Tag: horror

  • ಹಾರರ್ ಅಮರಾವತಿ: ಪ್ಯಾನ್ ಇಂಡಿಯಾಗೆ ಸಲ್ಲುವ ಸ್ಟೋರಿ

    ಹಾರರ್ ಅಮರಾವತಿ: ಪ್ಯಾನ್ ಇಂಡಿಯಾಗೆ ಸಲ್ಲುವ ಸ್ಟೋರಿ

    ದೆವ್ವಗಳೇ ಕನ್ನಡದಲ್ಲಿ ಸಕ್ಸಸ್‌ ಸೂತ್ರದಂತೆ ಬಳಕೆಯಾಗುತ್ತಿವೆ. ಇದರಲ್ಲಿ ಒಂದಷ್ಟು ನವೀನ ಪ್ರಯೋಗಗಗಳು ಆಗುತ್ತಿವೆಯಾದರೂ ಮತ್ತೆ ಕೆಲ ಚಿತ್ರಗಳು ನಿಜಕ್ಕೂ ಭೂತದರ್ಶನ ಮಾಡಿಸುವಂತಿರುತ್ತವೆ. ಸದ್ಯ ಕನ್ನಡದಲ್ಲಿ ಈವರೆಗೂ ಬಂದ ಎಲ್ಲಾ ಹಾರರ್‌ (Horror) ಸಿನಿಮಾಗಳನ್ನೂ ಮೀರಿಸುವ ಚಿತ್ರವೊಂದು ಸದ್ದಿಲ್ಲದೆ ತಯಾರಾಗುತ್ತಿದೆ. ಅದು ಅಮರಾವತಿ.

    ಬ್ರಾಡ್‌ ವೇ ಪಿಚ್ಚರ್ಸ್‌ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ವಾಸು (Vasu) ಅವರ  ಸಾರಥ್ಯವಿದೆ. ಪ್ರಿಯಾ (Priya), ರಮ್ಯಾ ಮತ್ತು ಕೃಷ್ಣ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಮೊದಲ ಹಂತದ ಚಿತ್ರೀಕರಣ ಚಾಲನೆಯಲ್ಲಿದ್ದು, ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಇದನ್ನೂ ಓದಿ:‘ಬಾಹುಬಲಿ’ ಪ್ರಭಾಸ್‌ಗೆ ಸ್ಟಾರ್ ನಟ ಕಮಲ್ ಹಾಸನ್ ವಿಲನ್

    ಹೊಸ ರೀತಿಯಲ್ಲಿ ಸಿನಿಮಾ ತಯಾರಾಗುತ್ತಿರುವುದರಿಂದ ಅಮರಾವತಿ (Amravati) ಚಿತ್ರ ಕರ್ನಾಟಕ ಮಾತ್ರವಲ್ಲದೆ ಇಡೀ ಭಾರತದಲ್ಲೇ ಸಂಚಲನ ಸೃಷ್ಠಿಸುತ್ತದೆ ಎನ್ನುವುದು ತಂಡದ ನಂಬಿಕೆ. ಆ ರೀತಿಯಲ್ಲಿ ಕಥಾವಸ್ತು ಮತ್ತು ಮೇಕಿಂಗ್‌ ಇರಲಿದೆಯಂತೆ.

  • 10 ದಿನದಲ್ಲಿ 13 ಹಾರರ್ ಸಿನಿಮಾ ನೋಡಿದ್ರೆ ಸಿಗುತ್ತೆ 95 ಸಾವಿರ ರೂ.

    10 ದಿನದಲ್ಲಿ 13 ಹಾರರ್ ಸಿನಿಮಾ ನೋಡಿದ್ರೆ ಸಿಗುತ್ತೆ 95 ಸಾವಿರ ರೂ.

    ವಾಷಿಂಗ್ಟನ್: 10 ದಿನಗಳಲ್ಲಿ 13 ಹಾರರ್ ಮೂವಿಗಳನ್ನು ನೋಡುವ ವ್ಯಕ್ತಿಗಳಿಗೆ ಕಂಪನಿಯೊಂದು ಭಾರೀ ಮೊತ್ತವನ್ನು ನೀಡುವ ಆಫರ್ ಪ್ರಕಟಿಸಿದೆ.

