Tag: hoop earrings

  • ಕೈ ಬಳೆ ಈಗ ಕಿವಿಯೋಲೆ- ಬಳೆಗಿಂತ ದೊಡ್ಡದಾದ ಕಿವಿಯ ಹೂಪ್ ರಿಂಗ್

    ಕೈ ಬಳೆ ಈಗ ಕಿವಿಯೋಲೆ- ಬಳೆಗಿಂತ ದೊಡ್ಡದಾದ ಕಿವಿಯ ಹೂಪ್ ರಿಂಗ್

    – ಮಾರುಕಟ್ಟೆಗೆ ಲಗ್ಗೆಯಿಟ್ಟ ನಯಾ ಫ್ಯಾಷನ್

    ಗ ಕಾಲ‌ ಬದಲಾಗಿದೆ. ಹೊಸ ಹೊಸ ಫ್ಯಾಷನ್ ಟ್ರೆಂಡ್ ಗಳು ಹುಟ್ಟಿಕೊಂಡಿವೆ. ಸದ್ಯ ಕೈಗೆ ಹಾಕುವ ಬಳೆಯೇ ಕಿವಿಯೋಲೆಯಾದ್ರೆ ಹೇಗಿರುತ್ತೆ. ಬಳೆಗಿಂತ ದೊಡ್ಡದಾದ ಬಿಗ್‌ ಹೂಪ್‌ ಇಯರಿಂಗ್‌ಗಳು (Hoop Earrings) ಇದೀಗ ಹುಡುಗಿಯರನ್ನು ಸವಾರಿ ಮಾಡತೊಡಗಿವೆ.

    ಹೌದು.. ಕೈಗಳಿಗೆ ಧರಿಸುವ ಬಳೆಗಿಂತಲೂ ಈ ಕಿವಿಯ ಹೂಪ್‌ ರಿಂಗ್ಸ್ ದೊಡ್ಡದಾಗಿವೆ. ಮಾತ್ರವಲ್ಲ ಇವನ್ನು ಧರಿಸುವ ಫ್ಯಾಷನ್‌ ಈ ಸೀಸನ್‌ನ ಫಂಕಿ ಜ್ಯುವೆಲರಿ ಸ್ಟೈಲಿಂಗ್ ಸೇರಿದೆ. ಈ ಮೊದಲು ಕೈ ಬಳೆಗಳಷ್ಟು ಆಕಾರದ ಹೂಪ್‌ ಅಂದರೆ, ಸರ್ಕುಲಾರ್‌ ಇರುವಂತಹ ಕಿವಿಯ ರಿಂಗ್‌ಗಳನ್ನು ಧರಿಸುವ ಫ್ಯಾಷನ್‌ ಇತ್ತು. ಇದೀಗ ಈ ಫ್ಯಾಷನ್‌ ಒಂದು ಹೆಜ್ಜೆ ಮುಂದೆ ಹೋಗಿದೆ. ಕೈಗಳಿಗೆ ನಾವು ಹಾಕುವ ಬಳೆಗಳಿಗಿಂತ ದೊಡ್ಡದಾದವು ಕಿವಿಯೊಲೆಗಳಾಗಿ ಬಂದಿವೆ. ಕೆಲವಂತೂ ಭುಜವನ್ನು ತಾಗುವ ಮಟ್ಟಿಗೆ ದೊಡ್ಡ ಸೈಝಿನಲ್ಲಿ ಆಗಮಿಸಿವೆ. ಇವು ಈ ಸೀಸನ್‌ನ ಫಂಕಿ ಜಂಕ್‌ ಜ್ಯುವೆಲ್‌ ಲಿಸ್ಟ್‌ನಲ್ಲಿವೆ.

    ಬ್ಲ್ಯಾಕ್‌ ಮೆಟಲ್‌, ವೈಟ್‌ ಮೆಟಲ್‌, ಪ್ಲಾಸ್ಟಿಕ್‌, ಫೈಬರ್‌, ಸಿಲಿಕಾನ್‌, ಪ್ಲಾಟಿನಂ ಕೋಟೆಡ್‌, ಸಿಲ್ವರ್‌, ಆಕ್ಸಿಡೈಸ್ಡ್‌ ಹೀಗೆ ನಾನಾ ಮೆಟಿರಿಯಲ್‌ನ ಬಿಗ್‌ ಹೂಪ್‌ ರಿಂಗ್‌ಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ಅವುಗಳಲ್ಲಿ, ಲೈಟ್‌ವೈಟ್‌ನವು ಹೆಚ್ಚು ಟ್ರೆಂಡಿಯಾಗಿವೆ. ಇನ್ನು ಕಲರ್‌ಫುಲ್‌ ಬಿಗ್‌ ಹೂಪ್‌ ಇಯರಿಂಗ್‌ಗಳು ಮ್ಯಾಚಿಂಗ್‌ ಕಾನ್ಸೆಪ್ಟ್‌ಗೆ ತಕ್ಕಂತೆ ಬಿಡುಗಡೆಗೊಂಡಿವೆ. ತಂತಿಯಂತೆ ಕಾಣುವ ಕೆಲವು ಟ್ರೆಂಡ್‌ನಲ್ಲಿವೆ. ಹಾಫ್‌ ಹೂಪ್‌ ಬಿಗ್‌ ರಿಂಗ್‌ಗಳು ಪಾರ್ಟಿ ಪ್ರಿಯ ಹುಡುಗಿಯರನ್ನು ಸೆಳೆದಿವೆ. ವೆಸ್ಟರ್ನ್‌ ಲುಕ್‌ಗೆ ಹೊಂದುವಂತಹ ಮೆಟಲ್‌ನ ಸ್ಲಿಮ್‌ ಬಿಗ್‌ ಹೂಪ್‌ ಇಯರಿಂಗ್‌ಗಳು ಅಲ್ಟ್ರಾ ಮಾಡರ್ನ್‌ ಲುಕ್‌ಗೆ ಹೊಂದುವಂತಹ ಡಿಸೈನ್‌ನಲ್ಲಿ ಬಂದಿವೆ.

