Tag: Hori

  • ಕೊಬ್ಬರಿ ಹೋರಿ ಹಬ್ಬ- ಹೋರಿ ತಿವಿದು ಯುವಕ ಸಾವು

    ಕೊಬ್ಬರಿ ಹೋರಿ ಹಬ್ಬ- ಹೋರಿ ತಿವಿದು ಯುವಕ ಸಾವು

    ಹಾವೇರಿ: ಕೊಬ್ಬರಿ ಹೋರಿ ಓಡಿಸೋ ಹಬ್ಬದಲ್ಲಿ ಹಿಡಿಯಲು ಹೋಗಿದ್ದ ಯುವಕನಿಗೆ ಹೋರಿ ಗುದ್ದಿ ಮೃತಪಟ್ಟ ಘಟನೆ ಹಾವೇರಿ ತಾಲೂಕಿನ ಕೆರಿಮತ್ತಿಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಮೃತ ಯುವಕನನ್ನು 24 ವರ್ಷದ ಚಂದ್ರು ಈರಕ್ಕನವರ ಎಂದು ಗುರುತಿಸಲಾಗಿದೆ. ಮೃತ ಚಂದ್ರು, ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಅಸುಂಡಿ ಗ್ರಾಮದ ನಿವಾಸಿಯವನಾಗಿದ್ದು, ಕೊಬ್ಬರಿ ಹೋರಿ ಹಬ್ಬಕ್ಕಾಗಿಯೇ ಕೆರಿಮತ್ತಿಹಳ್ಳಿಗೆ ಬಂದಿದ್ದ.

    ಪೊಲೀಸ್ ಇಲಾಖೆಯ ಅನುಮತಿ ನಿರಾಕರಣೆ ನಡುವೆಯೂ ಕೆರಿಮತ್ತಿಹಳ್ಳಿ ಗ್ರಾಮದಲ್ಲಿ ಇಂದು ಕೊಬ್ಬರಿ ಹೋರಿ ಓಡಿಸೋ ಸ್ಪರ್ಧೆ ಆಯೋಜಿಸಲಾಗಿತ್ತು. ಹಬ್ಬದಲ್ಲಿ ಹೋರಿ ತಿವಿದು ಈ ದುರ್ಘಟನೆ ನಡೆದಿದೆ. ಯುವಕ ಸಾವನ್ನಪ್ಪುತ್ತಿದ್ದಂತೆ ಹೋರಿ ಹಬ್ಬವನ್ನು ಬಂದ್ ಮಾಡಲಾಗಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

  • ಬನವಾಸಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ

    ಬನವಾಸಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಹೋಬಳಿಯ ಭಾಶಿಯಲ್ಲಿ ಕೊಬ್ಬಿದ ಹೋರಿ ಬೆದರಿಸುವ ಸ್ಪರ್ಧೆ ಸಹಸ್ರಾರು ಜನರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆದಿದೆ.

    ದೀಪಾವಳಿ ಪ್ರಯುಕ್ತ ಭಾಶಿಯ ಗ್ರಾಮಸ್ಥರ ವತಿಯಿಂದ ನಡೆದ ಈ ಗ್ರಾಮೀಣ ಕ್ರೀಡೆ ನೋಡುಗರ ಮೈ ನವಿರೇಳಿಸಿತು. ರಾಜ್ಯದ ಹಾವೇರಿ, ಹಾನಗಲ, ಸೊರಬಾ, ಶಿಕಾರಿಪುರ, ಶಿರಾಳಕೊಪ್ಪ ಹಾಗೂ ಸ್ಥಳೀಯ ಬನವಾಸಿ ಸುತ್ತಮುತ್ತಲಿನ 300ಕ್ಕೂ ಅಧಿಕ ಹೋರಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಮಾಲೀಕರು ತಮ್ಮ ತಮ್ಮ ಹೋರಿಗಳನ್ನು ವಿವಿಧ ರೀತಿಯಲ್ಲಿ ಅಲಂಕಾರ ಮಾಡಿಕೊಂಡು ಬಂದಿದ್ದರು.

    ಹೋರಿ ಬೆದರಿಸಿ ಹಿಡಿಯುವುದನ್ನು ನೋಡಲು ಬನವಾಸಿ ಹಾಗೂ ಸುತ್ತಮುತ್ತಲಿನ ಸಹಸ್ರಾರು ಜನರು ಆಗಮಿಸಿದ್ದರು. ರೋಮಾಂಚನಕಾರಿ ದೃಶ್ಯಗಳನ್ನು ನೋಡಿ ಜನ ಕಣ್ತುಂಬಿಕೊಂಡಿದ್ದಾರೆ.

