Tag: hopcoms

  • ಶುಚಿತ್ವ ಕಾಪಾಡದ ಹಾಪ್‌ಕಾಮ್ಸ್ – ಗಲೀಜು ಕ್ಯಾನ್‌ಗಳಲ್ಲಿ ಜ್ಯೂಸ್ ಸರಬರಾಜು

    ಶುಚಿತ್ವ ಕಾಪಾಡದ ಹಾಪ್‌ಕಾಮ್ಸ್ – ಗಲೀಜು ಕ್ಯಾನ್‌ಗಳಲ್ಲಿ ಜ್ಯೂಸ್ ಸರಬರಾಜು

    ಬೆಂಗಳೂರು: ನಗರದ ಕೆಲವು ಹಾಪ್‌ಕಾಮ್‌ಗಳಲ್ಲಿ (Hopcoms) ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ತಮ್ಮಲ್ಲೇ ತಯಾರಾಗುವ ಜ್ಯೂಸ್‌ನ್ನು ಸರಬರಾಜು ಮಾಡುತ್ತಿದ್ದು, ಜನರ ಸ್ಪಂದನೆಯೂ ಉತ್ತಮವಾಗಿದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡು ಶುಚಿತ್ವ ಮರೆತು ಜ್ಯೂಸ್ ಮಾರಾಟ ಮಾಡುತ್ತಿದ್ದಾರೆ.

    ಹೌದು, ಸಾಮಾನ್ಯವಾಗಿ ಬಣ್ಣ ಅಥವಾ ಇನ್ನಿತರ ಕೆಮಿಕಲ್ ಬಳಸಿ ತಯಾರು ಮಾಡುವ ಜ್ಯೂಸ್‌ಗಿಂತ ಮನೆಯಲ್ಲಿ ತಯಾರು ಮಾಡುವ ಜ್ಯೂಸ್ ಆರೋಗ್ಯಕ್ಕೆ ಒಳ್ಳೆಯದು. ಹೀಗಿರುವಾಗ ಮನೆಯಲ್ಲಿ ತಯಾರಿಸುವ ಹಾಗೆಯೇ ಹಾಪ್‌ಕಾಮ್‌ಗಳು ಜ್ಯೂಸ್ ತಯಾರಿಸಲು ಮುಂದಾಗಿದ್ದವು. ಇದಕ್ಕೆ ಮಾರುಹೋದ ಜನರಿಂದಲೂ ಉತ್ತಮ ಸ್ಪಂದನೆ ದೊರೆಯುತ್ತಿತ್ತು. ಆದರೆ ಇದೀಗ ಇದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ.ಇದನ್ನೂ ಓದಿ: ಬ್ರಹ್ಮ ಜಗತ್ತನ್ನು ಸೃಷ್ಟಿಸಿದ ಮಂಗಳಕರ ದಿನ ಯುಗಾದಿ!

    ಬೆಂಗಳೂರಿನ ಲಾಲ್‌ಬಾಗ್, ಕಬ್ಬನ್‌ಪಾರ್ಕ್, ಹಾರ್ಡಿಂಗ್ ಸರ್ಕಲ್ ಸೇರಿದಂತೆ ಕೆಲ ಕಡೆ ಹಾಪ್‌ಕಾಮ್‌ನಲ್ಲೇ ತಯಾರಾಗುವ ಜ್ಯೂಸ್‌ನ್ನು ಆಯಾ ಮಳಿಗೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಕೆಲವು ಕಡೆ ಬಾಟಲ್‌ಗಳಿಗೆ ಫಿಲ್ ಮಾಡಿ ಹಾಪ್‌ಕಾಮ್‌ನವರು ಮಾರಾಟ ಮಾಡಿದರೆ, ಕೆಲವು ಕಡೆ ಗ್ಲಾಸ್ ಲೆಕ್ಕದಲ್ಲೂ ಮಾರಾಟ ಮಾಡಲಾಗುತ್ತಿದೆ. ಆದರೆ ಗ್ಲಾಸ್ ಲೆಕ್ಕದಲ್ಲಿ ಮಾರಾಟ ಮಾಡುವ ಪ್ರಕ್ರಿಯೆ ನೋಡಿದ್ರೆ, ನಾವು ಇಷ್ಟು ದಿನ ಬಾಯಿ ಚಪ್ಪರಿಸಿ ಕುಡಿಯುತ್ತಿದ್ದ ಜ್ಯೂಸ್ ಇದೇನಾ ಎನ್ನುಬಹುದು.

    ನಗರದ ಕಾರ್ಪೋರೇಷನ್ ಸರ್ಕಲ್‌ನಲ್ಲಿರುವ ಹಾಪ್‌ಕಾಮ್ ಮಳಿಗೆಯೊಂದರಲ್ಲಿ ಜೂಸ್ ಮಾರಾಟ ಮಾಡುತ್ತಾರೆ. ನಿತ್ಯ ಇಲ್ಲಿಗೆ ಬರುವ ನೂರಾರು ಜನ, ಇಲ್ಲಿ ತಯಾರಾಗುವ ಮಾವಿನ ಹಣ್ಣು ಹಾಗೂ ದ್ರಾಕ್ಷಿ ಜ್ಯೂಸ್ ಅನ್ನು ಬಾಯಿ ಚಪ್ಪರಿಸಿ ಕುಡಿಯುತ್ತಾರೆ. ಇದನ್ನೇ ಬಂಡವಾಳವಾಗಿಸಿಕೊಂಡಿರುವ ಹಾಪ್‌ಕಾಮ್‌ನವರು ಜ್ಯೂಸ್ ಸರಬರಾಜು ವೇಳೆ ಸ್ವಚ್ಛತೆ ಮರೆತು ಕೊಳೆ ತುಂಬಿರುವ ಡ್ರಮ್‌ಗಳಲ್ಲೇ ಜ್ಯೂಸ್ ಸರಬರಾಜು ಮಾಡುತ್ತಿದ್ದಾರೆ. ನಿತ್ಯ ಐದಾರು ಕ್ಯಾನ್‌ಗಳಲ್ಲಿ ಎರಡು ಬಗೆಯ ಜ್ಯೂಸ್‌ಗಳನ್ನು ತರಲಾಗುತ್ತದೆ. ಇದನ್ನ ಮಾರುವ ವ್ಯಕ್ತಿ ಕೂಡ, ಕೊಳೆಯ ಕೈಯಲ್ಲಿ ಕ್ಯಾನ್ ಒಳಭಾಗಕ್ಕೆ ಕೈ ಹಾಕಿ ತೊಳೆದು ನೇರವಾಗಿ, ಅದೇ ಕ್ಯಾನ್‌ನಲ್ಲಿ ಉಳಿದ ಜ್ಯೂಸ್ ಅನ್ನು ಮತ್ತೆ ಡಿಸ್ಪೆನ್ಸರ್ಸ್‌ಗೆ ತುಂಬಿ, ಬಂದ ಗ್ರಾಹಕರಿಗೆ ಮಾರಾಟ ಮಾಡ್ತಿದ್ದಾರೆ

