಚೇಂಗೆ ಎಂಬ ಫೇಮಸ್ ಸಾಂಗ್‍ಗೆ ಯುವಕರು, ನೋಟುಗಳನ್ನು ಎಸೆಯುತ್ತಾ ನೃತ್ಯ ಮಾಡುತ್ತಿರುತ್ತಾರೆ. ಈ ವೇಳೆ ಯುವಕರ ಮಧ್ಯೆಯೇ ಇದ್ದ ಕುದುರೆ, ಮ್ಯೂಸಿಕ್ ಸದ್ದಿಗೆ ಗಾಬರಿಗೊಂಡು ಎಗರುತ್ತಾ, ತನ್ನ ಪಾದಗಳಿಂದ ಜನರನ್ನು ತುಳಿದುಕೊಂಡು ಓಡಿಹೋಗಿದೆ. ಇದನ್ನೂ ಓದಿ: ಸತ್ತೇ ಹೋದನೆಂದು ಭಾವಿಸಿದ್ದ ವ್ಯಕ್ತಿ ದಿಢೀರ್ ಪ್ರತ್ಯಕ್ಷ – ಚಿಕ್ಕಮಗಳೂರಿನಲ್ಲೊಂದು ಪ್ರಹಸನ

    ಬುಂದೇಲ್‍ಖಂಡ್ ಪ್ರದೇಶದ ಹಲವಾರು ಭಾಗಗಳಲ್ಲಿ ಕುದುರೆಗಳಿಂದ ನೃತ್ಯ ಮಾಡಿಸುವ ಸಂಪ್ರದಾಯವಿದೆ. ಅದೇ ರೀತಿ ಕುದುರೆಯಿಂದ ನೃತ್ಯ ಮಾಡಿಸಲು ಮಾಲೀಕರು ಪ್ರಯತ್ನಿಸಿದ್ದರು. ಆದರೆ ಜೋರಾದ ಮ್ಯೂಸಿಕ್ ಶಬ್ಧಕ್ಕೆ ಕುದುರೆ ನಿಯಂತ್ರಣ ತಪ್ಪಿ ಹೋಯಿತು. ಈ ವೇಳೆ ಕುದುರೆ ಕಾಲ್ತುಳಿತದಿಂದ ಪಾರಾಗಲು ಜನರು ಹರಸಾಹಸ ಪಟ್ಟಿದ್ದಾರೆ. ಸದ್ಯ ಘಟನೆಯಲ್ಲಿ ಗಾಯಗೊಂಡವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ: ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ‘ಶೈಕ್ಷಣಿಕ ದತ್ತು ಕಾರ್ಯಕ್ರಮ’ ಅನುಷ್ಠಾನ

    Live Tv
    [brid partner=56869869 player=32851 video=960834 autoplay=true]

  • ಕುದುರೆ ಏರಿ ಫುಡ್ ಡೆಲಿವರಿ ಮಾಡಿದ ವ್ಯಕ್ತಿ ಪತ್ತೆ- ಆದರೆ ಈತ ಸ್ವಿಗ್ಗಿ ಉದ್ಯೋಗಿಯಲ್ಲ!

    ಕುದುರೆ ಏರಿ ಫುಡ್ ಡೆಲಿವರಿ ಮಾಡಿದ ವ್ಯಕ್ತಿ ಪತ್ತೆ- ಆದರೆ ಈತ ಸ್ವಿಗ್ಗಿ ಉದ್ಯೋಗಿಯಲ್ಲ!

    ಮುಂಬೈ: ಇತ್ತೀಚೆಗಷ್ಟೇ ಕುದುರೆ ಸವಾರಿ ಮಾಡಿ ಫುಡ್ ಡೆಲವರಿ ಮಾಡಿದ್ದ ವ್ಯಕ್ತಿಯೊಬ್ಬ ಭಾರೀ ವೈರಲ್ ಆಗಿದ್ದ. ಈ ಹಿನ್ನೆಲೆಯಲ್ಲಿ ಸ್ವಿಗ್ಗಿ ಕಂಪನಿಯು ಫುಡ್ ಡೆಲಿವರಿ ಮಾಡಿದವನ ಸುಳಿವು ನೀಡಿದವರಿಗೆ ಬಹುಮಾನ ಘೋಷಿಸಿತ್ತು. ಇದೀಗ ಈ ವ್ಯಕ್ತಿ ಯಾರೆಂದು ಪತ್ತೆ ಆಗಿದ್ದಾನೆ.