    ಅಮೆರಿಕದ ಫೈನಾನ್ಸ್ ಬುಝ್ ಕಂಪನಿ ಈ ಆಫರ್ ಪ್ರಕಟಿಸಿದ್ದು ಪಟ್ಟಿ ಮಾಡಲಾದ 13 ಭಯಾನಕ ಸಿನಿಮಾಗಳನ್ನು ವೀಕ್ಷಿಸಿದವರಿಗೆ ಅಕ್ಟೋಬರ್ ನಲ್ಲಿ 1,300 ಡಾಲರ್(ಅಂದಾಜು 95 ಸಾವಿರ ರೂ.) ನೀಡುವುದಾಗಿ ಹೇಳಿದೆ. ಹಾರರ್ ಸಿನಿಮಾ ವ್ಯಕ್ತಿಯ ಮೇಲೆ ಯಾವ ರೀತಿ ಭಯ ಮೂಡಿಸುತ್ತದೆ ಎಂದು ತಿಳಿಯುವ ಉದ್ದೇಶದಿಂದ ಕಂಪನಿ ಈ ಆಫರ್ ಪ್ರಕಟಿಸಿದೆ.

    13 ಭಯಾನಕ ಚಲನಚಿತ್ರಗಳನ್ನು ವೀಕ್ಷಿಸುವ ವ್ಯಕ್ತಿಗಳ ಹೃದಯ ಬಡಿತವನ್ನು ಫಿಟ್‍ಬಿಟ್ ಬಳಸಿ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

    ದುಬಾರಿ ಬಜೆಟ್ ಮತ್ತು ಕಡಿಮೆ ಬಜೆಟ್ ಸಿನಿಮಾಗಳ ಪೈಕಿ ಯಾವುದು ಜಾಸ್ತಿ ಭಯ ಮೂಡಿಸುತ್ತದೆ ಎಂಬುದನ್ನು ಅಧ್ಯಯನ ಮಾಡಲು ಕಂಪನಿ ಈ ಆಫರ್ ನೀಡಿದೆ. ಇದನ್ನೂ ಓದಿ: 20 ಕೆಜಿ ಭಾರದ ಲಂಬಾಣಿ ಉಡುಗೆ ತೊಟ್ಟ ಶುಭಾ ಪೂಂಜಾ 

    ಹಾರರ್ ಮೂವಿ ನೋಡಲು ಆಯ್ಕೆಯಾಗುವ ವ್ಯಕ್ತಿಗಳ ಸಿನಿಮಾದ ಶೇ.50ರಷ್ಟು ವೆಚ್ಚವನ್ನು ಭರಿಸುವುದಾಗಿ ಫಿಟ್‍ಬಿಟ್ ಕಂಪನಿ ಹೇಳಿದೆ. ಸಿನಿಮಾ ವೀಕ್ಷಣೆ ಮುಂದಾಗುವ ವ್ಯಕ್ತಿಗಳು ಸೆ.26ರ ಒಳಗಡೆ ಹೆಸರನ್ನು ನೋಂದಾಯಿಸಬೇಕು. 18 ವರ್ಷ ಮೇಲ್ಪಟ್ಟ ಅಮೆರಿಕದ ವ್ಯಕ್ತಿಗಳಿಗೆ ಮಾತ್ರ ಹೆಸರನ್ನು ನೋಂದಾಯಿಸಲು ಅವಕಾಶವಿದೆ. ಇದನ್ನೂ ಓದಿ: ಮಹಿಳಾ ಪೇದೆ ಜೊತೆ ಸ್ವಿಮ್ಮಿಂಗ್ ಪೂಲಲ್ಲಿ ಹಿರಿಯ ಪೊಲೀಸ್ ಅಧಿಕಾರಿಯ ಮಿಲನ

    13 ಸಿನಿಮಾಗಳು ಯಾವುದು?
    Saw, Amityville Horror, A Quiet Place, A Quiet Place Part 2, Candyman, Insidious. The Blair Witch Project. Sinister, Get Out, The Purge, Halloween (2018), Paranormal Activity, Annabelle.

  • ಅನೇಕ ಭಯಾನಕ ಘಟನೆಗಳ ನಡುವೆಯೂ ಬಿಡುಗಡೆಗೆ ಸಿದ್ಧವಾದ `ಕೆಲವು ದಿನಗಳ ನಂತರ’

    ಅನೇಕ ಭಯಾನಕ ಘಟನೆಗಳ ನಡುವೆಯೂ ಬಿಡುಗಡೆಗೆ ಸಿದ್ಧವಾದ `ಕೆಲವು ದಿನಗಳ ನಂತರ’

    ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಅನೇಕ ಹಾರರ್ ಸಿನಿಮಾಗಳು ಬಿಡುಗಡೆಗೊಂಡಿದ್ದು, ಹವಾ ಸೃಷ್ಟಿಸಿವೆ. ಈಗ ಈ ಸಾಲಿಗೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್ ಸೇರಿದಂತೆ ಅನೇಕ ಕಲಾವಿದರು ಮಾಡಿರುವ `ಕೆಲವು ದಿನಗಳ ನಂತರ’ ಸಿನಿಮಾ ಕೂಡ ಸೇರಿಕೊಂಡಿದೆ.