    ಈ ಸಂಬಂಧ ಹಾಪ್‌ಕಾಮ್ ಆಗಿರುವ ತಪ್ಪನ್ನು ಒಪ್ಪಿಕೊಂಡಿದೆ. ಪ್ರತಿಬಾರಿ ಕೂಡ ನಾವು ಇದನ್ನ ಸ್ವಚ್ಚ ಮಾಡುತ್ತೇವೆ. ಆದರೆ ಈ ಪ್ರಮಾಣದ ಕೊಳೆಯಾಗಿರುವುದು, ಅಶುಚಿತ್ವ ಆಗಿರುವ ಬಗ್ಗೆ ಗೊತ್ತಿರಲಿಲ್ಲ. ಸದ್ಯ ಈಗ ನಮ್ಮ ಗಮನಕ್ಕೆ ಬಂದಿದೆ. ಈ ಕ್ಷಣದಿಂದಲೇ ಈ ರೀತಿಯ ಸರಬರಾಜು ನಿಲ್ಲಿಸಿ ತಕ್ಷಣ ತಪ್ಪನ್ನ ಸರಿಮಾಡುವುದಾಗಿ ತಿಳಿಸಿದ್ದಾರೆ.ಇದನ್ನೂ ಓದಿ:ಚಾರ್ಮಾಡಿ ಘಾಟಿಯಲ್ಲಿ 100 ಅಡಿ ಕಂದಕಕ್ಕೆ ಬಿದ್ದ ಕಾರು, ಐವರು ಪವಾಡ ಸದೃಶ್ಯ ಪಾರು!

  • ಹಾಪ್‌ಕಾಮ್ಸ್‌ನಲ್ಲಿ ಮೇ 26 ರಿಂದ ಮಾವು, ಹಲಸು ಮೇಳ

    ಹಾಪ್‌ಕಾಮ್ಸ್‌ನಲ್ಲಿ ಮೇ 26 ರಿಂದ ಮಾವು, ಹಲಸು ಮೇಳ

    ಬೆಂಗಳೂರು: ಮೇ 26 ರಿಂದ ಜೂನ್ 4 ರವರೆಗೆ ಹಾಪ್‌ಕಾಮ್ಸ್‌ನಲ್ಲಿ (HOPCOMS) ಮಾವು ಹಾಗೂ ಹಲಸು ಮೇಳವನ್ನು (Mango Jackfruit Fair) ಆಯೋಜಿಸಲಾಗಿದೆ.

    ಮಾವು ಹಾಗೂ ಹಲಸು ಬೆಳೆಗಾರರಿಗೆ ಉತ್ತಮ ಮಾರುಕಟ್ಟೆ ಸೌಲಭ್ಯಗಳನ್ನು ಕಲ್ಪಿಸುವುದರ ಜೊತೆಗೆ ಪ್ರೋತ್ಸಾಹ ನೀಡುವುದರ ನಿಟ್ಟಿನಲ್ಲಿ ಮೇಳವನ್ನು ಆಯೋಜನೆ ಮಾಡಲಾಗಿದೆ. ಮೇ 26 ರಿಂದ ಜೂನ್ 4 ರವರೆಗೂ ಗ್ರಾಹಕರು ರಿಯಾಯಿತಿ ದರದಲ್ಲಿ ಮಾವು ಹಾಗೂ ಹಲಸನ್ನು ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ.

    ಮಾವು, ಹಲಸು ಹಂಗಾಮು ಮುಗಿಯುವವರೆಗೂ ಎಲ್ಲಾ ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಮೇಳ ನಡೆಯಲಿದೆ. ಮೇಳದಲ್ಲಿ ಆಲೋನ್ಸ್, ರಸಪುರಿ, ಸೇಂದೂರ, ಮಲಗೋವಾ, ಮಲ್ಲಿಕಾ, ಬಂಗನ ಪಲ್ಲಿ (ಬೇನಿಷಾ), ದರೇರಿ, ಕಾಲಪಾಡು, ಕೇಸರ್, ನೀಲಂ, ತೋತಾಪುರಿ, ಇಮಾಂಪಸಂದ್ ತಳಿಯ ಮಾವು ಮತ್ತು ಚಂದ್ರ ಹಲಸು ಸೇರಿದಂತೆ ವಿವಿಧ ತಳಿಯ ಹಲಸು ಸಿಗಲಿದೆ. ಇದನ್ನೂ ಓದಿ: ಸಂಸತ್‌ ಭವನ ಲೋಕಾರ್ಪಣೆ ಕಾರ್ಯಕ್ರಮಕ್ಕೆ ವಿಪಕ್ಷಗಳ ಬಹಿಷ್ಕಾರ – ಭಾಗವಹಿಸುತ್ತೇವೆ ಎಂದ 2 ಪಕ್ಷಗಳು