    ಈ ಬಗ್ಗೆ ಸ್ವಿಗ್ಗಿ ಟ್ವೀಟ್ ಮಾಡಿದ್ದು, ಕುದುರೆ ಹಾಗೂ ಯುವಕರಿಬ್ಬರು ಪತ್ತೆ ಆಗಿದ್ದಾರೆ ಎನ್ನುವ ಮೂಲಕ ಸ್ಪಷ್ಟೀಕರಣ ನೀಡಿದೆ. ಕುದುರೆಯಲ್ಲಿದ್ದ ಯುವಕನ ಹೆಸರು ಸುಶಾಂತ್(17). ಆದರೆ ಈತ ಸ್ವಿಗ್ಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿಲ್ಲ. ಈತನಿಗೆ ವಿಚಿತ್ರ ಕಾಯಿಲೆಯೊಂದಿದೆ. ಯಾವುದಾದರೂ ವಸ್ತುವನ್ನು ತೆಗೆದುಕೊಂಡರೆ ಅದನ್ನು ವಾಪಸ್ ಕೊಡುವುದನ್ನು ಮರೆತು ಬಿಡುತ್ತಾನೆ. ಇದೇ ರೀತಿಯೇ ಸ್ವಿಗ್ಗಿ ಬ್ಯಾಗ್‍ನ್ನು ತೆಗೆದುಕೊಂಡಿದ್ದ. ಆದರೆ ಇದೇ ರೀತಿ ಮರೆತಿದ್ದಾನೆ.

    ಪ್ರಸ್ತುತ ಸುಶಾಂತ್ ಮದುವೆ ಕಾರ್ಯಕ್ರಮಗಳಿಗೆ ಕುದುರೆಯನ್ನು ಕಳುಹಿಸುವ ಏರ್ಪಾಟು ಮಾಡುವವನಾಗಿದ್ದಾನೆ. ಹಾಗೆಯೇ ಆ ಸ್ವಿಗ್ಗಿ ಬ್ಯಾಗ್‍ನಲ್ಲಿ ತಿಂಡಿಯ ಬದಲಿಗೆ ಮದುವೆ ಮೆರವಣಿಗೆಗಳಲ್ಲಿ ಕುದುರೆಗಳ ಮೇಲೆ ಹಾಕುವ ಕಸೂತಿ ಬಟ್ಟೆ ಹಾಗೂ ಪರಿಕರಗಳನ್ನು ಇಟ್ಟುಕೊಂಡು ಹೋಗುತ್ತಿದ್ದ ಎಂದು ಕಂಪನಿ ತಿಳಿಸಿದೆ. ಜೊತೆಗೆ ವೀಡಿಯೋವನ್ನು ಚಿತ್ರೀಕರಿಸಿದ ಅವಿ ಹಾಗೂ ಆತನ ಸ್ನೇಹಿತರಿಗೆ ಬಹುಮಾನವನ್ನು ನೀಡಿದೆ. ಇದನ್ನೂ ಓದಿ: ಕಾರು ಹೊಳೆಗೆ ಬಿದ್ದ ಪ್ರಕರಣ- ನಾಪತ್ತೆಯಾಗಿದ್ದ ಇಬ್ಬರ ಮೃತದೇಹವೂ ಪತ್ತೆ

    ಇತ್ತೀಚೆಗಷ್ಟೇ ಸ್ವಿಗ್ಗಿ ಕಂಪನಿಯ ಬ್ಯಾಗ್ ಹಾಕಿಕೊಂಡು ಕುದುರೆ ಸವಾರಿ ಮಾಡಿ ಫುಡ್ ಡೆಲಿವರಿ ಮಾಡಿದವನ ಸುಳಿವು ಕೊಟ್ಟವರಿಗೆ 5,000 ರೂ. ಬಹುಮಾನ ನೀಡಲಾಗುವುದು ಎಂದು ಸ್ವಿಗ್ಗಿ ಕಂಪನಿ ಘೋಷಿಸಿತ್ತು. ಮುಂಬೈನಲ್ಲಿ ಮಳೆಯ ನಡುವೆಯೂ ಆಹಾರವನ್ನು ತಲುಪಿಸಲು ಕುದುರೆಯ ಮೇಲೆ ಸವಾರಿ ಮಾಡುತ್ತಿರುವ ಡೆಲಿವರಿ ಬಾಯ್ ಗುರುತಿಸಲು ಸಹಾಯ ಮಾಡುವಂತೆ ಸಾರ್ವಜನಿಕರಲ್ಲಿ ಕಂಪನಿ ಮನವಿ ಮಾಡಿತ್ತು. ವೈರಲ್ ಆಗಿರುವ ವೀಡಿಯೋದಲ್ಲಿ ಆತನನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದು ಕಂಪನಿ ಹೇಳಿತ್ತು. ಇದನ್ನೂ ಓದಿ: ಕುದುರೆ ಸವಾರಿ ಮಾಡಿ ಫುಡ್‌ ಡೆಲಿವರಿ ಮಾಡಿದ ವ್ಯಕ್ತಿ – ಉದ್ಯೋಗಿ ಸುಳಿವು ಕೊಟ್ಟರೆ ಬಹುಮಾನ ನೀಡ್ತೀವಿ ಎಂದ ಕಂಪನಿ

    Live Tv
    [brid partner=56869869 player=32851 video=960834 autoplay=true]

  • ಕುದುರೆ ಸವಾರಿ ಮಾಡಿ ಫುಡ್‌ ಡೆಲಿವರಿ ಮಾಡಿದ ವ್ಯಕ್ತಿ – ಉದ್ಯೋಗಿ ಸುಳಿವು ಕೊಟ್ಟರೆ ಬಹುಮಾನ ನೀಡ್ತೀವಿ ಎಂದ ಕಂಪನಿ