    ಕೆಲವು ದಿನಗಳ ನಂತರ ಸಿನಿಮಾದ ಚಿತ್ರತಂಡ ಚಿತ್ರದ ಟೀಸರ್ ಬಿಡುಗಡೆ ಮಾಡಿತ್ತು. ಟೀಸರ್ ಸಾಕಷ್ಟು ಭರವಸೆಯನ್ನು ಮೂಡಿಸಿದ್ದು, ಟೀಸರ್ ನಲ್ಲಿ ಸೌಂಡ್ ಎಫೆಕ್ಟ್ ಉತ್ತವಾಗಿತ್ತು.  ಕೆಲವು ದಿನಗಳ ನಂತರ ಚಿತ್ರತಂಡ ಸಾಕಷ್ಟು ಹಾಸ್ಯ ಕಲಾವಿದರನ್ನು ಮತ್ತು ಯುವ ಪ್ರತಿಭೆಗಳನ್ನು ಒಳಗೊಂಡಿದೆ. ಅಷ್ಟೇ ಅಲ್ಲದೇ ಈ ಸಿನಿಮಾದ ವಿಶೇಷತೆ ಎಂದರೆ 6 ತಿಂಗಳ ಮಗುವನ್ನು ಕಂಪ್ಯೂಟರ್ ಗ್ರಾಫಿಕ್ಸ್ ನ ಮೂಲಕ ತಯಾರಿಸಲಾಗಿದೆ.


    ಶ್ರೀನಿ ರವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಇವರು ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಅನೇಕ ಸಿನಿಮಾಗಳಿಗೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಅನುಭವವನ್ನು ಹೊಂದಿದ್ದಾರೆ. ಇವರು ಇದೇ ಮೊದಲ ಬಾರಿಗೆ `ಕೆಲವು ದಿನಗಳ ನಂತರ’ ಸಿನಿಮಾದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಇಂದಿನ ಯುವ ಜನತೆಯ ಸಮಸ್ಯೆಯ ಕುರಿತು `ಕೆಲವು ದಿನಗಳ ನಂತರ’ ಎಂಬ ತಯಾರಾಗಿದ್ದು, ಪ್ರೇಕ್ಷಕರಿಗೆ ಇಷ್ಟವಾಗುತ್ತದೆ.

    2016ರಲ್ಲಿ ನಡೆದಿದ್ದ ಘಟನೆಯೊಂದು ರಾಜ್ಯಾದ್ಯಂತ ಸದ್ದು ಮಾಡಿತ್ತು. ಆ ನೈಜ ಘಟನೆಯನ್ನು ಆಧರಿಸಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಇದೊಂದು ಕಾಮಿಡಿ ಮತ್ತು ಸಸ್ಪೆನ್ಸ್ ಸಿನಿಮಾವಾಗಿದ್ದು, ಇಲ್ಲಿವರೆಗೂ ತೆರೆಕಂಡಿರುವ ಹಾರರ್ ಸಿನಿಮಾಗಳಿಗಿಂತ ಭಿನ್ನವಾಗಿರುತ್ತದೆ ಎಂಬ ಭರವಸೆವನ್ನು ಚಿತ್ರತಂಡ ಹೊಂದಿದೆ. ಇಂಗ್ಲಿಷ್ ಚಿತ್ರಗಳಲ್ಲಿ ಪ್ರಸಿದ್ಧಿ ಪಡೆದು ಸ್ಯಾಂಡಲ್ ವುಡ್ ಗೆ ಅಪರಿಚಿತವಾಗಿದ್ದ ಝಾಂಬೀಸ್‍ಗಳನ್ನು ಮೊದಲ ಬಾರಿಗೆ ಈ ಸಿನಿಮಾದಲ್ಲಿ ಪರಿಚಯಿಸಲಾಗಿದ್ದು, ನವೀನ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ.