    ಹೂಪ್‌ ಕಿವಿಯ ರಿಂಗ್‌ಗಳು ಇದೀಗ ಮತ್ತಷ್ಟು ದೊಡ್ಡದಾಗಿರುವುದು ಪಾರ್ಟಿ ಪ್ರಿಯ ಹುಡುಗಿಯರಿಗೆ ಖುಷಿ ತಂದಿದೆ. ಅದರಲ್ಲೂ ಕ್ಯಾಶುವಲ್‌ ಹಾಗೂ ವೆಸ್ಟರ್ನ್‌ ಡ್ರೆಸ್‌ ಧರಿಸುವ ಹುಡುಗಿಯರ ಆಕ್ಸೆಸರೀಸ್‌ ಲಿಸ್ಟ್‌ಗೆ ಸೇರಿವೆ. ಇವು ಈ ಬೇಸಿಗೆಯಲ್ಲಿ ಟ್ರೆಂಡಿಯಾಗಿರುವ ಕಿವಿಯೊಲೆಗಳ ಸಾಲಿಗೆ ಸೇರಿವೆ.

    ಅಂದಹಾಗೆ ಈ ಬಿಗ್‌ ಹೂಪ್‌ ಇಯರಿಂಗ್‌ಗಳು ಎಲ್ಲಾ ಬಗೆಯ ಹೇರ್‌ಸ್ಟೈಲ್‌ಗೆ ಮ್ಯಾಚ್‌ ಆಗುವುದಿಲ್ಲ ಎಂಬುದು ನೆನಪಿರಲಿ. ಇವನ್ನು ಧರಿಸಿದಾಗ ಬಹಳ ಕೇರ್‌ ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ನಿಮ್ಮ ಕೂದಲಿಗೆ ಸಿಕ್ಕಿಹಾಕಿಕೊಳ್ಳಬಹುದು. ಹಾಗಾಗಿ ಈ ಇಯರಿಂಗ್ಸ್‌ ಧರಿಸುವಾಗ ಮೊದಲೇ ಯಾವ ಹೇರ್‌ಸ್ಟೈಲ್‌ ಎಂಬುದು ಡಿಸೈಡ್‌ ಮಾಡಿ, ಹೇರ್‌ಸ್ಟೈಲ್‌ ಕೂಡ ಮಾಡಿಕೊಂಡ ನಂತರ ಈ ಬಿಗ್‌ ಹೂಪ್‌ ರಿಂಗ್‌ಗಳನ್ನು ಧರಿಸಿ ಎನ್ನುತ್ತಾರೆ ಹೇರ್‌ ಸ್ಟೈಲಿಸ್ಟ್‌ಗಳು.

    ಅದಕ್ಕೆ ಇಲ್ಲಿದೆ ಟಿಪ್ಸ್:
    * ಥ್ರೆಡ್‌ ಅಥವಾ ಶೋಲ್ಡರ್‌ ಸೈಡ್‌ನಲ್ಲಿ ಹ್ಯಾಂಡ್‌ವರ್ಕ್‌ ಇರುವಂತಹ ಡ್ರೆಸ್‌ ಧರಿಸುವುದನ್ನು ಆವಾಯ್ಡ್‌ ಮಾಡಿ.
    * ಫಿನಿಶಿಂಗ್‌ ಇರುವಂತಹ ಗುಣಮಟ್ಟದ ಬಿಗ್‌ ಹೂಪ್‌ ರಿಂಗ್‌ಗಳನ್ನು ಖರೀದಿಸಿ.
    * ಸಿಕ್ಕಿ ಹಾಕಿಕೊಳ್ಳುವಂತಹ ಹೇರ್‌ಸ್ಟೈಲ್‌ ಜೊತೆ ಧರಿಸಬೇಡಿ.
    * ಲೈಟ್‌ವೈಟ್‌ನದ್ದನ್ನು ಚೂಸ್‌ ಮಾಡಿ.