    ಶುಕ್ರವಾರ ಬೆಳಗ್ಗೆ 10 ಗಂಟೆಗೆ ಲಾಲ್‌ಬಾಗ್ ಸಮೀಪದ ಹಾಪ್‌ಕಾಮ್ಸ್ ಕೇಂದ್ರ ಕಚೇರಿಯಲ್ಲಿ ಮಾವು ಹಾಗೂ ಹಲಸಿನ ಮೇಳ ಉದ್ಘಾಟನೆಯಾಗಲಿದೆ. ಇದನ್ನೂ ಓದಿ: ಮಂತ್ರಿಗಿರಿ ಲಾಬಿಗೆ ಲೋಕಸಭೆ ದಾಳ – ಶಾಸಕರಿಗೆ ಷರತ್ತು ವಿಧಿಸಿದ ಕಾಂಗ್ರೆಸ್‌

  • ಹಾಪ್‌ಕಾಮ್ಸ್‌ನಲ್ಲಿ ಇಂದಿನಿಂದ ಮಾವು ಮೇಳ – ಸಚಿವ ಮುನಿರತ್ನ ಚಾಲನೆ

    ಹಾಪ್‌ಕಾಮ್ಸ್‌ನಲ್ಲಿ ಇಂದಿನಿಂದ ಮಾವು ಮೇಳ – ಸಚಿವ ಮುನಿರತ್ನ ಚಾಲನೆ

    ಬೆಂಗಳೂರು: ಒಂದು ಕಡೆ ಬಗೆಬಗೆಯ ಮಾವು, ಮತ್ತೊಂದು ಕಡೆ ಹಣ್ಣುಗಳ ರಾಜ ಹಲಸಿನ ಹಣ್ಣು, ರೈತರಿಂದ ನೇರವಾಗಿ ಗ್ರಾಹಕರ ಕೈಗೆ ತಲುಪಿಸಲು ಹಾಪ್‌ಕಾಮ್ಸ್ ಮತ್ತೆ ಈ ವರ್ಷ ಮಾವು ಮತ್ತು ಹಲಸಿನ ಮೇಳಕ್ಕೆ ಚಾಲನೆ ನೀಡಿದೆ.

    MUNIRATHNA (1

    ಹಾಪ್‌ಕಾಮ್ಸ್ ನಲ್ಲಿ ಇಂದಿನಿಂದ ನಡೆಯುವ ಮಾವು ಮತ್ತು ಹಲಸು ಮೇಳಕ್ಕೆ ತೋಟಾಗಾರಿಕೆ ಸಚಿವ ಮುನಿರತ್ನ ಚಾಲನೆ ನೀಡಿದ್ದು, ಸೀಸನ್ ಮುಗಿಯುವವರೆಗೆ ಗ್ರಾಹಕರಿಗೆ ಮಾವು ಮತ್ತು ಹಲಸಿನ ಹಣ್ಣುಗಳು ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಈ ಬಾರಿ ಅಕಾಲಿಕ ಮಳೆಯಿಂದಾಗಿ ಮಾವು ಬೆಳೆ ನಷ್ಟವಾಗಿದ್ದು, ಶೇ.30 ರಷ್ಟು ಮಾತ್ರ ಪಸಲು ಬಂದಿದೆ. ಆದರೂ, ಬಗೆಬಗೆಯ 14 ಬಗೆಯ ಮಾವಿನ ಹಣ್ಣು ಮೇಳದಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತಿವೆ. ಇದನ್ನೂ ಓದಿ: KPCC ಸಭೆಗೆ ಶಾಸಕಿ ಹೆಬ್ಬಾಳ್ಕರ್, ನಿಂಬಾಳ್ಕರ್ ಗೈರು

    Mango

    ಮಾವು ಮೇಳದಲ್ಲಿ ಬಾದಾಮಿ, ಮಲ್ಲಿಕಾ, ರಸಪೂರಿ, ಬೈಗಂಪಲ್ಲಿ, ಸೇಂದೂರ, ತೋತಾಪುರಿ, ದಶಹರಿ, ಮಲಗೋವಾ, ಹಿಮಾಮ್ ಪಸಂದ್, ಕಾಲಾಪಾಡ್, ಕೇಸರ್, ಸಕ್ಕರೆಗುತ್ತಿ ಮಾವಿನ ಹಣ್ಣುಗಳನ್ನು ರೈತರಿಂದ ಹಾಪ್‌ಕಾಮ್ಸ್ ನೇರವಾಗಿ ಖರೀದಿಸಿ ಮಾರಾಟ ಮಾಡುತ್ತಿವೆ. ಯಾವುದೇ ರಾಸಾಯನಿಕ ಬಳಕೆ ಮಾಡದೇ ನೈಸರ್ಗಿಕವಾಗಿ ಬೆಳೆದ ಹಣ್ಣುಗಳನ್ನು ಇಲ್ಲಿ ಮಾರಾಟ ಮಾಡಲಾಗ್ತಿದೆ. ಜೊತೆಗೆ 7 ಬಗೆಯ ಹಲಸಿನ ಹಣ್ಣುಗಳೂ ದೊರೆಯುತ್ತಿವೆ. ಇದನ್ನೂ ಓದಿ: ನಮ್ಮಲ್ಲಿ ಯಾವುದೇ ಬಣ ಇಲ್ಲ, ಹೈಕಮಾಂಡ್‌ ಹೇಳಿದ್ದೇ ಅಂತಿಮ: ಪರಿಷತ್‌ ಟಿಕೆಟ್‌ ಬಗ್ಗೆ ಡಿಕೆಶಿ ಮಾತು

    ವಿವಿಧ ಬಗೆಯ ಮಾವಿನ ಹಣ್ಣು ಕೆಜಿಗೆ 32 ರಿಂದ 215 ರೂಪಾಯಿ ವರೆಗೆ, ಹಲಸಿನ ಹಣ್ಣು ಪ್ರತಿ ಕೆಜಿಗೆ 25ರೂ. ನಿಗದಿಯಾಗಿದೆ.