    `ಕೆಲವು ದಿನಗಳ ನಂತರ’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಸಂಭವಿಸಿದ ಭಯಾನಕ ಅನಾಹುತಗಳಿಂದ ಚಿತ್ರತಂಡ ಒಂದೆರಡು ಬಾರಿ ಬೆಚ್ಚಿ ಬಿದ್ದಿರುವ ಘಟನೆಯೂ ನಡೆದಿದೆಯಂತೆ. ಒಂದು ದಿನ ದೇವರಾಯನದುರ್ಗ ಬೆಟ್ಟದ ಮೇಲೆ ಶೂಟಿಂಗ್ ನಡೆಯುತ್ತಿತ್ತು. ಆಗ ಜೀಪಿನಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್, ಶುಭಾ ಪೂಂಜಾ ಸೇರಿದಂತೆ ಹಲವಾರು ಮಂದಿ ಜೀಪಿನಲ್ಲಿದ್ದರು. ಆಗ ಜಗ್ಗು ಡ್ರೈವ್ ಮಾಡುತ್ತಿದ್ದನು. ಜೀಪ್ ರಿವರ್ಸ್ ತೆಗೆದುಕೊಳ್ಳುವ ದೃಶ್ಯದ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ಜಗ್ಗು ರಿವರ್ಸ್ ತೆಗೆಯುವಾಗ ಜೀಪಿನ ನಿಯಂತ್ರಣ ತಪ್ಪಿ ಬೆಟ್ಟದ ತುದಿಗೆ ಹೋಗಿದ್ದು, ಪ್ರಪಾತಕ್ಕೆ ಬೀಳಬೇಕಿದ್ದ ಜೀಪು ಸಿನಿಮಾ ರೀತಿಯಲ್ಲಿ ನಿಂತಿತ್ತು. ಇದೇ ರೀತಿ ಚಿತ್ರೀಕರಣದ ವೇಳೆ ಅನೇಕ ಭಯಾನಕ ಅನುಭವಗಳು ಆಗಿವೆ ಎಂದು ಚಿತ್ರತಂಡ ಹೇಳಿದೆ.

    `ಕೆಲವು ದಿನಗಳ ನಂತರ’ ಮುತ್ತುರಾಜ್ ಹೆಚ್.ಪಿ ಅವರು ನಿರ್ಮಾಣದಲ್ಲಿ ಮೂಡಿ ಬರುತ್ತಿದೆ. ಶುಭಾ ಪೂಂಜಾ, ಮಜಾ ಟಾಕೀಸ್ ಖ್ಯಾತಿಯ ಪವನ್, ಕಾಮಿಡಿ ಕಿಲಾಡಿ ಲೋಕೇಶ್, ದ್ರವ್ಯ ಶೆಟ್ಟಿ, ಜಗದೀಶ್, ಸೋನು ಪಾಟೀಲ್, ಬೇಬಿ ಶ್ರೀಲಕ್ಷ್ಮಿ, ಶ್ರೀ ಮಾರುತಿ ಮತ್ತು ಶರಣಯ್ಯ ಮುಂತಾದ ತಾರಾಬಳಗ ಈ ಸಿನಿಮಾದಲ್ಲಿ ಕಾಣಬಹುದಾಗಿದೆ. ಇಂತಹ ಅನೇಕ ಭಯಾನಕ ಅನುಭವಗಳು ಆದರೂ, ರೋಚಕವಾದ ಕಥಾ ಹಂದರ ಹೊಂದಿರುವ ಈ ಸಿನಿಮಾ ಇದೇ ತಿಂಗಳ 22ರಂದು ತೆರೆಗೆ ಬರಲಿದೆ.

  • ಎಲ್ಲರಲ್ಲಿಯೂ ಕುತೂಹಲ ಮೂಡಿಸಿದೆ ಪುನೀತ್ ಕೈಯಲ್ಲಿರುವ ಬ್ಯಾಂಡ್!

    ಎಲ್ಲರಲ್ಲಿಯೂ ಕುತೂಹಲ ಮೂಡಿಸಿದೆ ಪುನೀತ್ ಕೈಯಲ್ಲಿರುವ ಬ್ಯಾಂಡ್!

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಏಕಾಏಕಿ ತಮ್ಮ ಕೈಗೆ ಬ್ಯಾಂಡ್ ಕಟ್ಟಿಕೊಂಡಿದ್ದಾರೆ. ಪುನೀತ್ ತಮ್ಮ ಕೈಗೆ ಬ್ಯಾಂಡ್ ಕಟ್ಟಿಕೊಂಡಿರುವುದು ಎಲ್ಲರಲ್ಲಿಯೂ ಕುತೂಹಲ ಮೂಡಿಸಿದೆ.

    ಪುನೀತ್ ತಮ್ಮ ಕೈಗೆ ಈ ರೀತಿಯ ಬ್ಯಾಂಡ್ ಕಟ್ಟಿಸಿಕೊಂಡಿದ್ದಾರೆ. ದೊಡ್ಮನೆ ಹುಡುಗ ಈ ರೀತಿ ಬ್ಯಾಂಡ್ ಧರಿಸಿರುವುದು ಮತ್ತಷ್ಟು ಶ್ರೀಮಂತರಾಗಲಿಕ್ಕೋ ಅಥವಾ ಯಾವುದಾದ್ದರೂ ದುಷ್ಟಶಕ್ತಿಯನ್ನು ದೂರ ಮಾಡಲಿಕ್ಕೊ ಇರಬೇಕು ಎಂದು ಹಲವರಲ್ಲಿ ಈ ಪ್ರಶ್ನೆ ಮೂಡಿದೆ.

