Tag: Hornadu

  • ಕಾರು ಬಿಟ್ಟು ಬಸ್‍ನಲ್ಲಿ ಸಂಚರಿಸಿ ಮಲೆನಾಡ ಸೌಂದರ್ಯ ಸವಿದ ತೇಜಸ್ವಿ ಸೂರ್ಯ ದಂಪತಿ

    ಕಾರು ಬಿಟ್ಟು ಬಸ್‍ನಲ್ಲಿ ಸಂಚರಿಸಿ ಮಲೆನಾಡ ಸೌಂದರ್ಯ ಸವಿದ ತೇಜಸ್ವಿ ಸೂರ್ಯ ದಂಪತಿ

    ಚಿಕ್ಕಮಗಳೂರು: ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಸದ ತೇಜಸ್ವಿ ಸೂರ್ಯ (Tejasvi Surya) ದಂಪತಿ ಕಾರು (Car) ಬಿಟ್ಟು, ಬಸ್‍ನಲ್ಲಿ ರೌಂಡ್ಸ್ ಹಾಕಿದ್ದಾರೆ.

    ಮಲೆನಾಡಿನ ತಳುಕು ಬಳುಕಿನ ರಸ್ತೆಗಳಲ್ಲಿ ಮಲೆನಾಡಿನ ಸೌಂದರ್ಯವನ್ನು ಸವಿಯಲು ತೇಜಸ್ವಿ ಸೂರ್ಯ ಹಾಗೂ ಶಿವಶ್ರೀ ದಂಪತಿ ಬಸ್‍ನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕಳಸದ ಖಾಸಗಿ ಬಸ್‍ನಲ್ಲಿ ಪತ್ನಿ ಜೊತೆ ಬಂದಾಸ್ ಸಂಚಾರ ಮಾಡಿ, ತಾಲೂಕಿನ ಪ್ರವಾಸಿ ತಾಣಗಳಿಗೆ ಅವರು ಭೇಟಿ ನೀಡುತ್ತಿದ್ದಾರೆ.

    ಶನಿವಾರ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಅವರು ಭೇಟಿ ನೀಡಿದ್ದರು. ಕುಟುಂಬ ಸಮೇತರಾಗಿ ಆಗಮಿಸಿರುವ ತೇಜಸ್ವಿ ಸೂರ್ಯ ದಂಪತಿ ಹೊರನಾಡು (Hornadu) ಅನ್ನಪೂರ್ಣೇಶ್ವರಿಗೆ ವಿಶೇಷ ಪೂಜೆ ಮಾಡಿಸಿ ದರ್ಶನ ಪಡೆದಿದ್ದರು.

    ಉಡಪಿ ಶ್ರೀ ಕೃಷ್ಣ ಮಠಕ್ಕೆ ಸಹ ಅವರು ಭೇಟಿಕೊಟ್ಟಿದ್ದರು. ರಾತ್ರಿಯ ಮಹಾಪೂಜೆ ಮತ್ತು ಪ್ರತಿದಿನ ನಡೆಯುವ ರಥೋತ್ಸವ ಸೇವೆಯಲ್ಲಿ ನವದಂಪತಿ ಭಾಗಿಯಾಗಿದ್ದರು.

  • ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೆ ಸಂಸದ ತೇಜಸ್ವಿ ಸೂರ್ಯ ದಂಪತಿ ಭೇಟಿ

    ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೆ ಸಂಸದ ತೇಜಸ್ವಿ ಸೂರ್ಯ ದಂಪತಿ ಭೇಟಿ

    ಚಿಕ್ಕಮಗಳೂರು: ಇತ್ತೀಚಿಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಸದ ತೇಜಸ್ವಿ ಸೂರ್ಯ (Tejasvi Surya) ದಂಪತಿ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಳಸ ತಾಲೂಕಿನ ಆಧಿಶಕ್ತ್ಯಾತ್ಮಕ ಹೊರನಾಡು (Horanadu) ಅನ್ನಪೂರ್ಣೇಶ್ವರಿ ದೇಗುಲಕ್ಕೆ ಭೇಟಿ ನೀಡಿದ್ದಾರೆ.

    ಸಂಸದ ತೇಜಸ್ವಿ ಸೂರ್ಯ ದಂಪತಿಗೆ ದೇವಸ್ಥಾನದ ಆಡಳಿತ ಮಂಡಳಿ ಕೂಡ ಆತ್ಮೀಯವಾಗಿ ಸ್ವಾಗತ ಕೋರಿದೆ. ಕುಟುಂಬ ಸಮೇತರಾಗಿ ಆಗಮಿಸಿರುವ ತೇಜಸ್ವಿ ಸೂರ್ಯ ದಂಪತಿ ಹೊರನಾಡು ಅನ್ನಪೂರ್ಣೇಶ್ವರಿಗೆ ವಿಶೇಷ ಪೂಜೆ ಮಾಡಿಸಿ ದರ್ಶನ ಪಡೆದಿದ್ದಾರೆ. ಹೊರನಾಡು ಕ್ಷೇತ್ರದ ಧರ್ಮ ಕರ್ತರಾದ ಭೀಮೇಶ್ವರ ಜೋಶಿ ಅವರು ತೇಜಸ್ವಿ ಸೂರ್ಯ ದಂಪತಿಗೆ ಆಶೀರ್ವಾದ ಮಾಡಿದ್ದಾರೆ. ಇದನ್ನೂ ಓದಿ: Mysuru | ಕ್ರಿಕೆಟ್ ಪಂದ್ಯ ಗೆಲ್ಲಿಸಿದ್ದ ಯುವಕ ಅನುಮಾನಾಸ್ಪದ ಸಾವು – ಕೊಲೆ ಶಂಕೆ

    ತೇಜಸ್ವಿ ಸೂರ್ಯ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯವರು. ಚಿಕ್ಕಮಗಳೂರಿನಲ್ಲಿ ಅವರ ಅಜ್ಜಿಯ ಮನೆ ಇದ್ದು, ತರೀಕೆರೆಯಲ್ಲಿ ಅವರ ಸಂಬಂಧಿಕರ ಮನೆ ಕೂಡ ಇದೆ. ತೇಜಸ್ವಿ ಸೂರ್ಯ ತನ್ನ ಬಾಲ್ಯದ ದಿನಗಳನ್ನು ಚಿಕ್ಕಮಗಳೂರು ಹಾಗೂ ತರೀಕೆರೆಯಲ್ಲಿ ಕಳೆದಿದ್ದರು. ಇದೀಗ, ಸಂಸದರಾದ ಬಳಿಕವೂ ಕೂಡ ಕುಟುಂಬದ ಸಭೆ ಸಮಾರಂಭಗಳಿಗೆ ಬಂದು ಹೋಗುತ್ತಾರೆ. ಇದನ್ನೂ ಓದಿ: ಐಪಿಎಲ್‌ಗೆ ಸೆಡ್ಡು ಹೊಡೆಯಲು ಸೌದಿ ಪ್ಲ್ಯಾನ್‌ – ʻಗ್ರ್ಯಾಂಡ್ ಸ್ಲಾಮ್‌ʼ ಕ್ರಿಕೆಟ್‌ಗೆ 4,347 ಕೋಟಿ ಹೂಡಿಕೆಗೆ ಚಿಂತನೆ