  • 40 ಲಕ್ಷ ಮೌಲ್ಯದ ಮೆಣಸಿನಕಾಯಿ ಬೆಳೆ ಮಣ್ಣು ಪಾಲು

    40 ಲಕ್ಷ ಮೌಲ್ಯದ ಮೆಣಸಿನಕಾಯಿ ಬೆಳೆ ಮಣ್ಣು ಪಾಲು

    ಮಂಡ್ಯ: ದೇಶವ್ಯಾಪಿ ಲಾಕ್ ಡೌನ್ ಹಿನ್ನೆಲೆ ರೈತರು ಬೆಳೆದ ಬೆಳೆಯನ್ನು ಕೊಳ್ಳುವವರೇ ಇಲ್ಲದಂತಾಗಿದ್ದು, ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದ ಬೆಳೆ ಮಣ್ಣು ಪಾಲಾಗುತ್ತಿದೆ. ಮಂಡ್ಯದ ರೈತ 40 ಲಕ್ಷ ರೂ.ವೆಚ್ಚ ಮಾಡಿ ಬೆಳೆದಿದ್ದ ದಪ್ಪ ಮೆಣಸಿನಕಾಯಿ ಬೆಳೆ ಕಟಾವಿಗೆ ಬಂದರೂ ಕೊಳ್ಳುವವರೇ ಇಲ್ಲದಂತಾಗಿದೆ.

    ಜಿಲ್ಲೆಯ ಮದ್ದೂರು ತಾಲೂಕಿನ ಬನ್ನಹಳ್ಳಿ ಗ್ರಾಮದ ರೈತ ಶಿವಲಿಂಗೇಗೌಡರು 40 ಲಕ್ಷ ವೆಚ್ಚದಲ್ಲಿ ಪಾಲಿಹೌಸ್ ನಿರ್ಮಾಣ ಮಾಡಿ ಹಳದಿ, ಕೆಂಪು ಬಣ್ಣದ ದಪ್ಪ ಮೆಣಸಿನಕಾಯಿ ಬೆಳೆದಿದ್ದರು. ಲಕ್ಷ ಲಕ್ಷ ಖರ್ಚು ಮಾಡಿ ಬೆಳೆದ ದಪ್ಪ ಮೆಣಸಿನಕಾಯಿ ಬೆಳೆಯನ್ನು ಕೊಳ್ಳುವವರೇ ಇಲ್ಲದಂತಾಗಿದೆ. ಹೀಗಾಗಿ ಲಕ್ಷಾಂತರ ರೂಪಾಯಿ ನಷ್ಟವಾಗುವ ಭೀತಿಯಲ್ಲಿ ಶಿವಲಿಂಗೇಗೌಡರು ಇದ್ದಾರೆ. ಮೆಣಸಿನಕಾಯಿ ಕಟಾವಿಗೆ ಬಂದಿದ್ದು, ಗಿಡದಲ್ಲೇ ಕೊಳೆಯುತ್ತಿದೆ.

    ರೇಷ್ಮೆ ಬೇಸಾಯ ಬಿಟ್ಟು ತೋಟಗಾರಿಕೆ ಬೆಳೆಯತ್ತ ಮುಖಮಾಡಿದ್ದ ರೈತ ಶಿವಲಿಂಗೇಗೌಡರಿಗೆ ಮೊದಲ ಪ್ರಯತ್ನದಲ್ಲೇ ದೊಡ್ಡ ಹೊಡೆತ ಬಿದ್ದಿದೆ. ಕಟಾವಿಗೆ ಬರುತ್ತಿದ್ದಂತೆ ದೇಶವ್ಯಾಪಿ ಲಾಕ್ ಡೌನ್ ಆಗಿದ್ದು, ಕೊಳ್ಳುವರಿಲ್ಲದ್ದಕ್ಕೆ ರೈತ ಮೆಣಸಿನಕಾಯಿಯನ್ನು ಕಟಾವು ಮಾಡಿಲ್ಲ. ಒಂದೆಡೆ ಸರ್ಕಾರವೇ ರೈತರ ತರಕಾರಿ, ಹಣ್ಣುಗಳನ್ನು ಖರೀದಿಸಲಿದೆ. ಹಾಪ್‍ಕಾಮ್ಸ್ ಮೂಲಕ ಖರೀದಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದೆ. ಆದರೆ ಯಾರೊಬ್ಬರೂ ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ.

    ಸರ್ಕಾರ ಹಾಪ್ ಕಾಮ್ಸ್ ಮೂಲಕ ತರಕಾರಿ ಖರೀದಿಸುವ ಭರವಸೆ ನೀಡಿದ್ದಕ್ಕೆ ಶಿವಲಿಂಗೇಗೌಡರು ಅಧಿಕಾರಿಗಳನ್ನು ಭೇಟಿ ಮಾಡಿ ಮೆಣಿಸಿನಕಾಯಿ ಕೊಳ್ಳುವಂತೆ ಮನವಿ ಮಾಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.

  • ಶಿವಮೊಗ್ಗ ನಗರದ 35 ವಾರ್ಡುಗಳಲ್ಲೂ ಹಾಪ್‍ಕಾಮ್ಸ್ ಮಳಿಗೆ ತೆರೆಯಲು ಈಶ್ವರಪ್ಪ ಸೂಚನೆ

    ಶಿವಮೊಗ್ಗ ನಗರದ 35 ವಾರ್ಡುಗಳಲ್ಲೂ ಹಾಪ್‍ಕಾಮ್ಸ್ ಮಳಿಗೆ ತೆರೆಯಲು ಈಶ್ವರಪ್ಪ ಸೂಚನೆ

    ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿನ 35 ವಾರ್ಡುಗಳಲ್ಲಿಯೂ ಹಾಪ್‍ಕಾಮ್ಸ್ ಮಳಿಗೆ ತೆರೆಯಲು ಸಚಿವ ಈಶ್ವರಪ್ಪ ಇಂದು ಸೂಚನೆ ನೀಡಿದ್ದಾರೆ.