    `ನಟಸಾರ್ವಭೌಮ’ ಚಿತ್ರಕ್ಕಾಗಿ ಪುನೀತ್ ತಮ್ಮ ಕೈಗೆ ಬ್ಯಾಂಡ್ ಕಟ್ಟಿಕೊಂಡಿದ್ದಾರೆ. ಹಾಗಾದರೆ ಸಿನಿಮಾದಲ್ಲಿ ಹಾರರ್ ಎಲಿಮೆಂಟ್ಸ್ ಇರುತ್ತಾ? `ನಟಸಾರ್ವಭೌಮ’ ಚಿತ್ರದಲ್ಲಿ ಪುನೀತ್ ಯಾವುದಾದರೂ ದುಷ್ಟಶಕ್ತಿ ಕಾಡುತ್ತಾ ಎಂದು ಹಲವರು ಯೋಚಿಸುತ್ತಿದ್ದಾರೆ.

    ನಟಸಾರ್ವಭೌಮ ಸಿನಿಮಾದಲ್ಲಿ ಪುನೀತ್ ತಂದೆಯ ಪಾತ್ರವನ್ನು ಶ್ರೀನಿವಾಸ್‍ಮೂರ್ತಿ ಮಾಡಲಿದ್ದಾರೆ. ಹಾಗಾಗಿ ಶ್ರೀನಿವಾಸಮೂರ್ತಿ ಪುನೀತ್‍ಗೆ ಈ ಬ್ಲ್ಯಾಕ್ ಬ್ಯಾಂಡ್‍ನ ಗಿಫ್ಟ್ ಆಗಿ ನೀಡಿದ್ದಾರೆ. ಹಾಗಾಗಿ ಸಿನಿಮಾದಲ್ಲಿ ಪುನೀತ್ ಕೈಯಲ್ಲಿ ಕಪ್ಪುದಾರ ರಾರಾಜಿಸಲಿದೆ.

    ಈ ಚಿತ್ರದಲ್ಲಿ ಕಪ್ಪುದಾರ ಕೂಡ ಒಂದು ಮೇಜರ್ ಪಾತ್ರ ವಹಿಸುತ್ತದೆ. ಆ ಸಸ್ಪೆನ್ಸ್ ಏನು ಎನು ಎಂಬವುದನ್ನು ನೀವು ಸಿನಿಮಾ ನೋಡಿಯೇ ತಿಳಿಯಬೇಕು. ಈಗಾಗಲೇ ಡಿಫರೆಂಟ್ ಹೇರ್ ಸ್ಟೈಲ್ ನಲ್ಲಿ ಅಭಿಮಾನಿಗಳು ಥ್ರಿಲ್ ಆಗುವಂತೆ ಮಾಡಿರುವ ಪುನೀತ್, ಇದೀಗ ಕೈಗೆ ದಾರ ಕಟ್ಟಿಕೊಂಡು ಕುತೂಹಲ ಮೂಡಿಸಿದ್ದಾರೆ.

  • ಅನುಷ್ಕಾ ಶರ್ಮಾ ಪರಿ ಚಿತ್ರದ ಬಿಹೈಂಡ್ ದಿ ಸೀನ್ಸ್ ಫೋಟೋ ವೈರಲ್

    ಅನುಷ್ಕಾ ಶರ್ಮಾ ಪರಿ ಚಿತ್ರದ ಬಿಹೈಂಡ್ ದಿ ಸೀನ್ಸ್ ಫೋಟೋ ವೈರಲ್

    ಮುಂಬೈ: ಪರಿ ಸಿನಿಮಾದಲ್ಲಿ ಅನುಷ್ಕಾಗೆ ಮಾಡಿದ ಮೇಕಪ್ ನಿಜಕ್ಕೂ ಎಷ್ಟು ಅದ್ಭುತವಾಗಿದೆ ಎಂದು ಸಿನಿರಸಿಕರು ಹೊಗಳಿದ್ದಾರೆ. ಇದೀಗ ಅನುಷ್ಕಾ ಸೆಟ್‍ನಲ್ಲಿ ತೆಗೆಸಿಕೊಂಡ ಕೆಲವು ಫೋಟೋಗಳು ವೈರಲ್ ಆಗಿವೆ.