  • ಕಟ್ಟಡ ನಿರ್ಮಾಣದ ಗುಂಡಿಯಲ್ಲಿ ಬಿದ್ದಿದ್ದ ಹೋರಿಯ ರಕ್ಷಣೆ

    ಕಟ್ಟಡ ನಿರ್ಮಾಣದ ಗುಂಡಿಯಲ್ಲಿ ಬಿದ್ದಿದ್ದ ಹೋರಿಯ ರಕ್ಷಣೆ

    ಬಳ್ಳಾರಿ: ಕಾಂಪೆಕ್ಸ್ ಕಟ್ಟಡ ನಿರ್ಮಾಣಕ್ಕಾಗಿ ತೆಗೆದಿದ್ದ ಆಳವಾದ ಬುನಾದಿಯ ಗುಂಡಿಯಲ್ಲಿ ಹೋರಿಯೊಂದು ಬಿದ್ದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

    ಇಲ್ಲಿನ ದೇವಿನಗರದ ಕುರುಬರ ಹಾಸ್ಟೆಲ್ ಸಮೀಪದಲ್ಲಿ ಘಟನೆ ನಡೆದಿದ್ದು, ಹೋರಿಗೆ ಯಾವುದೇ ಗಂಭೀರವಾದ ಗಾಯಗಳಾಗಿಲ್ಲ. ಆದರೆ ಕೆಲವು ಗಂಟೆಗಳ ಕಾಲ ಮಾತ್ರ ಹೋರಿ ಮೇಲೆ ಬರಲಾರದೇ ಒದ್ದಾಡಿದೆ. ಇದನ್ನು ಓದಿ:  ಕೇಬಲ್ ಗುಂಡಿಗೆ ಬಿದ್ದು, ಒದ್ದಾಡಿ ಹಸು ಸಾವು

    ಕಾಂಪ್ಲೆಕ್ಸ್ ಕಟ್ಟಡ ನಿರ್ಮಾಣದ ಉದ್ದೇಶದಿಂದ ಕೆಲವು ಗುಂಡಿಗಳನ್ನು ತೆಗೆಯಲಾಗಿದೆ. ರಸ್ತೆ ಪಕ್ಕದಲ್ಲಿದ್ದ ಆಳವಾದ ಗುಂಡಿಗೆ ಜಾರಿ ಬಿದ್ದ ಹೋರಿ, ಮೇಲೆಕ್ಕೆ ಬರಲು ಸಾಧ್ಯವಾಗಿಲ್ಲ. ಹೋರಿ ಬಿದ್ದಿರುವುದು ತಿಳಿಯುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

    ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಒಟ್ಟಾಗಿ ಹೋರಿಯನ್ನು ಮೇಲೆತ್ತಿ ಮಾನವೀಯತೆ ಮೆರೆದಿದ್ದಾರೆ. ಇತ್ತೀಚೆಗೆ ಚರಂಡಿಯಲ್ಲಿ ಬಿದ್ದು ಹಸುವೊಂದು ಮೇಲಕ್ಕೆ ಬರಲಾರದೇ ಸಾವನ್ನಪ್ಪಿತ್ತು.

  • ದೀಪಾವಳಿಯಂದು ನಡೆಯುತ್ತೆ ಮೈ ಜುಮ್ಮೆನಿಸೋ ಹೋರಿ ಬೆದರಿಸುವ ಸ್ಪರ್ಧೆ

    ದೀಪಾವಳಿಯಂದು ನಡೆಯುತ್ತೆ ಮೈ ಜುಮ್ಮೆನಿಸೋ ಹೋರಿ ಬೆದರಿಸುವ ಸ್ಪರ್ಧೆ

    ಹಾವೇರಿ: ಉತ್ತರ ಕರ್ನಾಟಕದಲ್ಲಿ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಅದರಲ್ಲೂ ದೀಪಾವಳಿ ದಿನ ಹೋರಿ ಬೆದರಿಸುವ ಸ್ಪರ್ಧೆ ಅಂತೂ ಎಲ್ಲರನ್ನೂ ಮೈ ಜುಮ್ಮೆನ್ನುವಂತೆ ಮಾಡುತ್ತೆ.

    ನಗರದ ಶ್ರೀ ವೀರಭದ್ರಶ್ವರ ದೇವಸ್ಥಾನ ಬಳಿ ರೈತರು ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆಯನ್ನ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಹೋರಿಗಳಿಗೆ ಬಲೂನು, ರಿಬ್ಬನ್, ಕೊಬ್ಬರಿ, ಮಿಂಚುಬಟ್ಟೆ ಕಟ್ಟಿ ಶೃಂಗಾರಿಸಲಾಗಿರುತ್ತದೆ. ನೋಡುಗರ ಮನಸೂರೆಗೊಳ್ಳುವ ಹಾಗೆ ಶೃಂಗರಿಸಿ ಮೊದಲು ಪ್ರದರ್ಶನ ಮಾಡಲಾಗುತ್ತದೆ.