    ಇಂದು ಹಾಪ್‍ಕಾಮ್ಸ್ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ನಿರ್ದೇಶಕರ ಸಭೆ ನಡೆಸಿದ ಈಶ್ವರಪ್ಪ ಅವರು ಸರ್ಕಾರದಿಂದ ಹೆಚ್ಚುವರಿಯಾಗಿ ದುಡಿಯುವ ಬಂಡಾವಳ ಕೊಡಿಸುವ ಬಗ್ಗೆ ಆಶ್ವಾಸನೆ ನೀಡಿದರು. ಅಲ್ಲದೇ ಸ್ಥಳದಲ್ಲಿಯೇ ಉನ್ನತ ಅಧಿಕಾರಿಗಳೊಂದಿಗೆ ಈ ಬಗ್ಗೆ ದೂರವಾಣಿ ಮೂಲಕ ಮಾತನಾಡಿದರು.

    ನಗರದ 35 ವಾರ್ಡುಗಳ ಪೈಕಿ ಈಗಾಗಲೇ 15 ಮಳಿಗೆಗಳಿದ್ದು, ಉಳಿದ 20 ಮಳಿಗೆಗೆ ಪಾಲಿಕೆ ಮತ್ತು ಹಾಪ್‍ಕಾಮ್ಸ್ ಇಲಾಖೆ ಜಂಟಿಯಾಗಿ ಸಮೀಕ್ಷೆ ನಡೆಸಿ, ಯಾರು ಹಾಪ್‍ಕಾಮ್ಸ್ ನಡೆಸಲು ಮುಂದೆ ಬರುವರೋ ಅವರಿಗೆ ಸ್ವಂತ ಖರ್ಚಿನಲ್ಲಿ ಮಳಿಗೆ ನಿರ್ಮಿಸಿ ಕೊಡಲು ಸೂಚಿಸಿದ್ದಾರೆ. ಸದ್ಯಕ್ಕೆ ನಗರದಲ್ಲಿ 15 ಹಾಪ್‍ಕಾಮ್ಸ್ ಮಳಿಗೆಗಳಿದ್ದು, ಉಳಿದ 20 ವಾರ್ಡುಗಳಲ್ಲಿ ಮಳಿಗೆ ತೆರೆಯಬೇಕು. ಈ ಮಳಿಗೆಗಳನ್ನು ಒಂದು ತಿಂಗಳಲ್ಲಿ ನಿರ್ಮಿಸಬೇಕೆಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಜಿಲ್ಲೆಯ ಹಾಪ್‌ಕಾಮ್ಸ್‌ನ ಅಭಿವೃದ್ಧಿಗಾಗಿ 50 ಲಕ್ಷ ರೂ. ದುಡಿಯುವ ಬಂಡವಾಳದ ಅಗತ್ಯವಿದ್ದು, ಹಾಪ್‍ಕಾಮ್ಸ್ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ತಕ್ಷಣವೇ ಇದಕ್ಕಾಗಿ ಹಣ ಬಿಡುಗಡೆಗೆ ಸಭೆಯಲ್ಲಿಯೇ ಈಶ್ವರಪ್ಪ ಒತ್ತಾಯಿಸಿದರು. ಅಲ್ಲದೇ ಈ ಬಗ್ಗೆ ಸಚಿವ ನಾರಾಯಣಗೌಡರಿಗೂ ಕೂಡ ಮನವಿ ಮಾಡಿ ದುಡಿಯುವ ಬಂಡಾವಳ ಬಿಡುಗಡೆ ಮಾಡುವಂತೆ ಕೋರಿದರು.

    ಶಿವಮೊಗ್ಗ ನಗರದ ಎಲ್ಲಾ ಬಡಾವಣೆಗಳಲ್ಲಿ ಹಾಪ್‍ಕಾಮ್ಸ್ ಮಳಿಗೆಗಳನ್ನು ಸ್ಥಾಪಿತವಾಗಬೇಕೆಂಬ ನಿಟ್ಟಿನಲ್ಲಿ ಸೂಕ್ತ ನಿರ್ದೇಶನ ಕೂಡ ನೀಡಿ, ಅಲ್ಲಿನ ಪಾರ್ಕ್‍ಗಳಲ್ಲಿ ಮಳಿಗೆ ತೆರೆಯಲು ಸೂಚಸಿದರು. ತರಕಾರಿ ಮತ್ತು ಹಣ್ಣುಗಳನ್ನು ರೈತರಿಂದ ನೇರವಾಗಿ ಖರೀದಿಸಿ ಹಾಪ್‍ಕಾಮ್ಸ್ ಮೂಲಕವೇ ನಾಗರೀಕರಿಗೆ ತಲುಪುವಂತೆ ಆಗಬೇಕು ಎಂದು ಸಚಿವರು ತಿಳಿಸಿದರು.

  • ಮನೆ ಮನೆಗೆ ಹಣ್ಣು, ತರಕಾರಿ ಮಾರಾಟ ಮಾಡಿ – ಸರ್ಕಾರದಿಂದ ಸೂಚನೆ

    ಮನೆ ಮನೆಗೆ ಹಣ್ಣು, ತರಕಾರಿ ಮಾರಾಟ ಮಾಡಿ – ಸರ್ಕಾರದಿಂದ ಸೂಚನೆ

    ಬೆಂಗಳೂರು: ಹಣ್ಣು, ತರಕಾರಿ ಸರಬರಾಜಿನಲ್ಲಿ ತೊಂದರೆ ಆಗದಂತೆ ಕ್ರಮ ವಹಿಸಿ ಎಂದು ತೋಟಗಾರಿಕಾ ಸಚಿವ ಡಾ. ನಾರಾಯಣ ಗೌಡ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

    ಬೆಂಗಳೂರಿನಲ್ಲಿ ತೋಟಗಾರಿಕಾ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವರು ರೈತರಿಂದ ನೇರವಾಗಿ ರೈತರ ಉತ್ಪನ್ನಗಳನ್ನು ಆಯ್ದ ಭಾಗಗಳಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಬೇಕು. ಜಿಲ್ಲಾ ಮಟ್ಟದಲ್ಲಿ ಹಾಪ್ ಕಾಮ್ಸ್ ಸಹಯೋಗದೊಂದಿಗೆ ತೋಟಗಾರಿಕಾ ಇಲಾಖೆಯಿಂದ ಮೊಬೈಲ್ ವ್ಯಾನ್‍ಗಳ ಮೂಲಕ ಮನೆಮನೆಗೆ ಹಣ್ಣು, ತರಕಾರಿ ಮಾರಾಟ ಮಾಡಬೇಕು. ಇಲಾಖೆಯ ರೈತ ಉತ್ಪಾದಕಾ ಸಂಸ್ಥೆಗಳ ಮೂಲಕ ಹಣ್ಣು ತರಕಾರಿ ಮಾರಾಟಕ್ಕೆ ಸೂಚನೆ ನೀಡಿದ್ದಾರೆ.