    ಬ್ರಿಟನ್ ಮೂಲದ ಮೇಕಪ್ ಕಲಾವಿದೆ ಕ್ಲೂವರ್ ವೂಟನ್ ಪರಿ ಚಿತ್ರಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಹಾಲಿವುಡ್‍ನಲ್ಲಿ ಬರುವ ಹಾರರ್ ಚಿತ್ರಗಳಲ್ಲಿ ಮುಖ್ಯವಾಗಿ ಕಾಣುವುದು ಅಲ್ಲಿಯ ಕಲಾವಿದರ ಮೇಕಪ್. ಅವರು ಎಷ್ಟು ಚೆನ್ನಾಗಿ(ಭಯಂಕರವಾಗಿ) ಕಾಣಿಸುತ್ತಾರೋ ಅದೇ ರೀತಿ ಅವರ ಪಾತ್ರಗಳು ಸಹ ವಿಭಿನ್ನ ಮತ್ತು ಆಕರ್ಷಕವಾಗಿ ಕಾಣಿಸುತ್ತದೆ. ಇದೇ ರೀತಿಯ ಹೊಸ ಪ್ರಯತ್ನವನ್ನ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ತಮ್ಮ ಪರಿ ಚಿತ್ರದಲ್ಲಿ ಮಾಡಿದ್ದಾರೆ.

    ಚಿತ್ರದ ಕಥೆಯಲ್ಲಿ ಬರುವ ರುಖ್ಸಾನ ಮತ್ತು ಕಾಲಾಪೋರಿ ಪಾತ್ರಗಳು ವೀಕ್ಷಕರ ಎದೆ ಬಡಿತ ಹೆಚ್ಚಿಸಿದ್ದು, ಇವರ ಪಾತ್ರಕ್ಕೆ ತಕ್ಕಂತೆ ಬ್ರಿಟಿಷ್ ಮೇಕಪ್ ಕಲಾವಿದೆ ಕ್ಲೂವರ್ ವೂಟನ್ ಅದ್ಭುತವಾಗಿ ಮೇಕಪ್ ಮಾಡಿದ್ದಾರೆ. ಚಿತ್ರದಲ್ಲಿ ಬರುವ ಕಾಲಾಪೋರಿ ಪಾತ್ರಕ್ಕೆ ಪ್ರೋಸ್ಥೆಟಿಕ್ಸ್ (ಕೃತಕ ಚರ್ಮ ಮತ್ತು ಅಂಗಗಳು) ಬಳಸಿದ್ದು, ಇದರಿಂದ ಕಾಲಾಪೋರಿ ಪಾತ್ರಕ್ಕೆ ಜೀವ ಬಂದಿದೆ.

    ನಟಿ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಚಿತ್ರದ ಮೇಕಿಂಗ್ ವಿಡಿಯೋ ಬಿಡುಗೆಡೆ ಮಾಡಿದ್ದು, ಇದು ಮುಖವಾಡ ಅಲ್ಲ, ನೈಜ ಮತ್ತು ಸತ್ಯ. ಕೇವಲ ಮುಖವಾಡ ಧರಿಸಿರುವವರಿಗೆ ಮಾತ್ರ ಇದು ಮುಖವಾಡದ ರೀತಿ ಕಾಣಿಸುತ್ತದೆ ಎಂದು ವಿಡಿಯೋ ಕೊನೆಯಲ್ಲಿ ಹೇಳಲಾಗಿದೆ.

    ಚಿತ್ರತಂಡದ ಜೊತೆ ತಮ್ಮ ಅನುಭವನ್ನು ಹಂಚಿಕೊಂಡ ಕ್ಲೂವರ್ ವೂಟನ್, ಅನುಷ್ಕಾ ಶರ್ಮಾ ಅವರನ್ನು ನಾನು ರಣಬೀರ್ ಸೆಟ್ ನಲ್ಲಿ ಭೇಟಿ ಮಾಡಿದ್ದೆ. ನನ್ನ ಕೆಲಸವನ್ನ ಮೆಚ್ಚಿದ ಅವರು ಪರಿ ಚಿತ್ರದ ನಿದೇರ್ಶಕರ ನಂಬರ್ ಕೊಟ್ಟರು ಎಂದರು. ಅನುಷ್ಕಾ ಅವರಿಗೆ ಮೇಕಪ್ ಮಾಡುವುದಕ್ಕೆ ತುಂಬಾ ಖುಷಿಯಾಗುತ್ತೆ. ಮೇಕಪ್‍ಗೂ ಮೊದಲು ಅವರು ಯಾವುದೇ ಮೇಕಪ್ ಇಲ್ಲದೆ ಹೇಗೆ ಕಾಣ್ತಾರೆ ಅಂತ ನೋಡಬೇಕಿತ್ತು. ಈ ಚಿತ್ರದಲ್ಲಿ ಅವರು ನೈಜವಾಗಿ ಕಾಣಿಸಿದ್ದು, ಅವರ ಸ್ಕಿನ್ ಸುಕೋಮಲವಾಗಿದೆ ಎಂದು ಹೇಳಿದರು.