    ಸ್ಪರ್ಧೆಯ ನಿಯಮ: ರಸ್ತೆಯ ಮಧ್ಯೆ ಶೃಂಗರಿಸಲಾದ ಹೋರಿಗಳನ್ನು ಒಂದೊಂದಾಗಿ ಬಿಡಲಾಗುತ್ತದೆ. ಆ ಹೋರಿಯು ತನ್ನ ಕೊರಳಿನಲ್ಲಿರುವ ಕೊಬ್ಬರಿಯ ಮಾಲೆಯನ್ನು ಕಳೆದುಕೊಳ್ಳಬಾರದು. ಕಳೆದುಕೊಂಡರೆ ಆ ಸ್ಪರ್ಧೆಯಲ್ಲಿ ಆ ಹೋರಿ ಸೋತಂತೆ. ಹೆಚ್ಚು ಬಾರಿ ಗೆದ್ದ ಹೋರಿಗೆ ಬಹುಮಾನ ನೀಡಲಾಗುತ್ತದೆ. ಈ ಹೋರಿಗಳನ್ನು ಹಿಡಿಯಲು ನೂರಾರು ಯುವಕರ ದಂಡೇ ಸೇರಿರುತ್ತದೆ. ಹೆಚ್ಚು ಕೊಬ್ಬರಿ ಮಾಲೆಯನ್ನು ಕಿತ್ತುಕೊಂಡವರಿಗೆ ಬಹುಮಾನ ಕೊಡಲಾಗುತ್ತದೆ.

    ಸುತ್ತಮುತ್ತಲಿನ ಗ್ರಾಮದ ನೂರಾರು ಹೋರಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತವೆ. ರೈತರು ಎತ್ತುಗಳಿಗೆ ರಿಬ್ಬನ್, ಬಲೂನ್ ಹಾಗೂ ಕೊಬ್ಬರಿ ಕಟ್ಟಿ ಹೋರಿಯನ್ನ ಓಡಲು ಬಿಡುತ್ತಾರೆ. ನೂರಾರು ಯುವಕರ ದಂಡು ಜಿಂಕೆಯಂತೆ ಓಡುವ ಹೋರಿಗಳನ್ನ ಹಿಡಿಯಲು ಮುಂದಾಗುತ್ತಾರೆ. ಹೋರಿಯ ಬಾಲವನ್ನ ಹಿಡಿದು ಓಡುವ ದೃಶ್ಯ ನೋಡಿಗರನ್ನ ಅಯೋ ಪಾಪಾ ಎನ್ನಿವಂತೆ ಮಾಡುತ್ತದೆ. ಮೈ ಮೇಲೆ ಒಮ್ಮೆಲೆ ಜಿಗಿದು ಬರುವ ಹೋರಿಗಳಿಗೆ ಹೆದರಿ ಜೀವವನ್ನೇ ಕೈಯಲ್ಲಿ ಹಿಡಿದುಕೊಂಡು ನಿಂತಿರುವ ಪ್ರೇಕ್ಷಕರು, ಹೋರಿಗಳನ್ನ ಹಿಡಿದುಕೊಂಡು ಓಡುವ ದೃಶ್ಯಗಳು, ಹೋರಿಯ ಕಾಲಿನ ಕೆಳಗೆ ಸಿಕ್ಕಿಹಾಕಿಕೊಳ್ಳವ ಯುವಕರು, ಹೋರಿಗಳನ್ನ ಹಿಡಿದು ಕೊಬ್ಬರಿ ಮಾಲೆಯನ್ನು ಕಿತ್ತುಕೊಳ್ಳುವ ಯುವಕರು ಹೀಗೆ ಎಲ್ಲಾ ದೃಶ್ಯಗಳು ನೋಡುಗರ ಮೈ ಜುಮ್ಮೆನ್ನುವಂತೆ ಮಾಡುತ್ತದೆ.

    ಯಾರ ಕೈಗೂ ಸಿಗದೇ ಅಕಾಡದಿಂದ ಎಲ್ಲರನ್ನೂ ರಂಜಿಸಿ, ಹೆದರಿಸಿ ಮುನ್ನುಗ್ಗಿ ಬಹುಮಾನ ಪಡೆದುಕೊಳ್ಳವ ಹೋರಿಗಳು ನೋಡುಗರನ್ನು ರೋಮಾಂಚನಗೊಳಿಸುತ್ತವೆ. ಹೋರಿ ಓಡಿಸುವ ಸ್ಪರ್ಧೆಗೆ ಆಗಮಿಸಿದ ಎಲ್ಲಾ ಪ್ರೇಕ್ಷಕರು ಶಿಳ್ಳೆ ಹೊಡೆದು ಕುಣಿದು ಕುಪ್ಪಳಿಸುತ್ತಾರೆ.

    https://youtu.be/r6IqrSxtCwc