    ಈಗಾಗಲೇ ಹಾಪ್‌ ಕಾಮ್ಸ್‌ಗಳ ಮೂಲಕ ಬೆಂಗಳೂರಿನಲ್ಲಿ 225 ಮಳಿಗೆಗಳು, ಜಿಲ್ಲೆಗಳಲ್ಲಿನ 257 ಮಳಿಗೆಗಳ ಮೂಲಕ ಹಣ್ಣು, ತರಕಾರಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಹಾಪ್‌ ಕಾಮ್ಸ್‌ಗಳ ಮೂಲಕ ಪ್ರತಿ ದಿನ 100 ಟನ್‍ಗಳಷ್ಟು ಹಣ್ಣು ತರಕಾರಿಗಳು ಮಾರಾಟವಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

    ಹಿರಿಯ ಅಧಿಕಾರಿಗಳ ತಂಡದಿಂದ ಜಿಲ್ಲೆಗಳ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕ ಹೊಂದುವಂತೆ ತಿಳಿಸಲಾಗಿದೆ. ಹಣ್ಣು ತರಕಾರಿ ಸರಬರಾಜಿನಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಹಾಗೆಯೇ ದ್ರಾಕ್ಷಿ ಬೇಡಿಕೆ ಇರುವ ಸ್ಥಳಗಳನ್ನು ಗುರುತಿಸಿ ಮಾರಾಟ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲು ಸಭೆಯಲ್ಲಿ ಚರ್ಚಿಸಲಾಗಿದೆ.

  • ಆಹಾರ, ತರಕಾರಿ ಸುಗಮ ಸರಬರಾಜಿಗೆ ವ್ಯವಸ್ಥೆ – ಡಿಸಿ ಕೆ.ಬಿ ಶಿವಕುಮಾರ್

    ಆಹಾರ, ತರಕಾರಿ ಸುಗಮ ಸರಬರಾಜಿಗೆ ವ್ಯವಸ್ಥೆ – ಡಿಸಿ ಕೆ.ಬಿ ಶಿವಕುಮಾರ್

    ಶಿವಮೊಗ್ಗ: ಜಿಲ್ಲೆಯ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಾಪ್‍ಕಾಮ್ಸ್ ನೆರವಿನಿಂದ ಪ್ರತಿ ವಾರ್ಡಿನಲ್ಲಿ ತರಕಾರಿ ಮಾರಾಟ ಮಾಡಲು ಹಾಗೂ ಪ್ಯಾಕ್ಡ್ ಆಹಾರ ಮನೆ ಬಾಗಿಲಿಗೆ ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ತಿಳಿಸಿದ್ದಾರೆ.

    ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉನ್ನತ ಮಟ್ಟದ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ತರಕಾರಿ, ಹಾಲು ಹಣ್ಣು, ಮೀನು, ಮಾಂಸ, ದಿನಸಿ ವಸ್ತುಗಳಂತಹ ಅವಶ್ಯಕ ವಸ್ತುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೋಳಿ ಜ್ವರ ಹಿನ್ನೆಲೆಯಲ್ಲಿ ಮಾರ್ಚ್ 31ರವರೆಗೆ ಮಾತ್ರ ಚಿಕನ್ ಮಾರಾಟ ನಿರ್ಬಂಧಿಸಲಾಗಿದೆ. ಶುಕ್ರವಾರದ ಒಳಗಾಗಿ ಹಾಪ್‍ಕಾಮ್ಸ್ ವತಿಯಿಂದ ವಾಹನದ ಮೂಲಕ ಪ್ರತಿ ವಾರ್ಡಿನಲ್ಲಿ ನಿಗದಿತ ದರದಲ್ಲಿ ತರಕಾರಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

    ಹೊಟೇಲ್‍ಗಳನ್ನು ಅವಲಂಬಿಸಿರುವವರನ್ನು ಗಮನದಲ್ಲಿರಿಸಿ ಮನೆ ಬಾಗಿಲಿಗೆ ಸಿದ್ಧ ಆಹಾರ ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಐದು ವಾರ್ಡುಗಳಿಗೆ ಒಬ್ಬರಂತೆ ಗುತ್ತಿಗೆದಾರರನ್ನು ಗುರುತಿಸಿ, ಆಯಾ ವಾರ್ಡುಗಳಲ್ಲಿ ಬೇಡಿಕೆ ಅನುಸರಿಸಿ ಆಹಾರ ಒದಗಿಸಲು ವ್ಯವಸ್ಥೆ ಮಾಡಬೇಕು. ಕೆಲವು ಸೀಮಿತ ಮೆನು ಸಿದ್ಧಪಡಿಸಿ, ದರವನ್ನು ನಿಗದಿಪಡಿಸಬೇಕು. ಆಹಾರ ವಿತರಿಸುವವರಿಗೆ ಗುರುತಿನ ಚೀಟಿ ನೀಡಲಾಗುವುದು. ಆಹಾರದ ಗುಣಮಟ್ಟವನ್ನು ಮಹಾನಗರ ಪಾಲಿಕೆ ಖಾತ್ರಿಪಡಿಸಬೇಕು. ಇತರೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಹ ಅಗತ್ಯವಿದ್ದರೆ ಈ ವ್ಯವಸ್ಥೆ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