    ಕುದುರೆ ಸವಾರಿ ಮಾಡಿ ಫುಡ್‌ ಡೆಲಿವರಿ ಮಾಡಿದ ವ್ಯಕ್ತಿ – ಉದ್ಯೋಗಿ ಸುಳಿವು ಕೊಟ್ಟರೆ ಬಹುಮಾನ ನೀಡ್ತೀವಿ ಎಂದ ಕಂಪನಿ

    ಮುಂಬೈ: ಸಾಮಾನ್ಯವಾಗಿ ಬೈಕ್‌ಗಳಲ್ಲಿ ಸಂಚರಿಸಿ ಫುಡ್‌ ಡೆಲಿವರಿ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಕುದುರೆ ಸವಾರಿ ಮಾಡಿ ಫುಡ್‌ ಡೆಲಿವರಿ ಮಾಡಿದ್ದಾನೆ. ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಸಖತ್‌ ವೈರಲ್‌ ಆಗಿದ್ದು, ಇದಕ್ಕೆ ಕಂಪನಿ ಅಚ್ಚರಿ ವ್ಯಕ್ತಪಡಿಸಿದೆ.

    ಡೆಲಿವರಿ ಬಾಯ್‌ ಸುಳಿವು ಕೊಟ್ಟವರಿಗೆ ಬಹುಮಾನ
    ಸ್ವಿಗ್ಗಿ ಕಂಪನಿಯ ಬ್ಯಾಗ್‌ ಹಾಕಿಕೊಂಡು ಕುದುರೆ ಸವಾರಿ ಮಾಡಿ ಫುಡ್‌ ಡೆಲಿವರಿ ಮಾಡಿದವನ ಸುಳಿವು ಕೊಟ್ಟವರಿಗೆ 5,000 ರೂ. ಬಹುಮಾನ ನೀಡಲಾಗುವುದು ಎಂದು ಸ್ವಿಗ್ಗಿ ಕಂಪನಿ ಘೋಷಿಸಿದೆ. ಇದನ್ನೂ ಓದಿ: ಗುಂಡು ಹಾರಿಸಿ ಮುಸ್ಲಿಂ ಆಧ್ಯಾತ್ಮಿಕ ನಾಯಕ ಸೂಫಿ ಬಾಬಾನ ಹತ್ಯೆ

    ಮುಂಬೈನಲ್ಲಿ ಮಳೆಯ ನಡುವೆಯೂ ಆಹಾರವನ್ನು ತಲುಪಿಸಲು ಕುದುರೆಯ ಮೇಲೆ ಸವಾರಿ ಮಾಡುತ್ತಿರುವ ಡೆಲಿವರಿ ಬಾಯ್‌ ಗುರುತಿಸಲು ಸಹಾಯ ಮಾಡುವಂತೆ ಸಾರ್ವಜನಿಕರಲ್ಲಿ ಕಂಪನಿ ಮನವಿ ಮಾಡಿದೆ. ಈಗ ವೈರಲ್ ಆಗಿರುವ ವೀಡಿಯೋದಲ್ಲಿ ಆತನನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದು ಕಂಪನಿ ಹೇಳಿದೆ.

    ಮುಂಬೈ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಸ್ವಿಗ್ಗಿ ಕಂಪನಿಯ ಬ್ಯಾಗ್‌ ಹಾಕಿಕೊಂಡು ಕುದುರೆ ಸವಾರಿ ಮಾಡಿ ಆರ್ಡರ್‌ ತಲುಪಿಸುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕಂಪನಿ, ಆತನ ಬಗ್ಗೆ ನಮಗೆ ಸರಿಯಾದ ಮಾಹಿತಿ ಇಲ್ಲ. ಮಾಹಿತಿ ಸಿಕ್ಕರೆ ತಿಳಿಸಿ. ಅಂತಹವರಿಗೆ ಸೂಕ್ತ ಬಹುಮಾನ ನೀಡುವುದಾಗಿ ಸ್ವಿಗ್ಗಿ ತಿಳಿಸಿದೆ. ಇದನ್ನೂ ಓದಿ: ಡೋಲೋ 650 ಮಾತ್ರೆ ತಯಾರಿಕಾ ಸಂಸ್ಥೆ ಮೈಕ್ರೋ ಲ್ಯಾಬ್ಸ್ ಮೇಲೆ ಐಟಿ ದಾಳಿ

    ಸ್ವಿಗ್ಗಿ ಕಂಪನಿ ಪೋಸ್ಟ್‌ಗೆ ಅನೇಕರು ನಾನಾ ರೀತಿಯಲ್ಲಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ʻನೀವು ಯಾರನ್ನೋ ಹುಡುಕುತ್ತಿದ್ದೀರಿ ಎನಿಸುತ್ತೆʼ ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. ʼಈ ವೈರಲ್‌ ವೀಡಿಯೋ ಬಗ್ಗೆ ನೀವೇನು ಹೇಳುತ್ತೀರಿʼ ಎಂದು ಮತ್ತೊಬ್ಬರು ಕಂಪನಿಗೆ ಪ್ರಶ್ನೆ ಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]