    https://www.instagram.com/p/BfvZQJKgnkr/?hl=en&taken-by=anushkasharma

    https://www.instagram.com/p/BfkgVrggwuT/?hl=en&taken-by=anushkasharma

  • ಅಬ್ಬಬ್ಬಾ ಭಯಾನಕ- ಮರದಿಂದ ಕೆಳಗೆ ಬಿದ್ದ ವ್ಯಕ್ತಿಯ ಪಕ್ಕೆಲುಬು ದಾಟಿ ಹೊರ ಬಂತು ರೆಂಬೆ!

    ಅಬ್ಬಬ್ಬಾ ಭಯಾನಕ- ಮರದಿಂದ ಕೆಳಗೆ ಬಿದ್ದ ವ್ಯಕ್ತಿಯ ಪಕ್ಕೆಲುಬು ದಾಟಿ ಹೊರ ಬಂತು ರೆಂಬೆ!

    ಕಾರವಾರ: ನೆಲ್ಲಿಕಾಯಿ ಮರದಿಂದ ಇಳಿಯುವಾಗ ಆಯತಪ್ಪಿ ಕೆಳಗೆ ಬಿದ್ದು ಪಕ್ಕೆಲುಬಿಗೆ ತುಂಡಾದ ರೆಂಬೆ ಹೊಕ್ಕು ಆಸ್ಪತ್ರೆಗೆ ಸೇರಿದ್ದ ಯುವಕ ಪವಾಡಸದೃಶವಾಗಿ ಪಾರಾಗಿ ಬದುಕಿ ಉಳಿದಿದ್ದಾನೆ.

    ಯಲ್ಲಾಪುರ ತಾಲೂಕಿನ ಮಂಚಿಕೇರಿಯ 21 ವರ್ಷದ ಮಹಾಬಲೇಶ್ವರ ಸಿದ್ದಿ ಎಂಬಾತ ಶನಿವಾರ ಸಂಜೆ ನೆಲ್ಲಿಕಾಯಿ ಮರ ಕಡಿಯಲೆಂದು ಮರ ಹತ್ತಿದ್ದಾನೆ. ಆದರೆ ಮರ ಇಳಿಯಬೇಕಾದರೆ ಆಯ ತಪ್ಪಿ ಮರದಿಂದ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಅಲ್ಲೇ ಕೆಳಗೆ ಬಿದ್ದಿದ್ದ ಮರದ ತುಂಡಾದ ರೆಂಬೆ ಈತನ ದೇಹ ಪ್ರವೇಶಿಸಿ ಪಕ್ಕೆಲುಬು ದಾಟಿ ಹೊರಗೆ ಬಂದಿದೆ.

    ಸ್ವಲ್ಪ ಹೆಚ್ಚು ಕಮ್ಮಿಯಾಗಿದ್ದರೂ ಈ ರೆಂಬೆ ಈತನ ಹೃದಯ ದಾಟಿ ಹೊರಬರುತ್ತಿತ್ತು. ಆದರೆ ಅದೃಷ್ಟವಶಾತ್ ರೆಂಬೆ ಮಹಾಬಲೇಶ್ವರನ ಪಕ್ಕೆಲುಬು ಮೂಲಕ ಹೊರ ಬಂದಿದೆ. ಅಲ್ಲೇ ಇದ್ದ ಈತನ ಸ್ನೇಹಿತರು ಈ ರೆಂಬೆಯನ್ನು ತೆಗೆಯಲು ಯತ್ನಿಸಿದ್ದಾರೆ. ಪಕ್ಕೆಲುಬಿನ ಮೂಲಕ ರೆಂಬೆ ತೂರಿ ಬಂದಿದ್ದರಿಂದ ತೀವ್ರ ರಕ್ತಸ್ರಾವವಾಗುತ್ತಿತ್ತು. ಹೀಗಾಗಿ ಪ್ರಥಮ ಚಿಕಿತ್ಸೆ ನೀಡಿ ಗಾಯಾಳುವನ್ನು ಶಿರಸಿ ಟಿಎಸ್‍ಎಸ್ ಆಸ್ಪತ್ರೆಗೆ ರವಾನಿಸಲಾಯಿತು.