    ಆಸ್ಪತ್ರೆಗಳ ಹತ್ತಿರ ಇರುವ ಹೊಟೇಲ್‍ಗಳನ್ನು ತೆರೆದಿಟ್ಟು, ಆಹಾರ ತಿನಿಸುಗಳನ್ನು ಪಾರ್ಸೆಲ್ ಕೊಂಡೊಯ್ಯಲು ಅವಕಾಶ ನೀಡಲಾಗುವುದು. ಕುವೆಂಪು ರಸ್ತೆಯಲ್ಲಿರುವ ಇಂತಹ ಹೊಟೇಲ್‍ಗಳನ್ನು ತೆರೆಯಲು ಸೂಚನೆ ನೀಡುವಂತೆ ಅಧಿಕಾರಿಗಳಿಗೆ ಡಿಸಿ ತಿಳಿಸಿದರು. ಅಗತ್ಯವಿರುವವರಿಗೆ ಆಹಾರ ಸಾಮಾಗ್ರಿ, ಅವಶ್ಯಕ ವಸ್ತುಗಳನ್ನು ವಿತರಿಸಲು ಬಯಸುವ ಸರ್ಕಾರೇತರ ಸಂಸ್ಥೆಗಳು ಹಾಗೂ ಸಂಘಸಂಸ್ಥೆಗಳು ಈ ಕುರಿತು ಜಿಲ್ಲಾಡಳಿತದಿಂದ ಅನುಮತಿಯನ್ನು ಪಡೆಯಬೇಕು. ಅಂತವರಿಗೆ ಗುರುತಿನ ಚೀಟಿಯನ್ನು ಒದಗಿಸಲಾಗುವುದು. ಸಾಮಾಗ್ರಿಗಳನ್ನು ವಿತರಣೆ ಮಾಡುವವರು ಮಾಸ್ಕ್, ಗ್ಲೌಸ್ ಸೇರಿದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದರು.

    ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ಬೆಂಗಳೂರಿನಿಂದ ಬಂದವರಿಗೆ ಮನೆಯೊಳಗೆ ಸ್ವಯಂ ಬಂಧನದಲ್ಲಿರುವಂತೆ(ಹೋಂ ಕ್ವಾರೆಂಟೈನ್) ಸೂಚನೆ ನೀಡಬೇಕು. ಅವರ ಮೇಲೆ ನಿಗಾ ಇರಿಸಿ, ನಿರಂತರವಾಗಿ ಅವರ ಆರೋಗ್ಯ ತಪಾಸಣೆ ನಡೆಸಬೇಕು. ಈ ಕುರಿತು ಎಲ್ಲಾ ಪಿಡಿಒಗಳು ನಿಗದಿತ ನಮೂನೆಯಲ್ಲಿ ವರದಿಯನ್ನು ಸಲ್ಲಿಸಬೇಕು. ಹೋಂ ಕ್ವಾರೆಂಟೈನ್ ಇಡೀ ಕುಟುಂಬಕ್ಕೆ ಅನ್ವಯವಾಗಲಿದ್ದು, ಆ ಮನೆಯ ಸದಸ್ಯರು ಹೊರಗೆ ಬಂದರೆ ನೆರೆಹೊರೆಯವರು ಮಾಹಿತಿಯನ್ನು ಒದಗಿಸಲು ಸೂಚಿಸುವಂತೆ ಡಿಸಿ ತಿಳಿಸಿದರು. ಅಲ್ಲದೇ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕ್ರಿಮಿನಾಶಕ ಸ್ಪ್ರೇ ದೊಡ್ಡ ಪ್ರಮಾಣದಲ್ಲಿ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶಾಂತರಾಜು, ಜಿಲ್ಲಾ ಪಂಚಾಯತ್ ಸಿಇಒ ಎಂ.ಎಲ್ ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

  • ಇತ್ತ ಸಾಲಮನ್ನಾ ಚಿಂತೆಯಲ್ಲಿ ಸಿಎಂ- ಅತ್ತ ಸರ್ಕಾರಿ ದುಡ್ಡಲ್ಲಿ ಅಧಿಕಾರಿಗಳಿಂದ ಜಾಲಿ ಟ್ರಿಪ್!

    ಇತ್ತ ಸಾಲಮನ್ನಾ ಚಿಂತೆಯಲ್ಲಿ ಸಿಎಂ- ಅತ್ತ ಸರ್ಕಾರಿ ದುಡ್ಡಲ್ಲಿ ಅಧಿಕಾರಿಗಳಿಂದ ಜಾಲಿ ಟ್ರಿಪ್!

    ಬೆಂಗಳೂರು: ರೈತರ ಸಾಲಮನ್ನಾ ಮಾಡೋದು ಹೇಗಪ್ಪ ಎಂದು ಸಿಎಂ ಕುಮಾರಸ್ವಾಮಿಯವರು ತಲೆಕೆಡಿಸಿಕೊಂಡಿದ್ದರೆ, ಅತ್ತ ಹಾಪ್‍ಕಾಮ್ಸ್ ಮಂಡಳಿ ಅಧಿಕಾರಿಗಳು ಸರ್ಕಾರಿ ದುಡ್ಡಲ್ಲಿ ವಿದೇಶಿ ಟ್ರಿಪ್‍ಗೆ ಸಜ್ಜಾಗುತ್ತಿದ್ದಾರೆ.

    ಶೈಕ್ಷಣಿಕ ಪ್ರವಾಸದ ಹೆಸರಲ್ಲಿ ಹಾಪ್ ಕಾಮ್ಸ್ ಅಧಿಕಾರಿಗಳು ಜಾಲಿಟ್ರಿಪ್ ಕೈಗೊಂಡಿದ್ದಾರೆ. ಹಾಪ್‍ಕಾಮ್ಸ್ ನ 16 ಮಂದಿ ನಿರ್ದೇಶಕರುಗಳು ಅಂಡಮಾನ್-ನಿಕೋಬರ್ ಪ್ರವಾಸಕ್ಕೆ ಸಜ್ಜಾಗಿದ್ದಾರೆ. ಜೂನ್ 30 ರಿಂದ ಜುಲೈ 4 ವರೆಗೆ ಒಟ್ಟು 5 ದಿನಗಳ ಕಾಲ ಪ್ರವಾಸಕ್ಕೆ ಯೋಜನೆ ಸಿದ್ಧಗೊಂಡಿದೆ. ಈಗಾಗಲೇ ಮಂಡಳಿ ಕಡೆಯಿಂದ ಟೆಂಡರ್ ಕರೆಯಲಾಗಿದ್ದು, ಟೆಂಡರ್‍ನಲ್ಲಿ ವಿಮಾನಯಾನ, ಊಟೋಪಚಾರ ಹಾಗೂ ಇನ್ನಿತರೆ ಸೌಲಭ್ಯಗಳನ್ನು ಒಳಗೊಂಡ ಪ್ಯಾಕೇಜ್ ಸಲ್ಲಿಸುವಂತೆ ಜಾಹೀರಾತು ನೀಡಿದೆ. ಪ್ರವಾಸಕ್ಕೆ ಲಕ್ಷಾಂತರ ರೂಪಾಯಿ ಖರ್ಚಾಗಾಲಿದ್ದು, ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಎಂಬಂತೆ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ವಾಹನ, ವಿಮಾನ, ವಸತಿ, ಬೆಂಗಾವಲು ಪಡೆಗೆ ಸಿಎಂ ಬ್ರೇಕ್

    ಒಂದು ಕಡೆ ಸಿಎಂ ಕುಮಾರಸ್ವಾಮಿಯವರು ಸಾಲಮನ್ನಾ ಕುರಿತು ತಲೆಕೆಡಿಸಿಕೊಂಡಿದ್ದಾರೆ. ಅಲ್ಲದೇ ಹಲವು ದುಂದುವೆಚ್ಚಕ್ಕೆ ಸ್ವತಃ ತಾವೇ ಕಡಿವಾಣ ಹಾಕಿದ್ದರೂ, ಅಧಿಕಾರಿಗಳು ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲದಂತೆ ಪ್ರವಾಸದ ಹೆಸರಲ್ಲಿ ಜಾಲಿಟ್ರಿಪ್ ಕೈಗೊಂಡಿರುವುದು ಶೋಚನಿಯ ಸಂಗತಿಯಾಗಿದೆ.

    ಅಧಿಕಾರಿಗಳ ಈ ಜಾಲಿಟ್ರಿಪ್‍ಗೆ ಅಸಮಾಧಾನ ಹೊರಹಾಕಿರುವ ಸಾರ್ವಜನಿಕರು, ಅಧ್ಯಯನದ ಹೆಸರಲ್ಲಿ ಅಂಡಮಾನ್-ನಿಕೋಬರ್‍ಗೆ ಹೋಗಬೇಕಾ? ಸಾಲಮನ್ನಾ ಬಗ್ಗೆ ತಲೆಕೆಡಿಸಿಕೊಂಡಿರುವ ಸಿಎಂ ಕುಮಾರಸ್ವಾಮಿ ಹಾಗೂ ತೋಟಗಾರಿಕಾ ಸಚಿವರಿಗೆ ಅಧಿಕಾರಿಗಳ ದುಂದುವೆಚ್ಚ ಕಾಣಿಸುತ್ತಿಲ್ಲವಾ ಎಂದು ಪ್ರಶ್ನಿಸಿದ್ದಾರೆ.

  • ಶಿವರಾತ್ರಿಗೆ ಇಲ್ಲಿದೆ ಗ್ರಾಹಕರಿಗೊಂದು ಗುಡ್ ನ್ಯೂಸ್

    ಶಿವರಾತ್ರಿಗೆ ಇಲ್ಲಿದೆ ಗ್ರಾಹಕರಿಗೊಂದು ಗುಡ್ ನ್ಯೂಸ್

    ಬೆಂಗಳೂರು: ಶಿವರಾತ್ರಿ ಹಬ್ಬಕ್ಕೆ ಗ್ರಾಹಕರಿಗೊಂದು ಗುಡ್ ನ್ಯೂಸ್ ಇಲ್ಲಿದೆ. ಹಬ್ಬಕ್ಕಾಗಿ ರೈತರು ಕೊಡುಗೆ ನೀಡಿದ್ದು, ಹಾಪ್‍ ಕಾಮ್ಸ್ ನಲ್ಲಿ ತರಕಾರಿಗಳನ್ನ ಕೇವಲ ಹತ್ತು ರೂಪಾಯಿಗೆ ನೀಡಲಾಗ್ತಿದೆ.

    ಶಿವರಾತ್ರಿಗೆ ಹಾಪ್‍ ಕಾಮ್ಸ್ ಈ ಸ್ಪೆಷಲ್ ಆಫರ್ ನೀಡಿದೆ. ಅಗ್ಗದ ದರದಲ್ಲಿ ತರಕಾರಿಗಳು ಸಿಗಲಿವೆ. ಮೂಲಂಗಿ, ಎಲೆಕೋಸು ಟೊಮೇಟೋ, ಸೌತೆಕಾಯಿ, ಬೀಟ್‍ರೂಟ್ ಗೆ 10 ರೂಪಾಯಿ. ಬೀನ್ಸ್, ಕ್ಯಾರೆಟ್, ತೊಂಡೆಕಾಯಿ, ಆಲೂಗಡ್ಡೆ, ತೆಂಗಿನಕಾಯಿ ಇಪ್ಪತ್ತು ರೂಪಾಯಿ.

    ಪುದೀನಾ, ಕೊತ್ತಂಬರಿ ಸೊಪ್ಪು, ಬಸಳೆ ಸೊಪ್ಪು ಏನೇ ತಗೊಂಡ್ರು ಬರೀ ಹತ್ತು ರೂಪಾಯಿ. ಭಾನುವಾರ ಹಾಗೂ ಸೋಮವಾರ ಹಬ್ಬದ ಪ್ರಯುಕ್ತ ಈ ಬಂಪರ್ ಆಫರ್ ನೀಡಲಾಗಿದೆ.

    ಹಬ್ಬದಂದು ರೈತರಿಂದ ಕಡಿಮೆ ಬೆಲೆಯಲ್ಲಿ ಗ್ರಾಹಕರು ಹೆಚ್ಚು ತರಕಾರಿ, ಸೊಪ್ಪು ಖರೀದಿಸಬಹುದಾಗಿದೆ.