    ವೈದ್ಯರು ತಕ್ಷಣ ಈತನಿಗೆ ಚಿಕಿತ್ಸೆ ನೀಡಿದ್ದರಿಂದ ಮಹಾಬಲೇಶ್ವರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮಹಾಬಲೇಶ್ವರ ಸಿದ್ದಿ ಗಾಯಗೊಂಡಿರುವ ರೀತಿ ನೋಡಿ ಸ್ಥಳೀಯರು ಬೆಚ್ಚಿ ಬಿದ್ದಿದ್ದರು. ಮರದ ರೆಂಬೆಯನ್ನು ದೇಹದಿಂದ ಹೊರ ತೆಗೆಯುವುದೇ ವೈದ್ಯರಿಗೇ ಸವಾಲಾಗಿತ್ತು.

     

  • ವೈರಲ್ ಆಗಿದೆ ನೈಜ ಘಟನೆ ಆಧಾರಿತ ತುಳು ಹಾರರ್ ಕಿರು ಚಿತ್ರ

    ವೈರಲ್ ಆಗಿದೆ ನೈಜ ಘಟನೆ ಆಧಾರಿತ ತುಳು ಹಾರರ್ ಕಿರು ಚಿತ್ರ

    ಬೆಂಗಳೂರು: ನೈಜ ಘಟನೆಯನ್ನು ಆಧಾರಿಸಿದ ತುಳು ಹಾರರ್ ಚಿತ್ರ ‘ಪರೋಕ್ಷ್’ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ದೃಶ್ಯಂ ಫಿಲ್ಮ್ ನವರು ಈ ಚಿತ್ರವನ್ನು ನಿರ್ಮಿಸಿದ್ದು, ಏಪ್ರಿಲ್ 12ರಂದು ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿರುವ 12 ನಿಮಿಷದ ಕಿರು ಚಿತ್ರವನ್ನು 3.72 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದರೆ, ಯೂ ಟ್ಯೂಬ್‍ನಲ್ಲಿ 2.85 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

    ಗಣೇಶ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಅಮಿತ್ ಸಿಯಲ್, ಪೂಜಾ ಉಪಾಸನ, ಯತೀನ್ ಮುಂತಾದವರು ಅಭಿನಯಿಸಿದ್ದಾರೆ. ತುಳು ಚಿತ್ರವಾದರೂ ಇಂಗ್ಲಿಷ್‍ನಲ್ಲಿ ಸಬ್ ಟೈಟಲ್ ಹಾಕಲಾಗಿದೆ.

    ಚಿತ್ರದ ಕಥೆ ಏನು?
    ತೆಂಗಿನ ಮರದಲ್ಲಿ ಮಗು ಆಳುತ್ತಿರುವ ಧ್ವನಿ ಕೇಳುತ್ತಿರುತ್ತದೆ. ಯಾವುದೇ ಅತೀಂದ್ರಿಯ ಶಕ್ತಿ ತೆಂಗಿನ ಮರದಲ್ಲಿ ಇದೆ ಎಂದು ಭಾವಿಸಿ ಅಲ್ಲಿಗೆ ಹೋಗಲು ಜನ ಹೆದರುತ್ತಾರೆ. ಅಷ್ಟೇ ಅಲ್ಲದೇ ಮಂತ್ರವಾದಿಯನ್ನು ಕರೆಸಿ ಅತೀಂದ್ರಿಯ ಶಕ್ತಿಯನ್ನು ಹೋಗಲಾಡಿಸಲು ಪ್ರಯತ್ನವನ್ನು ನಡೆಸಲಾಗುತ್ತದೆ. ಆದರೆ ಕೊನೆಯಲ್ಲಿ ಧ್ವನಿಯ ರಹಸ್ಯ ಬಯಲಾಗುತ್ತದೆ.

    ಈ ಚಿತ್ರವನ್ನು ವೀಕ್ಷಿಸಿದ ಬಳಿಕ ಫೇಸ್‍ಬುಕ್‍ನಲ್ಲಿ ಜನ ತುಂಬಾ ಸರಳವಾಗಿರುವ ಕಥಾವಸ್ತುವನ್ನು ಚೆನ್ನಾಗಿ ನಿರೂಪಣೆ ಮಾಡಲಾಗಿದೆ. 12 ನಿಮಿಷದಲ್ಲಿ ಪ್ರತಿ ಕ್ಷಣವೂ ಕುತೂಹಲವನ್ನು ಹುಟ್ಟಿಸುತ್ತಾ ಹೋಗುತ್ತದೆ ಎಂದು ಎಂದು ಹೊಗಳಿ ಕಮೆಂಟ್ ಹಾಕಿದ್ದಾರೆ.